Tux-Typing/S1/Getting-started-with-Tux-Typing/Kannada

From Script | Spoken-Tutorial
Revision as of 16:36, 27 March 2014 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00.00 Tux Typing ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.04 ಈ ಟ್ಯುಟೋರಿಯಲ್ ನಲ್ಲಿ ನೀವು Tux Typing ಮತ್ತು Tux typing ನ ಇಂಟರ್ಫೇಸ್ ನ ವಿಷಯವನ್ನು ತಿಳಿಯುತ್ತೀರಿ.
00.10 ಇಲ್ಲಿ ನೀವು,
00.12 ಕಂಪ್ಯುಟರ್ ನ ಇಂಗ್ಲೀಷ್ ಕೀಬೋರ್ಡ್ ನಲ್ಲಿ ವೇಗವಾಗಿ, ಸ್ಪಷ್ಟವಾಗಿ ಮತ್ತು ನಿಪುಣತೆಯಿಂದ ಹೇಗೆ ಟೈಪ್ ಮಾಡುವುದು,
00.19 ಟೈಪಿಂಗ್ ಮಾಡುವಾಗ ಪ್ರತಿ ಬಾರಿಯೂ ಕೀಬೋರ್ಡನ್ನು ನೋಡದೇ ಹೇಗೆ ಟೈಪ್ ಮಾಡುವುದು ಎಂಬುದನ್ನು ಕಲಿಯುತ್ತೀರಿ.
00.25 Tux Typing ಎಂದರೇನು?
00.27 Tux Typing ಎಂಬುದೊಂದು ಟೈಪಿಂಗ್ ಟ್ಯೂಟರ್ ಆಗಿದೆ.
00.30 ಇದು ನಿಮಗೆ ಸಂವಾದಾತ್ಮಕ ಕ್ರೀಡೆಗಳ ಮೂಲಕ ಟೈಪಿಂಗ್ ಅನ್ನು ಕಲಿಸುತ್ತದೆ ಮತ್ತು ವಿಭಿನ್ನ ಅಕ್ಷರಗಳನ್ನೂ ಪರಿಚಯಿಸುತ್ತದೆ.
00.38 ನೀವು ನಿಮ್ಮ ವೇಗಕ್ಕನುಸಾರವಾಗಿ ಟೈಪಿಂಗ್ ಅನ್ನು ಕಲಿಯಬಹುದು.
00.41 ಹಾಗೂ, ನಿಧಾನವಾಗಿ ನಿಮ್ಮ ಟೈಪಿಂಗ್ ವೇಗವನ್ನು ಶುದ್ಧತೆಯ ಜೊತೆಗೆ ಹೆಚ್ಚಿಸಬಹುದು.
00.46 Tux Typing ನಿಮ್ಮ ಅಭ್ಯಾಸಕ್ಕಾಗಿ ಹೊಸ ಶಬ್ದಗಳನ್ನು ಮತ್ತು ಟೈಪ್ ಮಾಡಲು ಬೇರೆ ಬೇರೆ ಭಾಷೆಗಳನ್ನೂ ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ.
00.54 ಇಲ್ಲಿ ನಾವು ಉಬಂಟು ಲಿನಕ್ಸ್ 11.10 ರಲ್ಲಿ Tux Typing 1.8.0 ನ್ನು ಉಪಯೋಗಿಸುತ್ತಿದ್ದೇವೆ.
01.02 ನೀವು ಉಬಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ Tux Typing ಇನ್ಸ್ಟಾಲ್ ಮಾಡಬಹುದು.
01.07 ಉಬಂಟು ಸಾಫ್ಟ್ವೇರ್ ಸೆಂಟರ್ ನ ಹೆಚ್ಚಿನ ವಿವರಣೆಗಾಗಿ ಈ ವೆಬ್ಸೈಟ್ ನಲ್ಲಿರುವ ಉಬಂಟು ಲಿನಕ್ಸ್ ಎಂಬ ಟ್ಯುಟೋರಿಯಲ್ ಅನ್ನು ಅನುಸರಿಸಬಹುದು.
01.16 Tux Typing ಅನ್ನು ಒಪನ್ ಮಾಡಿ.
01.19 ಮೊದಲಿಗೆ, Dash Home ಎಂಬಲ್ಲಿ ಕ್ಲಿಕ್ ಮಾಡಿ, ಇದು ನಿಮ್ಮ ಕಂಪ್ಯೂಟರ್ ನ ಮೇಲ್ಭಾಗದ ಎಡಕೋಣೆಯಲ್ಲಿ ಗೋಲಾಕಾರದ ಬಟನ್ ನ ರೂಪದಲ್ಲಿದೆ.
01.26 Search ಬಾಕ್ಸ್ ಕಾಣಿಸುತ್ತದೆ. Dash Home ಎಂಬುದರ ಮುಂದೆ ಸರ್ಚ್ ಬಾಕ್ಸ್ ನಲ್ಲಿ Tux Typing ಎಂದು ಟೈಪ್ ಮಾಡಿ.
01.34 ಸರ್ಚ್ ಬಾಕ್ಸ್ ನ ಕೆಳಗೆ Tux Typing ಎಂಬ ಐಕಾನ್ ಕಾಣುತ್ತದೆ.
01.39 Tux Typing ಎಂಬ ಐಕಾನ್ ಅನ್ನು ಒತ್ತಿ.
01.42 Tux Typing ಎಂಬ ವಿಂಡೋ ಕಾಣಿಸುತ್ತದೆ.
01.46 Tux Typing ನಲ್ಲಿ ಈ ಕೆಳಗಿರುವ ವಿಕಲ್ಪಗಳು ಒಳಗೊಂಡಿವೆ.
01.50 Fish Cascade – ಕ್ರೀಡಾ ಕ್ಷೇತ್ರ.

Comet Zap – ಮತ್ತೊಂದು ಕ್ರೀಡಾ ಕ್ಷೇತ್ರ.

01.56 Lessons – ಇಲ್ಲಿ ವಿಭಿನ್ನ ಪಾಠಗಳು ಇವೆ. ಇವು ನಮಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತವೆ.
02.01 Options – ಇಲ್ಲಿ ಇರುವ ವಿಕಲ್ಪಗಳು ನಮಗೆ ಶಬ್ದಗಳನ್ನು ಸಂಪಾದಿಸಲು, ವಾಕ್ಯಗಳನ್ನು ಟೈಪ್ ಮಾಡಲು, ಟಕ್ಸ್ ಟೈಪಿಂಗ್ ನ ಬಗ್ಗೆ ತಿಳಿಯಲು ಮತ್ತು ಭಾಷೆಯನ್ನು ನಿರ್ಧರಿಸಲು ಸಹಾಯ ಮಾಡುತ್ತವೆ.
02.13 Quit – ಕ್ರೀಡೆಯನ್ನು ಮುಗಿಸಲು ಇಲ್ಲಿ ಒತ್ತಬೇಕು.
02.16 ಪಾಠಗಳನ್ನು ಉಪಯೋಗಿಸಿಕೊಂಡು ಟೈಪಿಂಗ್ ಅನ್ನು ಆರಂಭಿಸೋಣ.
02.20 ಮೈನ್ ಮೆನ್ಯುವಿನಲ್ಲಿ Lessons ಎಂಬುದನ್ನು ಕ್ಲಿಕ್ ಮಾಡಿ.
02.23 ಪಾಠಗಳಿರುವ ಒಂದು ವಿಂಡೋ ಕಾಣಿಸುತ್ತದೆ.
02.26 ಮೊದಲ ಪಾಠದಿಂದ ಅಭ್ಯಾಸವನ್ನು ಆರಂಭಿಸೋಣ.
02.30 basic_lesson_01.xml ಎಂಬಲ್ಲಿ ಒತ್ತಿ.
02.35 ನಿರ್ದೇಶಗಳ ಜೊತೆಗೆ ಒಂದು ವಿಂಡೋ ಕಾಣಿಸುತ್ತದೆ.
02.41 ಪಾಠವನ್ನು ಆರಂಭಿಸಲು space bar ಒತ್ತಿ.
02.45 ಕೀಬೋರ್ಡ್ ನ ಜೊತೆಗೆ ವಿಂಡೋ ಕಾಣಿಸುತ್ತದೆ.
02.48 ಈಗ ನಾವು a ಎಂಬ ಅಕ್ಷರದ ಅಭ್ಯಾಸವನ್ನು ಮಾಡೋಣ.
02.52 ಅಭ್ಯಾಸದ ಆರಂಭಕ್ಕಾಗಿ p ಅನ್ನು ಒತ್ತಿ.
02.56 ಒಂದು ವಿಂಡೋ ಕಾಣಿಸುತ್ತದೆ, ಅಲ್ಲಿ ಅಕ್ಷರಗಳು ಕಾಣಿಸುತ್ತವೆ.
03.01 ಇಲ್ಲಿ ‘aaa aaa…..’ ಎನ್ನುವುದು ಏನನ್ನು ಸೂಚಿಸುತ್ತವೆ?
03.07 ಇದು, ನೀವು ಈ ಅಕ್ಷರಗಳನ್ನು ಟೈಪ್ ಮಾಡಬೇಕೆಂದು ಸೂಚಿಸುತ್ತದೆ.
03.10 ಈ ಸಾಲಿಗೆ ಟೀಚರ್ಸ್ ಲೈನ್ ಎಂದು ಹೆಸರಿಡೋಣ.
03.13 ಈಗ ನಾವು ಹೆಚ್ಚಾಗಿ ಬಳಸುವ ಇಂಗ್ಲೀಷ್ ಕೀಬೋರ್ಡನ್ನು ನೋಡೋಣ.
03.19 ನಿಮಗೆ a ಎಂಬ ಅಕ್ಷರದ ಸುತ್ತಲು ಕೆಂಪುಬಣ್ಣದ ಚೌಕ ಕಾಣುತ್ತಿದ್ದೆಯೇ? ಇದು ಈಗ ನೀವು ಯಾವ ಅಕ್ಷರವನ್ನು ಟೈಪ್ ಮಾಡಬೇಕೆಂಬುದನ್ನು ಸೂಚಿಸುತ್ತದೆ.
03.27 ಕೀಬೋರ್ಡಿನ ಮೊದಲ ಸಾಲಿನಲ್ಲಿ ಅಂಕಿಗಳು, ವಿಶಿಷ್ಟಾಕ್ಷರಗಳು ಮತ್ತು Backspace ಕೀ ಇವೆ.
03.35 ಟೈಪ್ ಮಾಡಿದ್ದನು ಅಳಿಸಲು Backspace ಕೀಯನ್ನು ಉಪಯೋಗಿಸಿ.
03.39 ಕೀಬೋರ್ಡಿನಲ್ಲಿ ಮತ್ತೂ ಮೂರು ಸಾಲುಗಳಿರುತ್ತವೆ. ಅವುಗಳಲ್ಲಿ ವರ್ಣಮಾಲೆ, ಸಂಖ್ಯೆಗಳು ಮತ್ತು ಬೇರೆ ಅಕ್ಷರಗಳು ಇರುತ್ತವೆ.
03.51 ಕೀಬೋರ್ಡಿನ ಎರಡನೇಯ ಸಾಲಿನಲ್ಲಿ ವರ್ಣಮಾಲೆ, ಕೆಲವು ವಿಶಿಷ್ಟಾಕ್ಷರಗಳು ಮತ್ತು Enter ಕೀ ಇವೆ.
03.58 ಮುಂದಿನ ಸಾಲಿಗೆ ಹೋಗಲು ನೀವು Enter ಕೀಯನ್ನು ಒತ್ತಬೇಕು.
04.02 ಕೀಬೋರ್ಡಿನ ಮೂರನೇಯ ಸಾಲಿನಲ್ಲಿ ವರ್ಣಮಾಲೆ, colon, semicolon ಮತ್ತು Caps lock ಕೀ ಗಳಿವೆ.
04.10 ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಲು Caps Lock ಕೀ ಉಪಯೋಗಿಸಿ.
04.14 ಕೀಬೋರ್ಡಿನ ನಾಲ್ಕನೇಯ ಸಾಲಿನಲ್ಲಿ ವರ್ಣಮಾಲೆ, ವಿಶಿಷ್ಟಾಕ್ಷರಗಳು ಮತ್ತು shift ಕೀ ಗಳಿವೆ.
04.21 ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಲು ಯಾವುದಾದರೊಂದು ಅಕ್ಷರವನ್ನು Shift ಕೀ ನ ಜೊತೆಗೆ ಒತ್ತಿ.
04.27 ಕೀಗಳಲ್ಲಿ ಮೇಲ್ಗಡೆ ಇರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀ ನ ಜೊತೆಗೆ ಆ ಅಕ್ಷರವನ್ನು ಟೈಪ್ ಮಾಡಿ.
04.34 ಉದಾಹರಣೆಗೆ, 1 ಎಂಬ ಕೀ ನಲ್ಲಿ ಮೇಲ್ಗಡೆ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
04.39 ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀ ನ ಜೊತೆಗೆ 1 ನ್ನು ಒತ್ತಿ.
04.44 ಕೀಬೋರ್ಡಿನ ಐದನೇಯ ಸಾಲಿನಲ್ಲಿ Ctrl, Alt ಮತ್ತು ಫಂಕ್ಷನ್ ಕೀ ಗಳಿವೆ. ಇಲ್ಲಿ Space ಬಾರ್ ಕೂಡಾ ಇದೆ.
04.52 ಈಗ ಟಕ್ಸ್ ಟೈಪಿಂಗ್ ನ ಕೀಬೋರ್ಡ್, ಲ್ಯಾಪ್ಟಾಪ್ ನ ಕೀಬೋರ್ಡ್ ಮತ್ತು ಡೆಸ್ಕ್ಟಾಪ್ ನ ಕೀಬೋರ್ಡ್ ಗಳ ನಡುವೆ ವ್ಯತ್ಯಾಸವಿದೆಯೇ ಎಂದು ನೋಡೋಣ.
05.00 ಇಲ್ಲಿ ಗಮನಿಸಬೇಕಾದುದೇನೆಂದರೆ, ಟಕ್ಸ್ ಟೈಪಿಂಗ್ ನ ಕೀಬೋರ್ಡ್ ಮತ್ತು ಯಾವ ಕೀಬೋರ್ಡ್ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳಲ್ಲಿ ಉಪಯೋಗಿಸುವರೋ ಅವೆಲ್ಲವೂ ಒಂದೇ ಎಂದು.
05.10 ಈಗ ಕೀಬೋರ್ಡಿನಲ್ಲಿ ನಮ್ಮ ಬೆರಳುಗಳ ಸ್ಥಾನವೇನೆಂದು ನೋಡೋಣ.
05.14 ಈ ಸ್ಲೈಡ್ ಅನ್ನು ನೋಡಿ.
05.16 ಇದು ಬೆರಳುಗಳು ಮತ್ತು ಅವುಗಳ ಹೆಸರುಗಳನ್ನು ತೋರಿಸುತ್ತದೆ. ಎಡದಿಂದ ಬಲಕ್ಕೆ ಇರುವ ಬೆರಳುಗಳ ಹೆಸರು ಹೀಗಿವೆ:
05.21 ಕಿರುಬೆರಳು (Little finger), ಅನಾಮಿಕ ಬೆರಳು (Ring finger), ಮಧ್ಯದಬೆರಳು (Middle finger), ತೋರ್ಬೆರಳು (Index finger) ಮತ್ತು ಹೆಬ್ಬೆರಳು (Thumb).
05.27 ನಿಮ್ಮ ಕೀಬೋರ್ಡಿನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ.
05.32 ಕಿರುಬೆರಳು (Little finger) ‘A’ ಎಂಬ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05.35 ಅನಾಮಿಕ ಬೆರಳು ‘S’ ಎಂಬುದರ ಮೇಲೆ,
05.38 ಮಧ್ಯದ ಬೆರಳು ‘D’ ಎಂಬುದರ ಮೇಲೆ,
05.41 ತೋರ್ಬೆರಳು ‘F’ ಎಂಬುದರ ಮೇಲೆ ಇಡಿ.
05.44 ಈಗ ಬಲಗೈಯನ್ನು ಕೀಬೋರ್ಡಿನ ಬಲಬದಿಯಲ್ಲಿಡಿ.
05.49 ಕಿರುಬೆರಳು ಕಾಲನ್/ಸೆಮಿಕಾಲನ್ ನ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ.
05.54 ಅನಾಮಿಕ ಬೆರಳು ‘L’ ಎಂಬುದರ ಮೇಲೆ,
05.56 ಮಧ್ಯದ ಬೆರಳು ‘K’ ಎಂಬುದರ ಮೇಲೆ,
06.00 ತೋರ್ಬೆರಳು ‘J’ ಎಂಬುದರ ಮೇಲಿಡಬೇಕು.
06.03 ಸ್ಪೇಸ್ ಬಾರ್ ಅನ್ನು ಒತ್ತಲು ಬಲ ಹೆಬ್ಬೆರಳನ್ನು ಉಪಯೋಗಿಸಿ.
06.08 ಎರಡು ಕೈಗಳ ಚಿತ್ರವು ಸೂಕ್ತ ಬೆರಳುಗಳ ಉಪಯೋಗದಿಂದ ಹೇಗೆ ಟೈಪ್ ಮಾಡುವುದೆಂದು ತಿಳಿಸಿಕೊಡುತ್ತದೆ.
06.14 ನೀವು ಕಿರುಬೆರಳನ್ನು ಉಪಯೋಗಿಸಲು ಕೆಂಪು ಚೌಕವನ್ನು ಹುಡುಕುತ್ತಿರುವಿರಾ?
06.19 ನಿಮ್ಮ ಊಹೆ ಸರಿಯಾಗಿದೆ, ನೀವು a ಎಂದು ಟೈಪ್ ಮಾಡಲು ಆ ಬೆರಳನ್ನು ಉಪಯೋಗಿಸಬೇಕು.
06.23 ಕೀಬೋರ್ಡಿನಲ್ಲಿ ಈ ಪಾಠದಲ್ಲಿ ಹೇಳಿರುವಂತೆ ನಿಮ್ಮ ಬೆರಳುಗಳನ್ನು ಇರಿಸಿ.
06.29 ಈಗ ಟೈಪಿಂಗ್ ಅನ್ನು ಆರಂಭಿಸಿ.
06.32 ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು ಟೀಚರ್ಸ್ ಲೈನ್ ನ ಕೆಳಗಿನ ಸಾಲಿನಲ್ಲಿ ಕಾಣಿಸಲ್ಪಡುತ್ತವೆ.
06.39 ಈ ಸಾಲಿಗೆ ಸ್ಟುಡೆಂಟ್ ಲೈನ್ ಎಂದು ಹೆಸರಿಸೋಣ.
06.42 ಈಗ ಯಾವ ಅಕ್ಷರ ಟೀಚರ್ಸ್ ಲೈನ್ ನಲ್ಲಿ ಇಲ್ಲವೋ ಅದನ್ನು ಟೈಪ್ ಮಾಡಿ.
06.47 ನೀವು ತಪ್ಪು ಟೈಪ್ ಮಾಡಿದ ಅಕ್ಷರವು ಸ್ಟುಡೆಂಟ್ ಲೈನ್ ನಲ್ಲಿ ಕಾಣುತ್ತದೆಯೇ? ಇಲ್ಲ.
06.53 ಬದಲಿಗೆ, ಯಾವ ಅಕ್ಷರವನ್ನು ತಪ್ಪಾಗಿ ಟೈಪ್ ಮಾಡಿರುವಿರೋ ಆ ಅಕ್ಷರದ ಮೇಲೆ X ಎಂಬ ಚಿಹ್ನೆಯು ಸ್ವಲ್ಪ ಸಮಯದ ತನಕ ಕಾಣುತ್ತದೆ.
06.59 ಈಗ ಕೆಲವು ಅಕ್ಷರಗಳನ್ನು ಟೈಪ್ ಮಾಡಿ.
07.02 ಈಗ ನಮ್ಮಟೈಪಿಂಗ್ ನ ಮೆಟ್ರಿಕ್ಸ್ ಅನ್ನು ಗಣನೆ ಮಾಡೋಣ.
07.07 ಈಗ ನೀವು ಬಲಬದಿಯ ಫೀಲ್ಡ್ ಏನನ್ನು ತೋರಿಸುತ್ತದೆಯೆಂದು ಅಂದಾಜು ಮಾಡಿ.
07.13 Time – ಎನ್ನುವುದು ನಿಮ್ಮ ಟೈಪಿಂಗ್ ನ ವೇಗವನ್ನು ಸೆಟ್ ಮಾಡುತ್ತದೆ.
07.17 Chars – ಎನ್ನುವುದು ನೀವು ಟೈಪ್ ಮಾಡಿದ ಅಕ್ಷರಗಳ ಸಂಖ್ಯೆಯನ್ನು ತೋರಿಸುತ್ತದೆ.
07.21 CPM – ಎನ್ನುವುದು ನೀವು ಪ್ರತಿ ನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡುತೀರೆಂದು ತೋರಿಸುತ್ತದೆ.
07.26 WPM – ಎನ್ನುವುದು ನೀವು ಟೈಪ್ ಮಾಡಿದ ಶಬ್ದಗಳ ಸಂಖ್ಯೆಯನ್ನು ತೋರಿಸುತ್ತದೆ.
07.31 Errors – ಎನ್ನುವುದು ನೀವು ಎಷ್ಟು ತಪ್ಪು ಅಕ್ಷರಗಳನ್ನು ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ.
07.34 Accuracy – ಎನ್ನುವುದು ನಿಮ್ಮ ಟೈಪಿಂಗ್ ನ ಶುದ್ಧತೆಯನ್ನು ತೋರಿಸುತ್ತದೆ.
07.40 ಮೇನ್ ಮನ್ಯುವಿಗೆ ಹೋಗಲು Escape ಕೀಯನ್ನು ಒತ್ತಿ.
07.45 ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಅಭ್ಯಾಸ ಮಾಡಿದ್ದೇವೆ.
07.47 ನಿಧಾನವಾಗಿ ಶುದ್ಧವಾಗಿ ಟೈಪ್ ಮಾಡಲು ಮತ್ತು ಮೊದಲಬಾರಿ ಅಭ್ಯಾಸ ಮಾಡಲು ಇದು ತುಂಬಾ ಚೆನ್ನಾಗಿದೆ.
07.52 ಒಮ್ಮೆ ದೋಷರಹಿತವಾಗಿ ಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಿದಲ್ಲಿ ನಾವು ನಮ್ಮ ಟೈಪಿಂಗ್ ನ ವೇಗವನ್ನು ಹೆಚ್ಚಿಸಬಹುದು.
07.59 ಈಗ ನಾವು ಟಕ್ಸ್ ಟೈಪಿಂಗ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.


08.03 ಈ ಟ್ಯುಟೋರಿಯಲ್ ನಲ್ಲಿ ನಾವು ಟಕ್ಸ್ ಟೈಪಿಂಗ್ ಇಂಟರ್ಫೆಸ್ ನ ಬಗ್ಗೆ ತಿಳಿದೆವು ಮತ್ತು ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದೆವು.
08.11 ಇಲ್ಲಿ ನಿಮಗೊಂದು ಕೆಲಸವಿದೆ.
08.13 basic_lesson_02.xml ಎಂಬಲ್ಲಿ ಹೋಗಿ.
08.19 ಈ ಸ್ತರದಲ್ಲಿ ಅಭ್ಯಾಸ ಮಾಡಿ.
08.21 ಈ ಸ್ತರದಲ್ಲಿ ಇರುವ ಎಲ್ಲಾ ಅಕ್ಷರಗಳನ್ನೂ ಟೈಪ್ ಮಾಡಿ ಮತ್ತು Enter ಒತ್ತಿ.
08.26 ಹೀಗೆಯೇ ನೀವು ಬೇರೆ ಪಾಠವನ್ನೂ ಅಭ್ಯಾಸ ಮಾಡಬಹುದು.
08.30 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. http://spoken-tutorial.org/What_is_a_Spoken_Tutorial
08.33 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08.36 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08.41 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
08.46 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08.50 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08.56 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
09.00 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09.08 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09.19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

PoojaMoolya, Vasudeva ahitanal