Tux-Typing/S1/Getting-started-with-Tux-Typing/Kannada
From Script | Spoken-Tutorial
Revision as of 16:36, 27 March 2014 by Vasudeva ahitanal (Talk | contribs)
Time | Narration |
---|---|
00.00 | Tux Typing ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00.04 | ಈ ಟ್ಯುಟೋರಿಯಲ್ ನಲ್ಲಿ ನೀವು Tux Typing ಮತ್ತು Tux typing ನ ಇಂಟರ್ಫೇಸ್ ನ ವಿಷಯವನ್ನು ತಿಳಿಯುತ್ತೀರಿ. |
00.10 | ಇಲ್ಲಿ ನೀವು, |
00.12 | ಕಂಪ್ಯುಟರ್ ನ ಇಂಗ್ಲೀಷ್ ಕೀಬೋರ್ಡ್ ನಲ್ಲಿ ವೇಗವಾಗಿ, ಸ್ಪಷ್ಟವಾಗಿ ಮತ್ತು ನಿಪುಣತೆಯಿಂದ ಹೇಗೆ ಟೈಪ್ ಮಾಡುವುದು, |
00.19 | ಟೈಪಿಂಗ್ ಮಾಡುವಾಗ ಪ್ರತಿ ಬಾರಿಯೂ ಕೀಬೋರ್ಡನ್ನು ನೋಡದೇ ಹೇಗೆ ಟೈಪ್ ಮಾಡುವುದು ಎಂಬುದನ್ನು ಕಲಿಯುತ್ತೀರಿ. |
00.25 | Tux Typing ಎಂದರೇನು? |
00.27 | Tux Typing ಎಂಬುದೊಂದು ಟೈಪಿಂಗ್ ಟ್ಯೂಟರ್ ಆಗಿದೆ. |
00.30 | ಇದು ನಿಮಗೆ ಸಂವಾದಾತ್ಮಕ ಕ್ರೀಡೆಗಳ ಮೂಲಕ ಟೈಪಿಂಗ್ ಅನ್ನು ಕಲಿಸುತ್ತದೆ ಮತ್ತು ವಿಭಿನ್ನ ಅಕ್ಷರಗಳನ್ನೂ ಪರಿಚಯಿಸುತ್ತದೆ. |
00.38 | ನೀವು ನಿಮ್ಮ ವೇಗಕ್ಕನುಸಾರವಾಗಿ ಟೈಪಿಂಗ್ ಅನ್ನು ಕಲಿಯಬಹುದು. |
00.41 | ಹಾಗೂ, ನಿಧಾನವಾಗಿ ನಿಮ್ಮ ಟೈಪಿಂಗ್ ವೇಗವನ್ನು ಶುದ್ಧತೆಯ ಜೊತೆಗೆ ಹೆಚ್ಚಿಸಬಹುದು. |
00.46 | Tux Typing ನಿಮ್ಮ ಅಭ್ಯಾಸಕ್ಕಾಗಿ ಹೊಸ ಶಬ್ದಗಳನ್ನು ಮತ್ತು ಟೈಪ್ ಮಾಡಲು ಬೇರೆ ಬೇರೆ ಭಾಷೆಗಳನ್ನೂ ಸೆಟ್ ಮಾಡಲು ಅನುವು ಮಾಡಿಕೊಡುತ್ತದೆ. |
00.54 | ಇಲ್ಲಿ ನಾವು ಉಬಂಟು ಲಿನಕ್ಸ್ 11.10 ರಲ್ಲಿ Tux Typing 1.8.0 ನ್ನು ಉಪಯೋಗಿಸುತ್ತಿದ್ದೇವೆ. |
01.02 | ನೀವು ಉಬಂಟು ಸಾಫ್ಟ್ವೇರ್ ಸೆಂಟರ್ ನ ಸಹಾಯದಿಂದ Tux Typing ಇನ್ಸ್ಟಾಲ್ ಮಾಡಬಹುದು. |
01.07 | ಉಬಂಟು ಸಾಫ್ಟ್ವೇರ್ ಸೆಂಟರ್ ನ ಹೆಚ್ಚಿನ ವಿವರಣೆಗಾಗಿ ಈ ವೆಬ್ಸೈಟ್ ನಲ್ಲಿರುವ ಉಬಂಟು ಲಿನಕ್ಸ್ ಎಂಬ ಟ್ಯುಟೋರಿಯಲ್ ಅನ್ನು ಅನುಸರಿಸಬಹುದು. |
01.16 | Tux Typing ಅನ್ನು ಒಪನ್ ಮಾಡಿ. |
01.19 | ಮೊದಲಿಗೆ, Dash Home ಎಂಬಲ್ಲಿ ಕ್ಲಿಕ್ ಮಾಡಿ, ಇದು ನಿಮ್ಮ ಕಂಪ್ಯೂಟರ್ ನ ಮೇಲ್ಭಾಗದ ಎಡಕೋಣೆಯಲ್ಲಿ ಗೋಲಾಕಾರದ ಬಟನ್ ನ ರೂಪದಲ್ಲಿದೆ. |
01.26 | Search ಬಾಕ್ಸ್ ಕಾಣಿಸುತ್ತದೆ. Dash Home ಎಂಬುದರ ಮುಂದೆ ಸರ್ಚ್ ಬಾಕ್ಸ್ ನಲ್ಲಿ Tux Typing ಎಂದು ಟೈಪ್ ಮಾಡಿ. |
01.34 | ಸರ್ಚ್ ಬಾಕ್ಸ್ ನ ಕೆಳಗೆ Tux Typing ಎಂಬ ಐಕಾನ್ ಕಾಣುತ್ತದೆ. |
01.39 | Tux Typing ಎಂಬ ಐಕಾನ್ ಅನ್ನು ಒತ್ತಿ. |
01.42 | Tux Typing ಎಂಬ ವಿಂಡೋ ಕಾಣಿಸುತ್ತದೆ. |
01.46 | Tux Typing ನಲ್ಲಿ ಈ ಕೆಳಗಿರುವ ವಿಕಲ್ಪಗಳು ಒಳಗೊಂಡಿವೆ. |
01.50 | Fish Cascade – ಕ್ರೀಡಾ ಕ್ಷೇತ್ರ.
Comet Zap – ಮತ್ತೊಂದು ಕ್ರೀಡಾ ಕ್ಷೇತ್ರ. |
01.56 | Lessons – ಇಲ್ಲಿ ವಿಭಿನ್ನ ಪಾಠಗಳು ಇವೆ. ಇವು ನಮಗೆ ಅಕ್ಷರಾಭ್ಯಾಸವನ್ನು ಮಾಡಿಸುತ್ತವೆ. |
02.01 | Options – ಇಲ್ಲಿ ಇರುವ ವಿಕಲ್ಪಗಳು ನಮಗೆ ಶಬ್ದಗಳನ್ನು ಸಂಪಾದಿಸಲು, ವಾಕ್ಯಗಳನ್ನು ಟೈಪ್ ಮಾಡಲು, ಟಕ್ಸ್ ಟೈಪಿಂಗ್ ನ ಬಗ್ಗೆ ತಿಳಿಯಲು ಮತ್ತು ಭಾಷೆಯನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. |
02.13 | Quit – ಕ್ರೀಡೆಯನ್ನು ಮುಗಿಸಲು ಇಲ್ಲಿ ಒತ್ತಬೇಕು. |
02.16 | ಪಾಠಗಳನ್ನು ಉಪಯೋಗಿಸಿಕೊಂಡು ಟೈಪಿಂಗ್ ಅನ್ನು ಆರಂಭಿಸೋಣ. |
02.20 | ಮೈನ್ ಮೆನ್ಯುವಿನಲ್ಲಿ Lessons ಎಂಬುದನ್ನು ಕ್ಲಿಕ್ ಮಾಡಿ. |
02.23 | ಪಾಠಗಳಿರುವ ಒಂದು ವಿಂಡೋ ಕಾಣಿಸುತ್ತದೆ. |
02.26 | ಮೊದಲ ಪಾಠದಿಂದ ಅಭ್ಯಾಸವನ್ನು ಆರಂಭಿಸೋಣ. |
02.30 | basic_lesson_01.xml ಎಂಬಲ್ಲಿ ಒತ್ತಿ. |
02.35 | ನಿರ್ದೇಶಗಳ ಜೊತೆಗೆ ಒಂದು ವಿಂಡೋ ಕಾಣಿಸುತ್ತದೆ. |
02.41 | ಪಾಠವನ್ನು ಆರಂಭಿಸಲು space bar ಒತ್ತಿ. |
02.45 | ಕೀಬೋರ್ಡ್ ನ ಜೊತೆಗೆ ವಿಂಡೋ ಕಾಣಿಸುತ್ತದೆ. |
02.48 | ಈಗ ನಾವು a ಎಂಬ ಅಕ್ಷರದ ಅಭ್ಯಾಸವನ್ನು ಮಾಡೋಣ. |
02.52 | ಅಭ್ಯಾಸದ ಆರಂಭಕ್ಕಾಗಿ p ಅನ್ನು ಒತ್ತಿ. |
02.56 | ಒಂದು ವಿಂಡೋ ಕಾಣಿಸುತ್ತದೆ, ಅಲ್ಲಿ ಅಕ್ಷರಗಳು ಕಾಣಿಸುತ್ತವೆ. |
03.01 | ಇಲ್ಲಿ ‘aaa aaa…..’ ಎನ್ನುವುದು ಏನನ್ನು ಸೂಚಿಸುತ್ತವೆ? |
03.07 | ಇದು, ನೀವು ಈ ಅಕ್ಷರಗಳನ್ನು ಟೈಪ್ ಮಾಡಬೇಕೆಂದು ಸೂಚಿಸುತ್ತದೆ. |
03.10 | ಈ ಸಾಲಿಗೆ ಟೀಚರ್ಸ್ ಲೈನ್ ಎಂದು ಹೆಸರಿಡೋಣ. |
03.13 | ಈಗ ನಾವು ಹೆಚ್ಚಾಗಿ ಬಳಸುವ ಇಂಗ್ಲೀಷ್ ಕೀಬೋರ್ಡನ್ನು ನೋಡೋಣ. |
03.19 | ನಿಮಗೆ a ಎಂಬ ಅಕ್ಷರದ ಸುತ್ತಲು ಕೆಂಪುಬಣ್ಣದ ಚೌಕ ಕಾಣುತ್ತಿದ್ದೆಯೇ? ಇದು ಈಗ ನೀವು ಯಾವ ಅಕ್ಷರವನ್ನು ಟೈಪ್ ಮಾಡಬೇಕೆಂಬುದನ್ನು ಸೂಚಿಸುತ್ತದೆ. |
03.27 | ಕೀಬೋರ್ಡಿನ ಮೊದಲ ಸಾಲಿನಲ್ಲಿ ಅಂಕಿಗಳು, ವಿಶಿಷ್ಟಾಕ್ಷರಗಳು ಮತ್ತು Backspace ಕೀ ಇವೆ. |
03.35 | ಟೈಪ್ ಮಾಡಿದ್ದನು ಅಳಿಸಲು Backspace ಕೀಯನ್ನು ಉಪಯೋಗಿಸಿ. |
03.39 | ಕೀಬೋರ್ಡಿನಲ್ಲಿ ಮತ್ತೂ ಮೂರು ಸಾಲುಗಳಿರುತ್ತವೆ. ಅವುಗಳಲ್ಲಿ ವರ್ಣಮಾಲೆ, ಸಂಖ್ಯೆಗಳು ಮತ್ತು ಬೇರೆ ಅಕ್ಷರಗಳು ಇರುತ್ತವೆ. |
03.51 | ಕೀಬೋರ್ಡಿನ ಎರಡನೇಯ ಸಾಲಿನಲ್ಲಿ ವರ್ಣಮಾಲೆ, ಕೆಲವು ವಿಶಿಷ್ಟಾಕ್ಷರಗಳು ಮತ್ತು Enter ಕೀ ಇವೆ. |
03.58 | ಮುಂದಿನ ಸಾಲಿಗೆ ಹೋಗಲು ನೀವು Enter ಕೀಯನ್ನು ಒತ್ತಬೇಕು. |
04.02 | ಕೀಬೋರ್ಡಿನ ಮೂರನೇಯ ಸಾಲಿನಲ್ಲಿ ವರ್ಣಮಾಲೆ, colon, semicolon ಮತ್ತು Caps lock ಕೀ ಗಳಿವೆ. |
04.10 | ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಲು Caps Lock ಕೀ ಉಪಯೋಗಿಸಿ. |
04.14 | ಕೀಬೋರ್ಡಿನ ನಾಲ್ಕನೇಯ ಸಾಲಿನಲ್ಲಿ ವರ್ಣಮಾಲೆ, ವಿಶಿಷ್ಟಾಕ್ಷರಗಳು ಮತ್ತು shift ಕೀ ಗಳಿವೆ. |
04.21 | ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಲು ಯಾವುದಾದರೊಂದು ಅಕ್ಷರವನ್ನು Shift ಕೀ ನ ಜೊತೆಗೆ ಒತ್ತಿ. |
04.27 | ಕೀಗಳಲ್ಲಿ ಮೇಲ್ಗಡೆ ಇರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀ ನ ಜೊತೆಗೆ ಆ ಅಕ್ಷರವನ್ನು ಟೈಪ್ ಮಾಡಿ. |
04.34 | ಉದಾಹರಣೆಗೆ, 1 ಎಂಬ ಕೀ ನಲ್ಲಿ ಮೇಲ್ಗಡೆ ಆಶ್ಚರ್ಯಸೂಚಕ ಚಿಹ್ನೆಯೂ ಇದೆ. |
04.39 | ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀ ನ ಜೊತೆಗೆ 1 ನ್ನು ಒತ್ತಿ. |
04.44 | ಕೀಬೋರ್ಡಿನ ಐದನೇಯ ಸಾಲಿನಲ್ಲಿ Ctrl, Alt ಮತ್ತು ಫಂಕ್ಷನ್ ಕೀ ಗಳಿವೆ. ಇಲ್ಲಿ Space ಬಾರ್ ಕೂಡಾ ಇದೆ. |
04.52 | ಈಗ ಟಕ್ಸ್ ಟೈಪಿಂಗ್ ನ ಕೀಬೋರ್ಡ್, ಲ್ಯಾಪ್ಟಾಪ್ ನ ಕೀಬೋರ್ಡ್ ಮತ್ತು ಡೆಸ್ಕ್ಟಾಪ್ ನ ಕೀಬೋರ್ಡ್ ಗಳ ನಡುವೆ ವ್ಯತ್ಯಾಸವಿದೆಯೇ ಎಂದು ನೋಡೋಣ. |
05.00 | ಇಲ್ಲಿ ಗಮನಿಸಬೇಕಾದುದೇನೆಂದರೆ, ಟಕ್ಸ್ ಟೈಪಿಂಗ್ ನ ಕೀಬೋರ್ಡ್ ಮತ್ತು ಯಾವ ಕೀಬೋರ್ಡ್ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳಲ್ಲಿ ಉಪಯೋಗಿಸುವರೋ ಅವೆಲ್ಲವೂ ಒಂದೇ ಎಂದು. |
05.10 | ಈಗ ಕೀಬೋರ್ಡಿನಲ್ಲಿ ನಮ್ಮ ಬೆರಳುಗಳ ಸ್ಥಾನವೇನೆಂದು ನೋಡೋಣ. |
05.14 | ಈ ಸ್ಲೈಡ್ ಅನ್ನು ನೋಡಿ. |
05.16 | ಇದು ಬೆರಳುಗಳು ಮತ್ತು ಅವುಗಳ ಹೆಸರುಗಳನ್ನು ತೋರಿಸುತ್ತದೆ. ಎಡದಿಂದ ಬಲಕ್ಕೆ ಇರುವ ಬೆರಳುಗಳ ಹೆಸರು ಹೀಗಿವೆ: |
05.21 | ಕಿರುಬೆರಳು (Little finger), ಅನಾಮಿಕ ಬೆರಳು (Ring finger), ಮಧ್ಯದಬೆರಳು (Middle finger), ತೋರ್ಬೆರಳು (Index finger) ಮತ್ತು ಹೆಬ್ಬೆರಳು (Thumb). |
05.27 | ನಿಮ್ಮ ಕೀಬೋರ್ಡಿನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. |
05.32 | ಕಿರುಬೆರಳು (Little finger) ‘A’ ಎಂಬ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05.35 | ಅನಾಮಿಕ ಬೆರಳು ‘S’ ಎಂಬುದರ ಮೇಲೆ, |
05.38 | ಮಧ್ಯದ ಬೆರಳು ‘D’ ಎಂಬುದರ ಮೇಲೆ, |
05.41 | ತೋರ್ಬೆರಳು ‘F’ ಎಂಬುದರ ಮೇಲೆ ಇಡಿ. |
05.44 | ಈಗ ಬಲಗೈಯನ್ನು ಕೀಬೋರ್ಡಿನ ಬಲಬದಿಯಲ್ಲಿಡಿ. |
05.49 | ಕಿರುಬೆರಳು ಕಾಲನ್/ಸೆಮಿಕಾಲನ್ ನ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05.54 | ಅನಾಮಿಕ ಬೆರಳು ‘L’ ಎಂಬುದರ ಮೇಲೆ, |
05.56 | ಮಧ್ಯದ ಬೆರಳು ‘K’ ಎಂಬುದರ ಮೇಲೆ, |
06.00 | ತೋರ್ಬೆರಳು ‘J’ ಎಂಬುದರ ಮೇಲಿಡಬೇಕು. |
06.03 | ಸ್ಪೇಸ್ ಬಾರ್ ಅನ್ನು ಒತ್ತಲು ಬಲ ಹೆಬ್ಬೆರಳನ್ನು ಉಪಯೋಗಿಸಿ. |
06.08 | ಎರಡು ಕೈಗಳ ಚಿತ್ರವು ಸೂಕ್ತ ಬೆರಳುಗಳ ಉಪಯೋಗದಿಂದ ಹೇಗೆ ಟೈಪ್ ಮಾಡುವುದೆಂದು ತಿಳಿಸಿಕೊಡುತ್ತದೆ. |
06.14 | ನೀವು ಕಿರುಬೆರಳನ್ನು ಉಪಯೋಗಿಸಲು ಕೆಂಪು ಚೌಕವನ್ನು ಹುಡುಕುತ್ತಿರುವಿರಾ? |
06.19 | ನಿಮ್ಮ ಊಹೆ ಸರಿಯಾಗಿದೆ, ನೀವು a ಎಂದು ಟೈಪ್ ಮಾಡಲು ಆ ಬೆರಳನ್ನು ಉಪಯೋಗಿಸಬೇಕು. |
06.23 | ಕೀಬೋರ್ಡಿನಲ್ಲಿ ಈ ಪಾಠದಲ್ಲಿ ಹೇಳಿರುವಂತೆ ನಿಮ್ಮ ಬೆರಳುಗಳನ್ನು ಇರಿಸಿ. |
06.29 | ಈಗ ಟೈಪಿಂಗ್ ಅನ್ನು ಆರಂಭಿಸಿ. |
06.32 | ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು ಟೀಚರ್ಸ್ ಲೈನ್ ನ ಕೆಳಗಿನ ಸಾಲಿನಲ್ಲಿ ಕಾಣಿಸಲ್ಪಡುತ್ತವೆ. |
06.39 | ಈ ಸಾಲಿಗೆ ಸ್ಟುಡೆಂಟ್ ಲೈನ್ ಎಂದು ಹೆಸರಿಸೋಣ. |
06.42 | ಈಗ ಯಾವ ಅಕ್ಷರ ಟೀಚರ್ಸ್ ಲೈನ್ ನಲ್ಲಿ ಇಲ್ಲವೋ ಅದನ್ನು ಟೈಪ್ ಮಾಡಿ. |
06.47 | ನೀವು ತಪ್ಪು ಟೈಪ್ ಮಾಡಿದ ಅಕ್ಷರವು ಸ್ಟುಡೆಂಟ್ ಲೈನ್ ನಲ್ಲಿ ಕಾಣುತ್ತದೆಯೇ? ಇಲ್ಲ. |
06.53 | ಬದಲಿಗೆ, ಯಾವ ಅಕ್ಷರವನ್ನು ತಪ್ಪಾಗಿ ಟೈಪ್ ಮಾಡಿರುವಿರೋ ಆ ಅಕ್ಷರದ ಮೇಲೆ X ಎಂಬ ಚಿಹ್ನೆಯು ಸ್ವಲ್ಪ ಸಮಯದ ತನಕ ಕಾಣುತ್ತದೆ. |
06.59 | ಈಗ ಕೆಲವು ಅಕ್ಷರಗಳನ್ನು ಟೈಪ್ ಮಾಡಿ. |
07.02 | ಈಗ ನಮ್ಮಟೈಪಿಂಗ್ ನ ಮೆಟ್ರಿಕ್ಸ್ ಅನ್ನು ಗಣನೆ ಮಾಡೋಣ. |
07.07 | ಈಗ ನೀವು ಬಲಬದಿಯ ಫೀಲ್ಡ್ ಏನನ್ನು ತೋರಿಸುತ್ತದೆಯೆಂದು ಅಂದಾಜು ಮಾಡಿ. |
07.13 | Time – ಎನ್ನುವುದು ನಿಮ್ಮ ಟೈಪಿಂಗ್ ನ ವೇಗವನ್ನು ಸೆಟ್ ಮಾಡುತ್ತದೆ. |
07.17 | Chars – ಎನ್ನುವುದು ನೀವು ಟೈಪ್ ಮಾಡಿದ ಅಕ್ಷರಗಳ ಸಂಖ್ಯೆಯನ್ನು ತೋರಿಸುತ್ತದೆ. |
07.21 | CPM – ಎನ್ನುವುದು ನೀವು ಪ್ರತಿ ನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡುತೀರೆಂದು ತೋರಿಸುತ್ತದೆ. |
07.26 | WPM – ಎನ್ನುವುದು ನೀವು ಟೈಪ್ ಮಾಡಿದ ಶಬ್ದಗಳ ಸಂಖ್ಯೆಯನ್ನು ತೋರಿಸುತ್ತದೆ. |
07.31 | Errors – ಎನ್ನುವುದು ನೀವು ಎಷ್ಟು ತಪ್ಪು ಅಕ್ಷರಗಳನ್ನು ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. |
07.34 | Accuracy – ಎನ್ನುವುದು ನಿಮ್ಮ ಟೈಪಿಂಗ್ ನ ಶುದ್ಧತೆಯನ್ನು ತೋರಿಸುತ್ತದೆ. |
07.40 | ಮೇನ್ ಮನ್ಯುವಿಗೆ ಹೋಗಲು Escape ಕೀಯನ್ನು ಒತ್ತಿ. |
07.45 | ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಅಭ್ಯಾಸ ಮಾಡಿದ್ದೇವೆ. |
07.47 | ನಿಧಾನವಾಗಿ ಶುದ್ಧವಾಗಿ ಟೈಪ್ ಮಾಡಲು ಮತ್ತು ಮೊದಲಬಾರಿ ಅಭ್ಯಾಸ ಮಾಡಲು ಇದು ತುಂಬಾ ಚೆನ್ನಾಗಿದೆ. |
07.52 | ಒಮ್ಮೆ ದೋಷರಹಿತವಾಗಿ ಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಿದಲ್ಲಿ ನಾವು ನಮ್ಮ ಟೈಪಿಂಗ್ ನ ವೇಗವನ್ನು ಹೆಚ್ಚಿಸಬಹುದು. |
07.59 | ಈಗ ನಾವು ಟಕ್ಸ್ ಟೈಪಿಂಗ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
|
08.03 | ಈ ಟ್ಯುಟೋರಿಯಲ್ ನಲ್ಲಿ ನಾವು ಟಕ್ಸ್ ಟೈಪಿಂಗ್ ಇಂಟರ್ಫೆಸ್ ನ ಬಗ್ಗೆ ತಿಳಿದೆವು ಮತ್ತು ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದೆವು. |
08.11 | ಇಲ್ಲಿ ನಿಮಗೊಂದು ಕೆಲಸವಿದೆ. |
08.13 | basic_lesson_02.xml ಎಂಬಲ್ಲಿ ಹೋಗಿ. |
08.19 | ಈ ಸ್ತರದಲ್ಲಿ ಅಭ್ಯಾಸ ಮಾಡಿ. |
08.21 | ಈ ಸ್ತರದಲ್ಲಿ ಇರುವ ಎಲ್ಲಾ ಅಕ್ಷರಗಳನ್ನೂ ಟೈಪ್ ಮಾಡಿ ಮತ್ತು Enter ಒತ್ತಿ. |
08.26 | ಹೀಗೆಯೇ ನೀವು ಬೇರೆ ಪಾಠವನ್ನೂ ಅಭ್ಯಾಸ ಮಾಡಬಹುದು. |
08.30 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. http://spoken-tutorial.org/What_is_a_Spoken_Tutorial |
08.33 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08.36 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08.41 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
08.46 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08.50 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08.56 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
09.00 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09.08 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09.19 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |