LibreOffice-Suite-Impress/C2/Introduction-to-LibreOffice-Impress/Kannada
From Script | Spoken-Tutorial
Revision as of 11:13, 20 February 2014 by Vasudeva ahitanal (Talk | contribs)
Time | Narration |
00:00 | ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯದ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, |
00:07 | ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ |
00:09` | ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು |
00:12 | ಹೊಸ ಪ್ರೆಸೆಂಟೇಷನ್ ನ್ನು ಹೇಗೆ ಸೃಷ್ಟಿಸುವುದು. |
00:15 | ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು. |
00:19 | MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಹೇಗೆ ಓಪನ್ ಮಾಡುವುದು. |
00:22 | ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು. |
00:27 | ಲಿಬ್ರೆ ಆಫಿಸ್ ಇಂಪ್ರೆಸ್ಸ್ ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ. |
00:32 | ಇದನ್ನು ಪ್ರಬಲವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ. |
00:35 | ಇದು ಮೈಕ್ರೋಸಾಫ್ಟ್ ಆಫೀಸ್ ಪವರ್ ಪಾಯಿಂಟ್ ಗೆ ಸಮನಾಗಿದೆ. |
00:39 | ಲೈಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ, ಒಪನ್ ಸೋರ್ಸ್ ಸಾಫ್ಟ್ ವೇರ್ ಬೆಲೆರಹಿತ ಮತ್ತು ಉಚಿತವಾಗಿ ಬಳಸಿ ವಿತರಿಸಬಹುದಾಗಿದೆ. |
00:47 | ಲಿಬ್ರೆ ಆಫಿಸ್ ಸೂಟ್ ನ್ನು ಆರಂಭಿಸಲು, |
00:50 | ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ವರ್ಶನ್ ಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು. |
01:02 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ. |
01:12 | ನೀವು ಲಿಬ್ರೆ ಆಫೀಸ್ ಸೂಟ್ ನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ, |
01:15 | ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು. |
01:19 | ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ, |
01:22 | ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ. |
01:32 | ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಸೂಚನೆಗಳು ಸಿಗುತ್ತವೆ. |
01:38 | ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ನ್ಶನ್ ಅನ್ನು ಬಳಸಿ. |
01:43 | ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ ಸ್ಟಾಲ್ ಮಾಡಿದ್ದರೆ, |
01:46` | ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office” , ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು. |
01:58 | ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. |
02:03 | ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ “Create” ಕ್ಲಿಕ್ ಮಾಡಿ . |
02:13 | ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ತೆರೆಯುತ್ತದೆ. |
02:18 | ಈಗ ನಾವು ಇಂಪ್ರೆಸ್ ನ ಮೇನ್ ವಿಂಡೋ ದ ಕಂಪೋನೆಂಟ್ ಗಳ ಬಗ್ಗೆ ಕಲಿಯೋಣ. |
02:22 | ಇಂಪ್ರೆಸ್ ವಿಂಡೋ ವಿವಿಧ ಟೂಲ್ ಬಾರ್ ಗಳನ್ನುಹೊಂದಿದೆ. ಅವುಗಳು, ಟೈಟಲ್ ಬಾರ್, ಮೆನು ಬಾರ್, ಸ್ಟ್ಯಾಂಡರ್ಡ್ ಟೂಲ್ ಬಾರ್, ಫಾರ್ಮೆಟಿಂಗ್ ಬಾರ್ ಮತ್ತು ಸ್ಟೇಟಸ್ ಬಾರ್. |
02:36 | ಟೂಲ್ ಬಾರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಟ್ಯುಟೋರಿಯಲ್ ಮುಂದುವರಿಯುತ್ತಿದ್ದಂತೆ ಕಲಿಯುತ್ತೇವೆ. |
02:41 | ಈಗ ನಾವು ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ. |
02:47 | ಈಗ ಅಪ್ಲಿಕೇಶನ್ಸ್ ಗೆ ಹೋಗೊಣ, ಆಫೀಸ್ ಕ್ಲಿಕ್ ಮಾಡಿ ನಂತರ ಲಿಬ್ರೆ ಆಫೀಸ್ ಇಂಪ್ರೆಸ್ ಕ್ಲಿಕ್ ಮಾಡಿ. |
02:56 | ‘from template’ ಕ್ಲಿಕ್ ಮಾಡಿ. |
02:59 | “Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ . |
03:06 | ‘select a slide design’ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ. |
03:14 | ‘select an output medium field’ ಅಲ್ಲಿ ‘original’ ಸೆಲೆಕ್ಟ್ ಮಾಡಿ. |
03:19 | Next ಬಟನ್ ಮೇಲೆ ಕ್ಲಿಕ್ ಮಾಡಿ. |
03:22 | ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ. |
03:26 | ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ. |
03:32 | ‘what is your name’ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ. |
03:41 | ‘what is the subject of your presentation’ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ. |
03:47 | Next ಕ್ಲಿಕ್ ಮಾಡಿ. |
03:49 | ಈ ಹಂತವು ಪ್ರೆಸೆಂಟೇಷನ್ ಅನ್ನು ವಿವರಿಸುತ್ತದೆ. |
03:52 | ಎಲ್ಲಾ ಆಯ್ಕೆಗಳನ್ನು ಡೀಫಾಲ್ಟ್ ಆಗಿ ಆಯ್ಕೆಮಾಡಲಾಗುತ್ತದೆ. ಏನೂ ಬದಲಾವಣೆ ಮಾಡಬೇಡಿ. |
03:58 | ಅವು ಪ್ರೆಸೆಂಟೇಷನ್ ಗಾಗಿ ಇರುವ ಮಾದರಿ ಹೆಡಿಂಗ್ ಗಳು. |
04:01 | “Create” ಬಟನ್ ಮೇಲೆ ಕ್ಲಿಕ್ ಮಾಡಿ. |
04:04 | ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ . |
04:09 | ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ. |
04:13 | ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ. |
04:15 | ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು ಸ್ಯಾಂಪಲ್ ಇಂಪ್ರೆಸ್ಸ್ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತೆ ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ. |
04:25 | ಗಮನಿಸಿ ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ನ ಫಾರ್ಮಾಟ್ .odp ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ. |
04:33 | ಈಗ ನಾವು ಫೈಲ್ ಅನ್ನು ಕ್ಲೋಸ್ ಮಾಡೋಣ. ಪ್ರೆಸೆಂಟೇಷನ್ ನ್ನು ಕ್ಲೋಸ್ ಮಾಡಲು ಫೈಲ್ ಮೇಲೆ ಕ್ಲಿಕ್ ಮಾಡಿ ಕ್ಲೋಸ್ ಮಾಡಿ . |
04:40 | ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ. |
04:48 | ಈಗ ನಾವು ಪುನಃ ಫೈಲ್ ಮೇಲೆ ಮತ್ತು ಓಪನ್ ಮೇಲೆ ಕ್ಲಿಕ್ ಮಾಡಿ ನಂತರ ಸ್ಯಾಂಪಲ್ ಇಂಪ್ರೆಸ್ ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ. |
04:59 | ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ. |
05:06 | ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಆಗಿ ಸೇವ್ ಮಾಡಲು, |
05:11 | “file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ. |
05:14 | “file type” ನಲ್ಲಿ “Microsoft PowerPoint” ಆಯ್ಕೆ ಮಾಡಿ. |
05:18 | ಫೈಲ್ ಸೇವ್ ಮಾಡಲು ಲೊಕೇಶನ್ ಅನ್ನು ಆಯ್ಕೆ ಮಾಡಿ. |
05:20 | “save” ಬಟನ್ ಕ್ಲಿಕ್ ಮಾಡಿ. |
05:24 | “Keep Current Format” ಬಟನ್ ಕ್ಲಿಕ್ ಮಾಡಿ . ಫೈಲ್ ಈಗ ppt ಆಗಿ ಸೇವ್ ಆಗಿದೆ . |
05:33 | ಈಗ ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಕ್ಲೋಸ್ ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ. |
05:36 | ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ. |
05:44 | ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open” |
05:46 | ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ. |
05:50 | ಫೈಲ್ ಆಯ್ಕೆ ಮಾಡಿ ಮತ್ತು ಓಪನ್ ಕ್ಲಿಕ್ ಮಾಡಿ. |
05:54 | ಕೊನೆಗೆ ನಾವು ಒಂದು ಲಿಬ್ರೆ ಆಫಿಸ್ ಇಂಪ್ರೆಸ್ ಪ್ರೆಸೆಂಟೇಷನ್ ನ್ನು PDF ಫೈಲ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಎಂದು ತಿಳಿಯೋಣ. |
06:01 | ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ. |
06:12 | ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ. |
06:16 | ‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ ಸೇವ್ ಮೇಲೆ ಕ್ಲಿಕ್ ಮಾಡಿ. |
06:23 | ಡಾಕ್ಯುಮೆಂಟ್ ಈಗ ಡೆಸ್ಕ್ಟಾಪ್ ಮೇಲೆ ಒಂದು ಪಿಡಿಎಫ್ ಫೈಲ್ ಆಗಿ ಸೇವ್ ಆಗಿದೆ . |
06:29 | ಇದು ನಮ್ಮನ್ನು ಲಿಬ್ರೆ ಆಫೀಸ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ. |
06:34 | ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿಸದ್ದು ಇಷ್ಟು,
ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ. |
06:39 | ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು. |
06:42 | ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು. |
06:45 | ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು. |
06:49 | MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡೋದು. |
06:58 | ಈ ಗ್ರಹಿಕಾ ಪಾಠವನ್ನು ಪ್ರಯತ್ನಿಸಿ. |
07:00 | ಹೊಸ ಡಾಕ್ಯುಮೆಂಟ್ ತೆರೆಯಿರಿ. ಮೊದಲ ಸ್ಲೈಡ್ ನಲ್ಲಿ ಕೆಲವು ಟೆಕ್ಸ್ಟ್ ಬರಿಯಿರಿ. |
07:05 | MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ |
07:11 | ಈಗ ನಾವು ನೋಡಿರುವ ಫೈಲ್ ಅನ್ನು ಪುನಃ ತೆರೆಯಿರಿ. |
07:15 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. |
07:22 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿಕೊಂಡು ನೋಡಬಹುದು. |
07:26 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ. |
07:32 | ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ನೀಡುತ್ತದೆ. |
07:36 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇದಕ್ಕೆ ಬರೆಯಿರಿ : contact@spoken-tutorial.org
|
07:42 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ. ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಉತ್ತೇಜಿಸಲ್ಪಟ್ಟಿದೆ. |
07:55 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ ಎಚ್ ಟಿ ಟಿ ಪಿ ಕೋಲನ್ ಸ್ಲಾಶ್ ಸ್ಲಾಶ್ಗಾ ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ ನಲ್ಲಿ ಲಭ್ಯವಿದೆ. |
08:07 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ಸೊಲ್ಯುಶನ್ಸ್ Pvt. Ltd. ನಿಂದ ನೀಡಲ್ಪಟ್ಟಿದೆ. |
08:12 | ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು. |