LibreOffice-Suite-Writer/C2/Typing-text-and-basic-formatting/Kannada
From Script | Spoken-Tutorial
Revision as of 15:53, 18 February 2014 by Vasudeva ahitanal (Talk | contribs)
Time | NARRATION |
00:01 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಟೆಕ್ಸ್ಟ್ ಟೈಪಿಂಗ್ ಮತ್ತು ಬೇಸಿಕ್ ಫಾರ್ಮೇಟಿಂಗ್ ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:10 | ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್ |
00:12 | ಬುಲೆಟ್ಸ್ ಹಾಗೂ ಕ್ರಮಾಂಕನಗೊಳಿಸುವುದು |
00:14 | ಕಟ್, ಕಾಪಿ ಮತ್ತು ಪೇಸ್ಟ್ ವಿಕಲ್ಪಗಳು |
00:18 | ಬೋಲ್ಡ್, ಅಂಡರ್-ಲೈನ್ ಹಾಗೂ ಇಟಾಲಿಕ್ ವಿಕಲ್ಪಗಳು |
00:21 | ಫಾಂಟ್ ನ ಹೆಸರು, ಆಕೃತಿ ಮತ್ತು ವರ್ಣಗಳು |
00:26 | ಹೀಗೆ ಈ ಎಲ್ಲಾ ವಿಕಲ್ಪಗಳನ್ನೂ ಬಳಸಿಕೊಂಡು ಸಾಧಾರಣವಾದ ಟೆಕ್ಸ್ಟನ್ನು ಇನ್ನೂ ಹೆಚ್ಚು ಆಕರ್ಷಕವಾಗಿ ಮತ್ತು ಸುಲಭವಾಗಿ ಓದಲು ಆಗುವಂತೆ ಮಾಡುವುದು ಹೇಗೆ ಎನ್ನುವುದನ್ನು ಕಲಿಯುವಿರಿ. |
00:36 | ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ರೂಪದಲ್ಲಿ ಉಬಂಟು ಲಿನಕ್ಸ್ 10.04 ನ್ನು ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಉಪಯೊಗಿಸುತ್ತಿದ್ದೇವೆ. |
00:47 | ನಾವು ಮೊದಲು ರೈಟರ್ ನಲ್ಲಿ ಟೆಕ್ಸ್ಟ್ ನ ಅಲೈನ್ಮೆಂಟ್ ನ ಬಗ್ಗೆ ತಿಳಿಯೋಣ. |
00:50 | ನೀವು ರೈಟರ್ ನಲ್ಲಿ ನಿಮ್ಮಿಷ್ಟದ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಿ ಈ ವಿಕಲ್ಪಗಳನ್ನು ಕಾರ್ಯಾನ್ವಯಗೊಳಿಸಬಹುದು. |
00:57 | ಹೀಗಿರುವಾಗ, ಹಿಂದಿನ ಟ್ಯುಟೋರಿಯಲ್ ನಲ್ಲಿ ಈ ಮೊದಲೇ ನಾವು “resume.odt” ಎಂಬ ಫೈಲ್ ಅನ್ನು ತಯಾರಿಸಿದ್ದೇವೆ. ನಾವು ಈ ಫೈಲ್ ಅನ್ನು ಒಪನ್ ಮಾಡೋಣ. |
01:08 | ನಾವು ಇಲ್ಲಿ ಮೊದಲೇ “RESUME” ಎಂಬ ಪದವನ್ನು ಟೈಪ್ ಮಾಡಿದ್ದೇವೆ ಮತ್ತು ಅದನ್ನು ಮಧ್ಯದಲ್ಲಿ ಅಲೈನ್ ಮಾಡಿದ್ದೇವೆ. |
01:14 | ಹಾಗಾಗಿ ಬನ್ನಿ, ಆ ಪದವನ್ನು ಆಯ್ಕೆ ಮಾಡಿ ಹಾಗೂ “Align Left” ಎಂಬಲ್ಲಿ ಕ್ಲಿಕ್ ಮಾಡಿ. ಈಗ ನೀವು “RESUME” ಎಂಬ ಪದವು ಎಡಬದಿಗೆ ಅಲೈನ್ ಆಗಿರುವುದನ್ನು ಗಮನಿಸಿ. ಅಂದರೆ, ಪದವು ಡಾಕ್ಯುಮೆಂಟ್ ಪೇಜ್ ನ ಎಡ ಮಾರ್ಜೀನಿನೆಡೆಗೆ ಸರಿದಿದೆ. |
01:25 | ನಾವು “Align Right” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಬಲ ಮಾರ್ಜೀನಿನೆಡೆಗೆ ಹೋಗುತ್ತದೆ. |
01:32 | ನಾವು “Justify” ಎಂಬಲ್ಲಿ ಕ್ಲಿಕ್ ಮಾಡಿದರೆ ಆಗ “RESUME” ಎಂಬ ಪದವು ಪೇಜ್ ನ ಎರಡೂ ಮಾರ್ಜೀನಿನ ನಡುವೆ ಸಮಾನಾಂತರದಲ್ಲಿ ನಿಲ್ಲುತ್ತದೆ. |
01:44 | ಇದರ ವಿಶೇಷತೆಯು ನಿಮ್ಮಲ್ಲಿ ಪದಗಳ ಸಮೂಹ ಅಥವಾ ಪ್ಯಾರಾಗ್ರಾಫ್ ಇದ್ದಲ್ಲಿ ಹೆಚ್ಚಾಗಿ ತಿಳಿಯುತ್ತದೆ. |
01:51 | ಇದನ್ನು undo ಮಾಡೋಣ. |
01:54 | ಬುಲೆಟ್ಸ್ ಹಾಗೂ ಕ್ರಮಾಂಕವು ಸ್ವತಂತ್ರವಾಗಿ ಬಿಂದುಗಳನ್ನು ಬರೆಯುವಾಗ ಉಪಯೋಗಕ್ಕೆ ಬರುತ್ತವೆ. |
01:58 | ಪ್ರತಿಯೊಂದು ಬಿಂದುವೂ ಬುಲೆಟ್ ಅಥವಾ ಕ್ರಮಾಂಕದೊಂದಿಗೆ ಆರಂಭವಾಗುತ್ತದೆ. |
02:02 | ಹೀಗೆ ಡಾಕ್ಯುಮೆಂಟ್ ನಲ್ಲಿ ಬರೆದಿರುವ ವಿವಿಧ ಬಿಂದುಗಳ ನಡುವೆ ಭೇದವನ್ನು ಕಲ್ಪಿಸಬಹುದು. |
02:07 | ಇದಕ್ಕಾಗಿ ಮೆನ್ಯು ಬಾರ್ ನಲ್ಲಿ ಮೊದಲು “Format” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Bullets and Numbering” ಎಂಬಲ್ಲಿ ಕ್ಲಿಕ್ ಮಾಡಿ. |
02:15 | “Bullets and Numbering” ಎಂಬಲ್ಲಿ ಕ್ಲಿಕ್ ಮಾಡಿದಾಗ ಬರುವ ಡಯಲಾಗ್ ಬಾಕ್ಸ್ ನಲ್ಲಿ ನಿಮಗೆ ವಿವಿಧ ಟ್ಯಾಬ್ ನಲ್ಲಿ ವಿವಿಧ ಬುಲೆಟ್ ನ ಶೈಲಿಗಳು ಕಾಣಸಿಗುತ್ತವೆ. ಅವನ್ನು ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಉಪಯೋಗಿಸಬಹುದು. |
02:26 | ಕ್ರಮಾಂಕನವೂ ಕೂಡಾ ಇದೇ ರೀತಿಯಲ್ಲಿ numbering ನ್ನು ಆಯ್ಕೆ ಮಾಡುವುದರಿಂದ ಆಗುತ್ತದೆ ಮತ್ತು ಪ್ರತಿ ಪಂಕ್ತಿಯೂ ಹೊಸ ಸಂಖ್ಯೆಯಿದ ಆರಂಭಗೊಳ್ಳುತ್ತದೆ. |
02:34 | ಹಾಗಾಗಿ, “Numbering type” ಶೈಲಿಯಲ್ಲಿರುವ ಎರಡನೇಯ ಶೈಲಿಯನ್ನು ಕ್ಲಿಕ್ ಮಾಡೋಣ. |
02:40 | ಈಗ “OK” ಬಟನ್ ಕ್ಲಿಕ್ ಮಾಡಿ. |
02:42 | ಈಗ ನೀವು ನಿಮ್ಮ ಮೊದಲನೇಯ ಸ್ಟೇಟ್ಮೆಂಟನ್ನು ಟೈಪ್ ಮಾಡಲು ಸಿದ್ಧರಾಗಿರುವಿ.ರಿ |
02:46 | ಬನ್ನಿ, “NAME: RAMESH” ಎಂದು ಟೈಪ್ ಮಾಡಿ. |
02:50 | ಈಗ ಸ್ಟೇಟ್ಮೆಂಟ್ ಟೈಪ್ ಮಾಡಿದ ನಂತರ “Enter” ಕೀಯನ್ನು ಒತ್ತಿ, ಹೊಸ ಬುಲೆಟ್ ಅಥವಾ ವೃದ್ಧಿಯಾದ ಕ್ರಮಾಂಕವು ಕಾಣಿಸುತ್ತದೆ. |
03:05 | ಇಲ್ಲಿ ನೀವು ಆಯ್ಕೆಮಾಡಿದ ಫಾರ್ಮೆಟಿಗೆ ಅನುಸಾರವಾಗಿ ಬುಲೆಟ್ ನ ಒಳಗೆ ಮತ್ತೊಂದು ಬುಲೆಟ್ ಅಥವಾ ಕ್ರಮಾಂಕದ ಒಳಗೆ ಮತ್ತೊಂದು ಕ್ರಮಾಂಕವು ಇರಬಹುದಾಗಿದೆ. |
03:13 | ನಾವೀಗ ಎರಡನೇಯ ಸ್ಟೇಟ್ಮೆಂಟನ್ನು “ FATHER’S NAME colon MAHESH” ಎಂದು ಟೈಪ್ ಮಾಡೋಣ. |
03:20 | ಮತ್ತೊಮ್ಮೆ “Enter” ಒತ್ತಿ ಮತ್ತು “MOTHER’S NAME colon SHWETA” ಎಂದು ಟೈಪ್ ಮಾಡಿ. |
03:27 | ಹಾಗೆಯೇ, ಮುಂದಿನ ಬಿಂದುವಾಗಿ “FATHERS OCCUPATION colon GOVERNMENT SERVANT” ಎಂದು ಹಾಗೂ “MOTHERS OCCUPATION colon HOUSEWIFE” ಎಂದು ಟೈಪ್ ಮಾಡಿ. |
03:39 | ನೀವು ಕ್ರಮಾನುಸಾರವಾಗಿ ಬುಲೆಟ್ ನ ಇಂಡೆಂಟ್ ಅನ್ನು ಹೆಚ್ಚಿಸಲು ಮತ್ತು ಕಡಿಮೆ ಮಾಡಲು ಟ್ಯಾಬ್ ಅಥವಾ ಶಿಫ್ಟ್ ಟ್ಯಾಬ್ ಕೀಗಳನ್ನು ಉಪಯೋಗಿಸಬಹುದು. |
03:47 | “Bullets and Numbering” ವಿಕಲ್ಪವನ್ನು ಕ್ಲೋಸ್ ಮಾಡಲು ಮೊದಲು ಕರ್ಸರ್ ಅನ್ನು HOUSEWIFE ಎಂಬ ಪದದ ಕೊನೆಯಲ್ಲಿಡಿ ಮತ್ತು enter ಕೀ ಒತ್ತಿ ಹಾಗೂ “Bullets and Numbering” ಎಂಬ ಡಯಲಾಗ್ ಬಾಕ್ಸ್ ನಲ್ಲಿ “Numbering Off” ಎಂಬಲ್ಲಿ ಕ್ಲಿಕ್ ಮಾಡಿ. |
04:03 | ಈಗ ನೋಡಿ, ನೀವು ಹೊಸದಾಗಿ ಬರೆಯುವ ಟೆಕ್ಸ್ಟ್ ಗೆ ಬುಲೆಟ್ ಶೈಲಿಯು ಇಲ್ಲ. |
04:10 | ಗಮನಿಸಿ, ನಾವು ನಮ್ಮ ಡಾಕ್ಯುಮೆಂಟ್ ನಲ್ಲಿ “NAME” ಎಂಬ ಪದವನ್ನು ಎರಡು ಬಾರಿ ಟೈಪ್ ಮಾಡಿರುತ್ತೇವೆ. |
04:14 | ಪುನಃ ಅದೇ ಪದವನ್ನು ಟೈಪ್ ಮಾಡುವ ಬದಲು ನಾವು ರೈಟರ್ ನಲ್ಲಿ “Copy” ಹಾಗೂ “Paste” ಎಂಬ ವಿಕಲ್ಪವನ್ನು ಬಳಸಬಹುದು. |
04:21 | ಹಾಗಾದರೆ, ಅದನ್ನು ಹೇಗೆ ಮಾಡುವುದು ಎಂದು ತಿಳಿಯೋಣ. |
04:24 | ಈಗ ನಾವು “MOTHER’S NAME” ಎಂಬ ಟೆಕ್ಸ್ಟ್ ನಿಂದ “NAME” ಎಂಬ ಪದವನ್ನು ಡಿಲಿಟ್ ಮಾಡೋಣ ಮತ್ತು copy ಮತ್ತು paste ವಿಕಲ್ಪವನ್ನು ಬಳಸಿ ಪುನಃ ಬರೆಯೋಣ. |
04:33 | “FATHER’S NAME” ಎಂಬ ಟೆಕ್ಸ್ಟ್ ನಲ್ಲಿ "NAME” ಎಂಬ ಪದದ ಮೇಲೆ ಕರ್ಸರ್ ಅನ್ನು ಡ್ರಾಗ್ ಮಾಡಿ ಆ ಪದವನ್ನು ಸೆಲೆಕ್ಟ್ ಮಾಡಿ. |
04:40 | ಈಗ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು ಅಲ್ಲಿ “Copy” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
04:45 | “MOTHER’S” ಎಂಬ ಪದದ ಮುಂದೆ ಕರ್ಸರ್ ಇಡಿ. |
04:48 | ಮತ್ತೊಮ್ಮೆ ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Paste” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ. |
04:54 | ನೋಡಿ, “NAME” ಎಂಬ ಪದವು ತಂತಾನೇ ಪೆಸ್ಟ್ ಆಗಿದೆ. |
04:57 | ಇಲ್ಲಿ ಈ ವಿಕಲ್ಪಗಳಿಗೆ ಶಾರ್ಟ್ಕಟ್ ಕೀ ಗಳೂ ಇವೆ, copy ಮಾಡಲು CTRL+C ಮತ್ತು Paste ಮಾಡಲು CTRL+V. |
05:08 | ಈ ವಿಶೇಷತೆಯು ತುಂಬಾ ಉಪಯುಕ್ತವಾಗಿದೆ. ನಿಮ್ಮ ಡಾಕ್ಯುಮೆಂಟ್ ನಲ್ಲಿ ಸಮಾನವಾದ ಟೆಕ್ಸ್ಟ್ ಬಹಳ ಬಾರಿ ಬಂದಲ್ಲಿ ಅದನ್ನು ಪೂರ್ತಿಯಾಗಿ ಟೈಪ್ ಮಾಡುವ ಅವಶ್ಯಕತೆಯಿಲ್ಲ. |
05:19 | ನೀವು ನಿಮ್ಮ ಡಾಕ್ಯುಮೆಂಟ್ ನಲ್ಲಿ ಟೆಕ್ಸ್ಟ್ ಅನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಾನಾಂತರಿಸಲು “Cut” ಹಾಗೂ “Paste” ವಿಕಲ್ಪವನ್ನು ಬಳಸಬಹುದು. |
05:26 | ಈಗ ಅದನ್ನು ಹೇಗೆ ಮಾಡುವುದೆಂಬುದನ್ನು ನೋಡೋಣ. |
05:29 | ಮೊದಲಿಗೆ “MOTHER’S” ಪದದ ಮುಂದಿರುವ “NAME” ಪದವನ್ನು ಡಿಲೀಟ್ ಮಾಡೋಣ. |
05:34 | ಈ ಪದವನ್ನು “Cut” ಮತ್ತು “Paste” ಮಾಡಲು ಮೊದಲು “FATHERS NAME” ಎಂಬಲ್ಲಿಂದ “NAME” ಎಂಬ ಪದವನ್ನು ಸೆಲೆಕ್ಟ್ ಮಾಡಿ. |
05:40 | ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು “Cut” ಎಂಬಲ್ಲಿ ಕ್ಲಿಕ್ ಮಾಡಿ. ಗಮನಿಸಿ, “FATHER'S” ಪದದ ಮುಂದೆ ಈಗ “NAME” ಎಂಬ ಪದವು ಇಲ್ಲ. ಅಂದರೆ, ಅದು ಕಟ್ ಅಥವಾ ಡಿಲೀಟ್ ಆಗಿದೆ. |
05:54 | ಈಗ “MOTHER’S” ಎಂಬ ಪದದ ಮೇಲೆ ಕರ್ಸರ್ ಇಟ್ಟು ಮೌಸ್ ನಲ್ಲಿ ರೈಟ್ ಕ್ಲಿಕ್ ಮಾಡಿ, |
05:59 | “Paste” ಅಂಬಲ್ಲಿ ಕ್ಲಿಕ್ ಮಾಡಿ. |
06:02 | ಈಗ ಆ ಪದವು “MOTHER'S” ಎಂಬ ಪದದ ಮುಂದೆ ಪೇಸ್ಟ್ ಆಗಿದೆಯೆಂದು ನೋಡುತ್ತೀರಿ. |
06:07 | ಕಟ್ ಮಾಡಲು ಶಾರ್ಟ್ಕಟ್ ಕೀ CTRL+X ಆಗಿದೆ. |
06:11 | ಒಟ್ಟಿನಲ್ಲಿ, ಟೆಕ್ಸ್ಟನ್ನು ಕಾಪಿ ಮಾಡುವುದರಲ್ಲಿ ಮತ್ತು ಕಟ್ ಮಾಡುವುದರಲ್ಲಿ ವ್ಯತ್ಯಾಸವೆಂದರೆ, “Copy” ವಿಕಲ್ಪವು ಮೂಲಪದವನ್ನು ಆ ಸ್ಥಾನದಲ್ಲಿ ಇರಿಸುತ್ತದೆ ಮತ್ತು “Cut” ವಿಕಲ್ಪವು ಮೂಲಪದವನ್ನು ಆ ಸ್ಥಾನದಿಂದ ಸಂಪೂರ್ಣವಾಗಿ ತೆಗೆದುಹಾಕುತ್ತದೆ. |
06:27 | ಸರಿ, “name” ಪದವನ್ನು Father’s ಪದದ ಮುಂದೆ ಪೇಸ್ಟ್ ಮಾಡಿ ಮತ್ತು ಮುಂದುವರೆಯಿರಿ |
06:31 | ಈಗ ಒಂದು “EDUCATION DETAILS” ಎಂಬ ಹೊಸ ಹೆಡಿಂಗ್ ಅನ್ನು ಟೈಪ್ ಮಾಡಿ. |
06:35 | ರೈಟರ್ ನಲ್ಲಿ “Bullets and Numbering” ಅನ್ನು ಕಲಿತ ನಂತರ ನಾವು ಯಾವುದೇ ಟೆಕ್ಸ್ಟ್ ನ “Font name” ಹಾಗೂ “Font size” ಅನ್ನು ಹೇಗೆ ಬದಲಿಸುವುದೆಂದು ತಿಳಿಯೋಣ. |
06:45 | ಮೇಲೆ ಫಾರ್ಮೆಟ್ ಟೂಲ್ ಬಾರ್ ನಲ್ಲಿ “Font Name” ಎಂಬ ಒಂದು ಸ್ಥಾನವಿದೆ. |
06:52 | ಫಾಂಟ್ ನ ಹೆಸರು ಸಾಮಾನ್ಯವಾಗಿ “Liberation Serif” ಎಂಬ ಹೆಸರಿನಲ್ಲಿ ಇರುತ್ತದೆ. |
06:57 | ಫಾಂಟ್ ನ ಹೆಸರನ್ನು ನಿಮ್ಮ ಇಚ್ಛಾನುಸಾರವಾಗಿ ಟೆಕ್ಸ್ಟ್ ನಲ್ಲಿ ಫಾಂಟ್ ನ ಶೈಲಿಯನ್ನು ಬದಲಿಸಲು ಉಪಯೋಗಿಸಲಾಗುತ್ತದೆ. |
07:04 | ಉದಾಹರಣೆಗಾಗಿ, “Education Details” ಎಂಬ ಹೆಡಿಂಗ್ ನ ಫಾಂಟ್ ನ ಹೆಸರನ್ನು ಮತ್ತು ಆಕೃತಿಯನ್ನು ಬದಲಿಸೋಣ. |
07:11 | ಇದಕ್ಕಾಗಿ, ಮೊದಲು “Education details” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ “Font Name” ಎಂಬಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ. |
07:19 | ನೀವು ಡ್ರಾಪ್ ಡೌನ್ ಮೆನ್ಯುವಿನಲ್ಲಿ ಫಾಂಟ್ ನ ಅನೇಕ ಹೆಸರುಗಳನ್ನು ನೋಡುವಿರಿ. |
07:25 | ಅವುಗಳಲ್ಲಿ “Liberation Sans” ಎಂಬುದನ್ನು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ. |
07:29 | ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಫಾಂಟ್ ಬದಲಾಗಿರುವುದನ್ನು ಗಮನಿಸಿ. |
07:34 | “Font Name” ಎಂಬ ವಿಕಲ್ಪದ ಪಕ್ಕದಲ್ಲಿಯೇ “Font Size” ಎಂಬ ವಿಕಲ್ಪವು ಇದೆ. |
07:38 | “Font Size” ಎಂಬ ಹೆಸರಿನಿಂದಲೇ ಇದು ಆಯ್ಕೆಮಾಡಿದ ಅಥವಾ ಹೊಸತಾಗಿ ಟೈಪ್ ಮಾಡಿದ ಟೆಕ್ಸ್ಟ್ ನ ಆಕೃತಿಯನ್ನು ಕಡಿಮೆ ಅಥವಾ ಹೆಚ್ಚು ಮಾಡಲು ಇರುವ ವಿಕಲ್ಪವೆಂದು ತಿಳಿದುಬರುತ್ತದೆ. |
07:52 | ಈಗ ನಾವು ಮೊದಲು “EDUCATION DETAILS” ಎಂಬ ಟೆಕ್ಸ್ಟ್ ಅನ್ನು ಆಯ್ಕೆ ಮಾಡೋಣ. |
07:55 | ಫಾಂಟ್ ನ ಆಕೃತಿಯು ಈಗ 12 ಇದೆ. |
07:58 | ಈಗ “Font Size” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು 11 ರ ಮೇಲೆ ಕ್ಲಿಕ್ ಮಾಡಿ |
08:05 | ಈಗ ನೋಡಿ, ಟೆಕ್ಸ್ಟ್ ನ ಫಾಂಟ್ ಆಕೃತಿಯು ಕಡಿಮೆಯಾಗಿದೆ. |
08:09 | ಹೀಗೇ ಫಾಂಟ್ ನ ಆಕೃತಿಯನ್ನು ಹೆಚ್ಚಿಸಲೂ ಬಹುದು. |
08:13 | ಫಾಂಟ್ ಆಕೃತಿಯ ಬಗ್ಗೆ ತಿಳಿದ ನಂತರ ನಾವು ರೈಟರ್ ನಲ್ಲಿ ಫಾಂಟ್ ನ ವರ್ಣವನ್ನು ಬದಲಿಸುವುದು ಹೇಗೆ ಎಂಬುದನ್ನೂ ತಿಳಿಯೋಣ. |
08:21 | “Font Color” ಅನ್ನು ಡಾಕ್ಯುಮೆಂಟ್ ನಲ್ಲಿರುವ ಟೆಕ್ಸ್ಟ್ ನ ಅಥವಾ ಟೈಪ್ ಮಾಡಿರುವ ಲೈನ್ ಗಳ ವರ್ಣವನ್ನು ನಿರ್ಧರಿಸಲು ಉಪಯೋಗಿಸಲಾಗುತ್ತದೆ. |
08:27 | ಉದಾಹರಣೆಗೆ, “EDUCATION DETAILS” ಎಂಬ ಹೆಡಿಂಗನ್ನು ವರ್ಣಯುತವನ್ನಾಗಿ ಮಾಡೋಣ. |
08:32 | ಹಾಗಾದರೆ, ಪುನಃ “EDUCATION DETAILS” ಎಂಬ ಟೆಕ್ಸ್ಟನ್ನು ಆಯ್ಕೆಮಾಡಿ. |
08:36 | ಈಗ ಟೂಲ್ ಬಾರ್ ನಲ್ಲಿ “Font Color” ಎಂಬ ವಿಕಲ್ಪದ ಮೇಲೆ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಟೆಕ್ಸ್ಟನ್ನು ತಿಳಿ ಹಸಿರು ಬಣ್ಣಕ್ಕೆ ಬದಲಿಸಲು ತಿಳಿ ಹಸಿರು ಬಣ್ಣದ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:48 | ಈಗ ಹೆಡಿಂಗ್ ಎನ್ನುವುದು ತಿಳಿ ಹಸಿರು ಬಣ್ಣಕ್ಕೆ ಬದಲಾಗಿರುವುದನ್ನು ಗಮನಿಸಿ. |
08:52 | ”Font size” ವಿಕಲ್ಪದ ಮುಂದೆಯೇ ನಿಮಗೆ “Bold” “Italic” ಮತ್ತು “Underline” ಎಂಬ ಮೂರು ವಿಕಲ್ಪಗಳು ಕಾಣಸಿಗುತ್ತವೆ. |
09:00 | ಇದರ ಹೆಸರೇ ಹೇಳುವಂತೆ, ಇದು ಟೆಕ್ಸ್ಟನ್ನು ದಪ್ಪನಾಗಿ (Bold) ಅಥವಾ ವಕ್ರವಾಗಿ (Italic) ಅಥವಾ ಕೆಳರೇಖೆಯ ಸಹಿತವಾಗಿ (Underline) ಮಾಡುತ್ತದೆ. |
09:07 | ಸರಿ, ಮೊದಲು “EDUCATION DETAILS” ಎಂಬ ಹೆಡಿಂಗ್ ಅನ್ನು ಆಯ್ಕೆಮಾಡಿ |
09:11 | ಈಗ ಟೆಕ್ಸ್ಟ್ ಅನ್ನು ದಪ್ಪನಾಗಿಸಲು 'Bold' ಐಕಾನಿನ ಮೇಲೆ ಕ್ಲಿಕ್ ಮಾಡಿ. |
09:15 | ನೋಡಿ, ಆಯ್ಕೆ ಮಾಡಿದ ಟೆಕ್ಸ್ಟ್ ದಪ್ಪವಾಗಿದೆ. |
09:19 | ಹಾಗೆಯೇ, “Italic” ಐಕಾನ್ ನ ಮೇಲೆ ಕ್ಲಿಕ್ ಮಾಡಿದರೆ, ಟೆಕ್ಸ್ಟ್ ವಕ್ರವಾಗುತ್ತದೆ, |
09:25 | “Underline” ಐಕಾನ್ ಮೇಲೆ ಕ್ಲಿಕ್ ಮಾಡಿ, |
09:26 | 'Underline' ಐಕಾನ್ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತದೆ. |
09:31 | ನೋಡಿ, ನೀವು ಆಯ್ಕೆ ಮಾಡಿದ ಟೆಕ್ಸ್ಟ್ ನ ಕೆಳಗೆ ರೇಖೆಯೊಂದು ಕಾಣುತ್ತಿದೆ. |
09:35 | ಹೆಡಿಂಗ್ ಅನ್ನು “bold” ಮತ್ತು “underlined” ಆಗಿ ಇಡಲು “italic” ಐಕಾನ್ ಮೇಲೆ ಪುನಃ ಕ್ಲಿಕ್ ಮಾಡಿ ಮತ್ತು ಉಳಿದ ಎರಡನ್ನು ಹಾಗೆಯೇ ಬಿಡಿ. |
09:45 | ಈಗ ಹೆಡಿಂಗ್ “bold” ಹಾಗೂ “underlined” ಆಗಿ ಇದೆ. |
09:50 | ಈಗ ನಾವು ಲಿಬ್ರೆ ಆಫೀಸ್ ರೈಟರ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
09:55 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, |
09:57 | ರೈಟರ್ ನಲ್ಲಿ ಟೆಕ್ಸ್ಟ್ ಅನ್ನು ಅಲೈನ್ ಮಾಡುವುದು, |
10:00 | ಬುಲೆಟ್ಸ್ ಮತ್ತು ಕ್ರಮಾಂಕನಗೊಳಿಸುವುದು, |
10:02 | ರೈಟರ್ ನಲ್ಲಿ Cut, Copy ಮತ್ತು Paste ವಿಕಲ್ಪಗಳ ಉಪಯೋಗ, |
10:05 | Bold, Underline ಮತ್ತು Italics ವಿಕಲ್ಪಗಳ ಉಪಯೋಗ, |
10:09 | ರೈಟರ್ ನಲ್ಲಿ Font name, Font size ಮತ್ತು Font color ವಿಕಲ್ಪಗಳ ಉಪಯೋಗ ಇತ್ಯಾದಿ. |
10:13 | ಮಾಡಬೇಕಾದ ಅಭ್ಯಾಸಗಳು : |
10:16 | bullets ಮತ್ತು numbering ಅನ್ನು ಕ್ರಿಯಾನ್ವಯಗೊಳಿಸಿ |
10:18 | ಶೈಲಿಯನ್ನು ಆಯ್ಕೆಮಾಡಿ ಒಂದಿಷ್ಟು ಅಂಶಗಳನ್ನು ಟೈಪ್ ಮಾಡಿ. |
10:22 | ಒಂದಿಷ್ಟು ಟೆಕ್ಸ್ಟ್ ಗಳನ್ನು ಆಯ್ಕೆ ಮಾಡಿ ಮತ್ತು ಇದರ ಫಾಂಟ್ ನ ಹೆಸರನ್ನು “Free Sans” ಗೆ ಬದಲಿಸಿ ಮತ್ತು ಫಾಂಟ್ ನ ಆಕೃತಿಯನ್ನು “16” ಕ್ಕೆ ಬದಲಿಸಿ. |
10:29 | ಟೆಕ್ಸ್ಟ್ ಅನ್ನು “Italics” ಮಾಡಿ. |
10:32 | ಫಾಂಟ್ ನ ವರ್ಣವನ್ನು ಕೆಂಪು ಬಣ್ಣಕ್ಕೆ ಬದಲಿಸಿ. |
10:35 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
10:38 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
10:41 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:46 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
10:52 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:55 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
11:02 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
11:06 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11:14 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
11:25 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
11:30 | ಧನ್ಯವಾದಗಳು. |