LibreOffice-Suite-Calc/C2/Working-with-data/Kannada

From Script | Spoken-Tutorial
Revision as of 15:45, 18 February 2014 by Vasudeva ahitanal (Talk | contribs)

Jump to: navigation, search
TIME NARRATION
0:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
0:06 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
0:09 ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು.
0:13 ಶೀಟ್ ಗಳ ನಡುವೆ ವಿಷಯ ಹಂಚಿಕೆ.
0:16 ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ.
0:23 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
0:32 ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ.
0:42 ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು.
0:49 ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು.
0:57 ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”.
1:01 ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ.
1:06 ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ.
1:09 ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ.
1:14 ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ.
1:19 ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ.
1:30 ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ,
1:38 ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ.
1:46 ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ.
1:51 ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ.
1:53 ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ.
1:59 ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ.
2:03 “Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು.
2:09 ಬದಲಾವಣೆಗಳನ್ನು ಅಂಡು ಮಾಡೋಣ.
2:12 ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು.
2:20 ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ.
2:27 ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ.
2:34 ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ.
2:38 ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ.
2:43 “Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ.
2:48 ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ.
2:53 ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ.
2:57 “Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು.
3:02 ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ.
3:07 “Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ.
3:13 ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.

ಈಗ “OK" ಬಟನ್ ಕ್ಲಿಕ್ ಮಾಡಿ.

3:18 ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು.
3:23 ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ.
3:32 ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ-
3:37 ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ.
3:46 ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ.
3:55 ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ.
3:57 ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ.
4:04 ಮೌಸ್ ಬಟನ್ ನ್ನು ಬಿಡಿ.
4:06 ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ.
4:10 ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.

ಈಗ ಬದಲಾವಣೆಗಳನ್ನು ಅಂಡು ಮಾಡೋಣ.

4:17 ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು.
4:24 ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ.
4:33 ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ.
4:40 ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ.
4:46 ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.

ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ.

4:57 “Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ.
5:03 “End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ.
5:08 ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ.
5:14 ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು.
5:21 ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ.
5:32 ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ.
5:40 ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.
5:45 “Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ.
5:52 ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ.
5:58 ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು.
6:07 ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ.
6:14 ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ.
6:21 ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು.
6:27 ಈಗ “Select”ನ್ನು ಒತ್ತಿರಿ.
6:30 ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ.
6:40 ಮತ್ತು “OK” ಬಟನ್ ನ್ನು ಒತ್ತಿರಿ.
6:42 ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ.
6:45 ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ.
6:49 ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ.
6:57 ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ.
7:02 ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು.
7:09 ಬದಲಾವಣೆಗಳನ್ನು ಅಂಡು ಮಾಡೋಣ.
7:12 ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ.
7:18 ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ.
7:25 ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು.
7:30 ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ.
7:35 ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು.
7:37 ಬದಲಾವಣೆಗಳನ್ನು ಅಂಡು ಮಾಡೋಣ.
7:39 ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ.
7:46 ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.

ಈಗ ಬದಲಾವಣೆಗಳನ್ನು ಅಂಡು ಮಾಡೋಣ.

7:52 ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ.
8:01 ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು.
8:07 ಬದಲಾವಣೆಗಳನ್ನು ಅಂಡು ಮಾಡೋಣ.
8:09 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
8:15 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು:
8:17 ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು.
8:20 ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು.
8:23 ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು.
8:29 ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
8:32 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
8:35 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
8:40 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
8:49 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
8:55 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.

ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.

9:07 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
9:18 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
9:23 ಧನ್ಯವಾದಗಳು.

Contributors and Content Editors

PoojaMoolya, Vasudeva ahitanal