LibreOffice-Suite-Calc/C2/Working-with-data/Kannada
From Script | Spoken-Tutorial
Revision as of 15:42, 18 February 2014 by Vasudeva ahitanal (Talk | contribs)
TIME | NARRATION | |||
0:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | |||
0:06 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ. | |||
0:09 | ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು. | |||
0:13 | ಶೀಟ್ ಗಳ ನಡುವೆ ವಿಷಯ ಹಂಚಿಕೆ. | |||
0:16 | ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ. | |||
0:23 | ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ | |||
0:32 | ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ. | |||
0:42 | ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು. | |||
0:49 | ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು. | |||
0:57 | ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”. | |||
1:01 | ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ. | |||
1:06 | ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ. | |||
1:09 | ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ. | |||
1:14 | ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ. | |||
1:19 | ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ. | |||
1:30 | ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ, | |||
1:38 | ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ. | |||
1:46 | ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ. | |||
1:51 | ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ. | |||
1:53 | ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ. | |||
1:59 | ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ. | |||
2:03 | “Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು. | |||
2:09 | ಬದಲಾವಣೆಗಳನ್ನು ಅಂಡು ಮಾಡೋಣ. | |||
2:12 | ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು. | |||
2:20 | ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ. | |||
2:27 | ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ. | |||
2:34 | ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ. | |||
2:38 | ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ. | |||
2:43 | “Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ. | |||
2:48 | ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ. | |||
2:53 | ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ. | |||
2:57 | “Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು. | |||
3:02 | ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ. | |||
3:07 | “Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ. | |||
3:13 | ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.
ಈಗ “OK" ಬಟನ್ ಕ್ಲಿಕ್ ಮಾಡಿ. | |||
3:18 | ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು. | |||
3:23 | ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ. | 3:32 | ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ- | |
3:37 | ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ. | |||
3:46 | ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ. | |||
3:55 | ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ. | |||
3:57 | ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ. | |||
4:04 | ಮೌಸ್ ಬಟನ್ ನ್ನು ಬಿಡಿ. | |||
4:06 | ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ. | |||
4:10 | ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.
ಈಗ ಬದಲಾವಣೆಗಳನ್ನು ಅಂಡು ಮಾಡೋಣ. | |||
4:17 | ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು. | |||
4:24 | To demonstrate this, we will first delete the serial numbers already entered in the cells “A1” to “A7” | ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ. | ||
4:33 | ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ. | |||
4:40 | ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ. | |||
4:46 | ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.
ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ. | |||
4:57 | “Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ. | |||
5:03 | “End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ. | |||
5:08 | ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ. | |||
5:14 | ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು. | |||
5:21 | ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ. | |||
5:32 | ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ. | |||
5:40 | ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. | |||
5:45 | “Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ. | |||
5:52 | ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ. | |||
5:58 | ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು. | |||
6:07 | ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ. | |||
6:14 | ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ. | |||
6:21 | ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು. | |||
6:27 | ಈಗ “Select”ನ್ನು ಒತ್ತಿರಿ. | |||
6:30 | ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ. | |||
6:40 | ಮತ್ತು “OK” ಬಟನ್ ನ್ನು ಒತ್ತಿರಿ. | |||
6:42 | ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ. | |||
6:45 | ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ. | |||
6:49 | ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ. | |||
6:57 | ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ. | |||
7:02 | ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು. | |||
7:09 | ಬದಲಾವಣೆಗಳನ್ನು ಅಂಡು ಮಾಡೋಣ. | |||
7:12 | ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ. | |||
7:18 | ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ. | |||
7:25 | ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು. | |||
7:30 | ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ. | |||
7:35 | ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು. | |||
7:37 | ಬದಲಾವಣೆಗಳನ್ನು ಅಂಡು ಮಾಡೋಣ. | |||
7:39 | ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ. | |||
7:46 | ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.
ಈಗ ಬದಲಾವಣೆಗಳನ್ನು ಅಂಡು ಮಾಡೋಣ. | |||
7:52 | ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ. | |||
8:01 | ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು. | |||
8:07 | ಬದಲಾವಣೆಗಳನ್ನು ಅಂಡು ಮಾಡೋಣ. | |||
8:09 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. | |||
8:15 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು: | |||
8:17 | ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು. | |||
8:20 | ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು. | |||
8:23 | ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು. | |||
8:29 | ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | |||
8:32 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |||
8:35 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | 8:40 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |
8:49 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |||
8:55 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |||
9:07 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | |||
9:18 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. | |||
9:23 | ಧನ್ಯವಾದಗಳು. |