KTouch/S1/Getting-Started-with-Ktouch/Kannada
From Script | Spoken-Tutorial
Revision as of 11:28, 29 January 2014 by Vasudeva ahitanal (Talk | contribs)
Time | Narration |
---|---|
00.00 | ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00.04 | ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ. |
00.10 | ನೀವು ಇಲ್ಲಿ, |
00.11 | ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು. |
00.18 | ನೀವು, |
00.20 | ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು. |
00.24 | ಕೆಟಚ್ ಎಂದರೇನು? |
00.27 | ಕೆಟಚ್ ಎನ್ನುವುದೊಂದು ಟೈಪಿಂಗ್ ಬೊಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ. |
00.33 | ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು. |
00.36 | ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು. |
00.43 | ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ. |
00.50 | ಇಲ್ಲಿ ನಾವು ಉಬಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ. |
00.59 | ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು. |
01.03 | ಉಬಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ. |
01.11 | ಈಗ ಕೆಟಚ್ ಒಪನ್ ಮಾಡೋಣ. |
01.13 | ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ. |
01.21 | ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ. |
01.24 | ಅಲ್ಲಿ KTouch ಎಂದು ಟೈಪ್ ಮಾಡಿ. |
01.28 | ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ. |
01.34 | ಕೆಟಚ್ ನ ವಿಂಡೋಸ್ ಕಾಣುತ್ತದೆ. |
01.36 | ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು. |
01.41 | ಟರ್ಮಿನಲ್ಲನ್ನು ಒಪನ್ ಮಾಡಲು CTRL, ALT ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ. |
01.47 | ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ. |
01.55 | ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ. |
01.59 | ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ. |
02.06 | ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ. |
02.11 | ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ. |
02.14 | ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ. |
02.19 | Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ. |
02.27 | Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02.32 | Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02.39 | New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02.47 | Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02.51 | Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ. |
02.58 | ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ. |
03.02 | ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು backspace ಇವೆ. |
03.09 | ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ. |
03.13 | ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ. |
03.20 | ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ. |
03.28 | ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ. |
03.33 | ದೊಡ್ಡ ಅಕ್ಷರಗಳಿಗಾಗಿ caps lock ಕೀಯನ್ನು ಒತ್ತಿ. |
03.37 | ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು shift ಕೀಗಳು ಇವೆ. |
03.45 | ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು shift ನ ಜೊತೆಗೆ ಒತ್ತಿ. |
03.52 | ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ. |
03.59 | ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.
ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ. |
04.11 | ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ. |
04.20 | ಈಗ ನಾವು KTouch ನ ಕೀಬೋರ್ಡ್, laptop ಕೀಬೋರ್ಡ್ ಹಾಗೂ desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ. |
04.29 | ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ desktops ಹಾಗೂ laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು. |
04.36 | ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ. |
04.41 | ಈ ಸ್ಲೈಡನ್ನು ನೋಡಿ. |
04.42 | ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ. |
04.46 | ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ -
ಕಿರುಬೆರಳು (Little finger), |
04.51 | ಅನಾಮಿಕ ಬೆರಳು (Ring finger),
ಮಧ್ಯದ ಬೆರಳು (Middle finger), |
04.54 | ತೋರ್ಬೆರಳು (Index finger) ಹಾಗೂ
ಹೆಬ್ಬೆರಳು |
04.59 | ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. |
05.03 | ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05.07 | ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ, |
05.10 | ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ, |
05.13 | ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು. |
05.17 | ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ. |
05.20 | ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05.25 | ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ, |
05.28 | ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ, |
05.30 | ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು. |
05.34 | ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ. |
05.37 | ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ. |
05.44 | ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ. |
05.51 | ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ. |
05.57 | ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು. |
06.02 | ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ. |
06.07 | ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ. |
06.12 | Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
06.17 | ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -
Root->usr->share->kde4->apps->Ktouch |
06.31 | english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ. |
06.36 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ. |
06.41 | ಈಗ ಟೈಪಿಂಗ್ ಅನ್ನು ಆರಂಭಿಸೋಣ. |
06.43 | ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ. |
06.49 | ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ. |
06.55 | cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ. |
06.58 | ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.
|
07.09 | ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ. |
07.14 | ಈಗ ವೇಗಸ್ಥಾನವನ್ನು ಗಮನಿಸಿ. |
07.16 | ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. |
07.22 | ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ. |
07.25 | ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ. |
07.31 | Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು. |
07.34 | ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು. |
07.40 | ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ. |
07.56 | ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ. |
08.02 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ. |
08.07 | Student’s line ಎನ್ನುವುದು ಖಾಲಿಯಾಗಿದೆ. |
08.11 | ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ. |
08.14 | Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ. |
08.23 | ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ. |
08.26 | ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ. |
08.31 | ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು. |
08.37 | ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ. |
08.40 | Start New Session ಎಂಬಲ್ಲಿ ಕ್ಲಿಕ್ ಮಾಡಿ. |
08.42 | Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ. |
08.50 | ನೀವೇನು ನೋಡುತ್ತಿರುವಿರಿ?
|
08.52 | ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ. |
08.55 | Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ. |
09.00 | ಈಗ ಟೈಪಿಂಗ್ ಆರಂಭಿಸೋಣ. |
09.05 | ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು. |
09.09 | ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ? |
09.12 | pause session ಎಂಬಲ್ಲಿ ಕ್ಲಿಕ್ ಮಾಡಿ. |
09.14 | ಈಗ ನೋಡಿ, ವೇಗವು ಕಡಿಮೆಯಾಗಿಲ್ಲ. |
09.17 | ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ. |
09.23 | ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ. |
09.39 | ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ. |
09.46 | ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ. |
09.50 | ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು. |
09.59 | Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ. |
10.04 | ಇಲ್ಲಿ ನಿಮಗೊಂದು ಕೆಲಸವಿದೆ. |
10.06 | ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ. |
10.13 | ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ. |
10.18 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
10.24 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10.28 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10.37 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10.43 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
10.47 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10.55 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
11.06 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.
ಧನ್ಯವಾದಗಳು. |