Health-and-Nutrition/C2/Feeding-expressed-breastmilk-to-babies/Kannada

From Script | Spoken-Tutorial
Revision as of 15:51, 27 August 2020 by Debosmita (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Feeding expressed breastmilk to babies ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಸಂಗ್ರಹಿಸಿದ ಎದೆಹಾಲನ್ನು ಮಗುವಿಗೆ ಕುಡಿಸಲು ಸಿದ್ಧಪಡಿಸುವುದು

00:14 ಮತ್ತು ಅದನ್ನು ಹೇಗೆ ಕುಡಿಸುವುದು ಇವುಗಳ ಬಗ್ಗೆ ಕಲಿಯುವೆವು.
00:19 ಎದೆಹಾಲನ್ನು ಹೊರಗೆ ತೆಗೆಯುವುದರಿಂದ ಮಗು ಮತ್ತು ತಾಯಿಗೆ ಅನೇಕ ಪ್ರಯೋಜನಗಳಿವೆ.
00:26 ಎದೆಹಾಲನ್ನು ಹೊರತೆಗೆದು ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದರ ಬಗ್ಗೆ ಬೇರೆ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗಿದೆ.
00:34 ಈಗ, ಸಂಗ್ರಹಿಸಿದ ಎದೆಹಾಲನ್ನು ಮಗುವಿಗೆ ಕುಡಿಸಲು ಹೇಗೆ ಅಣಿಗೊಳಿಸಬೇಕೆಂದು ಕಲಿಯೋಣ.
00:42 ಎದೆಹಾಲನ್ನು ನಿರ್ವಹಿಸುವ ಮೊದಲು, ಪೋಷಕರು ಸಾಬೂನು ಮತ್ತು ನೀರಿನಿಂದ ತಮ್ಮ ಕೈಗಳನ್ನು ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು.
00:52 ನೆನಪಿಡಿ, ಎಲ್ಲಕ್ಕಿಂತ ಮೊದಲು ಸಂಗ್ರಹಿಸಿದ ಎದೆಹಾಲನ್ನು ಮೊದಲು ಬಳಸಬೇಕು.
00:59 ಘನೀಕರಿಸಿದ ಎದೆಹಾಲನ್ನು ಬಳಸುವಾಗ, ಅದನ್ನು ರಾತ್ರಿಯಿಡೀ ಫ್ರಿಜ್‌ನ ಎಲ್ಲಕ್ಕಿಂತ ಕೆಳಗಿನ ಶೆಲ್ಫ್ ನಲ್ಲಿರಿಸಿ ಡಿಫ್ರಾಸ್ಟ್ ಮಾಡುವುದು (ಘನೀಕರಿಸಿದ್ದನ್ನು ಮರಳಿ ದ್ರವರೂಪಕ್ಕೆ ತರುವುದು ಅಥವಾ ಕರಗಿಸುವುದು) ಒಳ್ಳೆಯದು.
01:08 ಮತ್ತು, ಈ ಕರಗಿಸಿದ ಹಾಲನ್ನು ಮುಂದಿನ 24 ಗಂಟೆಗಳ ಒಳಗೆ ಬಳಸಬೇಕು.
01:15 ಆದರೆ ಘನೀಕರಿಸಿದ ಎದೆಹಾಲು ತ್ವರಿತವಾಗಿ ಅಗತ್ಯವಿದ್ದರೆ, ಮೊದಲು ಅದನ್ನು ಫ್ರಿಜ್‌ನ ಹೊರಗೆ ಒಂದು ತಣ್ಣೀರಿನ ಪಾತ್ರೆಯಲ್ಲಿ ಇರಿಸಿ.
01:25 ಆನಂತರ ಅದನ್ನು ಬೆಚ್ಚಗಿನ ನೀರಿನ ಪಾತ್ರೆಯಲ್ಲಿ ಇರಿಸಿ ಡಿಫ್ರಾಸ್ಟ್ ಮಾಡಿ.
01:31 ಬೆಚ್ಚಗಿನ ನೀರಿನಲ್ಲಿಟ್ಟು ಡಿಫ್ರಾಸ್ಟ್ ಮಾಡುವಾಗ, ಎದೆಹಾಲು ಇರುವ ಪಾತ್ರೆಯನ್ನು ಒಮ್ಮೊಮ್ಮೆ ನಿಧಾನವಾಗಿ ಅಲ್ಲಾಡಿಸಿ.
01:38 ಅದನ್ನು ತೀವ್ರವಾಗಿ ಮತ್ತು ನಿರಂತರವಾಗಿ ಅಲ್ಲಾಡಿಸಬೇಡಿ.
01:42 ಬಳಸುವ ಮುನ್ನ, ಎದೆಹಾಲು ಇರುವ ಪಾತ್ರೆಯ ಹೊರಭಾಗವನ್ನು ಶುಚಿಯಾದ ಬಟ್ಟೆಯಿಂದ ಒಣಗಿಸಿ.
01:48 ಈ ಕರಗಿಸಿದ ಎದೆಹಾಲನ್ನು 2 ಗಂಟೆಗಳ ಒಳಗೆ ಬಳಸಿ ಮತ್ತು ಬಳಕೆಯಾಗದ ಹಾಲನ್ನು ಎಸೆದುಬಿಡಿ.
01:56 ಕರಗಿಸಿದ ಎದೆಹಾಲು, ತಾಜಾ ಎದೆಹಾಲಿಗಿಂತ ಭಿನ್ನವಾದ ವಾಸನೆ ಮತ್ತು ರುಚಿಯನ್ನು ಹೊಂದಿರಲು ಸಾಧ್ಯವಿದೆ.
02:03 ಮಗು ಅದನ್ನು ಕುಡಿಯಲು ಸಮ್ಮತಿಸಿದರೆ ಏನೂ ಸಮಸ್ಯೆಯಿಲ್ಲ.
02:08 ಮಗುವಿಗೆ ಈ ಎದೆಹಾಲನ್ನು ಕುಡಿಸುವ ಮೊದಲು, ಪೋಷಕಳು ಯಾವಾಗಲೂ ಅದರ ವಾಸನೆಯನ್ನು ನೋಡಬೇಕು.
02:16 ಹಾಲಿಗೆ ಹುಳಿ ವಾಸನೆ ಇದ್ದರೆ ಅದನ್ನು ಬಳಸಬಾರದು.
02:20 ದಯವಿಟ್ಟು ನೆನಪಿಡಿ- ಎದೆಹಾಲನ್ನು ಸಂಗ್ರಹಿಸಿದಾಗ, ಹಾಲಿನಿಂದ ಕೆನೆ ಬೇರೆಯಾಗಿ ಮೇಲಕ್ಕೆ ಬರುತ್ತದೆ.
02:28 ಇದು ಸಹಜವಾಗಿದೆ. ಬಳಸುವ ಮೊದಲು ಕೆನೆಯನ್ನು ಮತ್ತೆ ಹಾಲಿಗೆ ಬೆರೆಸಲು ನಿಧಾನವಾಗಿ ಅಲ್ಲಾಡಿಸಿ.
02:36 ಮಗುವಿಗೆ ಕುಡಿಸುವ ಮೊದಲು ಎದೆಹಾಲನ್ನು ಬೆಚ್ಚಗಾಗಿಸಲು, ಎದೆಹಾಲು ಇರುವ ಕಂಟೇನರ್ ಅನ್ನು 20 ರಿಂದ 30 ನಿಮಿಷಗಳ ಕಾಲ ಬೆಚ್ಚಗಿನ ನೀರಿರುವ ಪಾತ್ರೆಯಲ್ಲಿ ಇರಿಸಿ.
02:47 ಮಣಿಕಟ್ಟಿನ ಮೇಲೆ ಸ್ವಲ್ಪ ಹಾಲನ್ನು ಹಾಕಿ ಅದು ಎಷ್ಟು ಬೆಚ್ಚಗಾಗಿದೆ ಎಂಬುದನ್ನು ಪರೀಕ್ಷಿಸಿ. ಅದು ಬೆಚ್ಚಗಾಗಿದ್ದರೆ ಸಾಕು.
02:56 ಎದೆಹಾಲನ್ನು ಬೆಚ್ಚಗಾಗಿಸಲು ಬಿಸಿನೀರನ್ನು ಬಳಸಬೇಡಿ. ಸಂಗ್ರಹಿಸಿದ ಎದೆ ಹಾಲನ್ನು ಫ್ರಿಜ್‌ನಿಂದ ತೆಗೆದು ಹಾಗೇ ಬಳಸಲು ಪ್ರಯತ್ನಿಸಿ.
03:05 ಅತಿಯಾಗಿ ಬಿಸಿಯಾಗುವ ಅಥವಾ ಸುಟ್ಟುಹೋಗುವುದನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ.
03:12 ಎದೆಹಾಲನ್ನು ನೇರವಾಗಿ ಒಲೆಯ ಮೇಲೆ ಅಥವಾ ಮೈಕ್ರೊವೇವ್‌ನಲ್ಲಿ ಇರಿಸಿ ಬಿಸಿ ಮಾಡಬೇಡಿ.
03:19 ನೇರವಾದ ಶಾಖವು ಎದೆಹಾಲಿನಲ್ಲಿರುವ ಅನೇಕ ಸೋಂಕು-ನಿವಾರಕಗಳನ್ನು ನಾಶಪಡಿಸುತ್ತದೆ.
03:27 ಎದೆಹಾಲು ಸಿದ್ಧವಾದಾಗ ಮಗುವಿಗೆ ಅದನ್ನು ಕುಡಿಸಿ.
03:32 ಇದಕ್ಕಾಗಿ ಪಲಡೈ, ಸಣ್ಣ ಕಪ್, ಚಮಚ ಅಥವಾ ನಿಫ್ಟಿ ಕಪ್ ಇವುಗಳನ್ನು ಬಳಸಬಹುದು.
03:42 ಇವುಗಳಲ್ಲಿ, ಮಗುವಿಗೆ ಹಾಲುಣಿಸಲು ಚಮಚ ಅಥವಾ ಕಪ್ ಅನ್ನು ಬಳಸುವುದು ಯೋಗ್ಯವಾಗಿದೆ.
03:49 ಮೊದಲು, ಪೋಷಕಳು ಆಯ್ದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು. ನಂತರ ಅದನ್ನು ಗಾಳಿಯಲ್ಲಿ ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಚೆನ್ನಾಗಿ ಒಣಗಿಸಬೇಕು.
04:02 ನಂತರ, ಪೋಷಕರು ತಮ್ಮ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು.
04:10 ಆಯ್ದ ಪಾತ್ರೆಯಲ್ಲಿ, ಅರ್ಧದಷ್ಟು ಅಥವಾ 2/3 ನಷ್ಟು (two 3rd) ಎದೆಹಾಲನ್ನು ತುಂಬಿಸಬೇಕು.
04:16 ನಂತರ, ಅವರು ಮಗುವನ್ನು ತಮ್ಮ ತೊಡೆಯ ಮೇಲೆ ಹೆಚ್ಚು ಕಡಿಮೆ ನಿಂತಿರುವ ಹಾಗೆ ಹಿಡಿದುಕೊಳ್ಳಬೇಕು.
04:23 ಅವರ ಕೈ, ಮಗುವಿನ ತಲೆ ಮತ್ತು ಕುತ್ತಿಗೆಯನ್ನು ಆಧರಿಸಿ ಹಿಡಿದಿರಬೇಕು.
04:28 ಮಗುವಿಗೆ ಹಾಲುಣಿಸಲು ಪಲಡೈ ಅನ್ನು ಬಳಸುತ್ತಿದ್ದರೆ, ಪಲಡೈನ ತುದಿಯನ್ನು ಮಗುವಿನ ಬಾಯಿಯ ಮೂಲೆಯೊಳಗೆ ಇಡಬೇಕು.
04:39 ಇದನ್ನು ಮಗುವಿನ ತುಟಿಗಳ ನಡುವೆ ಹಗುರವಾಗಿ ಹಿಡಿದಿರಬೇಕು.
04:45 ಪಲಡೈನ ತುದಿ, ಮಗುವಿನ ಮೇಲಿನ ತುಟಿಯನ್ನು ಲಘುವಾಗಿ ಸ್ಪರ್ಶಿಸಬೇಕು.
04:50 ಈ ಸ್ಥಾನದಲ್ಲಿ, ಹಾಲು ಪಲಡೈನ ಕೊಕ್ಕಿನ ಅಂಚಿನಲ್ಲಿರಬೇಕು.
04:58 ಮಗು ಹಾಲನ್ನು ಹೀರುತ್ತಿದ್ದಂತೆ, ಪೋಷಕಳು ಹಾಲನ್ನು ಅಂಚಿನಲ್ಲಿ ಇರಿಸಲು, ಪಲಡೈ ಅನ್ನು ಸ್ವಲ್ಪ ಓರೆಯಾಗಿಸಬೇಕು.
05:07 ಮಗುವಿಗೆ ಹಾಲು ಕುಡಿಸಲು ಪೋಷಕಳು ಸಣ್ಣ ಕಪ್ ಅನ್ನು ಬಳಸುತ್ತಿದ್ದರೆ, ಅವಳು ಮಗುವಿನ ತುಟಿಗಳ ನಡುವೆ ಕಪ್ ಅನ್ನು ಲಘುವಾಗಿ ಹಿಡಿದಿರಬೇಕು.
05:17 ಕಪ್ ನ ಅಂಚು ಮಗುವಿನ ಮೇಲಿನ ತುಟಿಯನ್ನು ಹಗುರವಾಗಿ ಸ್ಪರ್ಶಿಸಬೇಕು.
05:22 ಹಾಲು ಕಪ್ ನ ಮೇಲ್ತುದಿಯನ್ನು ಮುಟ್ಟುವ ತನಕ ಅವರು ಕಪ್ ಅನ್ನು ಸ್ವಲ್ಪ ಓರೆಯಾಗಿಸಬೇಕು.
05:28 ಇದರಿಂದ ಮಗುವಿಗೆ ಕಪ್‌ನ ಅಂಚಿನಿಂದ ಹಾಲನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
05:33 ಮಗುವಿಗೆ ಹಾಲು ಕುಡಿಸಲು ಪೋಷಕರು ಚಮಚವನ್ನು ಬಳಸುತ್ತಿದ್ದರೆ, ಅವರು ಚಮಚವನ್ನು ಮಗುವಿನ ತುಟಿಗಳ ನಡುವೆ ಹಿಡಿಯಬೇಕು.
05:42 ಚಮಚದ ಅಂಚು ಮಗುವಿನ ಮೇಲಿನ ತುಟಿಯನ್ನು ಹಗುರವಾಗಿ ಸ್ಪರ್ಶಿಸಬೇಕು.
05:47 ನಂತರ, ಹಾಲು ಚಮಚದ ತುದಿಯಲ್ಲಿ ಬರುವ ತನಕ ಅವರು ಚಮಚವನ್ನು ಸ್ವಲ್ಪ ಓರೆಯಾಗಿಸಬೇಕು.
05:54 ಹುಟ್ಟಿದ ನಂತರ ಮೊದಲ ಕೆಲವು ದಿನಗಳವರೆಗೆ ಚಮಚದಿಂದ ಹಾಲು ಕುಡಿಸುವುದು ಒಳ್ಳೆಯದು.
05:59 ಏಕೆಂದರೆ, ಈ ದಿನಗಳಲ್ಲಿ ಹಾಲು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬೇಕಾಗುತ್ತದೆ.
06:07 ಮಗುವಿಗೆ ಹಾಲು ಕುಡಿಸಲು ಪೋಷಕರು ನಿಫ್ಟಿ ಕಪ್ ಅನ್ನು ಬಳಸುತ್ತಿದ್ದರೆ, ಅವರು ನಿಫ್ಟಿ ಕಪ್‌ನ ಸಣ್ಣ reservoir ಅನ್ನು ಮಗುವಿನ ಬಾಯಿಯೊಳಗೆ ಇಡಬೇಕು.
06:19 ಮಗು ಹಾಲನ್ನು ಕುಡಿಯುತ್ತಿದ್ದಂತೆ, ಕಪ್ ಅನ್ನು ಸ್ವಲ್ಪ ಮೇಲಕ್ಕೆ ಬಾಗಿಸಬೇಕು. ಹೀಗೆ ಮಾಡಿದಾಗ, reservoir ಖಾಲಿಯಾದ ಹಾಗೆಲ್ಲ ಹಾಲು ಅಲ್ಲಿಗೆ ಬರುತ್ತಿರುತ್ತದೆ.
06:31 ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸುವಾಗ, ಮಗುವಿನ ಬಾಯಿಯಲ್ಲಿ ಹಾಲನ್ನು ಎಂದಿಗೂ ಸುರಿಯಬೇಡಿ.
06:38 ಇದು ಮಗುವಿಗೆ ಉಸಿರುಗಟ್ಟುವಂತೆ ಮಾಡಬಹುದು.
06:40 ಬದಲಾಗಿ, ಹಾಲನ್ನು ಅಂಚಿನ ಹತ್ತಿರ ಇರಿಸಿ ಮತ್ತು ಕುಡಿಸುವ ಪೂರ್ಣ ಅವಧಿಯಲ್ಲಿ ಅದನ್ನು ಹಾಗೇ ಇಡಿ.
06:47 ಮಗುವು ಪೂರ್ತಿ ಎಚ್ಚರವಾಗಿದೆ ಮತ್ತು ಹಾಲು ಕುಡಿಯಲು ಆಸಕ್ತಿ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.
06:54 ಅಗತ್ಯವಿದ್ದರೆ, ಮಗು ಹಾಲು ಕುಡಿಸುವವರ ಕೈಯಿಂದ ಕಪ್ ಅನ್ನು ನೂಕದಂತೆ ಅವಳನ್ನು ಸುತ್ತಿಡಿ.
07:03 ಯಾವಾಗಲೂ ಮಗುವಿಗೆ ತನ್ನದೇ ಆದ ಗತಿಯಲ್ಲಿ ಹಾಲು ಕುಡಿಯಲು ಬಿಡಿ.
07:08 ಮಗು ಸಾಕಷ್ಟು ಹಾಲು ಕುಡಿದಿದೆ ಎಂದು ತೋರಿಸುವ ಚಿಹ್ನೆಗಳಾದ -
07:13 ತನ್ನ ಕೈಗಳನ್ನು ಎತ್ತಿ ಹಿಡಿಯುವುದು,
07:16 ತೂಕಡಿಸುವುದು ಅಥವಾ ಬಾಯಿಯನ್ನು ಮುಚ್ಚುವುದು ಇವುಗಳನ್ನು ಗಮನಿಸುತ್ತಿರಿ.
07:21 ನೆನಪಿಡಿ, ಮಗುವಿನ ಕೆಳತುಟಿಯ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ.
07:28 ಯಾವಾಗಲೂ ಕಪ್ ನ ಅಂಚು ಮಗುವಿನ ಮೇಲಿನ ತುಟಿಯನ್ನು ಲಘುವಾಗಿ ಸ್ಪರ್ಶಿಸುವಂತೆ ಇರಬೇಕು.
07:34 ಮಗುವಿನ ಬಾಯಿಯಲ್ಲಿ ಕಪ್, ಪಲಡೈ ಅಥವಾ ಚಮಚವನ್ನು ಬಹಳ ಒಳಗೆ ಇಡಬೇಡಿ.
07:41 ಅಡ್ಡ ಮಲಗಿರುವಾಗ ಮಗುವಿಗೆ ಎಂದಿಗೂ ಹಾಲು ಕುಡಿಸಬೇಡಿ.
07:45 ಹೊರತೆಗೆದ ಎದೆಹಾಲನ್ನು ಮಗುವಿಗೆ ಕುಡಿಸಲು ಫೀಡಿಂಗ್ ಬಾಟಲ್ ಅನ್ನು ಬಳಸಬೇಡಿ.
07:51 ಮಗುವಿಗೆ ಹಾಲು ಕುಡಿಸಿದ ನಂತರ ಕಪ್, ಪಲಡೈ ಅಥವಾ ಚಮಚವನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ಮತ್ತು, ಅದು ಪೂರ್ತಿಯಾಗಿ ಒಣಗಲು ಬಿಡಿ.
08:04 ಹೊರತೆಗೆದ ಎದೆಹಾಲನ್ನು ಕೆಲವರು ಕುಡಿಸಿದಾಗ, ಆರಂಭದಲ್ಲಿ ಕೆಲವು ಶಿಶುಗಳು ಕುಡಿಯಲು ಇಷ್ಟಪಡುವುದಿಲ್ಲ.
08:12 ಅದನ್ನೇ ಬೇರೊಬ್ಬರು ಕುಡಿಸಿದಾಗ ಅವರು ಈ ಹಾಲನ್ನು ಕುಡಿಯಬಹುದು.
08:17 ಹೊರತೆಗೆದ ಹಾಲನ್ನು ಕುಡಿಯಲು ಮಗು ನಿರಾಕರಿಸಿದರೆ, ಚಿಂತಿಸದಿರಿ.
08:22 ತಾಯಿಯು ಕೆಲಸದಿಂದ ಹಿಂದಿರುಗಿದ ನಂತರ, ಮಗು ಹೆಚ್ಚು ಸಲ ಅಥವಾ ಹೆಚ್ಚು ಸಮಯದವರೆಗೆ ಹಾಲು ಕುಡಿಯುತ್ತದೆ.
08:32 ನೆನಪಿಡಿ: ಕೈಗಳು ಮತ್ತು ಪಾತ್ರೆಗಳನ್ನು ಶುಚಿಯಾಗಿಡುವುದು, ಮಗುವಿಗೆ ಬೇಕಾದಾಗ ಹಾಲು ಕುಡಿಸುವುದು ಮತ್ತು ಸರಿಯಾಗಿ ಸಂಗ್ರಹಿಸುವುದರ ಮೂಲಕ ಎದೆಹಾಲನ್ನು ಸುರಕ್ಷಿತವಾಗಿರಿಸಿ.
08:44 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:47 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14