STEMI-2017/C2/Importance-of-Fibrinolytic-Checklist/Kannada
From Script | Spoken-Tutorial
Revision as of 16:45, 7 August 2020 by PoojaMoolya (Talk | contribs)
Time | Narration
|
00:01 | ನಮಸ್ತೇ, ‘Importance of Fibrinolytic Checklist.' ಟ್ಯುಟೋರಿಯಲ್’ಗೆ ಸ್ವಾಗತ |
00:07 | ಈ ಟ್ಯುಟೋರಿಯಲ್’ನಲ್ಲಿ ನಾವು Fibrinolytic Checklistನಲ್ಲಿರುವ ಹಲವು ಮಾನದಂಡಗಳನ್ನು ಕಲಿಯಲಿದ್ದೇವೆ. |
00:15 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಬಳಿ ಒಂದು STEMI ತಂತ್ರಾಂಶವಿರುವ android ಟ್ಯಾಬ್ಲೆಟ್ ಮತ್ತು ಸಕ್ರಿಯ ಅಂತರ್ಜಾಲ ಸಂಪರ್ಕ ಇರಬೇಕು |
00:25 | STEMI ಯಂತ್ರ ಹಾಗೂ STEMI ತಂತ್ರಾಂಶದ ಕಾರ್ಯದ ಬಗ್ಗೆ ತಿಳಿದಿರಬೇಕು. |
00:31 | ನಿಮಗೆ ತಿಳಿದಿಲ್ಲವಾದರೆ, ದಯವಿಟ್ಟು STEMI ವಿಷಯದ ಟ್ಯುಟೋರಿಯಲ್’ಗಳನ್ನೂ ವೀಕ್ಷಿಸಿ. |
00:37 | ಇದು ನಮ್ಮ STEMI Homepage |
00:39 | ’New Patient’ ಎಂಬುದನ್ನು ಆಯ್ಕೆ ಮಾಡೋಣ. |
00:42 | ”New patient” ಆಯ್ಕೆಯಡಿ “patient details(ರೋಗಿಯ ವಿವರಗಳು)” ಎಂಬ ಉಪ-ಆಯ್ಕೆ ಕಾಣುವುದು. |
00:47 | Fibrinolytic Checklist. ಎಂಬುದನ್ನು ಆಯ್ಕೆ ಮಾಡಿರಿ.
Fibrinolytic Checklist. ಎಂಬುದು “ರೋಗಿಯ ವಿವರಗಳು” ಆಯ್ಕೆಯ ಒಳಗೆ “basic details” ಆಯ್ಕೆಯ ನಂತರವಿದೆ. |
00:59 | fibrinolytic checklist ಆಯ್ಕೆಯಡಿ ರೋಗಿಯು ಮಹಿಳೆಯಾಗಿದ್ದರೆ 13 ಅಂಶಗಳನ್ನು ತೋರಿಸಲಾಗುತ್ತದೆ |
01:07 | ರೋಗಿಯು ಪುರುಷನಾಗಿದ್ದರೆ 12 ಅಂಶಗಳನ್ನು ತೋರಿಸಲಾಗುತ್ತದೆ. |
01:12 | ಇವು thrombolysisನ ಸಂಬಂಧಿ ಅಥವಾ ಸಂಪೂರ್ಣ ಚಿಹ್ನೆಗಳಾಗಿವೆ |
01:19 | ಆ 13 ಅಂಶಗಳಲ್ಲಿ ಯಾವುದಾದರೂ ಹೌದು ಎಂದಾಗಿದಲ್ಲಿ, ಹಾಗೂ hub/spoke ಆಸ್ಪತ್ರೆ ಹತ್ತಿರವಿದ್ದಲ್ಲಿ, ರೋಗಿಯನ್ನು hub ಆಸ್ಪತ್ರೆಗೆ ಒಯ್ಯುವುದು ಒಳ್ಳೆಯದು |
01:33 | 13 ಅಂಶಗಳನ್ನು ಗಮನಿಸೋಣ. |
01:36 | 1. systolic ಅಥವಾ ಸಂಕೋಚನದ ರಕ್ತದೊತ್ತಡ 180 mmHg ಗಿಂತ ಜಾಸ್ತಿ ಇದೆ : ರಕ್ತದೊತ್ತಡ ಪರಿಶೀಲಿಸಿರಿ |
01:43 | 2.diastolic ಅಥವಾ ವ್ಯಾಕೋಚನದ ರಕ್ತದೊತ್ತಡ 110 mmHg ಗಿಂತ ಜಾಸ್ತಿ ಇದೆ : ರಕ್ತದೊತ್ತಡ ಪರಿಶೀಲಿಸಿರಿ |
01:51 | 3. ಬಲಗೈ ಮತ್ತು ಎಡಗೈ ನಡುವೆ ಸಂಕೋಚನದ ರಕ್ತದೊತ್ತಡ 15mmHgಗಿಂತ ಜಾಸ್ತಿ ಇದೆ. ಇದನ್ನು ಆಂಬುಲೆನ್ಸ್’ನಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ, ಆಸ್ಪತ್ರೆಯಲ್ಲಿ ಮಾತ್ರ ಅಳೆಯಬಹುದು. |
02:06 | 4. ತಲೆಗೆ/ಮುಖಕ್ಕೆ ಗಮನಾರ್ಹ ಅಪಘಾತ ಕಳೆದ ಮೂರು ತಿಂಗಳುಗಳಲ್ಲಿ. ರೋಗಿಯ ಸಂಬಂಧಿಕರಲ್ಲಿ ವಿಚಾರಿಸಿರಿ. |
02:16 | 5. ಕಳೆದ 6 ವಾರದ ಒಳಗೆ ದೊಡ್ಡಮಟ್ಟದ ಅಫಘಾತ, ಶಸ್ತ್ರಚಿಕಿತ್ಸೆ (ಕಣ್ಣನ್ನೂ ಒಳಗೊಂಡು), ಜೀರ್ಣಾಂಗದಲ್ಲಿ ರಕ್ತಸ್ರಾವ. ರೋಗಿಯ ಸಂಬಂಧಿಕರಲ್ಲಿ ವಿಚಾರಿಸಿರಿ |
02:29 | 6. ರಕ್ತಸ್ರಾವ/ರಕ್ತಮಡುಗಟ್ಟುವಿಕೆ ಸಮಸ್ಯೆಯಿತ್ತೇ ಅಥವಾ ರಕ್ತ ತೆಳುಮಾಡುವ ಔಷಧಿ ಸ್ವೀಕರಿಸುತ್ತಿದ್ದಾರೆಯೇ? ಸಂಬಂಧಿಕರಲ್ಲಿ ವಿಚಾರಿಸಿರಿ |
02:38 | 7. CPR 10 ನಿಮಿಷಕ್ಕಿಂತ ಜಾಸ್ತಿ: ಹೃದಯ ಸ್ತಂಭನದ ಸಂದರ್ಭ ರೋಗಿಗೆ ಮತ್ತೆ ಬದುಕಿಸಲು 10 ನಿಮಿಷ ಕಾಲ CPR ನೀಡಬೇಕು |
02:48 | 8. ಗರ್ಭಿಣಿ ಹೆಂಗಸು: 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಗರ್ಭ ಪರೀಕ್ಷೆಯಾಗಬೇಕು |
02:56 | 9. ಪೂರ್ತಿ ಶರೀರದ ಕಾಯಿಲೆ (ಕೊನೆಯ ಹಂತದ ಕ್ಯಾನ್ಸರ್, ಯಕೃತ್/ಮೂತ್ರಜನಕಾಂಗದ ಕಾಯಿಲೆ): ಸಂಬಂಧಿಕರಲ್ಲಿ ವಿಚಾರಿಸಿ |
03:10 | 10. ನರರೋಗದ ರೋಗಿಯಾಗಿದ್ದರೇ ಎಂದು ಸಂಬಂಧಿಕರಲ್ಲಿ ವಿಚಾರಿಸಿ |
03:20 | ಮುಂದಿನ ಮೂರು ಅಂಶಗಳು ವೈದ್ಯರಿಗೆ ಸಂಬಂಧಪಟ್ಟಿದ್ದು, ವೈದ್ಯರು ಇದ್ದರೆ ಅವರಲ್ಲಿ ವಿಚಾರಿಸಿರಿ |
03:28 | 11. ಶ್ವಾಸಕೋಶ ಸಂಬಂಧಿ ದ್ರವ (ಶ್ವಾಸಕೋಶದ ಶಬ್ದ ಸಾಮಾನ್ಯಕ್ಕಿಂತ ಜಾಸ್ತಿ) |
03:33 | 12. ಇಡೀ ದೇಹದಲ್ಲಿ ರಕ್ತಹರಿಯುವಿಕೆ ಕಡಿಮೆ ಇರುವಿದು (ತಂಪು, ತೇವ) |
03:37 | 13. ರೋಗಿಗೆ ತೀವ್ರ ಹೃದಯಾಘಾತ ಆಗಿದೆಯೇ? PCI ಅವಶ್ಯಕತೆ ಇದೆಯೇ? |
03:46 | ಸಾರಾಂಶ ತಿಳಿಯೋಣ |
03:48 | ಈ ಟ್ಯುಟೋರಿಯಲ್’ನಲ್ಲಿ ನಾವು ಕಲಿತದ್ದು
fibrinolytic checklistನ ಪ್ರಾಮುಖ್ಯತೆ fibrinolytic checklistನಲ್ಲಿರುವ ಹಲವು ಮಾನದಂಡಗಳು |
03:59 | STEMI ಇಂಡಿಯಾ
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ |
04:13 | ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ |
04:27 | ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.
ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ. |