STEMI-2017/C2/Introduction-to-Kallows-Device/Kannada
|
|
00:01 | kallows STEMI kit ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ |
00:07 | ಈ ಟ್ಯುಟೋರಿಯಲ್’ನಲ್ಲಿ ನಾವು ಕಲಿಯಲಿರುವುದು
ECG ಲೀಡ್, ರಕ್ತದೊತ್ತಡದ ಪಟ್ಟಿ, SpO2ಗಳ ಸ್ಥಾನ, ECG ತೆಗೆದುಕೊಳ್ಳುವುದು ಮತ್ತು ರಕ್ತದೊತ್ತಡ ಮತ್ತು SpO2 ಪರೀಕ್ಷಿಸುವುದು |
00:22 | ಈ ಟ್ಯುಟೋರಿಯಲ್ ಅಭ್ಯಸಿಸಲು ನಿಮ್ಮ ಬಳಿ kallows STEMI kit ಇರಬೇಕು |
00:28 | STEMI kit’ನಲ್ಲಿ
ಒಂದು Android ಟ್ಯಾಬ್, Mobmon ಯಂತ್ರ 12.0, ಬ್ಲೂಟೂತ್ ರಕ್ತದೊತ್ತಡ ಪರೀಶೀಲಕ ಯಂತ್ರ |
00:39 | ECG ಎಲೆಕ್ಟ್ರೋಡ್’ಗಳು, SpO2 ಪರೀಕ್ಷಕ, wifi ಮುದ್ರಕ, ವಿದ್ಯುತ್ ವಾಹಕ ಇವೆ |
00:48 | ಇದು Mobmon ಯಂತ್ರ, |
00:52 | ಇದನ್ನು ಚಾಲನೆಗೊಳಿಸುವ ಗುಂಡಿ ಮತ್ತು ಚಾರ್ಜ್ ಮಾಡುವ ಪೋರ್ಟ್ ಎಡಬದಿಯಲ್ಲಿವೆ |
00:58 | SpO2 ಹಾಗೂ ECG ಪೋರ್ಟ್’ಗಳು ಹಿಂದಿವೆ |
01:03 | ಈ ಕೇಬಲ್/ತಂತಿಯನ್ನು mobmon ಯಂತ್ರದ ECG ಪೋರ್ಟ್’ನೊಳಕ್ಕೆ ತೂರಿಸಿ |
01:10 | ಸಂಪರ್ಕಿಸಿದ ನಂತರ, ಸ್ಕ್ರೂ ಸಹಾಯದಿಂದ ಸಂಪರ್ಕವನ್ನು ಭದ್ರಗೊಳಿಸಿ |
01:17 | ಮುಂದೆ SpO2 ಪರೀಕ್ಷಕದ ಬಗ್ಗೆ ತಿಳಿಯೋಣ |
01:21 | ಈ ಪರೀಕ್ಷಕಕ್ಕೆ ಎರಡು ಭಾಗ. ಒಕ್ಸಿಮೆಟ್ರಿ ಸಂಪರ್ಕತಂತಿ ಮತ್ತು ಸೆನ್ಸರ್ |
01:29 | SpO2 ಪರೀಕ್ಷಕವನ್ನು ಹೇಗೆ ಜೋಡಿಸುವುದೆಂದು ತಿಳಿಯೋಣ |
01:34 | oximetry ತಂತಿಯನ್ನು mobmon ಯಂತ್ರದ SpO2 ಸಂಪರ್ಕಸೇತುವಿಗೆ ಸೇರಿಸಿರಿ |
01:41 | ಸರಿಯಾಗಿ ಸೇರಿಸಿದಾಗ ಹೀಗೆ ಕಾಣುತ್ತದೆ |
01:45 | ರೋಗಿಯ ಬೆರಳನ್ನು ಸೆನ್ಸರ್’ನ ಕೊನೆಗೆ ಚಿತ್ರದಲ್ಲಿ ಕಾಣುವಂತೆ ಸೇರಿಸಬೇಕು |
01:54 | ಸೆನ್ಸರ್’ನ ಜಾಗವನ್ನು ಆಯ್ಕೆ ಮಾಡುವಾಗ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ – ಜಾಗದಲ್ಲಿ ಅಪಧಮನಿಯ ನಾಳ, ರಕ್ತದೊತ್ತಡದ ಪಟ್ಟಿ ಅಥವಾ ರಕ್ತನಾಳ-ದ್ರಾವಣವನ್ನು ಒಳಗೆ ಕಳುಹಿಸಲು ಇರುವ ತೂತು ಇರಬಾರದು |
02:09 | oximetry ಪರೀಕ್ಷಿಸಲು ಸಾಮಾನ್ಯವಾದ ಜಾಗಗಳು
ವಯಸ್ಕರಿಗೆ ಮತ್ತು ಮಕ್ಕಳಿಗೆ : ಕೈ ಅಥವಾ ಕಾಲಿನ ಬೆರಳುಗಳು, ಕಿವಿಯ ಕೆಳಭಾಗ |
02:23 | ಶಿಶುಗಳಿಗೆ : ಪಾದ ಅಥವಾ ಅಂಗೈ ಮತ್ತು ಕೈ ಅಥವಾ ಕಾಲಿನ ಹೆಬ್ಬೆರಳು |
02:31 | ಗಮನಿಸಿ
ಪುನರ್ಬಳಕೆಯ ಸೆನ್ಸರ್’ಗಳನ್ನು ಒಂದೇ ಜಾಗದಲ್ಲಿ ಗರಿಷ್ಠ 4 ಘಂಟೆಯ ಅವಧಿಗೆ ಬಳಸಬಹುದು. ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಜಾಗವನ್ನು ಪರಿಶೀಲಿಸುತ್ತಿರಬೇಕು
|
02:47 | ಒದ್ದೆಯಾದ ಅಥವಾ ಹಾಳಾದ ಸೆನ್ಸರ್ ಬಳಸಕೂಡದು. ಎಲೆಕ್ಟ್ರೋ-ಸರ್ಜರಿಯ ಸಂದರ್ಭ ಅಥವಾ ಬೇರೆ ವಿದ್ಯುತ್ ಉಪಕರಣಗಳ ಬಳಕೆಯ ಸಂದರ್ಭ ಅವು ಸುಟ್ಟಗಾಯಗಳನ್ನು ಉಂಟುಮಾಡಬಹುದು. |
03:00 | SpO2 ಸೆನ್ಸರ್’ನ ಅಸಮರ್ಪಕ ಬಳಕೆಯಿಂದ ಅಂಗಾಂಶದ ಹಾನಿಯಾಗಬಹುದು |
03:08 | ಸೆನ್ಸರ್’ನ ಸಂಪರ್ಕದ ಸಮಯದಲ್ಲಾಗಲಿ, ತೆಗೆಯುವ ಸಂದರ್ಭದಲ್ಲಾಗಲಿ ಅಥವಾ ಸಂಗ್ರಹದ ಸಂದರ್ಭದಲ್ಲಾಗಲಿ ಸುಮ್ಮನೆ ತಿರುಗಿಸಬೇಡಿ |
03:20 | ಶಸ್ತ್ರಚಿಕಿತ್ಸಾ ದೀಪ, ಬಿಲಿರುಬಿನ್ ದೀಪ ಅಥವಾ ಸೂರ್ಯಪ್ರಕಾಶದ ವಿಪರೀತ ಬೆಳಕಿನ ಕಾರಣದಿಂದ ಅಥವಾ ಸೆನ್ಸರ್ ಬಹಳ ಬಿಗಿಯಾಗಿದ್ದರೆ ಮಿಡಿತದ ಪತ್ತೆಯಾಗದಿರಬಹುದು |
03:37 | ಮುಂದೆ, ನಾವು ರಕ್ತದೊತ್ತಡದ ಪಟ್ಟಿಯ ಸ್ಥಾನದ ಬಗ್ಗೆ ತಿಳಿಯೋಣ |
03:42 | ಪಟ್ಟಿಯ ಸಂಪರ್ಕವನ್ನು ಬ್ಲೂಟೂತ್ ಯಂತ್ರದ NIBP ಸಂಪರ್ಕಸ್ಥಾನದೊಂದಿಗೆ ಮಾಡಿರಿ |
03:49 | ರೋಗಿಯ ಅಂಗವನ್ನು ಅಳತೆ ಮಾಡಿ ಸರಿಯಾದ ಪಟ್ಟಿಯ ಗಾತ್ರ ಆಯ್ಕೆ ಮಾಡಿರಿ. ಪಟ್ಟಿಯ ಅಗಲ ಮೊಣಕೈ ಮತ್ತು ಭುಜದ ನಡುವಿನ ದೂರದ ಮೂರನೇ ಎರಡು ಭಾಗದಷ್ಟಿರಲಿ. |
04:04 | NIBP ಪಟ್ಟಿಯನ್ನು ಸುತ್ತಿರಿ. ಮೊದಲ ಆದ್ಯತೆಯ ಜಾಗ ಎಡಗೈ ಆಗಿರಲಿ, ಚಿತ್ರದಲ್ಲಿ ತೋರಿಸಿದಂತೆ |
04:14 | NIBP ಪಟ್ಟಿಯನ್ನು ಸರಿಯಾದ ಅಳತೆಗಾಗಿ ರೋಗಿಯ ಅಂಗಕ್ಕೆ ಬಿಗಿಯಾಗಿ ಸುತ್ತಿರಬೇಕು. |
04:21 | Start ಗುಂಡಿಯನ್ನು ಒತ್ತಿ ಬ್ಲೂಟೂತ್ BP Monitor ಅನ್ನು ಆರಂಭಿಸಿ. |
04:26 | ಗಮನಿಸಿ: ಸರಿಯಿಲ್ಲದ ಬಳಕೆಯಿಂದ ತಪ್ಪಾದ ಅಳತೆಗಳು ಉಂಟಾಗಬಹುದು.
ಪಟ್ಟಿಯನ್ನು ಬಿಗಿಯಾಗಿ ಕಟ್ಟದೇ ಇರುವುದು ಸರಿಯಲ್ಲದ ಅಳತೆಯ ಪಟ್ಟಿಯನ್ನು ಬಳಸುವುದು ಪಟ್ಟಿಯನ್ನು ಹೃದಯದ ಸರಿಸಮವಾದ ಎತ್ತರದಲ್ಲಿ ಬಳಸದೇ ಇರುವುದು ತೂತಾದ ಪಟ್ಟಿಯನ್ನು ಬಳಸುವುದು ರೋಗಿಯು ಅಲುಗಾಡುತ್ತಿರುವುದು |
04:52 | SpO2 ಮತ್ತು BP ಪಟ್ಟಿಯನ್ನು ಒಂದೇ ಕೈಗೆ ಸಿಕ್ಕಿಸಬೇಡಿ. ಇದು ತಪ್ಪು ಎಚ್ಚರಿಕೆಯನ್ನು ತಡೆಗಟ್ಟಲು ಆಗಿರುತ್ತದೆ |
05:03 | NIBP ಅನ್ನು ಅಲೆಯುತ್ತಿರಲು, ಪಟ್ಟಿಯ ಕೊಳವೆ ಗೋಜಲಾಗಿಲ್ಲ ಮತ್ತು ಹರಿವು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ |
05:12 | ECG ಲೀಡ್’ಗಳ ಸ್ಥಾನಗಳನ್ನು ತಿಳಿಯೋಣ |
05:18 | ಚರ್ಮದ ಉತ್ತಮ ತಯಾರಿಕೆ ಮತ್ತು ಸರಿಯಾದ ಎಲೆಕ್ಟ್ರೋಡ್ ಸ್ಥಾಪನೆಯಿಂದ ಉತ್ತಮ ECG ಪಡೆಯಬಹುದು |
05:27 | ರೋಗಿಯ ತಯಾರು ಮಾಡಲು ಇವುಗಳನ್ನು ಮಾಡಬೇಕು ಎಲೆಕ್ಟ್ರೋಡ್’ನ ಜಾಗವನ್ನು ಶುಚಿಗೊಳಿಸಿ ರೋಮವನ್ನು ಕತ್ತರಿಸಿಹಾಕಬೇಕು |
05:37 | ಚರ್ಮವನ್ನು ಉತ್ತಮ ಸ್ಪಿರಿಟ್ ದ್ರವದಿಂದ ಶುಚಿಗೊಳಿಸಿ ಹೊರಗಿನ ತ್ವಚೆಯನ್ನು ತೆಗೆದುಹಾಕಿರಿ. ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ |
05:50 | ಎಲೆಕ್ಟ್ರೋಡ್’ನಿಂದ ಒಣ-ಅರೆ-ದ್ರಾವಣವನ್ನು ತೆಗೆಯಿರಿ. ಅವುಗಳನ್ನು ಮಾಂಸವಿಲ್ಲದ ಮತ್ತು ಕೂದಲಿಲ್ಲದ ಜಾಗದಲ್ಲಿ ಅಂಟಿಸಿ |
06:01 | ಉತ್ತಮ ಗುಣಮಟ್ಟದ (ವಿದ್ಯುತ್-ವಾಹಕ) ಅರೆ-ದ್ರಾವಣವನ್ನು ಉಪಯೋಗಿಸಿ. ಚರ್ಮದೊಂದಿಗೆ ಉತ್ತಮ ಸಂಪರ್ಕಕ್ಕೋಸ್ಕರ ಎಲೆಕ್ಟ್ರೋಡ್ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಅರೆ-ದ್ರಾವಣವಿರಲಿ. |
06:15 | ಗಮನಿಸಿ:
ಎಲೆಕ್ಟ್ರೋಡ್’ನ ವಾಹಕ ಭಾಗವಾದ ಲೀಡ್ ಮತ್ತು ತಂತಿಯು ಬೇರೆ ಯಾವುದೇ ವಾಹಕ ಭಾಗದೊಂದಿಗೆ ಸಂಪರ್ಕಕ್ಕೆ ಬಾರದಿರಲಿ |
06:27 | ಹಾನಿಯಾದ ಎಲೆಕ್ಟ್ರೋಡ್ ಲೀಡ್ ಉಪಯೋಗ ಬೇಡ |
06:31 | ಎಲೆಕ್ಟ್ರೋಡ್’ಗಳು ಸಡಿಲವಾಗದಿರಲಿ. ಸಡಿಲವಾಗಿದ್ದರೆ ತಪ್ಪಾದ ಸೂಚನೆಗಳನ್ನು ನೀಡುತ್ತವೆ ಹಾಗೂ ಹೃದಯ ಸಂಬಂಧಿ ಎಚ್ಚರಿಕೆ ತೋರುತ್ತದೆ. ಇದು ಸರಿಯಲ್ಲ.
|
06:43 | ಎಲೆಕ್ಟ್ರೋಡ್’ಗಳನ್ನೂ ಈ ಜಾಗದಲ್ಲಿ ಇಡಬೇಕು
RA: ಬಲಭಾಗದ intraclavicular ಜಾಗ LA: ಎಡಭಾಗದ intraclavicular ಜಾಗ |
06:56 | V1: ನಾಲ್ಕನೇ ಪಕ್ಕೆಲುಬಿನ ನಡುವಿನ ಎದೆಮೂಳೆಯ ಬಲತುದಿಯ ಜಾಗ
V2: ನಾಲ್ಕನೇ ಪಕ್ಕೆಲುಬಿನ ನಡುವಿನ ಎದೆಮೂಳೆಯ ಎಡತುದಿಯ ಜಾಗ |
07:10 | V3: V2 ಮತ್ತು V4 ನಡುವಿನ ಐದನೇ ಪಕ್ಕೆಲುಬಿನ ಜಾಗ
V4: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮಧ್ಯದ ಗೆರೆ |
07:22 | V5: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮುಂಭಾಗದ ಕಂಕುಳಿನ ಗೆರೆ
V6: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮಧ್ಯದ ಕಂಕುಳಿನ ಗೆರೆ |
07:36 | RL : ತೊಡೆಸಂಧಿಯ ಮೂಳೆನಾರಿನ ಮೇಲಿನ ಕೆಳ ಬಲಭಾಗದ ಹೊಟ್ಟೆಯ ಭಾಗ
LL: ತೊಡೆಸಂಧಿಯ ಮೂಳೆನಾರಿನ ಮೇಲಿನ ಕೆಳ ಎಡಭಾಗದ ಹೊಟ್ಟೆಯ ಭಾಗ |
07:53 | ವಿದ್ಯುತ್ ತಂತಿ ಮತ್ತು ರೋಗಿಯ ತಂತಿ ಒಂದನ್ನೊಂದು ದಾಟದಂತೆ ನೋಡಿಕೊಳ್ಳಿ |
07:59 | mobmon ಯಂತ್ರವನ್ನು ಪವರ್ ಆನ್/ಆಫ್ ಗುಂಡಿ ಒತ್ತಿ ಆರಂಭ ಮಾಡಿರಿ |
08:05 | STEMI ಯಂತ್ರದ ECG ಟ್ಯಾಬ್ ಅನ್ನು ಆಯ್ಕೆ ಮಾಡಿ ECG ಲೈವ್ ಸ್ಟ್ರೀಮ್ ಪುಟದಲ್ಲಿ ECG ನೋಡಿರಿ. |
08:15 | ಸಾರಾಂಶ ತಿಳಿಯೋಣ |
08:16 | ಈ ಟ್ಯುಟೋರಿಯಲ್’ನಲ್ಲಿ ನಾವು
ECG ಲೀಡ್’ಗಳ, BP ಪಟ್ಟಿಯ ಮತ್ತು SpO2 ಯಂತ್ರದ ಸ್ಥಾನದ ಬಗ್ಗೆ ECG ಅಲೆಯುವ ಬಗ್ಗೆ ರಕ್ತದೊತ್ತಡ ಮತ್ತು SpO2 ಅಲೆಯುವ ಬಗ್ಗೆ ಕಲಿತೆವು |
08:31 | STEMI ಇಂಡಿಯಾ
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ |
08:45 | ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ |
09:00 | ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.
ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ. |