PHP-and-MySQL/C3/MySQL-Part-7/Kannada
From Script | Spoken-Tutorial
Revision as of 11:56, 9 July 2020 by Sandhya.np14 (Talk | contribs)
Time | Narration |
---|---|
00:01 | ಟ್ಯುಟೋರಿಯಲ್ ನ ಈ ಭಾಗದಲ್ಲಿ, ಒಂದು ಸರಳವಾದ ಪ್ರೋಗ್ರಾಂ ಅನ್ನು ರಚಿಸಲು ನಿಮಗೆ ಅವಕಾಶ ಮಾಡಿಕೊಡುತ್ತಿದ್ದೇನೆ. |
00:08 | ಈ ಪ್ರೋಗ್ರಾಂ, ಒಂದು ಲಿಸ್ಟ್ ನಿಂದ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಅನುಮತಿಸುತ್ತದೆ. |
00:15 | ಅಲ್ಲದೆ, ಇದು ಸ್ವಲ್ಪ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ನಾನು ನೇಮ್ ಅನ್ನೇ ಅಪ್ಡೇಟ್ ಮಾಡುವುದನ್ನು ಆರಿಸಿಕೊಳ್ಳುತ್ತಿದ್ದೇನೆ. |
00:25 | ಇಲ್ಲಿ ಉದಾಹರಣೆಗೆ ನಾನು "firstname" ಎನ್ನುವೆನು. |
00:28 | ಇಲ್ಲಿ ನಾವು, ಒಂದು ಲಿಸ್ಟ್ ನಿಂದ ಅದನ್ನು ಆಯ್ಕೆಮಾಡಿಕೊಂಡು, ನಂತರ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು. |
00:33 | ನಮಗೆ ಬೇಡವಾದ ಮಾಹಿತಿಯನ್ನು ತೆಗೆದುಹಾಕಲು ಈ ಪೇಜ್ ನಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡುವೆನು. |
00:39 | ಇಲ್ಲಿ ಎಕೋ ಮಾಡುವುದು ನಮಗೆ ಬೇಡ. |
00:41 | ನಾವು ಇಲ್ಲಿ ನಮ್ಮ ಫಾರ್ಮ್ ಅನ್ನು ಕೂಡ ಬದಲಿಸುತ್ತೇವೆ. ಹಾಗಾಗಿ ನಮಗೆ ಇದು ಈಗ ಸದ್ಯಕ್ಕೆ ಬೇಡ. |
00:47 | ಈಗ ಇದನ್ನು ಡಿಲೀಟ್ ಮಾಡೋಣ. |
00:49 | ನಮಗೆ ಇದು ಮುಂದೆ ಬೇಕಾಗಿಲ್ಲ. |
00:52 | ನಮಗೆ ಕೇವಲ firstname ಮತ್ತು lastname ಗಳು ಮಾತ್ರ ಬೇಕು. Date of birth ಮತ್ತು gender ಇವು ಮುಖ್ಯವಲ್ಲ. |
00:59 | ಇದನ್ನು ಕೂಡ ಡಿಲೀಟ್ ಮಾಡೋಣ. ನಮಗೆ ಇದಾಗಲೀ, ಇದಾಗಲೀ ಮುಂದೆ ಬೇಕಿಲ್ಲ. |
01:04 | ಸರಿ ನಾವು ಅದನ್ನು ಮಾಡಿರುವೆವು. |
01:06 | ಈ ಟ್ಯುಟೋರಿಯಲ್ ಸಮಗ್ರವಲ್ಲ ಮತ್ತು ಇದು ಸಂಪೂರ್ಣವಾಗಿ ಸರಿಯಾಗಿಯೂ ಇರುವುದಿಲ್ಲ. |
01:13 | ಆದಾಗ್ಯೂ ಇದು, html select box ಗಳಿಗೆ ನಿಮ್ಮ record ಗಳನ್ನು ಹೇಗೆ ಅನ್ವಯಿಸುವುದು ಎಂದು ತೋರಿಸುತ್ತದೆ. |
01:23 | ಮತ್ತು, ನೀವು ಆಯ್ಕೆಮಾಡಿದ ಡೇಟಾದ ಆಧಾರದ ಮೇಲೆ, ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದೆಂದು ತೋರಿಸುತ್ತದೆ. |
01:30 | ನಿಮಗೆ ಇಲ್ಲಿ ಕಾಣುತ್ತಿರುವಂತೆ, ನಾನು while ಲೂಪ್ ನಲ್ಲಿ ಕೆಲವು ಡೇಟಾವನ್ನು ರಚಿಸುತ್ತಿದ್ದೇನೆ. |
01:45 | ಇಲ್ಲಿ ನಾವು ಕೆಲವು ಎಚ್.ಟಿ.ಎಂ.ಎಲ್. ಡೇಟಾವನ್ನು ರಚಿಸಲು ಹೊರಟಿದ್ದೇವೆ. |
01:47 | ಇಲ್ಲಿ ನಾನು ಎಕೋ ಮಾಡುತ್ತಿದ್ದೇನೆ. ಈಗ ಸ್ವಲ್ಪ ಸಮಯದ ತನಕ ನಾನು ಇದನ್ನು ನಿಲ್ಲಿಸುವೆನು. |
01:56 | ಸ್ವಲ್ಪ ಕೆಳಕ್ಕೆ ಹೋಗೋಣ. |
01:58 | ಇಲ್ಲಿ ನಾವು select box ಅನ್ನು ಬಳಸಿ, select ಏರಿಯಾವನ್ನು ರಚಿಸುತ್ತಿದ್ದೇವೆ. |
02:02 | ಇದೊಂದು drop down ಬಾಕ್ಸ್ ಆಗಿದೆ ಮತ್ತು ಈ ಪ್ರತಿಯೊಂದೂ ಬಾಕ್ಸ್ ಗೂ ನಾವು ಒಂದು ಆಯ್ಕೆಯನ್ನು ಹೊಂದಿರುತ್ತೇವೆ. |
02:14 | ಉದಾಹರಣೆಗೆ, ಇದು 1 ಅಥವಾ 2 ಆಗಿರಬಹುದು. |
02:17 | ಈಗ ಹಿಂದಿರುಗಿ ಮತ್ತು refresh ಮಾಡಬೇಕು. ಈಗ ನಾವು ಇದನ್ನು ರಿಫ್ರೆಶ್ ಮಾಡೋಣ. |
02:28 | ಈಗ ಈ ಡೈಲಾಗ್ ಬಾಕ್ಸ್ ಅನ್ನು ತೆಗೆದುಬಿಡೋಣ. |
02:31 | ಇಲ್ಲಿ ನಾವು 1 ಅಥವಾ 2 ಅನ್ನು ಪಡೆದಿದ್ದೇವೆ. ಇದು ಎಚ್.ಟಿ.ಎಂ.ಎಲ್. ಕೋಡ್ ನ ಭಾಗವಾಗಿದೆ. |
02:36 | ನಾವು ಇಲ್ಲಿ ಅದನ್ನು ಅನ್ವಯಿಸುತ್ತಿದ್ದೇವೆ ಮತ್ತು ನಮ್ಮ ರೆಕಾರ್ಡ್ ಗಳನ್ನು ಹುಡುಕಲು ಹೊರಟಿದ್ದೇವೆ. ಪ್ರತಿಯೊಂದೂ option ಬಾಕ್ಸ್ ನಲ್ಲು ಹೆಸರುಗಳನ್ನು ಕೊಡಲು ಹೊರಟಿದ್ದೇವೆ. |
02:44 | ನಾವು ಪಡೆದ ಪ್ರತಿಯೊಂದು ರೆಕಾರ್ಡ್ ಗೂ ನಾನು ಒಂದು 'option name' ಅನ್ನು ಕೊಡುವೆನು. |
02:48 | ಇದು ನಿಮಗೆ ಅರ್ಥವಾಗದಿದ್ದರೆ ಇನ್ನೊಮ್ಮೆ ವಿವರಿಸುವೆನು. ಪ್ರತಿ ರೆಕಾರ್ಡ್ ಗೂ ಪುನರಾವರ್ತನೆಯಾಗಬೇಕಾದ ಕೋಡ್, ಈ ಲೂಪ್ ನೊಳಗೆ ಇರಬೇಕು. ಇಲ್ಲಿ ಲೂಪ್ ನ ಹೊರಗೆ, ನಮ್ಮ ಎಚ್.ಟಿ.ಎಂ.ಎಲ್ ಕೋಡ್ ನ ಮೊದಲ ಭಾಗವನ್ನು ಎಕೋ ಮಾಡುವೆವು. |
03:00 | ಇದು "select" ಆಗಿರುವುದು. ಇದರ name, ಇದು "name" ಆಗಿರಲಿ. |
03:08 | ಅಥವಾ ಇದನ್ನು people name ಎಂದುಕೊಳ್ಳೋಣ. |
03:13 | ಇದಾದ ನಂತರ, while ಲೂಪ್ ನ ಹೊರಗೆ, ಇಲ್ಲಿ 'ಎಂಡ್ ಟ್ಯಾಗ್' ಗಳನ್ನು ಎಕೋ ಮಾಡುವೆವು. ಈಗ ನಾವು ಫಾರ್ವರ್ಡ್ ಸ್ಲ್ಯಾಶ್ select ಎಂದು ಟೈಪ್ ಮಾಡೋಣ. |
03:24 | ಇದನ್ನು ನಮ್ಮ while ಲೂಪ್ ನ ಒಳಗೆ ಸೇರಿಸಿಲ್ಲ. ಕಾರಣ, ಒಂದುವೇಳೆ ಇದು ಪುನರಾವರ್ತನೆ ಆಗುತ್ತಿದ್ದರೆ, ಈ ಸ್ಟಾರ್ಟ್ ಮತ್ತು ಎಂಡ್ ಟ್ಯಾಗ್ ಗಳು ಪುನರಾವರ್ತನೆ ಆಗುತ್ತವೆ. ಆದರೆ ನಮಗೆ ಬೇಕಾಗಿರುವ option ಭಾಗವು ಪುನರಾವರ್ತನೆ ಆಗುವುದಿಲ್ಲ. |
03:36 | ಇಲ್ಲಿ option ನ ಭಾಗವು ಲೂಪ್ ನ ಒಳಗೆ ಹೋಗುತ್ತದೆ. |
03:39 | ಈಗ ನಾನು ಇದನ್ನು, ಅಂದರೆ "$firstname" ಅನ್ನು ಎಕೋ ಮಾಡುವೆನು. |
03:42 | ಮತ್ತು ಇದು ಪ್ರತಿಯೊಂದೂ ರೆಕಾರ್ಡ್ ಗೂ ಇದು ಈ ಆಪ್ಷನ್ ಕೋಡ್ ಅನ್ನು ಪುನರಾವರ್ತಿಸುತ್ತದೆ. |
03:48 | ನಿಮಗೆ ನೆನಪಿದ್ದರೆ ನಾವು ಇಲ್ಲಿ ಕೆಳಗೆ option ಮತ್ತು option end ಟ್ಯಾಗ್ ಗಳನ್ನು ಹೊಂದಿದ್ದೇವೆ. |
03:52 | ಇದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. |
03:57 | ನಾವು ಇಲ್ಲಿ "select" ಅನ್ನೂ ಮತ್ತು ಇಲ್ಲಿ "select end" ಅನ್ನೂ ಹೊಂದಿದ್ದೇವೆ. |
04:01 | ನಮಗೆ ಇದು ಒಮ್ಮೆ , ಮತ್ತು ಇದು ಒಮ್ಮೆ ಎಕೋ ಆಗಬೇಕು ಹಾಗೂ ಇವುಗಳು ಡಾಟಾಬೇಸ್ ಅಥವಾ ಟೇಬಲ್ ನಲ್ಲಿರುವ ಪ್ರತಿಯೊಂದೂ ರೆಕಾರ್ಡ್ ಗೂ ಒಂದು ಬಾರಿ ಎಕೋ ಆಗಬೇಕು. |
04:10 | ನೀವು ರಿಫ್ರೆಶ್ ಮಾಡಿ ಇದನ್ನು ಪರೀಕ್ಷಿಸಬಹುದು. |
04:13 | ಓಹ್! ಕೋಡ್ ಎಲ್ಲಿ ಹೋಯಿತು? |
04:15 | ಈಗ ಹಿಂದಿರುಗಿ ತಪ್ಪು ಎಲ್ಲಿದೆ ಎಂದು ಪರೀಕ್ಷಿಸೋಣ. ನಾವು ಈಗ ಈ if ಸ್ಟೇಟ್ಮೆಂಟ್ ನ ಭಾಗವನ್ನು ಬದಲಿಸಬೇಕು. |
04:25 | ನಾವು ಇಲ್ಲೆಲ್ಲೂ "submit" ಬಟನ್ ಅನ್ನು ನೋಡುವುದಿಲ್ಲ. ಹಾಗಾಗಿ ನಾವು ಇದನ್ನು ಡಿಲೀಟ್ ಮಾಡಬಹುದು. |
04:29 | ಈಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ, refresh ಮಾಡೋಣ. ಇಲ್ಲಿ ನಾವು ನಮ್ಮ ಡಾಟಾಬೇಸ್ ನ, ಪ್ರತಿ ರೆಕಾರ್ಡ್ ನ ಫಸ್ಟ್ ನೇಮ್ ಗಳನ್ನು ಹೊಂದಿರುವ ಲಿಸ್ಟ್ ಬಾಕ್ಸ್ ಅನ್ನು ಪಡೆದಿದ್ದೇವೆ. |
04:39 | ಈಗ ಇದು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಲು, ನನ್ನ ಕೋಡ್ ನಲ್ಲಿ "$surname" ಅಥವಾ "$lastname" ಅನ್ನೂ ಸೇರಿಸುವೆನು. |
04:47 | ಈಗ ಮತ್ತೆ Refresh ಮಾಡಿ. ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸುವುದು ಸುಲಭವಾದ ವಿಧಾನ ಅಲ್ಲವೇ? |
04:52 | ಈಗ ನಾವು option ಗಳ ಕುರಿತು ನೋಡುವೆವು. |
04:56 | ನಮಗೆ ಪ್ರತಿ option ಗೂ ಒಂದು ನೇಮ್ ಬೇಕು ಮತ್ತು ಪ್ರತಿಯೊಂದರ name ಇದು "$id" ಆಗಿರಲಿ. |
05:00 | ನಾನು refresh ಮಾಡಿದರೆ, ಮತ್ತು ನನ್ನ ಸೋರ್ಸ್ ಪೇಜ್ ಗೆ ಬಂದರೆ, ನೀವು ಪ್ರತಿಯೊಂದರಲ್ಲೂ 1,2,3,4, ಎಂದು ಇರುವುದನ್ನು ನೋಡಬಹುದು. |
05:13 | ಇದು ತುಂಬ ಉಪಯುಕ್ತವಾಗಿದೆ. ಏಕೆಂದರೆ, ನಾವು ನೇಮ್ ಗಳ ಮೂಲಕ ಹೋಗುವ ಬದಲು ಯುನಿಕ್ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡಬಹುದು. |
05:23 | ಹಾಗಾಗಿ, ನಾನು ಇಲ್ಲಿ ನನ್ನ update form ಅನ್ನು ರಚಿಸಲು ಆರಂಭಿಸುವೆನು. |
05:28 | ನಾನು ಈ "select" ನ ನಂತರ ಒಂದು input ಬಾಕ್ಸ್ ಅನ್ನು ಸೇರಿಸುವೆನು ಮತ್ತು ಇದು "text" ಆಗಿರುತ್ತದೆ. |
05:33 | 'name' ಇದು 'tochange' ಆಗಿರಲಿ. ನಾವು ಇದರಿಂದಲೇ ಫೀಲ್ಡ್ ಅನ್ನು ಬದಲಿಸುವೆವು. |
05:40 | ಈಗ ಇನ್ನೊಂದು ಬಟನ್ ಅನ್ನು ರಚಿಸೋಣ ಅಥವಾ ಇನ್ನೊಂದು ಇನ್ಪುಟ್ ಎಲಿಮೆಂಟ್ ಆದ submit ಬಟನ್ ಅನ್ನು ರಚಿಸುವೆವು. ಅದರ ವ್ಯಾಲ್ಯು 'change' ಆಗಿರಲಿ. |
05:53 | ಇಲ್ಲಿ ನಾನು ಉದಾಹರಣೆಗಾಗಿ $firstname ಎಂದು ಬದಲಿಸುವೆನು. |
05:58 | ಈಗ ಇಲ್ಲಿ ನಮ್ಮ form ಇದೆ. |
06:00 | ಇಲ್ಲಿ "name" ಇದೆ ಮತ್ತು ಇಲ್ಲಿ ಬದಲಾಯಿಸಿದ ನಂತರದ ಹೆಸರಿಗೆ ಜಾಗವಿದೆ. |
06:04 | ನಾನು ಇದನ್ನು "Alex" ಇಂದ "Alexander" ಎಂದು ಬದಲಿಸಿ Change ಅನ್ನು ಕ್ಲಿಕ್ ಮಾಡುವೆನು. |
06:10 | ಈಗ ಸದ್ಯಕ್ಕೆ ಏನೂ ಆಗುತ್ತಿಲ್ಲ. |
06:12 | ಈಗ ನಾವು ಏನು ಮಾಡಬೇಕೆಂದರೆ, ಇದನ್ನು form ನ ಒಳಗೆ ಇಡಬೇಕು ಮತ್ತು form ಅನ್ನು ಇಲ್ಲಿ ಪೂರ್ಣಗೊಳಿಸಬೇಕು. |
06:17 | ಇಲ್ಲಿ ಸ್ವಲ್ಪ ಗೊಂದಲವಾಗಬಹುದು. ಆದರೆ ಇಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. |
06:23 | ಇಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ. ಮೇಲ್ಗಡೆ ನಾವು form ಅನ್ನು ಆರಂಭಿಸಬೇಕು. |
06:27 | ನಾವು ಈಗಿರುವ ಪೇಜ್ "mysql dot php", ಇದು action ಆಗಿರುತ್ತದೆ. |
06:33 | ನಾನು ಇದನ್ನು ಇನ್ನೊಂದು ಪೇಜ್ ನಲ್ಲಿ ಮಾಡುತ್ತಿದ್ದೇನೆ. |
06:36 | ಹಾಗಾಗಿ ಇದರ ಹೆಸರನ್ನು "mysql update dot php" ಎಂದು ಬದಲಿಸಿ. |
06:40 | ನಿಮಗೆ ಇದನ್ನು ನೋಡಲು ಸ್ವಲ್ಪ ಸುಲಭ ಮತ್ತು ಬರೆಯಲು ನನಗೆ ತುಂಬ ಸುಲಭವಾಗುತ್ತದೆ. |
06:45 | ಈಗ ಇದನ್ನು ರಿಫ್ರೆಶ್ ಮಾಡಿ. ನಾವು ಹೊಸ ಪೇಜ್ ಗೆ ಹೋಗುವುದನ್ನು ನೋಡಬಹುದು. ಆದರೆ ಈಗ ಸದ್ಯಕ್ಕೆ ನಮಗೆ ಆ ಪೇಜ್ ಸಿಗುತ್ತಿಲ್ಲ. |
06:52 | ನಾನು ಈಗ ಅದನ್ನು ರಚಿಸುವೆನು. |
06:55 | ನಾನು ಇದನ್ನು ನೇರವಾಗಿ "mysql ಅಂಡರ್ಸ್ಕೋರ್ update ಡಾಟ್ php" ಎಂದು ಸೇವ್ ಮಾಡುವೆನು. |
07:00 | ಇಲ್ಲಿ ನಾವು ನಮ್ಮ php ಟ್ಯಾಗ್ ಗಳನ್ನು ಆರಂಭಿಸಬೇಕು. |
07:03 | ನಮಗೆ 'require "connect dot php" ' ಬೇಕು. ಏಕೆಂದರೆ ನಾವು ಡಾಟಾಬೇಸ್ ಅನ್ನು ಮತ್ತೆ ಕನೆಕ್ಟ್ ಮಾಡುತ್ತಿದ್ದೇವೆ. |
07:14 | ನಾವು ಬದಲಿಸುತ್ತಿರುವ ಹೆಸರಿನ ವ್ಯಾಲ್ಯು ಕೂಡ ನಮಗೆ ಬೇಕು. |
07:18 | ಆದ್ದರಿಂದ select name ಅಂದರೆ peoplename ಅನ್ನು ಕಾಲ್ ಮಾಡುವೆವು. |
07:20 | ಹಾಗಾಗಿ ನಾನು ' "$peoplename" equals $_POST 'peoplename' ' ಎಂದು ಟೈಪ್ ಮಾಡುವೆನು. |
07:29 | ಇದು ನಾವು ತೆಗೆದುಕೊಳ್ಳುತ್ತಿರುವ html ಎಲಿಮೆಂಟ್ ನ ಹೆಸರಾಗಿದೆ. |
07:33 | ಇದನ್ನು 1,2,3 ಎಂದು ಕರೆಯಲಾಗುವುದು. |
07:37 | ಇದು ನಮ್ಮ ಡಾಟಾಬೇಸ್ ನ ಒಳಗಿರುವ id ಆಗಿದೆ. |
07:39 | "tochange" ಇದು ನಾವು ಹೊಸ ವ್ಯಾಲ್ಯುವನ್ನು ಟೈಪ್ ಮಾಡಲು ಸಿದ್ಧವಾಗಿರುವ ಫೀಲ್ಡ್ ಆಗಿದೆ. |
07:47 | ಇಲ್ಲಿ, if $peoplename AND (&&) $tochange ಎಂದು ಹೇಳಲು, ನಾನು ಒಂದು if ಸ್ಟೇಟ್ಮೆಂಟ್ ಅನ್ನು ಬರೆಯುವೆನು. |
07:56 | ಇದು ನಾವು ಎರಡೂ ವ್ಯಾಲ್ಯುವನ್ನು ಪಡೆದುಕೊಂಡಿದ್ದೇವೆ ಎಂದು ಖಚಿತಪಡಿಸುತ್ತದೆ. |
08:01 | ನಂತರ "$change" equals "mysql_query()" ಎಂದು ಟೈಪ್ ಮಾಡಿ. ಎಂದರೆ "UPDATE people" . ಇದು ನಮ್ಮ ಟೇಬಲ್ ನ ಹೆಸರಾಗಿದೆ. |
08:17 | UPDATE people SET firstname equals '$tochange' WHERE firstname equals ಎಂದು ಟೈಪ್ ಮಾಡಿ. |
08:31 | ಇಲ್ಲ, ಆದರೆ ನಾವು "id" ಯ ಮೂಲಕ ಬದಲಿಸುತ್ತಿದ್ದೇವೆ ಅಲ್ಲವೇ? |
08:39 | ಹಾಗಾಗಿ ನಾವು 'WHERE "id" = $peoplename ' ಎಂದು ಟೈಪ್ ಮಾಡಬೇಕು. |
08:52 | ಸರಿ, ಈಗ ಹಿಂದಿರುಗೋಣ. |
08:58 | ಈಗ ನಾನು "Kyle" ಎಂಬ ಹೆಸರನ್ನು ಬದಲಿಸಲು, ಇಲ್ಲಿ "Kyle" ಅನ್ನು ಆರಿಸಿಕೊಳ್ಳುವೆನು. |
09:02 | ಈ ಹೆಸರಿನ ಐಡಿ 2 ಆಗಿದೆ. ಹಾಗಾಗಿ "peoplename" ಕೂಡ 2 ಆಗಿರುತ್ತದೆ. |
09:06 | ನಾವು id ಇದು ಆಗಿದ್ದಾಗ, ಇದನ್ನು ಇಲ್ಲಿರುವ ವ್ಯಾಲ್ಯುವಿನಿಂದ ಬದಲಿಸುವೆವು. |
09:11 | ಈಗ ಸಮಯದ ಅಭಾವವಿರುವುದರಿಂದ ಮುಂದಿನ ಟ್ಯುಟೋರಿಯಲ್ ನಲ್ಲಿ ಅದನ್ನು ತೋರಿಸುವೆನು. |
09:15 | ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |