Arduino/C3/Mixing-Assembly-and-C-programming/Kannada

From Script | Spoken-Tutorial
Revision as of 15:31, 8 July 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Assembly ಮತ್ತು C ಪ್ರೋಗ್ರಾಮಿಂಗ್ ಅನ್ನು ಸಂಯೋಜಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಒಂದನ್ನು ಬರೆಯಲು, ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು, AVR-GCC ಪ್ರೋಗ್ರಾಂ ನಲ್ಲಿ ಆ Assembly ರೂಟಿನ್ ಅನ್ನು ಕಾಲ್ ಮಾಡಲು ಕಲಿಯಲಿದ್ದೇವೆ.

00:24 ಈ ಟ್ಯುಟೋರಿಯಲ್ ಅನುಸರಿಸಲು ನೀವು:

ಎಲೆಕ್ಟ್ರಾನಿಕ್ಸ್, AVR-GCC ಮತ್ತು Assembly ಪ್ರೋಗ್ರಾಮಿಂಗ್ ನ ಮೂಲಜ್ಞಾನ ಹೊಂದಿರಬೇಕು.

00:37 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಉಬಂಟು ಲೈನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ.

00:50 ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಬೇಕು:

ಅವೆಂದರೆ ಬ್ರೆಡ್ ಬೋರ್ಡ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ,

01:00 220 ohm ರೆಸಿಸ್ಟರ್,

ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಜಂಪರ್ ವೈರ್ ಗಳು.

01:09 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಜೋಡಿಸಲಾಗಿದೆ.
01:16 ಯಾವುದಾದರೂ ಒಂದು ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಜೋಡಿಸಲಾಗುತ್ತದೆ.
01:23 ಇದು ಜೋಡಣೆಯ ಲೈವ್ ಸೆಟಪ್ ಆಗಿದೆ.
01:28 ನಾವೀಗ, ಇನಿಶಿಯಲೈಸೇಶನ್ ಮಾಡಲು, Assembly ರೂಟಿನ್ ಅನ್ನು ಬರೆಯಲಿದ್ದೇವೆ.
01:34 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ.
01:38 assembly ರೂಟಿನ್ ಪ್ರೋಗ್ರಾಂ, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಇನಿಶಿಯಲೈಸ್ ಮತ್ತು ಸೆಟ್ ಮಾಡುತ್ತದೆ.
01:45 ನಾನು ಕೋಡ್ ಅನ್ನು ಸಾಲಾಗಿ ವಿವರಿಸುತ್ತೇನೆ.

ಈ ಸಾಲು, Special Function Register offset ಅನ್ನು ಶೂನ್ಯಕ್ಕೆ ಸೆಟ್ ಮಾಡುತ್ತದೆ.

01:54 ಈ ಎರಡು ಸಾಲುಗಳು, assembly ರೂಟಿನ್ ಅನ್ನು “ಗ್ಲೋಬಲ್ ಆಗಿ” ಆಕ್ಸೆಸಿಬಲ್ ಮಾಡುತ್ತವೆ.

ಇತರ ಪ್ರೋಗ್ರಾಂಗಳು ಇದನ್ನು ಬಳಸುವಂತೆ ಇದು ಅನುವು ಮಾಡಿಕೊಡುತ್ತದೆ.

02:03 ಇಲ್ಲಿ init ಎಂದರೆ subroutine ಹೆಸರಾಗಿದೆ.

ಈ ಎರಡು ಸಾಲುಗಳು, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಸೆಟ್ ಮಾಡುತ್ತವೆ.

02:13 ಕೋಡ್ ಅನ್ನು Downloads ಫೋಲ್ಡರ್ ನಲ್ಲಿ, ಕ್ಯಾಪಿಟಲ್ ನಲ್ಲಿ initasm.S ಆಗಿ ಸೇವ್ ಮಾಡಿ.

ಇದು subroutine ಆಗಿರುವುದರಿಂದ, ಇದನ್ನು .S ಎಕ್ಸ್ಟೆನ್ಶನ್ ಆಗಿ ಸೇವ್ ಮಾಡಲಾಗುತ್ತದೆ.

02:27 ಈ ಟ್ಯುಟೋರಿಯಲ್ ನಲ್ಲಿ ಬಳಸಿರುವ ಎಲ್ಲಾ ಕೋಡ್ ಗಳು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯ.

ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.

02:37 subroutine ಅನ್ನು ಕಾಲ್ ಮಾಡಲು ಮತ್ತು ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ನಾವು ಒಂದು AVR-GCC ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ.
02:45 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ.
02:49 ಈ ಕೋಡ್, ಡಾಟ್ ಎಲ್.ಇ.ಡಿ ಯು ನಿರಂತರವಾಗಿ ಮಿನುಗುವಂತೆ ಮಾಡುತ್ತದೆ.
02:54 ಮೊದಲ ಸಾಲು "init()", ಅಸೆಂಬ್ಲಿ ಸಬ್-ರುಟೀನ್ ಅನ್ನು ಕಾಲ್ ಮಾಡುತ್ತದೆ. ಕೋಡ್ ನ ಈ ಸಾಲುಗಳು, ಡಾಟ್ ಎಲ್.ಇ.ಡಿ ಯು ಪರ್ಯಾಯವಾಗಿ ಆನ್ ಮತ್ತು ಆಫ್ ಆಗುವಂತೆ ಮಾಡಿ ಇದು ಮಿನುಗುವಂತೆ ಮಾಡುತ್ತದೆ.
03:08 ಕೋಡ್ ಅನ್ನು Downloads ಫೋಲ್ಡರ್ ನಲ್ಲಿ blink.c ಆಗಿ ಸೇವ್ ಮಾಡಿ.
03:13 Makefile ಅನ್ನು ಈ ಟ್ಯುಟೋರಿಯಲ್ ನ code files ಲಿಂಕ್ ನಿಂದ ಡೌನ್ಲೋಡ್ ಮಾಡಿ.

blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ನಲ್ಲಿಯೇ ಇದನ್ನು ಇಡಿ.

03:24 ನಾನು Makefile ಅನ್ನು ಟೆಕ್ಸ್ಟ್ ಎಡಿಟರ್ ನಲ್ಲಿ ಸೇವ್ ಮಾಡುತ್ತೇನೆ.
03:28 ಈ ಹಿಂದೆ ಬಳಸಿದ್ದಕ್ಕಿಂತ Makefile ಭಿನ್ನವಾಗಿದೆ ಎಂಬುದನ್ನು ಗಮನಿಸಿ.
03:34 Makefile ನಲ್ಲಿ, “TARGET = blink” ಮತ್ತು ASRC = “initasm.S” ಎಂಬುದನ್ನು ಖಚಿತಪಡಿಸಿ.
03:44 ಇಲ್ಲಿ “blink” ಎನ್ನುವುದು main ಪ್ರೋಗ್ರಾಂ ಮತ್ತು “initasm” ಎನ್ನುವುದು ಸಬ್-ರುಟೀನ್ ಆಗಿದೆ.
03:50 ನೀವು ಬೇರೆಯೇ ಹೆಸರು ನೀಡಿದ್ದಲ್ಲಿ ಫೈಲ್ ನೇಮ್ ಮತ್ತು ಸಬ್-ರುಟೀನ್ ಹೆಸರನ್ನು ಬದಲಾಯಿಸಬೇಕು.

ನಂತರ Makefile ಅನ್ನು ಸೇವ್ ಮಾಡಿ.

03:59 ನಂತರ terminal ಗೆ ಮರಳಿ.
04:02 blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಮರಳಿ.

make space FNAME in capital =blink ಎಂದು ಟೈಪ್ ಮಾಡಿ Enter ಒತ್ತಿ.

04:17 ಈಗ ಡಾಟ್ ಎಲ್.ಇ.ಡಿ ಯು ಮಿನುಗುತ್ತಿರುವುದನ್ನು ನೀವು ನೋಡಬಹುದು.
04:22 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
04:28 ಈ ಟ್ಯುಟೋರಿಯಲ್ ನಲ್ಲಿ ನಾವು:

ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಬರೆಯಲು ಮತ್ತು ಡಾಟ್ ಎಲ್.ಇ.ಡಿ ಮಿನುಗಿಸಲು AVR-GCC ಪ್ರೋಗ್ರಾಂನಲ್ಲಿ ಆ Assembly ರೂಟಿನ್ ಕಾಲ್ ಮಾಡಲು ಕಲಿತಿದ್ದೇವೆ.

04:43 ಅಸೈನ್ಮೆಂಟ್ ಆಗಿ -

ಡಿಲೇಯನ್ನು ಹೆಚ್ಚಿಸಲು ಮೇಲಿನ ಪ್ರೋಗ್ರಾಂ ಅನ್ನು ಬದಲಾಯಿಸಿ. ಡಾಟ್ ಎಲ್.ಇ.ಡಿ ಮಿನುಗುವಾಗ ಡಿಲೇಯನ್ನು ಗಮನಿಸಿ.

04:53 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
05:01 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
05:11 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
05:15 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ.

05.26 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14