Arduino/C2/Introduction-to-Arduino/Kannada
Time | Narration
|
00:01 | ಆರ್ಡೀನೊ ಪರಿಚಯಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡೀನೊ ಉಪಕರಣ, |
00:12 | ಆರ್ಡೀನೊವಿನ ಗುಣಲಕ್ಷಣಗಳು,
ಆರ್ಡೀನೊ ಬೋರ್ಡ್ ನ ಘಟಕಗಳು, |
00:18 | ಮೈಕ್ರೋಕಂಟ್ರೋಲರ್ ಗಳು ಮತ್ತು
ಉಬಂಟು ಲೀನಕ್ಸ್ ಒ.ಎಸ್ ನಲ್ಲಿ Arduino IDE ಅಳವಡಿಸುವುದನ್ನು ಕಲಿಯಲಿದ್ದೇವೆ. |
00:26 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: ಆರ್ಡೀನೊ ಯು.ಎನ್.ಒ ಬೋರ್ಡ್, |
00:31 | ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು |
00:36 | Arduino IDE ಬಳಸುತ್ತೇನೆ. |
00:39 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ನ ಮೂಲಜ್ಞಾನ ಹೊಂದಿರಬೇಕು. |
00:45 | ಇದು ಆರ್ಡೀನೊ ಬೋರ್ಡ್.
ಆರ್ಡೀನೊ ಯು.ಎನ್.ಒ ಬೋರ್ಡ್ ಎನ್ನುವುದು ಆರ್ಡೀನೊ ಪ್ರಾಜೆಕ್ಟ್ ನ ಒಂದು ಜನಪ್ರಿಯ ಸ್ವರೂಪವಾಗಿದೆ. |
00:53 | ಇದು ATMEGA328 ಮೈಕ್ರೋಕಂಟ್ರೋಲರ್, ಡಿಜಿಟಲ್ ಇನ್ಪುಟ್/ಔಟ್ಪುಟ್ ಪಿನ್ ಗಳು, |
01:02 | ಅನಲಾಗ್ ಇನ್ಪುಟ್ ಪಿನ್ ಗಳು ಮತ್ತು ಯು.ಎಸ್.ಬಿ ಪವರ್ ಅಡಾಪ್ಟರ್ ಹೊಂದಿದೆ. |
01:08 | ಯು.ಎಸ್.ಬಿ ಪವರ್ ಅಡಾಪ್ಟರ್ ಅನ್ನು ಬೋರ್ಡ್ ನ ಪ್ರೋಗ್ರಾಮಿಂಗ್ ಗೆ ಬಳಸಬಹುದು. |
01:13 | ಇದು ಮೈಕ್ರೋಕಂಟ್ರೋಲರ್.
ಇದನ್ನು ಸುಲಭವಾಗಿ ಒಯ್ಯಬಹುದಾದ ಸಂಗೀತ ಉಪಕರಣದಿಂದ ಹಿಡಿದು ವಾಷಿಂಗ್ ಮಶಿನ್ ಗಳು ಮತ್ತು ಕಾರುಗಳು ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನೋಡಬಹುದು. |
01:25 | ಹಾಗಾದರೆ ಮೈಕ್ರೋಕಂಟ್ರೋಲರ್ ಅಂದರೇನು?
ಮೈಕ್ರೋಕಂಟ್ರೋಲರ್ ಒಂದು ಮಿನಿ ಕಂಪ್ಯೂಟರ್ ಆಗಿದೆ. |
01:31 | ಇದು ಸಿ.ಪಿ.ಯು ಹೊಂದಿರುತ್ತದೆ, ಅಂದರೆ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್, ಮೆಮೊರಿ, ಸಿಸ್ಟಂ ಕ್ಲಾಕ್ ಮತ್ತು ಪೆರಿಫೆರಲ್ ಗಳು. |
01:41 | ಮೈಕ್ರೋಕಂಟ್ರೋಲರ್ ಅನ್ನು ಏಕಕಾಲದಲ್ಲಿ ಒಂದು ಕೆಲಸ ಮಾಡಲು ಮತ್ತು ಒಂದು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಎಕ್ಸಿಕ್ಯೂಟ್ ಮಾಡಲು ಮೀಸಲಿಡಲಾಗುತ್ತದೆ. |
01:51 | ಮೈಕ್ರೋಕಂಟ್ರೋಲರ್ ಎಲ್ಲಿ ಬಳಸಲಾಗುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ. |
01:56 | ಇದನ್ನು ಪ್ರಿಂಟರ್ ಗಳು, ಕಾರುಗಳು, ಟ್ರಾಫಿಕ್ ಸಿಗ್ನಲ್ ಗಳು ಮತ್ತು ಮೋಶನ್ ಡಿಟೆಕ್ಟರ್ ಗಳಲ್ಲಿ ಬಳಸಲಾಗುತ್ತದೆ. |
02:04 | ಈಗ ನಾವು ಆರ್ಡೀನೊವಿನ ಕೆಲವು ಗುಣಲಕ್ಷಣಗಳನ್ನು ನೋಡೋಣ. |
02:09 | Arduino IDE ಒಂದು ಓಪನ್-ಸೋರ್ಡ್ ಸಾಫ್ಟ್ ವೇರ್ ಆಗಿದೆ. |
02:13 | ಇದಕ್ಕೆ ಕೋಡ್ ಬರೆದು ಭೌತಿಕ ಬೋರ್ಡ್ ಗೆ ಇದನ್ನು ಅಪ್ಲೋಡ್ ಮಾಡುವುದು ಸುಲಭ. |
02:19 | ಇದರ ಇನ್ಬಿಲ್ಟ್ ಫಂಕ್ಷನ್ ಗಳೊಂದಿಗೆ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯುವುದು ಸುಲಭ. |
02:25 | ಇದು ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ನಲ್ಲಿ ಕೆಲಸ ಮಾಡುತ್ತದೆ. ಈ ಸಾಫ್ಟ್ವೇರ್ ಅನ್ನು ಯಾವುದೇ ಆರ್ಡೀನೊ ಬೋರ್ಡ್ ಜೊತೆ ಬಳಸಬಹುದು. |
02:35 | ನಂತರ ನಾವು Arduino IDE ಅನ್ನು ಹೇಗೆ ಅಳವಡಿಸಬಹುದು ಎಂದು ನೋಡೋಣ. |
02:40 | ಅಳವಡಿಸಲು www.arduino.cc ವೆಬ್ಸೈಟ್ ಗೆ ಹೋಗಿ. |
02:48 | Download ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:51 | ವಿಂಡೋಸ್, ಮ್ಯಾಕ್ ಅಪರೇಟಿಂಗ್ ಸಿಸ್ಟಂ ಮತ್ತು ಲೀನಕ್ಸ್ ಗೆ ಆರ್ಡೀನೊ ಡೌನ್ಲೋಡ್ ಮಾಡಲು ಬೇರೆ ಬೇರೆ ಲಿಂಕ್ ಗಳಿವೆ. |
03:00 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡುವಾಗ ನಾವು ಆರ್ಡೀನೊ ವರ್ಶನ್ 1.6.9 ಹೊಂದಿದ್ದೇವೆ. ಈ ವರ್ಶನ್ ಭವಿಷ್ಯದಲ್ಲಿ ಬದಲಾಗಬಹುದು. |
03:10 | ವಿಂಡೋಸ್ ಅಪರೇಟಿಂಗ್ ಸಿಸ್ಟಂಗೆ “Windows for non admin install” ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ. |
03:18 | ಲೀನಕ್ಸ್ ಅಪರೇಟಿಂಗ್ ಸಿಸ್ಟಂಗೆ ಆರ್ಡೀನೊ ಹೇಗೆ ಅಳವಡಿಸಬೇಕು ಎಂದು ನಾನೀಗ ತೋರಿಸುತ್ತೇನೆ. |
03:24 | ನಾನೀಗ Linux 64bit ಮೇಲೆ ಕ್ಲಿಕ್ ಮಾಡುತ್ತೇನೆ. ಏಕೆಂದರೆ ನನ್ನ ಮಶಿನ್ ಆರ್ಕಿಟೆಕ್ಚರ್ 64 ಬಿಟ್ ಆಗಿದೆ. |
03:32 | ನಿಮ್ಮ ಸಿಸ್ಟಂ ಆರ್ಕಿಟೆಕ್ಚರ್ ಆಧರಿಸಿ Linux 32-bit ಅಥವಾ 64-bit ಮೇಲೆ ಕ್ಲಿಕ್ ಮಾಡಿ. |
03:39 | Just Download ಮೇಲೆ ಕ್ಲಿಕ್ ಮಾಡಿ.
ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. Save File ಮೇಲೆ ಕ್ಲಿಕ್ ಮಾಡಿ. |
03:47 | ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ಪೂರ್ಣಗೊಳ್ಳುವ ತನಕ ಕಾಯಿರಿ. |
03:52 | ನನ್ನ Downloads ಫೋಲ್ಡರ್ ನಲ್ಲಿ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಲಭ್ಯ.
ಝಿಪ್ ಫೋಲ್ಡರ್ ನಿಂದ ಫೈಲ್ ಗಳನ್ನು ತೆಗೆಯಿರಿ. |
04:02 | ನಾವೀಗ ಟರ್ಮಿನಲ್ ನಿಂದ ಆರ್ಡೀನೊ ಐ.ಡಿ.ಇ ಗೆ ಚಾಲನೆ ನೀಡೋಣ. |
04:07 | ಟರ್ಮಿನಲ್ ತೆರೆಯಲು CTRL +ALT + T ಒತ್ತಿ. |
04:12 | cd Downloads ಎಂದು ಟೈಪ್ ಮಾಡಿ Downloads ಡೈರೆಕ್ಟರಿಗೆ ಹೋಗಿ. |
04:19 | ಆರ್ಡೀನೊ ಫೋಲ್ಡರ್ ಹೆಸರು ನೋಡಲು ls ಟೈಪ್ ಮಾಡಿ. |
04:23 | ಇಲ್ಲಿ ನನ್ನ ಸಿಸ್ಟಂ ಆರ್ಡೀನೊ 1.6.9 ಅನ್ನು ತೋರಿಸುತ್ತದೆ. |
04:29 | ಈಗ ಡೈರೆಕ್ಟರಿಯನ್ನು ಆರ್ಡುಯಿನೊ 1.6.9 ಗೆ ಬದಲಾಯಿಸಿ.
cd arduino 1.6.9 ಎಂದು ಟೈಪ್ ಮಾಡಿ. |
04:40 | ಲಭ್ಯ ಫೈಲ್ ಗಳ ಪಟ್ಟಿ ನೋಡಲು ls ಎಂದು ಟೈಪ್ ಮಾಡಿ. |
04:46 | ಈ ಫೋಲ್ಡರ್ ನಲ್ಲಿ ನಾವು 'ಆರ್ಡೀನೊ' ಐ.ಡಿ.ಇ ಕಂಪೈಲರ್ ಗಳಿಗೆ ಸಂಬಂಧಿಸಿದ ವಿವಿಧ ಫೈಲ್ ಗಳನ್ನು ಹೊಂದಿದ್ದೇವೆ. ಅವೆಂದರೆ:
ಆರ್ಡೀನೊ ಬ್ಯಾಕೆಂಡ್ ಫೈಲ್ ಗಳು ಮತ್ತು ಕಾನ್ಫಿಗರೇಶನ್ ಫೈಲ್ ಗಳು. |
05:00 | ನಾವೀಗ ಆರ್ಡೀನೊ ಎಕ್ಸಿಕ್ಯೂಟಿಬಲ್ ಫೈಲ್ ಅನ್ನು ರನ್ ಮಾಡೋಣ. ಇದಕ್ಕಾಗಿ dot slash arduino ಎಂದು ಟೈಪ್ ಮಾಡಿ ಮತ್ತು Arduino IDE ಗೆ ಚಾಲನೆ ನೀಡಲು Enter ಒತ್ತಿ. |
05:16 | Arduino IDE ವಿಂಡೋಅನ್ನು ನಾವು ನೋಡಬಹುದು. |
05:20 | ನಾನು ಆರ್ಡೀನೊ ಅನ್ನು ನನ್ನ ಕಂಪ್ಯೂಟರ್ ನ ಯು.ಎಸ್.ಬಿ ಪೋರ್ಟ್ ಗೆ ಸಂಪರ್ಕಿಸಿದ್ದೇನೆ. ನಾವೀಗ ಸಂಪರ್ಕವನ್ನು ಪರೀಕ್ಷಿಸೋಣ. |
05:27 | Tools ಮೆನು ಮೇಲೆ ಕ್ಲಿಕ್ ಮಾಡಿ.
ಆರ್ಡೀನೊ ಯು.ಎನ್.ಒ ಬೋರ್ಡ್ ಅನ್ನು ಈಗಾಗಲೇ ಆಯ್ದುಕೊಳ್ಳಲಾಗಿದೆ ಎಂಬುದನ್ನು ಇದು ತೋರಿಸುತ್ತದೆ. |
05:36 | Port ಮೆನುವಿನಲ್ಲಿ ನಾವು ಪೋರ್ಟ್ ನಂಬರ್ ನೋಡಬಹುದು. |
05:41 | ನಾವೀಗ Arduino IDE ಮುಚ್ಚೋಣ. |
05:45 | File ಮೇಲೆ ಕ್ಲಿಕ್ ಮಾಡಿ ಮತ್ತು ಮುಚ್ಚಿ. |
05:49 | ಆರ್ಡೀನೊವನ್ನು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ ಅಳವಡಿಸಲು ಇರುವ ಇನ್ನೊಂದು ದಾರಿ ಎಂದರೆ ಟರ್ಮಿನಲ್ ನಲ್ಲಿ apt hyphen get ಕಮಾಂಡ್ ಬಳಸುವುದು. |
05:59 | ಕೇಳಿದಾಗ sudo ಪಾಸ್ವರ್ಡ್ ನಮೂದಿಸಿ. |
06:03 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
06:08 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡೀನೊ ಉಪಕರಣ,
ಆರ್ಡೀನೊವಿನ ಗುಣಲಕ್ಷಣಗಳು, ಆರ್ಡೀನೊ ಬೋರ್ಡ್ ನ ಘಟಕಗಳು, |
06:17 | ಮೈಕ್ರೋಕಂಟ್ರೋಲರ್ ಗಳು ಮತ್ತು ಉಬಂಟು ಲೀನಕ್ಸ್ ನಲ್ಲಿ Arduino IDE ಯನ್ನು ಅಳವಡಿಸುವುದನ್ನು ಕಲಿತೆವು. |
06:25 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
06:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆ ಆದಲ್ಲಿ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
06:49 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. |
06:55 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
07:03 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
07:07 | ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. |
07:12 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ. |
07:20 | ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
07:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
07.38 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |