Arduino/C2/Display-counter-using-Arduino/Kannada
Time | Narration
|
00:01 | ಆರ್ಡೀನೊ ಬಳಸಿ ಡಿಸ್ಪ್ಲೇ ಕೌಂಟರ್ ಸ್ಥಾಪಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನುಸರಿಸಲು ನೀವು:
ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. |
00:34 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡೀನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ. |
00:47 | ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ, ಆರ್ಡೀನೊ ಮತ್ತು ಎಲ್.ಸಿ.ಡಿ ಬಳಸಿ ನಾವು ಸರ್ಕಿಟ್ ಒಂದನ್ನು ರಚಿಸಿದ್ದೆವು.
ಈ ಟ್ಯುಟೋರಿಯಲ್ ನಲ್ಲಿ ಅದೇ ಸರ್ಕಿಟ್ ಅನ್ನು ಬಳಸಲಿದ್ದೇವೆ. |
01:00 | ನಾವಿಲ್ಲಿ ಪುಶ್-ಬಟನ್ ಸೇರಿಸಲಿದ್ದೇವೆ ಮತ್ತು ಸರಳವಾದ ಕೌಂಟರ್ ರಚಿಸಲಿದ್ದೇವೆ. |
01:06 | ಕಳೆದ ಟ್ಯುಟೋರಿಯಲ್ ನಲ್ಲಿ ನಾವು ಪುಶ್-ಬಟನ್ ನ ಕಾರ್ಯನಿರ್ವಹಣೆಯ ಕುರಿತು ಕಲಿತಿದ್ದೆವು. |
01:12 | ನಾವೀಗ ಕನೆಕ್ಷನ್ ಸರ್ಕಿಟ್ ನ ವಿವರಗಳನ್ನು ಕಲಿಯೋಣ. |
01:17 | ಪುಶ್-ಬಟನ್ ಅನ್ನು 100 ohm ರೆಸಿಸ್ಟರ್ ಗೆ ಸಂಪರ್ಕಿಸಲಾಗಿದೆ. |
01:22 | ಪುಶ್-ಬಟನ್ ಅನ್ನು ಪಿನ್ ಸಂಖ್ಯೆ 7 ಕ್ಕೆ ಸಂಪರ್ಕಿಸಲಾಗುತ್ತದೆ ಮತ್ತು 100 ohm ರೆಸಿಸ್ಟರ್ ಅನ್ನು ಗ್ರೌಂಡ್ ಗೆ ಸಂಪರ್ಕಿಸಲಾಗುತ್ತದೆ. |
01:31 | ಇತರ ಎಲ್ಲಾ ಸಂಪರ್ಕಗಳು ನಮ್ಮ ಹಿಂದಿನ ಪ್ರಯೋಗದಲ್ಲಿ ಇದ್ದಂತೆಯೇ ಇರುತ್ತವೆ. |
01:37 | ಇದು, ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ ಸಂಪರ್ಕದ ಲೈವ್ ಸೆಟಪ್ ಆಗಿದೆ. |
01:44 | ನಾವೀಗ Arduino IDE ನಲ್ಲಿ ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. ನಾವೀಗ Arduino IDE ಯತ್ತ ಸಾಗೋಣ. |
01:54 | ಮೊದಲಿಗೆ ನಾವು Liquid crystal library ಅನ್ನು ಸೇರಿಸಬೇಕು. |
01:59 | ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
02:02 | ನಾನು LiquidCrystal ಪ್ರಕಾರದ ಮಾರ್ಪಡಿಸಿದ lcd ಯನ್ನು ಇನಿಶಿಯಲೈಸ್ ಮಾಡಿದ್ದೇನೆ. |
02:08 | ಇಲ್ಲಿ ಪಿನ್ ಸಂಖ್ಯೆ 12 ಅನ್ನು Register Select ಆಗಿ ಮತ್ತು ಪಿನ್ ಸಂಖ್ಯೆ 11 ಅನ್ನು Enable ಆಗಿ ಇನಿಶಿಯಲೈಸ್ ಮಾಡಲಾಗಿದೆ. |
02:19 | ನಂತರದ 4 ಪ್ಯಾರಾಮೀಟರ್ ಗಳು ಎಲ್.ಸಿ.ಡಿ ಯ ಡೇಟಾ ಲೈನ್ ಗಳನ್ನು ಪ್ರತಿನಿಧಿಸುತ್ತವೆ. |
02:25 | void setup() ಫಂಕ್ಷನ್ ನಲ್ಲಿ, ಇಲ್ಲಿ ತೋರಿಸಿರುವಂತೆ lcd.begin 16 comma 2 ಎಂದು ಟೈಪ್ ಮಾಡಿ.
ಈ ಕಮಾಂಡ್, ಎಲ್.ಸಿ.ಡಿ ಯನ್ನು ಸಾಲುಗಳು ಮತ್ತು ಲಂಬ ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡುತ್ತದೆ. |
02:41 | ನಂತರ ನಾವು ಪಿನ್ ಸಂಖ್ಯೆ 7 ಅನ್ನು INPUT ಆಗಿ ಸೆಟಪ್ ಮಾಡೋಣ. ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
02:49 | ಅಲ್ಲದೆ ನಾವು ಪಿನ್ ಸಂಖ್ಯೆಯನ್ನು pbutton ನ ಮಾರ್ಪಾಡು ಆಗಿ ಶೇಖರಿಸಬಹುದು.
ಇಲ್ಲಿ ತೋರಿಸಿರುವಂತೆ ನಾವು pbutton ನ ಮಾರ್ಪಾಡನ್ನು ನಿರೂಪಿಸೋಣ. |
03:01 | ನಾವೀಗ void loop() ಗೆ ಕೋಡ್ ಬರೆಯೋಣ.
ಪುಶ್ ಬಟನ್ ಒತ್ತಿದಾಗ, ಎಲ್.ಸಿ.ಡಿ ಯಲ್ಲಿ ಒಂದು ಕೌಂಟ್ ಹೆಚ್ಚುತ್ತದೆ. |
03:11 | ಪುಶ್ ಬಟನ್ ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಸರಳವಾಗಿ 'if' ಸ್ಟೇಟ್ಮೆಂಟ್ ಅನ್ನು ಬರೆಯುತ್ತೇವೆ. |
03:19 | ಕೌಂಟ್ ಅನ್ನು ಡಿಸ್ಪ್ಲೇ ಮಾಡುವ ಮೊದಲು, ಬಟನ್ ನ ಸ್ಥಿತಿಯನ್ನು ಪರೀಕ್ಷಿಸೋಣ. |
03:25 | ಈ ಕಮಾಂಡ್, ಎಲ್.ಸಿ.ಡಿ ಯಲ್ಲಿ ಕರ್ಸರ್ ಸ್ಥಾನವನ್ನು ಸೆಟ್ ಮಾಡುತ್ತದೆ.
lcd.print, ಸಂದೇಶವನ್ನು ಪ್ರಿಂಟ್ ಮಾಡುತ್ತದೆ. |
03:35 | ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಿದ್ದೇವೆ. ನಾನೀಗ ಪುಶ್-ಬಟನ್ ಒತ್ತುತ್ತೇನೆ. |
03:43 | ನಾವಿಲ್ಲಿ ಎಲ್.ಸಿ.ಡಿ ಯಲ್ಲಿ “button pressed” ಸಂದೇಶವನ್ನು ನೋಡಬಹುದು.
ಪುಶ್-ಬಟನ್ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದು ಇದು ತೋರಿಸುತ್ತದೆ. |
03:54 | ನಂತರ ನಾವು ಕೌಂಟರ್ ಅನ್ನು ಸೆಟ್ ಮಾಡಲು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ. |
03:58 | ನಮಗೆ ಕೌಂಟರ್ ಗೆ ಒಂದು ವೇರಿಯೇಬಲ್ ಬೇಕು. ಈಗ ನಾವು ವೇರಿಯೇಬಲ್ ಕೌಂಟ್ ಅನ್ನು ಶೂನ್ಯಕ್ಕೆ ಇನಿಶಿಯಲೈಸ್ ಮಾಡುತ್ತೇವೆ. |
04:08 | ಇಲ್ಲಿ ತೋರಿಸಿರುವಂತೆ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಮಾರ್ಪಡಿಸಿ.
ಪ್ರತಿ ಬಾರಿ ಬಟನ್ ಅನ್ನು ಒತ್ತಿದಾಗ count++, ಒಂದರಂತೆ ಕೌಂಟ್ ಅನ್ನು ಹೆಚ್ಚಿಸುತ್ತದೆ. |
04:21 | ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. ಈಗ ನಾನು ಪುಶ್ ಬಟನ್ ಅನ್ನು ಒತ್ತುತ್ತೇನೆ. |
04:29 | ಇದು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಬೇರೆಯೇ ಕೌಂಟ್ ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು. ಇದು ಏಕೆ? |
04:37 | ಏಕೆಂದರೆ, ನಾವು ಒತ್ತುವ ಬಟನ್ ನ ಸ್ಥಿತಿಯನ್ನು ನಿರೂಪಿಸಿದ್ದೇವೆ.
ಆದರೆ ನಾವು ರಿಲೀಸ್ ಮಾಡುವ ಬಟನ್ ನ ಸ್ಥಿತಿಯನ್ನು ಉಲ್ಲೇಖಿಸಿಲ್ಲ. |
04:46 | ಈ ಔಟ್ಪುಟ್, ಬಟನ್ ಒತ್ತಿದ ಸಮಯವನ್ನು ಆಧರಿಸಿ ಹೆಚ್ಚಿಸಲಾದ ಸಂಖ್ಯೆಯನ್ನು ತೋರಿಸುತ್ತದೆ. |
04:52 | ಹೀಗಾಗಿ ನಾವು ಇಲ್ಲಿ ತೋರಿಸಿರುವಂತೆ 'while' ಸ್ಟೇಟ್ಮೆಂಟ್ ಬರೆಯುತ್ತೇವೆ. |
04:57 | ಪುಶ್ ಬಟನ್ ಒತ್ತಿದ ಸ್ಥಿತಿಯಲ್ಲಿರುವಾಗ ಇದು ಕೌಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ.
ಅಂದರೆ ಪಿನ್ 7 HIGH ಮೋಡ್ ನಲ್ಲಿದೆ. |
05:07 | ನೀವು ಬಟನ್ ಅನ್ನು ರಿಲೀಸ್ ಮಾಡಿದಾಗ, ಸ್ಥಿತಿಯು LOW ಆಗಿರುತ್ತದೆ ಮತ್ತು ಇದು 'while' ಲೂಪ್ ನಿಂದ ಹೊರಬರುತ್ತದೆ. |
05:14 | ನಾನೀಗ ಪ್ರೋಗ್ರಾಂ ಅನ್ನು ವಿವರಿಸುತ್ತೇನೆ. |
05:17 | ಈ ಪ್ರೋಗ್ರಾಂ, ಎಲ್.ಸಿ.ಡಿ ಯ ಇನಿಶಿಯಲೈಸೇಶನ್ ಮೂಲಕ ಪ್ರಾರಂಭವಾಗುತ್ತದೆ. ನಾವು ವೇರಿಯೇಬಲ್ pbutton ಮತ್ತು ಕೌಂಟ್ ಹೊಂದಿದ್ದೇವೆ. |
05:26 | void setup() ಫಂಕ್ಷನ್ ನಲ್ಲಿ, ನಾವು ಎಲ್.ಸಿ.ಡಿ ಯನ್ನು 16 ಲಂಬ ಸಾಲುಗಳು ಮತ್ತು 2 ಸಾಲುಗಳೊಂದಿಗೆ ಇನಿಶಿಯಲೈಸ್ ಮಾಡಿದ್ದೇವೆ.
ಮತ್ತು ಪಿನ್ ಸಂಖ್ಯೆ 7 ಕ್ಕೆ pinMode ಇನ್ಪುಟ್ ಆಗಿರುತ್ತದೆ. |
05:42 | void loop() ಫಂಕ್ಷನ್ ನಲ್ಲಿ, ಪುಶ್ ಬಟನ್ HIGH ಆಗಿದೆಯೇ ಅಥವಾ ಇಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ. |
05:49 | ಪುಶ್ ಬಟನ್ ಒತ್ತಿದಾಗ, ಕರ್ಸರ್ ಅನ್ನು zero comma zero ಸ್ಥಾನಕ್ಕೆ ಸೆಟ್ ಮಾಡಲಾಗುತ್ತದೆ. |
05:56 | lcd.print ಸ್ಟೇಟ್ಮೆಂಟ್, ಕೌಂಟ್ ಮೌಲ್ಯವನ್ನು ಪ್ರಿಂಟ್ ಮಾಡುತ್ತದೆ.
ಆರಂಭದಲ್ಲಿ countಶೂನ್ಯವಾಗಿರುತ್ತದೆ. Count plus plus ಅಂದರೆ 1 ಆಗುತ್ತದೆ. |
06:09 | ಬಟನ್ ಅನ್ನು ರಿಲೀಸ್ ಮಾಡಿದಾಗ, ಇದು while ಲೂಪ್ ಅನ್ನು ಒಡೆಯುತ್ತದೆ ಮತ್ತು ಲೂಪ್ ನಿಂದ ಹೊರಬರುತ್ತದೆ. |
06:15 | ಇನ್ನೊಮ್ಮೆ ನೀವು ಬಟನ್ ಒತ್ತಿದರೆ, ಮುಂದಿನ ಪುನರಾವರ್ತನೆ ಪ್ರಾರಂಭವಾಗುತ್ತದೆ ಮತ್ತು ಇದು ಕೌಂಟ್ ಅನ್ನು ಹೆಚ್ಚಿಸುತ್ತದೆ. |
06:23 | ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ. |
06:27 | ನಾನೀಗ ಬಟನ್ ಅನ್ನು ಒಮ್ಮೆ ಒತ್ತಿ ರಿಲೀಸ್ ಮಾಡುತ್ತೇನೆ. |
06:32 | ಇನ್ನೊಮ್ಮೆ ಬಟನ್ ಒತ್ತಿ ರಿಲೀಸ್ ಮಾಡುತ್ತೇನೆ. ಬಟನ್ ಒತ್ತಿದಾಗಲೆಲ್ಲ ಕೌಂಟ್ ಹೆಚ್ಚುವುದನ್ನು ನೀವು ನೋಡಬಹುದು. |
06:42 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
06:47 | ಈ ಟ್ಯುಟೋರಿಯಲ್ ನಲ್ಲಿ ನಾವು:
ಎಲ್.ಸಿ.ಡಿ ಮತ್ತು ಪುಶ್-ಬಟನ್ ಅನ್ನು ಆರ್ಡೀನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಪುಶ್ ಬಟನ್ ಒತ್ತಿದಾಗಲೆಲ್ಲ ಕೌಂಡ್ ಅನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು. |
07:03 | ಈ ಅಸೈನ್ಮೆಂಟ್ ಪೂರ್ಣಗೊಳಿಸಿ.
ಕೌಂಟ್ ಅನ್ನು 2, 4, 6 ಹೀಗೆ ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ. ಮತ್ತು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗುವ ಕೌಂಟ್ ಅನ್ನು ಗಮನಿಸಿ. |
07:21 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
07:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:38 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
07:42 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
07.53 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |