PHP-and-MySQL/C4/User-Password-Change-Part-2/Kannada

From Script | Spoken-Tutorial
Revision as of 11:44, 25 June 2020 by Sandhya.np14 (Talk | contribs)

Jump to: navigation, search
Time Narration
00:00 Change Password ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ. ಹಿಂದಿನದರಲ್ಲಿ ನಾವು ಫಾರ್ಮ್ ಗಳು ಸಬ್ಮಿಟ್ ಆಗಿವೆಯೇ ಎಂದು ಪರೀಕ್ಷಿಸುವುದನ್ನು ಕಲಿತಿದ್ದೇವೆ.
00:09 ಇಲ್ಲಿ ನಾವು ನಮ್ಮ ಡಾಟಾ ವ್ಯಾಲ್ಯುಗಳನ್ನು ಪಡೆದಿದ್ದೇವೆ.
00:13 ದಯವಿಟ್ಟು ನೆನಪಿಡಿ, ನಮ್ಮ ಡಾಟಾಬೇಸ್ ನಲ್ಲಿ, ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ.
00:18 ಹಾಗಾಗಿ ನಾನು ಈ ಫೀಲ್ಡ್ ಗಳು ಒಳಬರುತ್ತಿದ್ದಂತೆ, ಅವುಗಳನ್ನು md 5 hash ಗೆ ಎನ್ಕ್ರಿಪ್ಟ್ ಮಾಡುವೆನು.
00:27 ನೀವು ಬ್ರ್ಯಾಕೆಟ್ ಗಳನ್ನು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ.
00:35 ನಾನು ಇಲ್ಲಿ ಗುರುತು ಮಾಡಿರುವುದು ಪ್ಯಾರಮೀಟರ್ ಗಳಾಗಿವೆ.
00:38 ಇಲ್ಲಿ ನಮ್ಮ"md5" ಎನ್ಕ್ರಿಪ್ಟ್ ಆಗಿರುವ ಪಾಸ್ವರ್ಡ್ ಗಳನ್ನು ಪಡೆಯುವೆವು.
00:43 ಈಗ ಈ ಫೀಲ್ಡ್ ಅಸ್ತಿತ್ವದಲ್ಲಿದೆಯೇ ಅಥವ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕು.
00:51 ನಾವು ನಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಿದ ತಕ್ಷಣ, ಅಲ್ಲಿ ಏನು ಆಗದೇ ಇರುವುದನ್ನು ನೋಡಿರುವೆವು.
00:57 ಮೊದಲಿಗೆ ನಾನು “check password against db” ಎಂದು ಕಮೆಂಟ್ ಮಾಡುವೆನು. ನಂತರ ನಾವು ನಮ್ಮ ಡಾಟಾಬೇಸ್ ಗೆ ಸಂಪರ್ಕವನ್ನು ಪಡೆಯಬೇಕು.
01:08 login ಪೇಜ್ ನಂತಹ ಸುಮಾರು ಪೇಜ್ ಗಳಲ್ಲಿ ನಾವು ಈಗಾಗಲೇ ಡಾಟಾಬೇಸ್ ಗೆ ಸಂಪರ್ಕಿಸಿದ್ದೇವೆ.
01:15 ನೀವು ಇದನ್ನು ಬೇರೆಯೆ ಫೈಲ್ ನಲ್ಲಿ ಇಟ್ಟು, ಒಂದು ಬಾರಿ ಲಾಗಿನ್ ಸ್ಕ್ರಿಪ್ಟ್ ನೊಂದಿಗೆ ಅಂದರೆ include "connect .php” ಎಂದು ಟೈಪ್ ಮಾಡಿದರೆ, ಇದನ್ನೆಲ್ಲ ಟೈಪ್ ಮಾಡುತ್ತಿರುವ ಅವಶ್ಯಕತೆಯಿರುವುದಿಲ್ಲ.
01:29 ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ, ನಾನು ಪದೆ ಪದೆ ಇದನ್ನು ಟೈಪ್ ಮಾಡುತ್ತಿರುತ್ತೇನೆ ಏಕೆಂದರೆ ಇದೊಂದು ಕಲಿಕೆಯ ಉತ್ತಮ ವಿಧಾನವಾಗಿದೆ.
01:35 ಇಲ್ಲಿ - "$connect = mysql_connect()" ಎಂದು ಟೈಪ್ ಮಾಡೋಣ.
01:40 ಮತ್ತು ನಾವು ನನ್ನ username ಅನ್ನು "root" ಎಂದೂ, ಪಾಸ್ವರ್ಡ್ ಖಾಲಿಯಾಗಿರುವಂತೆಯೇ ನಮ್ಮ "local host" ಡಾಟಾಬೇಸ್ ಅನ್ನು ಸಂಪರ್ಕಿಸುತ್ತಿದ್ದೇವೆ. ನಾನು ನನ್ನ ಡಾಟಾಬೇಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಹೊರಟಿದ್ದೇನೆ.
01:50 ಅದು ಇಲ್ಲಿ ಇರುವ “phplogin” ಆಗಿದೆ. ಈಗ ಅಲ್ಲಿ ಹೋದರೆ, ನೀವು ಅದನ್ನು ನೋಡಬಹುದು.
01:58 ನಮ್ಮ table "users" ಎಂದಾಗಿದೆ ಮತ್ತು ಇದನ್ನು ನಂತರ ಬಳಸುವೆವು.
02:01 ನಂತರ ನಮ್ಮ ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಲು ಒಂದು ಕ್ವೆರಿಯನ್ನು ರಚಿಸುವೆವು.
02:05 ಅದಕ್ಕಾಗಿ ನಾನು “ $query get” equal to mysql.......... "mysql_query" ಎಂದು ಟೈಪ್ ಮಾಡುವೆನು. ಇಲ್ಲಿ "SELECT password" ಎಂದು ಟೈಪ್ ಮಾಡುವೆನು. ನಾವು "users" ಡಾಟಾಬೇಸ್ ನಿಂದ ಪಾಸ್ವರ್ಡ್ ಅನ್ನು ಖಚಿತಪಡಿಸಿಕೊಳ್ಳಬೇಕು.
02:26 ನೀವು ಇಲ್ಲಿ ಇದನ್ನು ನೋಡಬಹುದು. ಇದು "users" ಟೇಬಲ್ ಆಗಿದೆ.
02:31 ನಂತರ “WHERE username is equal to $user” ಎಂದು ಟೈಪ್ ಮಾಡುವೆನು. ಇದು ನಮ್ಮ ಬಳಕೆದಾರರ ಯೂಸರ್ ನೇಮ್ ಅನ್ನು ಹಿಡಿದಿಟ್ಟುಕೊಳ್ಳುವ ಸೆಷನ್ ವೇರಿಯೇಬಲ್ ಆಗಿದೆ.
02:39 ಈಗ ಇಲ್ಲಿ ಈ ಟೇಬಲ್ ನಿಂದ, ನಮ್ಮ ಹ್ಯಾಶ್ ಆಗಿರುವ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. "username" ಸೆಷನ್ ನೇಮ್ ಗೆ ಸಮವಾಗಿದೆ, ಅಂದರೆ ಇದು ಇಲ್ಲಿ "Alex" ಗೆ ಸಮವಾಗಿದೆ.
02:49 ಹಾಗಾಗಿ ಇದೊಂದು ಯಶಸ್ವಿ ಕ್ವೆರಿಯಾಗಬೇಕು. ಕೊನೆಯಲ್ಲಿ ನೀವು or die "Query didn’t work”" ಎಂದು ಟೈಪ್ ಮಾಡಬಹುದು. ಇದು ಎರರ್ ಮೆಸೇಜ್ ಆಗಿರುತ್ತದೆ.
02:59 ನೀವು ಈ ಎರರ್ ಮೆಸೇಜ್ ಗಳನ್ನು ನಿಮ್ಮ ಕಲ್ಪನೆಗೆ ತಕ್ಕಂತೆ, ನಿಮಗೆ ಬೇಕಾದ ಹಾಗೆ ಟೈಪ್ ಮಾಡಿಕೊಳ್ಳಬಹುದು.
03:08 ಇಲ್ಲಿಯೂ ಕೂಡ, ನೀವು or die ಎಂದು ಟೈಪ್ ಮಾಡಿ, ನಿಮ್ಮ ಸ್ವಂತ ಎರರ್ ಮೆಸೇಜ್ ಅನ್ನು ಇಲ್ಲಿ ಟೈಪ್ ಮಾಡಬಹುದು. ಆದರೆ ಈಗ ಸಮಯವನ್ನು ಉಳಿಸಲು ನಾನು ಏನನ್ನು ಟೈಪ್ ಮಾಡುತ್ತಿಲ್ಲ.
03:17 ಮೊದಲು ನಾವು while ಲೂಪ್ ಅನ್ನು ಬಳಸಿ, ಡಾಟಾಬೇಸ್ ನಲ್ಲಿ ಪ್ರತಿ ರೆಕಾರ್ಡ್ ಅನ್ನು ಲೂಪ್ ಮಾಡುತ್ತಿದ್ದೇವೆ. ಈಗ ಸ್ವಲ್ಪ ವಿಭಿನ್ನವಾಗಿ ಮಾಡೋಣ.
03:25 ನಾನು ಈ ವಿಧಾನದ ಕುರಿತು ಯಾರೋ ಕಮೆಂಟ್ ಪೋಸ್ಟ್ ಮಾಡಿದ್ದರಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕಾಗಿ ನಾನು "$row = mysql_fetch_associative" ಎಂದೂ, ಇಲ್ಲಿ "$query get" ಎಂದೂ ಟೈಪ್ ಮಾಡುವೆನು.
03:41 ಈಗ ನಾವು “$old password db” ಅನ್ನು ಸೆಟ್ ಮಾಡುವೆವು. ಇದು ಹೊಸವೇರಿಯೇಬಲ್ ಹೆಸರಾಗಿದೆ. ಇದನ್ನು ಸಬ್ಮಿಟ್ ಮಾಡಿದ '$old password' ಎಂದು ಗೊಂದಲ ಮಾಡಿಕೊಳ್ಳಬೇಡಿ.
03:50 ನಮ್ಮ ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ನಮ್ಮ '$row' ಗೆ ಸಮವಾಗಿರುತ್ತದೆ.
03:55 ನೆನಪಿಡಿ, ಇದು ಒಂದು ಅರೇ ಯನ್ನು ರಚಿಸುತ್ತದೆ.
03:58 ಇಲ್ಲಿ ವ್ಯಾಲ್ಯುವು "password" ಎಂದಿರಬೇಕು. ಏಕೆಂದರೆ, ನಮ್ಮ ಡಾಟಾಬೇಸ್ ನಲ್ಲಿ ಇದು “password” ಆಗಿದೆ. ನೀವು ಲೇಬಲ್ ಗಳನ್ನು ಬಳಸಬೇಕು.
04:06 ಇಲ್ಲಿಂದ ನಾವು ಪಾಸ್ವರ್ಡ್ ಗಳನ್ನು ಪರೀಕ್ಷಿಸುವೆವು.
04:08 ನಮ್ಮ ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸಪಾಸ್ವರ್ಡ್ ಗಳನ್ನು ಪರೀಕ್ಷಿಸಲು ನಾವು ಕೇವಲ if ಸ್ಟೇಟ್ಮೆಂಟ್ ಗಳನ್ನು ಬಳಸುವೆವು.
04:16 ಅದಕ್ಕಾಗಿ ನಾವು - if 'old password' is equal to the 'old passworddb' (ಡಾಟಾಬೇಸ್ ನಲ್ಲಿರುವ ಪಾಸ್ವರ್ಡ್) ಎಂದು ಟೈಪ್ ಮಾಡೋಣ.
04:25 ಇವೆರಡೂ 'md5 hash' ಗಳಾಗಿವೆ. ಏಕೆಂದರೆ, ನಾವು ಅವುಗಳನ್ನು md5 ಹ್ಯಾಶ್ ಗೆ ಮೊದಲೇ ಪರಿವರ್ತಿಸಿದ್ದೇವೆ.
04:30 ಅವುಗಳು ಸಮವಾಗಿದ್ದರೆ ನಾವು ಒಂದು ಕೋಡ್ ಬ್ಲಾಕ್ ಅನ್ನು ರನ್ ಮಾಡುವೆವು. ಇಲ್ಲವಾದಲ್ಲಿ, ನಾವು ಪೇಜ್ ಅನ್ನು ಕಿಲ್ ಮಾಡಿ, "Old password doesn’t match! " ಎಂದು ಟೈಪ್ ಮಾಡುವೆವು.
04:44 ಇಲ್ಲಿ ನಾವು ಮೊದಲ ಹಂತದ ವ್ಯಾಲಿಡೇಶನ್ ಮುಗಿಸಿರುವೆವು ಎಂದು ಭಾವಿಸಿ, ನಾವು ಹಳೆಯ ಪಾಸ್ವರ್ಡ್ ಮತ್ತು ಡಾಟಾಬೇಸ್ ನಲ್ಲಿರುವ ಹಳೆಯ ಪಾಸ್ವರ್ಡ್ ಅನ್ನು ಪರೀಕ್ಷಿಸಿದ್ದೇವೆ. ಈಗ ನಾವು ನಮ್ಮ ಎರಡು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸಬೇಕು.
04:57 ಇದನ್ನು ಸರಳವಾಗಿ if '$new password' is equal to '$repeat new password' ಎಂದು ಟೈಪ್ ಮಾಡಿ, ಇಲ್ಲಿ ಒಂದು ಕೋಡ್ ಬ್ಲಾಕ್ ಅನ್ನು ಬರೆಯುವೆನು. ಇಲ್ಲವಾದಲ್ಲಿ, ಮತ್ತೆ ಪೇಜ್ ಅನ್ನು ಕೊನೆಗೊಳಿಸಿ " New passwords don’t match! " ಎಂಬ ಮೆಸೇಜ್ ಅನ್ನು ಟೈಪ್ ಮಾಡುವೆನು.
05:20 ಇಲ್ಲಿ "success" ಮತ್ತು "change password in database" ಎಂದು ಕಮೆಂಟ್ ಮಾಡುವೆನು.
05:31 ಈಗ "success" ಎಂದು ಎಕೋ ಮಾಡುವೆನು ಮತ್ತು ನನ್ನ ಪೇಜ್ ಗೆ ಹಿಂದಿರುಗುವೆನು.
05:38 ನಾನು ಪಾಸ್ವರ್ಡ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ, ಹೀಗೆ ಟೈಪ್ ಮಾಡುವೆನು.
05:41 new password ಅನ್ನು "abc" ಎಂದು ಟೈಪ್ ಮಾಡಿ, Change password ಎಂದು ಕ್ಲಿಕ್ ಮಾಡಿದರೆ, ನಾವು "Old password doesn’t match!" ಎಂಬ ಸಂದೇಶವನ್ನು ಪಡೆಯುವೆವು.
05:49 ಈಗ ನನ್ನ ಹಳೆಯ ಪಾಸ್ವರ್ಡ್ ಅನ್ನು "abc" ಎಂದು ಸರಿಯಾಗಿ ಟೈಪ್ ಮಾಡಿ, ನಂತರ ಹೊಸ ಪಾಸ್ವರ್ಡ್ ಅನ್ನು "123" ಎಂದು, ಮತ್ತು ಇಲ್ಲಿ ತಪ್ಪಾಗಿ ಏನನ್ನೋ ಟೈಪ್ ಮಾಡುವೆನು. ಓಹ್ ! "Old password doesn’t match!"ಎಂದೇ ಪಡೆಯುತ್ತಿದ್ದೇವೆ.
06:00 ಈಗ ಹಿಂದಿರುಗಿ ಕೋಡ್ ಅನ್ನು ಪರೀಕ್ಷಿಸೋಣ. Old password....row - password.... 'query get'...
06:13 ಈಗ ಡಿಬಗ್ ಮಾಡಲು ನಾವು echo '$old password db' ಕೊನೆಯಲ್ಲಿ ಒಂದು break ಮತ್ತು echo 'old password' ಕೊನೆಯಲ್ಲಿ ಇನ್ನೊಂದು ಬ್ರೇಕ್ ಎಂದು ಟೈಪ್ ಮಾಡೋಣ.
06:31 ಈಗ ಮತ್ತೆ ಸ್ಕ್ರಿಪ್ಟ್ ಅನ್ನು ರನ್ ಮಾಡೋಣ. old password ಇದು "abc" ಎಂದಿರಲಿ. new password ಇದು "123" ಎಂದಿರಲಿ. ಮತ್ತು, ಇಲ್ಲಿ ಯಾವುದೋ ಒಂದಷ್ಟು ಅಕ್ಷರಗಳಿರಲಿ.
06:44 ಈಗ ನಾನು ಇವುಗಳನ್ನು ಹೋಲಿಕೆ ಮಾಡುವೆನು. ಅವು ಒಂದೇ ರೀತಿಯಾಗಿ ಕಾಣುತ್ತಿವೆ. ಆದರೆ ಇಲ್ಲಿ ಒಂದು ಸಣ್ಣ ಸಮಸ್ಯೆ ಇರಬಹುದು.
06:50 ಕೋಡ್ ಅನ್ನು ಇನ್ನೊಮ್ಮೆ ಪರೀಕ್ಷಿಸೋಣ. ಸ್ಪೆಲ್ಲಿಂಗ್ ಅನ್ನು ನೋಡೋಣ.
07:15 ನನಗೆ ಸಮಸ್ಯೆ ತಿಳಿಯಿತು. ಡಾಟಾಬೇಸ್ ಗೆ ಹಿಂದಿರುಗಿದರೆ, ನಾನು ಈ ವ್ಯಾಲ್ಯುವನ್ನು ಸೇರಿಸುವಾಗ, ಕೊನೆಯಲ್ಲಿ ಒಂದು ಹೆಚ್ಚಿನ ಸ್ಪೇಸ್ ಅನ್ನು ಸೇರಿಸಿದ್ದೇನೆ. ಇದು ನೀಲಿ ಬಣ್ಣದಲ್ಲಿ ಹೈಲೈಟ್ ಆಗಿರುವುದನ್ನು ನೋಡಬಹುದು. ನಾನು ಇದನ್ನು ತೆಗೆದುಬಿಟ್ಟು, ನನ್ನ ಪೇಜ್ ಗೆ ಹಿಂದಿರುಗುವೆನು.
07:33 ಈಗ ನಾನು ಇನ್ನೊಮ್ಮೆ ಲಾಗಿನ್ ಆಗುವೆನು. ಬೇಗ ನನ್ನ ಪಾಸ್ವರ್ಡ್ ಅನ್ನು ಬದಲಿಸುವೆನು. ಹಳೆಯ ಪಾಸ್ವರ್ಡ್ ಅನ್ನು ಸರಿಯಾಗಿಟ್ಟು, ಹೊಸ ಪಾಸ್ವರ್ಡ್ ಗಳಿಗೆ ಬೇರೆ ಬೇರೆ ಅಕ್ಷರಗಳನ್ನು ಟೈಪ್ ಮಾಡುವೆನು.
07:45 ಇಲ್ಲಿ ಎರಡೂ ಹೊಸ ಪಾಸ್ವರ್ಡ್ ಗಳೂ ಹೋಲಿಕೆಯಾಗುತ್ತಿಲ್ಲವೆಂದು ನೀವು ನೋಡಬಹುದು.
07:49 ನಾವು ಇದನ್ನು ಈಗಾಗಲೇ ಎಕೋ ಮಾಡಿದ್ದೇವೆ. ಈಗ ಇದನ್ನು ಅಳಿಸಬಹುದು.
07:53 ಇಲ್ಲಿ ಪಾಸ್ವರ್ಡ್ ಗಳು ಹೋಲಿಕೆಯಾಗುವವು ಎಂದು ಭಾವಿಸಿ, ಇಲ್ಲಿ success ಎಂಬ ಮೆಸೇಜ್ ಅನ್ನು ಎಕೋ ಮಾಡೋಣ.
07:58 ಇದನ್ನು ಅಳಿಸಿಬಿಡೋಣ. ನಾನು ಡಿಬಗ್ ಮಾಡಲು ಅದನ್ನು ಹಾಕಿದ್ದೆ.
08:02 ಈಗ ಇಲ್ಲಿ old password ಅನ್ನು ಟೈಪ್ ಮಾಡುವೆನು. ನನ್ನ new password ಗಳನ್ನು 123 ಮತ್ತು 123 ಎಂದು ಟೈಪ್ ಮಾಡಿ, Change password ಅನ್ನು ಕ್ಲಿಕ್ ಮಾಡಿದರೆ, ನಾವು success ಎಂಬ ಮೆಸೇಜ್ ಅನ್ನು ಪಡೆದಿದ್ದೇವೆ.
08:10 ಮಧ್ಯದಲ್ಲಿ ಸ್ವಲ್ಪ ತಪ್ಪಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ.
08:18 ಈ ಟ್ಯುಟೋರಿಯಲ್ ನ ಮೂರನೇ ಭಾಗದಲ್ಲಿ, ನಾವು ಬಳಕೆದಾರರ ಪಾಸ್ವರ್ಡ್ ಅನ್ನು ಅಪ್ಡೇಟ್ ಮಾಡುವುದರೊಂದಿಗೆ ಮುಂದುವರಿಸೋಣ ಮತ್ತು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳೋಣ.
08:29 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14