PHP-and-MySQL/C4/User-Password-Change-Part-3/Kannada
From Script | Spoken-Tutorial
Revision as of 11:59, 18 June 2020 by Sandhya.np14 (Talk | contribs)
Time | Narration |
00:03 | ಇದು Change password ಟ್ಯುಟೋರಿಯಲ್ ನ ಮೂರನೇ ಭಾಗವಾಗಿದೆ. ಈ ಭಾಗದಲ್ಲಿ ನಾವು, ಡಾಟಾಬೇಸ್ ನಲ್ಲಿ ಪಾಸ್ವರ್ಡ್ ಅನ್ನು ಬದಲಿಸಲಿದ್ದೇವೆ. |
00:11 | ಇಲ್ಲಿ ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಸಾಧಿಸಿದ್ದೇ ವೆ. |
00:14 | ನಾವು ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ, ಏಕೆಂದರೆ ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ. |
00:23 | ಈಗ ನಾನು “$query change” ಎನ್ನುವ ಹೊಸ ಕ್ವೈರಿಯನ್ನು ರಚಿಸುವೆನು ಮತ್ತು ಇದು “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ. |
00:30 | ಇದು ಒಂದು ಹೊಸ ಕೋಡ್ ಆಗಿದೆ. ಹಾಗಾಗಿ ನೀವು ಸುಲಭವಾಗಿ ನೋಡುವಂತೆ ಇರಲು, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ. |
00:36 | ಇದು “UPDATE” ಆಗಿದೆ.ಹಾಗಾಗಿ ನಾನು ಇಲ್ಲಿ UPDATE users ಎಂದು ಟೈಪ್ ಮಾಡುವೆನು – ಅಂದರೆ ಇದು ನಮ್ಮ ಟೇಬಲ್ "users" ಅನ್ನು ಅಪ್ಡೇಟ್ ಮಾಡುತ್ತದೆ. |
00:44 | ನಾನು SET password equal to '$new password' ಎಂದು ಟೈಪ್ ಮಾಡುವೆನು. |
00:51 | ನಾನು ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ. |
00:56 | ನಂತರ ನಾನು WHERE username is equal to the '$user' ಟೈಪ್ ಮಾಡುವೆನು, ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ. |
01:03 | ಮತ್ತು ಇದು |
01:07 | ನಾವು ಈ ಕಾಲಮ್ ನಲ್ಲಿ ಹೊಂದಿರುವ ವ್ಯಾಲ್ಯುವಿಗೆ ಸಮವಾಗಿರುತ್ತದೆ. |
01:12 | ನಾವು ಈಗಾಗಲೇ ಪಿ.ಎಚ್.ಪಿ. ಸೆಷನ್ ಅನ್ನು ಪ್ರೊಸೆಸ್ ಮಾಡಿರುವುದರಿಂದ, |
01:18 | ಅದು "Alex" ಗೆ ಸಮವಾಗಿದೆ. |
01:21 | ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ. ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ, |
01:32 | ಮತ್ತು ಇದನ್ನು ಯೂಸರ್ನೇಮ್ Alex ಆಗಿರುವಲ್ಲಿ ಬದಲಿಸಿ, |
01:37 | ಏಕೆಂದರೆ, ಇದು Alex ಗೆ ಸಮವಾಗಿದೆ. |
01:40 | ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ, ಏಕೆಂದರೆ ಈ "username" ಇದು "Alex" ಗೆ ಸಮವಾಗಿದೆ. |
01:45 | ಇದು 900 ರಿಂದ ಆರಂಭವಾಗುತ್ತಿದೆ ಮತ್ತು ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ, ಇದು ಬದಲಾಗುವುದನ್ನು ಪರೀಕ್ಷಿಸೋಣ. |
01:56 | ನಾನು ಇಲ್ಲಿ ಇನ್ನು ಕೆಲವು ಸಾಲುಗಳನ್ನು ಸೇರಿಸುವೆನು. |
02:03 | ಇದನ್ನು ಹಿಂದಕ್ಕೆ, ಸ್ವಲ್ಪ ಮೇಲೆ ಇಡುವೆನು. |
02:06 | ಈ ಪೇಜ್ ಅನ್ನು ಮುಗಿಸಲು, die() ಎಂದೂ, “Your password has been changed” ಎಂದೂ ಟೈಪ್ ಮಾಡುವೆನು. |
02:15 | ನಾನು ಇಲ್ಲಿ ಒಂದು “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು ಮತ್ತು ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ. |
02:23 | ಅಂದರೆ ಅದು “index.php” ಆಗಿದೆ. |
02:27 | ಪೇಜ್ ಅನ್ನು ಮುಗಿಸುವ ಮೊದಲು, ನಾನು ಸೆಷನ್ ಅನ್ನು ಮುಗಿಸಬೇಕು. |
02:31 | ಹಾಗಾಗಿ ಇಲ್ಲಿ “session_destroy()” ಎಂದು ಟೈಪ್ ಮಾಡುವೆನು. |
02:33 | ಏಕೆಂದರೆ, ಒಮ್ಮೆ ಬಳಕೆದಾರ ತನ್ನ ಪಾಸ್ವರ್ಡ್ ಅನ್ನು ಬದಲಿಸಿದ ನಂತರ, ಇದು ಅವರನ್ನು ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ ಮತ್ತು ಸೆಷನ್ ಕೂಡ ನಾಶವಾಗಿರುತ್ತದೆ. |
02:42 | ಹಾಗಾಗಿ ಅವರು ಹೊಸ ಪಾಸ್ವರ್ಡ್ ಅನ್ನು ಬಳಸಿ, ಪುನಃ ಲಾಗಿನ್ ಆಗಬೇಕು. |
02:59 | ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್ "abc" ಆಗಿದೆ ಮತ್ತು ಅದರ 'md5 hash' ಇದು 900 ರಿಂದ ಆರಂಭವಾಗುತ್ತದೆ. |
03:00 | ಮತ್ತು ಈಗ ನಾನು ಇಲ್ಲಿಗೆ ಹಿಂದಿರುಗಿದರೆ, ನಾನು ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ, Change password ಅನ್ನು ಕ್ಲಿಕ್ ಮಾಡಿ, ಎಲ್ಲ ಮೌಲ್ಯ ಮಾಪನವನ್ನೂ ಮಾಡಲಾಗಿದೆ, ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ. |
03:18 | ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ ಎನ್ನುವುದನ್ನು ನೋಡಬಹುದು. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ. |
03:32 | ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ನನ್ನ ಹಳೆಯ ಪಾಸ್ವರ್ಡ್ ಆದ, "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ. |
03:43 | ನಾನು "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು, ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ. |
03:50 | ಈಗ ಹಿಂದಿರುಗಿ, Browse ಅನ್ನು ಕ್ಲಿಕ್ ಮಾಡಿ. ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು. |
03:59 | ಹಾಗಾಗಿ ಇದು ಸಂಪೂರ್ಣವಾಗಿ ಒಂದು ಹೊಸ ಹ್ಯಾಶ್ ಆಗಿದೆ ಮತ್ತು ಸಂಪೂರ್ಣವಾಗಿ ಹೊಸ ಪಾಸ್ವರ್ಡ್ ಆಗಿದೆ. |
04:06 | ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ನೀವು ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೋಡಬಹುದು. |
04:11 | ನೀವು ಮಾಡಬೇಕಾದ ಮುಖ್ಯ ಕೆಲಸವೆಂದರೆ, "sql" ಕ್ವೈರಿಗಳನ್ನು ಸರಿಯಾಗಿ ಕಲಿಯಿರಿ. ನಾನು ಅದರ ಕುರಿತು ಸಹ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ. |
04:18 | ಮತ್ತು ನೀವು ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ಯೋಚಿಸಬೇಕು. |
04:24 | ಖಂಡಿತಾವಾಗಿ ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ. |
04:31 | ಇನ್ನೊಂದು ಪರಿಶೀಲನೆ ಅಂದರೆ ನಿಮ್ಮ ಪಾಸ್ವರ್ಡ್ 6 ಅಕ್ಷರ ಗಳಿಗಿಂತ ದೊಡ್ಡದಿರಬೇಕು ಮತ್ತು 25 ಅಕ್ಷರಗಳಿಗಿಂತ ಚಿಕ್ಕದಿರಬೇಕು ಎಂಬ ನಿರ್ಬಂಧವನ್ನು ನೀವೇ ಮಾಡಿ. |
04:42 | ಇದೇ ರೀತಿ ನೀವು ಅನೇಕ ಪರಿಶೀಲನೆಗಳನ್ನು ಮಾಡಬಹುದು, ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ. |
04:53 | ನೀವು ಸಂತೋಷ ಪಟ್ಟಿರುವಿರಿ ಎಂದು ಕೊಳ್ಳುವೆನು. ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ. |
05:01 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |