Java/C3/Static-Blocks/Kannada
From Script | Spoken-Tutorial
Revision as of 11:52, 9 June 2020 by Sandhya.np14 (Talk | contribs)
Time | Narration |
00:01 | Static blocks ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ನಲ್ಲಿ ನಾವು:
Static ಬ್ಲಾಕ್ ಗಳು ಎಂದರೇನು, |
00:10 | ಅವುಗಳನ್ನು ಡಿಕ್ಲೇರ್ ಮಾಡುವ ಮತ್ತು ಬಳಸುವ ವಿಧಾನದ ಬಗ್ಗೆ ಕಲಿಯಲಿದ್ದೇವೆ. |
00:16 | ಇಲ್ಲಿ ನಾವು ಉಬಂಟು 14.04, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುವೆವು. |
00:26 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು. |
00:34 | ಅಲ್ಲದೆ ಜಾವಾದಲ್ಲಿ instance ವೇರಿಯೇಬಲ್ ಗಳು, static ವೇರಿಯೇಬಲ್ ಗಳು ಮತ್ತು static ಮೆಥಡ್ ಗಳ ಬಗ್ಗೆ ಸಹ ತಿಳಿದಿರಬೇಕು. |
00:43 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ. |
00:48 | ನಾವೀಗ static ಬ್ಲಾಕ್ಗಳ ಕುರಿತು ಕಲಿಯೋಣ. |
00:52 | Static ಬ್ಲಾಕ್ ಅನ್ನು ಹೆಚ್ಚಿನದಾಗಿ static ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಬಳಸಲಾಗುತ್ತದೆ. |
00:59 | static ಬ್ಲಾಕ್ ಅನ್ನು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
01:03 | ಮೆಮರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ static ಬ್ಲಾಕ್ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. |
01:08 | ಪ್ರೋಗ್ರಾಂನಲ್ಲಿ static ಬ್ಲಾಕ್ ಗಳಿದ್ದರೆ, constructor ಗಳ ಮೊದಲು ಅವುಗಳನ್ನು ಇನ್ವೋಕ್ ಮಾಡಲಾಗುತ್ತದೆ. |
01:14 | ನಾವು static ಬ್ಲಾಕ್ ನ ಒಳಗೆ instance ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲ. |
01:19 | ಈಗ ನಾವು Eclipse ಗೆ ಬದಲಾಯಿಸೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ. |
01:26 | ಈ ಪ್ರಾಜೆಕ್ಟ್ ನ ಒಳಗೆ, Static ಬ್ಲಾಕ್ಗಳ ಬಳಕೆಯನ್ನು ವಿವರಿಸಲು ಅಗತ್ಯವಿರುವ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ. |
01:33 | src ಫೋಲ್ಡರ್ ನ ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ. |
01:38 | ಕ್ಲಾಸ್ ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:44 | ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
01:49 | ಗಮನಿಸಿ, ಇಲ್ಲಿ count ಮತ್ತು orgname ಎಂಬ ಎರಡು static ವೇರಿಯೇಬಲ್ಗಳು ಇವೆ. |
01:54 | ಈಗ Source ಮೇಲೆ ಕ್ಲಿಕ್ ಮಾಡಿ, Generate Constructor using Fields ಆರಿಸಿ. |
02:00 | ಈಗ ತಯಾರಾದ ಕೋಡ್ನಿಂದ, super ಕೀವರ್ಡ್ ಅನ್ನು ಡಿಲೀಟ್ ಮಾಡಿ. |
02:04 | constructor ಅನ್ನು ಇನ್ವೋಕ್ ಮಾಡಿದಾಗಲೆಲ್ಲ, ಒಂದು ಮೆಸೇಜ್ ಪ್ರಿಂಟ್ ಆಗಬೇಕು. |
02:09 | “Constructor invoked” ಎಂದು ಪ್ರಿಂಟ್ ಮಾಡಲು, constructor ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ. |
02:15 | ಈಗ ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, ನಾವು ಈ ಕ್ಲಾಸಿಗೆ showData( ) ಮೆಥಡ್ ಅನ್ನು ಸೇರಿಸುವೆವು. |
02:21 | ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ. |
02:23 | ಈಗ, count ಮತ್ತು orgname ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, static ಬ್ಲಾಕ್ ಅನ್ನು ಸೇರಿಸುವೆವು. |
02:29 | ಈ ಕೋಡ್ ಅನ್ನು ಟೈಪ್ ಮಾಡಿ. |
02:32 | orgname ಮತ್ತು count ವೇರಿಯೇಬಲ್ ಗಳು static ವೇರಿಯೇಬಲ್ ಗಳಾಗಿವೆ. |
02:36 | static ಕೀವರ್ಡ್ ನಿಂದ ಆರಂಭವಾಗಿ, ಕರ್ಲಿ ಬ್ರ್ಯಾಕೆಟ್ಸ್ ಒಳಗೆ ಇರುವ ಕೋಡ್ ನ ಈ ಬ್ಲಾಕ್, static ಬ್ಲಾಕ್ ಆಗಿದೆ. |
02:42 | ಈ static ಬ್ಲಾಕ್, count ಮತ್ತು orgname ನ ವ್ಯಾಲ್ಯೂಗಳನ್ನು 100 ಮತ್ತು IITM ಎಂದು ಇನಿಶಿಯಲೈಸ್ ಮಾಡುತ್ತದೆ. |
02:51 | ಈ static ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ. |
02:58 | ಈಗ ನಾವು main() ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸುವೆವು. |
03:03 | ಇದಕ್ಕಾಗಿ default package ಮೇಲೆ ರೈಟ್-ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. |
03:11 | ಈ ಕ್ಲಾಸ್ ಒಳಗೆ main() ಮೆಥಡ್ ಇರುವುದು. |
03:15 | main ಎಂದು ಟೈಪ್ ಮಾಡಿ ಮತ್ತು main() ಮೆಥಡ್ ಅನ್ನು ರಚಿಸಲು Ctrl+space ಒತ್ತಿ. |
03:21 | ನಾವೀಗ StudentEnroll ಕ್ಲಾಸ್ ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ. |
03:25 | s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
03:29 | ಈಗ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, showData() ಮೆಥಡ್ ಅನ್ನು ಇನ್ವೋಕ್ ಮಾಡೋಣ. |
03:33 | s1.showData() semicolon ಎಂದು ಟೈಪ್ ಮಾಡಿ. |
03:38 | ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. |
03:41 | ಕನ್ಸ್ಟ್ರಕ್ಟರ್ನ ಮೊದಲು static ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ನೋಡಬಹುದು. |
03:46 | count ಮತ್ತು orgname ನ ವ್ಯಾಲ್ಯೂಗಳು, static ಬ್ಲಾಕ್ನಲ್ಲಿ ಹೇಳಿದಂತೆ ಇನಿಶಿಯಲೈಸ್ ಆಗುತ್ತವೆ. |
03:53 | ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ. |
03:57 | static ಬ್ಲಾಕ್ನ ಒಳಗೆ id ಯ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ. |
04:03 | static ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ. |
04:10 | ಇಲ್ಲಿ ಎರರ್ ಸಿಗುತ್ತದೆ. |
04:13 | instance ವೇರಿಯೇಬಲ್ ಅನ್ನು static ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ತೋರಿಸುತ್ತದೆ. |
04:19 | ನಾವೀಗ ಈ ಸಾಲನ್ನು ಕಮೆಂಟ್ ಮಾಡಿ ಮುಂದುವರಿಯೋಣ. |
04:25 | ಈಗ ಸ್ಲೈಡ್ ಗಳಿಗೆ ಹಿಂದಿರುಗೋಣ. |
04:27 | ಒಂದು ಕ್ಲಾಸ್ ನಲ್ಲಿ, ಅನೇಕ static ಬ್ಲಾಕ್ಗಳು ಇರಬಹುದು. |
04:30 | ಇಂತಹ ಸಂದರ್ಭದಲ್ಲಿ, ಅವುಗಳು ಮೂಲ ಕೋಡ್ನಲ್ಲಿ ಇರುವ ಕ್ರಮದಲ್ಲಿ, ಒಮ್ಮೆ ಮಾತ್ರ ಕಾಲ್ ಮಾಡಲಾಗುತ್ತದೆ. |
04:37 | ಇದನ್ನು ಪರಿಶೀಲಿಸಲು Eclipse ಗೆ ಬದಲಾಯಿಸೋಣ. |
04:40 | ಈಗ ಇರುವುದರ ಜೊತೆಗೆ ಇನ್ನೊಂದು static ಬ್ಲಾಕ್ ಅನ್ನು ಸೇರಿಸೋಣ. |
04:45 | ಈ ಕೋಡ್ ಅನ್ನು ಟೈಪ್ ಮಾಡಿ. |
04:47 | ಈ static ಬ್ಲಾಕ್, count ಮತ್ತು orgname ಗಳ ವ್ಯಾಲ್ಯೂವನ್ನು ಕ್ರಮವಾಗಿ 200 ಮತ್ತು IITB ಎಂದು ಇನಿಶಿಯಲೈಸ್ ಮಾಡುತ್ತದೆ. |
04:57 | ಈ static ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. |
05:01 | ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ. |
05:04 | ಎರಡನೇ static ಬ್ಲಾಕ್ ಅನ್ನು, ಮೊದಲಿನ ಬ್ಲಾಕ್ ನಂತರ ಇನ್ವೋಕ್ ಮಾಡಲಾಗಿದೆ ಎಂದು ಈ ಔಟ್ಪುಟ್ ನಿಂದ ತಿಳಿಯಬಹುದು. |
05:10 | count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಎರಡನೇ static ಬ್ಲಾಕ್ ಅಪ್ಡೇಟ್ ಮಾಡುತ್ತದೆ. |
05:18 | ಅವುಗಳು ಕ್ರಮವಾಗಿ 200 ಮತ್ತು IITB ಆಗಿವೆ. |
05:22 | ಸಂಕ್ಷಿಪ್ತವಾಗಿ, |
05:24 | ಈ ಟ್ಯುಟೋರಿಯಲ್ ನಲ್ಲಿ ನಾವು:
static ಬ್ಲಾಕ್ ಎಂದರೇನು, static ಬ್ಲಾಕ್ ಅನ್ನು ಹೇಗೆ ಡಿಕ್ಲೇರ್ ಮತ್ತು ಡಿಫೈನ್ ಮಾಡುವುದು, static ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮತ್ತು ಎಕ್ಸಿಕ್ಯೂಟ್ ಮಾಡುವುದೆಂದು ಕಲಿತೆವು. |
05:37 | ಅಸೈನ್ಮೆಂಟ್ಗಾಗಿ, ಇಲ್ಲಿ static ಮೆಥಡ್ಗಳ ಅಸೈನ್ಮೆಂಟ್ ಅನ್ನೇ ಮುಂದುವರಿಸುತ್ತಿದ್ದೇವೆ. |
05:44 | ನೀವು static ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
05:48 | ಹಿಂದೆ ಮಾಡಿದ ಹಾಗೆ, ಈ ಸ್ಲೈಡ್ನಲ್ಲಿ ಹೇಳಿದಂತೆ CarService ಕ್ಲಾಸ್ ಅನ್ನು ರಚಿಸಿ. |
05:54 | instance ವೇರಿಯೇಬಲ್ಗಳು ಮತ್ತು static ವೇರಿಯೇಬಲ್ಗಳನ್ನು ಗುರುತಿಸಿ. |
05:58 | instance ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, constructor ಒಂದನ್ನು ತಯಾರಿಸಿ. |
06:03 | static ವೇರಿಯೇಬಲ್ಗಳ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು, static ಬ್ಲಾಕ್ ಅನ್ನು ಡಿಫೈನ್ ಮಾಡಿ. |
06:08 | ಜೊತೆಗೆ main() ಮೆಥಡ್ ಅನ್ನು ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. |
06:12 | main() ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ. |
06:19 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
06:24 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
06:27 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
06:35 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
06:39 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
06:46 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
06:50 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
06:58 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |