FrontAccounting-2.4.7/C2/Installation-of-FrontAccounting-on-Linux-OS/Kannada

From Script | Spoken-Tutorial
Revision as of 10:30, 2 June 2020 by Sandhya.np14 (Talk | contribs)

Jump to: navigation, search
Time Narration
00:01 ಲಿನಕ್ಸ್ ಅಪರೇಟಿಂಗ್ ಸಿಸ್ಟಂ ನಲ್ಲಿ, FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ನಲ್ಲಿ ನಾವು-

XAMPP ಅನ್ನು ಇನ್ಸ್ಟಾಲ್ ಮಾಡಲು,

00:13 FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು,
00:15 ಡೇಟಾಬೇಸ್ ಸೆಟಪ್ ಮಾಡಲು ಮತ್ತು

ಲೀನಕ್ಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡಲು ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04,

00:29 XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP,
00:36 FrontAccounting 2.4.7,
00:40 ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ವುಗಳನ್ನು ಬಳಸುತ್ತಿದ್ದೇನೆ.
00:45 ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು.
00:50 FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.
00:54 ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸೆಟಪ್ ಮಾಡಲು ನಾವು XAMPP ಅನ್ನು ಬಳಸಲಿದ್ದೇವೆ.
00:59 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ.

01:06 ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ ಗೆ ಕರೆದೊಯ್ಯುತ್ತದೆ.
01:10 ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು ಇಲ್ಲಿ XAMPP ಲಭ್ಯವಿದೆ.
01:15 ಈ ಹಸಿರು ಬಟನ್ ಒತ್ತಿ XAMPP ನ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು.
01:20 ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ತಕ್ಕಂತೆ, ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು.
01:27 ಇಲ್ಲಿ ನನಗೆ XAMPP ವರ್ಶನ್ 5.5.19 ಬೇಕು.
01:33 ಕೆಳಕ್ಕೆ ಸ್ಕ್ರೋಲ್ ಮಾಡಿ, XAMPP Linux ಅನ್ನು ಆರಿಸಿ.
01:37 ರಿಡೈರೆಕ್ಟ್ ಮಾಡಿದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ.
01:42 ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ.
01:49 ನನ್ನ ಸಿಸ್ಟಂ 64 ಬಿಟ್ ಅಪರೇಟಿಂಗ್ ಸಿಸ್ಟಂ ಆಗಿದೆ. ಹೀಗಾಗಿ ನಾನು xampp-linux-x64-5.5.19-0-installer.run ಡೌನ್ಲೋಡ್ ಮಾಡುವೆನು.
02:05 ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ.
02:10 ನನ್ನ ಮಶಿನ್ನಲ್ಲಿ ಇದನ್ನು Downloads ಫೋಲ್ಡರ್ನಲ್ಲಿ ಸೇವ್ ಮಾಡಲಾಗಿದೆ.
02:14 ನಾವೀಗ Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಒಂದನ್ನು ತೆರೆಯೋಣ.
02:21 ಟರ್ಮಿನಲ್ನಲ್ಲಿ cd space Downloads ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
02:27 ಇದು ಕರಂಟ್ ವರ್ಕಿಂಗ್ ಡೈರೆಕ್ಟರಿಯನ್ನು Downloads ಗೆ ಬದಲಾಯಿಸಲಿದೆ.
02:31 ನಂತರ ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
02:36 ಈಗ ಇನ್ಸ್ಟಾಲರ್ ಫೈಲ್ ಅನ್ನು ರನ್ ಮಾಡಲು, ಕಮಾಂಡ್ ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ ಮತ್ತು Enter ಒತ್ತಿ.

ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಅನ್ನು ನಮೂದಿಸಿ.

02:46 ಈಗ Setup wizard ಡೈಲಾಗ್ ಬಾಕ್ಸ್ ತೆರೆಯುತ್ತದೆ.
02:50 ಕೇಳಿದಾಗಲೆಲ್ಲ Next ಬಟನ್ ಒತ್ತಿ. ಇಲ್ಲಿ ತೋರಿಸಿರುವಂತೆ ಇನ್ಸ್ಟಾಲೇಶನ್ ಹಂತಗಳನ್ನು ಅನುಸರಿಸಿ.
02:56 Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.

ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.

03:05 ಇನ್ಸ್ಟಾಲ್ ಮಾಡುವುದು ಮುಗಿದ ನಂತರ, Launch XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
03:10 ಕೊನೆಯದಾಗಿ Finish ಬಟನ್ ಮೇಲೆ ಕ್ಲಿಕ್ ಮಾಡಿ.
03:13 ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಇಲ್ಲವೇ ಎಂದು ನೋಡಬೇಕು.
03:19 ಟರ್ಮಿನಲ್ನಲ್ಲಿ, sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಸರ್ವಿಸ್ ಪ್ರಾರಂಭಿಸಿ.
03:31 ಕೇಳಿದಾಗ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
03:36 ನೀವು ಇಲ್ಲಿ ತೋರಿಸಿರುವ ಮೆಸೆಜ್ ಪಡೆಯುಬಹುದು.

XAMPP ಅನ್ನು ನಿಮ್ಮ ಸಿಸ್ಟಂನಲ್ಲಿ ಅಳವಡಿಸಲಾಗಿದೆ ಮತ್ತು ನೀವು ಸರ್ವಿಸ್ ಪ್ರಾರಂಭಿಸಿದ್ದೀರಿ ಎಂದು ಇದು ತೋರಿಸುತ್ತದೆ.

03:46 ಒಂದುವೇಳೆ ನೀವು Command not found ಎನ್ನುವ ಮೆಸೆಜ್ ಪಡೆದರೆ, ನಿಮ್ಮ ಮಶಿನ್ನಲ್ಲಿ XAMPP ಯನ್ನು ಅಳವಡಿಸಿಲ್ಲ ಎಂದರ್ಥ.
03:54 ನೀವು ಇಲ್ಲಿ ಹೇಳಿದಂತಹ ಎರರ್ ಮೆಸೆಜ್ ಪಡೆಯಬಹುದು:

“Apache shutdown unexpectedly” ಅಥವಾ

04:00 “Port 80 in use for Apache Server”

ಅಥವಾ

04:05 “Unable to connect to any of the specified MySQL hosts for MySQL database.”
04:13 ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ.
04:21 ಅಪಾಚೆಯ ಡಿಫಾಲ್ಟ್ ಪೋರ್ಟ್ ಸಂಖ್ಯೆ 80 ಮತ್ತು MySQL ಗಾಗಿ 3306 ಆಗಿವೆ.
04:30 ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ “Additional Reading Material” ನೋಡಿ.
04:36 ಹಾಗೂ ಮುಂದುವರಿಸುವ ಮುನ್ನ, ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನಿಗದಿಪಡಿಸಿ. ಉದಾಹರಣೆಗೆ: 8080
04:44 ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ, localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

04:52 ನಮಗೆ ಈಗ XAMPP ಸ್ಕ್ರೀನ್ ಕಾಣಬೇಕು.
04:56 ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ.
05:01 ನಾವೀಗ XAMPP ಹೋಂ ಪೇಜ್ ನಲ್ಲಿದ್ದೇವೆ.
05:04 ಸ್ಕ್ರೀನ್ನ ಎಡಗಡೆಯ ಮೆನುವಿನಲ್ಲಿ, PHPinfo ಮೇಲೆ ಕ್ಲಿಕ್ ಮಾಡಿ.
05:10 ಈಗ Ctrl + F ಕೀ ಗಳನ್ನು ಒತ್ತಿ ಮತ್ತು DOCUMENT underscore ROOT ಅನ್ನು ಹುಡುಕಿ.
05:18 ಇದನ್ನು Apache Environment ಟೇಬಲ್ನಲ್ಲಿ ಕಾಣಬಹುದು.
05:22 DOCUMENT underscore ROOT ನ ವ್ಯಾಲ್ಯೂ,

slash opt slash lampp slash htdocs ಅಥವಾ slash var slash www ಆಗಿರಬಹುದು.

05:35 ನನ್ನ ಮಶಿನ್ನಲ್ಲಿ ಇದು slash opt slash lampp slash htdocs ಆಗಿದೆ.
05:41 ದಯವಿಟ್ಟು ಈ ಪಾಥ್ ಅನ್ನು ಗುರುತಿಸಿಕೊಳ್ಳಿ.

ನಾವು FrontAccounting ಅನ್ನು ಇಲ್ಲಿ ಇನ್ಸ್ಟಾಲ್ ಮಾಡಲಿದ್ದೇವೆ.

05:47 ನಾವೀಗ FrontAccounting ನ ಡೌನ್ಲೋಡ್ ಪ್ರಾರಂಭಿಸೋಣ.
05:50 ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ.
05:57 frontaccounting-2.4.7.tar.gz ಮೇಲೆ ಕ್ಲಿಕ್ ಮಾಡಿ.
06:04 ತಕ್ಷಣವೇ ಡೌನ್ಲೋಡ್ ಶುರುವಾಗುತ್ತದೆ.

Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ.

06:12 ಟರ್ಮಿನಲ್ಗೆ ಹಿಂದಿರುಗಿ.
06:15 ನಂತರ, ನಾವು ಡೌನ್ಲೋಡ್ ಮಾಡಿದ tar.gz ಫೈಲ್ ನ ಕಂಟೆಂಟ್ ಗಳನ್ನು ಪಡೆಯಬೇಕು (extract).
06:22 ಇದಕ್ಕಾಗಿ sudo space tar space hyphen zxvf space frontaccounting hyphen 2.4.7.tar.gz ಎಂದು ಟೈಪ್ ಮಾಡಿ.
06:39 ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
06:44 ಒಮ್ಮೆ ಎಕ್ಸ್ಟ್ರ್ಯಾಕ್ಟ್ (extract) ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರಿನೇಮ್ (rename) ಮಾಡುತ್ತೇನೆ.
06:50 ಈ ಕಮಾಂಡ್ ಅನ್ನು ಟೈಪ್ ಮಾಡಿ, mv space frontaccounting space account ಮತ್ತು Enter ಒತ್ತಿ.
06:58 ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ. ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ.
07:08 ಈಗ ಟರ್ಮಿನಲ್ಗೆ ಹಿಂದಿರುಗಿ.
07:11 ನಾವೀಗ ಫೋಲ್ಡರ್ account ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ವರ್ಗಾಯಿಸಬೇಕು.
07:17 ಇದನ್ನು ಮಾಡಲು, sudo space mv space account space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
07:34 ನಾವೀಗ ಅಪಾಚೆ ಹೋಂ ಡೈರೆಕ್ಟರಿಗೆ ಸಾಗೋಣ.
07:37 ಹೀಗೆ ಮಾಡಲು, cd space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:47 account ಫೋಲ್ಡರ್ ನ ಪರ್ಮಿಶನ್ ಬದಲಾಯಿಸಲು,

sudo space chmod space -R space 777 space account slash ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

08:01 ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ.
08:05 FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
08:11 ನಂತರ, ಮುಂದುವರಿಯಲು FrontAccounting ಗಾಗಿ ನಾವು ಡೇಟಾಬೇಸ್ ಒಂದನ್ನು ರಚಿಸಬೇಕು.
08:17 ನಾವಿದನ್ನು phpmyadmin ನಲ್ಲಿ ಮಾಡುವೆವು. ಇದು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ.

ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ.

08:28 ನಾವೀಗ ಬ್ರೌಸರ್ನಲ್ಲಿ XAMPP ಪೇಜ್ಗೆ ಹೋಗೋಣ.

XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ.

08:39 ಮೇಲ್ಗಡೆಯ ಮೆನುವಿನಲ್ಲಿ Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ.
08:47 ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ನೇಮ್ ನಮೂದಿಸಿ.

ಇಲ್ಲಿ ನನ್ನ ಯೂಸರ್ನೇಮ್ ಅನ್ನು frontacc ಎನ್ನುತ್ತೇನೆ.

08:56 Host ಡ್ರಾಪ್-ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ.
09:01 Password ಟೆಕ್ಸ್ಟ್-ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ.
09:06 ನಾನಿಲ್ಲಿ admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ.
09:11 Re-type ಟೆಕ್ಸ್ಟ್ ಬಾಕ್ಸ್ನಲ್ಲಿ, ಅದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
09:16 ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ.
09:21 Database for user ಅಡಿಯಲ್ಲಿ, ನಾವು:

Create database with the same name and grant all privileges ಎಂಬ ಆಯ್ಕೆಯನ್ನು ನೋಡಬಹುದು.

09:29 ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು.
09:33 ನಂತರ ಪೇಜ್ನ ಕೆಳಕ್ಕೆ, ಬಲಗಡೆಗೆ Go ಬಟನ್ ಮೇಲೆ ಕ್ಲಿಕ್ ಮಾಡುವೆವು.
09:38 ನಾವಿಲ್ಲಿ “You have added a new user” ಎಂಬ ಮೆಸೇಜ್ ನೋಡುತ್ತೇವೆ.

frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ ಎಂದು ಇದು ಸೂಚಿಸುತ್ತದೆ.

09:50 ಈ ಯೂಸರ್ನೇಮ್ ಮತ್ತು ಪಾಸ್ವರ್ಡ್, ಕೇವಲ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ ಇವೆ.
09:56 ಯೂಸರ್ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಟ್ಟುಕೊಳ್ಳಿ.
10:01 FrontAccounting ನ ಸಂಪೂರ್ಣ ಇನ್ಸ್ಟಾಲ್ಲೇಶನ್ ಗೆ ನಂತರ ಇವುಗಳು ಬೇಕಾಗುತ್ತವೆ.
10:06 ದಯವಿಟ್ಟು ಗಮನಿಸಿ: ಡೇಟಾಬೇಸ್ ಹೆಸರು ಮತ್ತು ಯೂಸರ್ನೇಮ್ ಒಂದೇ ಇರಬೇಕಾಗಿಲ್ಲ.
10:11 ಹೆಸರುಗಳು ವಿಭಿನ್ನವಾಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ.
10:18 ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು.
10:25 ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ.
10:29 Front Accounting ಇನ್ಸ್ಟಾಲ್ ಮಾಡುವುದನ್ನು ಮುಂದುವರಿಸಲು ಸಿದ್ಧರಿದ್ದೇವೆ.
10:33 ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ, localhost/account ಎಂದು ಟೈಪ್ ಮಾಡಿ, Enter ಒತ್ತಿ.

10:44 ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ಪೇಜ್ ಅನ್ನು ಕಾಣಬಹುದು.
10:51 Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
10:56 ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
11:02 ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು:

Step 2: Database Server Settings ಎಂದಿದೆ.

11:08 ಇಲ್ಲಿ ನಾನು ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ.
11:12 ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
11:21 ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು –

frontacc ಅನ್ನು ಡೇಟಾಬೇಸ್ ನೇಮ್ ಆಗಿ, Frontacc ಅನ್ನು ಡೇಟಾಬೇಸ್ ಯೂಸರ್ ಆಗಿ ಮತ್ತು

11:33 admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ.
11:38 ಉಳಿದ ಆಯ್ಕೆಗಳನ್ನು ಕಡೆಗಣಿಸಿ. ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
11:45 ನಂತರ, ನಿಮ್ಮ ಸ್ವಂತ ಕಂಪನಿಯ ವಿವರಗಳನ್ನು ನೀವು ಸೇರಿಸಬೇಕು.

ಇದನ್ನು ಹೇಗೆ ಮಾಡಬೇಕು ಎಂದು ನಾನು ತೋರಿಸುತ್ತೇನೆ.

11:53 Company Name ಫೀಲ್ಡ್ನಲ್ಲಿ, ನಾನು ST Company Pvt Ltd ಎಂದು ಟೈಪ್ ಮಾಡುತ್ತೇನೆ.
11:59 ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
12:02 ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ.

ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು.

12:10 ಅದೇ ಪಾಸ್ವರ್ಡ್ ಅನ್ನು ಪುನಃ ನಮೂದಿಸಿ.

ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ.

12:16 ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು.
12:21 ನಾನು Standard new company American COA ಅನ್ನು ಆರಿಸಿಕೊಳ್ಳುತ್ತೇನೆ.
12:26 Default Language ಅನ್ನು English ಆಗಿ ಆರಿಸಿ.
12:30 Install ಬಟನ್ ಮೇಲೆ ಕ್ಲಿಕ್ ಮಾಡಿ.
12:34 ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು. ನಮ್ಮ ಇನ್ಸ್ಟಾಲ್ಲೇಶನ್ ಯಶಸ್ವಿಯಾಗಿದೆ ಎಂದು ಇದು ದೃಢೀಕರಿಸುತ್ತದೆ.
12:46 FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ.
12:53 ಲಾಗಿನ್ ಸ್ಕ್ರೀನ್ನಲ್ಲಿ, ಈ ಕೆಳಗಿನ ವಿವರಗಳನ್ನು:

User name ಅನ್ನು admin, Password ಅನ್ನು spoken ಮತ್ತು

13:03 Company ಯನ್ನು ST Company Pvt. Ltd. ಎಂದು ನಮೂದಿಸಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

13:11 ನಾವೀಗ Front Accounting Administration ಪೇಜ್ಗೆ ತಲುಪಿದ್ದೇವೆ.

ಈ ಪೇಜ್ನಲ್ಲಿ, ಬೇರೆ ಬೇರೆ ಟ್ಯಾಬ್ಗಳನ್ನು ನೋಡಬಹುದು.

13:18 ಇವುಗಳಲ್ಲಿ ಹೆಚ್ಚಿನವುಗಳ ಬಳಕೆಯನ್ನು ಈ ಸರಣಿಯ ಮುಂದಿನ ಭಾಗದಲ್ಲಿ ಕಲಿಯಲಿದ್ದೇವೆ.
13:23 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
13:28 ಈ ಟ್ಯುಟೋರಿಯಲ್ನಲ್ಲಿ ನಾವು,

XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,

13:34 FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
13:38 ಮತ್ತು ಲೀನಕ್ಸ್ ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು.
13:42 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:50 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
14:00 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.

14:05 ನಿಮಗೆ ಪ್ರಶ್ನೆ ಇರುವ ನಿಮಿಷ ಮತ್ತು ಸೆಕೆಂಡನ್ನು ಆರಿಸಿ, ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
14:12 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
14:15 ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.

ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.

14:25 ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.

14:34 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
14:40 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14