PHP-and-MySQL/C4/PHP-String-Functions-Part-1/Kannada

From Script | Spoken-Tutorial
Revision as of 12:13, 27 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 string functions ನ ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ.
00:03 ನಾನು ಇಲ್ಲಿ ತೋರಿಸಿರುವ ಸ್ಟ್ರಿಂಗ್ ಫಂಕ್ಷನ್ ಗಳ ಕುರಿತು ಇದರಲ್ಲಿ ತೋರಿಸುವೆನು.
00:06 ಇವುಗಳು ತುಂಬ ಉಪಯುಕ್ತವಾದವು ಮತ್ತು ದಿನನಿತ್ಯದ ಅಪ್ಲಿಕೇಷನ್ ಗಳಲ್ಲಿ ಇವುಗಳನ್ನು ಅಳವಡಿಸಿರಲಾಗುತ್ತದೆ.
00:10 ನಾನು ಮಾಡುತ್ತಿರುವ ಎಲ್ಲಾ ವಿಡಿಯೋಗಳಲ್ಲಿ ಖಂಡಿತವಾಗಿಯೂ ಅಳವಡಿಸಲಾಗಿದೆ.
00:16 ನಾನು ತೋರಿಸುತ್ತಿರುವ ಮೊದಲನೆಯ ಫಂಕ್ಷನ್ strlen() ಆಗಿದೆ.
00:20 ಇದು ತುಂಬ ಸರಳವಾಗಿದೆ, ಇದನ್ನು ತೋರಿಸಲು ಒಂದು '$string' ಅನ್ನು ತೆಗೆದುಕೊಳ್ಳೋಣ ಮತ್ತು ಅದರ ವ್ಯಾಲ್ಯು "hello" ಆಗಿರಲಿ.
00:26 ಈ ಫಂಕ್ಷನ್ ಒಂದು ಸ್ಟ್ರಿಂಗ್ ಅನ್ನು ತೆಗೆದುಕೊಳ್ಳುತ್ತದೆ ಮತ್ತು ಆ ಸ್ಟ್ರಿಂಗ್ ನಲ್ಲಿರುವ ಅಕ್ಷರಗಳನ್ನು ಎಣಿಸುತ್ತದೆ.
00:30 ಇಲ್ಲಿ ನಾವು 1, 2, 3, 4, 5 ಅಕ್ಷರಗಳನ್ನು ಹೊಂದಿದ್ದೇವೆ.
00:35 ನಾವು ಈ ಫಂಕ್ಷನ್ ಅನ್ನು ಬಳಸಿ ಈ '$string' ವೇರಿಯೇಬಲ್ ನ ವ್ಯಾಲ್ಯುವನ್ನು ಎಕೋ ಮಾಡುವುದಾದರೆ, ನಾವು ಬ್ರೌಸರ್ ನಲ್ಲಿ 5 ಎಂಬ ಫಲಿತಾಂಶವನ್ನು ಪಡೆಯಬೇಕು.
00:47 ಮುಂದಿನ ಫಂಕ್ಷನ್ ಇದಕ್ಕೆ ಅನ್ವಯವಾಗುತ್ತದೆ.
00:52 ಈಗ for ಲೂಪ್ ಅನ್ನು ಬಳಸಿ, ಸ್ಟ್ರಿಂಗ್ ನ ಅಕ್ಷರಗಳ ಮೂಲಕ ಲೂಪ್ ಮಾಡುವುದಾದರೆ, ನೀವು ಅದರ ನಿರ್ದಿಷ್ಟವಾದ ಸಬ್ ಸ್ಟ್ರಿಂಗ್ ಅನ್ನು ಪಡೆಯಲು ಈ mb substring ಫಂಕ್ಷನ್ ಬೇಕು.
01:03 ಉದಾಹರಣೆಗೆ ನೀವು , "My name is Alex" ಎಂಬ ಸ್ಟ್ರಿಂಗ್ ಅನ್ನು ಹೊಂದಿರುವಿರಿ ಮತ್ತು
01:12 ಇದರ ಮೂಲಕ loop ಮಾಡಿ, ನಮಗೆ ಬೇಕಾದ ಪ್ರತಿ ಅಕ್ಷರವನ್ನು ಪರೀಕ್ಷಿಸಬೇಕು ಎಂದುಕೊಳ್ಳೋಣ.
01:18 ಉದಾಹರಣೆಗೆ ನೀವು, ಸ್ಪೇಸ್ ಸಿಗುವ ವರೆಗೂ ಪ್ರತಿ ಅಕ್ಷರದ ಮೂಲಕ ಲೂಪ್ ಆಗಿ, ನಂತರ ಅಲ್ಲಿಂದ ಮುಂದೆ ಲಾಸ್ಟ್ ನೇಮ್ ಅನ್ನು ಸೇವ್ ಮಾಡುವ ನನ್ನ 'Name Splitter' ಟ್ಯುಟೋರಿಯಲ್ ಅನ್ನು ನೋಡಿ.
01:32 ಈಗ ಮೊದಲಿಗೆ ನಾನು mb_substring() ಅನ್ನು ಎಕೋ ಮಾಡುವೆನು.
01:37 ನಂತರ ನಾವು ಪರೀಕ್ಷಿಸಬೇಕಾದ $string ಅನ್ನು ಸೂಚಿಸುವೆನು.
01:40 ಇಲ್ಲಿ ನೀವು ಆರಂಭಿಕ ಬಿಂದುವನ್ನು ಸೂಚಿಸಬೇಕು, ಅದು ಇಲ್ಲಿ 1 ಆಗಿರಲಿ.
01:45 ಆದರೆ ಇದು ಸೊನ್ನೆ ಆಗಿರಲಿ ಮತ್ತು "length" – ಇದು 2 ಆಗಿರಲಿ.
01:49 ಇದು "My" ಎಂದು ಎಕೋ ಮಾಡಬೇಕು.
01:52 "Refresh" ಮಾಡಿ, ಸರಿ ನಾವು ಇಲ್ಲಿ "My" ಎಂದು ಪಡೆಯುವೆವು.
01:57 ಇದು ಏನು ಮಾಡಿದೆಯೆಂದರೆ – ಇದು ಈ ಸ್ಟ್ರಿಂಗ್ ನ ಮೂಲಕ ಹೋಗಿ, ಸೊನ್ನೆಯಿಂದ ಆರಂಭಿಸಿ 1, 2 ನೇ ಅಕ್ಷರಗಳನ್ನು ತೆಗೆದುಕೊಂಡು ಇಲ್ಲಿ ಎಕೋ ಮಾಡಿದೆ.
02:05 ಈಗ ನಾನು 's-t-r-len', ಕ್ಷಮಿಸಿ, 'length equals strlen of '$string' ' ಎಂದು ಟೈಪ್ ಮಾಡುವೆನು.
02:15 ನಾನು ಇಲ್ಲಿ ಒಂದು ಹೊಸ ವೇರಿಯೇಬಲ್ ಅನ್ನು ರಚಿಸಿ, ಅದು ಈ ಸ್ಟ್ರಿಂಗ್ ನ ಅಳತೆಯನ್ನು (length) ಹೊಂದಿರುವಂತೆ ಮಾಡುವೆನು.
02:19 ನಾನು 2 ಅನ್ನು ಈ ವ್ಯಾಲ್ಯುವಿನಿಂದ ಬದಲಿಸುವೆನು.
02:22 ನಾವು ಸೊನ್ನೆಯಿಂದ ಆರಂಭಿಸುವವರೆಗೆ, ನಾನು ಇಲ್ಲಿ ಸ್ಟ್ರಿಂಗ್ ಲೆಂಥ್ ಅಥವಾ ಕ್ಷಮಿಸಿ, '$length' ಅನ್ನು ಇಟ್ಟು ನಾವು ರಿಫ್ರೆಶ್ ಮಾಡಿದರೆ, ನಾವು ಪೂರ್ಣ ಸ್ಟ್ರಿಂಗ್ ಅನ್ನು ಪಡೆಯುವೆವು.
02:37 ಈಗ ನಾನು ಇಲ್ಲಿ ' s-t-r-len minus 5' ಎಂದು ಹೇಳುವೆನು ಅಂದರೆ ಪೂರ್ಣವಿರಾಮವನ್ನೊಳಗೊಂಡಂತೆ ನನ್ನ ಹೆಸರನ್ನು ಹೊರತೆಗೆಯಲು ನಾನು ಮೈನಸ್ 5 ಅನ್ನು ಇಡುವೆನು.
02:49 ಇದು ಸ್ಟ್ರಿಂಗ್ ನ ಪೂರ್ಣ ಅಳತೆಯಲ್ಲಿ ಕೊನೆಯ ಐದು ಅಕ್ಷರಗಳನ್ನು ಹೊರತೆಗೆದು "My name is" ಎಂದು ತೋರಿಸುವುದು.
02:53 ರಿಫ್ರೆಶ್ ಮಾಡಿದರೆ 'My name is' ಎಂದು ಪಡೆಯುವೆವು.
02:56 ಈ ಎರಡೂ ಫಂಕ್ಷನ್ ಗಳು ಸ್ವಲ್ಪ ಬಹುಮುಖ್ಯವಾಗಿದೆ, ಮತ್ತು strlen() ಅನ್ನು ಬಳಸಿ, ಇಲ್ಲಿ mb_substring ಅನ್ವಯಿಸಲಾಗಿದೆ.
03:03 ಮುಂದಿನ ಫಂಕ್ಷನ್ explode() ಆಗಿದೆ.
03:07 explode() ಫಂಕ್ಷನ್ ನಾವು ಇಲ್ಲಿ ಹೊಂದಿರುವಂತೆ $string ಅನ್ನು ತೆಗೆದುಕೊಳ್ಳುತ್ತದೆ.
03:13 ಈಗ ಇದು "1 2 3 4 5" ಆಗಿರಲಿ.
03:17 ಮತ್ತು explode() ಫಂಕ್ಷನ್ , ಇದು explode ಅನ್ನು ಎಕೋ ಮಾಡಲಿ.
03:23 ಇದು ನಿಮ್ಮ ಸ್ಟ್ರಿಂಗ್ ಅಂದರೆ ಖಾಲಿ ಸ್ಟ್ರಿಂಗ್ಅನ್ನು ತುಂಡರಿಸುತ್ತದೆ, ಆರಂಭದಿಂದ ಕೊನೆಯವರೆಗೆ ಇದು ಸ್ಟ್ರಿಂಗ್ ಅನ್ನು ಅರೇ ಆಗಿ ತುಂಡರಿಸುತ್ತದೆ.
03:32 ನಾನು ಇದನ್ನು ರಚಿಸಿ, ಬರೆಯುವೆನು.
03:35 ನಾನು 1 2 3 4 5 –ಇವುಗಳನ್ನು ಅರೆಯ ಪ್ರತ್ಯೇಕ ಎಲಿಮೆಂಟ್ ಆಗಿ ಸ್ಟೋರ್ ಮಾಡಲು ಬಯಸುವೆನು.
03:40 ಅದಕ್ಕಾಗಿ ನಾನು explode string ಎಂದು ಇಲ್ಲ ಕ್ಷಮಿಸಿ – ನಾನು ಇಲ್ಲಿ string ಅನ್ನು ತುಂಡರಿಸಲು ಏನನ್ನು ಬಳಸುವೆನು ಎಂದು ತೋರಿಸುವೆನು.
03:45 ಈ ಸಂದರ್ಭದಲ್ಲಿ ಇದು space ಆಗಿದೆ.
03:49 ನಾವು ಸ್ಲ್ಯಾಶ್ ಅನ್ನು ಹೊಂದಿದ್ದರೆ, ನಾವು ಇದನ್ನು ಸ್ಲ್ಯಾಶ್ ಎಂದು ಬದಲಿಸೋಣ.
03:51 ಏಕೆಂದರೆ ಇದು ಡಿಟರ್ಮಿನೆಂಟ್ (ನಿರ್ಣಾಯಕ) ಆಗಿರುವುದು, ಇದು ಇಲ್ಲಿಂದ ಆರಂಭವಾಗುವುದು ಮತ್ತು ಇದು ವಿಭಜಕವಾಗಿರುವುದು.
03:57 ಇದು ಎರಡನೆಯ ವ್ಯಾಲ್ಯು ಆಗಿರುವುದು.

ಈಗ ಸದ್ಯಕ್ಕೆ ನಾವು ಸ್ಪೇಸ್ ಅನ್ನು ಬಳಸೋಣ. ಸರಿಯೇ?

04:03 ನಿಮಗೆ ಏನು ಬೇಕೊ ಅದನ್ನು ನೀವು ಇಲ್ಲಿ ಸೇರಿಸಬಹುದು. ಇದು ಅಸ್ಟೆರಿಸ್ಕ್ ಕೂಡ ಆಗಿರಬಹುದು.
04:06 ಇದು ಯಾವ ಚಿಹ್ನೆಯಾದರೂ ಆಗಿರಬಹುದು. ಆದರೆ ನೀವು ಸ್ಟ್ರಿಂಗ್ ಅನ್ನು ಯಾವುದು ತುಂಡರಿಸಬೇಕು ಎಂಬುದನ್ನು ಸೂಚಿಸಬೇಕು.
04:11 explode ನಂತರ string ನ ಹೆಸರು ಆಗಿರುತ್ತದೆ.
04:16 ಇದು ಇಷ್ಟೇ ಆಗಿರುವುದು.
04:18 ಈಗ ಅದನ್ನು ಪರೀಕ್ಷಿಸೋಣ.
04:20 ರಿಫ್ರೆಶ್ ಮಾಡಿ.
04:22 "Array" ಈಗ ಇದು ಅರೇ ಅನ್ನು ಎಕೋ ಮಾಡುತ್ತಿದೆ.
04:26 ನಾನು ಇಲ್ಲಿ ಒಂದು ಅರೇಯನ್ನು ಎಕೋ ಮಾಡಿರುವುದನ್ನು ನೀವು ನೋಡಬಹುದು.
04:30 ಇದು ಅರೇ ಗೆ ಸೆಟ್ ಆಗಿದೆ ಎಂದು ಹೇಳಬಹುದು ಏಕೆಂದರೆ ನಾವು ನಮ್ಮ ಅರೇ ಟ್ಯುಟೋರಿಯಲ್ ನಲ್ಲಿ ಇದರ ಕುರಿತು ಕಲಿತಿದ್ದೇವೆ.
04:35 ಇದು ಇಲ್ಲಿ ನಾವು ಅರೇ ಯನ್ನು ಹೊಂದಿದ್ದೇವೆ ಎಂದು ಹೇಳುತ್ತದೆ.
04:37 ನಾವು ಇಲ್ಲಿ ಕೇವಲ ಈ ಫಂಕ್ಷನ್ ಅನ್ನು ಬಳಸಿ ನೇರವಾಗಿ ಎಕೋ ಮಾಡಿರುವೆವು,
04:41 ಆದರೆ ನಾವು ಇದನ್ನು ಒಂದು ವೇರಿಯೇಬಲ್ ಗೆ ಸೆಟ್ ಮಾಡಬೇಕು.
04:44 ಹಾಗಾಗಿ ಈಗ ನಾವು ಅದನ್ನು $exp array ಗೆ ಸರಿದೂಗಿಸೋಣ ಮತ್ತು ನಾವು $exp- array ಯನ್ನು ಎಕೋ ಮಾಡಿದರೆ ನಾವು ಸಂಖ್ಯೆಗಳನ್ನು echo ಮಾಡಬಹುದು.
04:52 ನಾವು ಇಲ್ಲಿ ಸೊನ್ನೆ, ಒಂದು, ಎರಡು, ಮೂರು, ನಾಲ್ಕು – ಇವುಗಳನ್ನು ಬಳಸಬಹುದು. ಇದು ನಾಲ್ಕು ಆಗಿದೆ.
04:56 ಇದರ ವ್ಯಾಲ್ಯು ಸೊನ್ನೆ ಆಗಿದ್ದಾಗ, ಇದು 1 ಕ್ಕೆ ಸಮವಾಗಿರುತ್ತದೆ.
05:01 ನಾನು ಇಲ್ಲಿ 1 ಎಂದು ಟೈಪ್ ಮಾಡಿದರೆ ಇದು 2 ಎಂದು echo ಮಾಡಬೇಕು.
05:06 ಸರಿ ನಾವು ನಮ್ಮ ಅರೇಯನ್ನು ಯಶಸ್ವಿಯಾಗಿ ತುಂಡರಿಸಿದ್ದೇವೆ.
05:09 ನಾನು ಮೊದಲೇ ಹೇಳಿದಂತೆ, ನಾವು ಇಲ್ಲಿ ಸ್ಲ್ಯಾಶ್ ಅನ್ನು ಇಟ್ಟರೆ ಇಲ್ಲಿ ಕೂಡ ಈ ಸ್ಪೇಸ್ ಅನ್ನು ಸ್ಲ್ಯಾಶ್ ನಿಂದ ಬದಲಾಯಿಸಿಬೇಕು.
05:16 ನಾವು ಇಲ್ಲಿ ಅದೇ ಫಲಿತಾಂಶವನ್ನು ಪಡೆಯುತ್ತೇವೆ.
05:21 ಇದು explode() ನ ಕುರಿತಾಗಿದೆ.
05:23 ಇದಕ್ಕೆ ವಿರುದ್ಧವಾದದ್ದು implode() ಆಗಿದೆ.
05:26 ಈಗ ಅದರ ಕುರಿತು ನೋಡೋಣ.
05:28 ನೀವು ಇಲ್ಲಿ implode() ಫಂಕ್ಷನ್ ಅನ್ನು ನೋಡಬಹುದು, ಮತ್ತು ಇದನ್ನು join() ಎಂದೂ ಕರೆಯುತ್ತಾರೆ.
05:32 ಹಾಗಾಗಿ ನೀವು ಇದನ್ನು join ಅಥವಾ implode – ಇವೆರಡರಲ್ಲಿ ಯಾವ ಹೆಸರಿನಿಂದಾದರೂ ಕರೆಯಬಹುದು.
05:38 ನಾನು ಈಗ $new string ಎಂದು ಟೈಪ್ ಮಾಡುವೆನು, ಇದು implode() ನ ವ್ಯಾಲ್ಯು ಗೆ ಸಮವಾಗಿರಲಿ ಮತ್ತು ನಾವು ನಮ್ಮ '$exparray' ಅನ್ನು ಇಂಪ್ಲೋಡ್ ಮಾಡೋಣ.
05:51 ಈಗ ಇದನ್ನು ಪ್ರಯತ್ನಿಸೋಣ.
05:55 ಸರಿ, ಯಾವುದೇ ಎರರ್ ಇಲ್ಲದೇ ನಾವು ಇದನ್ನು ಮಾಡಿರುವೆವು.
05:57 ಈಗ ನಾವು ನಮ್ಮ $new string ಅನ್ನು echo ಮಾಡೋಣ.
06:01 ಈಗ ಇದು ನಾವು ಮೊದಲು ಏನು ಮಾಡಿದ್ದೆವೋ ಅದನ್ನು ನೆನಪಿಸುತ್ತದೆ. ಆದರೆ ಸ್ಪೇಸ್ ಗಳಿಲ್ಲ.
06:05 ಆದರೆ ನೀವು ಇಲ್ಲಿ ಅರೇಯನ್ನು ಯಾವ ಚಿಹ್ನೆಯು ತುಂಡರಿಸಬೇಕು ಎಂದು ಸೂಚಿಸಬಹುದು.
06:09 ಹಾಗಾಗಿ ನಾನು ಇಲ್ಲಿ space ಅನ್ನು ಸೇರಿಸಲು ನಿರ್ಧರಿಸಿದ್ದೇನೆ. ಆದರೆ ನಿಮಗೆ ಸ್ಲ್ಯಾಶ್ ಬೇಕಾದಲ್ಲಿ ಇಲ್ಲಿ ಫಾರ್ವಾರ್ಡ್ ಸ್ಲ್ಯಾಶ್ ಅನ್ನು ಹಾಕಿ ಆ ಫಲಿತಾಂಶವನ್ನು ಪಡೆಯಬಹುದು.
06:21 ಹಿಂದಿರುಗಿ ನೋಡಿದರೆ ಈ ಎರಡು ಫಂಕ್ಷನ್ ಗಳು ಅರೇ ಇಂದ ಮತ್ತು ಅರೇ ಗೆ ಪರವರ್ತಿಸಲು ಬಳಸಲಾಗುತ್ತದೆ.
06:27 ಇದು explode() ಮತ್ತು implode() ಫಂಕ್ಷನ್ ಗಳ ಕುರಿತಾಗಿದೆ. ಮತ್ತು ಮೊದಲೇ ಹೇಳಿದ ಹಾಗೆ, ಇದನ್ನು join() ಎಂದು ಕೂಡ ಬರೆಯಬಹುದು.
06:32 ರಿಫ್ರೆಶ್ ಮಾಡಿದರೆ ನಾವು ಅದೇ ಫಲಿತಾಂಶವನ್ನು ಪಡೆಯುವೆವು.
06:34 ಇದು 'implode()' ಫಂಕ್ಷನ್ ನ ಕುರಿತಾಗಿದೆ.
06:36 ನಾವು ಹೋಗುವ ಮುಂದಿನದು nl2br() ಫಂಕ್ಷನ್ ಆಗಿದೆ.
06:41 ಈಗ ಈ ಫಂಕ್ಷನ್ ಇದು ನಿಜವಾಗಿಯೂ ಕ್ರಿಯಾತ್ಮಕವಾಗಿದೆ. ಮತ್ತು ಡಾಟಾಬೇಸ್ ಗಳೊಂದಿಗೆ ಕೆಲಸ ಮಾಡುವಾಗ ಇದು ತುಂಬ ಸರಳವಾಗಿದೆ.
06:46 ಡಾಟಾವು ಸಾಲಿನ ಆಧಾರದ ಮೇಲೆ ಸ್ಟೋರ್ ಆದಾಗ ಇದು ಉಪಯುಕ್ತವಾಗಿದೆ.
06:51 ನಾನು ಈಗಾಗಲೇ ಹೇಳಿದ ಹಾಗೆ ನನ್ನ ಹಿಂದಿನ ಟ್ಯುಟೋರಿಯಲ್ ಗಳನ್ನು ನೆನಪಿಸಿಕೊಳ್ಳಿ.
06:58 ಈಗ 'Hello' ಅಥವಾ 'Hello', 'New line', 'Another new line' ಎಂದು ಟೈಪ್ ಮಾಡಿ, ಒಂದು ಸೆಮಿಕೋಲನ್ ಅನ್ನು ಹಾಕುವೆನು.
07:12 ಇದನ್ನು ಹಾಗೇ ಇಡೋಣ.
07:16 ನಾನು ಈಗ ಇದನ್ನು ಎಕೋ ಮಾಡಿದರೆ ಏನು ಆಗುವುದೆಂದು ನೀವು ಊಹೆ ಮಾಡಬಹುದು.
07:19 ನಾವು ಇದನ್ನು ಪಡೆಯುವೆವು.
07:21 ನಾವು ಇದನ್ನು ಬೇರೆ ಬೇರೆ ಸಾಲಿನಲ್ಲಿ ಪಡೆಯಬೇಕು ಎಂದರೆ ನಾವು 'br' ಕಮಾಂಡ್ ಅನ್ನು ಬಳಸಬೇಕು.
07:30 ನೀವು ಯಾವುದಾದರೂ ಕಾರಣಕ್ಕಾಗಿ ಎಚ್.ಟಿ.ಎಂ.ಎಲ್ ಅನ್ನು ಬಳಸಲು ಇಷ್ಟಪಡದಿದ್ದರೆ, ಅಥವಾ ನೀವು ಡಾಟಾಬೇಸ್ ನ ಫಲಿತಾಂಶದಿಂದ ಪಡೆದುಕೊಳ್ಳುತ್ತಿದ್ದರೆ, ಆಗ ನೀವು ಲೈನ್ ಬ್ರೇಕ್ ಅನ್ನು ಹಾಕಲು ಯಾವುದಾದರೂ ಒಂದು ಕಠಿಣ ಫಂಕ್ಷನ್ ಅನ್ನು ಬಳಸಬೇಕಾಗುತ್ತದೆ.
07:44 ಇದು ಡಾಟಾಬೇಸ್ ನಿಂದ ಸೆಟ್ ಮಾಡುವಾಗ ಆಗುತ್ತದೆ.
07:47 ನೀವು ಅದನ್ನು ರಚಿಸಲಾಗುವುದಿಲ್ಲ ಅಥವ ಡಾಟಾಬೇಸ್ ನಲ್ಲಿ ಕುಂಟು ಪರೀಕ್ಷೆ ಮಾಡುವಾಗ ನೀವು ಏನು ಮಾಡಬೇಕಾಗುತ್ತದೆ ಎಂದರೆ, ನೀವೇ ಕೋಟ್ ಅನ್ನು ಬಳಸಲು ಅಥವಾ ಬ್ರೇಕ್ ಅನ್ನು ಹಾಕಲು ಸಾಧ್ಯವಿಲ್ಲ. ಇದು ಅರ್ಥವತ್ತಾಗಿರುತ್ತದೆ.
07:59 ಆದರೆ ನೀವು ಸ್ಟ್ರಿಂಗ್ ನ ಆರಂಭದಲ್ಲಿ nl2br ಅನ್ನು ಬಳಸಿದರೆ- ನಾವು ಬ್ರ್ಯಾಕೆಟ್ ಅನ್ನು ಇಲ್ಲಿ ಮುಗಿಸುವೆವು -
08:04 ನೀವು ಇದು ನಿಮಗೆ ಬೇಕಾದ ಹಾಗೆ ಎಕೋ ಮಾಡಿರುವುದನ್ನು ನೋಡಬಹುದು.
08:08 ನಾವು ಮೇಲ್ಗಡೆಯೂ ಲೈನ್ ಬ್ರೇಕ್ ಅನ್ನು ಹೊಂದಿದ್ದೇವೆ ಏಕೆಂದರೆ ನಾವು ಇಲ್ಲಿ ಸ್ಪೇಸ್ ಅನ್ನು ಕೊಟ್ಟಿದ್ದೇವೆ. ಈಗ ಅದನ್ನು ತೆಗೆದುಬಿಡೋಣ.
08:16 nl2br ಇಲ್ಲದಿದ್ದರೆ ನಾವು ಎಲ್ಲವನ್ನೂ ಒಂದೇ ಸಾಲಿನಲ್ಲಿ ಪಡೆಯುವೆವು ಮತ್ತು nl2br ಇದ್ದಾಗ ನಾವು ಬೇರೆ ಬೇರೆ ಸಾಲಿನಲ್ಲಿ ನಮಗೆ ಬೇಕಾದ ಹಾಗೆ ಫಲಿತಾಂಶವನ್ನು ಪಡೆಯುವೆವು.
08:30 ಸಮಯದ ಅಭಾವವಿರುವುದರಿಂದ, ನಾನು ಈ ವಿಡಿಯೋವನ್ನು ಇಲ್ಲಿಗೆ ನಿಲ್ಲಿಸುವೆನು. ಉಳಿದ ಫಂಕ್ಷನ್ ಗಳು ಎರಡನೇ ಭಾಗದಲ್ಲಿದೆ. ಅದನ್ನು ನೋಡಿ.
08:38 ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14