PHP-and-MySQL/C2/Comparison-Operators/Kannada

From Script | Spoken-Tutorial
Revision as of 15:52, 26 May 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 PHP ಟ್ಯುಟೋರಿಯಲ್ ನಲ್ಲಿ, ನಾವು Comparison Operators ಬಗ್ಗೆ ಕಲಿಯುವೆವು.
00:05 ಹೋಲಿಸುವ ಆಪರೇಟರ್ ಗಳು (Comparison operators) ಎರಡು ವ್ಯಾಲ್ಯೂಗಳನ್ನು, ಎರಡು ಸ್ಟ್ರಿಂಗ್ ಗಳನ್ನು ಅಥವಾ ಎರಡು ವೇರಿಯೇಬಲ್ ಗಳನ್ನು ಹೋಲಿಸಬಲ್ಲವು.
00:15 ಇದಕ್ಕಾಗಿ, ನಾನು if ಸ್ಟೇಟ್ಮೆಂಟ್ ಅನ್ನು ಬಳಸುವವನಿದ್ದೇನೆ.
00:19 if ಸ್ಟೇಟ್ಮೆಂಟ್ ನ ಸ್ಟ್ರಕ್ಚರ್ ಅನ್ನು ಕ್ರಿಯೇಟ್ ಮಾಡುವುದರ ಮೂಲಕ ನಾವು ಆರಂಭಿಸೋಣ.
00:25 ಇಲ್ಲಿ, ಕಂಡೀಷನ್ (ಷರತ್ತು) if 1==1 ಎಂದು ಆಗಿದೆ.
00:30 echo
00:33 True
00:37 ಅನಂತರ else
00:42 echo
00:44 False. ನೆನಪಿಡಿ, ನನಗೆ ಈ ಬ್ರ್ಯಾಕೆಟ್ ಗಳ ಅಗತ್ಯವಿಲ್ಲ. ಹೀಗಾಗಿ, ನಾನು ಅವುಗಳನ್ನು ತೆಗೆದುಬಿಡುತ್ತೇನೆ.
00:51 ನಾವು ಅದನ್ನು 'ಇಂಡೆಂಟ್' ಮಾಡೋಣ.
00:56 ಇದರ ಬಗ್ಗೆ ಚಿಂತಿಸಬೇಡಿ.
00:59 ಇದು ಮೊದಲನೆಯ ಹೋಲಿಸುವ ಆಪರೇಟರ್ ಆಗಿದೆ.
01:02 ಎರಡು 'equals to' (==) ಎಂದರೆ, 'comparison operator' ಎಂದರ್ಥ. ಇದನ್ನು ಹಿಂದೆ ನಾವು if ಸ್ಟೇಟ್ಮೆಂಟ್ ನಲ್ಲಿ ನೋಡಿದ್ದೇವೆ.
01:08 1, 1 ಕ್ಕೆ ಸಮನಾಗಿದೆ; ಹೀಗಾಗಿ ಇದು "True" ಅನ್ನು echo ಮಾಡುತ್ತದೆ. ಇದನ್ನು ನಾವು ಪ್ರಯತ್ನಿಸೋಣ.
01:13 ನಮಗೆ True ಸಿಕ್ಕಿದೆ.
01:15 ನಾನು ಇದನ್ನು ಬದಲಾಯಿಸುತ್ತೇನೆ. if 1 is greater than 1 (1>1), ಎಂದು ಇದ್ದಾಗ ನಮಗೆ ಏನು ಉತ್ತರ ಸಿಗುತ್ತದೆ ಎಂದು ನೋಡೋಣ.
01:27 False. ಏಕೆಂದರೆ 1, 1 ಕ್ಕೆ ಸಮನಾಗಿದೆ, 1 ಕ್ಕಿಂತ ಹೆಚ್ಚು ಇಲ್ಲ.
01:33 ಈಗ ನಾವು ಇದನ್ನು 1 greater than or equal to 1 (1>=1) ಎಂದು ಬದಲಾಯಿಸೋಣ.
01:37 if 1 greater than or equal to 1, echo "True", else, echo "False" .
01:45 ಇಲ್ಲಿ, ನಮಗೆ True ಸಿಗಬೇಕು.
01:48 ನೀವು 'less than or equal to' ನೊಂದಿಗೆ ಸಹ ಇದನ್ನೇ ಮಾಡಬಹುದು. ಉದಾಹರಣೆಗೆ: less than (<)
01:55 False ಎಂದು ಇರುವುದು, less than or equal to (<=) True ಎಂದು ಇರುವುದು.
02:01 ನಾವು 'not equal' ಎಂದು ಸಹ ಹೇಳಬಹುದು. if 1 is not equal to 1 (1!=1), echo True.
02:11 ರಿಫ್ರೆಶ್ ಮಾಡಿ. ನಮಗೆ ಇಲ್ಲಿ False ಸಿಗುತ್ತದೆ. ಏಕೆಂದರೆ 1, 1 ಕ್ಕೆ ಸಮನಾಗಿದೆ. ಈಗ ನಾವು if 1 isn't equal to 2 (1!=2) ಎನ್ನೋಣ.
02:20 ನಮಗೆ True ಎಂದು ಸಿಗುತ್ತದೆ. ಏಕೆಂದರೆ 1, 2 ಕ್ಕೆ ಸಮನಾಗಿಲ್ಲ.
02:25 ಇವುಗಳು ನಮ್ಮ ಟ್ಯುಟೋರಿಯಲ್ ಗಳಲ್ಲಿ ನೀವು ಬಳಸುವ ಪ್ರಮುಖ ಹೋಲಿಸುವ ಆಪರೇಟರ್ ಗಳಾಗಿವೆ.
02:33 ಇವುಗಳನ್ನು ವಿವರವಾಗಿ ಅಭ್ಯಾಸ ಮಾಡಿದಾಗ, ನಿಮಗೆ ಸರಿಯಾಗಿ ಅರ್ಥವಾಗುವುದು.
02:40 ಈ ಆಪರೇಟರ್ ಗಳನ್ನು ಬಳಸಿ, ನೀವು ವೇರಿಯೇಬಲ್ ಗಳನ್ನು ಸಹ ಹೋಲಿಸಬಹುದು. ಉದಾಹರಣೆಗೆ: num1 = 1,
02:48 num2 = 2. ಈಗ ನಾವು ಮಾಡುವುದು ಇಷ್ಟೇ, ಈ ವ್ಯಾಲ್ಯೂಗಳನ್ನು ಬದಲಿಸುತ್ತೇವೆ. ಈಗ ನೋಡಿ.
03:01 ಇದು, ನಮಗೆ ಈಮೊದಲು ಸಿಕ್ಕಿರುವ ಫಲಿತಾಂಶವನ್ನೇ, ಎಂದರೆ, True ಎಂದು ಕೊಡುತ್ತದೆ. ಈಗ ನಾವು ಈ ವ್ಯಾಲ್ಯೂಗಳನ್ನು ಬದಲಾಯಿಸಬೇಕು.
03:11 ದಯವಿಟ್ಟು ಗಮನಿಸಿ. ಇದು, ಈಗ num1 = 1, num2 = 1 ಎಂದು ಓದುವುದು. ಹೀಗಾಗಿ, 'num1' not equal to 1, ಅದು "False" ಎಂದಾಗುವುದು. ಏಕೆಂದರೆ, 1, ಮತ್ತು1 ಸಮನಾಗಿರುತ್ತವೆ. ಆದ್ದರಿಂದ ನಮಗೆ False ಎಂದು ಸಿಗುತ್ತದೆ.
03:24 ಇವು ಸರಳವಾದ ಹೋಲಿಕೆಯ ಆಪರೇಟರ್ ಗಳಾಗಿವೆ. ಇವುಗಳನ್ನು ಪ್ರಯತ್ನಿಸಿ ಏನೆಲ್ಲ ಮಾಡಬಹುದೆಂದು ನೋಡಿ.

ವೀಕ್ಷಿಸಿದ್ದಕ್ಕಾಗಿ ವಂದನೆಗಳು.

03:33 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು!

Contributors and Content Editors

Sandhya.np14