Java/C3/Java-Interfaces/Kannada
From Script | Spoken-Tutorial
Revision as of 17:07, 15 May 2020 by Sandhya.np14 (Talk | contribs)
Time | Narration |
00:01 | ಜಾವಾ ಇಂಟರ್‌ಫೇಸ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್‌ಫೇಸ್ ಅನ್ನು ರಚಿಸುವುದು, |
00:10 | ಇಂಪ್ಲಿಮೆಂಟೇಶನ್ ಕ್ಲಾಸುಗಳ ರಚನೆ ಮತ್ತು ಇಂಟರ್‌ಫೇಸ್ ನ ಬಳಕೆ ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:16 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04, JDK1.7 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಿಳಿದಿರಬೇಕು. |
00:36 | ಜಾವಾದಲ್ಲಿ ಸಬ್-ಕ್ಲಾಸಿಂಗ್ ಮತ್ತು Abstract (ಅಬ್ಸ್ಟ್ರ್ಯಾಕ್ಟ್ ) ಕ್ಲಾಸುಗಳ ಬಗ್ಗೆ ಸಹ ತಿಳಿದಿರಬೇಕು. |
00:42 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ತೋರಿಸಿರುವ ಲಿಂಕ್‌ಗೆ ದಯವಿಟ್ಟು ಭೇಟಿ ನೀಡಿ. |
00:48 | ಮೊದಲಿಗೆ ನಾವು ಇಂಟರ್ಫೇಸ್ ಏನೆಂಬುದನ್ನು ಅರಿತುಕೊಳ್ಳೋಣ. |
00:52 | ಇಂಟರ್‌ಫೇಸ್, abstract ಮೆಥಡ್ ಗಳ ಮತ್ತು ಸ್ಟಾಟಿಕ್ ಡೇಟಾ ಮೆಂಬರ್ ಗಳ ಗಣವನ್ನು ಹೊಂದಿರುತ್ತದೆ. |
00:58 | ಇದು ಬಾಡಿ ಇಲ್ಲದ ಮೆಥಡ್ ಗಳ ಸಮೂಹದ ಸಿಗ್ನೇಚರ್ ಗಳನ್ನು ವ್ಯಾಖ್ಯಾನಿಸುತ್ತದೆ. |
01:04 | ಇದನ್ನು interface ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
01:08 | ನಾವೀಗ Eclipse ಗೆ ಬದಲಾಯಿಸುತ್ತೇವೆ ಮತ್ತು InterfaceDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸುತ್ತೇವೆ. |
01:15 | ಇಲ್ಲಿ, ಇಂಟರ್‌ಫೇಸ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳು ಮತ್ತು ಇಂಟರ್ ಫೇಸ್ ಅನ್ನು ರಚಿಸಲಿದ್ದೇವೆ. |
01:24 | src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Interface ಮೇಲೆ ಕ್ಲಿಕ್ ಮಾಡಿ. |
01:30 | ಹೆಸರನ್ನು Animal ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:34 | ಗಮನಿಸಿ: ಇಂಟರ್‌ಫೇಸ್ ಅನ್ನು ನಿರೂಪಿಸಲು ʻʻinterface'’ ಕೀವರ್ಡ್ ಅನ್ನು ಬಳಸಲಾಗಿದೆ. |
01:39 | ಈಗ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
01:43 | ಇಲ್ಲಿ ಇಂಟರ್‌ಫೇಸ್ ನ ಹೆಸರು Animal ಆಗಿದೆ. |
01:46 | ಇದು talk(), see() ಮತ್ತು move() ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ. |
01:52 | ಇಂಟರ್‌ಫೇಸ್ ನಲ್ಲಿನ ಇಂತಹ ಎಲ್ಲಾ ಮೆಥಡ್ ಗಳು ಸೂಚ್ಯವಾಗಿ (implicitly) public ಮತ್ತು abstract ಆಗಿವೆ. |
01:59 | ಇಂಟರ್‌ಫೇಸ್ constant ವೇರಿಯೇಬಲ್ ಡಿಕ್ಲೆರೇಷನ್ ಗಳನ್ನು ಸಹ ಹೊಂದಿರಬಹುದು. |
02:04 | ಇಲ್ಲಿ, ಕಾನ್ಸ್ಟಂಟ್ ಸ್ಟ್ಟಿಂಗ್ ವ್ಯಾಲ್ಯು “Mammal” ಅನ್ನು ವೇರಿಯೇಬಲ್ “type1” ಗೆ ಅಸೈನ್ ಮಾಡಲಾಗಿದೆ. |
02:12 | ಮತ್ತು “Reptiles” ಅನ್ನು ವೇರಿಯೇಬಲ್ “type2” ಗೆ ಅಸೈನ್ ಮಾಡಲಾಗಿದೆ. |
02:16 | ಇಂಟರ್‌ಫೇಸ್ ನಲ್ಲಿ ಡಿಫೈನ್ ಮಾಡಲಾದ ಎಲ್ಲಾ ಕಾನ್ಸ್ಟಂಟ್ ವ್ಯಾಲ್ಯು ಗಳು ಸೂಚ್ಯವಾಗಿ public, static ಮತ್ತು final ಆಗಿವೆ. |
02:25 | ನಂತರ ನಾವು ಇಂಟರ್ಫೇಸ್ ಗಾಗಿ ಉದಾಹರಣೆಯೊಂದಿಗೆ implementation ಕ್ಲಾಸ್ ನೋಡುವೆವು. |
02:32 | ಇಲ್ಲಿ Human ಒಂದು ಕ್ಲಾಸ್ ಆಗಿದ್ದು, Animal ಇಂಟರ್ಫೇಸ್ ಅನ್ನು ಕಾರ್ಯಗತಗೊಳಿಸುತ್ತದೆ. |
02:38 | ಆದ್ದರಿಂದ, talk(), see() ಮತ್ತು move() ಮೆಥಡ್ ಗಳಿಗಾಗಿ ಇದು ಇಂಪ್ಲೆಮೆಂಟೇಶನ್ ಗಳನ್ನು ಒದಗಿಸಲೇಬೇಕು. |
02:45 | ಒಂದು ಕ್ಲಾಸ್, ಅನೇಕ ಇಂಟರ್ಫೇಸ್ ಗಳನ್ನು ಸಹ ಇಂಪ್ಲಿಮೆಂಟ್ ಮಾಡಬಲ್ಲದು. |
02:49 | ಉದಾಹರಣೆಯಲ್ಲಿ ತೋರಿಸಿರುವಂತೆ, Human ಕ್ಲಾಸ್ ಎನ್ನುವುದು Animal ಮತ್ತು Action ಎಂಬ ಎರಡು ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುತ್ತದೆ. |
02:57 | ವಿಭಿನ್ನ ಇಂಟರ್ಫೇಸ್ ಗಳನ್ನು ಗುರುತಿಸಲು, ಸಿಂಟ್ಯಾಕ್ಸ್ ನಲ್ಲಿ comma operator ಅನ್ನು ಬಳಸಿರುವುದನ್ನು ಗಮನಿಸಿ. |
03:04 | ಈಗ ಈ ಕ್ಲಾಸ್, Animal ಮತ್ತು Action ಇಂಟರ್ಫೇಸ್ ಗಳೆರಡರಲ್ಲೂ ಎಲ್ಲಾ abstract ಮೆಥಡ್ ಗಳಿಗೆ ಇಂಪ್ಲಿಮೆಂಟೇಶನ್ ಗಳನ್ನು ಒದಗಿಸಬೇಕು. |
03:13 | ಇಲ್ಲಿರುವ ಚಿತ್ರವು ಒಂದು ಇಂಪ್ಲಿಮೆಂಟ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
03:18 | Animal ಕ್ಲಾಸ್ ಇಲ್ಲಿ ಇಂಟರ್ಫೇಸ್ ಆಗಿದೆ. |
03:22 | Human ಮತ್ತು Snake ಕ್ಲಾಸುಗಳು ಎರಡು implementation ಕ್ಲಾಸುಗಳಾಗಿವೆ. |
03:28 | Human ಕ್ಲಾಸ್, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
03:36 | ಮತ್ತು, Snake ಕ್ಲಾಸ್, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
03:45 | ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ ಇಂಟರ್ಫೇಸ್ ಗಳ ಬಳಕೆಯನ್ನು ತಿಳಿದುಕೊಳ್ಳೋಣ. |
03:50 | default package ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Human ಎನ್ನುವ ಕ್ಲಾಸನ್ನು ರಚಿಸಿ. |
03:56 | ಈಗ, ಇದನ್ನು Animal ನ implementation ಕ್ಲಾಸ್ ಆಗಿಸಲು ಹೀಗೆ ಟೈಪ್ ಮಾಡಿ: implements Animal. |
04:04 | ನಾವೀಗ Eclipse IDE ಯಲ್ಲಿ ಎರರ್ ಅನ್ನು ನೋಡಬಹುದು. |
04:09 | Animal ಇಂಟರ್ಫೇಸ್ ಗೆ, implementation ಅನ್ನು ಒದಗಿಸಬೇಕು ಎಂದು ಈ ಎರರ್ ಸೂಚಿಸುತ್ತದೆ. |
04:15 | ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು ಎಂದು ನಾವು ನೋಡೋಣ. |
04:19 | ಈಗ talk(), see() ಮತ್ತು move() ಮೆಥಡ್ ಗಳನ್ನು ಡಿಫೈನ್ ಮಾಡೋಣ. |
04:23 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void talk( ) ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಮತ್ತು ಕೋಟ್ಸ್ ಒಳಗೆ "I am a human and I belong to" ಎಂದು ಟೈಪ್ ಮಾಡಿ. |
04:37 | ನಾವೀಗ Animal ಇಂಟರ್ಫೇಸ್ ನಲ್ಲಿ ಡಿಕ್ಲೇರ್ ಮಾಡಿರುವ static, final variable type1 ನ ವ್ಯಾಲ್ಯೂವನ್ನು ಬಳಸಬಹುದು. |
04:45 | ಇದಕ್ಕಾಗಿ, ಹೀಗೆ ಟೈಪ್ ಮಾಡಿ.+ Animal.type1+ ಕೋಟ್ಸ್ ಒಳಗೆ "family" Semicolon. |
04:54 | ನಾವೀಗ see() ಮೆಥಡ್ ಅನ್ನು ಇಂಪ್ಲೆಮೆಂಟ್ ಮಾಡೋಣ. |
04:57 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void see( ) ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಕೋಟ್ಸ್ ಒಳಗೆ "I can see all colors" Semicolon. |
05:11 | ನಾವು move() ಮೆಥಡ್ ಅನ್ನು ಸಹ ಡಿಫೈನ್ ಮಾಡಬೇಕು. |
05:14 | ಈಗ ಹೀಗೆ ಟೈಪ್ ಮಾಡಿ : public void move( ) ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಕೋಟ್ಸ್ ಒಳಗೆ "I move by walking" semicolon. |
05:29 | ಈ ಎಲ್ಲಾ ಮೆಥಡ್ ಗಳನ್ನು ಇಂಪ್ಲಿಮೆಂಟ್ ಮಾಡಿದಾಗ ಎರರ್ ಮಾಯವಾಗುತ್ತದೆ ಎಂಬುದನ್ನು ಗಮನಿಸಿ. |
05:34 | ನಂತರ, Snake ಕ್ಲಾಸನ್ನು ಹೇಗೆ ಡಿಫೈನ್ ಮಾಡಬಹುದು ಎಂದು ನೋಡೋಣ. |
05:38 | ಈಗಾಗಲೇ ನಾನಿದನ್ನು ನನ್ನ ಪ್ರಾಜೆಕ್ಟ್ ನಲ್ಲಿ ರಚಿಸಿದ್ದೇನೆ. |
05:42 | ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು Snake ಕ್ಲಾಸ್ ಅನ್ನು ರಚಿಸಿ ಮತ್ತು ಸ್ಕ್ರೀನ್ ನಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿ. |
05:49 | ನಾವೀಗ ಕೋಡ್ ಅನ್ನು ನೋಡೋಣ. |
05:52 | Animal ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳಾದ talk(), see() ಮತ್ತು move() ಗಳನ್ನು ಈ ಕ್ಲಾಸ್ ಒಳಗೆ ಇಂಪ್ಲೆಮೆಂಟ್ ಮಾಡಿದ್ದೇವೆ. |
06:01 | ಇಲ್ಲಿ talk() ಮೆಥಡ್, “I am a snake and I belong to” ಎಂದು ಪ್ರಿಂಟ್ ಮಾಡುತ್ತದೆ. |
06:07 | ನಂತರ Animal.type2 ನ ವ್ಯಾಲ್ಯೂವನ್ನು, ಆನಂತರ “family” ಯನ್ನು ಪ್ರಿಂಟ್ ಮಾಡಬೇಕು. |
06:13 | ಇಲ್ಲಿ see() ಮೆಥಡ್, “I can see only in black and white” ಎಂದು ಪ್ರಿಂಟ್ ಮಾಡುತ್ತದೆ. |
06:19 | move() ಮೆಥಡ್, "I move by crawling" ಅನ್ನು ಪ್ರಿಂಟ್ ಮಾಡುತ್ತದೆ. |
06:23 | ಗಮನಿಸಿ: talk(), see() ಮತ್ತು move() ಮೆಥಡ್ ಗಳಿಗಾಗಿ Human ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
06:31 | ಮತ್ತು ಇವೇ ಮೆಥಡ್ ಗಳಿಗಾಗಿ Snake ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
06:39 | ಈಗ default package ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು new > class ಮೇಲೆ ಕ್ಲಿಕ್ ಮಾಡಿ. ನಂತರ ಹೆಸರನ್ನು Demo ಎಂದು ಟೈಪ್ ಮಾಡಿ. |
06:47 | main ಮೆಥಡ್, ಈ ಕ್ಲಾಸ್ ಒಳಗೆ ಇರುವುದು. |
06:51 | ಹೀಗಾಗಿ main ಎಂದು ಟೈಪ್ ಮಾಡಿ ಮತ್ತು main ಮೆಥಡ್ ಅನ್ನು ರಚಿಸಲು ctrl+space ಒತ್ತಿ. |
06:58 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
07:01 | ಈ ಸಾಲಿನಲ್ಲಿ ನಾವು Animal ಇಂಟರ್ಫೇಸ್ ಬಳಸಿ, Human ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
07:07 | ಇದನ್ನು Animal h equals new Human(); ಎಂದು ಬರೆಯುತ್ತೇವೆ. |
07:14 | ಈಗ ನಾವು ಈ ಆಬ್ಜೆಕ್ಟ್ ಅನ್ನು ಬಳಸಿ, h.talk(); h.see(); h.move(); ಎಂದು ವಿವಿಧ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
07:26 | ನಂತರ, Animal ಇಂಟರ್ಫೇಸ್ ಬಳಸಿ ನಾವು Snake ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
07:31 | ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
07:38 | ಈ Demo ಪ್ರೋಗ್ರಾಂ ಅನ್ನು ನಾವು ರನ್ ಮಾಡೋಣ. |
07:41 | ಇದಕ್ಕಾಗಿ ಕ್ಲಾಸ್ Demo ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run as > Java Application ಆಯ್ಕೆಮಾಡಿ. |
07:48 | ಈಗ ನಾವು ಔಟ್ಪುಟ್ ಅನ್ನು ನೋಡಬಹುದು. |
07:52 | ಇವುಗಳನ್ನು, human class ನ ಆಬ್ಜೆಕ್ಟ್ h ಅನ್ನು ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
08:00 | ಇವುಗಳನ್ನು, Snake class ಆಬ್ಜೆಕ್ಟ್ s ಅನ್ನು ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
08:08 | ನಾವೀಗ ಇಂಟರ್ಫೇಸ್ ಮತ್ತು abstract ಕ್ಲಾಸ್ ಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ. |
08:14 | ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳು abstract ಆಗಿರಬೇಕು. |
08:18 | ಇಂಟರ್ಫೇಸ್ ಒಳಗೆ ಯಾವುದೇ ಕನ್ಸ್ಟ್ರಕ್ಟರ್ ಗಳು, concrete ಮೆಥಡ್ ಗಳು, |
08:23 | static ಮೆಥಡ್ ಗಳು ಮತ್ತು main ಮೆಥಡ್ ಇರಬಾರದು. |
08:28 | ಆದರೆ abstract ಕ್ಲಾಸ್ ಇವೆಲ್ಲವುಗಳನ್ನು ತನ್ನೊಳಗೆ ಹೊಂದಿರಬಹುದು. |
08:32 | ಇಂಟರ್ಫೇಸ್ ನ ವೇರಿಯೇಬಲ್ ಗಳು static ಮತ್ತು final ಆಗಿರಬೇಕು. |
08:38 | Abstract ಕ್ಲಾಸಿಗೆ ಇಂತಹ ಯಾವುದೇ ನಿರ್ಬಂಧಗಳು ಇಲ್ಲ. |
08:43 | ನಾವೀಗ ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
08:48 | ಈ ಟ್ಯುಟೋರಿಯಲ್ ನಲ್ಲಿ ನಾವು: ಇಂಟರ್ ಫೇಸ್ ರಚಿಸಲು, |
08:53 | implementation ಕ್ಲಾಸ್ ರಚಿಸಲು ಮತ್ತು, |
08:56 | ಇಂಟರ್ ಫೇಸ್ ಗಳ ಬಳಕೆ ಇವುಗಳ ಬಗ್ಗೆ ಕಲಿತೆವು. |
08:59 | ಅಸೈನ್ಮೆಂಟ್ ಗಾಗಿ, brake() ಮತ್ತು run() ಎಂಬ ಮೆಥಡ್ ಗಳನ್ನು ಹೊಂದಿರುವ Vehicle ಎಂಬ ಇಂಟರ್ಫೇಸ್ ಅನ್ನು ರಚಿಸಿ. |
09:07 | fill(String type,int quantity), pay(int quantity,int price) ಮೆಥಡ್ ಗಳನ್ನು ಹೊಂದಿರುವ Fuel ಎಂಬ ಇನ್ನೊಂದು ಇಂಟರ್ಫೇಸ್ ಅನ್ನು ರಚಿಸಿ. |
09:19 | Vehicle ಮತ್ತು Fuel ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಸಬ್- ಕ್ಲಾಸ್ Car ಅನ್ನು ರಚಿಸಿ. |
09:26 | ಇಲ್ಲಿ brake() ಮೆಥಡ್, "Car Applies Power brake" ಎಂದು ಪ್ರಿಂಟ್ ಮಾಡಬೇಕು. |
09:30 | ಮತ್ತು run() ಮೆಥಡ್, "Car is running on 4 wheels" ಎಂದು ಪ್ರಿಂಟ್ ಮಾಡಬೇಕು. |
09:35 | ಇದೇ ರೀತಿ, fill() ಮೆಥಡ್, ತುಂಬಿದ ಇಂಧನದ ಪ್ರಕಾರ ಮತ್ತು ಪ್ರಮಾಣವನ್ನು ಪ್ರಿಂಟ್ ಮಾಡಬಹುದು. |
09:41 | ಉದಾಹರಣೆಗೆ: 10 Litres of petrol. |
09:44 | pay() ಮೆಥಡ್ ಅನ್ನು, ಪಾವತಿ ಮಾಡಬೇಕಾದ ಹಣವನ್ನು ಪ್ರಿಂಟ್ ಮಾಡಲು ಬಳಸಬಹುದು. ಉದಾಹರಣೆಗೆ: Pay Rs. 640 |
09:53 | Vehicle ಮತ್ತು Fuel ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಇನ್ನೊಂದು ಸಬ್-ಕ್ಲಾಸ್ Bike ಅನ್ನು ರಚಿಸಿ. |
10:00 | ಇಲ್ಲಿ brake() ಮೆಥಡ್, "Bike Applies hand brake" ಎಂದು ಪ್ರಿಂಟ್ ಮಾಡಬಹುದು. |
10:05 | ಮತ್ತು run() ಮೆಥಡ್, “Bike is running on 2 wheels” ಎಂದು ಪ್ರಿಂಟ್ ಮಾಡಬಹುದು. |
10:10 | ನಂತರ, ಈ ಹಿಂದೆ ಹೇಳಿದಂತೆ fill() ಮತ್ತು pay() ಮೆಥಡ್ ಗಳನ್ನು ಕಾರ್ಯಗತಗೊಳಿಸಿ. |
10:15 | ಕೊನೆಯದಾಗಿ,ಈ ಫಲಿತಾಂಶಗಳನ್ನು ನೋಡಲು main() ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. |
10:21 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
10:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:41 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:48 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:52 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
11:01 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |