PHP-and-MySQL/C4/Display-Images-from-a-Directory/Kannada
From Script | Spoken-Tutorial
Revision as of 12:15, 12 May 2020 by Sandhya.np14 (Talk | contribs)
Time | Narration |
00:00 | ಡೈರಕ್ಟರಿಯಲ್ಲಿರುವ ಇಮೇಜ್ ಅನ್ನು ಹೇಗೆ ಪಟ್ಟಿ ಮಾಡುವುದು ಎಂದು ತೋರಿಸುವ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್, ಫೈಲ್ ಗಳನ್ನು ಪಟ್ಟಿ ಮಾಡುವುದು ಮತ್ತು ಅವುಗಳನ್ನು ನಿಭಾಯಿಸಲು ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸುವುದು. ಉದಾಹರಣೆಗೆ ಇಮೇಜ್ ಟ್ಯಾಗ್, ಮತ್ತು ಡೈರಕ್ಟರಿಯಲ್ಲಿ ಪಟ್ಟಿಮಾಡಿದ ಇಮೇಜ್ ಗಳನ್ನು ಎಕೋ ಮಾಡುವುದು – ಇವುಗಳ ಕುರಿತು ಕಲಿಸುತ್ತದೆ. |
00:23 | ಕೊನೆಯ ಫಲಿತಾಂಶ ಈ ರೀತಿಯಾಗಿ ಕಾಣಿಸುತ್ತದೆ. |
00:26 | ನಾನು ಇಲ್ಲಿ 8 ಇಮೇಜ್ ಗಳನ್ನು ರಚಿಸಿದ್ದೇನೆ ಮತ್ತು ಇವುಗಳನ್ನು ಪೇಜ್ ನ ಕೆಳಗಿನವರೆಗೆ ಪಟ್ಟಿ ಮಾಡಲಾಗಿದೆ. ಇವು ಬೇರೆ ಬೇರೆ ಇಮೇಜ್ ಗಳಾಗಿವೆ. |
00:33 | ಈಗ ನಾನು ನನ್ನ ಡೈರೆಕ್ಟರಿ ವಿನ್ಯಾಸವನ್ನು ಹೇಗೆ ಸೆಟ್ ಮಾಡಿದ್ದೇನೆಂದು ತೋರಿಸುವೆನು. |
00:37 | ಇಲ್ಲಿ ನನ್ನ 'show dot php' ಫೈಲ್ ಇದೆ. ಈಗ ಇದರಲ್ಲೇ ನಾವು ಕಾರ್ಯನಿರ್ವಹಿಸುವೆವು. |
00:42 | ಇಲ್ಲಿ ನನ್ನ 'images' ಫೋಲ್ಡರ್ ಇದೆ. ಅದು ಇಲ್ಲಿ ತೋರಿಸಿರುವ ಇಮೇಜ್ ಗಳನ್ನು ಹೊಂದಿದೆ. |
00:53 | ಇವುಗಳು ಯಾವ ಫಾರ್ಮ್ಯಾಟ್ ನಲ್ಲಿವೆ ಎಂಬುದು ಇಲ್ಲಿ ಮುಖ್ಯವಲ್ಲ. |
00:56 | ಅವು ಒಂದೇ ಅಥವಾ ವಿಭಿನ್ನ ಫಾರ್ಮ್ಯಾಟ್ ಗಳನ್ನು ಹೊಂದಿರಬಹುದು. ಅಥವಾ ಎಚ್.ಟಿ.ಎಮ್.ಎಲ್ ನಲ್ಲಿ ಕೆಲಸ ಮಾಡಬಲ್ಲ ಯಾವುದೇ ಇಮೇಜ್ ಫೈಲ್ ಆಗಿರಬಹುದು. |
01:04 | ಇಲ್ಲಿ ನಮ್ಮ 'show dot php' ಇದೆ. |
01:06 | ಈಗ ಸದ್ಯಕ್ಕೆ ಇದು ಖಾಲಿಯಾಗಿದೆ. |
01:09 | ಖಂಡಿತವಾಗಿಯೂ ನಮಗೆ ನಮ್ಮ ಪಿ.ಎಚ್.ಪಿ ಟ್ಯಾಗ್ ಬೇಕು. |
01:13 | ಮೊದಲಿಗೆ ನಾವು ಇಲ್ಲಿ ಒಂದು ವೇರಿಯೇಬಲ್ ನನ್ನು ನಮ್ಮ ಇಮೇಜ್ ಗಳ ಡೈರೆಕ್ಟರಿಯೊಂದಿಗೆ ಸೆಟ್ ಮಾಡಬೇಕು. |
01:20 | ನಾನು ಮೊದಲೇ ತೋರಿಸಿದಂತೆ ಇದು 'images' ಮತ್ತು ನಂತರ ಒಂದು ಫಾರ್ವರ್ಡ್ ಸ್ಲ್ಯಾಶ್ ಆಗಿದೆ. |
01:24 | ಈ ಚಿಹ್ನೆಗಳ ಕುರಿತು ಎಚ್ಚರಿಕೆಯಿರಲಿ, ಉದಾಹರಣೆಗೆ ಬ್ಯಾಕ್ ಸ್ಲ್ಯಾಶ್ ಇದು ವಿಶೇಷ ಚಿಹ್ನೆಯಾಗಿದ್ದು ಇದನ್ನು ಪಿ.ಎಚ್.ಪಿ. ಯಲ್ಲಿ ಅದರ ಮುಂದಿನ ಅಕ್ಷರವನ್ನು ತೆಗೆದುಹಾಕಲು ಬಳಸಲಾಗುತ್ತದೆ. |
01:35 | ಉದಾಹರಣೆಗೆ, ನಾವು 'images backward slash photos' ಎಂದಿದ್ದರೆ, ಇದನ್ನು ಪಿ.ಎಚ್.ಪಿ. ಯಲ್ಲಿ 'images-hotos' ಎಂದು ಬರುತ್ತದೆ, ಏಕೆಂದರೆ ಇದು 'p' ಯನ್ನು ಕ್ಯಾನ್ಸಲ್ ಮಾಡುತ್ತದೆ. |
01:51 | ಫಾರ್ವರ್ಡ್ ಸ್ಲ್ಯಾಶ್ ಅನ್ನು ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲಿ ನಾವು 'photos' ಎಂದು ಹೊಂದಿಲ್ಲ. |
01:57 | ನಾವು ಮಾಡಬೇಕಾದ ಮುಂದಿನ ಕೆಲಸವೆಂದರೆ, 'open dir function' ಅನ್ನು ಬಳಸಬೇಕು. |
02:01 | ಇದು ನಮಗಾಗಿ ಒಂದು ಡೈರಕ್ಟರಿಯನ್ನು ತೆರೆಯುತ್ತದೆ. |
02:05 | ಇದು ಡೈರಕ್ಟೆರಿಯ ಕಂಟೆಂಟ್ ಆಗಿರುವುದಿಲ್ಲ. |
02:08 | ಇದು ಒಂದು ನಿರ್ದಿಷ್ಟವಾದ ಡೈರಕ್ಟರಿಯನ್ನು ತೆರೆಯುತ್ತದೆ. ಇಲ್ಲಿ ಇದು ಈ ಡೈರಕ್ಟರಿಯಾಗಿದೆ. |
02:14 | ಇದು ಹೇಗಿದೆಯೋ ಹಾಗೆ ಇಡುವ ಬದಲು ನಾವು, if '$open dir' equals 'open dir' (ಒಂದು ಹೊಸ ವೇರಿಯೇಬಲ್) ಮತ್ತು '$dir' ಎಂದು ಟೈಪ್ ಮಾಡೋಣ. ನಾವು ಇಲ್ಲಿ ಇದನ್ನು ಇದಕ್ಕೆ ಹೋಲಿಸುತ್ತಿದ್ದೇವೆ. |
02:27 | ಇದು ಏನು ಮಾಡುವುದೆಂದರೆ, ಇದು ಯಶಸ್ವಿಯಾಗಿ ಪೂರ್ಣಗೊಂಡಿದೆಯೇ ಎಂದು ಹೇಳುತ್ತದೆ. ಹಾಗಾಗಿದ್ದರೆ ಇದು 'open dir' ಅನ್ನು ಓಪನ್ ಡೈರಕ್ಟರಿಗೆ ಅಸೈನ್ ಮಾಡುತ್ತದೆ. ನಾವು ಅದನ್ನು ಆಮೇಲೆ ಎಡಿಟ್ ಮಾಡಬಹುದು. |
02:40 | ಇದನ್ನು ಮಾಡಲು ಮುಖ್ಯ ಕಾರಣವೆಂದರೆ, ನಿಮ್ಮ ಡೈರಕ್ಟರಿ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಇದು ಒಂದಷ್ಟು ಕೋಡ್ ಮತ್ತು ಹಲವಾರು ಎರರ್ ಗಳನ್ನು ಕೊಡುತ್ತದೆ. |
02:47 | ಇಲ್ಲಿ ಇದು ಯಾವುದೇ ಎರರ್ ಗಳಿಲ್ಲದಿದ್ದರೆ, ಈ ಬ್ಲಾಕ್ ನ ಒಳಗೆ ಇರುವ ಕೋಡ್ ಅನ್ನು ಮುಂದುವರಿಸಬಹುದು ಎಂದು ಹೇಳುತ್ತದೆ. |
02:56 | ಮುಂದಿನ ಭಾಗವು ಸ್ವಲ್ಪ ಕ್ಲಿಷ್ಟಕರವಾಗಿದೆ. |
02:59 | ಈಗ ಇದಕ್ಕೆ ಸ್ವಲ್ಪ ಟಿಪ್ಪಣಿಯನ್ನು ಆರಂಭಿಸೋಣ. ಇಲ್ಲಿ Open dir ಎಂದು ಕಮೆಂಟ್ ಮಾಡಿ. |
03:03 | ಇದರೊಳಗೆ ಡೈರಕ್ಟರಿಯನ್ನು ಓದುವೆವು, ಹಾಗಾಗಿ ಇಲ್ಲಿ 'read dir' ಎಂದು ಕಮೆಂಟ್ ಮಾಡಿ. |
03:09 | ಇಲ್ಲಿ while ಲೂಪ್ ಅನ್ನು ಬಳಸುವೆವು. ಏಕೆಂದರೆ, ಪ್ರತಿಯೊಂದು ಸಲ while ಲೂಪ್ ಎಕ್ಸಿಕ್ಯೂಟ್ ಆದಾಗ, ಲೂಪ್ ನಲ್ಲಿ ಫೋಲ್ಡರ್ ನಲ್ಲಿರುವ ಪ್ರತಿಯೊಂದು ಇಮೇಜ್ ಅನ್ನು ಒಂದೊಂದಾಗಿ ಎಕೋ ಮಾಡಬೇಕು ಅಥವಾ ತೋರಿಸಬೇಕು. |
03:23 | while ಲೂಪ್ ನೊಂದಿಗೆ ಆರಂಭಿಸೋಣ. ನಾವು ಇದರಳೊಗೆ ಏನಾಗಬೇಕೋ ಅದನ್ನು ರಚಿಸೋಣ. ಇದರ ಮಧ್ಯದಲ್ಲಿ ನಮ್ಮ while ಲೂಪ್ ನಲ್ಲಿ ಎಕ್ಸಿಕ್ಯೂಟ್ ಆಗಬೇಕಾದ ಕೋಡ್ ಅನ್ನು ಇಲ್ಲಿ ಇಡೋಣ., ಇದು ನಮ್ಮ while ಲೂಪ್ ಗೆ ಇದೆ. |
03:32 | ಇದಕ್ಕೆ ನಾವು ಇಲ್ಲಿ $file equals 'read directory' ಎಂದು ಟೈಪ್ ಮಾಡಿ, ಇದು ನಾನು ಈಗ ತಾನೆ ಪರಿಚಯಿಸಿದ ಹೊಸ ಫಂಕ್ಷನ್ ಆಗಿದೆ. |
03:44 | ನೀವು ಊಹಿಸಿರಬಹುದು, ಇಲ್ಲಿ 'open dir' ವೇರಿಯೇಬಲ್ ಅನ್ನು ಟೈಪ್ ಮಾಡಬೇಕು. |
03:51 | ಇದು ನಾವು ಈಗಾಗಲೇ 'open dir()' ಫಂಕ್ಷನ್ ಅನ್ನು ಬಳಸಿ ತೆರೆದಿರುವ ಡೈರಕ್ಟರಿಯನ್ನು ಓದುತ್ತದೆ. |
03:57 | ಇವೆರೆಡು ತುಂಬ ಉಪಯುಕ್ತ ಫಂಕ್ಷನ್ ಗಳು ಮತ್ತು ಅವುಗಳನ್ನು ಪರಸ್ಪರ ಸುಸಂಗತಗೊಳಿಸುವೆನು. |
04:03 | ನಾವು ಇಲ್ಲಿ ಇದನ್ನು ಮರುಮೌಲ್ಯಮಾಪನ ಮಾಡೋಣ. ಇದು 'False' ಗೆ ಸಮವಾಗಿಲ್ಲದಿದ್ದರೆ, ಅಂದರೆ ಇದು ಓಪನ್ ಆಗಿಲ್ಲದಿದ್ದರೆ ಅಥವಾ ಇದು ಓದಲು ಅಸಾಧ್ಯವಾಗಿದ್ದರೆ ಆಗ ನಾವು ಕೆಲವು ಎರರ್ ಗಳನ್ನು ಪಡೆಯಬಹುದು. |
04:17 | ಇದರೊಂದಿಗೆ ನಾವು ವಿನ್ಯಾಸವನ್ನು ಆರಂಭಿಸಬೇಕು. |
04:20 | ನಾವು ಇದನ್ನು ಬ್ರ್ಯಾಕೆಟ್ ನೊಳಗೆ ಇಡಬೇಕು. |
04:23 | ಹಾಗಾಗಿ ಇಲ್ಲಿ ಬ್ರ್ಯಾಕೆಟ್ ಗಳನ್ನು ಹಾಕೋಣ. |
04:25 | ಇದು ನಮ್ಮ ಸಂಪೂರ್ಣವಾದ while ಸ್ಟೇಟ್ಮೆಂಟ್ ಆಗಿದೆ. |
04:30 | ಈಗ ನಾವು ಇದರೊಳಗೆ ಬರೆಯುವುದು ಸುಲಭವಾಗಿದೆ. ಏಕೆಂದರೆ, ನಾವು ಇಲ್ಲಿ $file ವೇರಿಯೇಬಲ್ ಅನ್ನು ರಚಿಸಿದ್ದೇನೆ. |
04:35 | ನಾವು while ಲೂಪ್ ನಲ್ಲಿರುವುದರಿಂದ, ಇದು ಈ ಡೈರಕ್ಟರಿಯಲ್ಲಿರುವ ಪ್ರತಿಯೊಂದು ಫೈಲ್ ಅನ್ನೂ ರನ್ ಆಗುವಾಗಲೇ ಅಪ್ಡೇಟ್ ಮಾಡುತ್ತದೆ. |
04:40 | ಈಗ ನಾವು echo $file ಎಂದು ಟೈಪ್ ಮಾಡಬೇಕು ಮತ್ತು ಇಲ್ಲಿ ಇದರ ಕೊನೆಯಲ್ಲಿ ಒಂದು br ಅನ್ನು ಸೇರಿಸಬೇಕು. |
04:50 | ಈಗ ನಾವು ಇಲ್ಲಿ ಬ್ರೌಸರ್ ಅನ್ನು ತೆರೆದು, ರಿಫ್ರೆಶ್ ಮಾಡಿದರೆ, ಇಲ್ಲಿ ನಮ್ಮ ಎಲ್ಲ ಡೈರಕ್ಟರಿಗಳೂ ಪಟ್ಟಿಯಾಗಿರುವುದನ್ನು ನೀವು ನೋಡಬಹುದು. |
04:55 | ನಾನು ಮೊದಲೇ ಹೇಳಿದಂತೆ ಡೈರೆಕ್ಟರಿ ಲಿಸ್ಟಿಂಗ್ ನ ಕುರಿತು ನಾನು ಇನ್ನೂ ಕೆಲವು ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ. |
05:00 | ಇಲ್ಲಿ ನಾವು ಒಂದು ಡಾಟ್ ಮತ್ತು ಇಲ್ಲಿ ಎರಡು ಡಾಟ್ ಅನ್ನು ಪಡೆದಿದ್ದೇವೆ. ಇದು ಡೈರಕ್ಟರಿ ವಿನ್ಯಾಸದ ಸಾಮಾನ್ಯ ಸಂಕೇತಗಳಾಗಿವೆ. |
05:05 | 'dot' ಅಂದರೆ ಪ್ರಸ್ತುತ ಡೈರೆಕ್ಟರಿ ಮತ್ತು ಎರಡು ಡಾಟ್ ಗಳೆಂದರೆ, ಹಿಂದಿರುಗುವುದು ಎಂದು ಅರ್ಥ. |
05:13 | ಈಗ ನಾವು ಏನು ಮಾಡಬೇಕೆಂದರೆ, ನಾವು ಈ ಡಾಟ್ ಗಳನ್ನು ಎಕೋ ಮಾಡಬಾರದು ಎಂದು ಈ ಲೂಪ್ ನೊಳಗೆ ಮೌಲ್ಯಮಾಪನ ಮಾಡಬೇಕು. |
05:22 | ಏಕೆಂದರೆ ನಾವು ಈ ಇಮೇಜ್ ಗಳನ್ನು ತೋರಿಸುತ್ತಿದ್ದೇವೆ, ಇದು ಇಮೇಜ್ ಅಲ್ಲ ಮತ್ತು ಇದು ಕೂಡ ಇಮೇಜ್ ಅಲ್ಲ. |
05:27 | ಹಾಗಾಗಿ ನಾವು ಇವುಗಳನ್ನು ತೆಗೆದು ಹಾಕಬೇಕು. if' '$file' doesn't equal 'dot' OR ನ ಬದಲು ಇಲ್ಲಿ AND ಎಂದು ಟೈಪ್ ಮಾಡಿ, ನಂತರ $file' doesn't equal 'dot dot ಎಂದು ಟೈಪ್ ಮಾಡೋಣ. |
05:45 | ನಾವು ಇದರ ಮೂಲಕ ಲೂಪ್ ಮಾಡುವೆವು ಮತ್ತು ಇದು ಡಾಟ್ ಗೆ ಸಮವೇ ಎಂದು ಕೇಳುತ್ತದೆ. |
05:50 | ಮೊದಲು ಇದು ಹೌದು ಎಂದಾಗುವುದು, ಹಾಗಾಗಿ ನಾವು ನಮ್ಮ if ಸ್ಟೇಟ್ಮೆಂಟ್ ನ ಒಳಗಿರುವ ಕಮಾಂಡ್ ಗಳನ್ನು ನಿರ್ಲಕ್ಷಿಸುವೆವು. |
05:59 | ನಾವು ಒಟ್ಟಿಗೇ ಪರೀಕ್ಷಿಸುವುದರಿಂದ ಇವೆರಡೂ, ಟ್ರ್ಯೂ ಆಗಿರುವುದು. |
06:04 | ಈಗ ರಿಫ್ರೆಶ್ ಮಾಡಿ ನೋಡಿದರೆ, ಅವೆರಡೂ ಕಾಣಿಸುವುದಿಲ್ಲ. |
06:07 | ಈಗ ಮಾಡಬೇಕಾದ ಮುಂದಿನ ಕೆಲಸವೆಂದರೆ, ನಾವು ಈ '$file' ವೇರಿಯೇಬಲ್ ಅನ್ನು ಇಮೇಜ್ ಅನ್ನು ತೋರಿಸುವಂತೆ ನಿಭಾಯಿಸಬೇಕು. |
06:16 | ಈಗ ನಾನು ಇವೆಲ್ಲವನ್ನು ತೆಗೆದು ಇಲ್ಲಿ ಪೂರ್ತಿಯಾಗಿ ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬರೆಯುವೆನು. |
06:23 | ಹಾಗಾಗಿ, image ಸೋರ್ಸ್ ಇಕ್ವಲ್ಸ್ ಎಂದು ಟೈಪ್ ಮಾಡಿ, ಇಲ್ಲಿ ಏನನ್ನಾದರೂ ಬರೆಯಬಹುದು. |
06:26 | ಇಲ್ಲಿ ನೀವು ಇಮೇಜ್ ನ height ಮತ್ತು width ಅನ್ನು ಸೂಚಿಸಬಹುದು ಆದರೆ ನಾನು ಈಗ ಅದನ್ನು ಮಾಡುವುದಿಲ್ಲ, ಏಕೆಂದರೆ ನನ್ನ ಎಲ್ಲ ಇಮೇಜ್ ಗಳಿಗೆ ಉದ್ದ ಮತ್ತು ಅಗಲವನ್ನು ಈಗಾಗಲೇ ಸೆಟ್ ಮಾಡಲಾಗಿದೆ. |
06:33 | ನೀವು ಬೇರೆ ಬೇರೆ ಗಾತ್ರದ ಇಮೇಜ್ ಗಳನ್ನು ಹೊಂದಿದ್ದರೆ, ನೀವು ಅವುಗಳನ್ನು ಒಂದೇ ಅಳತೆಯಲ್ಲಿ ಇಡಲು ಬಯಸಿದರೆ ಆಗ ನೀವು ಆಗ ನೀವು ಅವುಗಳನ್ನು hyper link ನಲ್ಲಿಟ್ಟು, ಅವುಗಳನ್ನು ಕ್ಲಿಕ್ ಮಾಡಿದಾಗ ಪ್ರತ್ಯೇಕವಾಗಿ ನೋಡುವಂತೆ ಮಾಡಬಹುದು. |
06:43 | ಆದರೆ ಅದು ನೇರವಾದ ಮಾರ್ಗ ಮತ್ತು ನಾನು ಅದನ್ನು ಮಾಡಲು ಪಿ.ಎಚ್.ಪಿ. ಕೋಡ್ ಅನ್ನು ತೋರಿಸುವೆನು. |
06:50 | ಈಗ ನಾವು ಪ್ರತಿಯೊಂದರ ನಂತರವೂ ಒಂದು break ಅನ್ನು ಹಾಕೋಣ. |
06:52 | ಈಗ ಇದರಲ್ಲಿ ನೀವು ಫೈಲ್ ಅನ್ನು ಪಡೆಯುವಿರಿ ಎಂದುಕೊಂಡಿರಬಹುದು ಆದರೆ ನಾವು ರಿಫ್ರೆಶ್ ಮಾಡಿದಾಗ, ನೀವು ಇಲ್ಲಿ ಒಂದಷ್ಟು ತುಂಡರಿಸಿದ ಇಮೇಜ್ ಗಳನ್ನು ನೋಡಬಹುದು. |
07:00 | ಏಕೆಂದರೆ, ನಾವು properties ಅನ್ನು ಕ್ಲಿಕ್ ಮಾಡಿದಾಗ, ಇಲ್ಲಿ directory images and image 1 ಎಂದು ಹೇಳಲಾಗಿದೆ. . |
07:07 | ನಾವು ಇಲ್ಲಿ ನಮ್ಮ ಇಮೇಜ್ ಡೈರಕ್ಟರಿಯನ್ನು ಹಾಕಬೇಕು. |
07:10 | ನಾವು images ಎಂದು ಬರೆಯಬಹುದು ಆದರೆ ನಾವು ಈಗಾಗಲೇ ಅದಕ್ಕಾಗಿ 'dir' ಎಂಬ ವೇರಿಯೇಬಲ್ ಅನ್ನು ಹೊಂದಿದ್ದೇವೆ. |
07:14 | ಹಾಗಾಗಿ ನಾವು ಇದನ್ನು 'dir forward slash $file',ಎಂದರೆ ಇದು images forward slash file ಎಂದಾಗುವುದು. |
07:19 | ಹಾಗಾಗಿ ನಾವು ರಿಫ್ರೆಶ್ ಮಾಡಿದಾಗ, ಈ ಟ್ಯುಟೋರಿಯಲ್ ನ ಆರಂಭದಲ್ಲಿ ನಾನು ತೋರಿಸಿದ ಪೇಜ್ ಗೆ ಹಿಂದಿರುಗುತ್ತೇವೆ. |
07:27 | ಪ್ರಾಥಮಿಕವಾಗಿ ಇವಿಷ್ಟು, ಇದನ್ನು ಮಾಡಲು ಇನ್ನು ಸುಧಾರಿತ ವಿಧಾನಗಳಿವೆ. ಅವುಗಳನ್ನು ಲೇ ಔಟ್ ನಲ್ಲಿ ಜೋಡಿಸುವುದು ಮುಂತಾದವುಗಳು. |
07:35 | ನಿಮಗೆ ಏನಾದರು ಸಮಸ್ಯೆಗಳಿದ್ದಲ್ಲಿ ನನ್ನನ್ನು ಸಂಪರ್ಕಿಸಿರಿ, ನಾನು ಸಹಾಯ ಮಾಡಲು ಸಿದ್ಧನಿದ್ದೇನೆ. |
07:44 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |