Arduino/C3/Mixing-Assembly-and-C-programming/Kannada
Time | Narration |
00:01 | Assembly ಮತ್ತು C ಪ್ರೋಗ್ರಾಮಿಂಗ್ ಅನ್ನು ಸಂಯೋಜಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಒಂದನ್ನು ಬರೆಯಲು, ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು AVR-GCC ಪ್ರೋಗ್ರಾಂ ನಲ್ಲಿ Assembly ರೂಟಿನ್ ಅನ್ನು ಕಾಲ್ ಮಾಡಲು ಕಲಿಯಲಿದ್ದೇವೆ. |
00:24 | ಈ ಟ್ಯುಟೋರಿಯಲ್ ಅನುಸರಿಸಲು ನೀವು:
ಎಲೆಕ್ಟ್ರಾನಿಕ್ಸ್, AVR-GCC ಮತ್ತು Assembly ಪ್ರೋಗ್ರಾಮಿಂಗ್ ನ ಮೂಲಜ್ಞಾನ ಹೊಂದಿರಬೇಕು. |
00:37 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಉಬಂಟು ಲೈನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ. |
00:50 | ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಬೇಕು:
ಅವೆಂದರೆ ಬ್ರೆಡ್ ಬೋರ್ಡ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, |
01:00 | 220 ohm ರೆಸಿಸ್ಟರ್,
ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಜಂಪರ್ ವೈರ್ ಗಳು. |
01:09 | ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಜೋಡಿಸಲಾಗಿದೆ. |
01:16 | ಯಾವುದಾದರೂ ಒಂದು ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಜೋಡಿಸಲಾಗುತ್ತದೆ. |
01:23 | ಇದು ಜೋಡಣೆಯ ಲೈವ್ ಸೆಟಪ್ ಆಗಿದೆ. |
01:28 | ನಾವೀಗ, ಇನಿಶಿಯಲೈಸೇಶನ್ ಮಾಡಲು, Assembly ರೂಟಿನ್ ಅನ್ನು ಬರೆಯಲಿದ್ದೇವೆ. |
01:34 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ. |
01:38 | assembly ರೂಟಿನ್ ಪ್ರೋಗ್ರಾಂ, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಇನಿಶಿಯಲೈಸ್ ಮತ್ತು ಸೆಟ್ ಮಾಡುತ್ತದೆ. |
01:45 | ನಾವು ಕೋಡ್ ಅನ್ನು ಸಾಲಾಗಿ ವಿವರಿಸುತ್ತೇನೆ.
ಈ ಸಾಲು, ಸ್ಪೆಷಲ್ ಫಂಕ್ಷನ್ ರಿಜಿಸ್ಟರ್ ಆಫ್ ಸೆಟ್ ಅನ್ನು ಶೂನ್ಯಕ್ಕೆ ಸೆಟ್ ಮಾಡುತ್ತದೆ. |
01:54 | ಈ ಎರಡು ಸಾಲುಗಳು, assembly ರೂಟಿನ್ ಅನ್ನು ಜಾಗತಿಕವಾಗಿ ಆಕ್ಸೆಸಿಬಲ್ ಮಾಡುತ್ತವೆ.
ಇತರ ಪ್ರೋಗ್ರಾಂಗಳು ಇದನ್ನು ಬಳಸುವಂತೆ ಇದು ಅನುವು ಮಾಡಿಕೊಡುತ್ತದೆ. |
02:03 | ಇಲ್ಲಿ init ಎಂದರೆ subroutine ಹೆಸರಾಗಿದೆ.
ಈ ಎರಡು ಸಾಲುಗಳು, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಸೆಟ್ ಮಾಡುತ್ತವೆ. |
02:13 | ಕೋಡ್ ಅನ್ನು Downloads ಫೋಲ್ಡರ್ ನಲ್ಲಿ ಕ್ಯಾಪಿಟಲ್ ನಲ್ಲಿ initasm.S ಆಗಿ ಸೇವ್ ಮಾಡಿ.
ಇದು subroutine ಆಗಿರುವುದರಿಂದ, ಇದನ್ನು .S ಎಕ್ಸ್ಟೆನ್ಶನ್ ಆಗಿ ಸೇವ್ ಮಾಡಲಾಗುತ್ತದೆ. |
02:27 | ಈ ಟ್ಯುಟೋರಿಯಲ್ ನಲ್ಲಿ ಬಳಸಿರುವ ಎಲ್ಲಾ ಕೋಡ್ ಗಳು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯ.
ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು. |
02:37 | subroutine ಅನ್ನು ಕಾಲ್ ಮಾಡಲು ಮತ್ತು ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ನಾವು ಒಂದು AVR-GCC ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. |
02:45 | ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ. |
02:49 | ಈ ಕೋಡ್, ಡಾಟ್ ಎಲ್.ಇ.ಡಿ ಯು ನಿರಂತರವಾಗಿ ಮಿನುಗುವಂತೆ ಮಾಡುತ್ತದೆ. |
02:54 | ಮೊದಲು ಸಾಲು "init()", Assembly subroutine ಅನ್ನು ಕಾಲ್ ಮಾಡುತ್ತದೆ. ಕೋಡ್ ನ ಈ ಸಾಲುಗಳು, ಡಾಟ್ ಎಲ್.ಇ.ಡಿ ಯು ಪರ್ಯಾಯವಾಗಿ ಆನ್ ಮತ್ತು ಆಫ್ ಆಗುವಂತೆ ಮಾಡಿ ಇದು ಮಿನುಗುವಂತೆ ಮಾಡುತ್ತದೆ. |
03:08 | ಕೋಡ್ ಅನ್ನು Downloads ಫೋಲ್ಡರ್ ನಲ್ಲಿ blink.c ಆಗಿ ಸೇವ್ ಮಾಡಿ. |
03:13 | Makefile ಅನ್ನು ಈ ಟ್ಯುಟೋರಿಯಲ್ ನ code files ಲಿಂಕ್ ನಿಂದ ಡೌನ್ ಲೋಡ್ ಮಾಡಿ.
blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ನಲ್ಲಿಯೇ ಇದನ್ನು ಇಡಿ. |
03:24 | ನಾನು Makefile ಅನ್ನು ಟೆಕ್ಸ್ಟ್ ಎಡಿಟರ್ ನಲ್ಲಿ ಸೇವ್ ಮಾಡುತ್ತೇನೆ. |
03:28 | ಈ ಹಿಂದೆ ಬಳಸಿದ್ದಕ್ಕಿಂತ Makefile ಭಿನ್ನವಾಗಿದೆ ಎಂಬುದನ್ನು ಗಮನಿಸಿ. |
03:34 | Makefile ನಲ್ಲಿ, “TARGET = blink” ಮತ್ತು ASRC = “initasm.S” ಎಂಬುದನ್ನು ಖಚಿತಪಡಿಸಿ. |
03:44 | ಇಲ್ಲಿ “blink” ಎನ್ನುವುದು main ಪ್ರೋಗ್ರಾಂ ಮತ್ತು “initasm” ಎನ್ನುವುದು subroutine ಆಗಿದೆ. |
03:50 | ನೀವು ಬೇರೆಯೇ ಹೆಸರು ನೀಡಿದ್ದಲ್ಲಿ ಫೈಲ್ ನೇಮ್ ಮತ್ತು subroutine ಹೆಸರನ್ನು ಬದಲಾಯಿಸಬೇಕು.
ನಂತರ Makefile ಅನ್ನು ಸೇವ್ ಮಾಡಿ. |
03:59 | ನಂತರ terminal ಗೆ ಮರಳಿ. |
04:02 | blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಮರಳಿ.
make space FNAME in capital =blink ಎಂದು ಟೈಪ್ ಮಾಡಿ Enter ಒತ್ತಿ. |
04:17 | ಈಗ ಡಾಟ್ ಎಲ್.ಇ.ಡಿ ಯು ಮಿನುಗುತ್ತಿರುವುದನ್ನು ನೀವು ನೋಡಬಹುದು. |
04:22 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
04:28 | ಈ ಟ್ಯುಟೋರಿಯಲ್ ನಲ್ಲಿ ನಾವು:
ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಬರೆಯಲು ಮತ್ತು ಡಾಟ್ ಎಲ್.ಇ.ಡಿ ಮಿನುಗಿಸಲು AVR-GCC ಪ್ರೋಗ್ರಾಂನಲ್ಲಿ Assembly ರೂಟಿನ್ ಕಾಲ್ ಮಾಡಲು ಕಲಿತಿದ್ದೇವೆ. |
04:43 | ಅಸೈನ್ ಮೆಂಟ್ ಆಗಿ -
ಡಿಲೇಯನ್ನು ಹೆಚ್ಚಿಸಲು ಮೇಲಿನ ಪ್ರೋಗ್ರಾಂ ಅನ್ನು ಬದಲಾಯಿಸಿ. ಡಾಟ್ ಎಲ್.ಇ.ಡಿ ಮಿನುಗುವಾಗ ಡಿಲೇಯನ್ನು ಗಮನಿಸಿ. |
04:53 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
05:01 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಪತ್ರ ಬರೆಯಿರಿ. |
05:11 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
05:15 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ. |
05.26 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
ಧನ್ಯವಾದಗಳು. |