Arduino/C3/AVR-GCC-programming-through-Arduino/Kannada

From Script | Spoken-Tutorial
Revision as of 13:19, 10 May 2020 by Melkamiyar (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಆರ್ಡುಯಿನೊ ಮೂಲಕ AVR-GCC ಪ್ರೋಗ್ರಾಮಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಇಂಟರ್ ಫೇಸ್ ಮಾಡಲು,
00:15 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಬರೆಯಲು ಮತ್ತು

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 9ರ ತನಕದ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ.

00:27 ಈ ಟ್ಯುಟೋರಿಯಲ್ ಅನುಸರಿಸಲು ನೀವು ಈ ಕೆಳಗಿನ ಮೂಲಭೂತ ಜ್ಞಾನ ಹೊಂದಿರಬೇಕು:
00:31 ಎಲೆಕ್ಟ್ರಾನಿಕ್ಸ್,
00:34 C ಪ್ರೋಗ್ರಾಮಿಂಗ್ ಮತ್ತು

AVR-GCC.

00:39 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು

ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ.

00:50 GCC ಎಂದರೆ GNU ಕಂಪೈಲರ್‌ ಕಲೆಕ್ಷನ್.
00:54 ಇದು ಕಂಪೈಲರ್ ಆಗಿದ್ದು ಅನೇಕ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳನ್ನು ಆಧರಿಸುತ್ತದೆ.
00:59 AVR-GCC ಯು GCC ಯ ಭಾಗವಾಗಿದ್ದು, AVR ಗೆ C ಪ್ರೋಗ್ರಾಂಗಳನ್ನು ಕಂಪೈಲ್ ಮಾಡುವುದನ್ನು ಆಧರಿಸುತ್ತದೆ.
01:08 ಆರ್ಡುಯಿನೊ ATMEGA328P ಬಳಸುವುದರಿಂದ, ಇದು ಕಂಪೈಲರ್ ಗೆ ಸೂಕ್ತ.
01:15 ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಬೇಕು:

ಅವೆಂದರೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ,

01:22 220 ohm ರೆಸಿಸ್ಟರ್,
01:26 ಬ್ರೆಡ್ ಬೋರ್ಡ್,
01:28 ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು

ಜಂಪರ್ ವೈರ್ ಗಳು.

01:33 ಈ ಪ್ರಯೋಗದಲ್ಲಿ ನಾವು ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಬಳಸಲಿದ್ದೇವೆ.
01:39 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಈ ಸರಣಿಯ ಮೂಲಭೂತ ಮಟ್ಟದ ಟ್ಯುಟೋರಿಯಲ್ ಗಳನ್ನು ನೋಡಿ.
01:46 ಆರ್ಡುಯಿನೊ ಮತ್ತು ಮೈಕ್ರೋಕಂಟ್ರೋಲರ್ ಗಾಗಿ ಪಿನ್ ಮ್ಯಾಪಿಂಗ್ ನೋಡಿ.
01:51 ಇಲ್ಲಿ ತೋರಿಸಿರುವಂತೆ ಸರ್ಕಿಟ್ ಸಂಪರ್ಕವನ್ನು ಮಾಡಿ.
01:55 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13ಕ್ಕೆ ಸಂಪರ್ಕಿಸಲಾಗಿದೆ.
02:02 ಯಾವುದಾದರೂ ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.
02:09 ಇದು ಸಂಪರ್ಕದ ಲೈವ್ ಸೆಟಪ್ ಆಗಿದೆ.
02:12 ನಾವೀಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು AVR-GCC ಪ್ರೋಗ್ರಾಂ ಬರೆಯಲಿದ್ದೇವೆ.
02:22 ನಾವು AVR-GCC assembler ಮತ್ತು AVR-LIBC library ಅಳವಡಿಸಬೇಕು.
02:29 AVR-GCC ಯು hex ಫೈಲ್ ಅನ್ನು ರಚಿಸುತ್ತದೆ ಮತ್ತು ಆರ್ಡುಯಿನೊ ಬೋರ್ಡ್ ಗೆ ಅಪ್ ಲೋಡ್ ಮಾಡುತ್ತದೆ.
02:35 AVR-LIBC ಯು, ಪ್ರೋಗ್ರಾಂ ನಲ್ಲಿ ಬಳಸಬಹುದಾದ ಅಗತ್ಯ ಲೈಬ್ರರಿ ಫೈಲ್ ಗಳನ್ನು ಹೊಂದಿದೆ.
02:42 Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ terminal ತೆರೆಯಿರಿ.
02:48 sudo space apt hyphen get space install space avr hyphen libc space gcc hyphen avr ಎಂದು ಟೈಪ್‌ ಮಾಡಿ ಮತ್ತು Enter ಒತ್ತಿ.
03:03 ಕೇಳಿದಲ್ಲಿ ಅಡ್ಮಿನಿಸ್ಟ್ರೇಟಿವ್ ಪಾಸ್ ವರ್ಡ್ ನಮೂದಿಸಿ ಮತ್ತು Enter ಒತ್ತಿ.
03:09 ಅಳವಡಿಕೆ ಪ್ರಕ್ರಿಯೆಯು ಪ್ರಾರಂಭವಾಗಿರುವುದನ್ನು ನಾವು ನೋಡಬಹುದು.
03:13 ಅಳವಡಿಕೆಯ ವೇಳೆ ಕಾನ್ಫಿಗರೇಶನ್ ಅನ್ನು ದೃಢೀಕರಿಸಲು ಕೇಳಿದಾಗಲೆಲ್ಲ 'Y' ಒತ್ತಿ.
03:20 ಇಂಟರ್ ನೆಟ್ ವೇಗವನ್ನುಆಧರಿಸಿ ಅಳವಡಿಕೆಯು ಒಂದಷ್ಟು ಸಮಯ ತೆಗೆದುಕೊಳ್ಳಬಹುದು.
03:26 ಅಳವಡಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿರುವುದನ್ನು ನಾವು ನೋಡಬಹುದು.

ನಾನೀಗ terminal ಅನ್ನು ತೆರವುಗೊಳಿಸುತ್ತೇನೆ.

03:34 ಈಗ ನಾವು ಆರ್ಡುಯಿನೊ ಬೋರ್ಡ್ ಅನ್ನು ಕಂಪ್ಯೂಟರ್ ಗೆ ಸಂಪರ್ಕಿಸೋಣ.
03:38 ಆರ್ಡುಯಿನೊವಿನ ಪೋರ್ಟ್ ನಂಬರ್ ಪರಿಶೀಲಿಸಲು ls space forward slash dev forward slash ttyACM asterisk ಎಂದು ನಾನು ಟೈಪ್ ಮಾಡಿ Enter ಒತ್ತುತ್ತೇನೆ.
03:51 ಇಲ್ಲಿ ತೋರಿಸಿರುವಂತೆ ನಾವು ಔಟ್ಪುಟ್ ಅನ್ನು ನೋಡಬಹುದು. ಇಲ್ಲಿ ttyACM0 ಎಂದರೆ ಆರ್ಡುಯಿನೊವಿನ ಪೋರ್ಟ್ ನಂಬರ್.
04:00 ನೀವು ಬೇರೆಯೇ ಪೋರ್ಟ್ ನಂಬರ್ ಪಡೆಯಬಹುದು. ನಿಮ್ಮ ಪೋರ್ಟ್ ನಂಬರ್ ಬರೆದಿಡಿ.
04:06 ಈ ಟ್ಯುಟೋರಿಯಲ್ ನಲ್ಲಿ Code files ಲಿಂಕ್ ನಿಂದ Makefile ಫೈಲ್ ಅನ್ನು ಡೌನ್ ಲೋಡ್ ಮಾಡಿ.
04:12 Makefile ನಮಗೆ dot hex ಫೈಲ್ ರಚಿಸಲು ಮತ್ತು ಅದನ್ನು ಆರ್ಡುಯಿನೊಗೆ ಅಪ್ ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
04:19 C ಪ್ರೋಗ್ರಾಂ ಸೇವ್ ಮಾಡುವ ಫೋಲ್ಡರ್ ನಲ್ಲಿಯೇ Makefile ಅನ್ನು ಸೇವ್ ಮಾಡಿ.
04:24 ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ಮತ್ತು ಇದನ್ನು ಮೈಕ್ರೋಕಂಟ್ರೋಲರ್ ಗೆ ಅಪ್ ಲೋಡ್ ಮಾಡಲು ನಾವು avr-gcc ಪ್ರೋಗ್ರಾಂ ಅನ್ನು ಬರೆಯೋಣ.
04:32 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ.
04:36 ನಾವು ನಮ್ಮ ಪ್ರೋಗ್ರಾಂಗೆ ಬೇಕಾಗುವ ಲೈಬ್ರರಿಗಳನ್ನು ಸೇರಿಸಬೇಕು.
04:41 avr slash io dot h, ಇನ್ಪುಟ್ ಮತ್ತು ಔಟ್ಪುಟ್ ಅಪರೇಶನ್ ಗಳನ್ನು ನಿರ್ವಹಿಸಲು ಬೇಕಾಗುವ ಅಗತ್ಯ ಲೈಬ್ರರಿಗಳನ್ನು ಹೊಂದಿರುತ್ತದೆ.
04:50 util slash delay dot h, ಡಿಲೇ ಫಂಕ್ಷನ್ ಗೆ ಲೈಬ್ರರಿಗಳನ್ನು ಹೊಂದಿರುತ್ತದೆ.
04:56 ಆರ್ಡುಯಿನೊ ಬೋರ್ಡ್, PB5 ರಲ್ಲಿ ಎಲ್.ಇ.ಡಿ ಹೊಂದಿದೆ.
05:00 ಆರ್ಡುಯಿನೊವಿನ ಪಿನ್ 13 ಆಗಿರುವ PB5 ಅನ್ನು ಔಟ್ಪುಟ್ ಆಗಿ ಸೆಟ್ ಮಾಡಿ.
05:05 PB5 ಗೆ 0 ಕಳುಹಿಸಿದರೆ ಎಲ್.ಇ.ಡಿ ಆನ್ ಆಗುತ್ತದೆ.
05:09 PB5 ಗೆ 1 ಕಳುಹಿಸಿದರೆ ಎಲ್.ಇ.ಡಿ ಆನ್ ಆಗುತ್ತದೆ.
05:13 ಈ ಎರಡು ಕ್ರಮಗಳು, ಇನ್ಫಿನಿಟ್ while ಲೂಪ್ ಅನ್ನು ರನ್ ಇನ್ ಮಾಡಿ ಎಲ್.ಇ.ಡಿ ಯನ್ನು ಮಿನುಗಿಸುತ್ತವೆ.
05:19 ಈ ಟ್ಯುಟೋರಿಯಲ್ ನಲ್ಲಿ ಬಳಸುವ ಸೋರ್ಸ್ ಕೋಡ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯ.

ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.

05:28 ನಾವು ಕೋಡ್ ಅನ್ನು Downloads ಫೋಲ್ಡರ್ ನಲ್ಲಿ dot hyphen blink dot c ಆಗಿ ಸೇವ್ ಮಾಡುತ್ತೇನೆ.
05:37 terminal ಗೆ ಮರಳಿ.
05:39 dot hyphen blink dot c ಫೈಲ್ ಸೇವ್ ಮಾಡಲಾಗಿರುವ Downloads ಫೋಲ್ಡರ್ ಗೆ ಹೋಗಿ.
05:45 make space FNAME in capital equals dot hyphen blink ಎಂದು ಟೈಪ್ ಮಾಡಿ Enter ಒತ್ತಿ.

ಈ ಕಮಾಂಡ್, dot hex ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ ಲೋಡ್ ಮಾಡುತ್ತದೆ.

06:00 ಈಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯು ಮಿನುಗುತ್ತಿರುವುದನ್ನು ನೀವು ನೋಡಬಹುದು.
06:06 ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 2 ಅಂಕಿಯನ್ನು ಡಿಸ್ಪ್ಲೇ ಮಾಡಲಿದ್ದೇವೆ.
06:11 ʻ2ʼ ನ್ನು ಡಿಸ್ಪ್ಲೇ ಮಾಡಲು a, b, d, e, g ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.
06:19 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಕ್ರಮವಾಗಿ ಆರ್ಡುಯಿನೊವಿನ 2, 3, 4, 5, 6, 7 ಮತ್ತು 8 ಪಿನ್ ಗಳಿಗೆ ಸಂಪರ್ಕಿಸಲಾಗಿದೆ.
06:32 ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.
06:37 ನಾವೀಗ ಲೈವ್ ಕನೆಕ್ಷನ್ ಸೆಟಪ್ ಅನ್ನು ನೋಡೋಣ.
06:42 ನಾವೀಗ ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ನೋಡೋಣ.
06:46 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ಈ ಕೋಡ್ ಅನ್ನು ಟೈಪ್ ಮಾಡಿ.
06:50 'main' ಫಂಕ್ಷನ್ ನಲ್ಲಿ ಕೋಡ್ ನ ಮೊದಲ ಎರಡು ಸಾಲುಗಳು, 2 ರಿಂದ 8 ರ ತನಕದ ಪಿನ್ ಗಳನ್ನು ಔಟ್ಪುಟ್ ಪಿನ್ ಗಳಾಗಿ ಸೆಟ್ ಮಾಡುತ್ತವೆ.
06:58 while ಲೂಪ್ ಒಳಗಿನ ಕೋಡ್ ಗಳನ್ನು, ಸಂಬಂಧಪಟ್ಟ ಎಲ್.ಇ.ಡಿ ಗಳ ಸ್ಥಿತಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
07:05 0 ಕಳಿಸಿದರೆ ಎಲ್.ಇ.ಡಿ ಯು ಮಿನುಗುತ್ತದೆ ಮತ್ತು 1 ಕಳಿಸಿದರೆ ಆಫ್ ಆಗುತ್ತದೆ.
07:11 ಇದನ್ನು two.c ಫೈಲ್ ಆಗಿ ಸೇವ್ ಮಾಡಿ.
07:15 terminal ಗೆ ಮರಳಿ.

ಈಗ terminal ತೆರವುಗೊಳಿಸಿ.

07:21 make space FNAME in capital equals two ಎಂದು ಟೈಪ್ ಮಾಡಿ Enter ಒತ್ತಿ.
07:30 ಸೆವೆನ್ ಸೆಗ್ಮೆಂಟ್ ನಲ್ಲಿ ಅಂಕಿ ಎರಡು ಮಿನುಗುತ್ತಿರುವುದನ್ನು ನೀವೀಗ ನೋಡಬಹುದು.
07:38 ಟ್ಯುಟೋರಿಯಲ್ ಅನ್ನು ಪಾಸ್ (Pause) ಮಾಡಿ ಕೆಳಗಿನ ಅಸೈನ್ ಮೆಂಟ್ ಮಾಡಿ. 0 ಯಿಂದ 9 ರ ತನಕದ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ.
07:48 ನಂತರ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ರಿಂದ 9 ರ ತನಕದ ಸಂಖ್ಯೆಗಳನ್ನು ಡಿಸ್ಪ್ಲೇ ಮಾಡಲಿದ್ದೇವೆ.
07:54 ಅದೇ ಸೆಟಪ್ ಉಳಿದುಕೊಳ್ಳುತ್ತದೆ.
07:57 ಈ ಪ್ರೋಗ್ರಾಂ ಗೆ ಸೋರ್ಸ್ ಕೋಡ್ ಅನ್ನು ನೋಡೋಣ. ಯಾವುದೇ ಟೆಕ್ಸ್ಟ್ ಎಡಿಟರ್ ತೆರೆದು ಈ ಕೋಡ್ ಅನ್ನು ಟೈಪ್ ಮಾಡಿ.
08:04 0 ಯಿಂದ 9 ತನಕ ಎಣಿಸಲು for ಲೂಪ್ ಅನ್ನು ಬಳಸಲಾಗುತ್ತದೆ.

ಪ್ರತಿ ಸಂದರ್ಭದಲ್ಲಿ, ವೇರಿಯೇಬಲ್ 'i' ಅನ್ನು ಒಂದರಿಂದ ಹೆಚ್ಚಿಸಲಾಗುತ್ತದೆ ಮತ್ತು ಮೌಲ್ಯವನ್ನು 'sevenseg' ಫಂಕ್ಷನ್ ಗೆ ವರ್ಗಾಯಿಸಲಾಗುತ್ತದೆ.

08:16 'sevenseg' ಫಂಕ್ಷನ್, 0 ಯಿಂದ 9 ರ ತನಕದ ಪೂರ್ಣಾಂಕವನ್ನು ಸ್ವೀಕರಿಸುತ್ತದೆ.

ಇನ್ಪುಟ್ ಆಧರಿಸಿ ಕೇಸ್ ಸ್ಟ್ರಕ್ಚರ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ.

08:27 ಹೀಗೆ 0 ಯಿಂದ 9 ರ ವರೆಗಿನ ಅಂಕಿಗಳನ್ನು ಡಿಸ್ಪ್ಲೇ ಮಾಡಲಾಗುತ್ತದೆ.
08:32 ಇದನ್ನು counter.c ಫೈಲ್ ಆಗಿ ಸೇವ್ ಮಾಡಿ.
08:36 terminal ಗೆ ವಾಪಾಸಾಗಿ ಮತ್ತು ಇದನ್ನು ತೆರವುಗೊಳಿಸಿ.
08:40 make space FNAME in capital equals counter ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
08:50 ಈಗ, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 9 ರ ವರೆಗಿನ ಅಂಕಿಗಳು ಡಿಸ್ಪ್ಲೇ ಆಗುವುದನ್ನು ನಾವು ನೋಡಬಹುದು.
09:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:06 ಈ ಟ್ಯುಟೋರಿಯಲ್ ನಲ್ಲಿ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ ಫೇಸ್ ಮಾಡಲು,
09:13 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು ಮತ್ತು
09:19 ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಯಲ್ಲಿ 0 ಯಿಂದ 9 ರ ತನಕದ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಕಲಿತೆವು.
09:24 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
09:32 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಪತ್ರ ಬರೆಯಿರಿ.

09:42 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
09:46 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ.

09.56 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Melkamiyar, Sandhya.np14