Arduino/C2/Seven-Segment-Display/Kannada

From Script | Spoken-Tutorial
Revision as of 12:02, 6 May 2020 by Melkamiyar (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

00:24 ಈ ಟ್ಯುಟೋರಿಯಲ್ ಅನುಸರಿಸಲು, ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು.
00:37 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂ 14.04 ಮತ್ತು Arduino IDE ಬಳಸುತ್ತಿದ್ದೇನೆ.

00:52 ನಮಗೆ ಈ ಕೆಳಗಿನ ಬಾಹ್ಯ ಉಪಕರಣಗಳು ಬೇಕು:

ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ, 220 ohm ರೆಸಿಸ್ಟರ್, ಬ್ರೆಡ್ ಬೋರ್ಡ್ ಮತ್ತು ಜಂಪರ್ ವೈರ್ ಗಳು.

01:08 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಎಂಟರ ಅಂಕಿಯ ಆಕಾರದಲ್ಲಿ ವ್ಯವಸ್ಥೆಗೊಳಿಸಲಾದ ಏಳು ಎಲ್.ಇ.ಡಿ ಗಳನ್ನು ಹೊಂದಿದೆ.
01:17 ಒಟ್ಟು ಎರಡು ರೀತಿಯ ಡಿಸ್ಪ್ಲೇಗಳಿವೆ:

ಕಾಮನ್ ಆನೋಡ್ ಮತ್ತು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ.

01:27 ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ a, b, c, d, e, f, g ಮತ್ತು dot ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು.
01:43 COM ಪಿನ್ ಗಳನ್ನು ಗ್ರೌಂಡ್ (GND) ಗೆ ಸಂಪರ್ಕಿಸಬೇಕು.
01:49 ಕಾಮನ್ ಆನೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯು ಇದಕ್ಕೆ ತದ್ವಿರುದ್ಧವಾಗಿದೆ.
01:55 ಇಲ್ಲಿ, a, b, c, d, e, f, g ಮತ್ತು dot ಪಿನ್ ಗಳನ್ನು GND ಗೆ ಮತ್ತು ಎರಡು COM ಪಿನ್ ಗಳನ್ನು +5V ಗೆ ಸಂಪರ್ಕಿಸಬೇಕು.
02:12 ಈಗ, ನಾವು ಕನೆಕ್ಷನ್ ಸರ್ಕಿಟ್ ವಿವರಗಳನ್ನು ನೋಡೋಣ.
02:17 ಈ ಪ್ರಯೋಗದಲ್ಲಿ, ನಾವು ಕಾಮನ್ ಕ್ಯಾಥೋಡ್ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಬಳಸುತ್ತೇವೆ.
02:24 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ a, b, c, d, e, f ಮತ್ತು g ಪಿನ್ ಗಳನ್ನು ಆರ್ಡುಯಿನೊವಿನ 2, 3, 4, 5, 6, 8 ಮತ್ತು 9 ಪಿನ್ ಗಳಿಗೆ ಸಂಪರ್ಕಿಸಬೇಕು.
02:40 ನಾವು ಪಿನ್ 7ಕ್ಕೆ ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಿ.
02:45 ಎರಡು ಕಾಮನ್ (COM) ಪಿನ್ ಗಳನ್ನು ರೆಸಿಸ್ಟರ್ ಗಳ ಮೂಲಕ ಗ್ರೌಂಡ್ ಗೆ ಸಂಪರ್ಕಿಸಲಾಗಿದೆ.

ಇದನ್ನು ಇಲ್ಲಿ ಕಪ್ಪು ಬಣ್ಣದ ತಂತಿಯಲ್ಲಿ ತೋರಿಸಲಾಗಿದೆ.

02:56 ರೆಸಿಸ್ಟರ್ ಮೌಲ್ಯವು 220 ohms ಗಿಂತ ಜಾಸ್ತಿ ಇರಬೇಕು.

Dot ಅನ್ನು ಸಂಪರ್ಕಿಸಿಲ್ಲ. ಏಕೆಂದರೆ ಇದನ್ನು ಈ ಪ್ರಯೋಗದಲ್ಲಿ ಬಳಸಲಾಗುವುದಿಲ್ಲ.

03:08 ಇದು ಡಯಾಗ್ರಾಂನಲ್ಲಿ ತೋರಿಸಿದಂತೆ, ಸಂಪರ್ಕದ ಲೈವ್ ಸೆಟಪ್ ಆಗಿದೆ.
03:15 ನಾವೀಗ Arduino IDE ಯಲ್ಲಿ ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ. ಹೀಗಾಗಿ ನಾವು Arduino IDE ಗೆ ಸಾಗೋಣ.
03:24 ಮೊದಲಿಗೆ ನಾವು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಎಲ್.ಇ.ಡಿ ಗಳನ್ನು ಮಿನುಗಿಸಲು ಪ್ರೋಗ್ರಾಂ ಬರೆಯಲಿದ್ದೇವೆ.
03:31 ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ.
03:34 ನಾವು ಆರ್ಡುಯಿನೊ ಪಿನ್ ಗಳಿಗೆ ಸೆಗ್ಮೆಂಟ್ ಹೆಸರನ್ನು ಅಸೈನ್ ಮಾಡಿದ್ದೇವೆ.
03:39 ಯಾವ ಆರ್ಡುಯಿನೊ ಪಿನ್ ಗಳನ್ನು ಡಿಸ್ಪ್ಲೇಯ ಸೆಗ್ಮೆಂಟ್ ಗಳಿಗೆ ಸಂಪರ್ಕಿಸಲಾಗಿದೆ ಎಂದು ನೆನಪಿಡಲು ಇವು ಸಹಕರಿಸುತ್ತವೆ.
03:47 ನಿಮ್ಮ ಅನುಕೂಲಕ್ಕೆ ಈ ಕೋಡ್, code file ಲಿಂಕ್ ನಲ್ಲಿ ಲಭ್ಯ. ಇದನ್ನು ನೀವು ಡೌನ್ ಲೋಡ್ ಮಾಡಿ ಬಳಸಬಹುದು.
03:57 ವೋಯ್ಡ್ ಸೆಟಪ್ ಫಂಕ್ಷನ್ ನಲ್ಲಿ, ಪಿನ್ ಅನ್ನು ಔಟ್ಪುಟ್ ಮೋಡ್ ಗೆ ಕಾನ್ಫಿಗರ್ ಮಾಡಲು ನಾವು pinMode ಫಂಕ್ಷನ್ ಬಳಸಲಿದ್ದೇವೆ.
04:07 ನಾವೀಗ ವೋಯ್ಡ್ ಲೂಪ್ ಗೆ ಕೋಡ್ ಬರೆಯಲಿದ್ದೇವೆ.

ವೋಯ್ಡ್ ಲೂಪ್ ಫಂಕ್ಷನ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಎಲ್.ಇ.ಡಿ ಯನ್ನು ಮಿನುಗಿಸಲಿದೆ.

04:18 ಈ ಕೋಡ್, ಮತ್ತು ಹಿಂದಿನ ಟ್ಯುಟೋರಿಯಲ್ ನ ಕೋಡ್ ಒಂದೇ ಆಗಿವೆ.
04:23 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಲಿದ್ದೇವೆ.
04:27 ಸೆವೆನ್ ಸೆಗ್ಮೆಂಟ್ ನಲ್ಲಿ ಎಲ್ಲಾ ಎಲ್.ಇ.ಡಿ ಗಳು ಪ್ರಕಾಶಿಸುತ್ತಿರುವುದನ್ನು ನಾವು ನೋಡಬಹುದು.
04:35 ನಂತರ, ಕೆಲವು ಅಂಕಿಗಳನ್ನು ಪ್ರದರ್ಶಿಸಲು ನಾವು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ.
04:41 ನಾವು ಸೊನ್ನೆ ಅಂಕಿಯನ್ನು ಪ್ರದರ್ಶಿಸಬೇಕು ಎಂದುಕೊಳ್ಳೋಣ.
04:46 'g' ಸೆಗ್ಮೆಂಟ್ ನ ಎಲ್.ಇ.ಡಿ ಗಳು ʻಲೋʼ ಆಗಿರಬೇಕು ಮತ್ತು ಎಲ್ಲಾ ಇತರ ಎಲ್.ಇ.ಡಿ ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು.
04:54 ʻ1ʼ ನ್ನು ಡಿಸ್ಪ್ಲೇ ಮಾಡಲು b ಮತ್ತು c ಸೆಗ್ಮೆಂಟ್ ಗಳು ʻಹೈʼ ಆಗಿರಬೇಕು ಮತ್ತು ಇತರ ಎಲ್.ಇ.ಡಿ ಗಳು ʻಲೋʼ ಆಗಿರಬೇಕು.

ಇದೇ ರೀತಿ ನಾವು ಎಲ್ಲಾ ಇತರ ಅಂಕಿಗಳಿಗೆ ಕೋಡ್ ಬರೆಯಬಹುದು.

05:10 ನಾವೀಗ Arduino IDE ಗೆ ಮರಳೋಣ.
05:14 ಇಲ್ಲಿ ತೋರಿಸಿರುವಂತೆ ವೋಯ್ಡ್ ಲೂಪ್ ಫಂಕ್ಷನ್ ನಲ್ಲಿ ಕೋಡ್ ಅನ್ನು ಬದಲಾಯಿಸಿ.

0, 1, 2, 3 ಮತ್ತು 4 ಅಂಕಿಗಳನ್ನು ಡಿಸ್ಪ್ಲೇ ಮಾಡಲು ನಾನು ಕೋಡ್ ಅನ್ನು ಬರೆದಿದ್ದೇನೆ.

05:31 ನಾವೀಗ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡೋಣ.
05:35 ಒಂದು ಸೆಕೆಂಡಿನ ಅಂತರದ ವಿಳಂಬದೊಂದಿಗೆ 0 ಯಿಂದ 4ರ ವರೆಗಿನ ಅಂಕಿಗಳು ಡಿಸ್ಪ್ಲೇ ಆಗುತ್ತಿರುವುದನ್ನು ನೀವು ನೋಡಬಹುದು.
05:45 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
05:52 ಈ ಟ್ಯುಟೋರಿಯಲ್ ನಲ್ಲಿ ನಾವು:

ಆರ್ಡುಯಿನೊ ಬೋರ್ಡ್ ಗೆ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಸಂಪರ್ಕಿಸಲು ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ವರೆಗಿನ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿತೆವು.

06:07 ಈ ಕೆಳಗಿನ ಅಸೈನ್ ಮೆಂಟ್ ಪೂರ್ಣಗೊಳಿಸಲು ಪ್ರಯತ್ನಿಸಿ.

5, 6, 7, 8 ಮತ್ತು 9 ಅಂಕಿಗಳನ್ನು ಡಿಸ್ಪ್ಲೇ ಮಾಡಲು ಇದೇ ಪ್ರೋಗ್ರಾಂ ಅನ್ನು ಬದಲಾಯಿಸಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ ಲೋಡ್ ಮಾಡಿ ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಅಂಕಿಗಳು ಡಿಸ್ಪ್ಲೇ ಆಗುವುದನ್ನು ಗಮನಿಸಿ.

06:27 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
06:35 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.

06:44 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
06:48 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.00 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Melkamiyar, Sandhya.np14