PHP-and-MySQL/C2/If-Statement/Kannada
From Script | Spoken-Tutorial
Revision as of 11:32, 29 April 2020 by Sandhya.np14 (Talk | contribs)
Time | Narration |
00:00 | ಈ php - Spoken Tutorial ಗೆ ನಿಮಗೆ ಸ್ವಾಗತ. ಇಲ್ಲಿ ನಾವು if ಸ್ಟೇಟ್ಮೆಂಟ್ ನ ಬಗ್ಗೆ ಚರ್ಚಿಸುವೆವು. |
00:06 | ಈಮೊದಲು ನೀವು ಕೋಡ್ ಅನ್ನು ಬರೆದಿದ್ದರೆ, ನೀವು if ಸ್ಟೇಟ್ಮೆಂಟ್ ಅನ್ನು ನೋಡಿರಬಹುದು. |
00:11 | php ಯಲ್ಲಿ ಇದೇನೂ ಬೇರೆಯಾಗಿಲ್ಲ. ಶೀಘ್ರದಲ್ಲಿಯೇ ನಾನು ಒಂದನ್ನು ಎಕ್ಸೀಕ್ಯೂಟ್ ಮಾಡಿ ತೋರಿಸುವೆನು. |
00:16 | ಈಗ ನಾವು ಆರಂಭಿಸೋಣ. |
00:18 | Ok.. ಇಲ್ಲಿ if ಸ್ಟೇಟ್ಮೆಂಟ್ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇದೆ. ಇದಕ್ಕೆ ಒಂದು 'ಕಂಡಿಶನ್' (ಷರತ್ತು) ಬೇಕಾಗುತ್ತದೆ. |
00:23 | ಒಂದುವೇಳೆ ಈ ಷರತ್ತು True ಎಂದಾದರೆ, ಅದು ಕೋಡ್ ನ ಒಂದು ಭಾಗವನ್ನು ಎಕ್ಸೀಕ್ಯೂಟ್ ಮಾಡುತ್ತದೆ. |
00:28 | ಷರತ್ತು False ಇದ್ದರೆ, ಅದು ಕೋಡ್ ನ ಇನ್ನೊಂದು ಭಾಗವನ್ನು ಎಕ್ಸೀಕ್ಯೂಟ್ ಮಾಡುತ್ತದೆ. |
00:32 | ಉದಾಹರಣೆಗೆ – ಇದು ಸ್ಟ್ರಕ್ಚರ್ ಆಗಿದೆ. |
00:36 | if - ಬ್ರ್ಯಾಕೆಟ್ ನಲ್ಲಿ, 1 equals 1 ಇದೆಯೇ ಎಂದು ತಿಳಿದುಕೊಳ್ಳಲು ಇರುವ ಷರತ್ತು ಆಗಿದೆ. |
00:41 | ಗಮನಿಸಿ, ಇಲ್ಲಿ ನಾನು ಎರಡು 'equal to' ಚಿಹ್ನೆಗಳನ್ನು ಬಳಸುತ್ತಿದ್ದೇನೆ. ಇದು, ಹೋಲಿಸಲು ಬಳಸುವ (comparison) 'ಆಪರೇಟರ್' ಆಗಿದೆ. |
00:47 | ಬೇರೊಂದು ಟ್ಯುಟೋರಿಯಲ್ ನಲ್ಲಿ ನಾವು, 'ಆಪರೇಟರ್'ಗಳ ಬಗ್ಗೆ ಕಲಿಯುವವರಿದ್ದೇವೆ. |
00:50 | ಇದು 'equals' ಎಂದು ಆಗಿರದಿದ್ದರೂ ಸಹ, ಇದನ್ನು ನಾವು 'is equal to' ಎಂದೇ ಹೇಳುತ್ತೇವೆ. |
00:56 | ವೇರಿಯೇಬಲ್ ಗಳನ್ನು ಬಳಸುವಾಗ, ಹೋಲಿಸಬೇಕಾಗಿದ್ದರೆ ನಾವು 'double equal to' ಅನ್ನು ಬಳಸುತ್ತೇವೆ. |
01:02 | ನೀವು 'True' ದ ಪಾಥ್ ನಲ್ಲಿ ಹೋಗುತ್ತಿದ್ದರೆ, ನೀವು ಎರಡು ಕರ್ಲೀ ಬ್ರ್ಯಾಕೆಟ್ ಗಳನ್ನು ಬಳಸಬಹುದು. |
01:06 | ನಾವು ಇಲ್ಲಿ ಒಂದನ್ನು ತೆರೆಯುತ್ತಿದ್ದೇವೆ. |
01:08 | ನಮ್ಮ ಕೋಡ್, ಬ್ರ್ಯಾಕೆಟ್ ಗಳ ನಡುವೆ ಹೋಗುವುದು. |
01:12 | ಒಂದುವೇಳೆ ಇದು 'Not True' ಎಂದಿದ್ದರೆ, ನಾವು else ಎಂದು ಹೇಳುತ್ತೇವೆ. |
01:15 | ಅದೇ ಸ್ಟ್ರಕ್ಚರ್ - ಹೀಗಾಗಿ, ಎರಡು ಬ್ರ್ಯಾಕೆಟ್ ಗಳು. |
01:17 | ಉದಾಹರಣೆಗೆ – if 1 equals 1, echo 'True' ಎಂದು ನಾವು ಹೇಳುತ್ತೇವೆ. |
01:23 | 1 is not equal 1 ಎಂದಾದರೆ, ನಾವು ನಮ್ಮ ಫೈಲ್ ಅನ್ನು ರನ್ ಮಾಡಿದಾಗ False ಅನ್ನು ಪಡೆಯಬೇಕು. |
01:30 | 1 is equal to 1 ಇರುವುದರಿಂದ, ನಾವು ನಮ್ಮ ಫೈಲ್ ಅನ್ನು ರನ್ ಮಾಡಿದಾಗ True ಎಂದು ಸಿಗುತ್ತದೆ. |
01:36 | ನಾವು ಇದನ್ನು ಬದಲಾಯಿಸೋಣ. if 1 equals 2. ಇದು ಹೀಗೆ ಇಲ್ಲ. ಆದ್ದರಿಂದ ನಾವು False ಅನ್ನು ಪಡೆಯುತ್ತೇವೆ. |
01:42 | ಒಂದು ಸಂಖ್ಯೆಯು ಇನ್ನೊಂದು ಸಂಖ್ಯೆಗೆ ಸಮನಾಗಿದೆಯೇ ಎಂದು ಹೇಳುವ ಒಂದು ಸರಳವಾದ ಪ್ರೊಗ್ರಾಂಅನ್ನು ನಾವು ಕ್ರಿಯೇಟ್ ಮಾಡಬಹುದಿತ್ತು. |
01:49 | ಆದರೆ ಇದು ಪ್ರೊಗ್ರಾಂ ಮಾಡುವ ಬಹಳ ದಡ್ಡ ವಿಧಾನ ಆಗಿದೆ. |
01:52 | ಆದ್ದರಿಂದ ನಾನು ಇನ್ನೂ ಏನನ್ನೊ ಸೇರಿಸುವೆನು. ಪಾಸ್ವರ್ಡ್ ಆಕ್ಸೆಸ್ ಗಾಗಿ (access) ನಾನು ಒಂದು ಸಣ್ಣ ಪ್ರೊಗ್ರಾಂ ಅನ್ನು ಬರೆಯುವೆನು. |
01:58 | ಇಲ್ಲಿ, ಒಂದು ವೇರಿಯೇಬಲ್ ನಲ್ಲಿ, ನಾವು password ಅನ್ನು ಸ್ಟೋರ್ ಮಾಡುತ್ತೇವೆ. |
02:03 | $password ಇದು "abc" ಆಗಿದೆ. |
02:05 | ನನ್ನ if ಫಂಕ್ಷನ್ ನಲ್ಲಿ, ನಾನು ಒಂದು ವೇರಿಯೇಬಲ್ ಅನ್ನು ಹೀಗೆ ಸೇರಿಸುತ್ತೇನೆ: |
02:11 | if password, ನೆನಪಿಡಿ ಡಬಲ್ ಇಕ್ವಲ್ಸ್ "def", |
02:15 | ಮತ್ತು Access granted ಎನ್ನುತ್ತೇನೆ. |
02:21 | ಕ್ಷಮಿಸಿ, ನಾನು ಒಂದು ತಪ್ಪು ಮಾಡಿದ್ದೇನೆ. 'def' ಪಾಸ್ವರ್ಡ್ ಗಾಗಿ ನಾವು ಯೂಸರ್ ನನ್ನು ಕೇಳುತ್ತೇವೆ. 'abc' ಈ ಪಾಸ್ವರ್ಡ್ ಅನ್ನು ನಾನು ಸಿಸ್ಟಂಗೆ ಕೊಡುತ್ತಿದ್ದೇನೆ. |
02:32 | ಅದು 'def' ಗೆ ಸಮ ಆಗಿರದಿದ್ದರೆ, Access denied ಎನ್ನುತ್ತೇನೆ. |
02:39 | ನಾನು ಇನ್ಪುಟ್ ಮಾಡಿದ ಪಾಸ್ವರ್ಡ್ 'abc' ಆಗಿದೆ. |
02:42 | ನಾವು ಪಾಸ್ವರ್ಡ್ ಅನ್ನು 'def' ಗೆ ಹೋಲಿಸುತ್ತೇವೆ. ಇದು ಸ್ಟೋರ್ ಮಾಡಲಾದ ಪಾಸ್ವರ್ಡ್ ಆಗಿದೆ. |
02:50 | ಇದು 'def' ಗೆ ಸಮ ಆಗಿದ್ದರೆ, ನಾವು Access granted ಎಂದು ಹೇಳುತ್ತೇವೆ. ಇಲ್ಲದಿದ್ದರೆ (else) Access denied. |
02:57 | ನಾವು ಇದನ್ನು ಪ್ರಯತ್ನಿಸೋಣ. |
03:00 | Access denied. ಏಕೆಂದರೆ, ಪಾಸ್ವರ್ಡ್ ಗಳು ಹೊಂದುವುದಿಲ್ಲ. |
03:05 | ಅದಕ್ಕಾಗಿ, ನಾನು ಇಲ್ಲಿ ಒಂದು ವೇರಿಯೇಬಲ್ ಅನ್ನು ಸೇರಿಸಿದ್ದೇನೆ ಎಂದು ನೀವು ನೋಡಬಹುದು. |
03:10 | ಇದನ್ನು 'def' ಎಂದು ಬದಲಾಯಿಸಿ. ನಮಗೆ Access granted ಎಂದು ಸಿಗುತ್ತದೆ. |
03:18 | ಏಕೆಂದರೆ, ಇಲ್ಲಿ ಕೋಡ್ ನ ಒಂದು ಸಾಲು ಇದೆ. ಮತ್ತು ಇಲ್ಲಿ ಇನ್ನೊಂದು ಕೋಡ್ ನ ಸಾಲು ಇದೆ. |
03:22 | ಈ ಕರ್ಲೀ ಬ್ರ್ಯಾಕೆಟ್ ಗಳನ್ನು ನಾನು ತೆಗೆದುಬಿಡಬಹುದು. |
03:25 | ಈಗ ಚೆನ್ನಾಗಿ ಕಾಣುತ್ತಿದೆ. |
03:29 | ದಯವಿಟ್ಟು ಗಮನಿಸಿ - ಇಂತಹ ಸರಳವಾದ if ಸ್ಟೇಟ್ಮೆಂಟ್ ಗಳಿಗಾಗಿ, ಒಂದೇ ಸಾಲಿನ ಕೋಡ್ ಇದ್ದರೆ, ಕರ್ಲೀ ಬ್ರ್ಯಾಕೆಟ್ ಗಳನ್ನು ಸೇರಿಸುವುದರಲ್ಲಿ ಅರ್ಥವಿಲ್ಲ. |
03:37 | ಇಲ್ಲಿ, ಒಂದರ ನಂತರ ಇನ್ನೊಂದು ಸಾಲು ಇದ್ದರೆ, ನಿಮಗೆ ಕರ್ಲೀ ಬ್ರ್ಯಾಕೆಟ್ ಗಳು ಬೇಕಾಗುತ್ತವೆ. |
03:42 | ಉದಾಹರಣೆಗೆ, ಇಲ್ಲಿ ನಾವು ಒಂದು ಹೊಸ ವೇರಿಯೇಬಲ್ ಅನ್ನು ಸೆಟ್ ಮಾಡೋಣ. |
03:46 | $access ಇಕ್ವಲ್ಸ್ "Allowed". |
03:52 | ಇದು ಕೋಡ್ ನ ಇನ್ನೊಂದು ಸಾಲು ಆಗಿದೆ. |
03:57 | ಆದರೆ ನಾನು ಇದನ್ನು ರನ್ ಮಾಡಲು ಪ್ರಯತ್ನಿಸಿದಾಗ, ನನಗೆ ಎರರ್ ಸಿಗುತ್ತದೆ. |
04:02 | ಇದು ಹೀಗೆ ಹೇಳುತ್ತಿದೆ: “an unexpected T_else on line 8”. |
04:08 | ನಾವು line 8 ಅನ್ನು ಹುಡುಕೋಣ. ಇದು ಇಲ್ಲಿದೆ. ಇದರ ಹಿಂದಿನ ಸಾಲು ಸಮಸ್ಯೆಗೆ ಕಾರಣವಾಗಿದೆ. |
04:13 | ಇದಕ್ಕಾಗಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಕೋಡ್ ನ ಸಾಲುಗಳಿದ್ದಾಗ, ನಾವು ಕರ್ಲೀ ಬ್ರ್ಯಾಕೆಟ್ ಗಳನ್ನು ಮತ್ತೆ ಸೇರಿಸುವುದು ಅಗತ್ಯವಾಗಿದೆ. |
04:22 | ನಾವು ಇದನ್ನು ರಿಫ್ರೆಶ್ ಮಾಡುತ್ತೇವೆ ಮತ್ತು ಈಗ Access is granted. |
04:25 | ಈಗ ನಾನು ಒಂದು access ಎಂಬ ಹೊಸ ವೇರಿಯೇಬಲ್ ಅನ್ನು ಸೆಟ್ ಮಾಡಿದ್ದೇನೆ. ಇದು allowed ಎಂದು ಇರಲಿ. |
04:29 | ಇದು ಹೆಚ್ಚು ಉಪಯುಕ್ತವಾಗಿಲ್ಲ. |
04:32 | ಆದರೆ ನಾನು ನಿಮಗೆ ಒಂದು ಉದಾಹರಣೆ ಎಂದು ಮಾತ್ರ ಕೊಟ್ಟಿದ್ದೇನೆ. |
04:35 | ಇದು ಇನ್ನೂ ಒಂದೇ ಸಾಲು ಆಗಿದ್ದು, ಇವು ಎರಡು ಸಾಲುಗಳಾಗಿರುವುದನ್ನು ನೀವು ನೋಡಬಹುದು. ನೀವು ಇವುಗಳನ್ನು ಬೆರೆಸಲು ಸಾಧ್ಯವಿಲ್ಲ. |
04:40 | ನಾನು ಒಂದು ವೇರಿಯೇಬಲ್ ಅನ್ನು ಕ್ರಿಯೇಟ್ ಮಾಡಿ. ಅದನ್ನು “if” ಸ್ಟೇಟ್ಮೆಂಟ್ ನ ಒಳಗೆ ಸೇರಿಸಿದ್ದೇನೆ. ಇದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. |
04:46 | ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
04:50 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ……
ವಂದನೆಗಳು. |