PHP-and-MySQL/C4/Sessions/Kannada

From Script | Spoken-Tutorial
Revision as of 16:45, 27 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ನಮಸ್ಕಾರ. php sessions ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ.
00:05 Session ಗಳು ಕುಕಿ ಗಳನ್ನೇ ಹೋಲುತ್ತವೆ.
00:08 ಆದರೆ, session ಗಳ ಎಕ್ಸ್ಪೈರಿ ಸಮಯ ತಾತ್ಕಾಲಿಕ ಸಮಯವಾಗಿರುತ್ತದೆ.
00:12 ಅಂದರೆ ಇವುಗಳು ಬ್ರೌಸರ್ ಅನ್ನು ಮುಚ್ಚಿದರೆ ಅಥವಾ ಪೇಜ್ ನ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ನಾಶವಾಗುತ್ತವೆ.
00:19 ಹಾಗಾಗಿ, session ಗಳು ಕುಕಿಗಳ ರೀತಿಯಲ್ಲ, ಏಕೆಂದರೆ ನೀವು ನಿರ್ದಿಷ್ಟವಾದ ಎಕ್ಸ್ಪೈರಿ ಸಮಯವನ್ನು ನಿಗದಿಮಾಡಲು ಸಾಧ್ಯವಿಲ್ಲ.
00:24 ಮತ್ತು ಅವುಗಳು ಅದೇ ವಿಧಾನದಲ್ಲಿ ಸ್ಟೋರ್ ಆಗಿರುವುದಿಲ್ಲ.
00:28 ಅಂದರೆ session ನ "id" ಯನ್ನು cookie ಯಲ್ಲಿ ಸ್ಟೋರ್ ಮಾಡಬಹುದು.
00:34 ಅಥವಾ ಬ್ರೌಸರ್ ನ ಯು.ಆರ್.ಎಲ್ ನಲ್ಲಿ ನೀವು ಈ ರೀತಿಯಾದದ್ದನ್ನು ನೋಡಿರಬಹುದು.
00:40 ನನಗೆ ಹೆಸರು ನೆನಪಿಲ್ಲ- ಇದು ಇಕ್ವಲ್ ಚಿಹ್ನೆ ಯ ನಂತರ ಹಲವಾರು ಸಂಖ್ಯೆ ಅಥವಾ ಅಕ್ಷರಗಳಾಗಿರಬಹುದು.
00:47 ಸೆಷನ್ ಗಳು ಪ್ರಾಥಮಿಕವಾಗಿ ಕುಕಿ ಗಳನ್ನು ಹೋಲುತ್ತವೆ.
00:50 ಆದರೆ ಅವುಗಳು ಹೆಚ್ಚು ಸಮಯದವರೆಗೆ ಸ್ಟೋರ್ ಆಗುವುದಿಲ್ಲ. ಬ್ರೌಸರ್ ಅನ್ನು ಮುಚ್ಚುವವರೆಗೆ ಮಾತ್ರ ಸ್ಟೋರ್ ಆಗಿರುತ್ತವೆ.
00:57 ಹಾಗಾಗಿ session ಗಳು ವಿಭಿನ್ನವಾಗಿವೆ.
01:00 ಮೊದಲಿಗೆ ನಾವು 'session_start()' ಫಂಕ್ಷನ್ ಅನ್ನು ಡಿಕ್ಲೇರ್ ಮಾಡಬೇಕು ಅಥವಾ ಕಾಲ್ ಮಾಡಬೇಕು.
01:09 ನೀವು ಸೆಷನ್ ಅನ್ನು ಬಳಸುವ ಎಲ್ಲ ಪೇಜ್ ನಲ್ಲಿ ಇದು ಮೇಲ್ಗಡೆ ಇರಲೇ ಬೇಕು.
01:14 ಇದನ್ನು ಬಿಟ್ಟು ನೀವೇನಾದರು ಸೆಷನ್ ವ್ಯಾಲ್ಯುವನ್ನು ಎಕೋ ಮಾಡಲು ಅಥವಾ ಸೆಷನ್ ಅನ್ನು ಸೆಟ್ ಮಾಡಲು ಪ್ರಯತ್ನಿಸಿದರೆ ಇದು ಕಾರ್ಯ ನಿರ್ವಹಿಸುವುದಿಲ್ಲ.
01:22 ನಿಮಗೆ ಅಲ್ಲಿ ಸೆಷನ್ ಸ್ಟಾರ್ಟ್ ಕೋಡ್ ಬೇಕೇ ಬೇಕು.
01:24 ಈಗ ನಾನು ಇದು ಇಲ್ಲದಿದ್ದರೆ ಬರಬಹುದಾದ ಎರರ್ ಅನ್ನು ತೋರಿಸುವೆನು, ಹಾಗಾದಾಗ ನೀವು ಇದನ್ನು ನೆನಪಿಟ್ಟು ಕೊಳ್ಳುವಿರಿ.
01:30 session ಅನ್ನು ರಚಿಸುವುದು ತುಂಬ ಸುಲಭವಾಗಿದೆ.
01:34 'dollar underscore SESSION' ಅನ್ನು ಬಳಸಿ ಮತ್ತು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಸೆಶನ್ ನ ಹೆಸರನ್ನು ಕೊಡಿ.
01:40 ನಾನು 'name' ಎಂದು ಟೈಪ್ ಮಾಡುವೆನು ಮತ್ತು ನಂತರ ಈ ವ್ಯಾಲ್ಯುವನ್ನು ಯಾವುದಕ್ಕಾದರು ಸಮವಾಗುವಂತೆ ಮಾಡಿ.
01:44 ಇದು ಸ್ಟ್ರಿಂಗ್ ಡಾಟಾ ಆಗಿರಬಹುದು ಅಥವಾ ಹೊಸದಾಗಿ ಬರೆದ ಡಾಟಾ ಆಗಿರಬಹುದು.
01:48 ಸರಿ ಇಲ್ಲಿ ನಮ್ಮ session ಸೆಟ್ ಆಗಿದೆ.
01:50 ಈಗ ಇದನ್ನು ಮೊದಲಬಾರಿಗೆ ರನ್ ಮಾಡೋಣ.
01:53 ಈಗ ರಿಫ್ರೆಶ್ ಮಾಡೋಣ.
01:56 ಸರಿ ಇಲ್ಲಿ ಏನೂ ಆಗಿಲ್ಲ.
01:58 ನಾನು ನನ್ನ Cookies ಟ್ಯುಟೋರಿಯಲ್ ನಲ್ಲಿ ಮಾಡಿದಂತೆ ಇದನ್ನು comment ಮಾಡುವೆನು.
02:01 ನೀವು ಅದನ್ನು ನೋಡಿರದಿದ್ದಲ್ಲಿ, ದಯವಿಟ್ಟು ನೋಡಿ.
02:04 ನಾನು ಸೆಟ್ ಮಾಡಿದ session' ನ ವ್ಯಾಲ್ಯುವನ್ನು ಎಕೋ ಮಾಡಲು ಬಯಸುವೆನು.
02:08 ಅದು 'name' ಆಗಿದೆ.
02:11 ದಯವಿಟ್ಟು ಗಮನಿಸಿ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ.
02:15 ನೀವೆಲ್ಲ ತಿಳಿದಿರುವಂತೆ, ಇದು ಸಂಪೂರ್ಣವಾಗಿ ಹೊಸ ಪೇಜ್ ನಲ್ಲಿರುತ್ತದೆ.
02:19 ಆದರೆ ಇಲ್ಲಿ ನಾನು session ಅನ್ನು ಆರಂಭಿಸುತ್ತಿದ್ದೇನೆ.
02:21 ನಾನು ಈಗಾಗಲೇ ನನ್ನ ಸರ್ವರ್ ಅಲ್ಲಿ ಸ್ಟೋರ್ ಆಗಿರುವ 'name' ಎಂಬ session ಅನ್ನು ಹೊಂದಿದ್ದೇನೆ.
02:26 ರಿಫ್ರೆಶ್ ಮಾಡಿದರೆ, "Alex" ಎಂದು ಇರುವುದನ್ನು ಇಲ್ಲಿ ನೋಡಬಹುದು.
02:29 ನೀವು ಈ ಕೋಡ್ ಮತ್ತು ಈ ಕೋಡ್ ಗಳನ್ನು ಯಾವ ಪೇಜ್ ಗೆ ಬೇಕಾದರೂ ಸೇರಿಸಬಹುದು.
02:33 ಬ್ರೌಸರ್ ನ ಪ್ರಸ್ತುತ ಸೆಷನ್ (ಅವಧಿ) ಅಲ್ಲಿ ಇದು ಆರಂಭವಾಗಿದ್ದರೆ, ಆಗ ನೀವು ನಿಮ್ಮ session start ಅನ್ನು ಹಾಕಿ, ನಂತರ ಸೆಷನ್ ನೇಮ್ ಅನ್ನು ನಿಮ್ಮ ಯಾವುದೇ ಪೇಜ್ ನಲ್ಲಿ ಆದರೂ ಎಕೋ ಮಾಡಬಹುದು.
02:44 ಉದಾಹರಣೆಗೆ ನಾನು ಹೊಸ ಪೇಜ್ ಅನ್ನು ರಚಿಸಿದರೆ, ಇಲ್ಲಿ ನನ್ನ php ಕೋಡ್ ಅನ್ನು ಸೇರಿಸಿ, ನಂತರ session_start() ಅನ್ನೂ ಸೇರಿಸುವೆನು.
02:49 ಅದಾದ ಮೇಲೆ ಸೆಷನ್ ನೇಮ್ ಅನ್ನು ಎಕೋ ಮಾಡುವೆನು.
02:56 ಮತ್ತು ನಾನು ಇದನ್ನು 'sessions' ಫೋಲ್ಡರ್ ನಲ್ಲಿ ಹೊಸ ಪೇಜ್ ಆಗಿ ಅಂದರೆ 'new dot php' ಎಂದು ಸೇವ್ ಮಾಡುವೆನು.
03:03 ಇಲ್ಲಿ ನಾವು ನಮ್ಮ ಪೇಜ್ ಗೆ ಹಿಂದಿರುಗಿ, ಮತ್ತು ನಾನು ಇಲ್ಲಿ ಕ್ಲಿಕ್ ಮಾಡಿ, 'new dot php' ಎಂದು ಟೈಪ್ ಮಾಡುವೆನು.
03:10 ನಾವು ಅದೇ ವ್ಯಾಲ್ಯುವನ್ನು ಪಡೆದಿದ್ದೇವೆ. ನಾವು ನಮ್ಮ ಸೆಷನ್ ಅನ್ನು ರಚಿಸಿದ ಪೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲದಿದ್ದರೂ, ನಾವು ಅದನ್ನು ಆಕ್ಸೆಸ್ ಮಾಡಲು ಶಕ್ತರಾಗಿದ್ದೇವೆ.
03:18 ಆದರೆ ನಾನು ನನ್ನ ಬ್ರೌಸರ್ ಅನ್ನು ಮುಚ್ಚಿ, ಪುನಃ ತೆರೆದರೆ, ಬಹುಷಃ ಈ ಸೆಷನ್ ಅಸ್ತಿತ್ವದಲ್ಲಿರುವುದಿಲ್ಲ.
03:25 ಅರ್ಥವಾಗಿದೆ ಎಂದುಕೊಳ್ಳುವೆನು. ಈಗ ನಾನು ನಿಮಗೆ ಆರಂಭದಲ್ಲಿ session_start() ಎಂದು ಹಾಕದಿದ್ದರೆ ಏನಾಗುವುದೆಂದು ತೋರಿಸುವೆನು ಎಂದು ಸೂಚಿಸಿದ್ದೆ.
03:31 ನೀವು ಈ ರೀತಿಯಾದದ್ದನ್ನು ಪಡೆಯುವಿರಿ.
03:33 ಈಗ ಹಿಂದಿರುಗಿ, ಅದನ್ನು ಪರೀಕ್ಷಿಸೋಣ.
03:36 ಇಲ್ಲಿ ಏನಾಗಿದೆಯೆಂದರೆ, ನಾವು ಯಾವುದೇ ಔಟ್ಪುಟ್ ಅನ್ನು ಪಡೆಯುತ್ತಿಲ್ಲ, ಏಕೆಂದರೆ ನಾವು ನಮ್ಮ ಸೆಷನ್ ಅನ್ನು ಆರಂಭಿಸಿಲ್ಲ.
03:44 ನಾವು 'session_start' ಅನ್ನು ಟೈಪ್ ಮಾಡಿದಾಗ, ನಮ್ಮ ವ್ಯಾಲ್ಯು ವನ್ನು ಔಟ್ಪುಟ್ ಆಗಿ ನೋಡಬಹುದು.
03:51 ನಾನು ಔಟ್ಪುಟ್ ಅನ್ನು ಪಡೆಯದಿರಲು ಕಾರಣವೆಂದರೆ, ಆ ವಿಧದ ಎರರ್ ಅನ್ನು ರಿಪೋರ್ಟಿಂಗ್ ಅನ್ನು ನಾನು ಹೊಂದಿಲ್ಲ.
03:56 ಆದರೆ ನೀವು ಸರಿಯಾದ ಎರರ್ ರಿಪೋರ್ಟಿಂಗ್ ಅನ್ನು ಹೊಂದಿದ್ದರೆ, ನಾನು ಅದರ ಕುರಿತು ಟ್ಯುಟೋರಿಯಲ್ ಅನ್ನು ಹೊಂದಿದ್ದೇನೆ – ಆಗ ನಾವು ಬಹುಷಃ ಎರರ್ ಅನ್ನು ಪಡೆಯುವೆವು.
04:06 ಈಗ ಇದನ್ನು ನೀವು ಮುಚ್ಚಬಹುದು ಮತ್ತು ನಾನು ಸೆಷನ್ ಅನ್ನು 'unset' ಮಾಡುವುದು ಹೇಗೆ ಎಂದು ತೋರಿಸುವೆನು.
04:10 ಇದನ್ನು ಮಾಡಲು 2 ವಿಧಾನಗಳಿವೆ.
04:12 ಮೊದಲನೆಯದು unset ಆಗಿದೆ. ನಂತರ ಬ್ರ್ಯಾಕೆಟ್ ನಲ್ಲಿ ಅನ್ಸೆಟ್ ಮಾಡಬೇಕಾದ session ಅನ್ನು ಟೈಪ್ ಮಾಡಬೇಕು.
04:16 ಅಥವಾ ಇನ್ನೊಂದು ಎಲ್ಲವನ್ನೂ ಅನ್ಸೆಟ್ ಮಾಡಲು ವಿಭಿನ್ನವಾದ command ಅನ್ನು ಬಳಸುವೆವು ಮತ್ತು ಅದು session_destroy() ಎಂದಾಗಿದೆ.
04:27 ಈ ಎರಡು ಕಮಾಂಡ್ ಗಳ ವ್ಯತ್ಯಾಸವೆಂದರೆ 'sessions_destroy' ಎಲ್ಲ ಪ್ರಸ್ತುತ ಸೆಷನ್ ಗಳನ್ನು ನಾಶಮಾಡುತ್ತದೆ
04:35 ಮತ್ತು 'unset' ಕಮಾಂಡ್ ನಾವು ನಿರ್ದಿಷ್ಟಪಡಿಸಿದ ಸೆಷನ್ ಅನ್ನು ಅನ್ಸೆಟ್ ಮಾಡುತ್ತದೆ.
04:40 ಹಾಗಾಗಿ ನೀವು ಬಳಕೆದಾರರನ್ನು session_destroy() ಅನ್ನು ಬಳಸಿ ಲಾಗ್ ಔಟ್ ಮಾಡುವುದು ನಿಮ್ಮ ಆಯ್ಕೆಯಾಗಿದೆ.
04:46 ಇದು ಪ್ರಸ್ತುತವಾಗಿ ಇರುವ ಎಲ್ಲ ಸೆಷನ್ ವೇರಿಯೇಬಲ್ ಅನ್ನು ಖಾಲಿ ಮಾಡುತ್ತದೆ.
04:50 ಅಥವಾ ನಿರ್ದಿಷ್ಟವಾಗಿ ಒಂದನ್ನು ತೆಗೆಯಬೇಕಾದರೆ, ನೀವು 'unset' ಮಾಡಬಹುದು.
04:53 ಹಾಗಾದರೆ session ಗಳು ಯಾವುದಕ್ಕೆ ಉಪಯುಕ್ತವಾಗಿವೆ?
04:55 ನೀವು ವೆಬ್ಸೈಟ್ ಗಳಲ್ಲಿ, Remember me ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡದಿದ್ದಲ್ಲಿ ಆಗ ಸೆಷನ್ ಗಳು ಬಳಕೆಯಾಗುತ್ತವೆ.
05:03 ಏಕೆಂದರೆ ಒಮ್ಮೆ ಬಳಕೆದಾರ ಬ್ರೌಸರ್ ಅನ್ನು ಮುಚ್ಚಿದರೆ, ಲಾಗ್ ಔಟ್ ಆಗುವರು.
05:09 ಮತ್ತು ನೀವು ಬ್ರೌಸರ್ ಗೆ ಹಿಂದಿರುಗಿದರೆ ನೀವು, ನಿಮ್ಮ ವಿವರಗಳನ್ನು ಅಂದರೆ ಯೂಸರ್ ನೇಮ್, ಪಾಸ್ವರ್ಡ್ ನಂತಹ ಮಾಹಿತಿಗಳನ್ನು ಪುನಃ ಟೈಪ್ ಮಾಡಬೇಕಾಗುತ್ತದೆ.
05:17 ಆದರೆ ಕುಕಿ ಗಳ ಬಳಕೆ ವಿಭಿನ್ನವಾಗಿದೆ. ಏಕೆಂದರೆ ಇದರಲ್ಲಿ ನೀವು ಎಕ್ಸ್ಪೈರಿ ಟೈಮ್ ಅನ್ನು ಸೆಟ್ ಮಾಡಿದರೆ, ನೀವಾಗಿಯೇ ಹಾಳುಮಾಡುವ ವರೆಗೆ, ನಿಮ್ಮ ಯೂಸರ್ ನೇಮ್ ಲಾಗಿನ್ ಆಗಿಯೇ ಇರುತ್ತದೆ ಅಥವಾ ಈ ಕುಕಿ ಯನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ.
05:30 ನಾನು 'Cookies' ಟ್ಯುಟೋರಿಯಲ್ ನಲ್ಲಿ ತೋರಿಸಿದಂತೆ ಅದನ್ನು ನಾಶಮಾಡಲು, ಕೋಡ್ ಅನ್ನು ಬರೆಯಬೇಕಾಗುತ್ತದೆ.
05:35 ಹಾಗಾಗಿ ನೀವು sessions' ಅಥವಾcookies – ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ನಿಮ್ಮ ಆಯ್ಕೆಯಾಗಿದೆ.
05:40 Session ಗಳು ಕಡಿಮೆ ಅವಧಿಗೆ ಉತ್ತಮ ಹಾಗು Cookie ಗಳು ದೀರ್ಘಾವಧಿಗೆ ಉತ್ತಮ ಅಂದರೆ ನಿರ್ದಿಷ್ಟವಾದ ಸಮಯದವರೆಗೆ ಡಾಟಾವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗಿದೆ.
05:49 ಆದರೆ ನೀವು ನನ್ನ ಪಿ.ಎಚ್.ಪಿ. ಪ್ರಾಜೆಕ್ಟ್ 'Register and login' ಅನ್ನು ನೋಡಿದರೆ, ನಾನು ಸೆಷನ್ ಗಳನ್ನು ಬಳಸಿರುವೆನು.
05:56 ಏಕೆಂದರೆ ಟ್ಯುಟೋರಿಯಲ್ ಗಳನ್ನು ರಚಿಸುವುದರಿಂದ ನಾನು ಸೆಷನ್ ಗಳನ್ನು ಬಳಸುವೆನು.
06:00 ಆದರೆ ನೀವು ಯಾವುದನ್ನಾದರೂ ಬಳಸಬಹುದು.
06:03 cookie ಆಗಿರಲಿ, session ಆಗಿರಲಿ, ಬಳಕೆದಾರರು ಜಾಸ್ತಿ ಸಮಯ ಲಾಗಿನ್ ಆಗಿರಬೇಕೋ ಬೇಡವೋ ಎನ್ನುವುದು ನಿಮ್ಮ ಆಯ್ಕೆಯಾಗಿರುತ್ತದೆ.
06:11 ಇದರ ಕುರಿತು ಪ್ರಶ್ನೆಗಳಿದ್ದರೆ, ನಿಸ್ಸಂಕೋಚವಾಗಿ ನನ್ನನ್ನು ಸಂಪರ್ಕಿಸಿ.
06:16 phpacademy ಗೆ ಸಬ್-ಸ್ಕ್ರೈಬ್ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ.
06:20 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14