FrontAccounting-2.4.7/C2/Setup-for-Sales-in-FrontAccounting/Kannada
From Script | Spoken-Tutorial
Revision as of 13:20, 23 April 2020 by Melkamiyar (Talk | contribs)
Time | Narration
|
00:01 | FrontAccounting ನಲ್ಲಿ ಸೆಟಪ್ ಫಾರ್ ಸೇಲ್ಸ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ನಲ್ಲಿ ನಾವು,
ಸೇಲ್ಸ್ ಟೈಪ್ ಗಳು, |
00:12 | ಸೇಲ್ಸ್ ಪರ್ಸನ್ ಗಳು, |
00:14 | ಸೇಲ್ಸ್ ಏರಿಯಾಗಳು, |
00:16 | ಮತ್ತು ಕಸ್ಟಮರ್ಗಳು ಮತ್ತು ಕಸ್ಟಮರ್ ಬ್ರಾಂಚ್ಗಳ ಆಡ್ ಮತ್ತು ಮ್ಯಾನೇಜ್ ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:30 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:35 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ನ ತತ್ವಗಳ ಜ್ಞಾನ ಹೊಂದಿರಬೇಕು. |
00:45 | ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಿರಬೇಕು. |
00:52 | ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
00:58 | ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
01:04 | ಸೇಲ್ಸ್ ಎನ್ನುವುದು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ. |
01:08 | ಇದು ನಿರ್ದಿಷ್ಟ ಸಮಯಾವಧಿಯಲ್ಲಿ ಮಾರಾಟ ಮಾಡಿದ ಸರಕುಗಳು ಮತ್ತು ಸೇವೆಗಳ ಮೊತ್ತವಾಗಿದೆ. |
01:14 | ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ |
01:19 | ಬ್ರೌಸರ್ ತೆರೆಯಿರಿ.
localhost/account ಎಂದು ಟೈಪ್ ಮಾಡಿ Enter ಒತ್ತಿ. |
01:27 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:30 | ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:38 | FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:44 | Maintenance ಪ್ಯಾನೆಲ್ ಅನ್ನು ಸೇಲ್ಸ್ ಮತ್ತು ಕಸ್ಟಮರ್ ವಿವರಗಳ ಸೆಟಪ್ ಮಾಡಲು ಬಳಸಲಾಗುತ್ತದೆ. |
01:50 | ನಾವೀಗ ಸೇಲ್ಸ್ ನಲ್ಲಿ ಸೆಟಪ್ಗಾಗಿ ಇರುವ ಹಂತಗಳನ್ನು ನೋಡೋಣ. |
01:56 | ಹಂತ 1 – ಸೆಟಪ್ ಸೇಲ್ಸ್ |
01:59 | ಹಂತ 2 – ಸೆಟಪ್ ಕಸ್ಟಮರ್ಸ್ |
02:03 | ಸೆಟಪ್ ಸೇಲ್ಸ್ ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ರೂಪಿಸಬೇಕು. |
02:08 | ಸೇಲ್ಸ್ ಟೈಪ್ ಗಳು, |
02:10 | ಸೇಲ್ಸ್ ಪರ್ಸನ್ ಗಳು ಮತ್ತು ಸೇಲ್ಸ್ ಏರಿಯಾಗಳು.
ಇದನ್ನು ಹೇಗೆ ಮಾಡಬಹುದು ಎಂದು ನಾವೀಗ ಕಲಿಯೋಣ. |
02:18 | FrontAccounting ಇಂಟರ್ ಫೇಸ್ ಗೆ ವಾಪಸ್ ಬನ್ನಿ. |
02:22 | Maintenance ಪ್ಯಾನೆಲ್ ನಲ್ಲಿ Sales Types ಮೇಲೆ ಕ್ಲಿಕ್ ಮಾಡಿ. |
02:27 | ಇದು ನಮಗೆ ನಿರ್ದಿಷ್ಟ ಗ್ರಾಹಕರಿಗೆ ಬೆಲೆ ನಿಗದಿಯ ಮಟ್ಟವನ್ನು ನಿರೂಪಿಸಲು ಅನುವು ಮಾಡಿಕೊಡುತ್ತದೆ. |
02:33 | ನಾವು ರಿಟೇಲ್ ಮತ್ತು ಹೋಲ್ ಸೇಲ್ ಗಳನ್ನು ಸೇಲ್ಸ್ ಟೈಪ್ ಗಳಾಗಿ ನೋಡಬಹುದು. |
02:39 | ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು ರಿಟೇಲ್ ಎಂದು ನಾವು ಪರಿಗಣಿಸೋಣ. |
02:45 | ಹೀಗಾಗಿ ನಾವು ಚಿಲ್ಲರೆ ಬೆಲೆ ನಿಗದಿಯನ್ನು ಬೇಸ್ ಬೆಲೆ ಪಟ್ಟಿಯಾಗಿ ಇಡೋಣ. |
02:51 | ಡಿಫಾಲ್ಟ್ ಆಗಿ Tax included ಫೀಲ್ಡ್ ಅನ್ನು Yes ಎಂದು ನಿಗದಿಪಡಿಸಲಾಗಿದೆ. |
02:56 | ಅಂದರೆ ಟ್ಯಾಕ್ಸ್ ಯಾವಾಗಲೂ ಸೇಲ್ಸ್ ನಲ್ಲಿ ಒಳಗೊಂಡಿರುತ್ತದೆ. |
03:01 | Wholesale ಪತ್ತೆಹಚ್ಚಿ ಮತ್ತು Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
03:06 | Calculation Factor ಫೀಲ್ಡ್ ಗೆ ಹೋಗಿ. |
03:09 | ನೀವು ಇಚ್ಛಿಸಿದಲ್ಲಿ ಬೇಸ್ ಪ್ರೈಸಿಂಗ್ ಸರಿಹೊಂದಿಸಲು Calculation factor ನಲ್ಲಿ ಟೈಪ್ ಮಾಡಿ. |
03:15 | ನಾವು ಇದನ್ನು ಹಾಗೆಯೇ ಇಡಲಿದ್ದೇವೆ. |
03:18 | ನಂತರ Tax included ಫೀಲ್ಡ್ ಬರುತ್ತದೆ. |
03:22 | ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಗಳು ಸಹ ಒಂದು ಅಂಶ ಆಗಿದ್ದಲ್ಲಿ ಈ ಬಾಕ್ಸ್ ಪರೀಕ್ಷಿಸಿ. |
03:28 | ನಾನು Tax included ಚೆಕ್ ಬಾಕ್ಸ್ ಪರೀಕ್ಷಿಸುತ್ತೇನೆ. |
03:32 | ನಂತರ ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ. |
03:37 | ನಾವು ಒಂದು ಸಂದೇಶವನ್ನು ನೋಡಬಹುದು. ವಿವರಗಳನ್ನು ಪರಿಷ್ಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ. |
03:43 | FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:48 | ಈಗ, ಹೊಸ ಸೇಲ್ಸ್ ಪರ್ಸನ್ ಹೇಗೆ ಸೇರಿಸಬಹುದು ಎಂದು ಕಲಿಯೋಣ. |
03:53 | Maintenance ಪ್ಯಾನೆಲ್ ನಲ್ಲಿ Sales Persons ಮೇಲೆ ಕ್ಲಿಕ್ ಮಾಡಿ. |
03:58 | ನಾವಿಲ್ಲಿ ಸೇಲ್ಸ್ ಪರ್ಸನ್ ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. |
04:05 | ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿರಿ. |
04:09 | Provision ಫೀಲ್ಡ್ ಅನ್ನು ಸೇಲ್ಸ್ ಪರ್ಸನ್ ಬಳಸುತ್ತಾರೆ. |
04:13 | ಅವರು ತಮ್ಮ ಮಾರಾಟದ ಮೇಲೆ ಕಮಿಷನ್ ಅಥವಾ ಪ್ರೊವಿಶನ್ ಪಡೆಯುತ್ತಾರೆ. |
04:18 | ಹೀಗಾಗಿ ನಾನು Provision ಫೀಲ್ಡ್ ನಲ್ಲಿ ಕಮಿಷನ್ ಅನ್ನು 5% ಆಗಿ ಟೈಪ್ ಮಾಡುತ್ತೇನೆ. |
04:25 | ಮುಂದಿನದು ಟರ್ನ್ ಓವರ್ ಬ್ರೇಕ್ ಪಾಯಿಂಟ್ ಲೆವೆಲ್. |
04:29 | ಇದನ್ನು ಸೇಲ್ಸ್ ಪರ್ಸನ್ ಗೆ ಬಳಸಲಾಗುತ್ತದೆ. |
04:32 | ಮೊತ್ತವು ಬ್ರೇಕ್ ಪಾಯಿಂಟ್ ದಾಟಿದರೆ ಮಾತ್ರ ಆತ ಪ್ರೊವಿಶನ್ ಪಡೆಯುತ್ತಾನೆ. |
04:37 | ಹೀಗಾಗಿ, Break point ಫೀಲ್ಡ್ನಲ್ಲಿ ನಾವು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ. |
04:42 | ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಆತ 5% ಕಮಿಷನ್ ಪಡೆಯುತ್ತಾನೆ. |
04:50 | ನಮ್ಮ ವಿಚಾರದಲ್ಲಿ ಇದು ಒಂದು ಲಕ್ಷ ರೂಪಾಯಿಗಳು. |
04:54 | ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ Provision 2 ಫೀಲ್ಡ್ ಬಳಸಲಾಗುತ್ತದೆ. |
05:01 | ನಾನಿಲ್ಲಿ 3 ಟೈಪ್ ಮಾಡುತ್ತೇನೆ.
ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ ಆತ 3% ಕಮಿಷನ್ ಪಡೆಯುತ್ತಾನೆ. |
05:12 | ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:17 | FrontAccounting ಇಂಟರ್ ಫೇಸ್ ಗೆ ವಾಪಸ್ ಬರಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:23 | ಈಗ ನಾವು ಹೊಸ ಸೇಲ್ಸ್ ಏರಿಯಾ ರಚಿಸುವುದನ್ನು ಕಲಿಯಲಿದ್ದೇವೆ. |
05:28 | Maintenance ಪ್ಯಾನಲ್ ನಲ್ಲಿ Sales Areas ಮೇಲೆ ಕ್ಲಿಕ್ ಮಾಡಿ. |
05:33 | ಸೇಲ್ಸ್ ಏರಿಯಾ ಆಧರಿಸಿ ನಾವು ಸೇಲ್ಸ್ ಆರ್ಡರ್ ಗಳನ್ನು ರಚಿಸಲಿದ್ದೇವೆ ಮತ್ತು ಡಿಸ್ಪ್ಯಾಚ್ ಗಳನ್ನು ಮಾಡಲಿದ್ದೇವೆ. |
05:40 | ನಾವು ರಚಿಸಬೇಕಾದ ಹೊಸ ಏರಿಯಾ ನೇಮ್ ಟೈಪ್ ಮಾಡಿ.
ನಾನು South Mumbai ಎಂದು ಟೈಪ್ ಮಾಡುತ್ತೇನೆ. |
05:47 | ವಿಂಡೋದಲ್ಲಿ ಕೆಳಗಡೆ dd new ಬಟನ್ ಮೇಲೆ ಕ್ಲಿಕ್ ಮಾಡಿ ಈ ಬದಲಾವಣೆಗಳನ್ನು ಸೇವ್ ಮಾಡಿ. |
05:53 | ನಾವು ಪರಿಷ್ಕೃತ ಎಂಟ್ರಿಯ ಟೇಬಲ್ ಅನ್ನು ನೋಡಬಹುದು. |
05:58 | FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:03 | ಸೇಲ್ಸ್ ಆರ್ಡರ್ ಹೇಳುವ ಮೊದಲು ನಾವು: |
06:08 | ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚಸ್ ಸೆಟ್ ಅಪ್ ಮಾಡಬೇಕು. |
06:14 | ಕಸ್ಟಮರ್ ಎಂದರೆ ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮ. |
06:21 | ನಮ್ಮ ಉತ್ಪನ್ನಗಳನ್ನು ಮಾರಲು ನಾವು ಕಸ್ಟಮರ್ಗಳನ್ನು ಸೇರಿಸಬೇಕು. |
06:25 | ಈಗ FrontAccounting ಇಂಟರ್ ಫೇಸ್ ಗೆ ಮರಳಿ. |
06:29 | Maintenance ಪ್ಯಾನಲ್ನ ಕೆಳಗಡೆ ಎಡಭಾಗದಲ್ಲಿ Add and Manage Customers ಮೇಲೆ ಕ್ಲಿಕ್ ಮಾಡಿ. |
06:36 | ಇಲ್ಲಿ ತೋರಿಸಿರುವಂತೆ ಕಸ್ಟಮರ್ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. |
06:42 | Customer’s Currency ಡ್ರಾಪ್ ಡೌನ್ ಬಾಕ್ಸ್ ನಲ್ಲಿ Indian Rupees ಆರಿಸಿ. |
06:47 | Sales Type or Price List ಡ್ರಾಪ್ ಡೌನ್ ಬಾಕ್ಸ್ ನಲ್ಲಿ Retail ಆರಿಸಿ. |
06:53 | ಇಲ್ಲಿ ತೋರಿಸಿರುವಂತೆ ಕಸ್ಟಮರ್ ನ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ. |
06:58 | ನಾನು ಸೇಲ್ಸ್ ಪರ್ಸನ್ ಹೆಸರನ್ನು ಈ ಹಿಂದೆ ರಚಿಸಿದ್ದ ರಾಹುಲ್ ಅನ್ನೇ ಆರಿಸಿದ್ದೇನೆ. |
07:05 | ನಾವು ಬಲಗಡೆಗೆ Sales ಕಾಲಂ ಅನ್ನು ನೋಡಬಹುದು. |
07:09 | ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ಷರತ್ತುಗಳನ್ನು ಭರ್ತಿ ಮಾಡಿ. |
07:16 | ನಾವು ಡೀಫಾಲ್ಟ್ ಸೆಟ್ಟಿಂಗ್ಗಳನ್ನು ಹಾಗೆಯೇ ಇಡುತ್ತೇನೆ. |
07:20 | ಕೆಳಗೆ ಸ್ಕ್ರಾಲ್ ಮಾಡಿ.
ವಿಂಡೋವಿನ ಕೆಳಗಡೆ Add New Customer ಬಟನ್ ಮೇಲೆ ಕ್ಲಿಕ್ ಮಾಡಿ. |
07:28 | ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಸಂದೇಶವನ್ನು ನಾವು ಕಾಣಬಹುದು. |
07:33 | ಸೇಲ್ಸ್ ಅಥವಾ ಡೆಲಿವರಿ ಆರ್ಡರ್ಗಳನ್ನು ನೀಡಲು ಕಸ್ಟಮರ್ ಒಂದು ಕಸ್ಟಮರ್ ಬ್ರಾಂಚ್ ಹೊಂದಿರಬೇಕು. |
07:40 | ಮೊದಲಿಗೆ ನಾವು ಹೊಸ ಸೇಲ್ಸ್ ಎಂಟ್ರಿಗೆ ಈ ಬದಲಾವಣೆಗಳನ್ನು ಅನ್ವಯಿಸಬೇಕು.
ಕೆಳಗೆ ಸ್ಕ್ರಾಲ್ ಮಾಡಿ. |
07:49 | ವಿಂಡೋವಿನ ಕೆಳಗಡೆ Update Customer ಬಟನ್ ಮೇಲೆ ಕ್ಲಿಕ್ ಮಾಡಿ. |
07:54 | ನಾವು ಕಸ್ಟಮರ್ ವಿವರಗಳನ್ನು ಪರಿಷ್ಕರಿಸಿದ್ದೇವೆ ಎಂಬುದನ್ನು ಸಕ್ಸಸ್ ಮೆಸೇಜ್ ಸೂಚಿಸುತ್ತದೆ. |
08:00 | FrontAccounting ಇಂಟರ್ಫೇಸ್ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:05 | ಈಗ ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡೋಣ. |
08:11 | Maintenance ಪ್ಯಾನಲ್ನಲ್ಲಿ Customer Branches ಮೇಲೆ ಕ್ಲಿಕ್ ಮಾಡಿ. |
08:16 | ಡಿಫಾಲ್ಟ್ ಬ್ರಾಂಚ್ Global ಅನ್ನು ಕಸ್ಟಮರ್ಗೆ ಸೇರಿಸಿರುವುದನ್ನು ನಾವು ನೋಡಬಹುದು. |
08:22 | ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
08:28 | Sales ಪ್ಯಾನಲ್ನಲ್ಲಿ Sales Area ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು South Mumbai ಆರಿಸಿ. |
08:36 | ಇತರ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಇಡಿ. |
08:40 | ಇಲ್ಲಿನ ಕಸ್ಟಮರ್ ಅಡ್ರೆಸ್, ಮೇಯ್ಲಿಂಗ್ ಅಡ್ರೆಸ್ ಮತ್ತು ಬಿಲ್ಲಿಂಗ್ ಅಡ್ರೆಸ್ ಎರಡೂ ಆಗಿರುತ್ತದೆ. |
08:46 | ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ ನೀವು ಅದನ್ನು ಇಲ್ಲಿ ಬದಲಾಯಿಸಬಹುದು. |
08:50 | ಈ ಬದಲಾವಣೆಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ. |
08:56 | ಬ್ರಾಂಚ್ ಪರಿಷ್ಕರಣೆಯಾಗುತ್ತದೆ ಮತ್ತು ತುದಿಯಲ್ಲಿ ಸಕ್ಸಸ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
09:01 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
09:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಸೇಲ್ಸ್ ಟೈಪ್ಗಳು, |
09:13 | ಸೇಲ್ಸ್ ಪರ್ಸನ್ ಗಳು, |
09:15 | ಸೇಲ್ಸ್ ಏರಿಯಾಗಳು, |
09:17 | ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚ್ಗಳನ್ನು ಸೆಟಪ್ ಮಾಡಲು ಕಲಿತೆವು. |
09:23 | ಅಸೈನ್ಮೆಂಟ್ ಆಗಿ ಇನ್ನೊಂದು ಕಸ್ಟಮರ್ ಸೇರಿಸಿ. |
09:28 | ಹೊಸ ಕಸ್ಟಮರ್ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ. |
09:34 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:42 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
09:52 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
09:56 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
10.02 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |