FrontAccounting-2.4.7/C2/Installation-of-FrontAccounting-on-Linux-OS/Kannada

From Script | Spoken-Tutorial
Revision as of 12:25, 23 April 2020 by Melkamiyar (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration


00:01 ಲೀನಕ್ಸ್ ಅಪರೇಟಿಂಗ್ ಸಿಸ್ಟಂಗೆ FrontAccounting ಅಳವಡಿಸುವ ಕುರಿತ ಸ್ಪೋಕನ್ ಟುಟೋರಿಯಲ್ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ನಲ್ಲಿ ನಾವು-

XAMPP ಅಳವಡಿಸಲು,

00:13 FrontAccounting ಸಾಫ್ಟ್ವೇರ್ ಅಳವಡಿಸಲು,
00:15 ಡೇಟಾಬೇಸ್ ಸೆಟಪ್ ಮಾಡಲು ಮತ್ತು

ಲೀನಕ್ಸ್ ಒ.ಎಸ್ ನಲ್ಲಿ FrontAccounting ಅಳವಡಿಸಲು ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04,

00:29 ಅಪಾಚೆ, ಮೈ SQL ಮತ್ತು XAMPP 5.5.19 ಯಿಂದ ಗಳಿಸಿದ PHP,
00:36 FrontAccounting 2.4.7,
00:40 ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಕೆಲಸ ಮಾಡುತ್ತಿರುವ ಇಂಟರ್ನೆಟ್ ಸಂಪರ್ಕ ಬಳಸುತ್ತಿದ್ದೇನೆ.
00:45 ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು.
00:50 FrontAccounting ಎನ್ನುವುದು ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ.
00:54 ಹೀಗಾಗಿ ನಾವು ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸೆಟಪ್ ಮಾಡಲು XAMPP ಬಳಸಲಿದ್ದೇವೆ.
00:59 ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ.

01:06 ಇಲ್ಲಿ ಪೇಜ್ ಅನ್ನು ಡೌನ್ಲೋಡ್ ಮಾಡಲು XAMPP ಬಳಸಬೇಕಾಗುತ್ತದೆ.
01:10 ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು ಇಲ್ಲಿ XAMPP ಲಭ್ಯ.
01:15 ಈ ಹಸಿರು ಬಟನ್ ಒತ್ತಿ XAMPP ನ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು.
01:20 ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ಹೊಂದಿಕೊಂಡು, ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು.
01:27 ನನ್ನ ವಿಚಾರದಲ್ಲಿ ನನಗೆ XAMPP ವರ್ಶನ್ 5.5.19 ಬೇಕು.
01:33 ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು XAMPP ಲೀನಕ್ಸ್ ಆರಿಸಿ.
01:37 ರಿಡೈರೆಕ್ಟ್ ಮಾಡಿದ ಪೇಜ್, ಇಲ್ಲಿತನಕದ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ.
01:42 ಈ ಅಳವಡಿಕೆಗೆ ನಾನು XAMPP ವರ್ಶನ್ 5.5.19 ಆರಿಸುತ್ತೇನೆ.
01:49 ನನ್ನ ಸಿಸ್ಟಂ 64 ಬಿಟ್ ಅಪರೇಟಿಂಗ್ ಸಿಸ್ಟಂ ಆಗಿದೆ. ಹೀಗಾಗಿ ನಾನು xampp-linux-x64-5.5.19-0-installer.run ಡೌನ್ಲೋಡ್ ಮಾಡಲಿದ್ದೇನೆ.
02:05 ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ.
02:10 ನನ್ನ ಮಶಿನ್ನಲ್ಲಿ ಇದನ್ನು Downloads ಫೋಲ್ಡರ್ನಲ್ಲಿ ಸೇವ್ ಮಾಡಲಾಗಿದೆ.
02:14 ನಾವೀಗ Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಒಂದನ್ನು ತೆರೆಯೋಣ.
02:21 ಟರ್ಮಿನಲ್ನಲ್ಲಿ cd space Downloads ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
02:27 ಇದು ಕರಂಟ್ ವರ್ಕಿಂಗ್ ಡೈರೆಕ್ಟರಿಯನ್ನು ಡೌನ್ಲೋಡ್ಸ್ ಗೆ ಬದಲಾಯಿಸಲಿದೆ.
02:31 ನಂತರ ಇಲ್ಲಿ ತೋರಿಸಿರುವ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
02:36 ಈಗ ಇನ್ಸ್ಟಾಲರ್ ಫೈಲ್ ಅನ್ನು ರನ್ ಮಾಡಿ, ಇಲ್ಲಿ ತೋರಿಸಿರುವ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.

ಕೇಳಿದರೆ ಅಡ್ಮಿನ್ ಪಾಸ್ವರ್ಡ್ ನಮೂದಿಸಿ.

02:46 ಈಗ ಸೆಟಪ್ ವಿಜಾರ್ಡ್ ಡೈಲಾಗ್ ಬಾಕ್ಸ್ ತೆರೆಯುತ್ತದೆ.
02:50 ಕೇಳಿದಾಗಲೆಲ್ಲ Next ಬಟನ್ ಒತ್ತಿ ಮತ್ತು ಇಲ್ಲಿ ತೋರಿಸಿರುವಂತೆ ಇನ್ಸ್ಟಾಲೇಶನ್ ಹಂತಗಳನ್ನು ಅನುಸರಿಸಿ.
02:56 Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.

ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.

03:05 ಅಳವಡಿಸುವುದನ್ನು ಮುಗಿದ ನಂತರ, Launch XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
03:10 ಕೊನೆಯದಾಗಿ Finish ಬಟನ್ ಮೇಲೆ ಕ್ಲಿಕ್ ಮಾಡಿ.
03:13 ಈಗ XAMPP ಯನ್ನು ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಅಳವಡಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಾವು ನೋಡಬೇಕು.
03:19 ಟರ್ಮಿನಲ್ನಲ್ಲಿ, sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಸರ್ವಿಸ್ ಪ್ರಾರಂಭಿಸಿ.
03:31 ಕೇಳಿದಾಗ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
03:36 ನೀವು ಇಲ್ಲಿ ತೋರಿಸಿರುವ ಮೆಸೆಜ್ ಪಡೆಯುಬಹುದು.

XAMPP ಯನ್ನು ನಿಮ್ಮ ಸಿಸ್ಟಂನಲ್ಲಿ ಅಳವಡಿಸಲಾಗಿದೆ ಮತ್ತು ನೀವು ಸರ್ವಿಸ್ ಪ್ರಾರಂಭಿಸಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.

03:46 ಒಂದುವೇಳೆ ನೀವು Command not found ಎನ್ನುವ ಮೆಸೆಜ್ ಪಡೆದರೆ, ನಿಮ್ಮ ಮಶಿನ್ನಲ್ಲಿ XAMPP ಯನ್ನು ಅಳವಡಿಸಿಲ್ಲ ಎಂದರ್ಥ.
03:54 ನೀವು ಈ ಕೆಳಗಿನ ಎರರ್ ಮೆಸೆಜ್ ಪಡೆಯಬಹುದು

“Apache shutdown unexpectedly” ಅಥವಾ

04:00 “Port 80 in use for Apache Server”

ಅಥವಾ


04:05 “Unable to connect to any of the specified MySQL hosts for MySQL database.”
04:13 ಇದು ಏಕೆಂದರೆ ಅಪಾಚೆ ಮತ್ತು ಮೈ SQL ಗೆ ನೀಡಲಾದ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ.
04:21 ಅಪಾಚೆಗೆ ಡಿಫಾಲ್ಟ್ ಪೋರ್ಟ್ ಸಂಖ್ಯೆ 80 ಮತ್ತು ಮೈ SQL ಗೆ 3306.
04:30 ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ ಅಡಿಷನಲ್ ರೀಡಿಂಗ್ ಮಟೀರಿಯಲ್ ನೋಡಿ.
04:36 ಹಾಗೂ ಮುಂದುವರಿಸುವ ಮುನ್ನ ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನೀಡಿ. ಉದಾಹರಣೆಗೆ: 8080
04:44 ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

04:52 ನಮಗೆ ಈಗ XAMPP ಸ್ಕ್ರೀನ್ ನೋಡಲು ಸಾಧ್ಯವಾಗಬೇಕು.
04:56 ಭಾಷೆಯ ಆಯ್ಕೆಯನ್ನು ಕೇಳಿದರೆ, ಇಂಗ್ಲಿಷ್ ಆರಿಸಿ.
05:01 ನಾವೀಗ XAMPP ಹೋಂ ಪೇಜ್ ನಲ್ಲಿದ್ದೇವೆ.
05:04 ಸ್ಕ್ರೀನ್ನ ಎಡಗಡೆಯಲ್ಲಿರುವ ಮೆನುವಿನಲ್ಲಿ PHPinfo ಮೇಲೆ ಕ್ಲಿಕ್ ಮಾಡಿ.
05:10 ಈಗ Ctrl + F ಕೀ ಗಳನ್ನು ಒತ್ತಿ ಮತ್ತು DOCUMENT underscore ROOT ಗೆ ಹುಡುಕಿ.
05:18 ಇದನ್ನು Apache Environment ಟೇಬಲ್ನಲ್ಲಿ ಕಾಣಬಹುದು.
05:22 DOCUMENT underscore ROOT ನ ಮೌಲ್ಯವು

slash opt slash lampp slash htdocs ಅಥವಾ slash var slash www ಆಗಿರಬಹುದು.

05:35 ನನ್ನ ಮಶಿನ್ನಲ್ಲಿ ಇದು slash opt slash lampp slash htdocs ಆಗಿದೆ.
05:41 ದಯವಿಟ್ಟು ಈ ಪಾತ್ ಅನ್ನು ನೆನಪಿಡಿ.

ನಾವಿಲ್ಲಿ FrontAccounting ಅಳವಡಿಸಲಿದ್ದೇವೆ.

05:47 ನಾವೀಗ FrontAccounting ನ ಡೌನ್ಲೋಡ್ ಪ್ರಾರಂಭಿಸೋಣ.
05:50 ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ.
05:57 frontaccounting-2.4.7.tar.gz ಮೇಲೆ ಕ್ಲಿಕ್ ಮಾಡಿ.
06:04 ತಕ್ಷಣವೇ ಡೌನ್ಲೋಡ್ ಶುರುವಾಗುತ್ತದೆ.

Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ.

06:12 ಟರ್ಮಿನಲ್ಗೆ ವಾಪಸ್ ಬನ್ನಿ.
06:15 ನಂತರ, ನಾವು ಡೌನ್ಲೋಡ್ ಮಾಡಿದ tar.gz ಫೈಲ್ನಿಂದ ಕಂಟೆಂಟ್ ಗಳನ್ನು ಪಡೆಯಬೇಕು.
06:22 ಇದಕ್ಕಾಗಿ sudo space tar space hyphen zxvf space frontaccounting hyphen 2.4.7.tar.gz ಎಂದು ಟೈಪ್ ಮಾಡಿ.
06:39 ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ.
06:44 ಒಮ್ಮೆ ಪಡೆದ ನಂತರ, FrontAccounting ನಿಂದ ಪಡೆದ ಫೋಲ್ಡರ್ ಅನ್ನು ನಾನು account ಎಂದು ಮರುನಾಮಕಾರಣ ಮಾಡುತ್ತೇನೆ.
06:50 mv space frontaccounting space account ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ.
06:58 ಫೋಲ್ಡರ್ ಹೆಸರಿನ ಮರುನಾಮಕರಣವು ಐಚ್ಛಿಕ. ಆದರೆ,

ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಕರಿಸುತ್ತದೆ.

07:08 ಈಗ ಟರ್ಮಿನಲ್ಗೆ ಮರಳಿ.
07:11 ನಾವೀಗ ಫೋಲ್ಡರ್ ಅಕೌಂಟ್ ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ಸರಿಸಬೇಕು.
07:17 ಅಕೌಂಟ್ ಫೋಲ್ಡರ್ ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ಸರಿಸಲು,

sudo space mv space account space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ.

07:34 ನಾವೀಗ ಅಪಾಚೆ ಹೋಂ ಡೈರೆಕ್ಟರಿಗೆ ಸಾಗೋಣ.
07:37 ಹೀಗೆ ಮಾಡಲು cd space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
07:47 ಅಕೌಂಟ್ ಫೋಲ್ಡರ್ ಪರ್ಮಿಶನ್ ಬದಲಾಯಿಸಲು,
sudo space chmod space -R space 777 space account slash ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
08:01 ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದೇವೆ.
08:05 FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯಲ್ಲಿದೆ ಎಂಬುದನ್ನು ಖಚಿತಪಡಿಸಿ.
08:11 ನಂತರ, ಮುಂದೆ ಸಾಗಲು FrontAccounting ಗಾಗಿ ನಾವು ಡೇಟಾಬೇಸ್ ಒಂದನ್ನು ರಚಿಸಬೇಕು.
08:17 ನಾವಿದನ್ನು phpmyadmin ನಲ್ಲಿ ಮಾಡಲಿದ್ದೇವೆ. ಇದು ಮೈ SQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ.

ಇದು XAMPP ಅಳವಡಿಕೆಯ ಜೊತೆ ಬರುತ್ತದೆ.

08:28 ನಾವೀಗ ಬ್ರೌಸರ್ನಲ್ಲಿ XAMPP ಪೇಜ್ಗೆ ಸಾಗೋಣ.

XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಟೈಪ್ ಮಾಡಿ.

08:39 ಮೇಲ್ಗಡೆಯ ಮೆನುವಿನಲ್ಲಿ Users ಮೇಲೆ ಕ್ಲಿಕ್ ಮಾಡಿ ಮತ್ತು Add User ಮೇಲೆ ಕ್ಲಿಕ್ ಮಾಡಿ.
08:47 ಈಗ ತೆರೆಯುವ ಹೊಸ ವಿಂಡೋದಲ್ಲಿ ನಿಮ್ಮ ಆಯ್ಕೆಯ ಯೂಸರ್ನೇಮ್ ನಮೂದಿಸಿ.

ನಾನಿಲ್ಲಿ frontacc ಅನ್ನು ನನ್ನ ಯೂಸರ್ನೇಮ್ ಆಗಿ ಟೈಪ್ ಮಾಡುತ್ತೇನೆ.

08:56 Host ಡ್ರಾಪ್-ಡೌನ್ ಲಿಸ್ಟ್ನಿಂದ Local ಆರಿಸಿ.
09:01 Password ಟೆಕ್ಸ್ಟ್-ಬಾಕ್ಸ್ನಲ್ಲಿ ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ.
09:06 ನಾನಿಲ್ಲಿ admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ.
09:11 Re-type ಟೆಕ್ಸ್ಟ್ ಬಾಕ್ಸ್ನಲ್ಲಿ ಅದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
09:16 ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ.
09:21 Database for user ಅಡಿ ನಾವು ಈ ಆಯ್ಕೆಯನ್ನು ನೋಡಬಹುದು:

Create database with the same name and grant all privileges.

09:29 ನಾವು ಆ ಆಯ್ಕೆಯನ್ನು ಪರೀಕ್ಷಿಸಿ ಕೆಳಕ್ಕೆ ಸ್ಕ್ರಾಲ್ ಮಾಡಲಿದ್ದೇವೆ.
09:33 ನಂತರ ಪೇಜ್ನ ಬಲಗಡೆಗೆ ಕೆಳಕ್ಕೆ Go ಬಟನ್ ಮೇಲೆ ಕ್ಲಿಕ್ ಮಾಡಲಿದ್ದೇವೆ.
09:38 ನಾವಿಲ್ಲಿ “You have added a new user” ಮೆಸೇಜ್ ಕಾಣಬಹುದು.

frontacc ಹೆಸರಿನ ಮತ್ತು frontacc ಯೂಸರ್ನ ಹೊಸ ಡೇಟಾಬೇಸ್ ರಚಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

09:50 ಯೂಸರ್ನೇಮ್ ಮತ್ತು ಪಾಸ್ವರ್ಡ್ ಕೇವಲ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ.
09:56 ಯೂಸರ್ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಡಿ.
10:01 ಇದು FrontAccounting ನ ಸಂಪೂರ್ಣ ಅಳವಡಿಕೆಗೆ ನಂತರ ಬೇಕಾಗುತ್ತದೆ.
10:06 ದಯವಿಟ್ಟು ಗಮನಿಸಿ: ಡೇಟಾಬೇಸ್ ಹೆಸರು ಮತ್ತು ಯೂಸರ್ನೇಮ್ ಒಂದೇ ಆಗಬೇಕೆಂದು ಏನೂ ಇಲ್ಲ.
10:11 ಬೇರೆ ಬೇರೆ ಹೆಸರುಗಳನ್ನು ಹೊಂದಲು ಮೊದಲಿಗೆ ಡೇಟಾಬೇಸ್ ರಚಿಸಿ ಮತ್ತು ನಂತರ ಆ ಡೇಟಾಬೇಸ್ಗೆ ಯೂಸರ್ ಒಂದನ್ನು ರಚಿಸಿ.
10:18 ಅಲ್ಲದೆ, ಹೆಸರಿಸುವ ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಯಾವುದೇ ಬಿಟ್ಟ ಸ್ಥಳ ಇರಬಾರದು.
10:25 ಈಗ ನಮ್ಮ XAMPP ಚಾಲನೆಯಲ್ಲಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ.
10:29 ನಾವೀಗ Front Accounting ಅಳವಡಿಸುವುದನ್ನು ಮುಂದುವರಿಸಲು ಸಜ್ಜಾಗಿದ್ದೇವೆ.
10:33 ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.

ಅಡ್ರೆಸ್ ಬಾರ್ನಲ್ಲಿ localhost/account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.


10:44 ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ಪೇಜ್ ಅನ್ನು ಕಾಣಬಹುದು.
10:51 Select install wizard language ಇಂಗ್ಲಿಷ್ನಲ್ಲಿದೆ ಎಂಬುದನ್ನು ಖಚಿತಪಡಿಸಿ.
10:56 ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಪೇಜ್ ನ ಕೆಳಗಡೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
11:02 ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು:

Step 2: Database Server Settings.

11:08 ಇಲ್ಲಿ ನಾನು ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ.
11:12 ನೀವು ಮೈ SQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಹೊರತುಪಡಿಸಿ ಬೇರೆ ಯಾವುದಕ್ಕೂ ಬದಲಾಯಿಸಿದ್ದರೆ ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ.
11:21 ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು ನಮೂದಿಸಿ –

frontacc ಅನ್ನು ಡೇಟಾಬೇಸ್ ನೇಮ್ ಆಗಿ Frontacc ಅನ್ನು ಡೇಟಾಬೇಸ್ ಯೂಸರ್ ಆಗಿ

11:33 admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ
11:38 ಉಳಿದ ಆಯ್ಕೆಗಳನ್ನು ಕಡೆಗಣಿಸಿ ಮತ್ತು ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
11:45 ನಂತರ, ನೀವು ನಿಮ್ಮ ಸ್ವಂತ ಕಂಪನಿಯ ವಿವರಗಳನ್ನು ಸೇರಿಸಬೇಕು.

ಇದನ್ನು ಹೇಗೆ ಮಾಡಬೇಕು ಎಂಬುದನ್ನು ನಾನು ತೋರಿಸುತ್ತೇನೆ.

11:53 Company Name ಫೀಲ್ಡ್ನಲ್ಲಿ ನಾನು ST Company Pvt Ltd ಎಂದು ಟೈಪ್ ಮಾಡುತ್ತೇನೆ.
11:59 ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ.
12:02 ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ.

ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು.

12:10 ಅದೇ ಪಾಸ್ವರ್ಡ್ ಅನ್ನು ಪುನಃ ನಮೂದಿಸಿ.

ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ.

12:16 ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು.
12:21 ನಾನು Standard new company American COA ಆರಿಸುತ್ತೇನೆ.


12:26 ಡಿಫಾಲ್ಟ್ ಲ್ಯಾಂಗ್ವೇಜ್ ಅನ್ನು ಇಂಗ್ಲಿಷ್ ಆಗಿ ಆರಿಸಿ.
12:30 Install ಬಟನ್ ಮೇಲೆ ಕ್ಲಿಕ್ ಮಾಡಿ.
12:34 ನಾವು ನಮ್ಮ ಸ್ಕ್ರೀನ್ ಮೇಲೆ ಅಂತಿಮ ಮೆಸೆಜ್ ಅನ್ನು ನೋಡಬಹುದು. FrontAccounting ERP ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
12:46 FrontAccounting ಇಂಟರ್ಫೇಸ್ಗೆ ಲಾಗಿನ್ ಆಗಲು Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ.
12:53 ಲಾಗಿನ್ ಸ್ಕ್ರೀನ್ನಲ್ಲಿ ಈ ಕೆಳಗಿನ ವಿವರಗಳನ್ನು ನಮೂದಿಸಿ:

admin ಅನ್ನು ಯೂಸರ್ ನೇಮ್ ಆಗಿ spoken ಅನ್ನು ಪಾಸ್ವರ್ಡ್ ಆಗಿ

13:03 ST Company Pvt. Ltd ಅನ್ನು ಕಂಪನಿಯಾಗಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

13:11 ನಾವೀಗ Front Accounting Administration ಪೇಜ್ಗೆ ತಲುಪಿದ್ದೇವೆ.

ಈ ಪೇಜ್ನಲ್ಲಿ ಬೇರೆಬೇರೆ ಟ್ಯಾಬ್ಗಳನ್ನು ನೋಡಬಹುದು.

13:18 ಇವುಗಳಲ್ಲಿ ಹೆಚ್ಚಿನವುಗಳ ಬಳಕೆಯನ್ನು ಸರಣಿಯ ಮುಂದಿನ ಭಾಗದಲ್ಲಿ ನಾವು ಕಲಿಯಲಿದ್ದೇವೆ.


13:23 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಭಾಗಕ್ಕೆ ತಲುಪಿದ್ದೇವೆ.
13:28 ಈ ಟ್ಯುಟೋರಿಯಲ್ನಲ್ಲಿ ನಾವು XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
13:34 FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು,
13:38 ಮತ್ತು ಲೀನಕ್ಸ್ ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು.
13:42 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
13:50 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
14:00 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.

14:05 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

14:12 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
14:15 ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.

ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.

14:25 ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.

ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.

14:34 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.


14:40 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

Contributors and Content Editors

Melkamiyar, Sandhya.np14