LibreOffice-Suite-Base/C4/Database-Design-Primary-Key-and-Relationships/Kannada
From Script | Spoken-Tutorial
Revision as of 14:10, 16 April 2020 by Sandhya.np14 (Talk | contribs)
Time | Narration
|
00:00 | ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್, ಡೇಟಾಬೇಸ್ ಡಿಸೈನ್ ಮೇಲಿನ ಹಿಂದಿನ ಟ್ಯುಟೋರಿಯಲ್ ನ ಮುಂದುವರಿಕೆಯಾಗಿದೆ. |
00:10 | ಇಲ್ಲಿ ನಾವು ಈ ಕೆಳಗಿನ ವಿಷಯಗಳನ್ನು ಕಲಿಯಲಿದ್ದೇವೆ: |
00:13 | ಮಾಹಿತಿ ಐಟಂಗಳನ್ನು ಕಾಲಂಗಳಾಗಿ ಪರಿವರ್ತಿಸುವುದು, |
00:17 | ಪ್ರೈಮರಿ ಕೀಗಳನ್ನು ನಿರೂಪಿಸುವುದು, |
00:20 | ಮತ್ತು ಟೇಬಲ್ ರಿಲೇಶನ್ ಶಿಪ್ ಗಳನ್ನು ವ್ಯವಸ್ಥೆಗೊಳಿಸುವುದು. |
00:23 | ಕಳೆದ ಟ್ಯುಟೋರಿಯಲ್ ನಲ್ಲಿ ನಾವು, ಸರಳವಾದ ಲೈಬ್ರರಿ ಅಪ್ಲಿಕೇಶನ್ ಗೆ ಡೇಟಾಬೇಸ್ ಡಿಸೈನ್ ನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೆವು. |
00:30 | ಮೊದಲಿಗೆ ನಾವು ಲೈಬ್ರರಿ ಡೇಟಾಬೇಸ್ ನಿರ್ಮಿಸುವ ಉದ್ದೇಶವನ್ನು ನಿರ್ಣಯಿಸಿದೆವು. |
00:36 | ನಂತರ ನಾವು ಲೈಬ್ರರಿ ಕುರಿತ ಮಾಹಿತಿಯನ್ನು ಕಂಡುಹುಡುಕಿ ಮತ್ತು ಅಣಿಗೊಳಿಸಿ ಈ ಪ್ರಕ್ರಿಯೆಯನ್ನು ಮುಂದುವರಿಸಿದೆವು, |
00:44 | ಮತ್ತು ಮಾಹಿತಿಯನ್ನು ಟೇಬಲ್ ಗಳಾಗಿ ವಿಂಗಡಿಸಿದೆವು. |
00:49 | ಅಲ್ಲದೆ, ನಾವು ನಮ್ಮ ಲೈಬ್ರರಿ ಡೇಟಾಬೇಸ್ ಅನ್ನು ನಾಲ್ಕು ಟೇಬಲ್ ಗಳಾಗಿ ಗುರುತಿಸಿದೆವು. ಅವೆಂದರೆ: ಬುಕ್ಸ್, ಆಥರ್ಸ್, ಪಬ್ಲಿಕೇಶನ್ಸ್ ಮತ್ತು ಮೆಂಬರ್ಸ್. |
01:00 | ಈಗ ನಾವು ಮಾಹಿತಿಯ ಐಟಂಗಳನ್ನು ಕಾಲಂಗಳಾಗಿ ಪರಿವರ್ತಿಸುವ ಮುಂದಿನ ಹಂತಕ್ಕೆ ಹೋಗೋಣ. |
01:07 | ಇಲ್ಲಿ ನಾವು, ಪ್ರತಿ ಟೇಬಲ್ ನಲ್ಲಿ ಯಾವ ಮಾಹಿತಿಯನ್ನು ಶೇಖರಿಸಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ. |
01:13 | ಈ ಹಿಂದೆ ನಾವು ಗುರುತಿಸಿದ ಪ್ರತಿಯೊಂದು ಮಾಹಿತಿಯು ಇಲ್ಲಿ ಫೀಲ್ಡ್ ಆಗುತ್ತದೆ ಮತ್ತು ಟೇಬಲ್ ನಲ್ಲಿ ಕಾಲಂ ಆಗಿ ಇದನ್ನು ಡಿಸ್ಪ್ಲೇ ಮಾಡಲಾಗುತ್ತದೆ. |
01:23 | ಸ್ಕ್ರೀನ್ ನಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ, ಬುಕ್ಸ್ ಟೇಬಲ್ ಐದು ಕಾಲಂಗಳನ್ನು ಹೊಂದಿದ್ದು ಇವುಗಳನ್ನು ಫೀಲ್ಡ್ ಗಳು ಎಂದು ಸಹ ಕರೆಯಲಾಗುತ್ತದೆ. |
01:31 | ಹೀಗೆ, ಇಲ್ಲಿನ ಪ್ರತಿ ಸಾಲು ಅಥವಾ ಕಾಲಂ, ತನ್ನ ಕಾಲಂನಲ್ಲಿ ನಿಖರವಾಗಿ ಒಂದು ಪುಸ್ತಕದ ಕುರಿತು ಮಾತ್ರ ಮಾಹಿತಿಯನ್ನು ಹೊಂದಿರುತ್ತದೆ. |
01:40 | ಇದೇ ರೀತಿ, ಆಥರ್ಸ್ ಟೇಬಲ್ ನ ಪ್ರತಿ ರೆಕಾರ್ಡ್, ಒಬ್ಬ ಲೇಖಕರ ಕುರಿತು ಮಾತ್ರ ಮಾಹಿತಿಯನ್ನು ಹೊಂದಿರುತ್ತದೆ. |
01:49 | ಮತ್ತು ಪಬ್ಲಿಷರ್ಸ್ ಟೇಬಲ್ ನಲ್ಲಿನ ಪ್ರತಿ ರೆಕಾರ್ಡ್, ಒಬ್ಬ ಪ್ರಕಾಶಕರ ಕುರಿತು ಮಾತ್ರ ಮಾಹಿತಿಯನ್ನು ಹೊಂದಿರುತ್ತದೆ. |
01:58 | ಈಗ, ನಮ್ಮ ಅಗತ್ಯತೆಗಳಿಗೆ ತಕ್ಕುದಾಗಿ ಕಾಲಂಗಳನ್ನು ಇನ್ನಷ್ಟು ಪರಿಷ್ಕರಿಸಬಹುದು. |
02:04 | ಉದಾಹರಣೆಗೆ, ನಾವು Author name ಅನ್ನು First Name ಮತ್ತು Last Name ಆಗಿ ಪ್ರತ್ಯೇಕಿಸಬಹುದು. ಹೀಗೆ ಮಾಡಿದರೆ ಈ ಕಾಲಂಗಳ ಮೂಲಕವೇ ನಾವು ಹುಡುಕಬಹುದು ಅಥವಾ ವಿಂಗಡಿಸಬಹುದು. |
02:17 | ಅಲ್ಲದೆ, ಎಣಿಕೆಗಳ ಫಲಿತಾಂಶಗಳನ್ನು ಟೇಬಲ್ ಗಳಲ್ಲಿ ಪ್ರತ್ಯೇಕವಾಗಿ ಶೇಖರಿಸುವ ಅಗತ್ಯವಿರುವುದಿಲ್ಲ. |
02:24 | ಏಕೆಂದರೆ, ನಾವು ಫಲಿತಾಂಶವನ್ನು ನೋಡಲು ಇಚ್ಛಿಸಿದಾಗಲೆಲ್ಲ, ಬೇಸ್ ಎಣಿಕೆಗಳನ್ನು ಮಾಡಬಹುದು. |
02:31 | ಈಗ ನಮಗೆ ಟೇಬಲ್ ಗಳು ಮತ್ತು ಕಾಲಂಗಳ ಕುರಿತು ಸ್ಪಷ್ಟ ಚಿತ್ರಣ ದೊರಕಿರುವುದರಿಂದ, ಪ್ರೈಮರಿ ಕೀಗಳನ್ನು ನಾವು ಹೇಗೆ ನಿರೂಪಿಸಬಹುದು ಎಂಬುದನ್ನು ನೋಡೋಣ. |
02:41 | ಪ್ರೈಮರಿ ಕೀ ಅಂದರೇನು? |
02:44 | ಪ್ರತಿಯೊಂದು ಟೇಬಲ್, ಇದರಲ್ಲಿ ಶೇಖರಿಸಿರುವ ಪ್ರತಿ ಸಾಲನ್ನು ವಿಶಿಷ್ಟವಾಗಿ ಗುರುತಿಸುವ ಕಾಲಂ ಅಥವಾ ಕಾಲಂಗಳ ಸೆಟ್ ಅನ್ನು ಒಳಗೊಂಡಿರಬೇಕು. |
02:54 | ಈ ಕಾಲಂ ಅಥವಾ ಕಾಲಂಗಳ ಸೆಟ್ ಅನ್ನು ಟೇಬಲ್ ನ ಪ್ರೈಮರಿ ಕೀ ಎಂದು ಕರೆಯಲಾಗುತ್ತದೆ. |
03:00 | ಇದು ಕೆಲವೊಮ್ಮೆ ಬುಕ್ ಐಡಿ ಅಥವಾ ಆಥರ್ ಐಡಿ ತರ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುತ್ತದೆ. |
03:08 | ನಾವು `ಪ್ರೈಮರಿ ಕೀ’ ಫೀಲ್ಡ್ ಗಳನ್ನು, ಅನೇಕ ಟೇಬಲ್ ಗಳಿಂದ ಲಾಜಿಕಲ್ ಸಂಬಂಧಿತ ಡೇಟಾವನ್ನು ಬೇಗನೇ ಒಡಗೂಡಲು ಮತ್ತು ನಮಗಾಗಿ ಡೇಟಾವನ್ನು ಒಟ್ಟಿಗೆ ತರಲು ಬಳಸಬಹುದು. |
03:21 | ಹಾಗೂ, ನಾವು ಪ್ರೈಮರಿ ಕೀಯಲ್ಲಿ ಡುಪ್ಲಿಕೇಟ್ ಮೌಲ್ಯಗಳನ್ನು ಹೊಂದಿರುವಂತಿಲ್ಲ. |
03:26 | ಉದಾಹರಣೆಗೆ, ನಾವು ಜನರ ಹೆಸರುಗಳನ್ನು ಪ್ರೈಮರಿ ಕೀ ಆಗಿ ಬಳಸುವಂತಿಲ್ಲ, ಏಕೆಂದರೆ ಹೆಸರುಗಳು ವಿಶಿಷ್ಟ ಅಲ್ಲ. |
03:34 | ಒಂದೇ ಟೇಬಲ್ ನಲ್ಲಿ ಒಂದೇ ಹೆಸರಿನ ಇಬ್ಬರು ಇರಬಹುದು. |
03:40 | ನಂತರ, ಪ್ರೈಮರಿ ಕೀಯು ಯಾವಾಗಲೂ ಮೌಲ್ಯವನ್ನು ಹೊಂದಿರಬೇಕು. |
03:45 | ಒಂದುವೇಳೆ ಇದು ಖಾಲಿ ಅಥವಾ ನಲ್ ಆಗಿದ್ದರೆ, ನಾವು ಇದನ್ನು `ಪ್ರೈಮರಿ ಕೀ’ ಎಂಬುದಾಗಿ ಪರಿಗಣಿಸಲಾಗದು. |
03:52 | ಮತ್ತು ಪ್ರೈಮರಿ ಕೀ ಕಾಲಂ ಯಾವಾಗಲೂ ಮೌಲ್ಯವನ್ನು ಹೊಂದಲು ನಾವು ಫೋರ್ಸ್ ಮಾಡಬಹುದು. ಇದಕ್ಕಾಗಿ ಕಾಲಂನ ಡೇಟಾ ಟೈಪ್ ಅನ್ನು ‘AutoNumber’ ಆಗಿ ವ್ಯವಸ್ಥೆಗೊಳಿಸಬೇಕು. ಇದನ್ನು ಬೇಸ್ ಸ್ವಯಂಚಾಲಿತವಾಗಿ ರಚಿಸುತ್ತದೆ. |
04:09 | ಸ್ಕ್ರೀನ್ ನಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ, ನಮ್ಮ ಟೇಬಲ್ ಗಳಿಗೆ ಪ್ರೈಮರಿ ಕೀಗಳನ್ನು ಈ ಕೆಳಗಿನಂತೆ ವ್ಯವಸ್ಥೆಗೊಳಿಸಬಹುದು: |
04:20 | ಬುಕ್ಸ್ ಟೇಬಲ್ ಗೆ BookId, |
04:24 | ಆಥರ್ಸ್ ಟೇಬಲ್ ಗೆ AuthorId, |
04:28 | ಪಬ್ಲಿಷರ್ಸ್ ಟೇಬಲ್ ಗೆ PublishersId. |
04:33 | ಇದೇ ರೀತಿ, ಇಲ್ಲಿ ತೋರಿಸದಿದ್ದರೂ, ಮೆಂಬರ್ಸ್ ಟೇಬಲ್ ಗೆ MemberId ಯು ಪ್ರೈಮರಿ ಕೀ ಎನಿಸಲಿದೆ. |
04:42 | ಅಂತಿಮವಾಗಿ, ಟೇಬಲ್ ಗಳಲ್ಲಿ ಪ್ರೈಮರಿ ಕೀಗಳನ್ನು ವ್ಯವಸ್ಥೆಗೊಳಿಸಿ, ನಾವು ಎಂಟಿಟಿ ಇಂಟೆಗ್ರಿಟಿಯನ್ನು ಕಾರ್ಯಗತಗೊಳಿಸುತ್ತವೆ. |
04:52 | 'ಎಂಟಿಟಿ ಇಂಟೆಗ್ರಿಟಿ'ಯು, ಟೇಬಲ್ ನ ಒಳಗೆ ಯಾವುದೇ ಡುಪ್ಲಿಕೇಟ್ ರೆಕಾರ್ಡ್ ಗಳು ಇಲ್ಲ ಎಂಬುದನ್ನು ಖಚಿತಪಡಿಸುತ್ತದೆ. |
05:00 | ಅಲ್ಲದೆ, ಪ್ರತಿ ಟೇಬಲ್ ಒಳಗೆ ಫೀಲ್ಡ್ ಅನ್ನು ಗುರುತಿಸುವ ಫೀಲ್ಡ್ ವಿಶಿಷ್ಟವಾಗಿದೆ ಮತ್ತು ಯಾವ ಕಾರಣಕ್ಕೂ ನಲ್ ಆಗಿಲ್ಲ ಎಂಬುದನ್ನು ಇದು ಖಾತರಿಪಡಿಸುತ್ತದೆ. |
05:10 | ಈಗ ನಾವು ಮುರು ಟೇಬಲ್ ಗಳಲ್ಲಿ ಪ್ರೈಮರಿ ಕೀಗಳನ್ನು ಹೊಂದಿರುವುದರಿಂದ, ರಿಲೇಶನ್ ಶಿಪ್ ಗಳನ್ನು ವ್ಯವಸ್ಥೆಗೊಳಿಸುವ ಮೂಲಕ ನಾವು ಅವೆಲ್ಲವುಗಳನ್ನು ಒಟ್ಟಿಗೆ ತರಬಹುದು. |
05:20 | ಈ ಕಲ್ಪನೆಯನ್ನು ಬೇಸ್ ಬೆಂಬಲಿಸುವುದರಿಂದ, ಬೇಸ್ ಅನ್ನು ರಿಲೇಶನಲ್ ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಂ ಅಥವಾ ಸಂಕ್ಷಿಪ್ತವಾಗಿ ಆರ್.ಡಿ.ಬಿ.ಎಂ.ಎಸ್ ಎಂದು ಕರೆಯಲಾಗುತ್ತದೆ. |
05:32 | ಇಲ್ಲಿ ಕೆಲವು ಪ್ರಕಾರದ ರಿಲೇಶನ್ ಶಿಪ್ ಗಳಿವೆ. ಇವುಗಳನ್ನು ನಾವೀಗ ನೋಡೋಣ. |
05:37 | ಮೊದಲಿಗೆ ನಾವು ವನ್-ಟು-ಮೆನಿ ರಿಲೇಶನ್ ಶಿಪ್ ಎಂದರೆ ಏನು ಎಂಬುದನ್ನು ನೋಡೋಣ. |
05:43 | ಚಿತ್ರದಲ್ಲಿ ತೋರಿಸಿರುವಂತೆ, ಬುಕ್ಸ್ ಮತ್ತು ಆಥರ್ಸ್ ಟೇಬಲ್ ಗಳನ್ನು ನಾವೀಗ ಪರಿಗಣಿಸೋಣ. |
05:49 | ಪುಸ್ತಕವನ್ನು ನಿಖರವಾಗಿ ಒಬ್ಬ ಲೇಖಕರು ಬರೆದಿದ್ದಾರೆ. |
05:55 | ಆದರೆ ಒಂದೇ ಪುಸ್ತಕವನ್ನು ಇಬ್ಬರು ಅಥವಾ ಅನೇಕ ಲೇಖಕರು ಸೇರಿ ಬರೆದಿರುವ ಪ್ರಸಂಗಗಳು ಎದುರಾಗಬಹುದು. |
06:02 | ಆದರೆ ನಮ್ಮ ಉದಾಹರಣೆಯನ್ನು ನಾವು ಒಬ್ಬ ಲೇಖಕರು ಒಂದು ಪುಸ್ತಕವನ್ನು ಬರೆದಿರುವುದಕ್ಕೆ ಮಿತಿಗೊಳಿಸುತ್ತೇವೆ. |
06:10 | ನಮ್ಮ ಉದಾಹರಣೆಯನ್ನು ಮುಂದುವರಿಸೋಣ. ಒಬ್ಬ ಲೇಖಕ ಅನೇಕ ಪುಸ್ತಕಗಳನ್ನು ಬರೆಯಬಹುದು. |
06:17 | ಹೀಗಾಗಿ, ಆಥರ್ಸ್ ಟೇಬಲ್ ನಲ್ಲಿ ಪ್ರತಿನಿಧಿಸಿರುವ ಒಬ್ಬ ಲೇಖಕನಿಗೆ, ಅದೇ ಲೇಖಕನು ಬರೆದಿರುವ ಅನೇಕ ಪುಸ್ತಕಗಳನ್ನು ಬುಕ್ಸ್ ಟೇಬಲ್ ನಲ್ಲಿ ಪ್ರತಿನಿಧಿಸಬಹುದು. |
06:28 | ಹೀಗಾಗಿ ಇದು ವನ್-ಟು-ಮೆನಿ ರಿಲೇಶನ್ ಶಿಪ್ ಆಗಿದೆ. |
06:32 | ಹಾಗೂ ನಾವು ಇದನ್ನು ನಮ್ಮ `ಲೈಬ್ರರಿ ಡೇಟಾಬೇಸ್’ನಲ್ಲಿ ಪ್ರತಿನಿಧಿಸಬಹುದು. |
06:36 | ಇದಕ್ಕಾಗಿ, `ಪ್ರೈಮರಿ ಕೀ’ ಆಗಿರುವ Author Id ಯನ್ನು ಆಥರ್ಸ್ ಟೇಬಲ್ ನಿಂದ ತೆಗೆದು ಬುಕ್ಸ್ ಟೇಬಲ್ ಗೆ ಸೇರಿಸಬೇಕು. ಅಷ್ಟೇ. |
06:46 | ಹೀಗಾಗಿ, ಬುಕ್ಸ್ ಟೇಬಲ್ ನಲ್ಲಿರುವ Author Id ಯನ್ನು ಫಾರಿನ್ ಕೀ ಎಂದು ಕರೆಯಲಾಗುತ್ತದೆ. |
06:53 | ಇದೇ ರೀತಿ, ಪಬ್ಲಿಷರ್ಸ್ ಟೇಬಲ್ ನಲ್ಲಿರುವ ಪ್ರೈಮರಿ ಕೀ ಆಗಿರುವ Publisher Id ಯನ್ನು ಬುಕ್ಸ್ ಟೇಬಲ್ ಗೆ ಸೇರಿಸಿದಾಗ ಇದು ಅಲ್ಲಿ ಫಾರಿನ್ ಕೀ ಆಗುತ್ತದೆ. |
07:06 | ಹೀಗೆ, ಕಾಲಂ ಅಥವಾ ಕಾಲಂಗಳ ಸೆಟ್ ಅನ್ನು ಹಂಚಿಕೊಳ್ಳುವ ಮೂಲಕ ನಾವು ಡೇಟಾಬೇಸ್ ನಲ್ಲಿ ವನ್-ಟು-ಮೆನಿ ರಿಲೇಶನ್ ಶಿಪ್ ಗಳನ್ನು ಪ್ರತಿನಿಧಿಸಬಹುದು. |
07:17 | ಜೊತೆಗೆ ಫಾರಿನ್ ಕೀಗಳನ್ನು ಬಳಸಿ ಟೇಬಲ್ ರಿಲೇಶನ್ ಶಿಪ್ ಗಳನ್ನು ವ್ಯವಸ್ಥೆಗೊಳಿಸಬಹುದು. |
07:23 | ಈ ರೀತಿ, ರಿಲೇಶನ್ ಶಿಪ್ ಸಾಧಿಸುವುದಕ್ಕಾಗಿ, ಟೇಬಲ್ ನ `ಪ್ರೈಮರಿ ಕೀ’ಯನ್ನು ಎರಡನೇ ಟೇಬಲ್ ನ `ಫಾರಿನ್ ಕೀ’ಯಾಗಿ ಪ್ರತಿನಿಧಿಸಬಹುದು. |
07:34 | ಈ ಮೂಲಕ ನಾವು ರೆಫರಲ್ ಇಂಟೆಗ್ರಿಟಿಯನ್ನು ಕಾರ್ಯಗತಗೊಳಿಸಬಹುದು. |
07:39 | ಅಂದರೆ, ಟೇಬಲ್ ನಲ್ಲಿನ ಪ್ರತಿ ಫಾರಿನ್ ಕೀಯು, ಸಂಬಂಧಿತ ಟೇಬಲ್ ಗಳಲ್ಲಿ, ಸರಿಹೊಂದುವ ಪ್ರೈಮರಿ ಕೀಯ ಮೌಲ್ಯವನ್ನು ಹೊಂದಲಿದೆ. |
07:50 | ಈಗ, ಮೆನಿ-ಟು-ಮೆನಿ ರಿಲೇಶನ್ ಶಿಪ್ ಅಂದರೆ ಏನು ಎಂಬುದನ್ನು ನೋಡೋಣ. |
07:56 | ನಾವೀಗ ಟೇಬಲ್ ಡಿಸೈನ್ ಗೆ ವಾಪಸ್ ಹೋಗೋಣ. |
07:59 | ಒಂದು ಪುಸ್ತಕವನ್ನು ಎಷ್ಟೇ ಸಂಖ್ಯೆಯ ಲೈಬ್ರರಿ ಸದಸ್ಯರಿಗೆ ನೀಡಬಹುದು (ಅನೇಕ ಪ್ರತಿಗಳು ಲಭ್ಯವಿದ್ದಲ್ಲಿ). |
08:09 | ಇದೇ ರೀತಿ, ಸದಸ್ಯನೊಬ್ಬ ಎಷ್ಟೇ ಸಂಖ್ಯೆಯ ಪುಸ್ತಕಗಳನ್ನು ತೆಗೆದುಕೊಳ್ಳಬಹುದು (ಖಂಡಿತವಾಗಿಯೂ, ಪುಸ್ತಕಗಳ ಲಭ್ಯತೆಯನ್ನು ಪರಿಗಣಿಸಿ). |
08:17 | ಹೀಗೆ, ಅನೇಕ ಪುಸ್ತಕಗಳನ್ನು ಅನೇಕ ಸದಸ್ಯರಿಗೆ ನೀಡುವ ಉದಾಹರಣೆ ಇಲ್ಲಿದೆ. |
08:25 | ಇದು ಮೆನಿ-ಟು-ಮೆನಿ ರಿಲೇಶನ್ ಶಿಪ್ ಅನ್ನು ಪ್ರತಿನಿಧಿಸುತ್ತದೆ. |
08:29 | ಇದಕ್ಕಾಗಿ, ಜಂಕ್ಷನ್ ಟೇಬಲ್ ಎನ್ನುವ ಮೂರನೇ ಟೇಬಲ್ ಆದ ಬುಕ್ಸ್ ಇಶ್ಯುಡ್ ಟೇಬಲ್ ಅನ್ನು ರಚಿಸಿ, |
08:35 | ನಮ್ಮ ಡೇಟಾಬೇಸ್ ನಲ್ಲಿ ಮೆನಿ-ಟು-ಮೆನಿ ರಿಲೇಶನ್ ಶಿಪ್ ಅನ್ನು ನಾವು ಪ್ರತಿನಿಧಿಸಬಹುದು. |
08:45 | ಹಾಗೂ ಇಲ್ಲಿ, ಬುಕ್ಸ್ ಮತ್ತು ಮೆಂಬರ್ಸ್ – ಇವೆರಡೂ ಟೇಬಲ್ ಗಳಿಂದ ಪ್ರೈಮರಿ ಕೀಗಳನ್ನು ಬುಕ್ಸ್ ಇಶ್ಯುಡ್ ಟೇಬಲ್ ಗೆ ಸೇರಿಸಲಿದ್ದೇವೆ. |
08:57 | ಇದರ ಪರಿಣಾಮವಾಗಿ, ಸದಸ್ಯರೊಬ್ಬರಿಗೆ ನೀಡಿದ ಪ್ರತಿ ಪುಸ್ತಕವನ್ನು ಬುಕ್ಸ್ ಇಶ್ಯುಡ್ ಟೇಬಲ್ ದಾಖಲಿಸುತ್ತದೆ. |
09:05 | ಹೀಗೆ, ಮೂರನೇ ಜಂಕ್ಷನ್ ಟೇಬಲ್ ಅನ್ನು ರಚಿಸುವ ಮೂಲಕ ನಾವು ಮೆನಿ-ಟು-ಮೆನಿ ರಿಲೇಶನ್ ಶಿಪ್ ಗಳನ್ನು ಪ್ರತಿನಿಧಿಸಬಹುದು. |
09:13 | ಅಂತಿಮವಾಗಿ, ವನ್-ಟು-ವನ್ ರಿಲೇಶನ್ ಶಿಪ್ ನೋಡೋಣ. |
09:18 | ಕೆಲವೊಮ್ಮೆ, ಕೆಲ ಅಟ್ರಿಬ್ಯೂಟ್ ಗಳು ಅಥವಾ ಕಾಲಂಗಳು ನಿರ್ದಿಷ್ಟ ಡೇಟಾಕ್ಕೆ ಸೀಮಿತವಾಗಿರುತ್ತವೆ. ಹೀಗಾಗಿ ಇವು ಯಾವಾಗಲೂ ಡೇಟಾದಿಂದ ತುಂಬಿರುವುದಿಲ್ಲ. |
09:30 | ಒಬ್ಬ ಲೇಖಕ ಮಾತ್ರ ವೆಬ್ ಸೈಟ್ ವಿಳಾಸ ಹೊಂದಿದ್ದು, ಉಳಿದವರು ಈ ವಿಳಾಸ ಹೊಂದಿರದೆ ಇರುವ ಸಂದರ್ಭವನ್ನು ನಾವು ಪರಿಗಣಿಸೋಣ. |
09:38 | ಆಥರ್ಸ್ ಟೇಬಲ್ ನಲ್ಲಿ ಹೊಸ ವೆಬ್ ಸೈಟ್ ಕಾಲಂ ಅನ್ನು ನಾವು ಬಹುತೇಕ ಖಾಲಿ ಬಿಡುವುದರಿಂದ ನಾವು ಡಿಸ್ಕ್ ಸ್ಥಳವನ್ನು ಪೋಲು ಮಾಡುತ್ತೇವೆ. |
09:47 | ಹೀಗಾಗಿ, ಈ ಕಾಲಂ ಅನ್ನು, ಆಥರ್ ಐಡಿಯ ಪ್ರೈಮರಿ ಕೀಯನ್ನೇ ಹೊಂದಿರುವ ಹೊಸ ಸಪ್ಲಿಮೆಂಟಲ್ ಟೇಬಲ್ ಗೆ ನಾವು ಸರಿಸೋಣ. |
09:58 | ಸಪ್ಲಿಮೆಂಟಲ್ ಟೇಬಲ್ ನಲ್ಲಿರುವ ಪ್ರತಿ ರೆಕಾರ್ಡ್ ಸಹ, ವನ್-ಟು-ವನ್ ರಿಲೇಶನ್ ಶಿಪ್ ಅನ್ನು ಪ್ರತಿನಿಧಿಸುವ |
10:06 | ಮುಖ್ಯ ಟೇಬಲ್ ನಲ್ಲಿರುವ ರೆಕಾರ್ಡ್ ಗೆ ಕರಾರುವಕ್ಕಾಗಿ ಹೊಂದಿಕೆಯಾಗುತ್ತದೆ. |
10:10 | ಹೀಗೆ ನಾವು ನಮ್ಮ ಡೇಟಾಬೇಸ್ ನಲ್ಲಿ ರಿಲೇಶನ್ ಶಿಪ್ ಗಳನ್ನು ವ್ಯವಸ್ಥೆಗೊಳಿಸಲು ಕಲಿತೆವು. |
10:15 | ಈ ಮೂಲಕ ನಾವು ಲಿಬರ್ ಆಫಿಸ್ ಬೇಸ್ ನಲ್ಲಿ ಡೇಟಾಬೇಸ್ ಡಿಸೈನ್ ಕುರಿತ ಟ್ಯುಟೋರಿಯಲ್ ನ ಎರಡನೇ ಭಾಗದ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:23 | ಸಂಕ್ಷಿಪ್ತವಾಗಿ, ನಾವು ಡೇಟಾಬೇಸ್ ಕುರಿತ ಈ ಕೆಳಗಿನ ವಿಷಯಗಳನ್ನು ಕಲಿತೆವು: |
10:28 | ಮಾಹಿತಿಯನ್ನು ಕಾಲಂಗಳಾಗಿ ಪರಿವರ್ತಿಸುವುದು, |
10:32 | ಪ್ರೈಮರಿ ಕೀಗಳನ್ನು ನಿರೂಪಿಸುವುದು, |
10:34 | ಮತ್ತು ಟೇಬಲ್ ರಿಲೇಶನ್ ಶಿಪ್ ಗಳನ್ನು ವ್ಯವಸ್ಥೆಗೊಳಿಸುವುದು. |
10:38 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
10:48 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. |
10:54 | ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
10:58 | ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |