PHP-and-MySQL/C2/Common-Errors-Part-2/Kannada

From Script | Spoken-Tutorial
Revision as of 15:34, 13 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಎರರ್ ಗಳನ್ನು ಕಂಡು ಹಿಡಿದು ಅವುಗಳನ್ನು ಸರಿಪಡಿಸುವುದು ಹೇಗೆ ಎಂದು ತೋರಿಸುವ ಎರರ್ ಟ್ಯುಟೋರಿಯಲ್ ನ ಎರಡನೇ ಭಾಗಕ್ಕೆ ಸ್ವಾಗತ.
00:08 ನಾನು ಇದನ್ನು "extrachar ಡಾಟ್ php" ಎಂದು ಕರೆಯುತ್ತೇನೆ. ಈಗ ಇದನ್ನು ರನ್ ಮಾಡೋಣ, ಹಿಂದಿರುಗಿ, "extrachar" ಅನ್ನು ಕ್ಲಿಕ್ ಮಾಡೋಣ, ನಾವು "Parse error in..." ಎಂಬ ಎರರ್ ಆರನೇ ಸಾಲಿನಲ್ಲಿ ಇದೆ ಎಂಬ ಸಂದೇಶವನ್ನು ನೋಡುತ್ತೇವೆ.
00:23 ಇಲ್ಲಿ ಏನನ್ನು ನಿರೀಕ್ಷಿಸುತ್ತೇವೆ, ಏನನ್ನು ನಿರೀಕ್ಷಿಸುತ್ತಿಲ್ಲ ಅಥವ ಈ ರೀತಿಯ ಯಾವುದೇ ಮಾಹಿತಿಯನ್ನು ನಮಗೆ ಕೊಡಲಾಗಿಲ್ಲ.
00:32 ಈಗ ನಾವು ಆರನೇ ಸಾಲಿಗೆ ಹೋಗೋಣ, ಮೊದಲ ನೋಟಕ್ಕೆ ಇಲ್ಲಿ ಎಲ್ಲವೂ ಸರಿಯಾಗಿಯೇ ಕಾಣುತ್ತಿದೆ.
00:37 ಆದರೆ ನಾವು ಇಲ್ಲಿ ಒಂದು ಹೆಚ್ಚುವರಿ ಬ್ರ್ಯಾಕೆಟ್ ಅನ್ನು ಹೊಂದಿದ್ದೇವೆ, ಈಗ ಅದನ್ನು ಅಳಿಸಿದರೆ ಇದು ಕಾರ್ಯನಿರ್ವಹಿಸುವುದನ್ನು ನೀವು ನೋಡಬಹುದು.
00:44 ಇದನ್ನು ಹುಡುಕುವುದು ಸ್ವಲ್ಪ ಸುಲಭವಾಗಿದೆ.
00:47 ಆದರೆ ನೀವು ಗಣಿತದ ಲೆಕ್ಕಗಳನ್ನು ಮಾಡುವಾಗ, ಉದಾಹರಣೆಗೆ ಸಂಕಲನ, ಹೋಲಿಕೆ ಮುಂತಾವುಗಳನ್ನು ಮಾಡುವಾಗ, ನೀವು ಈ ರೀತಿಯ ಕ್ಲಿಷ್ಟಕರವಾದ ಗಣಿತದ ಲೆಕ್ಕಗಳನ್ನು ಮಾಡುವಾಗ ನೀವು ನಿಮ್ಮ ಬ್ರ್ಯಾಕೆಟ್ ಗಳ ಜಾಡು ಹಿಡಿಯುವುದು ಕಷ್ಟವಾಗಬಹುದು.
01:09 ಕೆಲವೊಮ್ಮೆ ಇದನ್ನು ಪರಿಹರಿಸುವುದು ತುಂಬ ಸುಲಭವಾಗಿರುತ್ತದೆ. ನಾವು ಇದನ್ನು ರನ್ ಮಾಡಿದಾಗ, ಇಲ್ಲಿ ಏನೂ ಬರುವುದಿಲ್ಲ ಏಕೆಂದರೆ ಇವೆರಡೂ ಒಂದಕ್ಕೊಂದು ಸಮವಾಗಿಲ್ಲ.
01:18 ಇದು ಯಾವುದೇ ಎರರ್ ಅನ್ನು ಕೊಡುವುದಿಲ್ಲ.
01:20 ಆದರೆ ನಾನು ಇಲ್ಲಿ ಒಂದು ಹೆಚ್ಚು ಬ್ರ್ಯಾಕೆಟ್ ಅನ್ನು ಹಾಕಿದರೆ, "Parse error" ಬರುವುದು.
01:28 ನೀವು ಸಂಕೀರ್ಣವಾದ if ಸ್ಟೇಟ್ಮೆಂಟ್ ಗಳು ಅಥವಾ ಗಣಿತದ ಕ್ರಿಯೆಗಳನ್ನು ಪರಿಹರಿಸುವಾಗ ಬ್ರ್ಯಾಕೆಟ್ ಗಳು ಹೊಂದಿಕೆಯಾಗುತ್ತವೆಯೇ ಎಂದು ಪರೀಕ್ಷಿಸಿ.
01:36 ನೀವು ಎಲ್ಲ ಬ್ರ್ಯಾಕೆಟ್ ಗಳನ್ನು ಮತ್ತು ಇನ್ಯಾವುದಾದರೂ ಹೆಚ್ಚಿನ ಅಕ್ಷರಗಳು ಸೇರಿಕೊಂಡಿವೆಯೇ ಎಂದು ಸರಿಯಾಗಿ ಪರೀಕ್ಷಿಸಿ.
01:48 ಉದಾಹರಣೆಗೆ ಇದರ ಮುಂದೆ ಒಂದು "a" ಯನ್ನು ಹಾಕಿದರೆ,
01:52 ನೀವು ಹಿಂದಿರುಗಿ ನೋಡಿದರೆ ಒಂದು "Parse error" ಎರರ್ ಅನ್ನು ಪಡೆಯುವಿರಿ.
01:56 ಈಗ ಇದನ್ನು ಪರಿಹರಿಸೋಣ. Refresh ಮಾಡಿ, ಇನ್ನೂ "Parse error" ಬರುತ್ತಿದೆ.
02:00 ಹಾಗಾಗಿ ನೀವು ಏನನ್ನೋ ಟೈಪ್ ಮಾಡಿರಬಹುದು. ಈಗ ಅದನ್ನು ತೆಗೆದುಹಾಕೋಣ.
02:04 ಈಗ ನಾನು ನಿಮಗೆ "missing page" ಅನ್ನು ತೋರಿಸುವೆನು.
02:08 ಈಗ ಇದರ ಎರರ್ ಗಳನ್ನು ತೋರಿಸುವೆನು. "missing.php" ಯನ್ನು ಕ್ಲಿಕ್ ಮಾಡಿ. ನಾವು ಒಂಬತ್ತನೇ ಸಾಲಿನಲ್ಲಿ Parse error ಗಳಿರುವುದನ್ನು ನೋಡಬಹುದು.
02:17 ಕೆಳಕ್ಕೆ ಹೋಗಿ ಒಂಬತ್ತನೇ ಸಾಲು ಎಲ್ಲಿದೆ ಎಂದು ನೋಡೋಣ. ಸೆಮಿಕೋಲನ್.
02:23 ಕ್ಷಮಿಸಿ ನಾನು ಇದನ್ನು ಉದ್ದೇಶಿತವಾಗಿ ಮಾಡಿಲ್ಲ. ಇದನ್ನು ಇನ್ನೊಮ್ಮೆ refresh ಮಾಡೋಣ.
02:28 ಸರಿ. ನಾವು 18 ನೆಯ ಸಾಲಿನಲ್ಲಿ "Parse error" ಅನ್ನು ಹೊಂದಿದ್ದೇವೆ.
02:33 ಈಗ 18 ನೆಯ ಸಾಲಿಗೆ ಹೋಗೋಣ.
02:37 ಸರಿ 18 ನೆಯ ಸಾಲು ಇಲ್ಲಿದೆ ಅದನ್ನು ನಾನು ಇಲ್ಲಿ ತೋರಿಸುತ್ತಿದ್ದೇನೆ.
02:47 18 ನೆಯ ಸಾಲಿನಲ್ಲಿ ಏನು ತಪ್ಪಿದೆ?
02:49 18 ಸಾಲಿನಲ್ಲಿ ಖಂಡಿತವಾಗಿಯೂ ಏನೂ ಇಲ್ಲವೇ ಇಲ್ಲ. ಹಾಗಾದರೆ ಎರರ್ ಇರಲು ಹೇಗೆ ಸಾಧ್ಯ?
02:54 ಇದಕ್ಕೆ ಕಾರಣ ನಾನು ಮೊದಲೇ ಹೇಳಿದಂತೆ ಇದರ ಸುತ್ತ ಮುತ್ತ ಪರೀಕ್ಷಿಸಬೇಕು.
03:00 ಹಾಗಾಗಿ ನಾವು ಕೆಲವು ಸಾಲು ಮೇಲೆ ನೋಡಬೇಕು. ಅಂದರೆ 4 ಅಥವಾ 5 ಸಾಲುಗಳಷ್ಟು ಮೇಲೆ ನೋಡಬೇಕು.
03:06 ಇಲ್ಲಿ ನಾವು "if" ಸ್ಟೇಟ್ಮೆಂಟ್ ಅನ್ನು ಹೊಂದಿದ್ದೇವೆ. ಇದರಲ್ಲಿ- "if $postedusername equals (==) 'Alex'", echo "You own PHP Academy" else echo "Hello $name" ಎಂದಿದೆ.
03:17 ಇಲ್ಲಿ ನಾವು ಈ "if" ಸ್ಟೇಟ್ಮೆಂಟ್ ಗೆ ಪ್ರಾರಂಭಿಕ ಕರ್ಲಿ ಬ್ರ್ಯಾಕೆಟ್ ಅನ್ನೂ ಮತ್ತು ಕೊನೆಯ ಕರ್ಲಿ ಬ್ರ್ಯಾಕೆಟ್ ಅನ್ನು ಹೊಂದಿದ್ದೇವೆ ಎಂದು ಹೇಳಬಹುದು.
03:24 ಹಾಗಾದರೆ ಇದು ಯಾಕೆ ಕಾರ್ಯ ನಿರ್ವಹಿಸುತ್ತಿಲ್ಲ? ಏಕೆಂದರೆ ನಾವು ಇಲ್ಲಿ ಮೇಲೆ ಈಗಾಗಲೇ "if" ಸ್ಟೇಟ್ಮೆಂಟ್ ಅನ್ನು ಪ್ರಾರಂಭಿಸಿದ್ದೇವೆ.
03:30 ಇದುವೇ indentation ನ ಪ್ರಾಮುಖ್ಯತೆ ಮತ್ತು ಉದ್ದೇಶವಾಗಿದೆ.
03:36 ನನಗೆ ಇದನ್ನು ನನ್ನ ಅನುಭವದಿಂದ ನೋಡಿದಾಗ, ಈ ಬ್ರ್ಯಾಕೆಟ್ ಇಲ್ಲಿ ಇಂಡೆಂಟ್ ಆಗಿದೆ ಎಂದು ತಿಳಿದಿದ್ದೇನೆ, ಈ ಬ್ರ್ಯಾಕೆಟ್ ಇಲ್ಲಿ ಇದೇ ಸಾಲಿನಲ್ಲಿ ಇಂಡೆಂಟ್ ಆಗಬೇಕಾಗಿತ್ತು ಎಂದು ತಿಳಿದಿದ್ದೇನೆ.
03:45 ಹಾಗಾಗಿ ಇದು ತಪ್ಪಿ ಹೋಗಿದೆ. ಇದು ಅಲ್ಲಿ ಇದ್ದಿದ್ದರೆ ಮತ್ತು ಅದು ಇಲ್ಲಿ ಇಂಡೆಂಟ್ ಆಗಿದ್ದರೆ, ಆಗ ಮೇಲಿನ "if" ಸ್ಟೇಟ್ಮೆಂಟ್ ನದ್ದಾಗಿದೆ ಎಂದು ತಿಳಿಯುತ್ತಿತ್ತು. ಇದರ ಬ್ಲಾಕ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುತ್ತದೆ.
03:59 ಆದರೆ ಇಲ್ಲಿ ಬ್ಲಾಕ್ ಪ್ರಾರಂಭಬಾಗುತ್ತದೆ ಆದರೆ ಕೊನೆಗೊಳ್ಳುವ ಬ್ರ್ಯಾಕೆಟ್ ಇಲ್ಲ.
04:03 ನಾನು ಅದನ್ನು ಇಲ್ಲಿ ಹಾಕಿ ರನ್ ಮಾಡುವೆನು. ಈಗ ಇದು ಕಾರ್ಯನಿರ್ವಹಿಸುತ್ತದೆ.
04:08 ಹಾಗಾಗಿ ನಿಮ್ಮ ಕೋಡ್ ನಲ್ಲಿ ಅಕ್ಷರಗಳು ತಪ್ಪಿ ಹೋದರೆ ನೀವು ಅಸಂಬದ್ಧವಾದ ಜಾಗದಲ್ಲಿ ಎರರ್ ಗಳನ್ನು ಪಡೆಯುವಿರಿ.
04:14 ಆದರೆ ಇದು ಎರರ್ ಗೆ ವಿಲಕ್ಷಣವಾದ ಜಾಗವಲ್ಲ, ಏಕೆಂದರೆ ಇಲ್ಲಿ "else", ಬ್ಲಾಕ್ ನ ಆರಂಭ ಮತ್ತು ಇಲ್ಲಿ ಬ್ಲಾಕ್ ಕೊನೆಯಾಗುತ್ತದೆ.
04:20 ನಾವು ಇಲ್ಲಿ ಈ ಬ್ಲಾಕ್ ನ ಕೊನೆಯನ್ನು ನಿರೀಕ್ಷಿಸುತ್ತಿದ್ದೇವೆ ಏಕೆಂದರೆ ಈ ಬ್ಲಾಕ್ ಇಲ್ಲಿ ಬ್ರ್ಯಾಕೆಟ್ ನೊಂದಿಗೆ ಕೊನೆಯಾಗಿಲ್ಲ.
04:28 ಇಲ್ಲಿ ಯಾವುದೇ ತಪ್ಪಿಲ್ಲದಿದ್ದರೂ, ನಾವು ಇಲ್ಲಿ ಎರರ್ ಅನ್ನು ಪಡೆಯುತ್ತೇವೆ ಏಕೆಂದರೆ ಇಲ್ಲಿಯೇ ನಾವು ನಮ್ಮ ಬ್ಲಾಕ್ ಅನ್ನು ಕೊನೆಗೊಳಿಸಬೇಕು.
04:35 ಈಗ ಇದು ಕಾರ್ಯನಿರ್ವಹಿಸುತ್ತಿದೆ ಅಲ್ಲವೇ?
04:38 ಹಾಗಾಗಿ ಒಂದೆರಡು ಸಾಲುಗಳನ್ನು ಮೇಲೆ ಮತ್ತು ಕೆಳಗೆ ನೋಡಿ. ಇಲ್ಲಿ ನೀವು ಕೊನೆ ಇಲ್ಲದಿರುವ else ಅನ್ನೋ, ಅಥವಾ ಯಾವುದಾದರೂ ಅಕ್ಷರತಪ್ಪಿಹೋಗಿದೆಯೋ ಅಥವಾ ಇನ್ಯಾವುದಾದರೂ ಅವಶ್ಯವಿರುವ ಅಂಶಗಳು ತಪ್ಪಿಹೋಗಿದೆಯೋ ಎಂದು ನೋಡಿ.
04:49 ಈಗ "getpost dot php" ಪೇಜ್ ಗೆ ಹೋಗೋಣ.
04:53 ಇದನ್ನು ವಿವರಿಸಲು ನಾನು error_reporting(E_ All) ಅನ್ನು ಬಳಸಿದ್ದೇನೆ.
04:58 ಇದು ಕೇವಲ ವಿವರಣೆ ಮಾಡಲು. ಈ ರೀತಿಯ ಎರರ್ ಗಳು ರಿಪೋರ್ಟ್ ಆಗುತ್ತವೆ.
05:03 ಇದರ ಅರ್ಥ "all errors" (ಎಲ್ಲ ಎರರ್ ಗಳು) ಎಂದಲ್ಲ. ಇದು ರಿಪೋರ್ಟ್ ಮಾಡಬಹುದಾದ ಎಲ್ಲಾ ಎರರ್ ಗಳ ಸಮಗ್ರ ಪಟ್ಟಿಯಲ್ಲ.
05:10 ಇದು ಕೇವಲ ಈ ಫಂಕ್ಷನ್ ಗೆ ಪ್ಯಾರಾಮೀಟರ್ ಆಗಿದೆ.
05:12 ಇದು ಸಾಮಾನ್ಯವಾಗಿ ಕಾಣಿಸದ ಎರರ್ ಗಳನ್ನು ನೋಡಲು ನಮ್ಮನ್ನು ಬಿಡುತ್ತದೆ. ನೀವು ವೆಬ್ಸೈಟ್ ಅನ್ನು ಪ್ರಾರಂಭಿಸುವುದಾದರೆ ಇದನ್ನು ಬಳಸಬಾರದು. ಆದರೆ ಇದು ಟ್ಯುಟೋರಿಯಲ್ ಆಗಿರುವುದರಿಂದ ನೀವು ನೋಡಬೇಕು.
05:25 ಇದು "get post" ಎರರ್ ಆಗಿದೆ.
05:28 ಈಗ ಇಲ್ಲಿಗೆ ಹೋಗೋಣ. ನಾವು "data" ಎಂಬ ವೇರಿಯೇಬಲ್ ಅನ್ನು ಹೊಂದಿದ್ದೇವೆ.
05:33 ಇದು "name" ಎನ್ನುವ GET ವೇರಿಯೇಬಲ್ ಆಗಿದೆ.
05:38 ನಮ್ಮ ಕೋಡ್ : ಈ data ವೇರಿಯೇಬಲ್ ಅಸ್ತಿತ್ವದಲ್ಲಿದ್ದರೆ ಆಗ, echo $data ಎಂದು ಹೇಳುತ್ತದೆ. ಇದು ತುಂಬ ಸಹಜ ಪ್ರೋಗ್ರಾಂ ನಂತೆ ಕಾಣಿಸುತ್ತದೆ.
05:47 ಇಲ್ಲಿ ನಿಜವಾಗಿಯೂ ಎರರ್ ಇಲ್ಲ.
05:49 ಇಲ್ಲಿ ನಾವು ವೇರಿಯೇಬಲ್ ಅನ್ನು ತೆಗೆದುಕೊಂಡಿದ್ದೇವೆ ಮತ್ತು ಎಲ್ಲವೂ ಕಾರ್ಯನಿರ್ವಹಿಸುತ್ತಿದೆ, ಇಲ್ಲಿ ಯಾವುದೆ 'ಲೈನ್ ಬ್ರೇಕ್ ಎರರ್' ಇಲ್ಲ ಮತ್ತು 'ಲೈನ್ ಟರ್ಮಿನೇಟಿಂಗ್ ಎರರ್' ಕೂಡ ಇಲ್ಲ.
06:07 ನಾವು ಏನನ್ನೂ ಬಿಟ್ಟಿಲ್ಲ ಮತ್ತು ನಾವು ಇಲ್ಲಿ ಇನ್ನೇನನ್ನೂ ಇಡಬೇಕಿಲ್ಲ.
06:15 ಆದರೂ ಈ ಪೇಜ್ ಅನ್ನು ರನ್ ಮಾಡಿದಾಗ ನಾವು ಒಂದು ಸೂಚನೆ ಕಾಣುತ್ತದೆ.
06:18 ಇದು ನಾವು ಮೊದಲು ನೋಡಿದ "Parse error" ಅಲ್ಲ. ಇದು ಒಂದು Notice ಆಗಿದೆ.
06:27 ಈ ಎರರ್ ಇದ್ದಾಗ ಈ ಪೇಜ್ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.
06:33 ಈಗ ನಾನು ನಿಮಗೆ ತೋರಿಸುವೆನು -ಇಲ್ಲಿ "name equals alex" ಎಂದು ಟೈಪ್ ಮಾಡುವೆನು ಮತ್ತು ಈ ಎರರ್ ಕಾಣೆಯಾಗುವುದು.
06:41 ಇದು ನಮ್ಮ ಕೋಡ್ ನಲ್ಲಿ ಏನೂ ತಪ್ಪಿಲ್ಲ ಎಂದು ತೋರಿಸುತ್ತದೆ. ಆದರೆ ತೊಂದರೆ ಇದ್ದದ್ದು ಮೊದಲನೆ ಸ್ಥಾನದಲ್ಲಿ, ಅಂದರೆ ಈ data ಎನ್ನುವ ವೇರಿಯೇಬಲ್ ಕಂಡಿಷನ್ ಅನ್ನು ಪೂರೈಸುತ್ತಿಲ್ಲ.
06:51 ಇದು "data equals absolutely nothing" ಎಂಬುದಕ್ಕೆ ಸಮನಾಗಿದೆ.
06:58 ಇಲ್ಲಿ ನಾನು echo ವೇರಿಯೇಬಲ್ alex ಎಂದು ಟೈಪ್ ಮಾಡುವೆನು ಮತ್ತು ಇದು 5 ನೆಯ ಸಾಲಿನಲ್ಲಿದೆ.
07:05 ಈಗ refresh ಮಾಡೋಣ. "Undefined variable alex, Undefined index name" ಎಂದು ಬರುತ್ತದೆ.
07:11 ಈಗ ನಾನು ಏನು ಮಾಡವುನೆಂದರೆ, ಮೊದಲಿನಿಂದಲೇ ಪ್ರಾರಂಭಿಸೋಣ.
07:19 header ನಲ್ಲಿ ನೇಮ್ ಅನ್ನು ಸೂಚಿಸದೇ ಇದ್ದರೆ, ಇದು ಪೂರ್ಣಗೊಳ್ಳುವುದಿಲ್ಲ.
07:23 ಹಾಗಾಗಿ ಡಾಟಾ "ನಲ್" ಆಗಿರುವುದು. ಮತ್ತು ನಾವು ಡಿಫೈನ್ ಆಗದೇ ಇರುವ ವೇರಿಯೇಬಲ್ ಅನ್ನು ಎಕೋ ಮಾಡಿದಾಗ "Undefined variable" ಎಂಬ ಎರರ್ ನಂತೆ, "Undefined index" ಎಂಬ ಎರರ್ ಅನ್ನು ಪಡೆಯುವೆವು.
07:35 ಹಾಗಾಗಿ ನಾವು ಇಲ್ಲಿ ಡಾಟಾವನ್ನು ಕೊಡುತ್ತಿದ್ದಂತೆಯೇ ಎರರ್ ಮಾಯವಾಗುವುದು.
07:39 refresh ಮಾಡೋಣ.
07:41 ನೀವು ಈ ಪ್ರಾರಂಭಿಕ ಎರರ್ ನಿಂದ ತಪ್ಪಿಸಿಕೊಳ್ಳಲು ಬಯಸುವುದಾದರೆ, ನೀವು ಮಧ್ಯದಲ್ಲಿ ಅಥವ ಈ ಸಾಲಿನ ಪ್ರಾರಂಭದಲ್ಲಿ ಒಂದು "@ (at)" ಚಿಹ್ನೆಯನ್ನು ಹಾಕಬೇಕು.
07:50 ನಾವು refresh ಮಾಡಿದಾಗ, ನಾವು ಏನನ್ನು ಪಡೆಯುವುದಿಲ್ಲ ಏಕೆಂದರೆ, ಯಾವುದೇ ಎರರ್ ಇಲ್ಲ.
07:55 get ವೇರಿಯೇಬಲ್ ಸೆಟ್ ಆಗಿಲ್ಲ. ನಾವು "name equals alex" ಎಂದು ಟೈಪ್ ಮಾಡಿದ ತಕ್ಷಣ ಕೋಡ್ ನಲ್ಲಿ ಸೂಚಿಸಿದಂತೆ name ಎಕೋ ಆಗುವುದು.
08:04 ನೀವು if data ಅಸ್ತಿತ್ವದಲ್ಲಿದೆಯೇ ಎಂದು ಪರೀಕ್ಷಿಸಿದರೂ, ಇಲ್ಲಿ ಏನನ್ನೂ ಟೈಪ್ ಮಾಡದಿದ್ದರೆ ಇದು ತಾಂತ್ರಿಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಹಾಗಾಗಿ ಅವುಗಳನ್ನು ನೋಡುತ್ತದೆ.
08:14 ಈಗ ಇಲ್ಲಿಗೆ ಮುಗಿಸೋಣ. ಮುಂದಿನ ಭಾಗದಲ್ಲಿ ಮುಂದಿನ ಎರಡು ಸಾಮಾನ್ಯ ಎರರ್ ಗಳ ಕುರಿತು ನೋಡೋಣ, ಮತ್ತೆ ಸಿಗೋಣ.
08:20 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14