PHP-and-MySQL/C2/Common-Errors-Part-1/Kannada
From Script | Spoken-Tutorial
Revision as of 15:17, 13 April 2020 by Sandhya.np14 (Talk | contribs)
Time | Narration |
00:00 | ನಮಸ್ಕಾರ, ಸ್ವಾಗತ. ಇದು ಒಂದು ವಿವರಣಾತ್ಮಕ ವಿಡೀಯೋವಾಗಿದೆ. |
00:07 | ನೀವು ಪಿ.ಎಚ್.ಪಿ.ಯಲ್ಲಿ ಪ್ರೋಗ್ರಾಂ ಮಾಡುವಾಗ ಎದುರಾಗಬಹುದಾದ ಸಾಮಾನ್ಯ ಎರರ್ ಗಳ ಕುರಿತು ಇಲ್ಲಿ ನೋಡುವೆವು. |
00:13 | ಅವುಗಳಲ್ಲಿ ಹಲವು ಸ್ವಯಂ ವಿವರಣಾತ್ಮಕವಾಗಿವೆ. |
00:17 | ನಿಮಗೆ ಎದುರಾಗುವ ಎರರ್ ಗಳಲ್ಲಿ ಶೇಕಡಾ ಐವತ್ತರಷ್ಟು ಟೈಪ್ ಮಾಡುವಾಗ ಅಕಸ್ಮಾತ್ ಆಗಿ ನೀವು ನೋಡದೆ ಆದ ತಪ್ಪುಗಳು ಅಥವಾ ನೀವು ಏನನ್ನಾದರೂ ಬಿಟ್ಟು ಬಿಡುವುದರಿಂದಾಗುವ ತಪ್ಪುಗಳಾಗಿರುತ್ತವೆ. |
00:32 | ಸೆಮಿಕೋಲನ್ಅನ್ನು ಬಿಟ್ಟು ಬಿಡುವುದು, ಅಥವಾ ಹೆಚ್ಚಿನ ಬ್ರ್ಯಾಕೆಟ್ ಅನ್ನು ಹಾಕುವುದು ಅಥವ ಇದೇ ತರಹದ ಸಣ್ಣಪುಟ್ಟ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. |
00:41 | ನಾನು ಇಲ್ಲಿ ಕೆಲವು ಪುಟಗಳನ್ನು ತಯಾರಿಸಿದ್ದೇನೆ, ಇವುಗಳು ಸಾಮಾನ್ಯವಾಗಿ ನಿಮಗೆ ಎದುರಾಗುವ ಎರರ್ ಗಳಾಗಿವೆ. |
00:47 | ಇನ್ನೂ ಬಹಳಷ್ಟು ಎರರ್ ಗಳಿವೆ. ಈ ಪಟ್ಟಿಯು ಸಮಗ್ರವಲ್ಲ. ಇದು ಕೆಲವು ಪ್ರಾಥಮಿಕ ಎರರ್ ಗಳನ್ನು ಒಳಗೊಂಡಿದೆ. |
00:51 | ಈಗ ಈ ಎರರ್ ಗಳನ್ನು ಒಂದೊಂದಾಗಿ ತೋರಿಸಲು ನಾನು "ಕಂಟೆಕ್ಸ್ಟ್ ಎಡಿಟರ್" ಅನ್ನು ಸಿದ್ಧಪಡಿಸಿದ್ದೇನೆ. |
01:00 | ಮೊದಲನೆಯದಾಗಿ ನಾನು "html" ಫೈಲ್ ಅನ್ನು ಬಳಸಿ ವಿವರಣೆ ಮಾಡಲು ಹೊರಟಿದ್ದೇನೆ. |
01:06 | ನಾನು ಇಲ್ಲಿ ನನ್ನ echo ಕಮಾಂಡ್ ನಲ್ಲಿ ಬಹಳಷ್ಟು html ಕೋಡ್ ಗಳನ್ನು ಎಂಬೆಡ್ ಮಾಡಿಕೊಂಡಿದ್ದೇನೆ. |
01:10 | ನಾನು ಈ ಪೇಜ್ ಅನ್ನು ರನ್ ಮಾಡಿದರೆ, ಇಲ್ಲಿ ನಮಗೆ ಎರರ್ ಕಾಣಿಸುತ್ತದೆ. |
01:17 | ಇದು Parse error ಆಗಿದ್ದು, ನಾವು ಇಲ್ಲಿ ಈ ಸಂದೇಶವನ್ನು ಪಡೆದಿದ್ದೇವೆ. |
01:21 | ನೀವು ಇದನ್ನು ಸರಿಯಾಗಿ ನೋಡಬೇಕು. - "expecting either a comma or a semicolon" ಎಂದಿದೆ. |
01:27 | ಇದು ನಮಗೆ ಸಾಲಿನ ಸಂಖ್ಯೆಯನ್ನು ಕೊಡುತ್ತದೆ. Parse error ಗಳು ಇದ್ದಾಗ, ಇದು ಯಾವಾಗಲೂ ಸಾಲಿನ ಸಂಖ್ಯೆಯನ್ನು ಕೊಡುತ್ತದೆ. |
01:34 | ಇದು line 5 ಎಂದು ತೋರಿಸುತ್ತದೆ. |
01:36 | ನಾವು ಈಗ ಕೆಳಗೆ ಐದನೇ ಸಾಲಿಗೆ ಬಂದರೆ, ನಾವು 5 ನೇ ಸಾಲು, 19 ಕಾಲಮ್ ನಲ್ಲಿ (Ln5, Col19) ಎಲ್ಲಾ ಮಾಹಿತಿಗಳನ್ನು ಪಡೆಯುತ್ತೇವೆ. |
01:45 | ಇಲ್ಲಿ 5 ನೇ ಸಾಲಿದೆ. ಇಲ್ಲಿ ಕಣ್ಣಿಗೆ ಕಾಣುವಂತಹ ತಪ್ಪಿಲ್ಲ. |
01:50 | ಪಿ.ಎಚ್.ಪಿ. ಯು ಈ echo ಕಮಾಂಡ್ ಗೆ, ಈ ಡಬಲ್ ಕೋಟ್ ಅನ್ನು ಪ್ರಾರಂಭವೆಂದೂ, ಇದನ್ನು ಕೊನೆಯೆಂದೂ ವ್ಯಾಖ್ಯಾನಿಸುತ್ತದೆ. ಹಾಗಾಗಿ ಇದು ಪ್ರಾರಂಭ ಮತ್ತು ಇದು ಕೊನೆಯಾಗಿರುತ್ತದೆ. |
02:06 | ಈಗ ನಾವು ಇಲ್ಲಿ ಎಚ್.ಟಿ.ಎಂ.ಎಲ್. ಅನ್ನು ಎಂಬೆಡ್ ಮಾಡಿದ್ದು, ನಾವು ಇಲ್ಲಿ ಡಬಲ್ ಕೋಟ್ಸ್ ಅನ್ನು ಬಳಸಿರುವುದು ಇದಕ್ಕೆ ಕಾರಣವಾಗಿದೆ. ಏಕೆಂದರೆ echo ಕಮಾಂಡ್ ಇದನ್ನು ಪ್ರಾರಂಭ ಎಂದೂ, ಇದನ್ನು ಕೊನೆ ಎಂದೂ ಭಾವಿಸುತ್ತದೆ. |
02:17 | ನಾನು ಇದನ್ನು ನಿಮಗೆ echo ಫಂಕ್ಷನ್ ನಲ್ಲಿ ವಿವರಿಸಿದ್ದೇನೆ ಅನಿಸುತ್ತದೆ. |
02:21 | ಸರಿ. ಈ ಸಾಲಿನಲ್ಲಿ ಎರರ್ ಬರಲು ಕಾರಣವೇನೆಂದರೆ, ಇದು ಮೊದಲ ಡಬಲ್ ಕೋಟ್ಸ್, ಮತ್ತು ಇನ್ನೊಂದು ಇಲ್ಲಿರಬಾರದು. |
02:31 | ತಾಂತ್ರಿಕವಾಗಿ, ಪಿ.ಎಚ್.ಪಿ. ಇದನ್ನು ತೆಗೆದುಕೊಂಡಿಲ್ಲ, ಹಾಗಾಗಿ ಇದು ಇಲ್ಲಿರಬಾರದು. |
02:36 | ಇದು ಸೆಮಿಕೋಲನ್ ಇರಬೇಕು ಎಂದು ಕೊಡುತ್ತಿದೆ ಏಕೆಂದರೆ ನಾವು ಎಕೋ ಕಮಾಂಡ್ ಅನ್ನು ಮುಗಿಸುವಾಗ ಸೆಮಿಕೋಲನ್ ಅನ್ನು ಬಳಸುತ್ತೇವೆ. ಅದು ಹುಡುಕುತ್ತಿರುವುದು ಇಲ್ಲಿದೆ. |
02:49 | ಆದರೆ, ಈಗಲೂ ಕೂಡ ಇದು ಅರ್ಥಹೀನವಾಗುತ್ತದೆ. |
02:52 | ಹಾಗಾಗಿ ನಾವು ಇದರ ಬದಲಿಗೆ ಸಿಂಗಲ್ ಕೋಟ್ ಚಿಹ್ನೆಯನ್ನು ಬಳಸಬೇಕು. |
02:58 | ಈಗ ನಾವು ಇದನ್ನು ಸೇವ್ ಮಾಡಿದರೆ, ನಾವು ಈಗ ಆರನೇ ಸಾಲಿನಲ್ಲಿ ಎರರ್ ಅನ್ನು ಪಡೆಯುತ್ತೇವೆ, ಏಕೆಂದರೆ ಎರರ್ ಇಲ್ಲಿ ಕೆಳಕ್ಕೆ ಬಂದಿದೆ ಅಂದರೆ ಆರನೇ ಸಾಲಿಗೆ ಬಂದಿದೆ. |
03:08 | ಅಂದರೆ ನೀವು ಆರನೇ ಸಾಲಿನಲ್ಲಿ ಅಥವ ಆರನೇ ಸಾಲಿನ ಹತ್ತಿರದ ಸಾಲಿನಲ್ಲಿ ಏನನ್ನೋ ಬದಲಾವಣೆ ಮಾಡಬೇಕು. ಕೆಲವು ಎರರ್ ಗಳು ಅಲ್ಲಿ ಸೂಚಿಸಿರುವ ಸಾಲಿನಲ್ಲಿ ಇರಬಹುದು. ಮತ್ತು ಇನ್ನು ಕೆಲವು ಎರರ್ ಇರುವ ಸಾಲಿನ ಸಂಖ್ಯೆಯನ್ನು ನಿಖರವಾಗಿ ಕೊಡದೇ ಇರಬಹುದು. |
03:19 | ನೀವು ಈಗ ಎಚ್.ಟಿ.ಎಂ.ಎಲ್. ಕೋಡ್ ಅನ್ನು ರನ್ ಮಾಡಿದ ನಂತರ ನೀವು ಇದನ್ನು ಪಡೆದಿದ್ದೀರಿ. ಇದು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ನಾವು ಎರರ್ ಅನ್ನು ಹೋಗಲಾಡಿಸಿದ್ದೇವೆ. |
03:28 | ಈಗ ನಾವು ಸೆಮಿಕೋಲನ್ ಅನ್ನು ನೋಡೋಣ. ಇದು ಇನ್ನೊಂದು ಸಾಮಾನ್ಯ ಎರರ್ ಆಗಿದೆ. |
03:33 | ಈಗ ನಾವು ಇಲ್ಲಿಗೆ ಹಿಂದಿರುಗಿ , semicolon ಅನ್ನು ಕ್ಲಿಕ್ ಮಾಡೋಣ. ನಾವು ಇಲ್ಲಿ "expecting a semicolon" ಎಂದಿರುವ ಒಂದು parse error ಅನ್ನು ಪಡೆದಿದ್ದೇವೆ. |
03:39 | ಈಗ ಇಲ್ಲಿ ನಾವು ಸೆಮಿಕೋಲನ್ ಅನ್ನು ಏಕೆ ನಿರೀಕ್ಷಿಸುತ್ತಿದ್ದೇವೆ? ಈ ಕೋಡ್ ಸರಿಯಾಗಿರುವಂತೆ ಕಾಣುತ್ತಿದೆ. ಇಲ್ಲಿ ನಾವು "Alex" ಎಂಬ ವ್ಯಾಲ್ಯುವನ್ನು ಹೊಂದಿರುವ ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ. "Alex" ಎಂಬ ವ್ಯಾಲ್ಯುವನ್ನು ಹೊಂದಿರುವ ಇನ್ನೊಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ. |
03:47 | ನಾವು ಈ ಎರಡು ವೇರಿಯೇಬಲ್ ಗಳನ್ನು ಹೋಲಿಕೆ ಮಾಡುತ್ತಿದ್ದೇವೆ. ಇದಕ್ಕಾಗಿ ಇಲ್ಲಿ ಎರಡು ಇಕ್ವಲ್ (==)ಚಿಹ್ನೆಯಿದೆ. |
03:52 | ಈ 'ಕಂಡಿಷನ್' True ಆಗಿದ್ದರೆ , ನಾವು ಈ ಸಂದೇಶವನ್ನು echo ಮಾಡುವೆವು. |
03:55 | ಈಗ ನಾವು ಇಲ್ಲಿ ನೋಡಿದರೆ - line no. 9 ಎಂದಿದೆ. |
03:58 | ಇದು ಖಂಡಿತವಾಗಿಯು ಒಂದು ಸರಳ ಕೋಡ್ ಆಗಿದೆ. ಇದು ಸ್ವಲ್ಪ ಕಠಿಣವಾಗಿದ್ದರೆ ಅದಕ್ಕೆ ಕಾರಣ ನೀವು ಒಂಬತ್ತನೇ ಸಾಲಿಗೆ ಬಂದಿದ್ದೀರಿ. ಇದು ಒಂಬತ್ತನೇ ಸಾಲಾಗಿದೆ. |
04:07 | ಆದರೆ ಒಂಬತ್ತನೇ ಸಾಲನ್ನು ನೋಡಿದರೆ, ಇಲ್ಲಿ ಏನೂ ತಪ್ಪಿಲ್ಲ. |
04:10 | ಆದರೆ ತಪ್ಪಿರುವುದು ಆ ಸಾಲಿನಲ್ಲಿ. ಆದರೆ ಪಿ.ಎಚ್.ಪಿ. ಯು ಒಂದು ಸಾಲಿನ ಆಧಾರದಲ್ಲಿ ಪೇಜ್ ಅನ್ನು ವ್ಯಾಖ್ಯಾನಿಸುತ್ತದೆ. |
04:19 | ಹಾಗಾಗಿ ನಾವು ಈಗ ಇಲ್ಲಿ ನೋಡುತ್ತಿರುವ ಕೋಡ್ ಅದರಂತೆಯೇ ಇದೆ. |
04:23 | ಇದು ಈಗಲೂ ಇದನ್ನು ಕಂಪೈಲ್ ಮಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ. ಇದು ಇಲ್ಲಿ ಕೆಳಗಿದೆ ಮತ್ತು ಇದು ಇಲ್ಲಿ ಮೇಲೆ ಇದೆ. ಆದರೆ ನಾವು ಇನ್ನೂ ಇದಾದ ಮೇಲೆ ಒಂದು ಸೆಮಿಕೋಲನ್ ಅನ್ನು ನಿರೀಕ್ಷಿಸುತ್ತಿದ್ದೇವೆ. |
04:34 | ನಾವು ಅದನ್ನು ಹಾಕಿದರೆ, ಈಗ ಈ ಕೋಡ್ ಮಾನ್ಯವಾಗಿದೆ. ಹಾಗಾಗಿ ನಾನು ಇಲ್ಲಿ ಸೆಮಿಕೋಲನ್ ಅನ್ನು ಸೇರಿಸಿದ್ದೇನೆ, ನಮ್ಮ ಕಣ್ಣಿಗೆ ಇದು ಇಲ್ಲಿ ಇರಬೇಕು ಅನಿಸಿದರೂ, ಇದು ಸರಿಯಾಗಿದೆ. |
04:42 | ನಾವು ಇದನ್ನು ಕೆಳಕ್ಕೆ ಬೇಕಾದರೂ ತರಬಹುದು. ಈಗ ಈ ಕೋಡ್ ಅನ್ನು ಮತ್ತೆ ರನ್ ಮಾಡೋಣ. |
04:53 | ಹೌದು ನಾವು ಯಶಸ್ವಿಯಾದ page ಅನ್ನು ಪಡೆದಿದ್ದೇವೆ. |
04:57 | ನಾನು ಇದನ್ನು ಇಲ್ಲಿ ಮೇಲಕ್ಕೆ ಹಾಕಿದರೆ ಖಂಡಿತವಾಗಿಯೂ, ಅದರಂತೆಯೇ ಇದು ಕೂಡ ಒಂದು ಮಾನ್ಯವಾದ ಕೋಡ್ ಆಗಿರುತ್ತದೆ. |
05:02 | php ಯು ಈ ಸಾಲಿನಲ್ಲಿ ಎರರ್ ಇದೆ ಎನ್ನುವ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದಿಲ್ಲ. |
05:07 | ಇದು ಹಿಂದಿನ ಸಾಲಿನಲ್ಲಿ ಎರರ್ ಇರುವುದರಿಂದ ಪ್ರಸ್ತುತ ಸಾಲು ರನ್ ಆಗುವುದಿಲ್ಲ ಎಂದು ಹೇಳುತ್ತದೆ. |
05:13 | ಹಾಗಾಗಿ ಈ ಸಾಲಿನಲ್ಲಿ ಸೆಮಿಕೋಲನ್ ಇಲ್ಲದೇ ಎರರ್ ಇರುವುದರಿಂದ, ಈ ಸಾಲು ರನ್ ಆಗುವುದಿಲ್ಲ. ಹಾಗಾಗಿ ಈ ಸಾಲು ಒಂಬತ್ತನೇ ಸಾಲಿನಲ್ಲಿ ಎರರ್ ಇದೆ ಎಂದು ತೋರಿಸುತ್ತಿದೆ. ನೀವು ಇದನ್ನು ಅಲ್ಲಿ ನೋಡಬಹುದು. |
05:29 | ಈಗ ನಾವು ಎರಡು ಮೂಲಭೂತ ಎರರ್ ಗಳನ್ನು ನೋಡಿದ್ದೇವೆ. |
05:33 | ನೀವು ಈ ಸನ್ನಿವೇಶವನ್ನು ಎದುರುಗೊಂಡರೆ, ಕೇವಲ ಎರರ್ ನಲ್ಲಿ ಕೊಟ್ಟಿರುವ ಸಾಲು ಒಂದನ್ನೇ ಪರೀಕ್ಷಿಸಬೇಡಿ. |
05:40 | ಹಿಂದಿನ ಮತ್ತು ಮುಂದಿನ ಸಾಲುಗಳನ್ನು ಪರೀಕ್ಷಿಸಿ. ಕ್ಷಮಿಸಿ, ಮುಂದಿನದ್ದಲ್ಲ ಆದರೆ ಹಿಂದಿನ ಸಾಲನ್ನು ಪರೀಕ್ಷಿಸಿ ಮತ್ತು ಸರಿಪಡಿಸಬಹುದೇ ಎಂದು ನೋಡಿ. |
05:47 | ಅವಶ್ಯವಿದ್ದರೆ ಪ್ರತಿ ಅಕ್ಷರವನ್ನು ಗಮನವಿಟ್ಟು ಪರೀಕ್ಷಿಸಿ. |
05:50 | ನನಗೆ ಇಂತಹ ತಪ್ಪು ಮಾಡಿದ ಅನೇಕರಿಂದ ಹಲವಾರು ಇ-ಮೇಲ್ ಗಳು ಬರುತ್ತವೆ.ನನಗೆ ಜನರಿಗೆ ಸಹಾಯ ಮಾಡಲು ಬೇಸರವಿಲ್ಲ. |
05:56 | ನನ್ನನ್ನು ಕೇಳಲು ಬೇಸರ ಬೇಡ ಆದರೆ ನನಗೆ ಕಳುಹಿಸುವ ಮೊದಲು ಒಮ್ಮೆ, ಎರಡು ಬಾರಿ ಅಥವಾ ಮೂರು ಬಾರಿ ನಿಮ್ಮ ಕೋಡ್ ಅನ್ನು ಪರೀಕ್ಷಿಸಿಕೊಳ್ಳಿ. |
06:04 | ಸರಿ ಇನ್ನುಳಿದ ಎರರ್ ಪೇಜ್ ನ ಕುರಿತು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ. ಮತ್ತೆ ಸಿಗೋಣ. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |