PHP-and-MySQL/C2/Loops-Do-While-Statement/Kannada

From Script | Spoken-Tutorial
Revision as of 12:16, 13 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಮತ್ತೊಮ್ಮೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು, do-while ಲೂಪ್ ಅನ್ನು ಕಲಿಯುವೆವು.
00:05 ಇದನ್ನು do-while ಸ್ಟೇಟ್ಮೆಂಟ್ ಎಂದೂ ಕರೆಯುವರು. ನೀವು ಇದನ್ನು loop ಅಥವಾ statement ಎಂದು ಕರೆಯಬಹುದು.
00:12 ಇದು ಮೂಲಭೂತವಾಗಿ while ಲೂಪ್ ನಂತೆ ಇದ್ದರೂ, ಇದರಲ್ಲಿ ಕಂಡಿಷನ್ ಅನ್ನು ವೈಲ್ ಲೂಪ್ ಗೆ ವಿರುದ್ಧವಾಗಿ ಪ್ರಾರಂಭದ ಬದಲು, ಕೊನೆಯಲ್ಲಿ ಪರೀಕ್ಷಿಸಲಾಗುತ್ತದೆ.
00:20 ನಾವು ಇಲ್ಲಿ do ಅನ್ನು ಹೊಂದಿರುವೆವು. ಇಲ್ಲಿ ಕರ್ಲಿ ಬ್ರ್ಯಾಕೆಟ್ ನಲ್ಲಿ ನಮ್ಮ ಕೋಡ್ ಬ್ಲಾಕ್ ಇದೆ. ಮತ್ತು ಕೊನೆಯಲ್ಲಿ while ಇದೆ. ನಂತರ ಇಲ್ಲಿ condition ಇದೆ. ಇದು ಕಂಡಿಷನ್ ಆಗಿದೆ.
00:29 ಈಗ ನಾನು ಒಂದು ಚಿಕ್ಕ ಪ್ರೋಗ್ರಾಂ ಅನ್ನು ಟೈಪ್ ಮಾಡುವೆನು. ನಾನು ಪ್ರತಿ ಬಾರಿಯು ಸಂಖ್ಯೆಯು ಹೆಚ್ಚಳವಾಗಲು ಬಯಸುವೆನು ಮತ್ತು ವೈಲ್ ಲೂಪ್ ನಲ್ಲಿರುವ ಪ್ರತಿ ಸಾಲನ್ನು echo ಮಾಡಲು ಬಯಸುವೆನು.
00:41 ಇಲ್ಲಿ ನನ್ನ condition - ಸಂಖ್ಯೆಯು 10 ಅನ್ನು ತಲುಪಿದಾಗ, ನಾನು name ವೇರಿಯೇಬಲ್ ಇನ್ನೊಂದು ಹೆಸರಿಗೆ ಬದಲಾಗಬೇಕೆಂದು ಬಯಸುವೆನು ಮತ್ತು ಆಗ ವೈಲ್ ಲೂಪ್ ಕೊನೆಗೊಳ್ಳುವುದು.
01:00 ಪ್ರಾರಂಭದಲ್ಲಿ ನಾನು $num = 1 ಎಂದು ಟೈಪ್ ಮಾಡುವೆನು.
01:04 ನಂತರ name ಅನ್ನು "Alex" ಎಂದು ಟೈಪ್ ಮಾಡುವೆನು.
01:09 while $name == "Alex" – ಇದು ನಾನು ಬಯಸುವ ಲೂಪ್ ನ ಕಂಡಿಷನ್ ಆಗಿದೆ.
01:15 ಇಲ್ಲಿ name ನ ವ್ಯಾಲ್ಯು "Alex" ಆಗಿರುವವರೆಗೂ ಲೂಪ್ ಇರುತ್ತದೆ. ಹಾಗಾಗಿ ಇಲ್ಲಿ ಎಲ್ಲಿಯಾದರೂ ನಮಗೆ ನೇಮ್ ಅನ್ನು "Billy" ಎಂದು ಬದಲಿಸಲು ನಿರ್ದಿಷ್ಟ ಕಂಡಿಷನ್ ಬೇಕು. ಆಗ ಲೂಪ್ ಮುಂದುವರಿಯುವುದಿಲ್ಲ ಏಕೆಂದರೆ ನೇಮ್ "Alex" ಆಗಿರುವುದಿಲ್ಲ.
01:31 ಈಗ ನಾವು do ಲೂಪ್ ನ ಒಳಗಡೆ if ಸ್ಟೇಟ್ಮೆಂಟ್ ಅನ್ನು ಸೇರಿಸುವೆವು. ನೆನಪಿರಲಿ, ನೀವು if ಸ್ಟೇಟ್ಮೆಂಟ್ ನ ಒಳಗೆ ಇನ್ನೊಂದು if ಸ್ಟೇಟ್ಮೆಂಟ್ ಅನ್ನು ಸೇರಿಸಬಹುದು.

ಲೂಪ್ ಗಳ ಒಳಗೆ ಕೂಡ if ಸ್ಟೇಟ್ಮೆಂಟ್ ಗಳನ್ನು ಸೇರಿಸಬಹುದು ಅಥವಾ ಲೂಪ್ ಗಳ ಒಳಗೆ ಲೂಪ್ ಗಳನ್ನೂ ಸೇರಿಸಬಹುದು. ನಿಮ್ಮ ಕೋಡ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹರಿವು(ಫ್ಲೋ) ಸರಿಯಾಗಿದ್ದು ಮತ್ತು ಇನ್ಫೈನೈಟ್ ವ್ಯಾಲ್ಯು ವನ್ನು ಕೊಡದಿದ್ದರೆ ನೀವು ಸೇರಿಸಬಹುದಾದ ಲೂಪ್ ಗಳ ಸಂಖ್ಯೆಗೆ ಮಿತಿಯಿಲ್ಲ.

01:55 ಈಗ ನಾನು do ಎಂದು ಟೈಪ್ ಮಾಡುವೆನು.
01:57 ಮೊದಲಿಗೆ , ಸಂಖ್ಯೆಯ ವ್ಯಾಲ್ಯುವನ್ನು echo ಮಾಡೋಣ.
02:00 ನೀವು ಸಾಲನ್ನು ತುಂಡರಿಸಲು ಇದನ್ನು HTML code ನೊಂದಿಗೆ ಸೇರಿಸಬಹುದು.
02:05 ಇಲ್ಲಿ ನಾನು $num++ ಎಂದು ಟೈಪ್ ಮಾಡುವೆನು, ಇದು $num +1 ಕ್ಕೆ ಸಮವಾಗಿದೆ.
02:14 ನಂತರ ನನ್ನ if ಸ್ಟೇಟ್ಮೆಂಟ್ - if $num is greater than or equal to 10 (>=) ಆಗಿದ್ದರೆ, echo ಇರುವುದಿಲ್ಲ.
02:26 ನಾನು $name ಅನ್ನು "Billy" ಎಂದು ಬದಲಿಸಲು ಬಯಸುವೆನು.
02:30 ಈಗ ಪುನರಾವಲೋಕಿಸೋಣ. ನಾನು ಇಲ್ಲಿ ಕರ್ಲಿ ಬ್ರ್ಯಾಕೆಟ್ಸ್ ಅನ್ನು ಬಳಸುತ್ತಿಲ್ಲ ಏಕೆಂದರೆ ಇಲ್ಲಿ ಇಫ್ ಸ್ಟೇಟ್ಮೆಂಟ್ ಆದಮೇಲೆ ಕೇವಲ ಒಂದು ಸಾಲಿನ ಕೋಡ್ ಎಕ್ಸಿಕ್ಯೂಟ್ ಆಗಬೇಕಿದೆ.
02:42 ಹಾಗಾಗಿ ನನಗೆ ಒಂದು ಸಾಲಿನ ಕೋಡ್ ಬೇಕು, ಇದು ಚೆನ್ನಾಗಿ ಕಾಣಿಸುತ್ತದೆ.
02:46 ಈಗ ನಾನು ಮಾಡಿರುವುದನ್ನು ಇನ್ನೊಮ್ಮೆ ನೋಡೋಣ. ನಾನು ಸಂಖ್ಯೆಯನ್ನು ಒಂದು ಎಂದು ಇಟ್ಟಿದ್ದೇನೆ.
02:51 ಇದು ನನ್ನ ವೇರಿಯೇಬಲ್ number ಆಗಿದೆ, ಇದನ್ನು ಹೆಚ್ಚಿಸಬಹುದು(ಇನ್ಕ್ರಿಮೆಂಟ್ ಮಾಡಬಹುದು) ಮತ್ತು ಯೂಸರ್ ಗೆ ಇಕೋ ಮಾಡಬಹುದು.
02:57 ನನ್ನ name ವೇರಿಯೇಬಲ್ ನ ವ್ಯಾಲ್ಯು "Alex" ಎಂದಿದೆ.
03:00 ಇಲ್ಲಿ ನನ್ನ do ಅನ್ನು ಪ್ರಾರಂಭಿಸೋಣ.
03:02 name ಇನ್ನೂ "Alex" ಆಗಿಯೇ ಇದೆ.
03:04 ಇಲ್ಲಿ ಯಾವುದೇ ಕಂಡಿಷನ್ ಇಲ್ಲ, ಹಾಗಾಗಿ ಇದು ಯಾವುದೆ ಅಡೆತಡೆಯಿಲ್ಲದೆ ರನ್ ಆಗುವುದು.
03:07 ಹಾಗಾಗಿ ನಾವು ನಂಬರ್ (ಸಂಖ್ಯೆ) ಅಂದರೆ 1 ಅನ್ನು echo ಮಾಡುವೆವು.
03:10 ಮತ್ತು ಅದನ್ನು ಒಂದರಿಂದ ಹೆಚ್ಚಿಸಿದಾಗ ಅದು ಎರಡು ಆಗುವುದು.
03:14 ಈಗ ನಾವು ನಂಬರ್(ಸಂಖ್ಯೆ) ಅಂದರೆ 2, ಇದು 10 ಕ್ಕಿಂತ ಹೆಚ್ಚು ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸಿ, (ಆದರೆ ಅದು ಸರಿಯಲ್ಲ) ನಂತರ ಇದರ ಮೂಲಕ ಮುಂದುವರಿಯುವುದು.
03:26 ಇದು ನಿಜವಲ್ಲ. ಹಾಗಾಗಿ ಇದನ್ನು ಬಿಟ್ಟು ಮುಂದುವರಿಯುವುದು. ಈಗ ಇದು name = "Alex" ಇದರ ಮೂಲಕ ಮುಂದುವರಿಯುವುದು. ನಂತರ ಮೇಲೆ ಹೋಗುವುದು.
03:34 ಇದು ಇನ್ನೂ 2 ಆಗಿರುವುದು. ಹಾಗಾಗಿ ಈ ಕೋಡ್ ಬ್ಲಾಕ್ ನಲ್ಲಿ ಇನ್ನು ಲೂಪ್ ಸಿಲುಕಿಕೊಂಡಿರುತ್ತದೆ.
03:41 ಇದು 2 ಎಂದು echo ಮಾಡುವುದು.
03:43 ನಂತರ ಒಂದನ್ನು ಸೇರಿಸುವುದು ಅಂದರೆ 3 ಆಗುವುದು.
03:46 ನಂತರ 3 10 ಕ್ಕಿಂತ ಹೆಚ್ಚು ಅಥವಾ ಸಮವಾಗಿದೆಯೇ ಎಂದು ಪರೀಕ್ಷಿಸುವುದು.
03:51 ಇಲ್ಲ ಇದು ಸರಿಯಲ್ಲ. ಹಾಗಾಗಿ name ಇದು "Billy" ಎಂದು ಬದಲಾಗಿಲ್ಲ. ಹಾಗಾಗಿ ಇದು ಉಳಿದ ಕೋಡ್ ಗಳ ಜತೆಗೆ ಮುಂದುವರಿಯುವುದು.
03:58 ನೇಮ್ ಇನ್ನೂ "Alex" ಆಗಿಯೇ ಇದೆ.
04:00 ಹಾಗಾಗಿ ಲೂಪ್ ಮುಂದುವರಿಯುವುದು. ಈ ಉದಾಹರಣೆಯಲ್ಲಿ ಇದು 10 ಅನ್ನು ತಲುಪುವ ತನಕ ಮುಂದುವರಿಯುವುದು, ಅಂದರೆ ಯೂಸರ್ ಗೆ 9 ಕೂಡ ಇಕೋ ಆಗುವುದು.
04:09 ಈಗ $num ಇದು 10 ಆಗುವುದು.
04:11 if ಕಂಡಿಷನ್ True ಆಗುವುದು.
04:13 name ಇದು "Billy" ಎಂದಾಗುವುದು ಮತ್ತು ವೈಲ್ ಕಂಡಿಷನ್ ನಲ್ಲಿ ಇದು "Alex" ಗೆ ಸಮವಾಗಿರುವುದಿಲ್ಲ. ಹಾಗಾಗಿ while ಲೂಪ್ ಮುಗಿಯುವುದು ಮತ್ತು ಅದರ ಕೆಳಗಿರುವ ಕೋಡ್ ಗಳು ಮುಂದುವರಿಯುವವು.
04:25 ಈಗ ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. "dowhileloop", ಅನ್ನು ಕ್ಲಿಕ್ ಮಾಡಿ.
04:31 ನಾವು ಇಲ್ಲಿ 1, 2, 3 ಹೀಗೆಯೇ 9 ರವರೆಗೂ ಔಟ್ಪುಟ್ ಅನ್ನು ಪಡೆದಿದ್ದೇವೆ.
04:35 ಖಂಡಿತವಾಗಿಯೂ, ನಮ್ಮ ಕಂಡಿಷನ್ ಅನ್ನು ತಲುಪಿದ್ದೇವೆ. $name ಇದು "Billy" ಎಂದಾಗಿದೆ. ಈಗ ನಮ್ಮ ನೇಮ್ "Alex" ಆಗಿ ಉಳಿದಿಲ್ಲ.
04:43 ಹಾಗಾಗಿ ನಮ್ಮ loop ಮುಗಿದಿದೆ.
04:45 ಈಗ ನಮ್ಮ if ಅನ್ನು 11 ಎಂದು ಬದಲಿಸಿ ಅಥವಾ $num ಅನ್ನು 0 ಎಂದು ಬದಲಿಸಿ.
04:50 ಈಗ ಇದು ಕಾರ್ಯ ನಿರ್ವಹಿಸುವುದಿಲ್ಲ. ಮತ್ತು ನೀವು ಯಾಕೆ ಎಂದು ನೋಡುವಿರಿ.
04:54 ಇಲ್ಲಿ ನಾವು 0 ಇಂದ 9 ರ ವರೆಗೆ ಪಡೆದಿದ್ದೇವೆ.
04:57 ಇದಕ್ಕೆ ಕಾರಣ ನಿಮ್ಮ ಪ್ರಾರಂಭಿಕ ಸಂಖ್ಯೆಯಾಗಿದೆ.
05:02 ಇದು ಏನು ಮಾಡುವುದೆಂದರೆ ನಾನು ಮೊದಲೇ ಹೇಳಿದಂತೆ, ಇದು ಮೊದಲು ಪ್ರಸ್ತುತ ನಂಬರ್ ಅನ್ನು ಇಕೋ ಮಾಡುವುದು, ನಂತರ ಇದನ್ನು ಒಂದರಿಂದ ಹೆಚ್ಚಿಸಲಾಗುವುದು, ನಂತರ ಇದನ್ನು if ಸ್ಟೇಟ್ಮೆಂಟ್ ನಲ್ಲಿ ಹೋಲಿಕೆ ಮಾಡಲಾಗುವುದು.
05:13 ಹಾಗಾಗಿ ನೀವು ನೋಡದೇ ಇರುವುದನ್ನು ಹೋಲಿಸುತ್ತಿರುವಿರಿ.
05:16 ಈಗ ನೀವು ಇದನ್ನು 11 ಎಂದು ಬದಲಿಸಿದರೆ, ನೀವು ಇದನ್ನು 11 ರೊಂದಿಗೆ ಹೋಲಿಸುವಿರಿ, ನಂತರ ಇದನ್ನು "Billy" ಎಂದು ಬದಲಿಸಿದರೆ ನಂತರ ಲೂಪ್ ಕೊನೆಗೊಳ್ಳುವುದು.
05:23 ನಾವು 11 ರ ವ್ಯಾಲ್ಯು ವನ್ನು ನೋಡುವುದೇ ಇಲ್ಲ, ಇದು ಕೇವಲ ಈ ಕಂಪೇರಿಸನ್ (ಹೋಲಿಕೆ) ನಲ್ಲಿ ಮಾತ್ರ ಇರುತ್ತದೆ.
05:27 ಈಗ refresh ಮಾಡಿದರೆ, ನಾವು 1 ರಿಂದ 10 ರವರೆಗೆ ನೋಡಬಹುದು.
05:31 ಇದು ಮೂಲಭೂತವಾಗಿ do-while ಲೂಪ್ ಆಗಿದೆ. ಎರಡೂ ಲೂಪ್ ಗಳೂ ಒಂದೇ ರೀತಿಯಾಗಿದ್ದರೂ, ಪ್ರೋಗ್ರಾಮಿಂಗ್ ಲಾಜಿಕ್ ನಲ್ಲಿ , do-while ಲೂಪ್ while ಲೂಪ್ ಗಿಂತ ಉಪಯುಕ್ತವಾಗಿದೆ. ಇವು ಕೆಲವು ಕಡೆ ಹೆಚ್ಚು ಉಪಯುಕ್ತವಾಗಿವೆ.
05:44 ಹಾಗಾಗಿ ಇದನ್ನು ಬೇರೆ ಬೇರೆ ವ್ಯಾಲ್ಯು ಗಳೊಂದಿಗೆ ಅಭ್ಯಾಸ ಮಾಡಿ. ಈಗ ನಾನು ರಚಿಸಿದ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರಚಿಸಲು ಪ್ರಯತ್ನಿಸಿ.
05:52 ಶೀಘ್ರದಲ್ಲಿ ಲೂಪ್ಸ್ ನ ಕುರಿತು ಹೆಚ್ಚು ಟ್ಯುಟೋರಿಯಲ್ ಗಳು ಸಿಗಲಿವೆ. ನೋಡುತ್ತಾ ಇರಿ.
05:56 ಅನುವಾದ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ ಭಟ್ಟ, ಉಪ್ಪಿನಪಟ್ಟಣ.

Contributors and Content Editors

Sandhya.np14