PHP-and-MySQL/C2/Multi-Dimensional-Arrays/Kannada

From Script | Spoken-Tutorial
Revision as of 11:53, 13 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಒಂದು multidimensional array ಅರೇಯಲ್ಲಿ, ಬೇರೆ ಇನ್ನೊಂದು ಅರೇಯನ್ನು ಸ್ಟೋರ್ ಮಾಡಬಹುದಾಗಿದೆ.
00:06 ಇದು 'ಅಸೋಸಿಯೇಟಿವ್ ಅರೇ' ಯನ್ನು ಹೋಲುತ್ತದೆ.
00:09 ಈ ಅರೇಗಳಿಗೆ, ಅರೇಗಳೇ ಸಹವರ್ತಿ(ಅಸೋಸಿಯೇಟ್) ಗಳಾಗಿವೆ.
00:14 ಇದನ್ನು ಅರ್ಥಮಾಡಿಕೊಳ್ಳಲು, ಪ್ರೊಗ್ರಾಂ ಅನ್ನು ಪ್ರಾರಂಭಿಸೋಣ.
00:19 ಇಂಗ್ಲಿಷ್ ವರ್ಣಮಾಲೆಯಲ್ಲಿ, ಒಂದು ಅಕ್ಷರದ ಸ್ಥಾನವನ್ನು ನೀವು ನೋಡಲು ಒಂದು ಪ್ರೋಗ್ರಾಂ ಅನ್ನು ರಚಿಸುವೆನು.
00:26 ಉದಾಹರಣೆಗೆ, ನಾನು 1 ಎಂದು ವ್ಯಾಲ್ಯುವನ್ನು ಕೊಟ್ಟರೆ, ಇದು "A" in position 1 ಎಂದು echo ಮಾಡಬೇಕು.
00:33 ಎರಡು ಎಂದು ವ್ಯಾಲ್ಯುವನ್ನು ಕೊಟ್ಟರೆ, ಅದು "B" in position 2 ಎಂದು,
00:38 ಮತ್ತು ಮೂರಕ್ಕೆ ಅದು "C" is in position 3 ಎಂದು ಹೇಳುವುದು .. ಹೀಗೆ..
00:43 ಮೊದಲಿಗೆ ನನ್ನದೇ ಒಂದು ಅರೇ ಯನ್ನು ರಚಿಸುವೆನು.
00:53 ನೋಡಲು ಸುಲಭವಾಗುವಂತೆ ನಾನು ಇದನ್ನು ಕೆಳಗೆ ತರುವೆನು.
00:58 ನೀವು ಕೂಡ ಹೀಗೆ ಮಾಡಬಹುದು.
01:01 ಇದರ ಒಳಗಡೆ, ನಾನು ನನ್ನದೇ ಆದ ಅರೇಯನ್ನು ರಚಿಸಿ, ಅದನ್ನು "ABC" ಎಂದು ಕರೆಯುವೆನು.
01:10 ಇದು ಒಂದು ಅರೇ ಆಗಿದೆ.
01:15 ಮೊದಲು ಮಾಡಿದಂತೆ, ಇದರ ಒಳಗೆ ವ್ಯಾಲ್ಯುಅನ್ನು ಸೇರಿಸುವ ಬದಲು, ಇಲ್ಲಿ ಒಂದು ಅರೇ ಇದೆ.
01:24 ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ ಕ್ಯಾಪಿಟಲ್ A, B, C ಮತ್ತು D ಗಳಾಗಿವೆ.
01:32 ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ (comma) ಬೇರ್ಪಡಿಸಲಾಗಿದೆ.
01:41 ನಂತರ “123” ಎಂದು ಟೈಪ್ ಮಾಡುವೆವು. ಇದೂ ಕೂಡ ಒಂದು ಅರೇ ಗೆ ಸಮವಾಗಿದೆ.
01:46 ಈಗ ಇದರೊಳಗೆ 1,2,3,4, ಗಳನ್ನು ಹೊಂದಿದ್ದೇವೆ. ಅಷ್ಟೇ.
01:53 ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು echo ಹೇಗೆ ಮಾಡುವುದೆಂದು ತೋರಿಸುವೆನು.
01:59 ನಾವು ನಮ್ಮ ಮುಖ್ಯ (ಮೇನ್) ಅರೇ ಯನ್ನು ಕಾಲ್ ಮಾಡುವೆವು.
02:02 ಮತ್ತು ಈ ಅರೇ ಯನ್ನೂ ಕೂಡ ಕಾಲ್ ಮಾಡುವೆವು.
02:05 ನಂತರ ಅರೇ ಯ ಒಳಗಡೆಯ ನಮಗೆ ಬೇಕಾದ ಸ್ಥಾನ(ಪೊಸಿಷನ್) ವನ್ನು ಕಾಲ್ ಮಾಡುವೆವು. ಹಾಗಾಗಿ, ಇದು ಅರೇ ಯ ಒಳಗೆ ಇನ್ನೊಂದು ಅರೇ ಆಗಿದೆ.
02:13 ನಾನು echo' ಎಂದು, ನಂತರ ನಮ್ಮ ಮುಖ್ಯ ಅರೇ ಆಗಿರುವ $alpha ಎಂದು ಟೈಪ್ ಮಾಡಿ,
02:19 ನಂತರ ಚೌಕ ಆವರಣಗಳಲ್ಲಿ (ಸ್ಕ್ವೇರ್ ಬ್ರ್ಯಾಕೆಟ್) 'ABC' ಎಂದು ಟೈಪ್ ಮಾಡುವೆನು.
02:23 ನಂತರ, ಇನ್ನೊಂದು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ನಾವು ನೋಡಲು ಬಯಸುವ ಎಲಿಮೆಂಟ್ ನ ಸ್ಥಾನವನ್ನು ಟೈಪ್ ಮಾಡಬೇಕು.
02:30 ಈಗ ಈ ಉದಾಹರಣೆಯು "A" ಎಂದು ಎಕೋ(ಡಿಸ್ಪ್ಲೇ) ಮಾಡುವುದು.
02:35 ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು ಪಡೆಯುವೆವು.
02:47 ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ "1" ಎಂದು ಕೊಡುವುದು.
02:54 ನೀವು ಇದನ್ನು ಇಲ್ಲಿ ನೋಡಬಹುದು.
02:57 ಈಗ ನಾವು ಮುಖ್ಯ ಅರೇ ಯ ಒಳಗೆ ಎರಡು ಮೂಲಭೂತ ಅರೇ ಗಳನ್ನು ರಚಿಸಿ, ಅವುಗಳನ್ನು ಕಾಲ್ ಮಾಡುವುದನ್ನು ಕಲಿತಿದ್ದೇವೆ.
03:05 ಈಗ ನಾನು ಸಂಖ್ಯೆಗೆ ಅನುಸಾರವಾಗಿ ವರ್ಣಮಾಲೆ ಯ ಅಕ್ಷರವನ್ನೂ ಮತ್ತು ಅದರ ಸ್ಥಾನವನ್ನೂ ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ರಚಿಸುವೆನು.
03:13 ನಾನು ಪೊಸಿಷನ್ ಅನ್ನು postion = 0 ಎಂದು ಟೈಪ್ ಮಾಡುವೆನು ಏಕೆಂದರೆ ಅರೇಯ ಪ್ರಾರಂಭ ಸೊನ್ನೆಯಾಗಿದೆ.
03:30 ಈಗ ನಾನು Letter ಡ್ಯಾಶ್ is in position ಡ್ಯಾಶ್ ಎಂದು ಎಕೋ ಮಾಡುವೆನು.
03:39 ಇದು ತುಂಬ ಸರಳವಾಗಿದೆ.
03:42 ಇಲ್ಲಿ ನಾವು ಸ್ಥಾನವನ್ನು ನಮೂದಿಸುವೆವು. ಉದಾಹರಣೆಗೆ 3; "C" ಯು ವರ್ಣಮಾಲೆಯ ಮೂರನೇ ಸ್ಥಾನದಲ್ಲಿರುವುದರಿಂದ "C" ಯನ್ನು ಪಡೆಯುವೆವು.
03:53 ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, ಮೊದಲ ಬಿಟ್ಟ ಸ್ಥಳದಲ್ಲಿ ನಾನು, $alpha
04:02 'ABC'
04:05 '$pos' ಎಂದು ತುಂಬುವೆನು
04:07 'pos' ಇದು ಸ್ಥಾನವನ್ನು ಸೂಚಿಸುತ್ತದೆ.
04:11 ಹಾಗಾಗಿ ಸ್ಥಾನವನ್ನು ತೋರಿಸಲು - $alpha... '123'
04:19 ‘$pos’ ಎಂದು ಟೈಪ್ ಮಾಡಬೇಕು.
04:23 ಈಗ, ಸ್ಥಾನವು 0 ಗೆ ಸಮವಾಗಿದೆ.
04:29 ನಾವು ಇದನ್ನು ಎಕೋ ಮಾಡಿದಾಗ, ಪೊಸಿಷನ್ ಸೊನ್ನೆ ಎಂದಿರುತ್ತದೆ.
04:36 ಆಂತರಿಕ ಅರೇ 'ABC' ಯಲ್ಲಿ 'ಪೊಸಿಷನ್' ಸೊನ್ನೆ ಆಗಿದೆ. ನಿಜಾಂಶ ಏನೆಂದರೆ "A" ಯು 0 ಸ್ಥಾನ(ಪೊಸಿಷನ್) ದಲ್ಲಿರುತ್ತದೆ.
04:47 ಆದರೆ 123 ಅರೇಯಲ್ಲಿ' ಪೊಸಿಷನ್' ಸೊನ್ನೆಯಲ್ಲಿ 1 ಇದೆ. ಹಾಗಾಗಿ ನಾವು "A" is in position one ಎಂದು ಔಟ್ಪುಟ್ ನಲ್ಲಿ ತೋರಿಸುತ್ತಿದ್ದೇವೆ.
04:56 ಈಗ ಇದನ್ನು ರನ್ ಮಾಡೋಣ. "A" is in position 1 ಎಂದಿದೆ. ಈಗ ಇದನ್ನು 1 ಎಂದು ಬದಲಿಸೋಣ.
05:05 Refresh ಮಾಡಿ. "Letter B is in position 2". ನಾನು ಈಗ ಈ ಅಪ್ಲಿಕೇಶನ್ ಅನ್ನು ಇನ್ನು ಕ್ರಿಯಾತ್ಮಕ ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡುವಂತೆ ಮಾಡುವೆನು. ಮತ್ತು ಸೊನ್ನೆಯ ಬದಲು ಒಂದು ಎಂದು ಬರೆಯುವುದನ್ನು ತಪ್ಪಿಸುವೆನು.
05:21 ಹಾಗಾಗಿ, ನಾನು ಸ್ಪಷ್ಟತೆಗಾಗಿ, ಕೊನೆಯಲ್ಲಿ ‘-1’ ಎಂದೂ ಮತ್ತು ಪ್ರಾರಂಭದಲ್ಲಿ ಬ್ರ್ಯಾಕೆಟ್ ನಲ್ಲಿ 1 ಎಂದೂ ಇಡುವೆನು.
05:28 ಹಾಗಾಗಿ 'ಪೊಸಿಷನ್' ನಲ್ಲಿ ಒಂದು ಮೈನಸ್ ಒಂದು ಸೊನ್ನೆಯೇ ಆಗಿರುವುದು. ಹಾಗಾಗಿ ಇಲ್ಲಿ ಒಂದು ಎಂದು ಬರೆದರೆ ಅದು ಸೊನ್ನೆ ಎಂದು ಬರೆದಾಗ ಕೊಡುವ ಫಲಿತಾಂಶವನ್ನೇ ಕೊಡುವುದು. 2 ಎಂದು ಬರೆದರೆ 1 ನೇ ಸ್ಥಾನಕ್ಕೆ ಕೊಡುವ ಫಲಿತಾಂಶವನ್ನೇ ಕೊಡುವುದು ಅಂದರೆ letter "B" is in position 2 ಎಂದಾಗಿರುವುದು.
05:43 ನಾನು ಇಲ್ಲಿ 1 ಎಂದು ಹಾಕಿದರೆ, "A" is in position 1 ಎಂದು ಪಡೆಯುವೆವು. ನಾನು ಇಲ್ಲಿ ಸೊನ್ನೆ ಎಂದು ಹಾಕಿದರೆ, ಇಲ್ಲಿ ಸೊನ್ನೆ ಎಂಬ ಸ್ಥಾನ ವಿಲ್ಲವಾದ್ದರಿಂದ ನಾವು “Letter is in position” ಎಂದು ಪಡೆಯುವೆವು. ಇಲ್ಲಿ ನಾವು ಅಕ್ಷರವನ್ನಾಗಲಿ, ಸ್ಥಾನವನ್ನಾಗಲಿ ಹೊಂದಿಲ್ಲ.
06:01 ನಾನು ಈಗ ಇದನ್ನು ಸುಲಭವಾಗಿರುವಂತೆ ರೂಪಿಸಿದ್ದೇನೆ.

ಧನ್ಯವಾದಗಳು.

Contributors and Content Editors

Sandhya.np14