Java/C3/Custom-Exceptions/Kannada
From Script | Spoken-Tutorial
Revision as of 18:34, 5 April 2020 by Sandhya.np14 (Talk | contribs)
Time | Narration |
00:01 | ಕಸ್ಟಂ ಎಕ್ಸೆಪ್ಶನ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ನಲ್ಲಿ ನಾವು ಕಸ್ಟಂ ಎಕ್ಸೆಪ್ಶನ್ಗಳು ಮತ್ತು throw ಮತ್ತು throws ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ. |
00:14 | ಈ ಟ್ಯುಟೋರಿಯಲ್ ದಾಖಲು ಮಾಡಲು ನಾನು ಉಬಂಟು ಲೀನಕ್ಸ್ 16.04 ಒ.ಎಸ್. ಜೆ.ಡಿ.ಕೆ 1 .7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ. |
00:26 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾದಲ್ಲಿ ಎಕ್ಸೆಪ್ಶನ್ಸ್ ಹ್ಯಾಂಡ್ಲಿಂಗ್ನ ಮೂಲಭೂತ ಜ್ಞಾನ ಹೊಂದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
00:38 | ಮೊದಲಿಗೆ ನಾವು ಕಸ್ಟಂ ಎಕ್ಸೆಪ್ಶನ್ಗಳ ಕುರಿತು ಕಲಿಯೋಣ. |
00:42 | ಕಸ್ಟಂ ಎಕ್ಸೆಪ್ಶನ್ ಎನ್ನುವುದು ಯೂಸರ್ ಡಿಫೈನ್ಡ್ ಎಕ್ಸೆಪ್ಶನ್ ಕ್ಲಾಸ್ ಆಗಿದೆ. ಇದನ್ನು ಸಾಮಾನ್ಯವಾಗಿ ಚೆಕ್ಡ್ ಎಕ್ಸೆಪ್ಶನ್ಗಳಾಗಿ ರಚಿಸಲಾಗುತ್ತದೆ. |
00:51 | ಬಳಕೆದಾರರ ಅಗತ್ಯತೆಗೆ ತಕ್ಕುದಾಗಿ ಎಕ್ಸೆಪ್ಶನ್ ಅನ್ನು ಕಸ್ಟಮೈಸ್ ಮಾಡಲು ಇದನ್ನು ಬಳಸಲಾಗುತ್ತದೆ. |
00:57 | ನಾವೀಗ ಎಕ್ಲಿಪ್ಸ್ ತೆರೆಯಲಿದ್ದೇವೆ ಮತ್ತು CustomExceptionDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸಲಿದ್ದೇವೆ. |
01:04 | ಈ ಪ್ರಾಜೆಕ್ಟ್ ಒಳಗೆ ನಾವು, ಕಸ್ಟಂ ಎಕ್ಸೆಪ್ಶನ್ಗಳ ಪ್ರಾತ್ಯಕ್ಷಿಕೆಗಾಗಿ ಅಗತ್ಯ ಕ್ಲಾಸುಗಳನ್ನು ರಚಿಸಲಿದ್ದೇವೆ. |
01:11 | ನಾವು InvalidMarkException ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. |
01:15 | ಇದನ್ನು ಎಕ್ಸೆಪ್ಶನ್ ಕ್ಲಾಸ್ನ ಪ್ರಕಾರವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್ ಕ್ಲಾಸ್ನ ಸಬ್ಕ್ಲಾಸ್ ಆಗಿರಬೇಕು. |
01:22 | ಹೀಗೆ ಮಾಡಲು extends Exception ಎಂದು ಟೈಪ್ ಮಾಡಿ. |
01:27 | Source ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Generate constructors from Superclass ಆರಿಸಿ. |
01:34 | ಈಗ ಬಲಗಡೆಯಲ್ಲಿ Deselect All ಬಟನ್ ಮೇಲೆ ಕ್ಲಿಕ್ ಮಾಡಿ. |
01:38 | ನಂತರ ಸಿಂಗಲ್ ಸ್ಟಿಂಗ್ ಆರ್ಗ್ಯುಮೆಂಟ್ ಜೊತೆಗಿನ ಕನ್ಸ್ಟ್ರಕ್ಟರ್ ಆರಿಸಿ ಮತ್ತು ಕೆಳಗಡೆ ಇರುವ OK ಬಟನ್ ಮೇಲೆ ಕ್ಲಿಕ್ ಮಾಡಿ. |
01:45 | ಈ ಸ್ಟ್ರಿಂಗ್ ಆರ್ಗ್ಯುಮೆಂಟ್ ಅನ್ನು, ಈ ಎಕ್ಸೆಪ್ಶನ್ ಉಂಟಾಗುವಾಗ ತೋರಿಸುವ ಮೆಸೇಜ್ ಅನ್ನು ಕಸ್ಟಮೈಸ್ ಮಾಡಲು ಬಳಸಲಾಗುತ್ತದೆ. <<PAUSE>> |
01:52 | ನಾವೀಗ StudentMarks ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ. |
01:57 | ನಂತರ ಈ ಕೋಡ್ ಅನ್ನು ಟೈಪ್ ಮಾಡಿ. |
02:00 | ಈ ಕ್ಲಾಸು marks ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ. |
02:04 | ಈ ಕನ್ಸ್ಟ್ರಕ್ಟರ್, marks ನ ಮೌಲ್ಯವನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುತ್ತದೆ. |
02:09 | ಈಗ ಮಾರ್ಕ್ ಗಳನ್ನು ಊರ್ಜಿತಗೊಳಿಸಲು ಮೆಥಡ್ ಒಂದನ್ನು ಸೇರಿಸೋಣ. |
02:13 | ಮಾರ್ಕುಗಳ ಸಾಮಾನ್ಯ ಶ್ರೇಣಿಯು 0 ಯಿಂದ 100. |
02:18 | ಒಂದುವೇಳೆ marks less than 0 or greater than 100 ಅನ್ನು ಪ್ರಕ್ರಿಯೆಗೊಳಿಸಿದಾಗ, InvalidMarkException ಕಾಣಿಸಿಕೊಳ್ಳುತ್ತದೆ. |
02:25 | ಇದಕ್ಕಾಗಿ ನಾವು, ಕಸ್ಟಂ ಎಕ್ಸೆಪ್ಶನ್ ಹರಡಲು throw ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು. |
02:33 | ಒಂದುವೇಳೆ ಮಾರ್ಕ್ ಮಾನ್ಯವಾಗಿದ್ದರೆ “Entry OK” ಸಂದೇಶವು ಕಾಣಿಸಿಕೊಳ್ಳುತ್ತದೆ. |
02:39 | ಈಗ InvalidMarkException ಎರರ್ (ದೋಷ) ಉಂಟಾಗಿರುವುದನ್ನು ನಾವು ಕಾಣಬಹುದು. |
02:43 | ಇದನ್ನು ಪರೀಕ್ಷಿಸಿ ಸರಿಪಡಿಸೋಣ. |
02:46 | ಇದಕ್ಕಾಗಿ ಎರರ್ನ ಮೇಲೆ ಕ್ಲಿಕ್ ಮಾಡಿ ಮತ್ತು “Add throws declaration” ಮೇಲೆ ಡಬಲ್ ಕ್ಲಿಕ್ ಮಾಡಿ. |
02:51 | ಮೆಥಡ್ ಸಿಗ್ನೇಚರ್ಗೆ “throws InvalidMarkException” ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದನ್ನು ನಾವು ನೋಡಬಹುದು. |
03:00 | ಇಲ್ಲಿ methods ಜೊತೆ throws ಕೀವರ್ಡ್ ಅನ್ನು ಬಳಸಿರುವುದನ್ನು ನಾವು ನೋಡಬಹುದು. |
03:06 | ಮೆಥಡ್ ಇಲ್ಲಿ ಸ್ಪೆಸಿಫೈಡ್ ಎಕ್ಸೆಪ್ಶನ್ ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ. |
03:11 | ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ ನಾವು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಕೋಡ್ ಅನ್ನು ಒದಗಿಸಬೇಕು. |
03:16 | ನಂತರ, ನಾವು ಫೈಲ್ ಆಕ್ಸೆಸ್ ಅಪರೇಶನ್ ಅನ್ನು ನಿರ್ವಹಿಸೋಣ. ಇದು FileNotFoundException ಅನ್ನು ತೋರಿಸುತ್ತದೆ. |
03:23 | ಇದಕ್ಕಾಗಿ, FileReader ಕ್ಲಾಸ್ ನ ಇನ್ಸ್ಟೆನ್ಸ್ (ನಿದರ್ಶನ) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
03:29 | ಎಕ್ಲಿಪ್ಸ್ ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ. |
03:36 | ಇದನ್ನು ಸರಿಪಡಿಸಲು ಎರರ್ ಮೇಕೆ ಕ್ಲಿಕ್ ಮಾಡಿ ಮತ್ತು import 'FileReader' (java.io) ಮೇಲೆ ಡಬಲ್ ಕ್ಲಿಕ್ ಮಾಡಿ. |
03:44 | ಮುಂದಿನ ಟ್ಯುಟೋರಿಯಲ್ನಲ್ಲಿ ನಾವು ಪ್ಯಾಕೇಜ್ ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ. |
03:50 | ಹೋಂ ಫೋಲ್ಡರ್ನಲ್ಲಿರುವ Marks ಫೈಲ್ ಅನ್ನುfr ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
03:59 | ಇಲ್ಲಿ ತೋರಿಸಿರುವ ಪಾತ್ ಅನ್ನು ಸಿಸ್ಟಂನ ಹೋಂ ಫೋಲ್ಡರ್ನಲ್ಲಿರುವ ಪಾತ್ನಿಂದ ಬದಲಾಯಿಸಬೇಕು. |
04:05 | ಈ ಕೋಡ್ನ ಸಾಲು FileNotFoundException ಅನ್ನು ತೋರಿಸಿಕೊಡಬಹುದು ಎಂಬುದಾಗಿ ಎರರ್ ತೋರಿಸುತ್ತದೆ. |
04:10 | ಈ ಎಕ್ಸೆಪ್ಶನ್ ಅನ್ನು ಥ್ರೋಸ್ ಕ್ಲಾಸ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು. |
04:16 | FileNotFoundException ಅನ್ನು ಸಹ ಥ್ರೋಸ್ ಕ್ಲಾಸ್ ಗೆ ಸೇರಿಸಿರುವುದನ್ನು ನಾವು ನೋಡಬಹುದು. |
04:22 | ಇಲ್ಲಿ ತೋರಿಸಿರುವಂತೆ ಥ್ರೋಸ್ ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು. |
04:28 | ನಾವೀಗ StudentMarks ಕ್ಲಾಸ್ ಒಳಗೆ ಮೇನ್ ಮೆಥಡ್ ಅನ್ನು ರಚಿಸಲಿದ್ದೇವೆ ಮತ್ತು ಫಲಿತಾಂಶಗಳನ್ನು ದೃಢೀಕರಿಸಲಿದ್ದೇವೆ. |
04:34 | ಇಲ್ಲಿ m1 ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು 40 ಆಗಿ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಿದ್ದೇವೆ. |
04:41 | ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ ಬಲಸಿ ವ್ಯಾಲಿಡೇಟ್ ಮೆಥಡ್ ಅನ್ನು ನಾವು ಇನ್ವೋಕ್ (ಜಾರಿಗೊಳಿಸು) ಮಾಡಲಿದ್ದೇವೆ. |
04:47 | ವ್ಯಾಲಿಡೇಟ್ ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು. |
04:52 | ಈ ಮೆಥಡ್ InvalidMarkException ಮತ್ತು FileNotFoundException ಅನ್ನು ಎತ್ತಿ ತೋರಿಸುತ್ತದೆ ಎಂದು ಇದು ಹೇಳುತ್ತದೆ. |
04:59 | ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ ಮೇನ್ ಮೆಥಡ್ಗೆ ಥ್ರೋಸ್ ಕ್ಲಾಸ್ ಅನ್ನು ಸೇರಿಸಬಹುದು. |
05:05 | ಆದರೆ ಟ್ರೈ ಮತ್ತು ಕ್ಯಾಚ್ ಬ್ಲಾಕ್ ಬಳಸಲು ಶಿಫಾರಸ್ಸು ಮಾಡಲಾಗಿದೆ. |
05:10 | ಹೀಗಾಗಿ Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ. |
05:14 | ಈಗ ಅಗತ್ಯವಿರುವ ಟ್ರೈ-ಕ್ಯಾಚ್ ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ. |
05:20 | ಈಗ ಈ ಪ್ರೋಗ್ರಾಂ ಅನ್ನು ರನ್ ಮಾಡೋಣ. |
05:23 | ಇದು “Entry OK” ಮತ್ತು “rest of the code” ತೋರಿಸುತ್ತದೆ. |
05:27 | ಮಾರ್ಕ್ಸ್ ನ ಮೌಲ್ಯವು 40 ಎಂದು ಹೇಳಿರುವುದು ಸರಿಯಾದ ಎಂಟ್ರಿ ಆಗಿರುವುದರಿಂದ ಇದು ಉಂಟಾಗಿದೆ. |
05:32 | ನಾವೀಗ ಮೌಲ್ಯವನ್ನು ಅಮಾನ್ಯ ಎಂಟ್ರಿಯಾಗಿರುವ -10 ಕ್ಕೆ ಬದಲಾಯಿಸೋಣ. |
05:37 | ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ. |
05:40 | ಈಗ InvalidMarkException ಕಾಣಿಸಿಕೊಂಡಿದೆ, ಏಕೆಂದರೆ -10 ಅಮಾನ್ಯ ಎಂಟ್ರಿಯಾಗಿದೆ. |
05:47 | ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನಾವು ನೋಡಬಹುದು. |
05:53 | ಇದರ ಬದಲಾಗಿ ನಾವು ʻʻಥ್ರೋಸ್ʼʼ ಕ್ಲಾಸ್ ಬಳಸಿದರೆ “rest of the code” ಸಂದೇಶವು ಪ್ರಿಂಟ್ (ಮುದ್ರಣ) ಆಗುವುದಿಲ್ಲ. |
06:00 | ಅಲ್ಲದೆ ಈ ಪ್ರೋಗ್ರಾಂ ಸ್ಥಗಿತಗೊಳ್ಳುತ್ತದೆ. |
06:03 | ಹೀಗಾಗಿ, ಮೇನ್ ಮೆಥಡ್ ಒಳಗೆ ಮೆಥಡ್ ಒಂದನ್ನು ಸೇರಿಸಿದಾಗ ಟ್ರೈ ಕ್ಯಾಚ್ ಬ್ಲಾಕ್ ಬಳಸುವುದು ಒಳ್ಳೆಯದು. |
06:10 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. |
06:13 | ನಾವೀಗ ಸಂಕ್ಷೇಪಿಸೋಣ. |
06:15 | ಈ ಟ್ಯುಟೋರಿಯಲ್ ನಲ್ಲಿ ನಾವು ಕಸ್ಟಂ ಎಕ್ಸೆಪ್ಶನ್ ಎಂದರೇನು, ಮತ್ತು throw ಮತ್ತು throws ಕೀವರ್ಡ್ಗಳ ಬಳಕೆ ಮತ್ತು ಕಸ್ಟಂ ಎಕ್ಸೆಪ್ಶನ್ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು. |
06:26 | ಅಸೈನ್ಮೆಂಟ್ ಆಗಿ InvalidAgeException ಎನ್ನುವ ಕಸ್ಟಂ ಎಕ್ಸೆಪ್ಶನ್ ಕ್ಲಾಸ್ ಅನ್ನು ರಚಿಸಿ. |
06:33 | ಇನ್ನೊಂದು ಏಜ್ ಕ್ಲಾಸ್ ಅನ್ನು ರಚಿಸಿ ಮತ್ತು ಏಜ್ನ ಮೌಲ್ಯವನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ರಚಿಸಿ. |
06:39 | ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ವ್ಯಾಲಿಡೇಟ್ ಮೆಥಡ್ ಅನ್ನು ರಚಿಸಿ. |
06:45 | ಮೇನ್ ಮೆಥಡ್ ಒಳಗೆ ಅಬ್ಜೆಕ್ಟ್ಗಳನ್ನು ರಚಿಸಿ ಮತ್ತು validate() ಮೆಥಡ್ ಅನ್ನು ಇನ್ವೋಕ್ ಮಾಡಿ. |
06:51 | ಅಗತ್ಯವಿರುವಲ್ಲಿ ಟ್ರೈ-ಕ್ಯಾಚ್ ಬ್ಲಾಕ್ಗಳನ್ನು ಬಲಸಿ ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಒದಗಿಸಿ. |
06:56 | ಕಸ್ಟಂ ಎಕ್ಸೆಪ್ಶನ್ ಕ್ಲಾಸ್ ಅನ್ನು ದೃಢಪಡಿಸಿ. |
07:00 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
07:06 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
07:18 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
07:29 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
07:36 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |