Java/C3/Static-Blocks/Kannada
From Script | Spoken-Tutorial
Revision as of 18:19, 5 April 2020 by Sandhya.np14 (Talk | contribs)
Time | Narration | ||
00:01 | ಸ್ಟಾಟಿಕ್ ಬ್ಲಾಕ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. | ||
00:06 | ಈ ಟ್ಯುಟೋರಿಯಲ್ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ಗಳು ಎಂದರೇನು, ಸ್ಟಾಟಿಕ್ ಬ್ಲಾಕ್ಗಳನ್ನು | ||
00:10 | ಹೇಗೆ ಘೋಷಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ಗಳನ್ನು ಹೇಗೆ ಬಳಸುವುದು ಎಂಬುದನ್ನು ಕಲಿಯಲಿದ್ದೇವೆ. | ||
00:16 | ಇಲ್ಲಿ ನಾವು ಉಬಂಟು 14.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ. | ||
00:26 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. | ||
00:34 | ನೀವು ಜಾವಾದಲ್ಲಿ ಇನ್ಸ್ಟೆನ್ಸ್ ವೇರಿಯೇಬಲ್ ಗಳು, ಸ್ಟಾಟಿಕ್ ವೇರಿಯೇಬಲ್ ಗಳು ಮತ್ತು ಸ್ಟಾಟಿಕ್ ಮೆಥಡ್ಗಳ ಜ್ಞಾನವನ್ನು ಹೊಂದಿರಬೇಕು. | ||
00:43 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ. | ||
00:48 | ನಾವೀಗ ಸ್ಟಾಟಿಕ್ ಬ್ಲಾಕ್ಗಳ ಕುರಿತು ಕಲಿಯೋಣ. | ||
00:52 | ಸ್ಟಾಟಿಕ್ ಬ್ಲಾಕ್ಅನ್ನು ಹೆಚ್ಚಿನದಾಗಿ ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ (ಅನುಸ್ಥಾಪನೆ) ಮಾಡುವುದಕ್ಕೆ ಬಳಸಲಾಗುತ್ತದೆ. | ||
00:59 | ಸ್ಟಾಟಿಕ್ ಬ್ಲಾಕ್ಅನ್ನು static ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ. | ||
01:03 | ಮೆಮೊರಿಯಲ್ಲಿ ಕ್ಲಾಸ್ ಅನ್ನು ಲೋಡ್ ಮಾಡಿದಾಗ ಸ್ಟಾಟಿಕ್ ಬ್ಲಾಕ್ಗಳನ್ನು ಎಕ್ಸಿಕ್ಯೂಟ್ (ಕಾರ್ಯಗತ) ಮಾಡಲಾಗುತ್ತದೆ. | ||
01:08 | ಪ್ರೋಗ್ರಾಂನಲ್ಲಿ ಸ್ಟಾಟಿಕ್ ಬ್ಲಾಕ್ಗಳಿದ್ದರೆ, ಕನ್ಸ್ಟ್ರಕ್ಟರ್ಗಳ ಮೊದಲು ಅವುಗಳನ್ನು ಇನ್ವೋಕ್ (ಜಾರಿಗೊಳಿಸು) ಮಾಡಲಾಗುತ್ತದೆ. | ||
01:14 | ನಾವು ಸ್ಟಾಟಿಕ್ ಬ್ಲಾಕ್ನ ಒಳಗೆ ಇನ್ಸ್ಟೆನ್ಸ್ ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಲಾಗದು. | ||
01:19 | ಈಗ ನಾವು ಎಕ್ಲಿಪ್ಸ್ನತ್ತ ಸಾಗೋಣ ಮತ್ತು StaticBlockDemo ಎನ್ನುವ ಹೊಸ ಪ್ರಾಜೆಕ್ಟ್ ಅನ್ನು ರಚಿಸೋಣ. | ||
01:26 | ಈ ಪ್ರಾಜೆಕ್ಟ್ ನ ಒಳಗೆ, ಸ್ಟಾಟಿಕ್ ಬ್ಲಾಕ್ಗಳ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ. | ||
01:33 | src ಫೋಲ್ಡರ್ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New-> Class ಮೇಲೆ ಕ್ಲಿಕ್ ಮಾಡಿ. | ||
01:38 | ಕ್ಲಾಸ್ನ ಹೆಸರನ್ನು StudentEnroll ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
01:44 | ಈಗ, StudentEnroll ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ. | ||
01:49 | ಇಲ್ಲಿ ಕೌಂಟ್ ಮತ್ತು orgname ಎಂಬ ಎರಡು ಸ್ಟಾಟಿಕ್ ವೇರಿಯೇಬಲ್ಗಳು ಇವೆ ಎಂಬುದನ್ನು ಗಮನಿಸಿ. | ||
01:54 | ಈಗ Source -> ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿ. | ||
02:00 | ರಚಿಸಿದ ಕೋಡ್ನಿಂದ super ಕೀವರ್ಡ್ ಅನ್ನು ಅಳಿಸಿ. | ||
02:04 | ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡಿದಾಗಲೆಲ್ಲ ಸಂದೇಶವೊಂದು ಪ್ರಿಂಟ್ (ಮುದ್ರಣ) ಆಗಲು ನಾವು ಇಷ್ಟಪಡುತ್ತೇವೆ. | ||
02:09 | “Constructor invoked” ಎಂದು ಪ್ರಿಂಟ್ ಮಾಡುವುದಕ್ಕಾಗಿ ಕನ್ಸ್ಟ್ರಕ್ಟರ್ ಒಳಗೆ ಈ ಕೋಡ್ ಅನ್ನು ಟೈಪ್ ಮಾಡಿ. | ||
02:15 | ಈಗ ವೇರಿಯೇಬಲ್ಗಳ ಮೌಲ್ಯಗಳನ್ನು ಪ್ರಿಂಟ್ ಮಾಡುವುದಕ್ಕಾಗಿ ನಾವು ಈ ಕ್ಲಾಸಿಗೆ showData( ) ವಿಧಾನವನ್ನು ಸೇರಿಸಲಿದ್ದೇವೆ. | ||
02:21 | ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ. | ||
02:23 | ಈಗ, ಕೌಂಟ್ ಮತ್ತು orgname ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡುವುದಕ್ಕಾಗಿ ನಾವು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸಲಿದ್ದೇವೆ. | ||
02:29 | ಈ ಕೋಡ್ ಅನ್ನು ಟೈಪ್ ಮಾಡಿ. | ||
02:32 | orgname ಮತ್ತು ಕೌಂಟ್ ವೇರಿಯೇಬಲ್ ಗಳು ಸ್ಟಾಟಿಕ್ ವೇರಿಯೇಬಲ್ ಗಳಾಗಿವೆ. | ||
02:36 | ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಇದ್ದು static ಕೀವರ್ಡ್ ನ ಉಪಸರ್ಗ ಹೊಂದಿರುವ ಕೋಡ್ಗಳ ಬ್ಲಾಕ್ ಸ್ಟಾಟಿಕ್ ಬ್ಲಾಕ್ ಆಗಿದೆ. | ||
02:42 | ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ನ ಮೌಲ್ಯಗಳನ್ನು 100 ಮತ್ತು IITM ಆಗಿ ಇನಿಶಿಯಲೈಸ್ ಮಾಡುತ್ತದೆ. | ||
02:51 | ಈ ಸ್ಟಾಟಿಕ್ ಬ್ಲಾಕ್ ಒಳಗೆ, “static block-1 is invoked” ಎಂದು ಪ್ರಿಂಟ್ ಮಾಡಲು ಈ ಕೋಡ್ ಅನ್ನು ಟೈಪ್ ಮಾಡಿ. | ||
02:58 | ಈಗ ನಾವು ಮೇನ್ ಮೆಥಡ್ ಅನ್ನು ಹೊಂದಿರುವ ಇನ್ನೊಂದು ಕ್ಲಾಸ್ ಅನ್ನು ಸೇರಿಸಲಿದ್ದೇವೆ. | ||
03:03 | ಇದಕ್ಕಾಗಿ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. | ||
03:11 | ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ. | ||
03:15 | main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು Ctrl+space ಒತ್ತಿ. | ||
03:21 | ನಾವೀಗ StudentEnroll ಕ್ಲಾಸ್ನ ಅಬ್ಜೆಕ್ಟ್ ಅನ್ನು ರಚಿಸಲಿದ್ದೇವೆ. | ||
03:25 | s1 ಅಬ್ಜೆಕ್ಟ್ ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. | ||
03:29 | ಈಗ ಮೌಲ್ಯಗಳನ್ನು ಪ್ರಿಂಟ್ ಮಾಡಲು showData ವಿಧಾನವನ್ನು ಇನ್ವೋಕ್ ಮಾಡೋಣ. | ||
03:33 | s1.showData() semicolon ಎಂದು ಟೈಪ್ ಮಾಡಿ. | ||
03:38 | ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. | ||
03:41 | ಕನ್ಸ್ಟ್ರಕ್ಟರ್ನ ಮೊದಲು ಸ್ಟಾಟಿಕ್ ಬ್ಲಾಕ್ ಅನ್ನು ಇನ್ವೋಕ್ ಮಾಡಿರುವುದನ್ನು ನಾವು ಗಮನಿಸಬಹುದು. | ||
03:46 | count ಮತ್ತು orgname ನ ಮೌಲ್ಯಗಳು, ಸ್ಟಾಟಿಕ್ ಬ್ಲಾಕ್ನಲ್ಲಿ ನಿರೂಪಿಸಿರುವಂತೆ ಇನಿಶಿಯಲೈಸ್ ಆಗುತ್ತವೆ. | ||
03:53 | ನಾವೀಗ StudentEnroll ಕ್ಲಾಸಿಗೆ ಹಿಂತಿರುಗೋಣ. | ||
03:57 | ಸ್ಟಾಟಿಕ್ ಬ್ಲಾಕ್ನ ಒಳಗೆ id ಯ ಮೌಲ್ಯವನ್ನು ಇನಿಶಿಯಲೈಸ್ ಮಾಡಿದರೆ ಏನಾಗುತ್ತದೆ ಎಂಬುದನ್ನು ನೋಡೋಣ. | ||
04:03 | ಸ್ಟಾಟಿಕ್ ಬ್ಲಾಕ್ ಒಳಗೆ id equals IT01 semicolon ಎಂದು ಟೈಪ್ ಮಾಡಿ. | ||
04:10 | ಇಲ್ಲಿ ಎರರ್ (ದೋಷ) ಉಂಟಾಗಿರುವುದನ್ನು ನಾವು ನೋಡಬಹುದು. | ||
04:13 | ಇನ್ಸ್ಟೆನ್ಸ್ ವೇರಿಯೇಬಲ್ ಅನ್ನು ಸ್ಟಾಟಿಕ್ ಬ್ಲಾಕ್ ಒಳಗೆ ಆಕ್ಸೆಸ್ ಮಾಡಲಾಗದು ಎಂಬುದನ್ನು ಇದು ತೋರಿಸುತ್ತದೆ. | ||
04:19 | ನಾವೀಗ ಈ ಸಾಲನ್ನು ಕಮೆಂಟ್ ಮಾಡೋಣ ಮತ್ತು ಮುಂದುವರಿಯೋಣ. | ||
04:25 | ಈಗ ಸ್ಲೈಡ್ಗಳಿಗೆ ಮರಳೋಣ. | ||
04:27 | ಕ್ಲಾಸ್ ಒಂದು ಅನೇಕ ಸ್ಟಾಟಿಕ್ ಬ್ಲಾಕ್ಗಳನ್ನು ಹೊಂದಿರಬಹುದು. | ||
04:30 | ಇಂತಹ ಸಂದರ್ಭದಲ್ಲಿ, ಅವು ಮೂಲ ಕೋಡ್ನಲ್ಲಿ ಕಾಣಿಸಿಕೊಳ್ಳುವ ಕ್ರಮಾಂಕದಲ್ಲಿ ಒಮ್ಮೆ ಮಾತ್ರ ಕರೆಯಲಾಗುತ್ತದೆ. | ||
04:37 | ಇದನ್ನು ದೃಢೀಕರಿಸಲು ಎಕ್ಲಿಪ್ಸ್ ಗೆ ಸಾಗೋಣ. | ||
04:40 | ಈಗ ಇರುವುದರ ಜೊತೆಗೆ ಇನ್ನೊಂದು ಸ್ಟಾಟಿಕ್ ಬ್ಲಾಕ್ ಅನ್ನು ಸೇರಿಸೋಣ. | ||
04:45 | ಈ ಕೋಡ್ ಅನ್ನು ಟೈಪ್ ಮಾಡಿ. | ||
04:47 | ಈ ಸ್ಟಾಟಿಕ್ ಬ್ಲಾಕ್, count ಮತ್ತು orgname ಗಳ ಮೌಲ್ಯವನ್ನು ಕ್ರಮವಾಗಿ 200 ಮತ್ತು IITB ಆಗಿ ಇನಿಶಿಯಲೈಸ್ ಮಾಡುತ್ತದೆ. | ||
04:57 | ಈ ಸ್ಟಾಟಿಕ್ ಬ್ಲಾಕ್ ಒಳಗೆ, ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ. | ||
05:01 | ನಾವೀಗ Demo ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ. | ||
05:04 | ಈ ಔಟ್ಪುಟ್ನಿಂದ, ಎರಡನೇ ಸ್ಟಾಟಿಕ್ ಬ್ಲಾಕ್ ಅನ್ನು ಮೊದಲಿನ ನಂತರ ಇನ್ವೋಕ್ ಮಾಡಲಾಗಿದೆ ಎಂದು ನಾವು ದೃಢಪಡಿಸಬಹುದು. | ||
05:10 | count ಮತ್ತು orgname ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಎರಡನೇ ಸ್ಟಾಟಿಕ್ ಬ್ಲಾಕ್ನ ಮೂಲಕ ಪರಿಷ್ಕರಿಸಬಹುದು. | ||
05:18 | ಅವೆಂದರೆ ಕ್ರಮವಾಗಿ 200 ಮತ್ತು IITB. | ||
05:22 | ಈಗ ಸಂಕ್ಷೇಪಿಸೋಣ. | ||
05:24 | ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಟಾಟಿಕ್ ಬ್ಲಾಕ್ ಎಂದರೇನು, ಸ್ಟಾಟಿಕ್ ಬ್ಲಾಕ್ ಅನ್ನು ಹೇಗೆ ಘೋಷಿಸುವುದು ಮತ್ತು ನಿರೂಪಿಸುವುದು ಮತ್ತು ಸ್ಟಾಟಿಕ್ ಬ್ಲಾಕ್ ಗಳನ್ನು ಹೇಗೆ ಇನ್ವೋಕ್ ಮಾಡಲಾಗುತ್ತದೆ ಮತ್ತು ಎಕ್ಸಿಕ್ಯೂಟ್ ಮಾಡಲಾಗುತ್ತದೆ ಎಂಬುದನ್ನು ಕಲಿತೆವು. | ||
05:37 | ಅಸೈನ್ಮೆಂಟ್ಗಾಗಿ, ಈ ಅಸೈನ್ಮೆಂಟ್, ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ. | ||
05:44 | ನೀವು ಸ್ಟಾಟಿಕ್ ಮೆಥಡ್ಗಳ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿ. | ||
05:48 | ಈ ಹಿಂದಿನಂತೆಯೇ, ಈ ಸ್ಲೈಡ್ನಲ್ಲಿ ಸೂಚಿಸಿರುವಂತೆ CarService ಕ್ಲಾಸ್ ಅನ್ನು ವಿನ್ಯಾಸಗೊಳಿಸಿ. | ||
05:54 | ಇನ್ಸ್ಟೆನ್ಸ್ ವೇರಿಯೇಬಲ್ಗಳು ಮತ್ತು ಸ್ಟಾಟಿಕ್ ವೇರಿಯೇಬಲ್ಗಳನ್ನು ಗುರುತಿಸಿ. | ||
05:58 | ಇನ್ಸ್ಟೆನ್ಸ್ ವೇರಿಯೇಬಲ್ಗಳಿಗೆ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಕನ್ಸ್ಟ್ರಕ್ಟರ್ ಒಂದನ್ನು ನಿರೂಪಿಸಿ. | ||
06:03 | ಸ್ಟಾಟಿಕ್ ವೇರಿಯೇಬಲ್ಗಳ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಸ್ಟಾಟಿಕ್ ಬ್ಲಾಕ್ ಅನ್ನು ನಿರೂಪಿಸಿ. | ||
06:08 | ಜೊತೆಗೆ ಮೇನ್ ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. | ||
06:12 | ಮೇನ್ ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು show( ) ಮೆಥಡ್ ಅನ್ನು ಇನ್ವೋಕ್ ಮಾಡಿ. | 06:19 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. |
06:24 | ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. | ||
06:27 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. | ||
06:35 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. | ||
06:39 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
06:46 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. | ||
06:50 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | ||
06:58 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |