LibreOffice-Suite-Base/C2/Add-Push-Button-to-a-form/Kannada

From Script | Spoken-Tutorial
Revision as of 16:07, 24 March 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ‘ಲಿಬರ್‌ ಆಫಿಸ್‌ ಬೇಸ್’ ನ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ.
00:03 ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಗೆ 'ಪುಶ್ ಬಟನ್' ಅನ್ನು ಸೇರಿಸುವ ಬಗ್ಗೆ ಕಲಿಯುವೆವು.
00:10 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು, ಫಾರ್ಮ್ ಗೆ 'list box form control' ಸೇರಿಸುವುದನ್ನು ಕಲಿತೆವು.
00:17 ಈ ಟ್ಯುಟೋರಿಯಲ್ ನಲ್ಲಿ ಈಗ, ಫಾರ್ಮ್ ಗೆ 'ಪುಶ್ ಬಟನ್' ಗಳನ್ನು ಸೇರಿಸುವುದನ್ನು ಕಲಿಯುವೆವು.
00:24 ‘ಲಿಬರ್‌ ಆಫಿಸ್‌ ಬೇಸ್’ ಪ್ರೋಗ್ರಾಂ ಈಗಾಗಲೇ ತೆರೆದಿರದಿದ್ದರೆ ನಾವು ಅದನ್ನು ಮೊದಲು ತೆರೆಯೋಣ.
00:36 ಮತ್ತು ನಮ್ಮ 'Library' ಡೇಟಾಬೇಸ್ ತೆರೆಯೋಣ. ಈಗಾಗಲೇ ಇರುವ ಡೇಟಾಬೇಸ್ ಅನ್ನು ತೆರೆಯುವುದನ್ನು ನೀವು ಬಹುಶಃ ಕಲಿತಿರಬೇಕು.
00:45 File ಮೆನುವಿನ ಅಡಿಯಲ್ಲಿ 'Open' ಮೇಲೆ ಕ್ಲಿಕ್ ಮಾಡಿ ಮತ್ತು 'Library' ಡೇಟಾಬೇಸ್ ಆರಿಸಿ.
00:52 ನಾವೀಗ 'Library' ಡೇಟಾಬೇಸ್ ನಲ್ಲಿದ್ದೇವೆ.
00:56 ನಾವು ಕಳೆದ ಟ್ಯುಟೋರಿಯಲ್ ನಲ್ಲಿ ಬಳಸಿದ 'Books Issued to Members' ಎಂಬ ಫಾರ್ಮ್ ಅನ್ನು ತೆರೆಯೋಣ.
01:04 ಇದನ್ನು ಮಾಡಲು, ನಾವು ಎಡ ಪ್ಯಾನಲ್ ನಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ.
01:09 ಮತ್ತು ಬಲ ಪ್ಯಾನಲ್ ನಲ್ಲಿರುವ 'Books Issued to Members' ಫಾರ್ಮ್ ಮೇಲೆ ರೈಟ್ ಕ್ಲಿಕ್ ಮಾಡಿ.
01:16 ಈಗ 'Edit' ಮೇಲೆ ಕ್ಲಿಕ್ ಮಾಡಿ.
01:19 ನಾವೀಗ Form Design ವಿಂಡೋದಲ್ಲಿದ್ದೇವೆ.
01:23 ನಮ್ಮ 'ಫಾರ್ಮ್'ಗೆ 'ಪುಶ್ ಬಟನ್' ಗಳನ್ನು ಸೇರಿಸುವ ಮೊದಲು, Member name ನ ಎರಡನೇ list box ಗೆ ಸ್ವಲ್ಪ ದಾರಿ ಮಾಡೋಣ.
01:34 ನೆನಪಿಡಿ, ಕಳೆದ ಟ್ಯುಟೋರಿಯಲ್ ನಲ್ಲಿ ನಮಗೆ ಎರಡನೇ ಲಿಸ್ಟ್ ಬಾಕ್ಸ್ ಅನ್ನು ರಚಿಸುವ ಅಸೈನ್ಮೆಂಟ್ ಇತ್ತು.
01:41 ಮೊದಲಿಗೆ, 'Member Name' ಲೇಬಲ್ ನ ಬಲಭಾಗದಲ್ಲಿರುವ ಟೆಕ್ಸ್ಟ್ ಬಾಕ್ಸ್ ಅನ್ನು
01:50 ಅದರ ಮೇಲೆ ರೈಟ್-ಕ್ಲಿಕ್ ಮಾಡಿ, ನಂತರ 'Cut' ಮೇಲೆ ಕ್ಲಿಕ್ ಮಾಡಿ ತೆಗೆದುಬಿಡೋಣ.
01:57 ಟೆಕ್ಸ್ಟ್-ಬಾಕ್ಸ್ ಅನ್ನು ಡಿಲೀಟ್ ಮಾಡಲಾಗಿದೆ.
02:00 ನಂತರ, 'ಫಾರ್ಮ್ ಎಲಿಮೆಂಟ್' ಗಳನ್ನು ಹೊಂದಿಸೋಣ.
02:04 ಲಿಸ್ಟ್-ಬಾಕ್ಸ್ ಗಳಿಗೆ ಟೆಕ್ಸ್ಟ್ ಬಾಕ್ಸ್ ಗಳಿಗಿಂತ ಹೆಚ್ಚು ಸ್ಥಳ ಬೇಕಿರುವುದರಿಂದ, ನಾವು ಫಾರ್ಮ್ ಎಲಿಮೆಂಟ್ಸ್ ಅನ್ನು ಫಾರ್ಮ್ ನಲ್ಲಿ ಇನ್ನಷ್ಟು ಕೆಳಕ್ಕೆ ತಳ್ಳೋಣ.
02:15 ನಾವು ಈ ರೀತಿ ಮಾಡಲಿದ್ದೇವೆ.
02:17 ಮೊದಲಿಗೆ 'Book title' ಲೇಬಲ್ ಕೆಳಗೆ ಇರುವ ಎಲ್ಲಾ ಫಾರ್ಮ್ ಎಲಿಮೆಂಟ್ ಗಳನ್ನು ಆಯ್ಕೆಮಾಡೋಣ.
02:26 ಇದಕ್ಕಾಗಿ ನಾವು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ವಿಧಾನವನ್ನು ಬಳಸಲಿದ್ದೇವೆ.
02:32 ನಂತರ, ನಾವು ಆಯ್ದ ಭಾಗದ ಮೇಲೆ ಕ್ಲಿಕ್ ಮಾಡೋಣ ಮತ್ತು ಇದನ್ನು ಲಂಬವಾಗಿ ಕೆಳಗೆ ಎಳೆಯೋಣ.
02:39 ಹೀಗೆ 'Book Title' ಲೇಬಲ್ ಪಕ್ಕದಲ್ಲಿಯ ಮೊದಲ ಲಿಸ್ಟ್-ಬಾಕ್ಸ್ ಗೆ ಸಾಕಷ್ಟು ಸ್ಥಳಾವಕಾಶ ಇರಬೇಕು.
02:48 ಈಗ, 'Member Name' ಲೇಬಲ್ ಗಾಗಿಯೂ ಹೀಗೆಯೇ ಮಾಡೋಣ.
03:05 ಈಗ, 'Member Name' ಲೇಬಲ್ ನ ಎಡಬದಿಯಲ್ಲಿರುವ ಎರಡನೇ ಲಿಸ್ಟ್ ಬಾಕ್ಸ್ ಅನ್ನು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡೋಣ.
03:14 ಮತ್ತು ಉಳಿದ ಫಾರ್ಮ್ ಕಂಟ್ರೋಲ್ಸ್ ಜೊತೆ ಚೆನ್ನಾಗಿ ಹೊಂದಿಕೆಯಾಗುವಂತೆ ಇದರ ಬಲಕ್ಕೆ ಸರಿಸೋಣ.
03:22 ಸರಿ, ಈಗ 'Control, S' ಕೀಬೋರ್ಡ್ ಶಾರ್ಟ್ಕಟ್ ಅನ್ನು ಬಳಸಿ, ನಾವು 'ಫಾರ್ಮ್' ಮೇಲೆ ಈತನಕ ಮಾಡಿದ ಕೆಲಸವನ್ನು ಫಾರ್ಮ್ 'save' ಮಾಡೋಣ.
03:32 ಈಗ, ನಾವು 'Push buttons' ಅನ್ನು ನಮ್ಮ ಫಾರ್ಮ್ ಗೆ ಸೇರಿಸಲು ತಯಾರಾಗಿದ್ದೇವೆ.
03:39 ಪುಶ್ ಬಟನ್, ಫಾರ್ಮ್ ಕಂಟ್ರೋಲ್ ನ ಇನ್ನೊಂದು ಉದಾಹರಣೆಯಾಗಿದೆ.
03:44 ನಮಗೆ 'OK, Cancel, Next' ಮತ್ತು 'Finish' ಬಟನ್ ಗಳು ಪರಿಚಿತ; ಇವು ಪುಶ್ ಬಟನ್ ಗಳ ಉದಾಹರಣೆಗಳಾಗಿವೆ.
03:56 'Base' ಮೂಲಕ, ನಾವು ಪುಶ್ ಬಟನ್ ಗಳನ್ನು ನಮ್ಮ ಫಾರ್ಮ್ ಗೆ ಸೇರಿಸಬಹುದು ಮತ್ತು ಕ್ಲಿಕ್ ಮಾಡಿದಾಗ ನಿರ್ದಿಷ್ಟ ಕ್ರಿಯೆಗಳನ್ನು ಮಾಡಲು Base ಗೆ ಸೂಚನೆ ನೀಡಬಹುದು.
04:07 'Save' ಅಥವಾ 'Undo' ಅಥವಾ 'Delete' ಗಳು ಸಹ ಕೆಲ ಉದಾಹರಣೆಗಳಾಗಿವೆ.
04:14 ಇದು ಹೇಗೆ ಎಂದು ನೋಡೋಣ.
04:17 ನಾವೀಗ, ಇಲ್ಲಿ ಚಿತ್ರದಲ್ಲಿ ತೋರಿಸಿರುವಂತೆ, ಇತರ ಫಾರ್ಮ್ ಎಲಿಮೆಂಟ್ ಗಳ ಕೆಳಗಡೆ, ನಮ್ಮ ಫಾರ್ಮ್ ಗೆ ನಾಲ್ಕು ಪುಶ್ ಬಟನ್ ಗಳನ್ನು ಸೇರಿಸೋಣ.
04:30 ಇದನ್ನು ಮಾಡಲು, ನಾವು ನಮ್ಮ 'Form Design' ವಿಂಡೋ ಗೆ ಮರಳೋಣ.
04:35 'ಫಾರ್ಮ್ ಕಂಟ್ರೋಲ್' ಟೂಲ್ ಬಾರ್ ನಲ್ಲಿ, 'Push button' ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡೋಣ.
04:43 ಈ ಐಕಾನ್, 'OK' ಯನ್ನು ಹೊಂದಿದ್ದು, ಒಂದು ಬಟನ್ ನಂತೆ ಕಾಣಿಸುತ್ತದೆ.
04:50 ಮೌಸ್-ಪಾಯಿಂಟರ್ ಒಂದು ಅಧಿಕ ಚಿಹ್ನೆಯಂತೆ ಕಾಣುವುದನ್ನು ಗಮನಿಸಿ.
04:57 ಈಗ ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ, ನಮ್ಮ ಮೊದಲ ಬಟನ್ ಅನ್ನು, ಫಾರ್ಮ್ ನಲ್ಲಿ ಇತರ ಎಲ್ಲಾ ಎಲಿಮೆಂಟ್ ಗಳ ಕೆಳಗೆ, ಫಾರ್ಮ್ ನ ಎಡಭಾಗಕ್ಕೆ ಎಳೆಯೋಣ.
05:10 ಇದನ್ನು 'ರಿ-ಸೈಜ್' ಮಾಡಲಿದ್ದೇವೆ.
05:14 ಈಗ ನಾವು ಹೀಗೆಯೇ ಇನ್ನು ಮೂರು ಸಲ ಪುನರಾವರ್ತಿಸೋಣ.
05:27 ನಾವೀಗ, ಒಂದೇ ಸಾಲಿನಲ್ಲಿರುವ ಇನ್ನೂ ಮೂರು ಬಟನ್ ಗಳನ್ನು ಹೊಂದಿದ್ದೇವೆ.
05:35 ನಾವು 'ಫಾರ್ಮ್' ನಲ್ಲಿ ಪುಶ್-ಬಟನ್ ಗಳನ್ನು ಎಳೆದಿದ್ದೇವೆ. ಈಗ ಅವುಗಳ ಲೇಬಲ್ ಗಳನ್ನು ಬದಲಾಯಿಸೋಣ.
05:43 ಇದನ್ನು ಮಾಡಲು, ಮೊದಲ ಬಟನ್ ಮೇಲೆ ಡಬಲ್-ಕ್ಲಿಕ್ ಮಾಡಿ.
05:49 ನಾವೀಗ 'Properties' ವಿಂಡೋಅನ್ನು ನೋಡುತ್ತಿದ್ದೇವೆ. ಇಲ್ಲಿ ನಾವು, 'Label' ನಲ್ಲಿ 'Save Record' ಎಂದು ಟೈಪ್ ಮಾಡೋಣ.
05:59 ಈಗ, ಫಾರ್ಮ್ ನಲ್ಲಿ ಎರಡನೇ ಬಟನ್ ಮೇಲೆ ಕ್ಲಿಕ್ ಮಾಡೋಣ.
06:06 ಮತ್ತು 'Properties window' ನಲ್ಲಿ, 'Label' ನಲ್ಲಿ 'Undo Changes' ಎಂದು ಟೈಪ್ ಮಾಡಲಿದ್ದೇವೆ.
06:15 ಮೂರನೇ ಮತ್ತು ನಾಲ್ಕನೇ ಬಟನ್ ಗಳಿಗಾಗಿ, ನಾವು ಕ್ರಮವಾಗಿ 'Delete Record' ಮತ್ತು
06:25 'New Record' ಎಂದು ಟೈಪ್ ಮಾಡೋಣ.
06:31 ಈಗ, ಅವುಗಳ ಕೆಲಸಗಳನ್ನು ನಿರೂಪಿಸೋಣ.
06:37 ಇದನ್ನು ಮಾಡಲು, 'Save Record' ಬಟನ್ ಮೇಲೆ ಕ್ಲಿಕ್ ಮಾಡೋಣ.
06:43 ಮತ್ತು 'Properties window' ನಲ್ಲಿ, 'Action' ಲೇಬಲ್ ಕಾಣುವ ತನಕ ಕೆಳಕ್ಕೆ ಸ್ಕ್ರೋಲ್ ಮಾಡೋಣ.
06:51 ಇಲ್ಲಿ, ನಾವು ಡ್ರಾಪ್ ಡೌನ್ ಲಿಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ನಂತರ 'Save record' ಮೇಲೆ ಕ್ಲಿಕ್ ಮಾಡುವೆವು.
06:59 ಇನ್ನುಳಿದ ಮೂರು ಬಟನ್ ಗಳಿಗಾಗಿ, ಇದೇ ಕ್ರಮವನ್ನು ಅನುಸರಿಸೋಣ.
07:05 'Undo Changes' ಬಟನ್ ಗಾಗಿ, ನಾವು 'Undo data entry' ಎಂಬ Action ಅನ್ನು ಆರಿಸುವೆವು.
07:12 'Delete Record' ಬಟನ್ ಗಾಗಿ, ನಾವು 'Delete Record' ಎಂಬ Action ಅನ್ನು ಆರಿಸುವೆವು.
07:18 ಮತ್ತು 'New Record' ಬಟನ್ ಗಾಗಿ, ನಾವು 'New record' ಎಂಬ Action ಅನ್ನು ಆರಿಸುವೆವು.
07:25 ಹೀಗೆ, ನಾವೀಗ 'ಪುಶ್ ಬಟನ್' ಗಳನ್ನು ಸೇರಿಸಿದ್ದೇವೆ.
07:29 ಸರಿ, ನಾವೀಗ 'Control, S' ಕೀಬೋರ್ಡ್ ಶಾರ್ಟ್ಕಟ್ ಅನ್ನು ಬಳಸಿ, ನಮ್ಮ 'ಫಾರ್ಮ್' ಅನ್ನು 'ಸೇವ್' ಮಾಡೋಣ ಮತ್ತು ಈ 'ವಿಂಡೋ' ಅನ್ನು ಮುಚ್ಚೋಣ.
07:40 ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ನಮ್ಮ ಫಾರ್ಮ್ ಗೆ ಇನ್ನೂ ಮೂರು ಸರಳ ಮಾರ್ಪಾಡುಗಳನ್ನು ಮಾಡಲು ಕಲಿಯುವೆವು
07:47 ಆಗ ನಾವು ಫಾರ್ಮ್ ಅನ್ನು ಡೇಟಾ ಎಂಟ್ರಿ ಮತ್ತು ಡೇಟಾ ಅಪ್ಡೇಟ್ ಗಳಿಗಾಗಿ ಬಳಸಬಹುದು.
07:54 ಉದಾಹರಣೆಗೆ, ಗ್ರಂಥಾಲಯದ ಸದಸ್ಯನೊಬ್ಬ ಪುಸ್ತಕವೊಂದನ್ನು ಹಿಂದಿರುಗಿಸಿದಾಗ, ಈ 'ಫಾರ್ಮ್' ಅನ್ನು ಬಳಸಿ, ಡೇಟಾಬೇಸ್ ನಲ್ಲಿ ಈ ಮಾಹಿತಿಯನ್ನು ನಾವು ಅಪ್ಡೇಟ್ ಮಾಡಬಹುದು.
08:06 ಇಲ್ಲೊಂದು ಅಸೈನ್ ಮೆಂಟ್ ಇದೆ:
08:08 ಫಾರ್ಮ್ ನಲ್ಲಿ, ನಾಲ್ಕನೆಯ ಪುಶ್ ಬಟನ್ ಪಕ್ಕದಲ್ಲಿ, ಐದನೇಯ ಪುಶ್ ಬಟನ್ ಅನ್ನು ಫಾರ್ಮ್ ಗೆ ಸೇರಿಸಿ. ಇದನ್ನು ಬಳಸಿದಾಗ, ಇದು ಫಾರ್ಮ್ ಅನ್ನು 'ರಿಫ್ರೆಶ್' ಮಾಡಬೇಕು.
08:18 ನಂತರದ ಕೆಳಗಿನ ಸಾಲಿನಲ್ಲಿ 4 ಕಿರಿದಾದ ಪುಶ್ ಬಟನ್ ಗಳನ್ನು ಸೇರಿಸಿ. ದಾಖಲೆಗಳಲ್ಲಿ ನ್ಯಾವಿಗೇಟ್ ಮಾಡಲು ಈ ಬಟನ್ ಗಳು ನಮಗೆ ಸಹಾಯ ಮಾಡಬೇಕು.
08:30 ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿಯ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:35 ಸಂಕ್ಷಿಪ್ತವಾಗಿ, ಫಾರ್ಮ್ ಗೆ ಪುಶ್-ಬಟನ್ ಅನ್ನು ಸೇರಿಸುವುದನ್ನು ನಾವು ಕಲಿತೆವು.
08:40 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ.
08:52 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.
08:57 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
09:02 ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14