LibreOffice-Suite-Base/C3/Create-simple-queries-in-SQL-View/Kannada
From Script | Spoken-Tutorial
Revision as of 14:52, 11 March 2020 by Sandhya.np14 (Talk | contribs)
Time | Narration |
00:02 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | ‘‘SQL ವ್ಯೂ’ ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು ಮತ್ತು ಸರಳವಾದ SQL ಅನ್ನುಬರೆಯಲು, |
00:16 | SELECT, FROM ಮತ್ತು WHERE ಕ್ಲಾಸ್ ಗಳನ್ನು ಬಳಸಲು |
00:20 | ಮತ್ತು ಫೀಲ್ಡ್ ಗಳು ಹಾಗೂ ಟೇಬಲ್ ಗಳನ್ನು ಹೆಸರಿಸಲು ಅಪ್ಪರ್, ಲೋವರ್ ಅಥವಾ ಮಿಶ್ರ ಕೇಸ್ ಗಳನ್ನು ಆಯ್ಕೆಮಾಡಲು ಕಲಿಯುವೆವು. |
00:27 | SQL View ನಲ್ಲಿ ಕ್ವೆರಿಗಳನ್ನು ರಚಿಸಲು ಬೇಸ್ ಅನ್ನು ಬಳಸುವ ಮೊದಲು, ಲಿಬರ್ ಆಫಿಸ್ ಬೇಸ್ ಕುರಿತು ನೋಡೋಣ. |
00:35 | ಬೇಸ್, HSQL ಡೇಟಾಬೇಸ್ ಎಂಜಿನ್ ನಲ್ಲಿ ರನ್ ಆಗುತ್ತದೆ. |
00:41 | ಇದು, ಜಾವಾದಲ್ಲಿ ಬರೆದಿರುವ ಓಪನ್-ಸೋರ್ಸ್ ಡೇಟಾಬೇಸ್ ಎಂಜಿನ್ ಸಾಫ್ಟ್‌ವೇರ್ ಆಗಿದೆ. HSQLDB ಕುರಿತ ಹೆಚ್ಚಿನ ಮಾಹಿತಿಗಾಗಿ http://hsqldb.org ಲಿಂಕ್ ಗೆ ಹೋಗಿ. |
01:02 | ಸರಿ, ನಾವೀಗ SQL ಕುರಿತು ಕಲಿಯೋಣ. |
01:06 | ‘SQL’ ಎಂದರೆ 'Structured Query Language'. ಇದು, ಡೇಟಾಬೇಸ್ ಗಳನ್ನು ಆಕ್ಸೆಸ್ ಮಾಡಲು ಮತ್ತು ಮ್ಯಾನಿಪುಲೇಟ್ ಮಾಡಲು ಇರುವ ಪ್ರಮಾಣಿತ ಭಾಷೆ ಆಗಿದ್ದು |
01:17 | ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕರಿಸಲಾದ ANSI ಸ್ಟ್ಯಾಂಡರ್ಡ್ ಆಗಿದೆ. |
01:23 | ಆದ್ದರಿಂದ ಇದನ್ನು ವಿವಿಧ 'ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್' (Database Management Systems) ಅಥವಾ 'DBMS' ನಲ್ಲಿ ಬಳಸಲಾಗುತ್ತದೆ. |
01:31 | ನಮ್ಮದೇ ಆದ ‘LibreOffice Base, MySQL, Microsoft SQL Server, Microsoft Access, Oracle’ ಮತ್ತು ‘DB2’ ಕೆಲವು ಉದಾಹರಣೆಗಳಾಗಿವೆ. |
01:47 | ಡೇಟಾಬೇಸ್ ನಿಂದ ಡೇಟಾಅನ್ನು ಪಡೆದುಕೊಳ್ಳಲು, SQL ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದನ್ನು ಡೇಟಾಬೇಸ್ ನಲ್ಲಿ ಕ್ವೆರಿ ಮಾಡುವುದು ಎಂದು ಸಹ ಕರೆಯಲಾಗುತ್ತದೆ. |
01:58 | ಡೇಟಾಬೇಸ್ ನಲ್ಲಿ ಡೇಟಾಅನ್ನು ಸೇರಿಸಲು, ಅದನ್ನು ನವೀಕರಿಸಲು (ಅಪ್ಡೇಟ್) ಅಥವಾ ತೆಗೆದುಹಾಕಲು (ಡಿಲೀಟ್) SQL ಅನ್ನು ಬಳಸಲಾಗುತ್ತದೆ. |
02:09 | ನಮ್ಮ ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ಸುಲಭವಾದ ವಿಜಾರ್ಡ್ ಗಳನ್ನು ಮತ್ತು ಡಿಸೈನ್ ಮಾಡುವ ವಿಂಡೋಗಳನ್ನು ಬಳಸಿ, |
02:16 | ಬೇಸ್ ಅನ್ನು ಬಳಸುವ ಮೂಲಕ ನಾವು ಈ ಎಲ್ಲಾ ಕಾರ್ಯಗಳನ್ನು ಮಾಡಿದ್ದೇವೆ. |
02:22 | ಆಧರಿತ ಕ್ವೆರಿ ಲ್ಯಾಂಗ್ವೇಜ್ ಅನ್ನು ತಿಳಿದಿದ್ದರೆ, ನಮಗೆ ಡೇಟಾಬೇಸ್ ಅನ್ನು ಕ್ವೆರಿ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಡೇಟಾಅನ್ನು ಮಾರ್ಪಡಿಸಲು ಮಾತ್ರವಲ್ಲ, ಡೇಟಾಬೇಸ್ ಮತ್ತು ಟೇಬಲ್ ರಚನೆಗಳನ್ನು ಮಾರ್ಪಡಿಸಲು ಸಹ SQL ಅನ್ನು ಬಳಸಬಹುದು. |
02:43 | ನಮ್ಮ ಟ್ಯುಟೋರಿಯಲ್ ನಲ್ಲಿ, SQL ಕುರಿತು ಎಲ್ಲವನ್ನೂ ವಿವರಿಸಿಲ್ಲ. ಆದ್ದರಿಂದ ಇಲ್ಲಿ ಕೆಲವು ಉಪಯುಕ್ತ ಟ್ಯುಟೋರಿಯಲ್ ಗಳು ಮತ್ತು ಅವುಗಳ ವೆಬ್ಸೈಟ್ ಗಳನ್ನು ಕೊಡಲಾಗಿದೆ. <pause>. |
02:59 | ಬಳಕೆದಾರರಿಗಾಗಿ HSQLDB ತನ್ನದೇ ಆದ ಗೈಡ್ ಗಳನ್ನು ಹೊಂದಿದೆ. ಅವುಗಳನ್ನು ಆನ್ಲೈನ್ ನಲ್ಲಿ ನೋಡಬಹುದು ಅಥವಾ ಡೌನ್ಲೋಡ್ ಮಾಡಿಕೊಂಡು ಪಿ.ಡಿ.ಎಫ್ ಫೈಲ್ ಎಂದು ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಮಾಡಬಹುದು. |
03:14 | ಸರಿ, ನಾವೀಗ ಒಂದಷ್ಟು SQL ಕಲಿಯೋಣ. ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್ ಉದಾಹರಣೆಯನ್ನು ನೋಡೋಣ. |
03:23 | ʻLibraryʼ ಡೇಟಾಬೇಸ್ ಅನ್ನು ತೆರೆಯೋಣ. ಎಡ ಪ್ಯಾನಲ್ ನಲ್ಲಿ, ‘Queries’ ಲಿಸ್ಟ್ ಮೇಲೆ ಕ್ಲಿಕ್ ಮಾಡೋಣ. |
03:34 | ‘Create Query in SQL View’ ಮೇಲೆ ಕ್ಲಿಕ್ ಮಾಡೋಣ. ನಾವು ‘Query Design’ ಎಂಬ ಒಂದು ಖಾಲಿ ವಿಂಡೋಅನ್ನು ನೋಡುತ್ತೇವೆ. |
03:46 | ಇಲ್ಲಿಯೇ ನಾವು, SQL ನಲ್ಲಿ ನಮ್ಮ ಕ್ವೆರಿಗಳನ್ನು ಟೈಪ್ ಮಾಡಲಿದ್ದೇವೆ. |
03:51 | ನಮ್ಮ ಮೊದಲನೆಯ ಕ್ವೆರಿಯನ್ನು ಈಗ ಬರೆಯೋಣ. ಅದು ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳ ಕುರಿತು ಮಾಹಿತಿ ಪಡೆಯಲು ಆಗಿದೆ. ಬಹಳ ಸುಲಭವಾಗಿದೆ. |
04:02 | ಯಾವುದೇ ಮಾಹಿತಿಯನ್ನು ಮರಳಿ ಪಡೆಯಲು ( retrieval), SELECT ಕೀವರ್ಡ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ, ನಮ್ಮ ಕ್ವೆರಿಯನ್ನು ಈ ರೀತಿ ಬರೆಯುವೆವು - |
04:10 | ‘SELECT * FROM Books’ (ಸೆಲೆಕ್ಟ್ ಆಸ್ಟೆರಿಸ್ಕ್ ಫ್ರಾಮ್ ಬುಕ್ಸ್). |
04:15 | ಇಲ್ಲಿ Books, ಟೇಬಲ್ ನ ಹೆಸರು ಆಗಿದೆ. ಇದರಲ್ಲಿ 'B' ಕ್ಯಾಪಿಟಲ್ ಆಗಿರುವುದನ್ನು ಗಮನಿಸಿ. |
04:23 | ನಾವು ಹಿಂದೆ ಬಳಸಿದ ಟೇಬಲ್ ಅಥವಾ ಕಾಲಂ ಹೆಸರುಗಳನ್ನೇ ಇಲ್ಲಿ ಬಳಸುವೆವು. |
04:29 | ಮತ್ತು '*' (ಆಸ್ಟೆರಿಸ್ಕ್) ವೈಲ್ಡ್-ಕಾರ್ಡ್ ಆಗಿದೆ. ಇಲ್ಲಿ ಇದರ ಅರ್ಥ, ‘Books’ ಟೇಬಲ್ ನಿಂದ ಎಲ್ಲಾ ಫೀಲ್ಡ್ ಗಳು ಅಥವಾ ಕಾಲಂಗಳನ್ನು ಪಡೆಯುವುದು ಎಂದಾಗುತ್ತದೆ. |
04:39 | ಈಗ ಇದನ್ನು ಎಕ್ಸೀಕ್ಯೂಟ್ ಅಥವಾ ರನ್ ಮಾಡೋಣ. ‘Edit’ ಮೆನು ಮೇಲೆ, ನಂತರ ‘Run Query’ ಮೇಲೆ ಕ್ಲಿಕ್ ಮಾಡಿ. |
04:48 | ಮೇಲ್ಭಾಗದಲ್ಲಿ, ಪುಸ್ತಕಗಳ ರೆಕಾರ್ಡ್ ಗಳ ಪಟ್ಟಿಇರುವ ಒಂದು ಪ್ಯಾನಲ್ ಅನ್ನು ನಾವು ನೋಡುತ್ತೇವೆ. |
04:53 | ಈ ಕ್ವೆರಿ ಅಥವಾ ನಾವು ಬರೆಯುವ ಯಾವುದೇ ಕ್ವೆರಿಯನ್ನು ಸೇವ್ ಮಾಡಬಹುದು ಮತ್ತು ಅವುಗಳಿಗೆ ವಿವರಣಾತ್ಮಕ ಹೆಸರುಗಳನ್ನು ಕೊಡಬಹುದು. |
05:00 | ಇದು ನಮ್ಮ ಮೊದಲ ಸರಳ ಕ್ವೆರಿಯಾಗಿದೆ. ಇಲ್ಲಿ ಕೆಲವು ಸಲಹೆಗಳಿವೆ: |
05:06 | HSQLDB ನ ಡೇಟಾಬೇಸ್ ಅಬ್ಜೆಕ್ಟ್ ನ ಹೆಸರುಗಳಾದ ಟೇಬಲ್ ಮತ್ತು ಕಾಲಂಗಳ ಹೆಸರುಗಳು ಕೇಸ್-ಸೆನ್ಸಿಟಿವ್ ಆಗಿವೆ. |
05:17 | ಅಂದರೆ, ಕ್ಯಾಪಿಟಲ್ 'B' ಇರುವ “Books” ಎಂಬ ಟೇಬಲ್ ಹೆಸರು ಮತ್ತು ಸಣ್ಣ 'b' ಇರುವ “books” ಒಂದೇ ಅಲ್ಲ. |
05:27 | ಆದರೆ ನಮ್ಮ ಅನುಕೂಲಕ್ಕಾಗಿ, ನಾವು ಎಲ್ಲಾ ದೊಡ್ಡಕ್ಷರ (ಅಪ್ಪರ್-ಕೇಸ್) ಅಥವಾ ಎಲ್ಲಾ ಸಣ್ಣಕ್ಷರ (ಲೋವರ್-ಕೇಸ್) ಗಳನ್ನು ಬಳಸಬಹುದು. |
05:34 | ಉದಾಹರಣೆಗೆ, ದೊಡ್ಡಕ್ಷರಗಳಲ್ಲಿ 'BOOKS' ಅಥವಾ ಸಣ್ಣ ಅಕ್ಷರಗಳಲ್ಲಿ 'members' ಇತ್ಯಾದಿ. |
05:44 | ಆದರೆ ಮಿಶ್ರ ಕೇಸ್ ಗಳನ್ನು ಬಳಸಿದರೆ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಉದಾಹರಣೆಗೆ: 'BooksIssued' ನಲ್ಲಿ 'B' ಮತ್ತು 'I' ದೊಡ್ಡಕ್ಷರಗಳಾಗಿವೆ. |
05:57 | ಅಥವಾ, 'ReturnDate' ನಲ್ಲಿ 'R' ಮತ್ತು 'D' ದೊಡ್ಡಕ್ಷರಗಳಾಗಿವೆ. |
06:03 | ಹೀಗೆ, ಟೇಬಲ್ ಹೆಸರುಗಳು ಮತ್ತು ಕಾಲಂ ಹೆಸರುಗಳನ್ನು ಅವುಗಳನ್ನು ರಚಿಸಿದ ರೀತಿಯಲ್ಲೇ ಬಳಸಬೇಕು. |
06:11 | SELECT ನಂತಹ SQL ಕೀವರ್ಡ್ ಗಳಿಗೆ, ನಾವು ಯಾವುದೇ ಕೇಸ್ ಅಥವಾ ಮಿಶ್ರ ಕೇಸ್ ಗಳನ್ನು ಬಳಸಬಹುದು. ಆದರೆ, ಸುಲಭವಾಗಿ ಓದಲು ಬರುವಂತೆ, ಬಳಕೆಯಲ್ಲಿ ಒಂದೇ ರೀತಿಯನ್ನು ನಾವು ಅನುಸರಿಸೋಣ. |
06:25 | ನಮ್ಮ ಉದಾಹರಣೆಗಳಲ್ಲಿ, ಕೀವರ್ಡ್ ಗಳಿಗಾಗಿ ನಾವು ದೊಡ್ಡಕ್ಷರಗಳನ್ನೇ ಬಳಸೋಣ. |
06:31 | ಈಗ ಮುಂದಿನ ಕ್ವೆರಿಯನ್ನು ನೋಡೋಣ. ನಾವು ಇದನ್ನು ಹೊಸ ವಿಂಡೋದಲ್ಲಿ ಟೈಪ್ ಮಾಡಬಹುದು ಅಥವಾ ಹಿಂದಿನ ಕ್ವೆರಿಯನ್ನು ಅಳಿಸಿಹಾಕಿ, ಅದರ ಮೇಲೆ ಬರೆಯಬಹುದು. |
06:42 | ಸದ್ಯಕ್ಕೆ, ನಾವು ಹಿಂದಿನ ಕ್ವೆರಿಯ ಮೇಲೆಯೇ (ಓವರ್-ರೈಟ್) ಬರೆಯೋಣ. |
06:47 | Books ಟೇಬಲ್ ನಿಂದ, ಕೆಲವು ನಿರ್ದಿಷ್ಟ ಕಾಲಂಗಳನ್ನು ಮತ್ತೆ ಪಡೆದುಕೊಳ್ಳೋಣ.
‘SELECT Title, Author FROM Books’ |
06:58 | ಮತ್ತು ಕ್ವೆರಿಯನ್ನು ರನ್ ಮಾಡೋಣ. ನಾವು ಫೈಲ್ ಮೆನು-ಬಾರ್ ನ ಅಡಿಯಲ್ಲಿರುವ ‘Run Query’ ಐಕಾನ್ ಅನ್ನು ಸಹ ಬಳಸಬಹುದು ಅಥವಾ ಕೀಬೋರ್ಡ್ ಶಾರ್ಟ್ಕಟ್ F5 ಬಳಸಬಹುದು. |
07:13 | ಇಲ್ಲಿ, ನಮ್ಮ ರೆಕಾರ್ಡ್ ಗಳು ನಮಗೆ ಬೇಕಾಗಿರುವ ಕಾಲಂಗಳೊಂದಿಗೆ ಮಾತ್ರ ಇವೆ. |
07:19 | ಸರಿ, ಮುಂದಕ್ಕೆ ಸಾಗೋಣ. |
07:22 | ಈಗ ನಮ್ಮ ಕ್ವೆರಿಗಾಗಿ ಇಲ್ಲಿ ಷರತ್ತುಗಳನ್ನು ಸೇರಿಸೋಣ. |
07:27 | ಕ್ಯಾಂಬ್ರಿಜ್ ನಿಂದ ಪ್ರಕಟಿಸಲಾದ ಪುಸ್ತಕಗಳನ್ನು ಮಾತ್ರ ನಾವೀಗ ಪಡೆಯೋಣ. |
07:31 | ಇಲ್ಲಿ ನಮ್ಮ ಕ್ವೆರಿಯು ಹೀಗಿದೆ: SELECT asterisk FROM Books WHERE Publisher is equal to in single quotes Cambridge. |
07:46 | ನಾವು WHERE ಎಂಬ ಹೊಸ ಕೀವರ್ಡ್ ಮತ್ತು |
07:52 | 'Publisher is equal to Cambridge' ಎಂಬ ಷರತ್ತನ್ನು ಬಳಸಿರುವುದನ್ನು ಗಮನಿಸಿ. |
07:59 | ಈಗ ಈ ಕ್ವೆರಿಯನ್ನು ರನ್ ಮಾಡೋಣ. ಇಲ್ಲಿ 'Publisher’, ‘Cambridge' ಎಂದು ಇರುವ ಪುಸ್ತಕಗಳನ್ನು ಮಾತ್ರ ನಾವು ನೋಡುತ್ತೇವೆ. |
08:08 | ಹೀಗೆ, ಕ್ವೆರಿಯಲ್ಲಿ ನಾವು ಅನೇಕ ಷರತ್ತುಗಳನ್ನು ಬಳಸಬಹುದು. |
08:14 | ಎರಡು ಷರತ್ತುಗಳಿರುವ ಕ್ವೆರಿಯನ್ನು ಈಗ ನಾವು ಬರೆಯೋಣ. |
08:18 | ಕ್ಯಾಂಬ್ರಿಜ್ ನಿಂದ ಪ್ರಕಟಿಸಲಾದ ಮತ್ತು 1975ರ ನಂತರವಷ್ಟೇ ಪ್ರಕಟಿಸಿದ ಪುಸ್ತಕಗಳನ್ನು ಮಾತ್ರ ನಾವೀಗ ಪಡೆಯೋಣ. |
08:29 | ಇದಕ್ಕಾಗಿ ಕ್ವೆರಿಯು ಹೀಗಿದೆ: SELECT asterisk FROM Books WHERE Publisher is equal to in single quotes Cambridge AND PublishedYear greater than 1975. |
08:49 | ‘WHERE’ ಕೀವರ್ಡ್ ಅಥವಾ ಕ್ಲಾಸ್ (clause) ನಂತರ, ನಾವು ಎರಡು ಷರತ್ತುಗಳನ್ನು ಕಾಣಬಹುದು. |
08:55 | ‘AND’ ಅನ್ನು ಬಳಸಿ, ಅವುಗಳನ್ನು ಒಟ್ಟಿಗೆ ಇರಿಸಿದೆ ಎಂದು ಗಮನಿಸಿ. ಇಲ್ಲಿ ‘AND’ ಅನ್ನು ಲಾಜಿಕಲ್ ಅಪರೇಟರ್ ಎನ್ನುತ್ತೇವೆ. |
09:04 | ಇಲ್ಲಿ ಎರಡು ಷರತ್ತುಗಳನ್ನು ಇದು ಸೇರಿಸುತ್ತದೆ. ‘OR’, ಇನ್ನೊಂದು ಲಾಜಿಕಲ್ ಅಪರೇಟರ್ ಆಗಿದೆ. |
09:13 | ಮೇಲಿನ ಕ್ವೆರಿಯಲ್ಲಿ ಇವುಗಳನ್ನು ಬಳಸಿ ಇವುಗಳ ಬಗ್ಗೆ ನೀವೇ ತಿಳಿದುಕೊಳ್ಳಿ. |
09:18 | ಈಗ ಕ್ವೆರಿಯನ್ನು ರನ್ ಮಾಡೋಣ ಮತ್ತು ಮೇಲ್ಭಾಗದಲ್ಲಿ ಫಲಿತಾಂಶವನ್ನು ನೋಡೋಣ. |
09:23 | ನಮ್ಮ ಷರತ್ತುಗಳಿಗೆ ಸರಿಹೊಂದುವ ಪುಸ್ತಕಗಳು ಇಲ್ಲಿ ಕಾಣಿಸಿಕೊಂಡಿವೆ. |
09:29 | ಸರಿ, ಅನೇಕ ಷರತ್ತುಗಳನ್ನು ಬಳಸುವ ಇನ್ನೊಂದು ವಿಧಾನವನ್ನು ನಾವೀಗ ಕಲಿಯೋಣ. |
09:36 | ಕೇವಲ್ ಕ್ಯಾಂಬ್ರಿಜ್ ಅಥವಾ ಆಕ್ಸ್ಫರ್ಡ್ ಅಥವಾ ಇಬ್ಬರೂ ಪಬ್ಲಿಷರ್ ಆಗಿರುವ ಪುಸ್ತಕಗಳ ಪಟ್ಟಿಯನ್ನು ನಾವು ಹೇಗೆ ಪಡೆಯಬಹುದು? |
09:46 | ನಮ್ಮ ಕ್ವೆರಿ ಹೀಗಿದೆ: SELECT asterisk FROM Books WHERE Publisher IN open brackets in single quotes Cambridge comma in single quotes Oxford close brackets. |
10:09 | ಹೊಸ ಕೀವರ್ಡ್, ‘IN’ ಅನ್ನು ಗಮನಿಸಿ. |
10:13 | ಒಂದೇ ಕಾಲಂ ಅನ್ನು ಆಧರಿಸಿ, ಷರತ್ತುಗಳನ್ನು ಒಟ್ಟಿಗೆ ಸೇರಿಸಲು ಇದು ಸಹಾಯ ಮಾಡುತ್ತದೆ. ಇಲ್ಲಿ, ಇದು Publisher ಆಗಿದೆ. |
10:21 | ಫಲಿತಾಂಶವನ್ನು ಗಮನಿಸಿ. |
10:25 | ಇಲ್ಲೊಂದು ಅಸೈನ್ಮೆಂಟ್ ಇದೆ: |
10:27 | ಈ ಕೆಳಗಿನವುಗಳಿಗಾಗಿ, SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ: |
10:33 | 1. ಲೈಬ್ರರಿಯ ಎಲ್ಲಾ ಸದಸ್ಯರ ಕುರಿತು ಮಾಹಿತಿಯನ್ನು ಪಡೆಯಿರಿ.
2. ರೂ. 150 ಗಿಂತ ಜಾಸ್ತಿ ಬೆಲೆಯ ಎಲ್ಲಾ ಪುಸ್ತಕಗಳ ಶೀರ್ಷಿಕೆಗಳ ಪಟ್ಟಿಯನ್ನು ಪಡೆಯಿರಿ. 3. ವಿಲಿಯಂ ಶೇಕ್ಸ್ ಪಿಯರ್ ಅಥವಾ ಜಾನ್ ಮಿಲ್ಟನ್ ಬರೆದಿರುವ ಪುಸ್ತಕಗಳ ಪಟ್ಟಿಯನ್ನು ಪಡೆಯಿರಿ. |
10:56 | ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು SQL ಕುರಿತು ಇನ್ನಷ್ಟು ಕಲಿಯೋಣ. |
11:01 | ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ SQL View ಕುರಿತ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:09 | ಸಂಕ್ಷಿಪ್ತವಾಗಿ, ನಾವು: |
11:12 | SQL View ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು, |
11:17 | ಸರಳವಾದ SQL ಬರೆಯಲು, |
11:20 | SELECT, FROM, ಮತ್ತು WHERE ಎಂಬ ಷರತ್ತು ಗಳನ್ನು ಬಳಸಲು |
11:25 | ಮತ್ತು ಫೀಲ್ಡ್ ಗಳು ಹಾಗೂ ಟೇಬಲ್ ಗಳನ್ನು ಹೆಸರಿಸಲು ದೊಡ್ಡಕ್ಷರ, ಸಣ್ಣಕ್ಷರ ಅಥವಾ ಮಿಶ್ರ ಅಕ್ಷರ ಗಳನ್ನು ಬಳಸಲು ಕಲಿತೆವು. |
11:35 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
11:47 | ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.
ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ. |
11:55 | ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .
ಧನ್ಯವಾದಗಳು. |