LibreOffice-Suite-Base/C2/Modify-a-Report/Kannada

From Script | Spoken-Tutorial
Revision as of 08:58, 27 February 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ‘ಲಿಬರ್ ಆಫೀಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ ನಲ್ಲಿ ನಾವು,
00:09 ರಿಪೋರ್ಟ್‌ ನ ಲೇಔಟ್‌, ಅದು ಇರುವ ಹಾಗೂ ಕಾಣುವ ಬಗೆಯನ್ನು ಕಸ್ಟಮೈಸ್‌ ಮಾಡಿ ಅದನ್ನು ಮಾರ್ಪಡಿಸಲು ಕಲಿಯಲಿದ್ದೇವೆ.
00:16 ಇದಕ್ಕಾಗಿ ನಾವು, ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್‌ ನ ಉದಾಹರಣೆಯನ್ನು ತೆಗೆದುಕೊಳ್ಳೋಣ.
00:23 ಕಳೆದ ಟ್ಯುಟೋರಿಯಲ್‌ ನಲ್ಲಿ, ನಾವು ರಿಪೋರ್ಟ್‌ ಅನ್ನು ತಯಾರಿಸಲು ಕಲಿತೆವು.
00:28 ಹಾಗೂ ‘Books Issued to Members: Report History’ ಎಂಬ ರಿಪೋರ್ಟ್‌ ಅನ್ನು ತಯಾರಿಸಿದೆವು. ನಾವೀಗ ಈ ರಿಪೋರ್ಟ್‌ ಅನ್ನು ಮಾರ್ಪಡಿಸಲು ಕಲಿಯುವೆವು.
00:40 'Library' ಡೇಟಾಬೇಸ್‌ ನಲ್ಲಿ,
00:42 ಎಡ ಪ್ಯಾನಲ್‌ ನಲ್ಲಿ, ‘Reports’ ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
00:47 ಬಲ ಪ್ಯಾನೆಲ್‌ ನಲ್ಲಿ, ‘Reports’ ಲಿಸ್ಟ್‌ ನಲ್ಲಿ ನಾವು ‘Books Issued to Members: Report History’ ಎಂಬ ರಿಪೋರ್ಟ್‌ ಅನ್ನು ಕಾಣಬಹುದು.
00:57 ಇದರ ಮೇಲೆ ರೈಟ್‌ ಕ್ಲಿಕ್‌ ಮಾಡೋಣ. ರಿಪೋರ್ಟ್‌ ಅನ್ನು ಮಾರ್ಪಡಿಸಲು ಅಥವಾ ಎಡಿಟ್ ಮಾಡಲು ಅದನ್ನು ತೆರೆಯುವುದಕ್ಕಾಗಿ ‘Edit’ ಮೇಲೆ ಕ್ಲಿಕ್‌ ಮಾಡೋಣ.
01:08 ನಾವೀಗ ‘Report Builder’ ಎಂಬ ಒಂದು ಹೊಸ ವಿಂಡೋವನ್ನು ನೋಡುತ್ತೇವೆ.
01:14 ಈ ಸ್ಕ್ರೀನ್‌, ಮೂರು ಮುಖ್ಯ ವಿಭಾಗಗಳನ್ನು ಹೊಂದಿದೆ.
01:19 ಪೇಜ್‌-ಹೆಡರ್‌ ಮತ್ತು ಫೂಟರ್‌ ವಿಭಾಗಗಳು ಕ್ರಮವಾಗಿ ಮೇಲ್ತುದಿಯಲ್ಲಿ ಮತ್ತು ಕೆಳಭಾಗದಲ್ಲಿ ಬರುತ್ತವೆ.
01:26 ಜೊತೆಗೆ ಹೆಡರ್‌ ವಿಭಾಗ
01:29 ಹಾಗೂ ಡಿಟೇಲ್‌ ವಿಭಾಗಗಳನ್ನು ಕಾಣಬಹುದು.
01:34 ಮೇನ್ ಸ್ಕ್ರೀನ್‌ ಮೇಲೆ ಬಿಳಿ ಭಾಗದಲ್ಲಿ ರೈಟ್‌-ಕ್ಲಿಕ್‌ ಮಾಡಿ,
01:40 ಮತ್ತು ‘Insert Report Header/Footer’ ಮೇಲೆ ಕ್ಲಿಕ್‌ ಮಾಡುವ ಮೂಲಕ ನಾವು ರೆಕಾರ್ಡ್‌ ಹೆಡರ್‌ ಮತ್ತು ಫೂಟರ್‌ ವಿಭಾಗಗಳನ್ನು ಸೇರಿಸಬಹುದು.
01:51 ಸ್ಕ್ರೀನ್‌ ನ ಎಡಭಾಗದಲ್ಲಿ, ಕಿತ್ತಳೆ ಬಣ್ಣದ ಜಾಗದ ಮೇಲೆ ಡಬಲ್‌-ಕ್ಲಿಕ್‌ ಮಾಡಿ ನಾವು ಈ ವಿಭಾಗಗಳನ್ನು ಚಿಕ್ಕದು ಅಥವಾ ದೊಡ್ಡದು ಮಾಡಬಹುದು.
02:00 ಮುಂದುವರಿಯುವ ಮೊದಲು, ಇಲ್ಲಿರುವ ರಿಪೋರ್ಟ್‌ ಡಿಸೈನ್‌ ವಿಂಡೋದ ಸ್ಕ್ರೀನ್‌-ಶಾಟ್‌ ಅನ್ನು ನೋಡೋಣ.
02:06 ನಮ್ಮ ರಿಪೋರ್ಟ್‌ ಡಿಸೈನ್‌ ಈ ರೀತಿ ಕಾಣುವಂತೆ ನಾವು ಅದನ್ನು ಮಾರ್ಪಡಿಸುವೆವು.
02:11 ಕೆಲವು ಟೆಕ್ಸ್ಟ್‌-ಲೇಬಲ್‌ ಗಳು, ಫಾಂಟ್‌ ಗಳು, ಫಾರ್ಮಾಟಿಂಗ್‌ ಅನ್ನು ನಾವು ಸೇರಿಸುವೆವು ಮತ್ತು ವಿವಿಧ ವಿಭಾಗ ಗಳ ನಡುವಿನ ಅಂತರವನ್ನು ಹೊಂದಿಸುವೆವು.
02:20 ಸರಿ, ನಾವೀಗ ಕೆಲವು ರಿಪೋರ್ಟ್‌ ಹೆಡರ್‌ ಗಳು ಮತ್ತು ಫೂಟರ್‌ ಗಳನ್ನು ಸೇರಿಸೋಣ.
02:27 ಇದನ್ನು ಮಾಡಲು, ಮೇಲ್ತುದಿಯ ಮೆನು-ಬಾರ್‌ ಕೆಳಗೆ ಇರುವ
02:31 “Report Controls” ಟೂಲ್‌ ಬಾರ್‌ ನಲ್ಲಿ, “Label Field “ ಐಕಾನ್‌ ಮೇಲೆ ಕ್ಲಿಕ್‌ ಮಾಡೋಣ.
02:40 ಈಗ ತೋರಿಸಿರುವಂತೆ ಇದನ್ನು Report Header ಜಾಗದ ಮೇಲೆ ಎಳೆಯೋಣ
02:48 ಮತ್ತು ಇದರ ಪ್ರಾಪರ್ಟಿಗಳನ್ನು ಬಲಕ್ಕೆ ತರಲು Label ಮೇಲೆ ಡಬಲ್‌-ಕ್ಲಿಕ್‌ ಮಾಡೋಣ.
02:55 ಇಲ್ಲಿ, ‘Label ‘ಗಾಗಿ "Books Issued to Members:
03:00 Report History" ಎಂದು ಟೈಪ್‌ ಮಾಡಿ ‘Enter’ ಅನ್ನು ಒತ್ತೋಣ.
03:07 ಫಾಂಟ್‌ ಶೈಲಿಯನ್ನು ಸಹ ನಾವು ಬದಲಾಯಿಸೋಣ; ‘Arial Black, Bold’ ಮತ್ತು ‘Size 12’ ಅನ್ನು ನಾವು ಆಯ್ಕೆಮಾಡಿ
03:17 OK ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
03:21 ನಂತರ, ಸ್ಕ್ರೀನ್‌ ನಲ್ಲಿ ತೋರಿಸಿರುವಂತೆ, ‘Report Footer’ ಗೆ‌ ಇನ್ನೊಂದು ಲೇಬಲ್‌ ಸೇರಿಸೋಣ. <pause>
03:31 ಉದಾಹರಣೆಗೆ, ಈ ರೀತಿ ಟೈಪ್‌ ಮಾಡೋಣ: "Report Prepared by Assistant Librarian" <pause>
03:42 ಮತ್ತು ಫಾಂಟ್‌ ಶೈಲಿಯನ್ನು ‘Arial, Bold, Italic’ ಮತ್ತು ‘Size 8’ ಎಂದು ಬದಲಾಯಿಸೋಣ. <pause>
03:51 ಈಗ, ‘Page Footer’ ಜಾಗದಲ್ಲಿ ಒಂದು ಲೇಬಲ್‌ ಅನ್ನು ಸೇರಿಸಲು ಇದೇ ಹಂತಗಳನ್ನು ಪುನರಾವರ್ತಿಸೋಣ. <pause>
03:59 ಈ ಬಾರಿ, ಲೇಬಲ್‌ ಗಾಗಿ ನಾವು : "Nehru Library, New Delhi" ಎಂದು ಟೈಪ್‌ ಮಾಡುವೆವು.
04:09 ಫಾಂಟ್‌ ಶೈಲಿಯನ್ನು ‘Arial, Bold, Italic’ ಮತ್ತು ‘Size 8’ ಎಂದು ಬದಲಾಯಿಸುವೆವು. <pause>
04:20 ನಾವೀಗ ಇವುಗಳ ಜಾಗವನ್ನು ಹೊಂದಿಸೋಣ.
04:24 ಮೊದಲಿಗೆ, ಪೇಜ್‌-ಹೆಡರ್‌ ಮತ್ತು ರಿಪೋರ್ಟ್‌-ಹೆಡರ್‌ ನಡುವಿನ ಬೂದು ಬಣ್ಣದ ಗೆರೆಯ ಮೇಲೆ ಡಬಲ್‌- ಕ್ಲಿಕ್‌ ಮಾಡಿ, ಪೇಜ್‌-ಹೆಡರ್‌ ಸ್ಥಳವನ್ನು ಕಡಿಮೆ ಮಾಡೋಣ.
04:37 ಕ್ಲಿಕ್‌, ಡ್ರ್ಯಾಗ್‌ ಮತ್ತು ಡ್ರಾಪ್‌ ವಿಧಾನವನ್ನು ಬಳಸಿ, ನಾವು ಇದನ್ನು ಮೇಲ್ತುದಿಗೆ ಸರಿಸುವೆವು.
04:47 ನಂತರ, ರಿಪೋರ್ಟ್‌-ಹೆಡರ್‌ ಮತ್ತು ಹೆಡರ್‌ ನಡುವಿನ ಬೂದು ಬಣ್ಣದ ಗೆರೆಯ ಮೇಲೆ
04:52 ಡಬಲ್‌-ಕ್ಲಿಕ್‌ ಮಾಡಿ, ರಿಪೋರ್ಟ್‌-ಹೆಡರ್‌ ಸ್ಥಳವನ್ನು ಕಡಿಮೆ ಮಾಡೋಣ. <pause>
05:01 ರಿಪೋರ್ಟ್‌-ಫೂಟರ್‌ ಮತ್ತು ಪೇಜ್‌-ಫೂಟರ್‌ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹ ಇದೇ ಹಂತಗಳನ್ನು ಪುನರಾವರ್ತಿಸುವೆವು. <pause>
05:13 ನಂತರ, ಹೆಡರ್‌ ಲೇಬಲ್‌ ಗಳನ್ನು ಮಧ್ಯದಲ್ಲಿ ತರೋಣ (centre).
05:18 ಇದನ್ನು ಮಾಡಲು, ಮೊದಲು ‘Book Title’ ಮೇಲೆ ಕ್ಲಿಕ್‌ ಮಾಡಿ, ಎಲ್ಲಾ ಲೇಬಲ್‌ ಗಳನ್ನು ಆಯ್ಕೆ ಮಾಡುವೆವು.
05:26 ನಂತರ ‘’Shift’ ಕೀಯನ್ನು ಒತ್ತಿ ಹಿಡಿದು, ಇಲ್ಲಿ ತೋರಿಸಿರುವಂತೆ ಉಳಿದ ಲೇಬಲ್‌ ಗಳ ಮೇಲೆ ಕ್ಲಿಕ್‌ ಮಾಡುವೆವು.
05:35 ಈಗ, ಇವುಗಳನ್ನು ಮಧ್ಯದಲ್ಲಿ ತರಲು, ನಾವು ಅಪ್ – ಆರೋ ಕೀಯನ್ನು ಬಳಸೋಣ.
05:41 ಹೆಡರ್‌ ಗೆ ನಾವು ತಿಳಿ-ನೀಲಿ ಬಣ್ಣದ ಹಿನ್ನೆಲೆಯನ್ನು ಕೊಡೋಣ.
05:47 ಇದನ್ನು ಮಾಡಲು, ನಾವು ‘Properties’ ಗೆ ಹೋಗಿ, ‘Background transparent’ ಅನ್ನು ‘NO’ ಎಂದು ಬದಲಾಯಿಸುವೆವು.
05:55 ನಂತರ ‘Background colour’ ಗಾಗಿ ಲಿಸ್ಟ್‌ ನಿಂದ ‘Blue 8 ‘ ಅನ್ನುಆರಿಸಿಕೊಳ್ಳುವೆವು.
06:03 Detail ವಿಭಾಗಕ್ಕಾಗಿಯೂ ಸಹ ನಾವು ಇದನ್ನೇ ಮಾಡುವೆವು. <pause>
06:09 ಇದಕ್ಕಾಗಿ, ನಾವು ಮೊದಲಿಗೆ ‘Detail’ ಮತ್ತು’ Report footer’ ವಿಭಾಗಗಳ ನಡುವಿನ ಅಂತರವನ್ನು ಹೆಚ್ಚಿಸುವೆವು.
06:20 ನಂತರ ಫೀಲ್ಡ್‌ ಗಳನ್ನು ಮಧ್ಯದಲ್ಲಿ ತರುವೆವು. <pause>
06:24 ಇಲ್ಲಿ ತೋರಿಸಿರುವಂತೆ, ‘Detail’ ವಿಭಾಗಕ್ಕಾಗಿ ನಾವು ತಿಳಿ-ಬೂದು ಬಣ್ಣದ ಹಿನ್ನೆಲೆಯನ್ನು ಆರಿಸುವೆವು. <pause>
06:32 ನಂತರ, ‘Checked In’ ಫೀಲ್ಡ್‌ ನ ಡೇಟಾ ಫಾರ್ಮಾಟಿಂಗ್‌ ಅನ್ನು ಬದಲಾಯಿಸುವೆವು.
06:39 ಇದು ಬೂಲಿಯನ್‌ ವ್ಯಾಲ್ಯೂಗಳಾದ 1 ಅಥವಾ 0 ಯನ್ನು ಹೊಂದಿರುವುದರಿಂದ, “True” ಅಥವಾ “False “ ಎಂದು ತೋರಿಸುತ್ತದೆ.
06:47 ಇದನ್ನು ನಾವು “ Yes” ಅಥವಾ “No” ಎಂದು ಬದಲಾಯಿಸುವೆವು.
06:53 ಇದಕ್ಕಾಗಿ ನಾವು, ‘Detail’ ಸೆಕ್ಷನ್‌ ನಲ್ಲಿ ಬಲಗಡೆ ಇರುವ ‘CheckedIn’ ಫೀಲ್ಡ್‌ ಮೇಲೆ ಡಬಲ್‌-ಕ್ಲಿಕ್‌ ಮಾಡಲಿದ್ದೇವೆ.
07:01 ಈಗ, ಬಲಗಡೆಗೆ ‘properties’ ನಲ್ಲಿ, ಮೊದಲು ‘Data’ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡೋಣ.
07:08 ‘Data’ ಫೀಲ್ಡ್‌ ನ ಪಕ್ಕದಲ್ಲಿರುವ ‘CheckedIn’ ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡೋಣ.
07:15 ಇದು ‘Function wizard’ ಎಂಬ ಒಂದು ಹೊಸ ಪಾಪ್‌-ಅಪ್‌ ವಿಂಡೋ ಅನ್ನು ತೆರೆಯುತ್ತದೆ.
07:20 ಇಲ್ಲಿ, ಮೊದಲಿಗೆ ನಾವು ಕೆಳಗೆ ಬಲಗಡೆಯಲ್ಲಿ ‘Formula’ ಟೆಕ್ಸ್ಟ್‌-ಬಾಕ್ಸ್‌ ಅನ್ನು ಖಾಲಿ ಮಾಡೋಣ.
07:27 ನಂತರ ‘Category’ ಎಂಬ ಡ್ರಾಪ್‌-ಡೌನ್‌ ಮೇಲೆ ಕ್ಲಿಕ್‌ ಮಾಡೋಣ. ಆನಂತರ ‘IF’ ಮೇಲೆ ಡಬಲ್‌-ಕ್ಲಿಕ್‌ ಮಾಡೋಣ.
07:35 ಬಲಗಡೆಯಲ್ಲಿ ಈಗ ನಾವು ಹೊಸ ಕಂಟ್ರೋಲ್‌ ಗಳನ್ನು ನೋಡಬಹುದು.
07:40 ಮೊದಲನೆಯ ಟೆಕ್ಸ್ಟ್‌-ಬಾಕ್ಸ್‌ ನ ಪಕ್ಕದಲ್ಲಿ, ಬಲಕ್ಕೆ ಇರುವ ‘Select’ ಐಕಾನ್‌ ಮೇಲೆ ನಾವು ಕ್ಲಿಕ್‌ ಮಾಡೋಣ.
07:49 ಇಲ್ಲಿ ನಾವು ‘CheckIn’ ಮೇಲೆ ಡಬಲ್‌-ಕ್ಲಿಕ್‌ ಮಾಡುವೆವು.
07:53 ನಂತರ, ಎರಡನೇ ಟೆಕ್ಸ್ಟ್‌-ಬಾಕ್ಸ್‌ ನಲ್ಲಿ, ಡಬಲ್‌-ಕೋಟ್ಸ್ ಒಳಗೆ “Yes” ಎಂದು ಟೈಪ್‌ ಮಾಡುವೆವು.
08:01 ಹಾಗೂ ಮೂರನೇ ಟೆಕ್ಸ್ಟ್‌- ಬಾಕ್ಸ್‌ ನಲ್ಲಿ,” No” ಎಂದು ಟೈಪ್‌ ಮಾಡುವೆವು. <pause>
08:12 ಈಗ ‘Properties’ ವಿಭಾಗದಲ್ಲಿ, ‘General’ ಟ್ಯಾಬ್‌ ಗೆ ಹೋಗಿ,
08:18 ಕೆಳಗೆ ಇರುವ ‘Formatting’ ನ ಬದಿಯ ಬಟನ್‌ ಅನ್ನು ಕ್ಲಿಕ್ ಮಾಡುವೆವು.
08:24 ಇಲ್ಲಿ ನಾವು, ‘Category’ ಲಿಸ್ಟ್‌ ನಲ್ಲಿ ‘Text’ ಮೇಲೆ ಕ್ಲಿಕ್‌ ಮಾಡಿ,
08:28 ನಂತರ ‘OK’ ಬಟನ್‌ ಮೇಲೆ ಕ್ಲಿಕ್‌ ಮಾಡುವೆವು.
08:32 ಈಗ ರಿಪೋರ್ಟ್‌ ಅನ್ನು ನಾವು ಸೇವ್‌ ಮಾಡುವೆವು.
08:36 ಸರಿ, ಮಾರ್ಪಡಿಸಿದ ರಿಪೋರ್ಟ್‌ ಅನ್ನು ಈಗ ರನ್‌ ಮಾಡೋಣ.
08:41 ಇದಕ್ಕಾಗಿ, ನಾವು ಮೇಲ್ಗಡೆಯ Edit ಮೆನು ಮೇಲೆ, ನಂತರ ‘Execute Report’ ಮೇಲೆ ಕ್ಲಿಕ್‌ ಮಾಡೋಣ.
08:50 ಹಾಗೂ ಇಲ್ಲಿ "Books issued to the Library membersʼʼ ನಲ್ಲಿ ಸೊಗಸಾದ ರಿಪೋರ್ಟ್‌ ಹಿಸ್ಟರಿ ಇದೆ.
08:57 ಸ್ಪೇಸಿಂಗ್‌, ಹೆಡರ್‌ ಗಳು, ಫೂಟರ್‌ ಗಳು, ಫಾಂಟ್‌ ಗಳು ಮತ್ತು
09:01 'Yes' ಅಥವಾ 'No' ಎಂದು ಹೇಳುವ ‘CheckedIn’ ಫೀಲ್ಡ್‌ ಅನ್ನು ಗಮನಿಸಿ.
09:06 ಇಲ್ಲಿಗೆ ನಮ್ಮ ರಿಪೋರ್ಟ್‌ ಅನ್ನು ಮಾರ್ಪಡಿಸುವ ಕೆಲಸ ಮುಗಿಯಿತು.
09:11 ಇಲ್ಲಿಗೆ ನಾವು ‘ಲಿಬರ್‌ ಆಫಿಸ್‌ ಬೇಸ್‌’ ನಲ್ಲಿ, ರಿಪೋರ್ಟ್‌ ಅನ್ನು ಮಾರ್ಪಡಿಸುವ ಬಗ್ಗೆ ಇರುವ ಟ್ಯುಟೋರಿಯಲ್‌ ನ ಕೊನೆಗೆ ಬಂದಿದ್ದೇವೆ.
09:17 ಸಂಕ್ಷಿಪ್ತವಾಗಿ ನಾವು:
09:20 ರಿಪೋರ್ಟ್‌ ನ ಲೇಔಟ್‌, ಅದು ಇರುವ ಹಾಗೂ ಕಾಣುವ ಬಗೆಯನ್ನು ಕಸ್ಟಮೈಸ್‌ ಮಾಡಿ, ಅದನ್ನು ಮಾರ್ಪಡಿಸಲು ಕಲಿತೆವು.
09:26 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

09:48 ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Sandhya.np14