LibreOffice-Suite-Base/C2/Create-queries-using-Query-Wizard/Kannada

From Script | Spoken-Tutorial
Revision as of 10:38, 18 February 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:
'ಕ್ವೆರಿ ವಿಜಾರ್ಡ್' ಅನ್ನು ಬಳಸಿ, ಸರಳವಾದ ಕ್ವೆರಿ ಗಳನ್ನು (ಪ್ರಶ್ನೆ) ರಚಿಸಲು, 

ಫೀಲ್ಡ್ ಗಳನ್ನು ಆಯ್ಕೆಮಾಡಲು, ಫೀಲ್ಡ್ ಗಳ ವರ್ಗೀಕರಣದ (sorting) ಕ್ರಮವನ್ನು ನಿಗದಿಪಡಿಸಲು ಮತ್ತು 'ಕ್ವೆರಿ' ಗಾಗಿ, ಸರ್ಚ್ ಮಾಡುವ ಬಗೆ (search criteria) ಅಥವಾ ಷರತ್ತುಗಳನ್ನು ಒದಗಿಸಲು ಕಲಿಯಲಿದ್ದೇವೆ.

00:24 ಮೊದಲಿಗೆ 'ಕ್ವೆರಿ' ಅಂದರೆ ಏನೆಂದು ಕಲಿಯೋಣ.
00:29 ಒಂದು ಕ್ವೆರಿ ಡೇಟಾಬೇಸ್ ನಿಂದ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಕ್ವೆರಿಯನ್ನು ಬಳಸಬಹುದು.
00:36 ಎಂದರೆ, ಒಂದು ನಿರ್ದಿಷ್ಟ ಮಾನದಂಡಕ್ಕೆ ಸರಿಹೊಂದುವ ಕೆಲವು ಡೇಟಾಗಾಗಿ ನಾವು ಡೇಟಾಬೇಸ್ ಅನ್ನು ಕ್ವೆರಿ ಕೇಳಬಹುದು.
00:48 ಉದಾಹರಣೆಗೆ, ನಮ್ಮ ಪರಿಚಿತ 'Library' ಡೇಟಾಬೇಸ್ ಅನ್ನು ನಾವು ನೋಡೋಣ.
00:56 ನಮ್ಮ Library ಡೇಟಾಬೇಸ್ ನಲ್ಲಿ, ಪುಸ್ತಕಗಳು ಮತ್ತು ಸದಸ್ಯರ ಮಾಹಿತಿಯನ್ನು ನಾವು ಶೇಖರಿಸಿದ್ದೇವೆ.
01:04 ಈಗ, ಲೈಬ್ರರಿಯ ಎಲ್ಲಾ ಸದಸ್ಯರ ಬಗ್ಗೆ Library ಡೇಟಾಬೇಸ್ ನಲ್ಲಿ ನಾವು ಕ್ವೆರಿ ಮಾಡಬಹುದು.
01:12 ಅಥವಾ, Library ಯಲ್ಲಿ ಇರದ ಎಲ್ಲಾ ಪುಸ್ತಕಗಳಿಗಾಗಿ ನಾವು ಡೇಟಾಬೇಸ್ ನಲ್ಲಿ ಕ್ವೆರಿ ಮಾಡಬಹುದು.
01:21 'Base' ಅನ್ನು ಬಳಸಿ ಸರಳವಾದ ಒಂದು ಕ್ವೆರಿ ಯನ್ನು ನಾವು ಹೇಗೆ ರಚಿಸಬಹುದು ಎಂಬುದನ್ನು ನೋಡೋಣ.
01:30 'Library' ಯ ಎಲ್ಲಾ ಸದಸ್ಯರನ್ನು ಅವರ ದೂರವಾಣಿ ಸಂಖ್ಯೆಯೊಂದಿಗೆ ಪಟ್ಟಿ ಮಾಡುವುದು ನಮ್ಮ ಉದಾಹರಣೆಯಾಗಿದೆ.
01:44 ನಾವು 'Library' ಡೇಟಾಬೇಸ್ ನಲ್ಲಿದ್ದೇವೆ. ಇದನ್ನು ತೆರೆಯುವುದು ಹೇಗೆಂದು ಬಹುಶ: ನಿಮಗೆ ಈಗಾಗಲೇ ತಿಳಿದಿರಬಹುದು.
01:51 ನಾವೀಗ ಎಡ ಪ್ಯಾನೆಲ್ ನಲ್ಲಿರುವ 'Queries' ಐಕಾನ್ ಮೇಲೆ ಕ್ಲಿಕ್ ಮಾಡೋಣ.
01:57 ಬಲ ಪ್ಯಾನೆಲ್ ನಲ್ಲಿ ನಾವು ಮೂರು ಆಯ್ಕೆಗಳನ್ನು ನೋಡಬಹುದು.
02:03 ಮೊದಲಿಗೆ ನಾವು ಸರಳವಾದ ಕ್ವೆರಿ ರಚಿಸುತ್ತಿರುವುದರಿಂದ, ಸುಲಭ ಮತ್ತು ಶೀಘ್ರವಾದ ವಿಧಾನವನ್ನು ನಾವು ಆಯ್ದುಕೊಳ್ಳುವೆವು.
02:11 ಅದು 'Query Wizard' ಅನ್ನು ಬಳಸುವುದಾಗಿದೆ.
02:17 ಜಟಿಲವಾದ ಕ್ವೆರಿಗಳನ್ನು ರಚಿಸಲು, 'Base' ನಮಗೆ 'Create Query in Design View' ಮತ್ತು 'Create Query in SQL view' ನಂತಹ
02:28 ಅತ್ಯಂತ ಅನುಕೂಲಕರ ಆಯ್ಕೆಗಳನ್ನು ಒದಗಿಸುತ್ತದೆ. ಇವುಗಳ ಬಗ್ಗೆ ನಾವು ನಂತರ ಕಲಿಯಲಿದ್ದೇವೆ.
02:36 ಸದ್ಯಕ್ಕೆ, ನಾವು 'Use Wizard to Create Query' ಮೇಲೆ ಕ್ಲಿಕ್ ಮಾಡೋಣ.
02:43 ಈಗ, ಮೇಲ್ಗಡೆ Query Wizard ಎಂಬ ಒಂದು ಪಾಪ್–ಅಪ್ ವಿಂಡೋ ಅನ್ನು ನಾವು ನೋಡಬಹುದು.
02:50 ಎಡಗಡೆಗೆ, ನಾವು ಮಾಡಲಿರುವ 8 ಹಂತಗಳನ್ನು ನೋಡುತ್ತೇವೆ.
02:57 ನಾವೀಗ 'ಹಂತ 1 - 'Field Selection' ನಲ್ಲಿದ್ದೇವೆ.
03:03 ಬಲಗಡೆಗೆ, 'Tables' ಎಂಬ ಲೇಬಲ್ ನ ಕೆಳಗೆ, ನಾವು ಡ್ರಾಪ್ – ಡೌನ್ ಬಾಕ್ಸ್ ಒಂದನ್ನು ನೋಡಬಹುದು.
03:11 ಇಲ್ಲಿಯೇ ನಾವು ಈ ಕ್ವೆರಿಯಿಂದ ನಮಗೆ ಬೇಕಾಗುವ ಡೇಟಾದ ಮೂಲವನ್ನು ಆಯ್ದುಕೊಳ್ಳುವೆವು.
03:21 ನಮ್ಮ query ಉದಾಹರಣೆಯು, Library ಯ ಎಲ್ಲಾ ಸದಸ್ಯರ ಪಟ್ಟಿಯನ್ನು ಪಡೆಯುವ ಕುರಿತು ಆಗಿರುವುದರಿಂದ, ನಾವು ಡ್ರಾಪ್–ಡೌನ್ ಬಾಕ್ಸ್ ನಲ್ಲಿ 'Tables: Members' ಮೇಲೆ ಕ್ಲಿಕ್ ಮಾಡುವೆವು.
03:35 ಈಗ, ನಾವು ಎಡಭಾಗದ 'Available fields' ಪಟ್ಟಿಯಲ್ಲಿ 'Name' ಫೀಲ್ಡ್ ಮೇಲೆ ಡಬಲ್ – ಕ್ಲಿಕ್ ಮಾಡಿ ಅದನ್ನು ಬಲಗಡೆ list box ಗೆ ಸರಿಸೋಣ.
03:50 ನಂತರ, ಎಡಭಾಗದ 'Phone' ಫೀಲ್ಡ್ ಮೇಲೆ ಕ್ಲಿಕ್ ಮಾಡಿ ಅದನ್ನು ಬಲಕ್ಕೆ ಸರಿಸೋಣ.
04:00 ಗಮನಿಸಿ, ಎಲ್ಲಾ ಫೀಲ್ಡ್ ಗಳನ್ನು ಬಲಗಡೆ ಸರಿಸಲು, ಬಲಕ್ಕೆ ತೋರಿಸುತ್ತಿರುವ ಡಬಲ್-ಆರೋ ಬಟನ್ ಅನ್ನು ನಾವು ಬಳಸಬಹುದು.
04:09 ಈಗ, ನಾವು ಕೆಳಗಡೆ 'Next' ಬಟನ್ ಮೇಲೆ ಕ್ಲಿಕ್ ಮಾಡೋಣ.
04:15 ನಾವೀಗ 'Step 2 - Sorting Order' ನಲ್ಲಿ ಇದ್ದೇವೆ.
04:20 ನಮ್ಮ ಕ್ವೆರಿಯ ಫಲಿತಾಂಶವು ಸದಸ್ಯರು ಮತ್ತು ಅವರ ದೂರವಾಣಿ ಸಂಖ್ಯೆಗಳ ಪಟ್ಟಿ ಆಗಿರುವುದರಿಂದ, ನಾವಿದನ್ನು ಹಾಗೆಯೇ ಬಿಡಬಹುದು.
04:30 ಅಥವಾ ನಾವು ಸದಸ್ಯರ ಹೆಸರಿನ ಕ್ರಮದಲ್ಲಿ ಪಟ್ಟಿಯನ್ನು ಹೊಂದಿಸಬಹುದು.
04:36 'Base Wizard,' ರಿಸಲ್ಟ್ ಲಿಸ್ಟ್ ನಲ್ಲಿ ಏಕಕಾಲಕ್ಕೆ 4 ಫೀಲ್ಡ್ ಗಳನ್ನು ವರ್ಗೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ.
04:45 ಸದ್ಯಕ್ಕೆ ನಾವು ಮೇಲ್ತುದಿಯಲ್ಲಿರುವ ಡ್ರಾಪ್ – ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡೋಣ,
04:51 ಮತ್ತ 'Members.Name' ಮೇಲೆ ಕ್ಲಿಕ್ ಮಾಡೋಣ.
04:55 ಹೆಸರುಗಳನ್ನು ಏರಿಕೆ ಅಥವಾ ಇಳಿಕೆ ಕ್ರಮದಲ್ಲಿ ವರ್ಗೀಕರಿಸಲು ಸಹ ನಾವು ಆಯ್ಕೆಮಾಡಬಹುದು.
05:03 ನಾವೀಗ 'Ascending' (ಏರಿಕೆ ಕ್ರಮ) ಆಯ್ಕೆ ಮೇಲೆ ಕ್ಲಿಕ್ ಮಾಡೋಣ
05:07 ಮತ್ತು ಮುಂದಿನ ಹಂತಕ್ಕೆ ಸಾಗೋಣ.
05:11 'ಸ್ಟೆಪ್ 3 – ಸರ್ಚ್ ಕಂಡೀಷನ್ಸ್'.
05:16 ನಾವು ನಮ್ಮ ಫಲಿತಾಂಶವನ್ನು ಕೆಲವು ಷರತ್ತುಗಳಿಗೆ ಸೀಮಿತಗೊಳಿಸಲು ಈ ಹಂತವು ಸಹಾಯಮಾಡುತ್ತದೆ.
05:22 ಉದಾಹರಣೆಗೆ, ನಾವು R ಅಕ್ಷರದಿಂದ ಪ್ರಾರಂಭವಾಗುವ ಹೆಸರಿರುವ ಸದಸ್ಯರಿಗೆ ಮಾತ್ರ ನಮ್ಮ ಫಲಿತಾಂಶವನ್ನು ಸೀಮಿತಗೊಳಿಸಬಹುದು.
05:34 ಇದಕ್ಕಾಗಿ, ನಾವು ಕ್ರಮವಾಗಿ 'Fields' ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ, ನಂತರ 'Members.Name' ಮೇಲೆ ಕ್ಲಿಕ್ ಮಾಡುವೆವು.
05:45 ಈಗ 'Condition' ಎಂಬ ಡ್ರಾಪ್ – ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
05:51 ಇಲ್ಲಿರುವ ವಿವಿಧ ಷರತ್ತುಗಳನ್ನು ಗಮನಿಸಿ.
05:58 ನಾವು 'like' ಮೇಲೆ ಕ್ಲಿಕ್ ಮಾಡೋಣ.
06:02 'Value' ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾವು ದೊಡ್ಡಕ್ಷರ ‘R’ ಮತ್ತು ಪರ್ಸೆಂಟೇಜ್ ಚಿಹ್ನೆಯನ್ನು ಟೈಪ್ ಮಾಡೋಣ.
06:13 ಹೀಗೆ, ನಮ್ಮ ಕ್ವೆರಿಯಲ್ಲಿ ಸರಳ ಮತ್ತು ಜಟಿಲ ಷರತ್ತುಗಳನ್ನು ನಾವು ಸೇರಿಸಬಹುದು.
06:22 ಈಗ ಎಲ್ಲಾ ಸದಸ್ಯರ ಪಟ್ಟಿ ಮಾಡಲು, 'Value' ಟೆಕ್ಸ್ಟ್-ಬಾಕ್ಸ್ ನಿಂದ 'R%' ಅನ್ನು ಡಿಲೀಟ್ ಮಾಡಿ ನಂತರ 'Next' ಬಟನ್ ಮೇಲೆ ಕ್ಲಿಕ್ ಮಾಡೋಣ.
06:37 ನಾವು ನೇರವಾಗಿ ಹಂತ 7ಕ್ಕೆ ಬಂದಿರುವುದನ್ನು ಗಮನಿಸಿ.
06:43 ಏಕೆಂದರೆ, ನಾವು ಒಂದೇ 'table' ನಿಂದ ಸರಳವಾದ ಕ್ವೆರಿ ಒಂದನ್ನು ರಚಿಸುತ್ತಿದ್ದೇವೆ.
06:51 ಮತ್ತು ನಮ್ಮ ಕ್ವೆರಿ ವಿವರಗಳನ್ನು ಹಿಂದಿರುಗಿಸುತ್ತದೆ, ಸಾರಾಂಶವನ್ನಲ್ಲ.
06:57 ಸಾರಾಂಶದ ಕ್ವೆರಿಗಳು ಒಟ್ಟಾರೆ ಫಂಕ್ಷನ್ ಗಳ (aggregate functions) ಡೇಟಾವನ್ನು ಗುಂಪುಗೂಡಿಸಿ ತೋರಿಸುತ್ತವೆ.
07:05 ಉದಾಹರಣೆಗೆ, ಎಲ್ಲಾ ಸದಸ್ಯರ ಎಣಿಕೆ ಅಥವಾ ಎಲ್ಲಾ ಪುಸ್ತಕಗಳ ಬೆಲೆಗಳ ಮೊತ್ತ.
07:13 ಇವುಗಳ ಕುರಿತು ನಾವು ನಂತರ ಕಲಿಯಲಿದ್ದೇವೆ.
07:17 ಸರಿ, ನಾವೀಗ ಇಲ್ಲಿ Aliases (ಏಲಿಯಸಿಸ್) ಅನ್ನು ನಿಗದಿಪಡಿಸೋಣ.
07:23 ಅಂದರೆ- ನಾವು ಪಡೆಯುವ ಲಿಸ್ಟ್ ನಲ್ಲಿ, ಅರ್ಥಪೂರ್ಣ ಮತ್ತು ವಿವರಣಾತ್ಮಕ ಲೇಬಲ್ ಗಳು ಅಥವಾ ಹೆಡರ್ ಗಳನ್ನು ಒದಗಿಸೋಣ.
07:32 ಹಾಗಾಗಿ, 'Name' ಫೀಲ್ಡ್, 'Member Name' ಅನ್ನು ಏಲಿಯಸ್ ಆಗಿ ಮತ್ತು 'Phone' ಫೀಲ್ಡ್ 'Phone Number' ಅನ್ನು ಏಲಿಯಸ್ ಆಗಿ ಹೊಂದಿರಬಹುದು.
07:46 ನಾವು ಈ ಹೊಸ ಏಲಿಯಸ್ ಗಳನ್ನು ಎರಡು ಟೆಕ್ಸ್ಟ್ – ಬಾಕ್ಸ್ ಗಳಲ್ಲಿ ಟೈಪ್ ಮಾಡಿ, 'Next' ಬಟನ್ ಮೇಲೆ ಕ್ಲಿಕ್ ಮಾಡೋಣ.
07:57 ನಾವೀಗ ಕೊನೆಯ ಹಂತವಾದ 'Step 8 ' ನಲ್ಲಿದ್ದೇವೆ.
08:03 ಇಲ್ಲಿ, ನಮ್ಮ ಸರಳ ಕ್ವೆರಿಗೆ ನಾವು ಒಂದು ಒಳ್ಳೆಯ ವಿವರಣಾತ್ಮಕ ಹೆಸರನ್ನು ಕೊಡೋಣ.
08:09 ನಾವೀಗ 'Name of the Query’ ಲೇಬಲ್ ಗಾಗಿ, 'List of all members and their phone numbers' ಎಂದು ಟೈಪ್ ಮಾಡೋಣ.
08:20 ಗಮನಿಸಿ, ಈಗ ವಿಜಾರ್ಡ್ ನಲ್ಲಿ ನಮ್ಮ ಆಯ್ಕೆಗಳ ಮೇಲ್ನೋಟವನ್ನು ನಾವು ನೋಡುತ್ತಿದ್ದೇವೆ.
08:27 ಮತ್ತು ಇಲ್ಲಿಂದ ನಾವು ಹೇಗೆ ಮುಂದುವರಿಯಬಹುದು?
08:31 ಮೇಲ್ಗಡೆ ಬಲಭಾಗದಲ್ಲಿ 'Display Query' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ 'Finish' ಬಟನ್ ಮೇಲೆ ಕ್ಲಿಕ್ ಮಾಡೋಣ.
08:41 'wizard' ವಿಂಡೋ ಮುಚ್ಚಿದೆ ಮತ್ತು ಅಲ್ಲಿ 'List of all members and their phone numbers' ಎಂಬ ಒಂದು ಹೊಸ ವಿಂಡೋ ಇದೆ.
08:52 ಗಮನಿಸಿ, 'Members' ಟೇಬಲ್ ನಲ್ಲಿ ನಾವು ಮೊದಲು ಸೇರಿಸಿದ್ದ ನಾಲ್ಕು ಸದಸ್ಯರ ಹೆಸರನ್ನು ಅವರ ದೂರವಾಣಿ ಸಂಖ್ಯೆಗಳೊಂದಿಗೆ ನೋಡುತ್ತಿದ್ದೇವೆ.
09:04 ಅಲ್ಲದೆ, ಈ ಪಟ್ಟಿಯನ್ನು ಇಂಗ್ಲಿಷ್ ವರ್ಣಮಾಲೆಯ ಏರಿಕೆ ಕ್ರಮದಲ್ಲಿ ಹೊಂದಿಸಿರುವುದನ್ನು ಸಹ ನಾವು ನೋಡುತ್ತೇವೆ.
09:13 ಹೀಗೆ, ಇದು ನಮ್ಮ ಮೊದಲ ಸರಳ ಕ್ವೆರಿ ಆಗಿದೆ.
09:18 ಇಲ್ಲೊಂದು ಅಸೈನ್ಮೆಂಟ್ ಇದೆ.
09:21 ಎಲ್ಲಾ ಪುಸ್ತಕಗಳನ್ನು (Books) ಏರಿಕೆ ಕ್ರಮದಲ್ಲಿ ಪಟ್ಟಿ ಮಾಡುವ ಕ್ವೆರಿ ಒಂದನ್ನು ರಚಿಸಿ.
09:28 ಎಲ್ಲಾ ಫೀಲ್ಡ್ ಗಳನ್ನು ಸೇರಿಸಿ.
09:31 ಇದನ್ನು ‘List of all books in the Library’ ಎಂದು ಹೆಸರಿಸಿ.
09:38 ಇಲ್ಲಿಗೆ ನಾವು ’ಲಿಬರ್ ಆಫಿಸ್ ಬೇಸ್’ ನಲ್ಲಿ ವಿಜಾರ್ಡ್ ಅನ್ನು ಬಳಸಿ ಕ್ವೆರಿಗಳನ್ನು ರಚಿಸುವ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:45 ಸಂಕ್ಷಿಪ್ತವಾಗಿ, ನಾವು:
'ಕ್ವೆರಿ ವಿಜಾರ್ಡ್' ಅನ್ನು ಬಳಸಿ ಸರಳ ಕ್ವೆರಿಗಳನ್ನು ರಚಿಸಲು, 

ಫೀಲ್ಡ್ ಗಳನ್ನು ಆರಿಸಲು, ಫೀಲ್ಡ್ ಗಳ ವರ್ಗೀಕರಣದ ಕ್ರಮವನ್ನು ನಿಗದಿಪಡಿಸಲು ಮತ್ತು ಕ್ವೆರಿಗಾಗಿ ಸರ್ಚ್ ಮಾಡುವ ಬಗೆ ಅಥವಾ ಷರತ್ತುಗಳನ್ನು ಒದಗಿಸಲು ಕಲಿತೆವು.

10:00 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD

ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ.

10:12 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.
10:17 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
10:22 ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Sandhya.np14