Moodle-Learning-Management-System/C2/Uploading-and-editing-resources-in-Moodle/Kannada
Time | Narration |
00:01 | ಮೂಡಲ್ ನಲ್ಲಿ, Uploading and Editing Resources ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ಬಗ್ಗೆ ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:25 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:33 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:43 | Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:51 | ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ತಯಾರಿಸಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ. |
01:01 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
ಮೂಡಲ್ ನಲ್ಲಿ teacher ಲಾಗಿನ್ ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ನ್ನು ಅಸೈನ್ ಮಾಡಿರಬೇಕು. |
01:11 | ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು. |
01:16 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:22 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ನೀವು ಸೇರಿಸಿರಬೇಕು. |
01:28 | ಸ್ಟುಡೆಂಟ್ ಅನ್ನು ಹೇಗೆ ಸೇರಿಸುವುದೆಂದು ತಿಳಿಯಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ. |
01:35 | ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅನ್ನು ನಾನು ಸೇರಿಸಿದ್ದೇನೆ. |
01:41 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ. |
01:48 | ಎಡಗಡೆಯ ನ್ಯಾವಿಗೇಷನ್ ಮೆನ್ಯು ವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:53 | ಈ ಸರಣಿಯಲ್ಲಿ, ಈಗಾಗಲೇ page resource ಮತ್ತು folder resource ಗಳನ್ನು ಸೇರಿಸಿದ್ದೆವು. |
02:00 | ಈಗ ಇನ್ನೂ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಸೇರಿಸೋಣ.
ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು, ನಂತರ Turn Editing On ಅನ್ನು ಕ್ಲಿಕ್ ಮಾಡಿ. |
02:11 | Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
02:19 | ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು. |
02:26 | ಕೆಳಗೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ URL ಅನ್ನು ಆಯ್ಕೆ ಮಾಡಿ. ಬಲಗಡೆಯಲ್ಲಿ ರಿಸೋರ್ಸ್ ನ ಬಗ್ಗೆ ವಿವರಣೆಯನ್ನು ನೋಡುವಿರಿ. |
02:37 | URL resource ನಿಂದ ನಾವು online resource ಗಳಿಗೆ ಲಿಂಕ್ ಅನ್ನು ಸೇರಿಸಬಹುದು. |
02:43 | ಇವುಗಳು ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಇತ್ಯಾದಿಗಳಾಗಿರಬಹುದು. |
02:52 | ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
02:57 | Name ಫೀಲ್ಡ್ ನಲ್ಲಿ, Evolutes of basic curves ಎಂದು ಟೈಪ್ ಮಾಡುವೆನು. |
03:03 | ನಂತರ, External URL ಟೆಕ್ಸ್ಟ್-ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ URL ಅನ್ನು ಟೈಪ್ ಮಾಡಿ. |
03:10 | Description ಟೆಕ್ಸ್ಟ್-ಏರಿಯಾ ಒಂದು ಐಚ್ಛಿಕ ಫೀಲ್ಡ್ ಆಗಿದೆ. ನಾನು ಇಲ್ಲಿ ತೋರಿಸಿದಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು. |
03:17 | ಈ ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
03:24 | ಈಗ ವಿಭಾಗವನ್ನು ವಿಸ್ತರಿಸಲು, Appearance ಮೇಲೆ ಕ್ಲಿಕ್ ಮಾಡಿ. |
03:29 | ಇಲ್ಲಿರುವ Display ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ. |
03:35 | ಈ ಡ್ರಾಪ್-ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.
Automatic- ಇದು, browser settings ಮತ್ತು screen resolution ಗಳನ್ನು ಆಧರಿಸಿ, ಅತ್ಯುತ್ತಮ ಆಯ್ಕೆಯನ್ನು ಆರಿಸುತ್ತದೆ. |
03:45 | Embed - ಕೋರ್ಸ್ ನಲ್ಲಿಯೇ ವಿಡಿಯೋವನ್ನು ತೆರೆಯುತ್ತದೆ.
Open - ಯೂಸರ್ ಅನ್ನು ಅದೇ ವಿಂಡೋದಲ್ಲಿ URL ಗೆ ಕೊಂಡೊಯ್ಯುತ್ತದೆ. |
03:55 | In pop-up - ವಿಡಿಯೋಅನ್ನು ಒಂದು ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆಯುತ್ತದೆ. |
04:00 | ನೀವು In pop-up ಅನ್ನು ಆರಿಸಿಕೊಂಡಾಗ, Pop-up width ಮತ್ತು Pop-up height ಆಯ್ಕೆಗಳು ಸಕ್ರಿಯವಾಗುತ್ತವೆ.
ನೀವು ಇಲ್ಲಿ ನಿಮಗೆ ಬೇಕಾದ ವ್ಯಾಲ್ಯುಗಳನ್ನು ಕೊಡಬಹುದು. |
04:12 | Embed ಅನ್ನು ನಾನು Display ಯ ಆಯ್ಕೆಯಾಗಿ ಆರಿಸುವೆನು. |
04:17 | ಕೆಳಗೆ Activity completion ವಿಭಾಗಕ್ಕೆ ಸ್ಕ್ರೋಲ್ ಮಾಡಿ. ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
04:24 | ಯಾವುದೇ ಒಂದು ಚಟುವಟಿಕೆಯನ್ನು ಮುಗಿಸಿದ್ದನ್ನು ನೋಡಬೇಕೇ ಎಂದು ನಿರ್ಧರಿಸಲು ಈ ವಿಭಾಗವು ಟೀಚರ್ ಗೆ ಸಹಾಯ ಮಾಡುತ್ತದೆ. |
04:32 | Completion tracking ನ ಅಡಿಯಲ್ಲಿ ಮೂರು ಆಯ್ಕೆಗಳಿವೆ.
ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು. |
04:41 | ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುತ್ತೇನೆ. Student must view this activity to complete it ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡುತ್ತೇನೆ. |
04:51 | ಕೆಳಗೆ ಸ್ಕ್ರೋಲ್ ಮಾಡಿ. ಇಲ್ಲಿರುವ Save and return to course ಬಟನ್ ಅನ್ನು ಕ್ಲಿಕ್ ಮಾಡಿ. |
04:58 | ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆ ಎಂದು ಸೂಚಿಸುತ್ತದೆ. |
05:05 | ಈಗ ಒಂದು book resource ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಅಧ್ಯಾಯಗಳು (ಚಾಪ್ಟರ್) ಮತ್ತು ಉಪ-ಅಧ್ಯಾಯಗಳನ್ನು (ಸಬ್-ಚಾಪ್ಟರ್) ಹೊಂದಿರುತ್ತದೆ. |
05:16 | ಇದು ಮಲ್ಟಿ-ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು. |
05:20 | ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ. |
05:23 | Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
05:30 | ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ Book ಅನ್ನು ಆಯ್ಕೆಮಾಡಿ. |
05:34 | ಆಕ್ಟಿವಿಟಿ ಚೂಸರ್ ನ ಕೆಳತುದಿಯಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
05:39 | Name ಫೀಲ್ಡ್ ನಲ್ಲಿ, Iterating evolutes and involutes ಎಂದು ಟೈಪ್ ಮಾಡಿ. |
05:45 | ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ. |
05:48 | ಈ ವಿಭಾಗವನ್ನು ವಿಸ್ತರಿಸಲು, Appearanceಮೇಲೆ ಕ್ಲಿಕ್ ಮಾಡಿ. |
05:51 | ಮೊದಲನೆಯ ಆಯ್ಕೆ Chapter formatting ಆಗಿದೆ.
ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ನಾವು ಹೇಗೆ ನೋಡುತ್ತೇವೆ ಎಂದು ಇದು ನಿರ್ಧರಿಸುತ್ತದೆ. |
05:59 | ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ವಿವರಣೆಗಳನ್ನು ಓದಲು, ನೀವು ಡ್ರಾಪ್-ಡೌನ್ ನ ಹಿಂದೆ ಇರುವ Help ಐಕಾನ್ ಅನ್ನು ಕ್ಲಿಕ್ ಮಾಡಬಹುದು. |
06:08 | ನಾನು ಇದನ್ನು Numbers ಎಂದೇ ಇಡುವೆನು. |
06:11 | ಮುಂದಿನ ಆಯ್ಕೆಯು Style of navigation ಆಗಿದೆ. ಹಿಂದಿನ ಮತ್ತು ಮುಂದಿನ ಲಿಂಕ್ ಗಳನ್ನು ನಾವು ಹೇಗೆ ತೋರಿಸುತ್ತೇವೆ ಎಂದು ಇದು ನಿರ್ಧರಿಸುತ್ತದೆ. |
06:19 | TOC ಇದು Table of Contents ಆಗಿದೆ. |
06:23 | Images ಅನ್ನು ಆಯ್ಕೆ ಮಾಡಿದರೆ, previous ಮತ್ತು next ಗಳನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ. |
06:29 | Text ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು. |
06:34 | ಪ್ರತಿಯೊಂದು ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ. |
06:40 | ಆಗ, ಮೊದಲು ಟೆಕ್ಸ್ಟ್ ಎಂದು ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಇದು ಬದಲಾಯಿಸುತ್ತದೆ. |
06:45 | ನಾನು Text ಅನ್ನು Style of navigation ಎಂದು ಆಯ್ಕೆಮಾಡುವೆನು. |
06:49 | ನಂತರ, Restrict Access ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
ಈ ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. |
06:59 | ಡಿಫಾಲ್ಟ್ ಆಗಿ, ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಎಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಲು ಸಾಧ್ಯವಿದೆ. |
07:08 | ಈಗ ನಾನು Add restriction ಬಟನ್ ಅನ್ನು ಕ್ಲಿಕ್ ಮಾಡುವೆನು. |
07:12 | ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು. |
07:21 | ನಾವು ಈಮೊದಲು ರಚಿಸಿದ URL ರಿಸೋರ್ಸ್ ಗೆ, “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” ಅನ್ನು ಹಾಕೋಣ. |
07:27 | ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕುವವರೆಗೆ, ಈ ಪುಸ್ತಕವನ್ನು ಆಕ್ಸೆಸ್ ಮಾಡಲು ನಾವು ನಿರ್ಬಂಧವನ್ನು ಹಾಕೋಣ. |
07:33 | Activity completion ಮೇಲೆ ಕ್ಲಿಕ್ ಮಾಡಿ. restriction ಗಾಗಿ ನಾವು ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿಯ ಫೀಲ್ಡ್ ಗಳು ವಿಭಿನ್ನವಾಗಿರುತ್ತವೆ. |
07:42 | Activity completion ಡ್ರಾಪ್-ಡೌನ್ ನಲ್ಲಿ, Evolutes of basic curve ಅನ್ನು ಆಯ್ಕೆಮಾಡಿ.
ನಂತರ “ಕಂಡಿಷನ್” ಗಾಗಿ, Must be marked complete ಅನ್ನು ಆಯ್ಕೆಮಾಡಿ. |
07:54 | ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳತುದಿಯಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ. |
08:00 | ಈಗ ನಾವು ಈ ಪುಸ್ತಕದಲ್ಲಿ ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಬಹುದು. |
08:05 | Chapter title ಅನ್ನು Introduction ಎಂದು ಟೈಪ್ ಮಾಡಿ. |
08:09 | Content ಅನ್ನು Introduction to evolutes and involutes ಎಂದು ಟೈಪ್ ಮಾಡಿ.
ನಿಮ್ಮ ಹತ್ತಿರ ಪಾಠದ ಟಿಪ್ಪಣಿಯಿದ್ದರೆ (lecture note), ನೀವು ಅದನ್ನು ಕಾಪಿ ಮತ್ತು ಪೇಸ್ಟ್ ಮಾಡಬಹುದು. |
08:19 | ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
08:24 | ಈಗ ಪೇಜ್ ನ ಮಧ್ಯಭಾಗದಲ್ಲಿ ನೀವು ಈ ಚಾಪ್ಟರ್ ಅನ್ನು ನೋಡಬಹುದು. ಬಲಭಾಗದಲ್ಲಿ, table of contents ಇದೆ. |
08:32 | Exit Book ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಾವು ಮತ್ತೆ Calculus ಕೋರ್ಸ್ ಗೆ ಹಿಂದಿರುಗುತ್ತೇವೆ. |
08:38 | ಬಲಗಡೆ Table of Contents ಬ್ಲಾಕ್ ನಲ್ಲಿ, Introduction ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ. |
08:46 | ಇವು Edit, Delete, Hide ಮತ್ತು Add new chapter ಗಳಾಗಿವೆ. |
08:55 | ಈಗ ನಾನು ಒಂದು ಸಬ್-ಚಾಪ್ಟರ್ ಅನ್ನು ಸೇರಿಸುತ್ತೇನೆ. Add new chapter ಎಂದು ಸೂಚಿಸುವ plus ಐಕಾನ್ ಅನ್ನು ಕ್ಲಿಕ್ ಮಾಡಿ.
ಸಬ್-ಚಾಪ್ಟರ್ ಗಳನ್ನು ಚಾಪ್ಟರ್ ಗಳಂತೆಯೇ ರಚಿಸಲಾಗುತ್ತದೆ. |
09:07 | ಇವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಒಂದು ಹೆಚ್ಚಿನ ಚೆಕ್- ಬಾಕ್ಸ್ ಅನ್ನು ಹೊಂದಿರುತ್ತವೆ. ಈ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
09:15 | Chapter title ಅನ್ನು Classical evolutes and involutes ಎಂದು ಟೈಪ್ ಮಾಡಿ.
ಇಲ್ಲಿ ತೋರಿಸಿರುವಂತೆ ಕಂಟೆಂಟ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ. |
09:24 | ಈ ಟ್ಯುಟೋರಿಯಲ್ ನ Code files ನಲ್ಲಿ, Book-IteratingEvolutesAndInvolutes.odt ಎಂಬ ಫೈಲ್ ನಲ್ಲಿ ನೀವು ಇದರ ಕಂಟೆಂಟ್ ಅನ್ನು ಪಡೆಯಬಹುದು. |
09:31 | ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
09:37 | ಈಗ ನೀವು ಸಬ್-ಚಾಪ್ಟರ್ ಅನ್ನು ನೋಡಬಹುದು. ಅಲ್ಲದೆ, ಹಿಂದಿನ ಚಾಪ್ಟರ್ ಗಾಗಿ ನ್ಯಾವಿಗೇಷನ್ ಅನ್ನು ಗಮನಿಸಿ. |
09:44 | ಬಲಗಡೆಯ ಐಕಾನ್ ಗಳ ಬದಿಯಲ್ಲಿ ಒಂದು ಹೆಚ್ಚಿನ ಐಕಾನ್ ಇರುವುದನ್ನು ಗಮನಿಸಿ. |
09:49 | ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಚಾಪ್ಟರ್ ಗಳನ್ನು ಹೊಂದಿಸಲು ಇರುವವು. |
09:54 | ನಾವು ಈ ಸಬ್-ಚಾಪ್ಟರ್ ಅನ್ನು ಮೇಲೆ ಸರಿಸಿದರೆ ಏನಾಗುವುದೆಂದು ನೋಡೋಣ.
Up ಆರೋ ವನ್ನು ಕ್ಲಿಕ್ ಮಾಡಿ. |
10:01 | Introduction ಈಗ ಸಬ್-ಚಾಪ್ಟರ್ ನ ಬದಲಿಗೆ, ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ. |
10:08 | ಇದನ್ನು ಮತ್ತೆ ಮೊದಲನೆಯ ಚಾಪ್ಟರ್ ಆಗುವಂತೆ ಮಾಡಿ. |
10:11 | Classical evolutes and involutes ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?
ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ gear ಐಕಾನ್ ಮೇಲೆ ಕ್ಲಿಕ್ ಮಾಡಿ. |
10:21 | ಈಗ ಇದನ್ನು ಸಬ್-ಚಾಪ್ಟರ್ ಮಾಡಲು, Subchapter ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
10:26 | ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ. |
10:30 | ಈಗ ಮತ್ತೆ Calculus ಕೋರ್ಸ್ ಗೆ ಹಿಂದಿರುಗೋಣ. |
10:34 | Basic Calculus ಗಾಗಿ ನಾವು ಈಗ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ. |
10:40 | ಈ ರಿಸೋರ್ಸ್ ಗಳನ್ನು ಡ್ರ್ಯಾಗ್ ಮಾಡಿ (ಎಳೆಯುವುದರ) ಇವುಗಳನ್ನು ಮತ್ತೆ ಹೊಂದಿಸಬಹುದು. |
10:45 | ನಾನು Evolutes of Basic curves URL ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು. |
10:52 | ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು Edit ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. |
10:58 | ರಿಸೋರ್ಸ್ ಅನ್ನು edit, hide, duplicate ಮತ್ತು delete ಮಾಡಲು ಇಲ್ಲಿ ಸೆಟ್ಟಿಂಗ್ ಗಳಿವೆ.
ಇವು ಸ್ವಯಂ ವಿವರಣಾತ್ಮಕವಾಗಿದೆ. |
11:09 | ಇಲ್ಲಿ Move right ಮತ್ತು Assign roles ಎಂಬ ಇನ್ನೆರಡು ಆಯ್ಕೆಗಳಿವೆ. |
11:14 | Move right ಅನ್ನು ಕ್ಲಿಕ್ ಮಾಡಿ. ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ. |
11:21 | ಇನ್ನೊಂದು ರಿಸೋರ್ಸ್ ನ ಭಾಗವಾಗಿರುವ ಒಂದು ರಿಸೋರ್ಸ್ ನ ದೃಶ್ಯ ನಿರೂಪಣೆಗೆ ಇದು ಸಹಾಯಕವಾಗಿದೆ. |
11:28 | ಈ ರಿಸೋರ್ಸ್ ಅನ್ನು ಅದರ ಮೊದಲಿನ ಜಾಗಕ್ಕೆ ತರಲು, ನಾನು Move left ಮೇಲೆ ಕ್ಲಿಕ್ ಮಾಡುವೆನು. |
11:34 | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು. |
11:38 | ಈಗ ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುವೆನು. |
11:41 | ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ಹೀಗೆ ನೋಡುವರು. |
11:46 | ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಗಳು ಟಿಕ್ ಆಗಿಲ್ಲದಿರುವುದನ್ನು ಗಮನಿಸಿ. |
11:51 | ಈ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಅವಳು ಈ URL ಅನ್ನು ನೋಡಬೇಕಾಗುತ್ತದೆ. |
11:56 | URL ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕುವವರೆಗೆ, book ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ. |
12:02 | ನಾನು Evolutes of basic curves ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು. |
12:07 | ಈಗ ಬ್ರೆಡ್-ಕ್ರಂಬ್ ನಲ್ಲಿರುವ Calculus ಲಿಂಕ್ ಅನ್ನು ಕ್ಲಿಕ್ ಮಾಡಿ.
ಈಗ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕಲಾಗಿದೆ ಮತ್ತು ಬುಕ್ ಸ್ಟುಡೆಂಟ್ ಗೆ ಲಭ್ಯವಿದೆ. |
12:17 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
12:23 | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ. |
12:34 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚು ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಿ. |
12:42 | ನಿರ್ದೇಶಿಸಿರುವಂತೆ ಅವುಗಳನ್ನು ಮತ್ತೆ ಜೋಡಿಸಿ.
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
12:50 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:59 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:09 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
13:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:26 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |