DWSIM-3.4/C2/Sensitivity-Analysis-and-Adjust/Kannada

From Script | Spoken-Tutorial
Revision as of 10:47, 8 January 2020 by Nancyvarkey (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:00 DWSIMನ ಬಗ್ಗೆ ಇರುವ ಈ spoken tutorial ಗೆ ಸ್ವಾಗತ.
00:04 ಈ ಟ್ಯುಟೋರಿಯಲ್-ನಲ್ಲಿ, ನಾವು sensitivity analysis ಮತ್ತು adjust ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:10 ಈ ಟ್ಯುಟೋರಿಯಲ್ ಅನ್ನು, ಪ್ರೊ. ಕಣ್ಣನ್ ಮೌದ್ಗಲ್ಯ ತಯಾರಿಸಿದ್ದಾರೆ.
00:12 ಈ ಟ್ಯುಟೋರಿಯಲ್-ನಲ್ಲಿ, ನಾವು 'ಸೆಪರೇಶನ್' (separation) ಗಾಗಿ, ಕರಾರುವಾಕ್ಕಾದ 'ರಿಫ್ಲಕ್ಸ್ ರೇಶಿಯೊ' ಅನ್ನು (reflux ratio) ನಿರ್ಧರಿಸಲಿದ್ದೇವೆ.
00:19 ಇದನ್ನು ನಾವು ಮೊದಲಿಗೆ Sensitivity Analysis ಮುಖಾಂತರ ಮಾಡುವೆವು.
00:24 ನಾವು ಇದನ್ನು, Adjust ಆಪರೇಷನ್ ಮುಖಾಂತರ ಪುನರಾವರ್ತಿಸುವೆವು.
00:28 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತೇನೆ.
00:34 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ :

DWSIM ನಲ್ಲಿ, simulation file ಅನ್ನು ಹೇಗೆ ತೆರೆಯುವುದು, rigorous distillation simulation ಅನ್ನು ಹೇಗೆ ನಡೆಸುವುದು, flowsheetಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು ಎಂಬುದು ತಿಳಿದಿರಬೇಕು.

00:48 ನಮ್ಮ ವೆಬ್ಸೈಟ್ spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
00:55 ಈ ಸೈಟ್ ನಿಂದ, ಈ ಟ್ಯುಟೋರಿಯಲ್ ಗಳು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ನೀವು ಪಡೆಯಬಹುದು.
01:02 ಈ 'ಸ್ಲೈಡ್', ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಒಂದರಲ್ಲಿ, ಬಗೆಹರಿಸಲಾದ ಸಮಸ್ಯೆಯನ್ನು ತೋರಿಸುತ್ತದೆ.
01:08 ಇದನ್ನು, Rigorous distillation ಅನ್ನು ಬಳಸಿ, ಬಗೆಹರಿಸಲಾಗಿತ್ತು.
01:12 ಪಡೆದ ಪ್ಯೂರಿಟಿ ಯು (ಶುದ್ಧತೆ), ನಮಗೆ ಬೇಕಾದ್ದಕ್ಕಿಂತ ಕಡಿಮೆಯಾಗಿದೆ.
01:17 ಈ ಪ್ಯೂರಿಟಿ ಯನ್ನು ನಾವು ಹೇಗೆ ಸುಧಾರಿಸಬೇಕು ?
01:19 ನಾವು 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವುದು ಅಗತ್ಯವಾಗಿದೆ.
01:23 DWSIM ನಲ್ಲಿ, ಸಂಬಂಧಿಸಿದ ಫೈಲ್ ಅನ್ನು ತೆರೆಯೋಣ.
01:28 ಫೈಲ್-ನ ಹೆಸರು ಶೀರ್ಷಿಕೆಯಲ್ಲಿದೆ.
01:30 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:34. rigorous dot dwxml ಫೈಲ್ ಅನ್ನು ಕೂಡ ತೆರೆದಿದ್ದೇನೆ.
01:40 ಡೌನ್ಲೋಡ್ ಮಾಡಲು, ಈ ಫೈಲ್, ನಮ್ಮ ವೆಬ್ಸೈಟ್ spoken-tutorial.org ಯಲ್ಲಿ, ನಿಮಗೆ ಲಭ್ಯವಿದೆ.
01:48 Distillate ಅನ್ನು ಕ್ಲಿಕ್ ಮಾಡೋಣ.
01:50 Properties ವಿಭಾಗದಲ್ಲಿ, Molar Composition ಅನ್ನು ಹುಡುಕೋಣ. ಇದು ಐಟಂ 2 ಆಗಿದೆ.
02:00 Mixture ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
02:04 Benzene mole fraction, 0.945 ಆಗಿದೆ.
02:09 ನಮಗೆ ಇದನ್ನು, 0.95 ಗೆ ಹೆಚ್ಚಿಸಬೇಕಾಗಿದೆ.
02:13 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವ ಮೂಲಕ, ನಾವು ಇದನ್ನು ಮಾಡಲು ಪ್ರಯತ್ನಿಸೋಣ.
02:18 ಸ್ವಲ್ಪ ಹೊತ್ತಿನ ಮುಂಚೆ, ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
02:22 File ಬಟನ್-ನ ಬಲಭಾಗದಲ್ಲಿರುವ, ಮೆನ್ಯು ಬಾರ್-ನಲ್ಲಿ, Optimization ಎಂಬ ಆಯ್ಕೆಯನ್ನು ಹುಡುಕಿ.
02:28 ಅದನ್ನು ನಾನು ಕ್ಲಿಕ್ ಮಾಡುತ್ತೇನೆ. Sensitivity Analysis ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ.
02:37 sensitivity analysis ನ ಮೆನ್ಯು ಬಾರ್-ನಲ್ಲಿ, ನಾವು ಐದು ಮೆನ್ಯುಗಳನ್ನು ನೋಡಬಹುದು.
02:43 Sensitivity Studies ಅನ್ನು ಗುರುತಿಸಿ.
02:47 ಅದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.
02:51 ಈಗ ನಾವು, Case Manager ಎಂಬ ತಲೆಬರಹದ ಕೆಳಗೆ, ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಹುದು.
02:58 New ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:01 Sensitivity Analysis ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ.
03:07 ನಮಗೆ SACase0 ಎಂಬ ಹೆಸರು ಕಾಣುತ್ತದೆ.
03:12 ನಾವು ಸಾಲ್ವ್ ಮಾಡಲು ಬಯಸುವ ಸಮಸ್ಯೆಯನ್ನು ನೆನಪಿಸಿಕೊಳ್ಳಿ:
03:14 ಉತ್ತಮ ಪ್ಯೂರಿಟಿ ಯನ್ನು ಪಡೆಯಲು, 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
03:19 ಆದ್ದರಿಂದ, 'ರಿಫ್ಲಕ್ಸ್ ರೇಶಿಯೊ', ಒಂದು 'ಇಂಡಿಪೆಂಡೆಂಟ್ ವೇರಿಯಬಲ್' ಆಗಿದೆ.
03:24 ಇದನ್ನು ನಾವು, Independent Variables ಬಟನ್-ನ ಮುಖಾಂತರ ಕಾರ್ಯಗತಗೊಳಿಸೋಣ.
03:29 Object ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ, ನಾನು ಕ್ಲಿಕ್ ಮಾಡುತ್ತೇನೆ.
03:34 ನಮ್ಮ distillation columnನ ಹೆಸರಾಗಿರುವ DC-000 ದ ಮೇಲೆ ಕ್ಲಿಕ್ ಮಾಡಿ.
03:40 ಬಲಗಡೆಗೆ, Property ಎಂಬ ಒಂದು ಆಯ್ಕೆ ಇದೆ.
03:45 ಇದನ್ನು ನಾನು ಒಳಗಡೆ ತರುತ್ತೇನೆ.
03:47 ಡೌನ್-ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
03:50 ಕೆಳಗೆ ಸ್ಕ್ರೋಲ್ ಮಾಡಿ, Condenser_Specification_Value ಅನ್ನು ಗುರುತಿಸುತ್ತೇನೆ.
03:55 ಅದು, ಈ ಮೆನುವಿನ ಕೆಳಗಡೆ ಬರುತ್ತದೆ.
03:57 'ರಿಫ್ಲಕ್ಸ್ ರೇಶಿಯೊ' ದ ಕಾರ್ಯವನ್ನು ಅದು ನಿರ್ವಹಿಸುತ್ತದೆ.
03:59 ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
04:03 ಇದು ಆಯ್ಕೆಯಾಗಿರುವುದನ್ನು ನೀವಿಲ್ಲಿ ನೋಡಬಲ್ಲಿರಿ.
04:07 ನಮಗೆ, ನಮ್ಮ ರಿಫ್ಲಕ್ಸ್ ರೇಶಿಯೊ, 2ಕ್ಕಿಂತ ಹೆಚ್ಚು ಇರಬೇಕೆಂಬುದನ್ನು ನೆನಪಿಸಿಕೊಳ್ಳಿ.
04:12 ಆದ್ದರಿಂದ, ನಾವು Lower limit ಅನ್ನು 2 ಎಂದು ನಮೂದಿಸುವೆವು.
04:16 Upper limit ಅನ್ನು 2.5 ಗೆ ಬದಲಾಯಿಸಿ.
04:20 Number of Points ಅನ್ನು 6 ಕ್ಕೆ ಬದಲಾಯಿಸಿ.
04:24 ನಂತರ, ನಾವು Dependent Variable ನ ಮೇಲೆ ಕ್ಲಿಕ್ ಮಾಡೋಣ.
04:27 ಎಡಭಾಗದಲ್ಲಿ, Variables ಎಂಬ ಒಂದು ಕಾಲಂ ಅನ್ನು ನೋಡಿ.
04:33 ಅದರ ಕೆಳಗೆ, Add variables ಎಂಬ ಹಸಿರು ಬಣ್ಣದ ಒಂದು ಪ್ಲಸ್ ಬಟನ್ ಇದೆ. ಇದರ ಮೇಲೆ ಕ್ಲಿಕ್ ಮಾಡಿ.
04:41 ಒಂದು ಹೊಸ ಸಾಲು ಕಾಣಿಸಿಕೊಳ್ಳುತ್ತದೆ. Objectನ ಕೆಳಗೆ ಇರುವ, ಡೌನ್- ಆರೋ ಅನ್ನು ಕ್ಲಿಕ್ ಮಾಡಿ.
04:46 ಇದನ್ನು ನೀವು, ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
04:48 Distillate ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:52 Property ಯ ಕೆಳಗೆ ಇರುವ ಡೌನ್-ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
04:56 ಡ್ರಾಪ್-ಡೌನ್ ಮೆನ್ಯು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
05:01 Molar Fraction (Mixture) – Benzene ಅನ್ನು ಗುರುತಿಸಿ.
05:05 ಅದನ್ನು ನೋಡಲು, ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗುವುದು.
05:08 ಇದರಂತೆಯೇ ಇರುವ ಇನ್ನೂ ಅನೇಕ ಆಯ್ಕೆಗಳಿವೆ.
05:12 ನೀವು ಇದನ್ನು ಆಯ್ಕೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಕ್ಲಿಕ್ ಮಾಡಿ.
05:17 ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ Results ನ ಮೇಲೆ ಕ್ಲಿಕ್ ಮಾಡಿ.
05:24 Start Sensitivity Analysis ಎಂಬ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
05:31 ಒಂದರ ನಂತರ ಒಂದು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಕಾಲಂ, ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
05:36 ಸಿಮುಲೇಷನ್-ನ ಕೊನೆಗೆ, ನಮಗೆ Done ಎಂಬ ಮೆಸೇಜ್ ಸಿಗುತ್ತದೆ.
05:40 2 ರಿಂದ 2.5 ರ ವೆರೆಗೆ, ಆರು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಫಲಿತಾಂಶವನ್ನು ನೀವು ನೋಡುತ್ತೀರಿ.
05:49 ಇದಕ್ಕೆ ಅನುಗುಣವಾದ benzene ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
05:54 ನಾವು Independent Variables ಗೆ ಹಿಂದಿರುಗಬಹುದು.
05:58 ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. Resultsಗೆ ಹಿಂದಿರುಗಿ.
06:05 Start Sensitivity Analysis ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
06:10 ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡಬಹುದು.
06:14 ನಾವು ಮೇಲೆ ಸ್ಕ್ರೋಲ್ ಮಾಡೋಣ.
06:17 ನಮಗೆ ಬೇಕಾದ ಪ್ಯೂರಿಟಿ 0.95 ಯು, 2.05 ರಿಂದ 2.1ರ ನಡುವೆ ಸಿಗುತ್ತದೆ ಎಂಬುದನ್ನು ನೋಡಿ.
06:26 Independent Variables ನಲ್ಲಿ, ನೀವು ಇವುಗಳನ್ನು lower ಮತ್ತು upper limits ಎಂದು ಆಯ್ಕೆ ಮಾಡಿ, ಈ ಕ್ರಿಯೆಯನ್ನು ಪುನರಾವರ್ತಿಸಬಹುದು.
06:34 ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ.
06:36 ಇದೇ ರೀತಿಯಲ್ಲಿ, 0.95 ಪ್ಯೂರಿಟಿ ಗಾಗಿ ಬೇಕಾದ, ಸರಿಯಾದ ರಿಫ್ಲಕ್ಸ್ ರೇಶಿಯೊ ಅನ್ನು ನಾವು ಕಂಡುಹಿಡಿಯಬಹುದು.
06:45 ಇಲ್ಲಿ ನಿಮಗಾಗಿ ಒಂದು ಅಸೈನ್-ಮೆಂಟ್ ಇದೆ. 0.95 ಪ್ಯೂರಿಟಿ ಗಾಗಿ, ಬೇಕಾಗಿರುವ ರಿಫ್ಲಕ್ಸ್ ರೇಶಿಯೊ ಅನ್ನು ನೀವು ಕಂಡುಹಿಡಿಯಲು ಸಾಧ್ಯವೇ?
06:52 ಈಗಷ್ಟೇ ನಾನು ವಿವರಿಸಿದ ಪದ್ಧತಿಯನ್ನು ಅನುಸರಿಸಿ.
06:56 ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ.
07:01 ಈ ಫಲಿತಾಂಶಗಳನ್ನು ನಾವು ಗ್ರಾಫ್ ನಲ್ಲಿ ಸಹ ನೋಡಬಹುದು.
07:07 Chart ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:10 Draw ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಹುದು.
07:15 Distillate composition ವರ್ಸಸ್ condenser specification value, ಇದು ರಿಫ್ಲಕ್ಸ್ ರೇಶಿಯೊ ಆಗಿದೆ.
07:24 ಈ ಪಾಪ್-ಅಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
07:26 ಈ ಸಿಮುಲೇಷನ್ ಅನ್ನು, "sensitivity" ಎಂದು ಸೇವ್ ಮಾಡುತ್ತೇನೆ.
07:36 ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
07:39 ಹಿಂದಿನ ಅಸೈನ್ಮೆಂಟ್-ನಲ್ಲಿ, bottoms ನಲ್ಲಿ, Benzene mole fraction ಎಂಬ, ಎರಡನೆಯ 'ಡಿಪೆಂಡೆಂಟ್ ವೇರಿಯಬಲ್' ಒಂದನ್ನು ಸೇರಿಸಿ.
07:46 'ಡಿಸ್ಟಿಲ್ಲೇಟ್' ಮತ್ತು 'ಬಾಟಮ್ಸ್' ಎರಡರ ಕಂಪೋಸಿಷನ್ ಗಳನ್ನೂ ಗಮನಿಸಿ.
07:51 Chart ಅನ್ನು ಬಳಸಿ, ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡುವುದೆಂದು ತಿಳಿದುಕೊಳ್ಳಿ.
07:55 ನಾವು ಇನ್ನೊಂದು ಅಸೈನ್-ಮೆಂಟ್ ಅನ್ನು ಮಾಡೋಣ.
07:59 ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067 ರಿಫ್ಲಕ್ಸ್ ರೇಷಿಯೋ, ಇಲ್ಲಿ ಸರಿಯಾಗುತ್ತದೆಯೇ ಎಂದು ಪರಿಶೀಲಿಸಿ.
08:06 ಇದಕ್ಕಾಗಿ, ಮತ್ತೊಮ್ಮೆ rigorous.dwxml ನೊಂದಿಗೆ ಪ್ರಾರಂಭಿಸಿ.
08:11 'ರಿಫ್ಲಕ್ಸ್ ರೇಷಿಯೋ' ಅನ್ನು 2.067ಗೆ ಬದಲಾಯಿಸಿ.
08:15 ಸಿಮುಲೇಟ್ ಮಾಡಿ.
08:17 ನಿಮಗೆ ದೊರೆಯುವ 'ಡಿಸ್ಟಿಲ್ಲೇಟ್ ಕಂಪೋಸಿಷನ್' ಯಾವುದು?
08:20 ಬೇಕಾಗಿರುವ ರಿಫ್ಲಕ್ಸ್ ರೇಷಿಯೋ ಅನ್ನು, ನಾವು 'ಟ್ರಯಲ್ ಮತ್ತು ಎರರ್' ಪದ್ಧತಿಯಿಂದ ಕಂಡುಹಿಡಿದೆವು.
08:27 ಇದನ್ನು ನೇರವಾಗಿ ಕಂಡುಹಿಡಿಯಲು, DWSIM ಒಂದು ಅದ್ಭುತವಾದ ವಿಧಾನವನ್ನು ಹೊಂದಿದೆ.
08:32 ಅದನ್ನು Adjust ಎನ್ನುತ್ತಾರೆ.
08:35 ಬಲಭಾಗದಲ್ಲಿರುವ object palette ನಿಂದ, ನಾವು Adjust ಅನ್ನು ಹುಡುಕೋಣ.
08:42 ಅದನ್ನು ಫ್ಲೋಶೀಟ್-ಗೆ ಎಳೆದು ತಂದು, ಕಾಲಂನ ಹೊರಗೆ ಮತ್ತು distillate ನ ಕೆಳಗೆ ಇರಿಸಿ.
08:49 ನಾನು ಅದನ್ನು ಕ್ಲಿಕ್ ಮಾಡಿ, ಆಯ್ಕೆ ಮಾಡುತ್ತೇನೆ.
08:52 Properties ಟ್ಯಾಬ್-ನಲ್ಲಿ, Controlled variable ಎಂಬ ಒಂದು ಆಯ್ಕೆಯನ್ನು ನಾವು ನೋಡುತ್ತೇವೆ.
08:58 ಇದು, ಡಿಪೆಂಡೆಂಟ್ ವೇರಿಯಬಲ್, ಎಂದರೆ distillate composition ಗೆ ಸಂಬಂಧಿಸಿದೆ.
09:05 ಇದನ್ನು ಈಗಾಗಲೇ ಓಪನ್ ಮಾಡಿರದಿದ್ದರೆ, Controlled Variableನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಇದು ತೆರೆದುಕೊಳ್ಳುತ್ತದೆ.
09:13 Click to Select ಎಂದು ತೋರಿಸುವಲ್ಲಿ ಕ್ಲಿಕ್ ಮಾಡಿ.
09:17 ಬಲತುದಿಯಲ್ಲಿರುವ ಬಟನ್ ನ ಮೇಲೆ ಕ್ಲಿಕ್ ಮಾಡಿ.
09:19 ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು ಕಾಲಂಗಳನ್ನು ಹೊಂದಿರುತ್ತದೆ.
09:23 Typeನ ಕೆಳಗೆ, Material Stream ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಿ.
09:29 Object ಕಾಲಂ-ನಲ್ಲಿ, ಎಂದರೆ, ಮಧ್ಯದ ಕಾಲಂನಲ್ಲಿ, Distillate ಅನ್ನು ಆಯ್ಕೆ ಮಾಡಿ.
09:35 ಬಲತುದಿಯ ಕಾಲಂನಲ್ಲಿ, ಇದು ಅನೇಕ ವೇರಿಯಬಲ್-ಗಳನ್ನು ಉತ್ಪಾದಿಸುತ್ತದೆ.
09:39 Molar Fraction (Mixture) – Benzene ಅನ್ನು ಗುರುತಿಸಿ.
09:44 Solid Phase ನ ನಮೂದುಗಳು ಮುಗಿದ ಮೇಲೆ ಅದು ಬರುತ್ತದೆ. ಅದನ್ನು ಕ್ಲಿಕ್ ಮಾಡಿ.
09:51 ಮತ್ತೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ಇದೇ ರೀತಿಯ ಅನೇಕ ಆಯ್ಕೆಗಳಿವೆ.
09:55 OK ಅನ್ನು ಕ್ಲಿಕ್ ಮಾಡಿ.
09:58 Properties ಮೆನುವಿನಲ್ಲಿ, ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
10:04 ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ ಈಗ, Manipulated Variable ನೊಂದಿಗೆ ಮಾಡಿ.
10:09 ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
10:12 ಪಾಪ್-ಅಪ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Distillation column ಅನ್ನು ಗುರುತಿಸಿ. ಅದರ ಮೇಲೆ ಕ್ಲಿಕ್ ಮಾಡಿ.
10:18 ನಂತರ DC-000 ಅನ್ನು ಕ್ಲಿಕ್ ಮಾಡಿ. ನಂತರ Condenser_Specification_Value ಅನ್ನು ಗುರುತಿಸಿ.
10:26 ಇದನ್ನು, ಮತ್ತು ನಂತರ OK ಅನ್ನು ಕ್ಲಿಕ್ ಮಾಡಿ.
10:31 ಈಗ Parameters ಪ್ರಾಪರ್ಟಿ-ಗಾಗಿ, ವಾಡಿಕೆಯ ವಿಧಾನವನ್ನೇ ಅನುಸರಿಸಿ.
10:36 ಇದನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
10:40 Adjust Property Value ಎಂಬ ಆಯ್ಕೆಯನ್ನು ನಾವು ನೋಡಬಹುದು.
10:43 ಸಾಮಾನ್ಯವಾಗಿ, ಈ ವ್ಯಾಲ್ಯು 1 ಆಗಿರುತ್ತದೆ.
10:48 1ಅನ್ನು ಡಿಲೀಟ್ ಮಾಡಿ ಮತ್ತು ಇಲ್ಲಿ 0.95 ಅನ್ನು ಸೇರಿಸಿ.
10:52 ನಾನು, ಸ್ವಲ್ಪ ದೊಡ್ಡ ಸಂಖ್ಯೆ 0.95001 ಅನ್ನು ನಮೂದಿಸುತ್ತೇನೆ.
11:00 ನಾನು ಸ್ವಲ್ಪ ದೊಡ್ಡ ಸಂಖ್ಯೆಯನ್ನು ಏಕೆ ನಮೂದಿಸಿದೆನೆಂದು ನೀವು ಯೋಚಿಸಿ.
11:06 ಇಲ್ಲಿಂದ ಕೆಲವು ಸಾಲುಗಳ ಕೆಳಗೆ, Simultaneous Adjust ಎಂಬ ಆಯ್ಕೆಯನ್ನು ನೋಡಿ.
11:11 ವಾಡಿಕೆಯ ವಿಧಾನವನ್ನು ಅನುಸರಿಸಿ, ಅದರ ವ್ಯಾಲ್ಯು ಅನ್ನು True ಎಂದು ಬದಲಾಯಿಸಿ.
11:18 ಅದು ತಾನಾಗಿಯೇ ಕಂಡುಹಿಡಿಯದಿದ್ದರೆ, Play ಅನ್ನು, ನಂತರ Recalculate All ಅನ್ನು ಒತ್ತಿ.
11:26 ಈ ಸಂದರ್ಭದಲ್ಲಿ, ಅದು ತಾನಾಗಿಯೇ ಕಂಡುಹಿಡಿದಿದೆ. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
11:32 ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಾಚಾರಗಳು ಮುಗಿಯುತ್ತವೆ.
11:35 ಡಿಸ್ಟಿಲ್ಲೇಟ್ ಪ್ಯೂರಿಟಿ ಗಾಗಿ, ನಮ್ಮ ಗುರಿಯಾಗಿದ್ದ 0.95, ನಮಗೆ ಸಿಕ್ಕಿದೆಯೇ ಎಂದು ಪರೀಕ್ಷಿಸೋಣ.
11:42 Distillate ಅನ್ನು ಆಯ್ಕೆ ಮಾಡಿ.
11:44 Molar Composition ನ ಅಡಿಯಲ್ಲಿ, Mixture ಅನ್ನು ಚೆಕ್ ಮಾಡಿ.
11:49 benzene ನ ಕಂಪೋಸಿಷನ್, 0.95 ಆಗಿರುವುದನ್ನು ನಾವು ನೋಡಬಹುದು.
11:53 ಇದಕ್ಕಾಗಿ ಯಾವ ರಿಫ್ಲಕ್ಸ್ ರೇಶಿಯೊ ಬೇಕು ಎಂಬುದನ್ನು ಈಗ ನಾವು ಪರೀಕ್ಷಿಸೋಣ.
11:59 ಇದಕ್ಕಾಗಿ, Distillation column ನ ಮೇಲೆ ಕ್ಲಿಕ್ ಮಾಡಿ.
12:02 Condenser Specificationನ ಅಡಿಯಲ್ಲಿ, value ಅನ್ನು ನೋಡಿ.
12:08 ನಾವು, value 2.067 ಆಗಿರುವುದನ್ನು ನೋಡುತ್ತೇವೆ.
12:13 ಇದು, Sensitivity Analysisನಲ್ಲಿ ನಾವು ಪಡೆದ ವ್ಯಾಲ್ಯೂ ಗೆ ಸಮವಾಗಿದೆ.
12:18 ಈ ಸಿಮುಲೇಷನ್ ಅನ್ನು, ನಾನು "adjust" ಎಂದು ಸೇವ್ ಮಾಡುತ್ತೇನೆ.
12:27 ನಿಮಗಾಗಿ ಇಲ್ಲಿ ಮುಂದಿನ ಅಸೈನ್ಮೆಂಟ್ ಇದೆ.
12:29 ಡಿಸ್ಟಿಲ್ಲೇಟ್-ನಲ್ಲಿ, ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
12:36 ಯಾವ ರಿಫ್ಲಕ್ಸ್ ರೇಶಿಯೊ ಅಗತ್ಯವಿದೆ?
12:39 ಈಗಾಗಲೇ ಸಾಲ್ವ್ ಮಾಡಿದ ಸಮಸ್ಯೆಗಳಲ್ಲಿ, ನಾವು ಮಾಡಿದಂತೆ, ನೀವು ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ಬದಲಾಯಿಸಬಹುದು.
12:44 ಮೊದಲು ಇದನ್ನು, Sensitivity Analysis ವಿಧಾನದ ಮೂಲಕ ಸಾಲ್ವ್ ಮಾಡಿ.
12:47 ನಿಮ್ಮ ಲೆಕ್ಕಾಚಾರಗಳನ್ನು Adjust ವಿಧಾನದೊಂದಿಗೆ ಪರೀಕ್ಷಿಸಿ.
12:51 ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ, ನೀವು ಪಡೆಯಬಹುದಾದ ಗರಿಷ್ಠ 'ಡಿಸ್ಟಲ್ಲೇಟ್ ಪ್ಯೂರಿಟಿ' ಅನ್ನು ಕಂಡುಹಿಡಿಯಿರಿ.
12:58 ಹಿಂದಿನ ಅಸೈನ್ಮೆಂಟ್ ಗಳಂತೆ, ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ನೀವು ಬದಲಾಯಿಸಬಹುದು.
13:03 ನಾನು ಮೋಲ್-ಫ್ರಾಕ್ಷನ್ ಅನ್ನು ನಿಧಾನವಾಗಿ ಹೆಚ್ಚಿಸುತ್ತ, 0.99 ದ ವರೆಗೆ ಹೋಗಬಹುದಿತ್ತು.
13:10 ನಾನು ಸಾರಾಂಶವನ್ನು ವಿವರಿಸುತ್ತೇನೆ.
13:12 ಈ ಟ್ಯುಟೋರಿಯಲ್-ನಲ್ಲಿ ನಾವು:
13:14 Sensitivity Analysis ಅನ್ನು ಹೇಗೆ ಮಾಡುವುದು,
13:16 ಸೊಲ್ಯುಷನ್ ರೇಂಜ್ ಅನ್ನು ಹೇಗೆ ಕಿರಿದಾಗಿಸುವುದು,
13:18 Adjust ಅನ್ನು ಬಳಸಿ, ಸಮಾನವಾದ ಫಲಿತಾಂಶವನ್ನು ಹೇಗೆ ನೇರವಾಗಿ ಪಡೆಯುವುದು,
13:22 Adjust ಅನ್ನು ಬಳಸಿ, ಒಂದು ಪ್ಲಾಂಟ್ ಅನ್ನು (plant), ಹೆಚ್ಚು ಉತ್ಪಾದಿಸುವಂತೆ ಮಾಡುವುದು- ಇವುಗಳನ್ನು ಕಲಿತೆವು.
13:27 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
13:31 ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
13:35 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
13:39 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
13:47 ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?
13:51 ನಿಮಗೆ ಪ್ರಶ್ನೆ ಇರುವ minute ಮತ್ತು second ಗಳನ್ನು ಆಯ್ಕೆ ಮಾಡಿ.
13:54 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
13:56 FOSSEE ತಂಡದವರು ಅದಕ್ಕೆ ಉತ್ತರಿಸುವರು.
13:59 ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
14:02 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
14:08 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
14:12 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
14:16 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
14:21 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
14:25 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
14:28 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
14:36 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ, IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana