DWSIM-3.4/C2/Introduction-to-Flowsheeting/Kannada
From Script | Spoken-Tutorial
Revision as of 10:28, 8 January 2020 by Nancyvarkey (Talk | contribs)
|
|
00:01 | DWSIMನಲ್ಲಿ Introduction to Flowsheeting ಎಂಬ spoken tutorialಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ ನಾವು, mixer (ಮಿಕ್ಸರ್) ಅನ್ನು ಸಿಮ್ಯುಲೇಟ್ ಮಾಡುವೆವು. |
00:10 | 'ಫ್ಲ್ಯಾಶ್ ಸೆಪರೇಟರ್' (flash separator) ನಿಂದ ಅದನ್ನು ಮುಂದುವರೆಸುವೆವು ಮತ್ತು |
00:12 | ’ಟೂ ಫೇಸ್ ಫೀಡ’ ಅನ್ನು ಹೇಗೆ ಕೊಡುವುದು ಎಂಬುದನ್ನು ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು DWSIM 3.4 ಅನ್ನು ಬಳಸುತ್ತೇನೆ. |
00:20 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ DWSIM ತಿಳಿದಿರಬೇಕು. |
00:24 | ಇದನ್ನು ಕಲಿಯಲು ಅಗತ್ಯವಿರುವ ಟ್ಯುಟೋರಿಯಲ್-ಗಳು ಈ ಕೆಳಗಿನ ವೆಬ್ಸೈಟ್ ನಲ್ಲಿ ಲಭ್ಯವಿರುತ್ತವೆ:
spoken hyphen tutorial dot org |
00:31 | ನಾನು DWSIM ಅನ್ನು ತೆರೆಯುತ್ತೇನೆ. |
00:33 | ಎರಡು material stream (ಮಟೀರಿಯಲ್ ಸ್ಟ್ರೀಮ್) ಗಳೊಂದಿಗೆ flow-begin ಎಂಬ ಫೈಲ್ ಅನ್ನು ನಾನು ಈಗಾಗಲೇ ತೆರೆದಿದ್ದೇನೆ. |
00:40 | ಹಾಗೂ Raoult’s law (ರೌಲ್ಟ್ಸ್ ಲಾ) ಮತ್ತು CGS system ಗಳನ್ನು ಆಯ್ಕೆ ಮಾಡಿದ್ದೇನೆ. |
00:43 | ಇದಕ್ಕಾಗಿ ನಾನು File ಮೆನುವಿನಲ್ಲಿ Open ಆಯ್ಕೆಯನ್ನು ಕ್ಲಿಕ್ ಮಾಡಿದ್ದೇನೆ. ಇದನ್ನು ಕ್ಲೋಸ್ ಮಾಡುತ್ತೇನೆ. |
00:53 | ಈ ಫೈಲ್ ನಮ್ಮ spoken tutorial ವೆಬ್ಸೈಟ್ ನಲ್ಲಿ ಲಭ್ಯವಿರುತ್ತದೆ. |
00:56 | ಈ ಫೈಲ್ ಅನ್ನು ನೀವು ಡೌನ್-ಲೋಡ್ ಮಾಡಿ ಬಳಸಬಹುದು ಅಥವಾ ಬೇಕಾದ ಮಾಹಿತಿಯನ್ನು ಸ್ವತಃ ನಮೂದಿಸಬಹುದು. |
01:02 | flowsheet ಕ್ಯಾನ್ವಾಸ್ ನಲ್ಲಿ Inlet1 ಮತ್ತು Inlet2 ಎಂಬ ಎರಡು ಸ್ಟ್ರೀಮ್-ಗಳನ್ನು ನೋಡಬಹುದು. |
01:08 | ಈ ಫೈಲ್-ನ ಸಾರಾಂಶವನ್ನು ಮುಂದಿನ ಸ್ಲೈಡ್ ವಿವರಿಸುತ್ತದೆ. |
01:13 | ಈ ಸ್ಟ್ರೀಮ್-ಗಳನ್ನು ನಾವು ಸೇರಿಸಿದಾಗ, ನಮಗೆ equimolar composition (ಇಕ್ವಿಮೋಲಾರ್ ಕಾಂಪೋಸಿಶನ್) ಸಿಗುತ್ತದೆ. |
01:17 | DWSIMನ ಲೆಕ್ಕಾಚಾರಗಳನ್ನು ಸುಲಭವಾಗಿ ಪರಿಶೀಲಿಸಲು ನಾವು ಈ ವ್ಯಾಲ್ಯುಗಳನ್ನು ಆಯ್ಕೆ ಮಾಡಿದ್ದೇವೆ. |
01:23 | DWSIMಗೆ ಹಿಂದಿರುಗೋಣ. |
01:25 | ಈಗ ಸ್ಟ್ರೀಮ್-ಗಳಲ್ಲಿ ವೇಪರ್ ಇರುವಂತೆ ಮಾಡಲು ಅವುಗಳನ್ನು ನಾವು ಮಾರ್ಪಡಿಸುವೆವು. |
01:31 | Inlet 1 ಅನ್ನು ಆಯ್ಕೆಮಾಡಿ. |
01:34 | Properties ಟ್ಯಾಬ್-ನ ಮೇಲೆ ಇರುವ Specification ಅನ್ನು ಕ್ಲಿಕ್ ಮಾಡಿ. |
01:40 | ಡೌನ್-ಆರೋ ಅನ್ನು ಒತ್ತಿ Pressure and Vapor Fraction ಅನ್ನು ಆಯ್ಕೆ ಮಾಡಿ. |
01:46 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Molar Fraction (Vapor Phase) ಇರುವಲ್ಲಿಗೆ ಹೋಗಿ. |
01:53 | ಇಲ್ಲಿ 1 ಎಂದು ಟೈಪ್ ಮಾಡಿ, ಅರ್ಥಾತ್, ಪೂರ್ಣ ಸ್ಟ್ರೀಮ್ ವೇಪರ್ ಆಗಿದೆ. |
02:00 | ಹೀಗೆಯೇ, Inlet2, 50% Molar Fraction ಹೊಂದಿರುವಂತೆ ಮಾಡಿ. |
02:13 | ಈಗ, ನಾವು flowsheetನಲ್ಲಿ ಒಂದು ಮಿಕ್ಸರ್-ಅನ್ನು ಸೇರಿಸೋಣ. |
02:17 | Object Paletteನಲ್ಲಿ Mixer ಅನ್ನು ಹುಡುಕಿ. ಅದು ಮೂರನೇ ನಮೂದು ಆಗಿದೆ. |
02:22 | ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಕಡೆಗೆ ಎಳೆಯಿರಿ. |
02:24 | ನಾವೀಗ mixer ನ ಹೆಸರನ್ನು ಬದಲಾಯಿಸೋಣ. |
02:29 | Appearance ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. ಡಿಫಾಲ್ಟ್ ಹೆಸರನ್ನು ಡಿಲಿಟ್ ಮಾಡಿ ಮತ್ತು Mixer ಎಂದು ಟೈಪ್ ಮಾಡಿ. |
02:36 | ಈಗ, ನಾವು ಮಿಕ್ಸರ್-ಗಾಗಿ ಒಂದು output stream ಅನ್ನು ಸೇರಿಸೋಣ. |
02:40 | Material Stream ಮೇಲೆ ಕ್ಲಿಕ್ ಮಾಡಿ ಅದನ್ನು ಫ್ಲೋಶೀಟ್-ಕಡೆಗೆ ಎಳೆಯಿರಿ. |
02:45 | ಆಟೋಮೇಟಿಕ್ ಪಾಪ್-ಅಪ್ ಅನ್ನು ಕ್ಲೋಸ್ ಮಾಡುತ್ತೇವೆ ಮತ್ತು ಇದರಲ್ಲಿಏನನ್ನೂ ಸೇರಿಸುವುದಿಲ್ಲ. ಏಕೆಂದರೆ, ಈ ಔಟ್-ಪುಟ್ ಸ್ಟ್ರೀಮ್-ಗಳಿಗೆ ನಾವು ಯಾವುದೇ ವಿವರಗಳನ್ನು ಕೊಡಬಾರದು. |
02:54 | ನಾವು ಈ ಸ್ಟ್ರೀಮ್-ನ ಹೆಸರನ್ನು mixer-out ಎಂದು ಬದಲಾಯಿಸುವೆವು. |
03:03 | ನಾನು mixer ಗೆ ಸ್ಟ್ರೀಮ್-ಗಳನ್ನು ಜೋಡಿಸುತ್ತೇನೆ. |
03:05 | ನಾನು mixer ಅನ್ನು ಒಮ್ಮೆ ಕ್ಲಿಕ್ ಮಾಡುತ್ತೇನೆ. |
03:08 | Selected Object ವಿಂಡೋ-ನಲ್ಲಿ Properties ಕಾಣಿಸಿಕೊಳ್ಳುತ್ತದೆ. |
03:12 | ಮಿಕ್ಸರ್, ಸುಮಾರು 6 inlet streamಗಳನ್ನು ಹೊಂದಿರುವುದನ್ನು ನೀವು ನೋಡಬಹುದು. |
03:19 | ನಾವು Inlet Stream 1 ನ ಮೇಲೆ ಕ್ಲಿಕ್ ಮಾಡೋಣ. |
03:23 | ಮೆನ್ಯು ಅನ್ನು ಸೂಚಿಸುವ ಒಂದು ಡೌನ್-ಆರೋ ಕಾಣಿಸುತ್ತದೆ. |
03:27 | ಈ ಆರೋ ಅನ್ನು ಕ್ಲಿಕ್ ಮಾಡಿ, Inlet1 ಅನ್ನು ಆಯ್ಕೆಮಾಡಿ. |
03:32 | ಹೀಗೆಯೇ, Inlet2 ಅನ್ನು Inlet Stream 2ಗೆ ಸೇರಿಸಿ. |
03:37 | ಇಲ್ಲಿ, Connected to Outlet ಎಂದು ಸೂಚಿಸುವ ಔಟ್ಲೆಟ್ ಪೋರ್ಟ್-ಅನ್ನು ಹುಡುಕಿ. |
03:43 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು mixer-out ಅನ್ನು ಆಯ್ಕೆ ಮಾಡಿ. |
03:49 | ಒಂದೇ ಸಾಲಿನಲ್ಲಿ stream ಗಳನ್ನು ಇರಿಸಲು ಅವುಗಳನ್ನು ನಾವು ಸರಿಸಬಹುದು. |
03:54 | mixer ಕೆಂಪುಬಣ್ಣದಲ್ಲಿದೆ, ಏಕೆಂದರೆ ಅದರ ವ್ಯಾಲ್ಯೂಗಳನ್ನು ಇನ್ನೂ ಕಂಡುಹಿಡಿದಿಲ್ಲ. |
03:58 | configure simulation ಬಟನ್-ನ ಬಲಭಾಗದಲ್ಲಿ Calculator ಇದೆ. |
04:02 | ಅದು ಹಲವಾರು ಆಯ್ಕೆಗಳನ್ನು ಹೊಂದಿದೆ. |
04:03 | ಮೊದಲನೆಯದು ಸಾಲ್ವರ್-ಅನ್ನು activate ಮಾಡಲು ಇರುವ play ಬಟನ್ ಆಗಿದೆ. ಇದನ್ನು ಕ್ಲಿಕ್ ಮಾಡಿ. |
04:09 | ಇದರ ಬಲಭಾಗದಲ್ಲಿರುವ ಎರಡು ಬಟನ್-ಗಳು Recalculate ಮಾಡಲು ಇರುತ್ತವೆ. ಈ ಬಟನ್ ಅನ್ನು ಕ್ಲಿಕ್ ಮಾಡಿ. |
04:17 | mixer ಈಗ ನೀಲಿ ಬಣ್ಣದಲ್ಲಿದೆ, ಅಂದರೆ ಅದರ ವ್ಯಾಲ್ಯೂಗಳನ್ನು ಕಂಡುಹಿಡಿಯಲಾಗಿದೆ. |
04:22 | ಈಗ, mixer-out ಸ್ಟ್ರೀಮ್ ನ ಮೇಲೆ ಕ್ಲಿಕ್ ಮಾಡಿ. |
04:27 | ಕಂಡುಹಿಡಿಯಲಾದ ವ್ಯಾಲ್ಯುಗಳನ್ನು Properties ಟ್ಯಾಬ್-ನಲ್ಲಿ ನಾವು ನೋಡಬಹುದು. |
04:31 | ಇದರ ಕಂಪೋಸಿಷನ್, ನಮಗೆ ಬೇಕಾದ ಹಾಗೆಯೇ ಇದೆ ಎಂಬುದನ್ನು ಪರಿಶೀಲಿಸಬಹುದು. |
04:37 | Mixture ನ ಮೇಲೆ ಡಬಲ್ ಕ್ಲಿಕ್ ಮಾಡಿ. |
04:40 | ಅದು ' ಇಕ್ವಿಮೋಲಾರ್ ಕಾಂಪೋಸಿಶನ್' (equimolar composition) ಅನ್ನು ಹೊಂದಿದೆ. |
04:43 | flash separator ಅನ್ನು ನಾವು ಇನ್ಸರ್ಟ್ ಮಾಡೋಣ. |
04:47 | Object Palette ನಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ. |
04:51 | ಇಲ್ಲಿ Separator Vessel ಇದೆ. |
04:56 | ಅದನ್ನು VLE, LLE ಮತ್ತು VLLE ಸಿಸ್ಟಮ್-ಗಳನ್ನು ಸಿಮುಲೇಟ್ ಮಾಡಲು ಬಳಸಲಾಗುತ್ತದೆ. |
05:01 | ಅದನ್ನು ಕ್ಲಿಕ್ ಮಾಡಿ ಫ್ಲೋಶೀಟ್-ಗೆ ಎಳೆಯಿರಿ. |
05:06 | ನಾವು ಎರಡು ಔಟ್-ಪುಟ್ ಸ್ಟ್ರೀಮ್-ಗಳನ್ನು ಸೆಪರೇಟರ್-ಗೆ ಕನೆಕ್ಟ್ ಮಾಡಬೇಕಾಗಿದೆ. |
05:10 | material stream ಅನ್ನು ಎಳೆಯೋಣ (ಡ್ರಾಗ್ ಮಾಡೋಣ). |
05:13 | ಅದನ್ನು ಹಾಗೆಯೇ ಇಟ್ಟುಬಿಡೋಣ, ಏಕೆಂದರೆ ಅದರ ಪ್ರಾಪರ್ಟಿಗಳನ್ನು ಇನ್ನೂ ಕಂಡುಹಿಡಿಯಬೇಕಿದೆ. |
05:20 | ಅದನ್ನು Vapour ಎಂದು ಹೆಸರಿಸೋಣ. |
05:27 | ಹೀಗೆಯೇ, ಇನ್ನೊಂದು ಸ್ಟ್ರೀಮ್-ಅನ್ನು ಕ್ರಿಯೇಟ್ ಮಾಡಿ, ಅದನ್ನು Liquid ಎನ್ನೋಣ. |
05:32 | ಈಗ ನಾವು ಸ್ಟ್ರೀಮ್-ಗಳನ್ನು Separatorಗೆ ಸೇರಿಸೋಣ. |
05:36 | ಮೊದಲ ಇನ್ಪುಟ್ ಪೋರ್ಟ್-ನಲ್ಲಿ, ನಾವು mixer-out ಅನ್ನು ಕನೆಕ್ಟ್ ಮಾಡೋಣ. |
05:44 | ಒಟ್ಟಾರೆ ಇನ್ನೂ ಐದು ಇನ್ಪುಟ್ ಸ್ಟ್ರೀಮ್-ಗಳನ್ನು ನಾವು ಸೇರಿಸಬಹುದು. |
05:47 | separator , ಎಲ್ಲ ಸ್ಟ್ರೀಮ್-ಗಳನ್ನು ಸೇರಿಸುತ್ತದೆ (ಮಿಕ್ಸ್ ಮಾಡುತ್ತದೆ) ಮತ್ತು ಬೇರ್ಪಡಿಸುತ್ತದೆ. ವಾಸ್ತವವಾಗಿ, ಪ್ರತ್ಯೇಕವಾದ ಮಿಕ್ಸರ್-ನ ಅವಶ್ಯಕತೆ ಇಲ್ಲ. |
05:54 | energy streamಅನ್ನು ಕನೆಕ್ಟ್ ಮಾಡಲು ಒಂದು ಪೋರ್ಟ್ ಕೂಡ ಇದೆ. |
05:59 | ನಾವದನ್ನೀಗ ನೋಡಬಹುದು. |
06:02 | ಇವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ. |
06:07 | ನಾವು Vapour ಸ್ಟ್ರೀಮ್ ಅನ್ನು Vapour outlet ಪೋರ್ಟ್-ಗೆ ಸೇರಿಸೋಣ. |
06:13 | ಹಾಗೆಯೇ, Liquid ಸ್ಟ್ರೀಮ್ ಅನ್ನು ಸೇರಿಸಿ. |
06:21 | ಸರಿಯಾದ ಜೋಡಣೆಗಾಗಿ, ಮತ್ತೊಮ್ಮೆ ಐಟಮ್-ಗಳನ್ನು ಸರಿಸೋಣ. |
06:26 | DWSIM ತಾನಾಗಿಯೇ ಲೆಕ್ಕವನ್ನು ಪೂರ್ಣಗೊಳಿಸಿತೆಂಬುದನ್ನು ಗಮನಿಸಿ. |
06:31 | ಇದಕ್ಕಾಗಿ Recalculate ಬಟನ್ ಅನ್ನು ಕೂಡ ನೀವು ಬಳಸಬಹುದು. |
06:35 | ವಾಸ್ತವವಾಗಿ, ನಿಮಗೆ ಸಂದೇಹವಿದ್ದಾಗಲೆಲ್ಲ ಇದನ್ನು ಮಾಡಬಹುದು. |
06:39 | ಸೆಪರೇಟರ್-ನಲ್ಲಿ, vapor ಮತ್ತು liquid ಸರಿಯಾಗಿ ಬೇರ್ಪಟ್ಟಿವೆಯೇ ಎಂಬುದನ್ನು ನಾವೀಗ ಪರೀಕ್ಷಿಸೋಣ. |
06:45 | ನಾವು Vapour ಸ್ಟ್ರೀಮ್-ನ ವೇಪರ್ ಫೇಜ್ ಮೋಲ್ ಫ್ರಾಕ್ಷನ್ಸ್-ಗಳನ್ನು (vapor phase mole fractions) ನೋಡೋಣ. |
06:52 | Benzeneನ ಮೋಲ್ ಫ್ರಾಕ್ಷನ್ 0.54 ಆಗಿದೆ. |
06:56 | mixer-out ನ ವ್ಯಾಲ್ಯೂಗಳ ಜೊತೆಗೆ ಇದು ಹೊಂದುತ್ತದೆಯೋ ಎಂದು ಪರಿಶೀಲಿಸೋಣ. |
07:04 | DWSIM ತಾನಾಗಿಯೇ vapor ವ್ಯಾಲ್ಯು ಅನ್ನು ತೋರಿಸುತ್ತದೆ ಎಂಬುದನ್ನು ನೋಡುವಿರಿ. benzene mole fraction 0.54 ಆಗಿದೆ. |
07:13 | Separator ನಮಗೆ ಬೇಕಾದ ಹಾಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಪ್ರಮಾಣವಾಗಿದೆ. |
07:18 | Mixer ನ ಕಾರ್ಯನಿರ್ವಹಣೆಯ ಬಗೆಗೂ ನಾವು ಪರಿಶೀಲಿಸಬಹುದು. |
07:22 | ನಿರೀಕ್ಷಿಸಿದಂತೆ, Mixture ನ ಕಂಪೋಸಿಷನ್, ಇಕ್ವಿಮೋಲಾರ್ ಆಗಿದೆ ಎಂಬುದನ್ನು ನೋಡುವಿರಿ. |
07:29 | ಇನ್ನುಳಿದವುಗಳನ್ನು ಅಸೈನ್ಮೆಂಟ್ ವಿಭಾಗದಲ್ಲಿ ನೋಡೋಣ. |
07:34 | ನಾವು ಈ ಫೈಲ್ ಅನ್ನು Save as ಆಯ್ಕೆಯನ್ನು ಬಳಸಿ ಸೇವ್ ಮಾಡೋಣ. |
07:39 | ನಾನು flow-endಎಂದು ಸೇವ್ ಮಾಡುತ್ತೇನೆ. |
07:46 | ನಿಮ್ಮ ಫೈಲ್ ಅನ್ನು ಆಗಾಗ ಸೇವ್ ಮಾಡಿ ಎಂದು ನಾನು ಸಲಹೆ ಕೊಡುತ್ತೇನೆ. |
07:49 | ಸಂಕ್ಷಿಪ್ತವಾಗಿ, |
07:52 | ನಾವು ಸರಳವಾದ ಒಂದು ಫ್ಲೋಶೀಟ್ ಅನ್ನು ವ್ಯಾಖ್ಯಾನಿಸಿದೆವು. |
07:54 | ಮಿಕ್ಸ್ಡ್ ಫೀಡ್ ಅನ್ನು (mixed feed) ರಚಿಸುವುದರ ಬಗ್ಗೆ ವಿವರಿಸಿದೆವು. |
07:58 | mixer ಮತ್ತು separator ಗಳನ್ನು ಪರಿಚಯಸಿದೆವು. |
08:00 | ಅವುಗಳನ್ನು ಕನೆಕ್ಟ್ ಮಾಡುವ ಬಗೆಯನ್ನು ತೋರಿಸಿದೆವು. |
08:02 | ಮತ್ತು, ಸಿಮುಲೇಟ್ ಮಾಡುವುದು ಹೇಗೆ ಎಂಬುದನ್ನು ಸಹ ಕಲಿತೆವು. |
08:04 | ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. |
08:07 | ಈ ಸ್ಲೈಡ್-ನಲ್ಲಿರುವ ಅಸೈನ್ಮೆಂಟ್ mass balancesಗೆ ಸಂಬಂಧಿಸಿದೆ. |
08:10 | ಸ್ಟ್ರೀಮ್ಸ್ ಮತ್ತು ಉಪಕರಣಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
08:15 | ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ. |
08:16 | ನೀವು ಈ ಸ್ಲೈಡ್-ನಲ್ಲಿ ಹೇಳಿರುವ ಹಾಗೆ ಮೋಲ್ ಫ್ರಾಕ್ಷನ್-ಗಳನ್ನು ಪರೀಕ್ಷಿಸಬೇಕು. |
08:20 | ಮೂರನೇ ಅಸೈನ್-ಮೆಂಟ್, Separatorಗೆ ಸಂಬಂಧಿಸಿದೆ. |
08:25 | ಸ್ಟ್ರೀಮ್-ಗಳನ್ನು ಸೇರಿಸಲು ಅದನ್ನು ಬಳಸಬಹುದೆಂದು ನಾವು ಹಿಂದೆಯೇ ಹೇಳಿದ್ದೇವೆ. |
08:30 | mixer ಮತ್ತು mixer-out ಗಳನ್ನು ತೆಗೆದುಹಾಕಿ, ಮತ್ತು ಪುನಃ ಅದನ್ನು ಪ್ರಯತ್ನಿಸಿ. |
08:35 | ಮುಂದಿನ ಅಸೈನ್ಮೆಂಟ್-ನಲ್ಲಿ, ನೀವು ಸೆಪರೇಷನ್ ಅನ್ನು ಇನ್ನೂ ಹೆಚ್ಚಿನ ತಾಪಮಾನದಲ್ಲಿ ಮಾಡುವಿರಿ. |
08:41 | Separator ಮೇಲೆ ಕ್ಲಿಕ್ ಮಾಡಿ. ಮೇಲಕ್ಕೆ ಸ್ಕ್ರೋಲ್ ಮಾಡೋಣ. |
08:46 | Override separation temperature ಅನ್ನು true ಗೆ ಬದಲಾಯಿಸೋಣ. |
08:52 | ಈಗ ಸಿಗುವ ಫೀಲ್ಡ್-ನಲ್ಲಿ, ವ್ಯಾಲ್ಯು ಅನ್ನು 100 ಎಂದು ಬದಲಾಯಿಸಿ. |
08:59 | Object Paletteನಿಂದ Energy streamಅನ್ನು Flowsheetಗೆ ಎಳೆದು ತನ್ನಿ. ಇದು ಹೊಸ ಸ್ಟ್ರೀಮ್ ಆಗಿದೆ. |
09:07 | ನಾನು ಹಿಂದೆ ತೋರಿಸಿದಂತೆ, ಈ ಸ್ಟ್ರೀಮ್-ಅನ್ನು Separatorನ Energy Streamಗೆ ಸೇರಿಸಿ. |
09:13 | ಸಿಮುಲೇಟ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ವಿಶ್ಲೇಷಿಸಿ. |
09:16 | ಈ ಸ್ಲೈಡ್ ನಲ್ಲಿ ಇದರ ಸಾರಾಂಶ ಇದೆ. |
09:22 | ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
09:26 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು. |
09:31 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
09:37 | ಈ Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
09:39 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
09:43 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. |
09:45 | FOSSEE ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ. ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
09:51 | ಜನಪ್ರಿಯ ಪುಸ್ತಕಗಳಲ್ಲಿಯ ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
09:55 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
10:00 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
10:04 | FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
10:09 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
10:13 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ. |
10:17 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
10:23 | ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |