Moodle-Learning-Management-System/C2/Uploading-and-editing-resources-in-Moodle/Kannada

From Script | Spoken-Tutorial
Revision as of 12:04, 28 December 2019 by Sandhya.np14 (Talk | contribs)

Jump to: navigation, search
Time Narration
00:01 ಮೂಡಲ್ ನಲ್ಲಿ, Uploading and Editing Resources ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ಬಗ್ಗೆ ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:25 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:33 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:43 Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:51 ನಿಮ್ಮ ‘ಸೈಟ್ ಅಡ್ಮಿನಿಸ್ಟ್ರೇಟರ್’ ಒಂದು ಮೂಡಲ್ ವೆಬ್ಸೈಟ್ ಅನ್ನು ತಯಾರಿಸಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.
01:01 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:

ಮೂಡಲ್ ನಲ್ಲಿ teacher login ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ನ್ನು ಅಸೈನ್ ಮಾಡಿರಬೇಕು.

01:11 ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.
01:16 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:22 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ನೀವು ಸೇರಿಸಿರಬೇಕು.
01:28 ಸ್ಟುಡೆಂಟ್ ಅನ್ನು ಹೇಗೆ ಸೇರಿಸುವುದೆಂದು ತಿಳಿಯಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ.
01:35 ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅನ್ನು ನಾನು ಸೇರಿಸಿದ್ದೇನೆ.
01:41 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ.
01:48 ಎಡಗಡೆಯ ನ್ಯಾವಿಗೇಷನ್ ಮೆನ್ಯು ವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:53 ಈ ಸರಣಿಯಲ್ಲಿ, ಈಗಾಗಲೇ page resource ಮತ್ತು folder resource ಗಳನ್ನು ಸೇರಿಸಿದ್ದೆವು.
02:00 ಈಗ ಇನ್ನೂ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಸೇರಿಸೋಣ.

ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು, ನಂತರ Turn Editing On ಅನ್ನು ಕ್ಲಿಕ್ ಮಾಡಿ.

02:11 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:19 ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು.
02:26 ಕೆಳಗೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ URL ಅನ್ನು ಆಯ್ಕೆ ಮಾಡಿ. ಬಲಗಡೆಯಲ್ಲಿ ರಿಸೋರ್ಸ್ ನ ಬಗ್ಗೆ ವಿವರಣೆಯನ್ನು ನೋಡುವಿರಿ.
02:37 URL resource ನಿಂದ ನಾವು online resource ಗಳಿಗೆ ಲಿಂಕ್ ಅನ್ನು ಸೇರಿಸಬಹುದು.
02:43 ಇವುಗಳು ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಇತ್ಯಾದಿಗಳಾಗಿರಬಹುದು.
02:52 ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
02:57 Name ಫೀಲ್ಡ್ ನಲ್ಲಿ, Evolutes of basic curves ಎಂದು ಟೈಪ್ ಮಾಡುವೆನು.
03:03 ನಂತರ, External URL ಟೆಕ್ಸ್ಟ್-ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ URL ಅನ್ನು ಟೈಪ್ ಮಾಡಿ.
03:10 Description ಟೆಕ್ಸ್ಟ್-ಏರಿಯಾ ಒಂದು ಐಚ್ಛಿಕ ಫೀಲ್ಡ್ ಆಗಿದೆ. ನಾನು ಇಲ್ಲಿ ತೋರಿಸಿದಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
03:17 ಈ ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
03:24 ಈಗ ವಿಭಾಗವನ್ನು ವಿಸ್ತರಿಸಲು, Appearance ಮೇಲೆ ಕ್ಲಿಕ್ ಮಾಡಿ.
03:29 ಇಲ್ಲಿರುವ Display ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ.
03:35 ಈ ಡ್ರಾಪ್-ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.

Automatic- ಇದು, browser settings ಮತ್ತು screen resolution ಗಳನ್ನು ಆಧರಿಸಿ, ಅತ್ಯುತ್ತಮ ಆಯ್ಕೆಯನ್ನು ಆರಿಸುತ್ತದೆ.

03:45 Embed - ಕೋರ್ಸ್ ನಲ್ಲಿಯೇ ವಿಡಿಯೋವನ್ನು ತೆರೆಯುತ್ತದೆ.

Open - ಯೂಸರ್ ಅನ್ನು ಅದೇ ವಿಂಡೋದಲ್ಲಿ URL ಗೆ ಕೊಂಡೊಯ್ಯುತ್ತದೆ.

03:55 In pop-up - ವಿಡಿಯೋಅನ್ನು ಒಂದು ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆಯುತ್ತದೆ.
04:00 ನೀವು In pop-up ಅನ್ನು ಆರಿಸಿಕೊಂಡಾಗ, Pop-up width ಮತ್ತು Pop-up height ಆಯ್ಕೆಗಳು ಸಕ್ರಿಯವಾಗುತ್ತವೆ.

ನೀವು ಇಲ್ಲಿ ನಿಮಗೆ ಬೇಕಾದ ವ್ಯಾಲ್ಯುಗಳನ್ನು ಕೊಡಬಹುದು.

04:12 Embed ಅನ್ನು ನಾನು Display ಯ ಆಯ್ಕೆಯಾಗಿ ಆರಿಸುವೆನು.
04:17 ಕೆಳಗೆ Activity completion ವಿಭಾಗಕ್ಕೆ ಸ್ಕ್ರೋಲ್ ಮಾಡಿ. ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
04:24 ಯಾವುದೇ ಒಂದು ಚಟುವಟಿಕೆಯನ್ನು ಮುಗಿಸಿದ್ದನ್ನು ನೋಡಬೇಕೇ ಎಂದು ನಿರ್ಧರಿಸಲು ಈ ವಿಭಾಗವು ಟೀಚರ್ ಗೆ ಸಹಾಯ ಮಾಡುತ್ತದೆ.
04:32 Completion tracking ನ ಅಡಿಯಲ್ಲಿ ಮೂರು ಆಯ್ಕೆಗಳಿವೆ.

ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು.

04:41 ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುತ್ತೇನೆ. Student must view this activity to complete it ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡುತ್ತೇನೆ.
04:51 ಕೆಳಗೆ ಸ್ಕ್ರೋಲ್ ಮಾಡಿ. ಇಲ್ಲಿರುವ Save and return to course ಬಟನ್ ಅನ್ನು ಕ್ಲಿಕ್ ಮಾಡಿ.
04:58 ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆ ಎಂದು ಸೂಚಿಸುತ್ತದೆ.
05:05 ಈಗ ಒಂದು book resource ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಅಧ್ಯಾಯಗಳು (ಚಾಪ್ಟರ್) ಮತ್ತು ಉಪ-ಅಧ್ಯಾಯಗಳನ್ನು (ಸಬ್-ಚಾಪ್ಟರ್) ಹೊಂದಿರುತ್ತದೆ.
05:16 ಇದು ಮಲ್ಟಿ-ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು.
05:20 ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ.
05:23 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
05:30 ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ Book ಅನ್ನು ಆಯ್ಕೆಮಾಡಿ.
05:34 ಆಕ್ಟಿವಿಟಿ ಚೂಸರ್ ನ ಕೆಳತುದಿಯಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
05:39 Name ಫೀಲ್ಡ್ ನಲ್ಲಿ, Iterating evolutes and involutes ಎಂದು ಟೈಪ್ ಮಾಡಿ.
05:45 ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ.
05:48 ಈ ವಿಭಾಗವನ್ನು ವಿಸ್ತರಿಸಲು, Appearanceಮೇಲೆ ಕ್ಲಿಕ್ ಮಾಡಿ.
05:51 ಮೊದಲನೆಯ ಆಯ್ಕೆ Chapter formatting ಆಗಿದೆ.

ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ನಾವು ಹೇಗೆ ನೋಡುತ್ತೇವೆ ಎಂದು ಇದು ನಿರ್ಧರಿಸುತ್ತದೆ.

05:59 ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ವಿವರಣೆಗಳನ್ನು ಓದಲು, ನೀವು ಡ್ರಾಪ್-ಡೌನ್ ನ ಹಿಂದೆ ಇರುವ Help ಐಕಾನ್ ಅನ್ನು ಕ್ಲಿಕ್ ಮಾಡಬಹುದು.
06:08 ನಾನು ಇದನ್ನು Numbers ಎಂದೇ ಇಡುವೆನು.
06:11 ಮುಂದಿನ ಆಯ್ಕೆಯು Style of navigation ಆಗಿದೆ. ಹಿಂದಿನ ಮತ್ತು ಮುಂದಿನ ಲಿಂಕ್ ಗಳನ್ನು ನಾವು ಹೇಗೆ ತೋರಿಸುತ್ತೇವೆ ಎಂದು ಇದು ನಿರ್ಧರಿಸುತ್ತದೆ.
06:19 TOC ಇದು Table of Contents ಆಗಿದೆ.
06:23 Images ಅನ್ನು ಆಯ್ಕೆ ಮಾಡಿದರೆ, previous ಮತ್ತು next ಗಳನ್ನು ಬಾಣದ ಗುರುತಿನಿಂದ ತೋರಿಸಲಾಗುತ್ತದೆ.
06:29 Text ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು.
06:34 ಪ್ರತಿಯೊಂದು ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ.
06:40 ಆಗ, ಮೊದಲು ಟೆಕ್ಸ್ಟ್ ಎಂದು ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಇದು ಬದಲಾಯಿಸುತ್ತದೆ.
06:45 ನಾನು Text ಅನ್ನು Style of navigation ಎಂದು ಆಯ್ಕೆಮಾಡುವೆನು.
06:49 ನಂತರ, Restrict Access ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.

ಈ ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ.

06:59 ಡಿಫಾಲ್ಟ್ ಆಗಿ, ಇಲ್ಲಿ ಯಾವುದೇ ನಿರ್ಬಂಧವಿಲ್ಲ. ಎಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಲು ಸಾಧ್ಯವಿದೆ.
07:08 ಈಗ ನಾನು Add restriction ಬಟನ್ ಅನ್ನು ಕ್ಲಿಕ್ ಮಾಡುವೆನು.
07:12 ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು.
07:21 ನಾವು ಈಮೊದಲು ರಚಿಸಿದ URL ರಿಸೋರ್ಸ್ ಗೆ, “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” ಅನ್ನು ಹಾಕೋಣ.
07:27 ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕುವವರೆಗೆ, ಈ ಪುಸ್ತಕವನ್ನು ಆಕ್ಸೆಸ್ ಮಾಡಲು ನಾವು ನಿರ್ಬಂಧವನ್ನು ಹಾಕೋಣ.
07:33 Activity completion ಮೇಲೆ ಕ್ಲಿಕ್ ಮಾಡಿ. restriction ಗಾಗಿ ನಾವು ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿಯ ಫೀಲ್ಡ್ ಗಳು ವಿಭಿನ್ನವಾಗಿರುತ್ತವೆ.
07:42 Activity completion ಡ್ರಾಪ್-ಡೌನ್ ನಲ್ಲಿ, Evolutes of basic curve ಅನ್ನು ಆಯ್ಕೆಮಾಡಿ.

ನಂತರ “ಕಂಡಿಷನ್” ಗಾಗಿ, Must be marked complete ಅನ್ನು ಆಯ್ಕೆಮಾಡಿ.

07:54 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳತುದಿಯಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
08:00 ಈಗ ನಾವು ಈ ಪುಸ್ತಕದಲ್ಲಿ ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಬಹುದು.
08:05 Chapter title ಅನ್ನು Introduction ಎಂದು ಟೈಪ್ ಮಾಡಿ.
08:09 Content ಅನ್ನು Introduction to evolutes and involutes ಎಂದು ಟೈಪ್ ಮಾಡಿ.

ನಿಮ್ಮ ಹತ್ತಿರ ಪಾಠದ ಟಿಪ್ಪಣಿಯಿದ್ದರೆ (lecture note), ನೀವು ಅದನ್ನು ಕಾಪಿ ಮತ್ತು ಪೇಸ್ಟ್ ಮಾಡಬಹುದು.

08:19 ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
08:24 ಈಗ ಪೇಜ್ ನ ಮಧ್ಯಭಾಗದಲ್ಲಿ ನೀವು ಈ ಚಾಪ್ಟರ್ ಅನ್ನು ನೋಡಬಹುದು. ಬಲಭಾಗದಲ್ಲಿ, table of contents ಇದೆ.
08:32 Exit Book ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಾವು ಮತ್ತೆ Calculus ಕೋರ್ಸ್ ಗೆ ಹಿಂದಿರುಗುತ್ತೇವೆ.
08:38 ಬಲಗಡೆ Table of Contents ಬ್ಲಾಕ್ ನಲ್ಲಿ, Introduction ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ.
08:46 ಇವು Edit, Delete, Hide ಮತ್ತು Add new chapter ಗಳಾಗಿವೆ.
08:55 ಈಗ ನಾನು ಒಂದು ಸಬ್-ಚಾಪ್ಟರ್ ಅನ್ನು ಸೇರಿಸುತ್ತೇನೆ. Add new chapter ಎಂದು ಸೂಚಿಸುವ plus ಐಕಾನ್ ಅನ್ನು ಕ್ಲಿಕ್ ಮಾಡಿ.

ಸಬ್-ಚಾಪ್ಟರ್ ಗಳನ್ನು ಚಾಪ್ಟರ್ ಗಳಂತೆಯೇ ರಚಿಸಲಾಗುತ್ತದೆ.

09:07 ಇವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಒಂದು ಹೆಚ್ಚಿನ ಚೆಕ್- ಬಾಕ್ಸ್ ಅನ್ನು ಹೊಂದಿರುತ್ತವೆ. ಈ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
09:15 Chapter title ಅನ್ನು Classical evolutes and involutes ಎಂದು ಟೈಪ್ ಮಾಡಿ.

ಇಲ್ಲಿ ತೋರಿಸಿರುವಂತೆ ಕಂಟೆಂಟ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.

09:24 ಈ ಟ್ಯುಟೋರಿಯಲ್ ನ Code files ನಲ್ಲಿ, Book-IteratingEvolutesAndInvolutes.odt ಎಂಬ ಫೈಲ್ ನಲ್ಲಿ ನೀವು ಇದರ ಕಂಟೆಂಟ್ ಅನ್ನು ಪಡೆಯಬಹುದು.
09:31 ಪೇಜ್ ನ ಕೆಳತುದಿಯಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
09:37 ಈಗ ನೀವು ಸಬ್-ಚಾಪ್ಟರ್ ಅನ್ನು ನೋಡಬಹುದು. ಅಲ್ಲದೆ, ಹಿಂದಿನ ಚಾಪ್ಟರ್ ಗಾಗಿ ನ್ಯಾವಿಗೇಷನ್ ಅನ್ನು ಗಮನಿಸಿ.
09:44 ಬಲಗಡೆಯ ಐಕಾನ್ ಗಳ ಬದಿಯಲ್ಲಿ ಒಂದು ಹೆಚ್ಚಿನ ಐಕಾನ್ ಇರುವುದನ್ನು ಗಮನಿಸಿ.
09:49 ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಚಾಪ್ಟರ್ ಗಳನ್ನು ಹೊಂದಿಸಲು ಇರುವವು.
09:54 ನಾವು ಈ ಸಬ್-ಚಾಪ್ಟರ್ ಅನ್ನು ಮೇಲೆ ಸರಿಸಿದರೆ ಏನಾಗುವುದೆಂದು ನೋಡೋಣ.
Up ಆರೋ ವನ್ನು ಕ್ಲಿಕ್ ಮಾಡಿ.
10:01 Introduction ಈಗ ಸಬ್-ಚಾಪ್ಟರ್ ನ ಬದಲಿಗೆ, ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ.
10:08 ಇದನ್ನು ಮತ್ತೆ ಮೊದಲನೆಯ ಚಾಪ್ಟರ್ ಆಗುವಂತೆ ಮಾಡಿ.
10:11 Classical evolutes and involutes ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?

ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ gear ಐಕಾನ್ ಮೇಲೆ ಕ್ಲಿಕ್ ಮಾಡಿ.

10:21 ಈಗ ಇದನ್ನು ಸಬ್-ಚಾಪ್ಟರ್ ಮಾಡಲು, Subchapter ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
10:26 ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
10:30 ಈಗ ಮತ್ತೆ Calculus ಕೋರ್ಸ್ ಗೆ ಹಿಂದಿರುಗೋಣ.
10:34 Basic Calculus ಗಾಗಿ ನಾವು ಈಗ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ.
10:40 ಈ ರಿಸೋರ್ಸ್ ಗಳನ್ನು ಡ್ರ್ಯಾಗ್ ಮಾಡಿ (ಎಳೆಯುವುದರ) ಇವುಗಳನ್ನು ಮತ್ತೆ ಹೊಂದಿಸಬಹುದು.
10:45 ನಾನು Evolutes of Basic curves URL ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು.
10:52 ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು Edit ಲಿಂಕ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ.
10:58 ರಿಸೋರ್ಸ್ ಅನ್ನು edit, hide, duplicate ಮತ್ತು delete ಮಾಡಲು ಇಲ್ಲಿ ಸೆಟ್ಟಿಂಗ್ ಗಳಿವೆ.

ಇವು ಸ್ವಯಂ ವಿವರಣಾತ್ಮಕವಾಗಿದೆ.

11:09 ಇಲ್ಲಿ Move right ಮತ್ತು Assign roles ಎಂಬ ಇನ್ನೆರಡು ಆಯ್ಕೆಗಳಿವೆ.
11:14 Move right ಅನ್ನು ಕ್ಲಿಕ್ ಮಾಡಿ. ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ.
11:21 ಇನ್ನೊಂದು ರಿಸೋರ್ಸ್ ನ ಭಾಗವಾಗಿರುವ ಒಂದು ರಿಸೋರ್ಸ್ ನ ದೃಶ್ಯ ನಿರೂಪಣೆಗೆ ಇದು ಸಹಾಯಕವಾಗಿದೆ.
11:28 ಈ ರಿಸೋರ್ಸ್ ಅನ್ನು ಅದರ ಮೊದಲಿನ ಜಾಗಕ್ಕೆ ತರಲು, ನಾನು Move left ಮೇಲೆ ಕ್ಲಿಕ್ ಮಾಡುವೆನು.
11:34 ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
11:38 ಈಗ ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುವೆನು.
11:41 ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ಹೀಗೆ ನೋಡುವರು.
11:46 ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಗಳು ಟಿಕ್ ಆಗಿಲ್ಲದಿರುವುದನ್ನು ಗಮನಿಸಿ.
11:51 ಈ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಅವಳು ಈ URL ಅನ್ನು ನೋಡಬೇಕಾಗುತ್ತದೆ.
11:56 URL ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕುವವರೆಗೆ, book ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.
12:02 ನಾನು Evolutes of basic curves ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು.
12:07 ಈಗ ಬ್ರೆಡ್-ಕ್ರಂಬ್ ನಲ್ಲಿರುವ Calculus ಲಿಂಕ್ ಅನ್ನು ಕ್ಲಿಕ್ ಮಾಡಿ.

ಈಗ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತು ಹಾಕಲಾಗಿದೆ ಮತ್ತು ಬುಕ್ ಸ್ಟುಡೆಂಟ್ ಗೆ ಲಭ್ಯವಿದೆ.

12:17 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

12:23 ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ URL resource, Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ.
12:34 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚು ಚಾಪ್ಟರ್ ಮತ್ತು ಸಬ್-ಚಾಪ್ಟರ್ ಗಳನ್ನು ಸೇರಿಸಿ.

12:42 ನಿರ್ದೇಶಿಸಿರುವಂತೆ ಅವುಗಳನ್ನು ಮತ್ತೆ ಜೋಡಿಸಿ.

ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:50 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:59 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:09 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:26 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14