Moodle-Learning-Management-System/C2/Quiz-in-Moodle/Kannada

From Script | Spoken-Tutorial
Revision as of 19:18, 5 December 2019 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಮೂಡಲ್ ನಲ್ಲಿ Quiz ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,

ಮೂಡಲ್ ನಲ್ಲಿ Quiz ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಷ್ಚನ್ ಬ್ಯಾಂಕ್ ನಿಂದ ಪ್ರಶ್ನೆಗಳನ್ನು ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.

00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:40 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:48 ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
00:59 ಮತ್ತು ಇದು ನೀವು ನಿಮ್ಮ ಕೋರ್ಸ್ ನ ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರುವೆಂದು ಕೂಡ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:12 ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಲಾಗಿನ್ ಆಗಿ.
01:18 ಎಡ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:22 ಮೇಲ್ಗಡೆ ಬಲದಲ್ಲಿರುವ gear ಐಕಾನ್ ಅನ್ನೂ, ನಂತರ Turn Editing On ಅನ್ನು ಕ್ಲಿಕ್ ಮಾಡಿ.
01:29 Basic Calculus ನ ಕೆಳಗಡೆ, ಬಲದಲ್ಲಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
01:37 ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ Quiz ಅನ್ನು ಆಯ್ಕೆಮಾಡಿ.
01:42 ಆಕ್ಟಿವಿಟಿ ಚೂಸರ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
01:47 ನಾನು Name ಫೀಲ್ಡ್ ನಲ್ಲಿ, Quiz 1 - Evolutes and involutes ಎಂದು ಟೈಪ್ ಮಾಡುವೆನು.
01:54 ನಂತರ Description ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
02:00 Display description on course page ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದಾದ ನಂತರ Timing ವಿಭಾಗವನ್ನು ವಿಸ್ತರಿಸೋಣ.
02:09 Open the quiz, Close the quiz ಮತ್ತು Time limit ಚೆಕ್ ಬಾಕ್ಸ್ ಗಳನ್ನು ಎನೇಬಲ್ ಮಾಡಿ.
02:17 ಇದು ಕೊಟ್ಟಿರುವ ದಿನಾಂಕದಂದು, ನಿಗದಿತ ಅವಧಿಗೆ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.
02:25 ದಿನಾಂಕ ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿ. ನಾನು ಅವುಗಳನ್ನು ಇಲ್ಲಿ ತೋರಿಸಿರುವಂತೆ ಸೆಟ್ ಮಾಡಿರುವೆನು.
02:32 ನಂತರ ನಾನು ಸಮಯದ ಮಿತಿಯನ್ನು 10 ನಿಮಿಷಗಳಿಗೆ ಸೆಟ್ ಮಾಡಿರುವೆನು.
02:37 When time expires field ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸರಿಹೊಂದುವ ಒಂದನ್ನು ಆಯ್ಕೆ ಮಾಡಿ.
02:47 ನಾನು, Open attempts are submitted automatically ಅನ್ನು ಆಯ್ಕೆ ಮಾಡುವೆನು. ಹಾಗಾಗಿ ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ವಿಫಲನಾದರೂ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.
03:01 ಈಗ , Grade ವಿಭಾಗವನ್ನು ವಿಸ್ತರಿಸಿ.
03:05 Grade to pass ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು 2 ಎಂದು ಟೈಪ್ ಮಾಡುವೆನು. ಅಂದರೆ ಈ ಕ್ವಿಝ್ ಅನ್ನು ಪಾಸ್ ಮಾಡಲು ವಿದ್ಯಾರ್ಥಿಯು ಕನಿಷ್ಟ ಎರಡು ಅಂಕಗಳನ್ನು ಪಡೆಯಬೇಕು.
03:18 Attempts allowed ಫೀಲ್ಡ್ ನಲ್ಲಿ, ನಾನು 1 ಅನ್ನು ಆಯ್ಕೆ ಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಅದೇ ಕ್ವಿಝ್ ಅನ್ನು ಆ ಸಂಖ್ಯೆಯಷ್ಟು ಸಲ ಪ್ರಯತ್ನ ಪಡಬಹುದಾಗಿದೆ.
03:32 Grading method ಡ್ರಾಪ್-ಡೌನ್ ಡಿಸೇಬಲ್ ಆಗಿರುವುದನ್ನು ಗಮನಿಸಿ.
03:37 ಇದು ಒಂದಕ್ಕಿಂತ ಹೆಚ್ಚಿನ ಪ್ರಯತ್ನಕ್ಕೆ ಅವಕಾಶವಿದ್ದರೆ ಮಾತ್ರ ಎನೇಬಲ್ ಆಗುವುದು. ಆಗ ಟೀಚರ್ ಯಾವ ಪ್ರಯತ್ನಕ್ಕೆ ಗ್ರೇಡ್ ಅನ್ನು ಕೊಡಬೇಕೆಂದು ಆಯ್ಕೆ ಮಾಡಬಹುದು.
03:47 Layout ವಿಭಾಗವನ್ನು ವಿಸ್ತರಿಸಿ. ಇಲ್ಲಿ ಕ್ವಿಝ್ ನ ಲೇಔಟ್ ಅನ್ನು ನಿರ್ದರ್ಷ್ಟಪಡಿಸಲು ಆಯ್ಕೆಗಳಿವೆ.
03:56 New page field ಡ್ರಾಪ್ ಡೌನ್ ನಲ್ಲಿ ಡಿಫಾಲ್ಟ್ ಆಗಿ, Every question ಎಂಬ ಆಯ್ಕೆಯು ಆಯ್ಕೆಯಾಗಿರುತ್ತದೆ.
04:04 ಎಲ್ಲಾ ಆಯ್ಕೆಗಳನ್ನು ನೋಡಲು, New page field ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
04:09 ನಾನು Every 2 questions ಆಯ್ಕೆಯನ್ನು ಆರಿಸಿಕೊಳ್ಳುವೆನು. ನೀವು ನಿಮ್ಮಿಷ್ಟದಂತೆ ಯಾವ ಆಯ್ಕೆಯನ್ನು ಬೇಕಾದರೂ ಆರಿಸಿಕೊಳ್ಳಬಹುದು.
04:17 ನಂತರ, Question behaviour ವಿಭಾಗವನ್ನು ವಿಸ್ತರಿಸೋಣ.
04:22 Shuffle within questions ಡ್ರಾಪ್ ಡೌನ್ ನಲ್ಲಿ Yes ಅನ್ನು ಆಯ್ಕೆ ಮಾಡಿ.
04:27 ಇದನ್ನು ಮಾಡುವುದರಿಂದ, ಪ್ರತಿ ಪ್ರಶ್ನೆಗೆ ಎಲ್ಲಾ ಆಯ್ಕೆಗಳು ಷಫಲ್ ಆಗುವವು.
04:33 ಹಾಗಾಗಿ ಪ್ರತಿ ವಿದ್ಯಾರ್ಥಿಯು ಅವರ ಕ್ವಿಝ್ ಗೆ ಪ್ರಶ್ನೆ ಮತ್ತು ಆಯ್ಕೆಗಳ ಬೇರೆ ಬೇರೆ ಜೋಡಣೆಯನ್ನು ಹೊಂದಿರುವರು.
04:40 How questions behave ಡ್ರಾಪ್ ಡೌನ್ ಗೆ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ.
04:47 ನಾನು, Deferred feedback ಅನ್ನು ಇಲ್ಲಿ ಆರಿಸಿಕೊಳ್ಳುವೆನು. ಹಾಗಾಗಿ ನನ್ನ ವಿದ್ಯಾರ್ಥಿಗಳು ಅವರ (ಅಟೆಂಪ್ಟ್) ಪ್ರಯತ್ನವನ್ನು ಸಲ್ಲಿಸಿದ ಮೇಲೆಯೇ ಫೀಡ್ ಬ್ಯಾಕ್ ಅನ್ನು ನೋಡುವರು.
04:57 ನಂತರ, Overall feedback ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
05:02 Overall feedback ಇದು, ವಿದ್ಯಾರ್ಥಿಯು ತನ್ನ ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ ಗ್ರೇಡ್ ಆದ ನಂತರ ನೋಡಬಹುದಾದ ಟೆಕ್ಸ್ಟ್ ಆಗಿದೆ.
05:10 ವಿದ್ಯಾರ್ಥಿಯು ಪಡೆದುಕೊಂಡ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಬೇರೆ ಬೇರೆ ಫೀಡ್-ಬ್ಯಾಕ್ ಅನ್ನು ಕೊಡಬಹುದು.
05:17 ನಾನು, grade boundary 100% ಗೆ ಫೀಡ್-ಬ್ಯಾಕ್ ಅನ್ನು Excellent performance ಎಂದು ಟೈಪ್ ಮಾಡುವೆನು.
05:25 50% ಮತ್ತು 100% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "Excellent performance" ಎಂಬ ಸಂದೇಶವನ್ನು ನೋಡುವರು.
05:33 ಮತ್ತು grade boundary 50%. ಗೆ ಫೀಡ್-ಬ್ಯಾಕ್ You need to work harder ಎಂದಿರಲಿ.
05:40 0% ಮತ್ತು 49.99% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "You need to work harder" ಎಂಬ ಸಂದೇಶವನ್ನು ನೋಡುವರು.
05:49 ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Activity completion ವಿಭಾಗವನ್ನು ಕ್ಲಿಕ್ ಮಾಡಿ.
05:54 Completion Tracking ಫೀಲ್ಡ್ ನ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. Show activity as complete when conditions are met. ಆಯ್ಕೆಯನ್ನು ಆರಿಸಿಕೊಳ್ಳಿ.
06:05 Require grade ಮತ್ತು Require passing grade ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ.
06:13 ಕೊನೆಯಲ್ಲಿ ಪೇಜ್ ನ ಕೆಳಭಾಗದಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
06:20 ಈಗ quiz ಗೆ ನಾವು ಕೊಟ್ಟ ಹೆಸರನ್ನೊಳಗೊಂಡ ಹೊಸ ಪೇಜ್ ಕರೆದೊಯ್ಯಲ್ಪಡುವೆವು. ನಾವು ಈಗಾಗಲೇ ಕೊಟ್ಟಿರುವ ಎಲ್ಲ ವಿವರಗಳು ಇಲ್ಲಿ ಡಿಸ್ಪ್ಲೇ ಆಗಿದೆಯೇ ಎಂದು ಓದಿ ಖಚಿತಪಡಿಸಿಕೊಳ್ಳಿ.
06:31 ಇಲ್ಲಿ ನೀವು –ಎದ್ದು ಕಾಣುವ, No questions have been added yet ಸಂದೇಶವನ್ನು ನೋಡಬಹುದು.
06:38 ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, Edit quiz ಬಟನ್ ಅನ್ನು ಕ್ಲಿಕ್ ಮಾಡಿ.
06:44 ಮೇಲೆ ಬಲಗಡೆಯಲ್ಲಿ , Maximum grade ಅನ್ನು 4 ಎಂದು ಟೈಪ್ ಮಾಡಿ.
06:50 ಕ್ವಿಝ್ ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ನಮ್ಮನ್ನು ಕ್ವಿಝ್ ನ ಹೆಡಿಂಗ್ ಅನ್ನು ಎಡಿಟ್ ಮಾಡಲು ಬಿಡುವುದು. ಇದು ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಉಪಯುಕ್ತವಾಗಿದೆ.
07:03 ನಾನು Section 1 ಎಂದು ಬರೆದು, Enter ಅನ್ನು ಒತ್ತುವೆನು.
07:08 ನಂತರ ಬಲಗಡೆಯಿರುವ Shuffle ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದು ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಪ್ರಶ್ನೆಗಳನ್ನು ಷಫಲ್ ಮಾಡುತ್ತದೆ.
07:20 Shuffle ಚೆಕ್ ಬಾಕ್ಸ್ ನ ಕೆಳಗಿರುವ Add ಲಿಂಕ್ ಅನ್ನು ಕ್ಲಿಕ್ ಮಾಡಿ.
07:25 ಇಲ್ಲಿ ಮೂರು ಆಯ್ಕೆಗಳಿವೆ. ಅವು

a new question

from question bank

a random question ಎಂದಾಗಿವೆ.

07:34 ಹೆಸರೇ ಹೇಳುವ ಹಾಗೆ, a new question ಲಿಂಕ್, ಹೊಸ ಪ್ರಶ್ನೆಗಳನ್ನು ಸೇರಿಸಲು ಸಾಧ್ಯವಾಗಿಸುತ್ತದೆ. ಹಾಗಾಗಿ ನಾನು ಈ ಆಯ್ಕೆಯನ್ನು ಆರಿಸಿಕೊಳ್ಳುವುದಿಲ್ಲ.
07:44 from question bank ಲಿಂಕ್ ಅನ್ನು ಕ್ಲಿಕ್ ಮಾಡಿ.
07:48 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ನೀವು ಪ್ರತಿ ಸ್ಟುಡೆಂಟ್ ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೊಡಲು ಬಯಸಿದ್ದರೆ ಈ ಆಯ್ಕೆ ಉಪಯುಕ್ತವಾಗಿದೆ.
07:58 ಆಯ್ಕೆಮಾಡಿದ ಕೆಟಗರಿಯು ಆ ಕೋರ್ಸ್ ನ ಡಿಫಾಲ್ಟ್ ಕೆಟಗರಿಯಾಗಿರುತ್ತದೆ.
08:04 ಡಿಫಾಲ್ಟ್ ಆಗಿ, Also show questions from subcategories – ಇದು ಆಯ್ಕೆಯಾಗಿರುತ್ತದೆ.
08:12 Also show old questions ಈ ಆಯ್ಕೆಯು, ಹಿಂದಿನ ಕ್ವಿಝ್ ಗಳ ಪ್ರಶ್ನೆಗಳನ್ನು ತೋರಿಸುತ್ತದೆ.
08:19 ನೀವು ಸೇರಿಸಬೇಕಾದ ಪ್ರಶ್ನೆಗಳನ್ನು , ಇಲ್ಲಿ ನಾನು ಮಾಡುತ್ತಿರುವಂತೆ ಆಯ್ಕೆ ಮಾಡಬಹುದು. ನಂತರ ಕೆಳಗಡೆ ಇರುವ Add selected questions to the quiz ಬಟನ್ ಅನ್ನು ಕ್ಲಿಕ್ ಮಾಡಿ.
08:32 ಆದಾಗ್ಯೂ ನಾನು ಅದನ್ನು ಮಾಡುವುದಿಲ್ಲ. ನಾನು ಮೇಲ್ಗಡೆ ಬಲಕ್ಕಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ ಅದನ್ನು ಕ್ಲೋಸ್ ಮಾಡುವೆನು.
08:40 Shuffle ನ ಕೆಳಗಿರುವ Add ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. a random question ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
08:51 ಈ ಆಯ್ಕೆಯೊಂದಿಗೆ, ಪ್ರತಿ ವಿದ್ಯಾರ್ಥಿಯು ಬೇರೆ ಬೇರೆ ಪ್ರಶ್ನೆಗಳ ಜೋಡಣೆಯನ್ನು ನೋಡುವರು. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಪ್ರಯತ್ನಿಸುವಾಗ ಉತ್ತರದ ಕುರಿತು ಚರ್ಚಿಸಲು ಕಷ್ಟವಾಗುತ್ತದೆ.
09:03 Random question from an existing category ಯ ಅಡಿಯಲ್ಲಿ, ನಾನು category ಯನ್ನು Evolutes ಎಂದು ಆಯ್ಕೆ ಮಾಡುವೆನು.
09:11 Number of random questions ನಲ್ಲಿ, ನಾನು 2 ಅನ್ನು ಆಯ್ಕೆ ಮಾಡುವೆನು.
09:16 ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ Add random question ಅನ್ನು ಆಯ್ಕೆಮಾಡಿ.
09:23 ಈ ಕ್ವಿಝ್ ಗೆ Evolutes category ಯಿಂದ ಎರಡು ರೇಂಡಮ್ ಪ್ರಶ್ನೆಗಳು ಸೇರ್ಪಡೆಯಾಗಿವೆ.
09:29 ಕೆಳಗೆ ಬಲಗಡೆಯಿರುವ Add ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
09:34 a random questionಲಿಂಕ್ ಅನ್ನು ಕ್ಲಿಕ್ ಮಾಡಿ. category ಯನ್ನು Involutes ಎಂದೂ ಮತ್ತು Number of random questions ಅನ್ನು 2 ಎಂದೂ ಆಯ್ಕೆ ಮಾಡಿ.
09:44 ನಂತರ Add random question ಬಟನ್ ಅನ್ನು ಕ್ಲಿಕ್ ಮಾಡಿ.
09:48 ಈ ಕ್ವಿಝ್ ಗೆ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ, ಎರಡೂ ಕೂಡ Involutes ನಿಂದ ಬಂದಿವೆ.
09:55 ಕ್ವಿಝ್ ಎರಡು ಪೇಜ್ ಗಳಲ್ಲಿ ತಂತಾನೇ ವಿಭಜನೆಯಾಗಿರುವುದನ್ನು ಗಮನಿಸಿ. ಏಕೆಂದರೆ ನಾವು ಮೊದಲೇ Quiz Settings ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೇವೆ.
10:07 ಎರಡನೇ ಪ್ರಶ್ನೆಯ ಕೆಳಗೆ ಬಲಭಾಗದಲ್ಲಿ, add ಲಿಂಕ್ ಅನ್ನು ಕ್ಲಿಕ್ ಮಾಡಿ.
10:13 a new section heading ಲಿಂಕ್ ಅನ್ನು ಕ್ಲಿಕ್ ಮಾಡಿ.
10:18 heading ನ ಹೆಸರನ್ನು ಬದಲಿಸಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
10:23 ನಾನು, Section 2 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು.
10:27 ಕ್ವಿಝ್ ಸೇವ್ ಮಾಡಲು, ಮೇಲೆ ಬಲಗಡೆಯಿರುವ Save button ಅನ್ನು ಕ್ಲಿಕ್ ಮಾಡಿ.
10:32 ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆಯೂ ಎರಡು ಐಕಾನ್ ಗಳಿವೆ. ಅವು Preview question ಮತ್ತು Delete ಗಳಾಗಿವೆ.

ಇವು ಸ್ವಯಂ ವಿವರಣಾತ್ಮಕವಾಗಿವೆ.

10:43 Delete question ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಇರುವುದು.
10:51 ಬ್ರೆಡ್ ಕ್ರಂಬ್ಸ್ ನಲ್ಲಿ ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
10:56 ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, Preview quiz ಬಟನ್ ಅನ್ನು ಕ್ಲಿಕ್ ಮಾಡಿ.
11:02 ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗೆ, ಕ್ವಿಝ್ ಸಮಯಾಧಾರಿತವಾಗಿದೆ ಎಂಬ ಮಾಹಿತಿಯನ್ನು ಕೊಡುವುದು. ಮತ್ತು ಇದು Start ಮಾಡಲು ಅಥವಾ Cancel ಮಾಡಲು ಆಯ್ಕೆಗಳನ್ನು ಹೊಂದಿವೆ.
11:14 Start attempt ಬಟನ್ ಅನ್ನು ಕ್ಲಿಕ್ ಮಾಡುವೆನು.
11:18 ಪರದೆಯ ಬಲಗಡೆಯಿರುವುದು Quiz navigation ವಿಭಾಗವಾಗಿದೆ.
11:23 ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ.
11:29 ಇಲ್ಲಿ ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.
11:35 ಈಗ ನಾನು ನ್ಯಾವಿಗೇಷನ್ ವಿಭಾಗದಲ್ಲಿ Finish attempt ಲಿಂಕ್ ಅನ್ನು ಕ್ಲಿಕ್ ಮಾಡುವೆನು.
11:40 ಪ್ರತಿಯೊಂದು ಪ್ರಶ್ನೆಯ ಸ್ಟೇಟಸ್ ಅನ್ನು ಆ ಪ್ರಶ್ನೆಯ ಹೆಸರಿನ ಮುಂದೆ ತೋರಿಸಲಾಗಿದೆ.
11:45 ಪೇಜ್ ನ ಕೆಳಗಡೆಯಿರುವ Submit all and finish ಬಟನ್ ಅನ್ನು ಕ್ಲಿಕ್ ಮಾಡಿ.
11:51 ಕನ್ಫರ್ಮೇಷನ್ ಪಾಪ್ ಅಪ್ ನಲ್ಲಿ Submit all and finish ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
11:58 ಇಲ್ಲಿ grade, overall feedback ಮತ್ತು ಪ್ರತಿ ಪ್ರಶ್ನೆಗೆ feedback ಎಲ್ಲವನ್ನೂ ತೋರಿಸಿದೆ.
12:06 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Finish review ಲಿಂಕ್ ಅನ್ನು ಕ್ಲಿಕ್ ಮಾಡಿ.
12:11 ನಾವು Quiz summary ಪೇಜ್ ಗೆ ಹಿಂದಿರುಗಿದ್ದೇವೆ.
12:15 ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. Edit quiz ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು.
12:28 ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸುವ (ಅಟೆಂಪ್ಟ್ ಮಾಡುವ) ಮೊದಲೇ ಮಾಡಬೇಕು.
12:35 ಒಬ್ಬ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ ಕ್ವಿಝ್ ಲಾಕ್ ಆಗುವುದು. ಆದಾಗ್ಯೂ ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.
12:47 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
12:53 ಈ ಟ್ಯುಟೋರಿಯಲ್ ನಲ್ಲಿ ನಾವು,

ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು, ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದು- ಇವುಗಳ ಕುರಿತು ಕಲಿತಿದ್ದೇವೆ.

13:03 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

evolutes ಗೆ ಒಂದು ಕ್ವಿಝ್ ಅನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

13:16 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:25 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:34 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:38 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:52 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
14:03 ಧನ್ಯವಾದಗಳು.

Contributors and Content Editors

Anjana310312, Sandhya.np14