Moodle-Learning-Management-System/C2/Uploading-and-editing-resources-in-Moodle/Kannada
Time | Narration |
00:01 | ಮೂಡಲ್ ನಲ್ಲಿ, Uploading and Editing Resources ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
URL resource , Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿಯುವೆವು. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:25 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:33 | Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:43 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:51 | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ. |
01:01 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ teacher login ಅನ್ನು ಹೊಂದಿರಲೇ ಬೇಕು.
ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು |
01:11 | ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು. |
01:16 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. |
01:22 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಂದು ಸ್ಟುಡೆಂಟ್ ಅನ್ನು ಸೇರಿಸಿರಬೇಕು. |
01:28 | ಸ್ಟುಡೆಂಟ್ ಅನ್ನು ಸೇರಿಸಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ. . |
01:35 | ನಾನು ನನ್ನ ಕೋರ್ಸ್ ಗೆ ಈಗಾಗಲೇ ಸ್ಟುಡೆಂಟ್ ಪ್ರಿಯಾ ಸಿನ್ಹಾ ಅವರನ್ನು ಸೇರಿಸಿರುವೆನು. |
01:41 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ನಲ್ಲಿteacher ಆಗಿ ಲಾಗಿನ್ ಆಗಿ. |
01:48 | ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ. |
01:53 | ನಾವು ಈ ಸರಣಿಯಲ್ಲಿ ಈಗಾಗಲೇ, page resource ಮತ್ತು folder resource ಗಳನ್ನು ಸೇರಿಸಿದ್ದೇವೆ. |
02:00 | ಈಗ ನಾವು ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸೋಣ.
ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Turn Editing On ಅನ್ನು ಕ್ಲಿಕ್ ಮಾಡಿ. |
02:11 | Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
02:19 | ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. ಇದನ್ನು “ಆಕ್ಟಿವಿಟಿ ಚೂಸರ್” ಎನ್ನುವರು. |
02:26 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ URL ಅನ್ನು ಆಯ್ಕೆ ಮಾಡಿ.
ರಿಸೋರ್ಸ್ ನ ಕುರಿತಾದ ವಿವರವಾದ ಡಿಸ್ಕ್ರಿಪ್ಷನ್ ಬಲಗಡೆ ಕಾಣಿಸುವುದು. |
02:37 | URL resource ನಿಂದ, online resource ಗಳಿಗೆ ಲಿಂಕ್ ಅನ್ನು ಸೇರಿಸಬಹುದು. |
02:43 | ಇವುಗಳು- ಡಾಕ್ಯುಮೆಂಟ್ಸ್, ಆನ್ಲೈನ್ ವಿಡಿಯೋ, ವಿಕಿ ಪೇಜ್, ಓಪನ್ ಎಜುಕೇಷನಲ್ ರಿಸೋರ್ಸ್ ಗಳು ಮುಂತಾದವುಗಳಾಗಿರಬಹುದು. |
02:52 | ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
02:57 | Name ಫೀಲ್ಡ್ ನಲ್ಲಿ, Evolutes of basic curves ಎಂದು ಟೈಪ್ ಮಾಡಿ. |
03:03 | ನಂತರ, External URL ಟೆಕ್ಸ್ಟ್ ಬಾಕ್ಸ್ ನಲ್ಲಿ, ಇಲ್ಲಿ ಕೊಟ್ಟಿರುವ URL ಅನ್ನು ಟೈಪ್ ಮಾಡಿ. |
03:10 | Description ಟೆಕ್ಸ್ಟ್ ಏರಿಯಾವು ಐಚ್ಛಿಕ ಫೀಲ್ಡ್ ಆಗಿದೆ.
ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. |
03:17 | ಈ ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:24 | ಈಗ Appearance ವಿಭಾಗವನ್ನು ವಿಸ್ತರಿಸಲು, ಇದನ್ನು ಕ್ಲಿಕ್ ಮಾಡಿ. |
03:29 | ಇಲ್ಲಿರುವ Display ಆಯ್ಕೆಯು, ವಿಡಿಯೋ ಹೇಗೆ ಡಿಸ್ಪ್ಲೇ ಆಗುವುದೆಂದು ನಿರ್ಧರಿಸುತ್ತದೆ. |
03:35 | ಈ ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ.
Automatic ಆಯ್ಕೆಯು, browser settings ಮತ್ತು screen resolution ಗಳನ್ನು ಆಧರಿಸಿ, ಉತ್ತಮ ಆಯ್ಕೆಯನ್ನು ಆರಿಸುತ್ತದೆ. |
03:45 | Embed ಆಯ್ಕೆಯು, ಕೋರ್ಸ್ ನಲ್ಲಿಯೇ ವಿಡಿಯೋ ತೆರೆದುಕೊಳ್ಳುವಂತೆ ಮಾಡುತ್ತದೆ.
Open ಆಯ್ಕೆಯಲ್ಲಿ, ಯೂಸರ್ ಅನ್ನು ಅದೇ ವಿಂಡೋದಲ್ಲಿ URL ಗೆ ಕರೆದುಕೊಂಡು ಹೋಗುತ್ತದೆ. |
03:55 | In pop-up ಆಯ್ಕೆಯಲ್ಲಿ ವಿಡಿಯೋ ಹೊಸ ಪಾಪ್-ಅಪ್ ವಿಂಡೋದಲ್ಲಿ ತೆರೆದುಕೊಳ್ಳುತ್ತದೆ. |
04:00 | ನೀವು In pop-up ಅನ್ನು ಆರಿಸಿಕೊಂಡಾಗ , Pop-up width ಮತ್ತು Pop-up height ಆಯ್ಕೆಗಳು ಎನೇಬಲ್ ಆಗುತ್ತವೆ.
ನೀವು ಇದರ ವ್ಯಾಲ್ಯುಗಳನ್ನು ನಿಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು. |
04:12 | Embed ಅನ್ನು Display ಯ ಆಯ್ಕೆಯಾಗಿ ಆರಿಸುವೆನು. |
04:17 | Activity completion ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಅದನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
04:24 | ಈ ವಿಭಾಗವು, ಟೀಚರ್ ಗೆ ಅವರು ಬಯಸಿದರೆ, ಚಟುವಟಿಕೆಯನ್ನು ಪೂರ್ಣ ಗೊಳಿಸಿದ್ದಾರೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ. |
04:32 | Completion tracking. ನಡಿಯಲ್ಲಿ ಮೂರು ಆಯ್ಕೆಗಳಿವೆ.
ರಿಸೋರ್ಸ್ ಅನ್ನು ಆಧರಿಸಿ, ನೀವು ಟ್ರ್ಯಾಕಿಂಗ್ ವಿಧಾನವನ್ನು ನಿರ್ಧರಿಸಬಹುದು. |
04:41 | ನಾನು ಇಲ್ಲಿ ಮೂರನೇ ಆಯ್ಕೆಯನ್ನು ಆರಿಸುವೆನು. Student must view this activity to complete it ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
04:51 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save and return to course ಬಟನ್ ಅನ್ನು ಕ್ಲಿಕ್ ಮಾಡಿ. |
04:58 | ಆಕ್ಟಿವಿಟಿಯ ಹೆಸರಿನ ಮುಂದಿರುವ ಚೆಕ್ ಮಾರ್ಕ್, ಆಕ್ಟಿವಿಟಿ ಪೂರ್ಣವಾಗಿದೆಯೇ ಎಂದು ಸೂಚಿಸುತ್ತದೆ. |
05:05 | ಈಗ book resource ಅನ್ನು ರಚಿಸೋಣ. ಹೆಸರೇ ಸೂಚಿಸುವಂತೆ ಇದು ಅನೇಕ ಪುಟಗಳು, ಚಾಪ್ಟರ್ ಗಳು ಮತ್ತು ಸಬ್ ಚಾಪ್ಟರ್ ಗಳನ್ನು ಹೊಂದಿರುತ್ತದೆ. |
05:16 | ಇದು ಮಲ್ಟಿ ಮೀಡಿಯಾ ಕಂಟೆಂಟ್ ಗಳನ್ನು ಕೂಡ ಹೊಂದಿರಬಹುದು. |
05:20 | ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗಿ. |
05:23 | Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
05:30 | ಕೆಳಕ್ಕೆ ಸ್ಕ್ರೋಲ್ ಮಾಡಿ, ರಿಸೋರ್ಸ್ ಪಟ್ಟಿಯಲ್ಲಿ Book ಅನ್ನು ಆಯ್ಕೆ ಮಾಡಿ. |
05:34 | ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
05:39 | Name ಫೀಲ್ಡ್ ನಲ್ಲಿ, Iterating evolutes and involutes ಎಂದು ಟೈಪ್ ಮಾಡಿ. |
05:45 | ಇಲ್ಲಿ ತೋರಿಸಿರುವಂತೆ ಡಿಸ್ಕ್ರಿಪ್ಷನ್ ಅನ್ನು ಟೈಪ್ ಮಾಡಿ. |
05:48 | Appearance ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
05:51 | ಮೊದಲನೆಯದು Chapter formatting ಆಗಿದೆ.
ಇದು ನಾವು ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಹೇಗೆ ನೋಡಬೇಕೆಂದು ನಿರ್ಧರಿಸುತ್ತದೆ. |
05:59 | ಆಯ್ಕೆಗಳು ಸ್ವಯಂ ವಿವರಣಾತ್ಮಕವಾಗಿದೆ. ನೀವು ವಿವರಣೆ ಬೇಕಾಗಿದ್ದಲ್ಲಿ, ಡ್ರಾಪ್ ಡೌನ್ ನ ಹಿಂದೆ ಇರುವ Help ಐಕಾನ್ ಅನ್ನು ಕ್ಲಿಕ್ ಮಾಡಬಹುದು. |
06:08 | ನಾನು ಇದನ್ನು Numbers ಎಂದೇ ಉಳಿಸಿಕೊಳ್ಳುವೆನು. |
06:11 | ಮುಂದಿನ ಆಯ್ಕೆ Style of navigation ಆಗಿದೆ. ಇದು ನಾವು ಮುಂದಿನ ಮತ್ತು ಹಿಂದಿನ ಲಿಂಕ್ ಗಳನ್ನು ಹೇಗೆ ತೋರಿಸುವೆವು ಎಂಬುದನ್ನು ನಿರ್ಧರಿಸುತ್ತದೆ. |
06:19 | TOC ಎಂದರೆ Table of Contents ಆಗಿದೆ. |
06:23 | Images ಅನ್ನು ಆಯ್ಕೆ ಮಾಡಿದರೆ, ಹಿಂದಿನ ಮತ್ತು ಮುಂದಿನ ಲಿಂಕ್ ಗಳು, ಬಾಣದ ಗುರುತನ್ನು ಹೊಂದಿರುತ್ತವೆ. |
06:29 | Text ಆಯ್ಕೆಯು, ನ್ಯಾವಿಗೇಷನ್ ನಲ್ಲಿ ಹಿಂದಿನ ಮತ್ತು ಮುಂದಿನ ಚಾಪ್ಟರ್ ಗಳನ್ನು ತೋರಿಸುವುದು. |
06:34 | ನಾವು ಪ್ರತಿ ಚಾಪ್ಟರ್ ನ್ಯಾವಿಗೇಷನ್ ಗೆ ಟೈಟಲ್ ಅನ್ನು ಬದಲಿಸಲು ಆಯ್ಕೆಗಳನ್ನು ಹೊಂದಿದ್ದೇವೆ. |
06:40 | ಇದು ಮೊದಲು ಟೆಕ್ಸ್ಟ್ ಆಗಿ ತೋರಿಸುತ್ತಿದ್ದ ಚಾಪ್ಟರ್ ನ ಹೆಸರನ್ನು ಅತಿಕ್ರಮಿಸುತ್ತದೆ. |
06:45 | ನಾನು Text ಅನ್ನು Style of navigation ಆಗಿ ಆಯ್ಕೆ ಮಾಡುವೆನು. |
06:49 | ನಂತರ Restrict Access ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
ಇದು ರಿಸೋರ್ಸ್ ಅನ್ನು ಯಾರು ಆಕ್ಸೆಸ್ ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ. |
06:59 | ಡಿಫಾಲ್ಟ್ ಆಗಿ ಇಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಅಂದರೆ ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಈ ಪುಸ್ತಕವನ್ನು ನೋಡಬಹುದು. |
07:08 | ಈಗ ನಾನು Add restriction ಬಟನ್ ಅನ್ನು ಕ್ಲಿಕ್ ಮಾಡುವೆನು. |
07:12 | ಇಲ್ಲಿ ಕೆಲವು ಆಯ್ಕೆಗಳಿವೆ. ನೀವು ಪ್ರತಿಯೊಂದರ ವಿವರವನ್ನು ಓದಿ, ಯಾವ ನಿರ್ಬಂಧವನ್ನು ಆಯ್ಕೆಮಾಡುವುದೆಂದು ನಿರ್ಧರಿಸಬಹುದು. |
07:21 | ಈಗ ನಾವು ಮೊದಲೇ ರಚಿಸಿದ ಯು.ಆರ್.ಎಲ್ ರಿಸೋರ್ಸ್ ಗೆ “ಆಕ್ಟಿವಿಟಿ ಕಂಪ್ಲೀಷನ್ ಕಂಡಿಷನ್” (ಚಟುವಟಿಕೆ ಪೂರ್ಣಗೊಳ್ಳಬೇಕೆಂಬ ಷರತ್ತು) ಅನ್ನು ಹಾಕೋಣ. |
07:27 | ಈಗ ಈ ಪುಸ್ತಕವನ್ನು ಆಕ್ಸೆಸ್ ಮಾಡಲು, ವಿದ್ಯಾರ್ಥಿಯು ಇದನ್ನು ಪೂರ್ಣಗೊಂಡಿದೆ ಎಂದು ಗುರುತು ಹಾಕಬೇಕು ಎಂಬ ನಿರ್ಬಂಧವನ್ನು ಹಾಕೋಣ. |
07:33 | Activity completion ಅನ್ನು ಕ್ಲಿಕ್ ಮಾಡಿ. ನಾವು “ರೆಸ್ಟ್ರಿಕ್ಷನ್” ಗೆ ಆಯ್ಕೆ ಮಾಡಿದ ಆಯ್ಕೆಯನ್ನು ಅವಲಂಬಿಸಿ, ಇಲ್ಲಿನ ಫೀಲ್ಡ್ ಗಳು ಬೇರೆ ಬೇರೆಯಾಗಿರುತ್ತವೆ. |
07:42 | Activity completion ಡ್ರಾಪ್ ಡೌನ್ ನಲ್ಲಿ Evolutes of basic curve ಅನ್ನು ಆಯ್ಕೆ ಮಾಡಿ.
ನಂತರ “ಕಂಡಿಷನ್” ಆಗಿ Must be marked complete ಅನ್ನು ಆಯ್ಕೆ ಮಾಡಿ. |
07:54 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ. |
08:00 | ಈಗ ನಾವು ಈ ಪುಸ್ತಕದ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸೋಣ. |
08:05 | Chapter title ಅನ್ನು Introduction ಎಂದು ಟೈಪ್ ಮಾಡಿ. |
08:09 | Content ಅನ್ನು Introduction to evolutes and involutes ಎಂದು ಟೈಪ್ ಮಾಡಿ.
ನಿಮ್ಮ ಪಾಠದ ಟಿಪ್ಪಣಿಯಿದ್ದರೆ ನೀವು ಕಾಪಿ ಮತ್ತು ಪೇಸ್ಟ್ ಮಾಡಬಹುದು. |
08:19 | ಪೇಜ್ ನ ಕೆಳಭಾಗದಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
08:24 | ಈಗ ನೀವು ಪೇಜ್ ನ ಮಧ್ಯಭಾಗದಲ್ಲಿ ಈ ಚಾಪ್ಟರ್ ಅನ್ನು ನೋಡಬಹುದು.
ಮತ್ತು ಬಲಭಾಗದಲ್ಲಿ, table of contents ಇದೆ. |
08:32 | Exit Book ಲಿಂಕ್ ಅನ್ನು ಕ್ಲಿಕ್ ಮಾಡಿ, ಇದು Calculus ಕೋರ್ಸ್ ಗೆ ಹಿಂದಿರುಗಿಸುತ್ತದೆ. |
08:38 | ಬಲಗಡೆಯಿರುವ Table of Contentsವಿಭಾಗದಲ್ಲಿ, Introduction ಚಾಪ್ಟರ್ ನ ಕೆಳಗೆ, ನಾಲ್ಕು ಐಕಾನ್ ಗಳಿರುವುದನ್ನು ಗಮನಿಸಿ. |
08:46 | Edit, Delete, Hide ಮತ್ತು Add new chapter ಗಳಾಗಿವೆ. |
08:55 | ಈಗ ನಾನು ಸಬ್-ಚಾಪ್ಟರ್ ಅನ್ನು ಸೇರಿಸುವೆನು. Add new chapter ಎಂದು ಸೂಚಿಸುವ plus ಐಕಾನ್ ಅನ್ನು ಕ್ಲಿಕ್ ಮಾಡಿ.
ಚಾಪ್ಟರ್ ಗಳಂತೆ ಸಬ್-ಚಾಪ್ಟರ್ ಗಳನ್ನು ರಚಿಸಬಹುದು. |
09:07 | ಅವು ಸಬ್-ಚಾಪ್ಟರ್ ಗಳೆಂದು ತೋರಿಸಲು, ಅವು ಒಂದು ಹೆಚ್ಚುವರಿ ಟೆಕ್ಸ್ಟ್ ಬಾಕ್ಸ್ ಅನ್ನು ಹೊಂದಿರುತ್ತವೆ. ಆ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
09:15 | Chapter title ಅನ್ನು Classical evolutes and involutes ಎಂದು ಟೈಪ್ ಮಾಡಿ.
ಕಂಟೆಂಟ್ ಅನ್ನು ಇಲ್ಲಿ ತೋರಿಸಿರುವಂತೆ ಕಾಪಿ ಮಾಡಿ, ಪೇಸ್ಟ್ ಮಾಡಿ. |
09:24 | ನೀವು ಇದಕ್ಕೆ ಕಂಟೆಂಟ್ ಅನ್ನು, ಈ ಟ್ಯುಟೋರಿಯಲ್ ನ Code files ನಲ್ಲಿ Book-IteratingEvolutesAndInvolutes.odt ಎಂಬ ಫೈಲ್ ನಲ್ಲಿ ಪಡೆಯಬಹುದು. |
09:31 | ಪೇಜ್ ನ ಕೆಳಭಾಗದಲ್ಲಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ. |
09:37 | ಈಗ ನಾವು ಸಬ್-ಚಾಪ್ಟರ್ ಅನ್ನು ನೋಡಬಹುದು. ಮತ್ತು ಹಿಂದಿನ ಚಾಪ್ಟರ್ ಗೆ ನ್ಯಾವಿಗೇಷನ್ ಇರುವುದನ್ನು ಗಮನಿಸಿ. |
09:44 | ಬಲಗಡೆಯಿರುವ ಐಕಾನ್ ಗಳ ನಂತರ ಇನ್ನೊಂದು ಹೆಚ್ಚುವರಿ ಐಕಾನ್ ಇರುವುದನ್ನು ಗಮನಿಸಿ. |
09:49 | ಮೇಲ್ಮುಖ ಮತ್ತು ಕೆಳಮುಖ ಬಾಣದ ಗುರುತುಗಳು ಮರುಕ್ರಮಗೊಳಿಸಲು ಇರುವವು. |
09:54 | ಈಗ ಈ ಸಬ್-ಚಾಪ್ಟರ್ ನಿಂದ ಮೇಲೆ ಹೋದರೆ ಏನಾಗುವುದೆಂದು ನೋಡೋಣ.
Up ಆರೋ ವನ್ನು ಕ್ಲಿಕ್ ಮಾಡಿ. |
10:01 | ಈಗ ಸಬ್-ಚಾಪ್ಟರ್ ನ ಬದಲು, Introduction ಇದು ಎರಡನೆಯ ಚಾಪ್ಟರ್ ಆಗಿರುವುದನ್ನು ಗಮನಿಸಿ. |
10:08 | ಇದನ್ನು ಪುನಃ ಮೊದಲನೆಯ ಚಾಪ್ಟರ್ ಆಗಿ ಮಾಡಿ. |
10:11 | ಈಗ Classical evolutes and involutes ಅನ್ನು ಪುನಃ ಸಬ್-ಚಾಪ್ಟರ್ ಆಗಿ ಮಾಡುವುದು ಹೇಗೆ?
ಇದನ್ನು ಎಡಿಟ್ ಮಾಡಲು, ಟೈಟಲ್ ನ ಕೆಳಗಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ. |
10:21 | ಈಗ ಇದನ್ನು ಸಬ್-ಚಾಪ್ಟರ್ ಅನ್ನಾಗಿ ಮಾಡಲು, Subchapter ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
10:26 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save changes ಬಟನ್ ಅನ್ನು ಕ್ಲಿಕ್ ಮಾಡಿ. |
10:30 | ಈಗ ಪುನಃ Calculus ಕೋರ್ಸ್ ಗೆ ಹಿಂದಿರುಗೋಣ. |
10:34 | ಈಗ ನಾವು, Basic Calculus ವಿಷಯಕ್ಕೆ ಕೆಳಗಿನ ರಿಸೋರ್ಸ್ ಗಳನ್ನು ಹೊಂದಿದ್ದೇವೆ. |
10:40 | ನಾವು ಇವುಗಳನ್ನು ಡ್ರ್ಯಾಗ್ ಮಾಡುವುದರ (ಎಳೆಯುವುದರ ) ಮೂಲಕ ರಿಸೋರ್ಸ್ ಗಳನ್ನು ಮರುಕ್ರಮಗೊಳಿಸಬಹುದು. |
10:45 | ಈಗ ನಾನು Evolutes of Basic curves URL ರಿಸೋರ್ಸ್ ಅನ್ನು ಉಳಿದ ಎರಡು ರಿಸೋರ್ಸ್ ಗಳ ಮೇಲಕ್ಕೆ ಎಳೆಯುವೆನು. |
10:52 | ಪ್ರತಿಯೊಂದು ರಿಸೋರ್ಸ್ ನ ಬಲಗಡೆ ಒಂದು Edit ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ. |
10:58 | ಇಲ್ಲಿ ರಿಸೋರ್ಸ್ ಗಳನ್ನು edit, hide, duplicate ಮತ್ತು delete ಮಾಡಲು ಸೆಟ್ಟಿಂಗ್ ಗಳಿವೆ.
ಇದು ಸ್ವಯಂ ವಿವರಣಾತ್ಮಕವಾಗಿದೆ. |
11:09 | ಇಲ್ಲಿ ಇನ್ನು ಎರಡು ಆಯ್ಕೆಗಳಿವೆ: ಅವು Move right ಮತ್ತು Assign roles ಆಗಿವೆ. |
11:14 | Move right ಅನ್ನು ಕ್ಲಿಕ್ ಮಾಡಿ.
ಇದು ರಿಸೋರ್ಸ್ ಗೆ ಒಂದು ಚಿಕ್ಕ ಇಂಡೆಂಟೇಷನ್ ಅನ್ನು ಕೊಡುತ್ತದೆ. |
11:21 | ಇದು ಇನ್ನೊಂದು ರಿಸೋರ್ಸ್ ನ ಭಾಗವಾದ ರಿಸೋರ್ಸ್ ಚೆನ್ನಾಗಿ ಕಾಣುವಂತೆ ಮಾಡಲು ಸಹಾಯಕವಾಗಿದೆ. |
11:28 | ನಾನು ರಿಸೋರ್ಸ್ ಅದರ ಮೊದಲಿನ ಜಾಗಕ್ಕೆ ಬರುವಂತೆ ಮಾಡಲು, Move left ಅನ್ನು ಕ್ಲಿಕ್ ಮಾಡುವೆನು. |
11:34 | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು. |
11:38 | ಈಗ ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುವೆನು. |
11:41 | ಈ ರೀತಿಯಾಗಿ ವಿದ್ಯಾರ್ಥಿ ಪ್ರಿಯಾ ಸಿನ್ಹಾ ಈ ಪೇಜ್ ಅನ್ನು ನೋಡುವರು. |
11:46 | ಮೊದಲ ಬಾರಿಗೆ ಕಂಪ್ಲೀಷನ್ ಬಾಕ್ಸ್ ಟಿಕ್ ಆಗಿಲ್ಲದಿರುವುದನ್ನು ಗಮನಿಸಿ. |
11:51 | ಅವಳು ಇ ರಿಸೋರ್ಸ್ ಅನ್ನು ಕಂಪ್ಲೀಟ್ ಎಂದು ಗುರುತುಹಾಕಲು, ಈ URL ಅನ್ನು ನೋಡಬೇಕಾಗುತ್ತದೆ. |
11:56 | URL ಕೋರ್ಸ್ ಕಂಪ್ಲೀಟ್ ಎಂದು ಗುರುತಾಗುವ ತನಕ book ರಿಸೋರ್ಸ್ ಅನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ. |
12:02 | ನಾನು Evolutes of basic curves ರಿಸೋರ್ಸ್ ಅನ್ನು ಕ್ಲಿಕ್ ಮಾಡುವೆನು. |
12:07 | ಈಗ ಬ್ರೆಡ್ ಕ್ರಂಬ್ ನಲ್ಲಿರುವ Calculus ಲಿಂಕ್ ಅನ್ನು ಕ್ಲಿಕ್ ಮಾಡಿ.
ಈಗ ರಿಸೋರ್ಸ್ ಕಂಪ್ಲೀಟ್ ಎಂದು ಗುರುತು ಹಾಕಲ್ಪಟ್ಟಿದೆ ಮತ್ತು ಬುಕ್ ರಿಸೋರ್ಸ್ ಸ್ಟುಡೆಂಟ್ ಗೆ ಲಭ್ಯವಿದೆ. |
12:17 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ, |
12:23 | ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ
URL resource , Book resource ಮತ್ತು ರಿಸೋರ್ಸ್ ಗಳ ಎಡಿಟಿಂಗ್ ನ ಕುರಿತು ಕಲಿತಿದ್ದೇವೆ. |
12:34 | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
ನಾವು ಈಗಾಗಲೇ ಕ್ರಿಯೇಟ್ ಮಾಡಿದ ಬುಕ್ ಗೆ ಇನ್ನೂ ಹೆಚ್ಚಿನ ಚಾಪ್ಟರ್ ಮತ್ತು ಸಬ್ ಚಾಪ್ಟರ್ ಗಳನ್ನು ಸೇರಿಸಿ. |
12:42 | ನಿರ್ದೇಶಿಸಿರುವಂತೆ ಅವುಗಳನ್ನು ಮರು ಜೋಡಿಸಿ.
ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
12:50 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:59 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:09 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
13:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:26 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |