Health-and-Nutrition/C2/Vegetarian-recipes-for-7-month-old-babies/Kannada
|
|
00:00 | Vegetarian recipes for 7 month old babies ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ, ನಾವು 7 ತಿಂಗಳ ವಯಸ್ಸಿನ ಶಿಶುಗಳಿಗೆ ಪೂರಕ ಆಹಾರದ ಮಹತ್ವ ಮತ್ತು |
00:16 | ಕೆಳಗೆ ವಿವರಿಸಿದ ಕೆಲವು ಸಸ್ಯಾಹಾರಿ ಪಾಕವಿಧಾನಗಳ ಬಗ್ಗೆ ಕಲಿಯುತ್ತೇವೆ:
ಹಲಸಿನಹಣ್ಣಿನ ಬೀಜಗಳ ಗಂಜಿ, |
00:23 | ಹುರುಳಿಕಾಳು ಹಾಗೂ ರಾಜಗಿರಿ ಸೊಪ್ಪಿನ (ದಂಟಿನ ಸೊಪ್ಪು) ಗಂಜಿ, |
00:26 | ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ, |
00:28 | ಮೆಂತ್ಯದ ಸೊಪ್ಪು ಮತ್ತು ಬೀನ್ಸ್ ಗಂಜಿ,
ಅರಕ (ಕೊಡೋ ಮಿಲ್ಲೆಟ್) ಹಾಗೂ ಕಡಲೆಕಾಳಿನ ಗಂಜಿ. |
00:35 | ಮೊದಲನೇ ವರ್ಷದಲ್ಲಿ, ಮಗು ತೆವಳಲು ಮತ್ತು ಚಲಿಸಲು ಆರಂಭಿಸಿದಾಗ ಬೆಳವಣಿಗೆಯು ತೀವ್ರವಾಗಿರುತ್ತದೆ. |
00:43 | ಮಗುವಿಗೆ ಶಕ್ತಿಯ ಅವಶ್ಯಕತೆ ಸಹ ಹೆಚ್ಚಾಗಿರುತ್ತದೆ. |
00:48 | 6-8 ತಿಂಗಳ ವಯಸ್ಸಿನ ಶಿಶುಗಳಿಗೆ, ಪೂರಕ ಆಹಾರಗಳಿಂದ 200 ಕ್ಯಾಲೊರಿಗಳು ಬೇಕಾಗುತ್ತವೆ. |
00:55 | ಕೊಡುತ್ತಿರುವ ಆಹಾರದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಬೇಕಾಗುತ್ತದೆ. |
00:59 | ನೆನಪಿಡಿ, ಸಾಕಷ್ಟು ಪೂರಕ ಆಹಾರದ ಜೊತೆಗೆ ಸ್ತನ್ಯಪಾನವು ಸಹ ಅತ್ಯಂತ ಮುಖ್ಯವಾಗಿದೆ. |
01:07 | ಆದ್ದರಿಂದ ಮಗುವಿಗೆ ಏಳು ತಿಂಗಳಾದಾಗ, ದಿನಕ್ಕೆ ಮೂರು ಬಾರಿ ಅರ್ಧ ಕಪ್ ಪೂರಕ ಆಹಾರವನ್ನು ಕೊಡಲು ಪ್ರಾರಂಭಿಸಬೇಕು. |
01:16 | ಅರ್ಧ ಕಪ್ ಎಂದರೆ ಸುಮಾರು 125 ಮಿಲಿಲೀಟರ್ ಅಥವಾ 8 ಚಮಚ ಆಹಾರವಾಗಿದೆ. |
01:22 | 6 ತಿಂಗಳ ಮಗುವಾಗಿದ್ದಾಗಲೇ ಪೂರಕ ಆಹಾರವನ್ನು ಪ್ರಾರಂಭಿಸಿದ್ದರಿಂದ |
01:28 | ಈಗ ಮಗು ವಿವಿಧ ಆಹಾರ ಪದಾರ್ಥಗಳಿಗೆ ಹೊಂದಿಕೊಂಡಿದೆ. |
01:33 | ಈಗ ಮಗುವಿಗೆ ಪೂರಕ ಆಹಾರಗಳನ್ನು ಪರಿಚಯಿಸಲು ಪ್ರಾರಂಭಿಸಿ. |
01:38 | ಗಮನಿಸಿ, ಹಿಸುಕಿ ಮೆತ್ತಗೆ ಮಾಡಿದ ಮತ್ತು ನುಣ್ಣಗಿರುವ ಆಹಾರವನ್ನು ಮಾತ್ರ ಕೊಡಬೇಕು. |
01:44 | ಮಗುವಿನ ಆಹಾರವು ಸ್ವಲ್ಪ ಗಟ್ಟಿಯಾಗಿದೆ, ನೀರಿನಂತೆ ತೆಳ್ಳಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. |
01:52 | ಮಗುವಿನ ಆಹಾರವನ್ನು ತಯಾರಿಸುವಾಗ ಸ್ಥಳೀಯ ಮತ್ತು ಕಾಲೋಚಿತ ಪದಾರ್ಥಗಳನ್ನು ಬಳಸಿ. |
01:59 | ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿ, ಮೊಳಕೆಯೊಡೆದ ಕಾಳುಗಳ ಪುಡಿ, ಕರಿಬೇವಿನ ಎಲೆಗಳ ಪುಡಿ, ನುಗ್ಗೆ ಎಲೆಗಳ ಪುಡಿ ಮುಂತಾದ |
02:08 | ವಿವಿಧ ಪೌಷ್ಟಿಕ ಪುಡಿಗಳನ್ನು ಸೇರಿಸಲು ಸಹ ನೆನಪಿಡಿ. |
02:11 | ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ. |
02:17 | ಮಗುವಿಗೆ ಒಂದು ವರ್ಷ ಆಗುವವರೆಗೆ ಅದರ ಆಹಾರದಲ್ಲಿ ಉಪ್ಪು ಸೇರಿಸಬೇಡಿ. |
02:21 | ಮತ್ತು, ಎರಡು ವರ್ಷವಾಗುವವರೆಗೆ ಅದರ ಆಹಾರದಲ್ಲಿ ಸಕ್ಕರೆ, ಬೆಲ್ಲವನ್ನು ಸೇರಿಸಬೇಡಿ. |
02:27 | ಮಗುವಿಗೆ ಪೂರಕ ಆಹಾರವಾಗಿ ಬಳಸಬಹುದಾದ ಕೆಲವು ಸಸ್ಯಾಹಾರಿ ಅಡುಗೆಗಳನ್ನು ಈಗ ನಾವು ನೋಡೋಣ. |
02:35 | ಮೊದಲನೆಯದಾಗಿ ಹಲಸಿನಹಣ್ಣಿನ ಬೀಜಗಳ ಗಂಜಿಯನ್ನು ತಯಾರಿಸುವುದು. |
02:39 | ಬೇಕಾಗುವ ಸಾಮಾನು:
15-20 ಹಲಸಿನಹಣ್ಣಿನ ಬೀಜಗಳು, ಒಂದು ಸಣ್ಣ ಅಥವಾ ದೊಡ್ಡದಿದ್ದರೆ ಅರ್ಧ ಬಾಳೆಹಣ್ಣು, |
02:48 | ತೆಂಗಿನ ಹಾಲು ಅಥವಾ ಎದೆ ಹಾಲು, |
02:50 | ಒಂದು ಟೀಚಮಚ ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿ. |
02:53 | ಹಲಸಿನಹಣ್ಣಿನ ಬೀಜಗಳ ಗಂಜಿ ತಯಾರಿಸಲು:
ಹಲಸಿನ ಬೀಜಗಳನ್ನು ಚೆನ್ನಾಗಿ ತೊಳೆಯಿರಿ. |
02:59 | ಈ ಬೀಜಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಇರಿಸಿ, ಬೀಜಗಳು ಮುಚ್ಚುವವರೆಗೆ ನೀರು ಸೇರಿಸಿ. |
03:06 | ಪ್ರೆಷರ್ ಕುಕ್ಕರ್ ನಲ್ಲಿ 5-6 ಸೀಟಿ ಆಗುವವರೆಗೆ ಬೇಯಿಸಿ. |
03:09 | ಈ ಬೀಜಗಳನ್ನು ಒಂದು ತಟ್ಟೆಗೆ ವರ್ಗಾಯಿಸಿ ಮತ್ತು ಇವು ತಣ್ಣಗಾಗಲು ಬಿಡಿ. |
03:16 | ನಂತರ ಅವುಗಳ ಹೊರಗಿನ ಸಿಪ್ಪೆಯನ್ನು ಸುಲಿಯಿರಿ. |
03:20 | ಆಮೇಲೆ, ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಿ ನುಣ್ಣಗೆ ಪೇಸ್ಟ್ ಮಾಡಿ. |
03:25 | ಕಳಿತ ಬಾಳೆಹಣ್ಣಿನ ಸಿಪ್ಪೆ ಸುಲಿದು ಚಮಚದಿಂದ ಅದನ್ನು ಚೆನ್ನಾಗಿ ಹಿಸುಕಿ. |
03:32 | ಈಗ ಹಿಸುಕಿದ ಬಾಳೆಹಣ್ಣು ಮತ್ತು ಹಲಸಿನ ಬೀಜಗಳ ಪ್ಯೂರಿಯನ್ನು ಮಿಶ್ರಣ ಮಾಡಿ. |
03:37 | ಇದರಲ್ಲಿ 2 ಟೇಬಲ್ ಚಮಚ ತೆಂಗಿನ ಹಾಲು ಅಥವಾ ಎದೆಹಾಲು ಸೇರಿಸಿ. |
03:42 | ಅದರಲ್ಲಿ ಎಣ್ಣೆಬೀಜಗಳು ಮತ್ತು ಬೀಜಗಳ ಪುಡಿಯನ್ನು ಸೇರಿಸಿ. |
03:45 | ಚೆನ್ನಾಗಿ ಬೆರೆಸಿ. |
03:47 | ಈ ಮಿಶ್ರಣವನ್ನು 3-4 ನಿಮಿಷಗಳ ಕಾಲ ಸಣ್ಣಉರಿಯಲ್ಲಿ ಬೇಯಿಸಿ. |
03:52 | ಹಲಸಿನಹಣ್ಣಿನ ಬೀಜಗಳ ಗಂಜಿ ಸಿದ್ಧವಾಗಿದೆ. |
03:56 | ಈ ಗಂಜಿಯಲ್ಲಿ: ಪ್ರೋಟೀನ್, |
03:59 | ಒಮೆಗಾ 3 ಕೊಬ್ಬಿನಾಮ್ಲಗಳು, |
04:02 | ಪೊಟ್ಯಾಸಿಯಮ್ ಮತ್ತು ರಂಜಕಗಳು ಸಮೃದ್ಧವಾಗಿವೆ. |
04:06 | ಎರಡನೆಯ ಪಾಕವಿಧಾನವು ಹುರುಳಿಕಾಳು ಹಾಗೂ ದಂಟಿನ ಸೊಪ್ಪಿನ ಗಂಜಿ ಆಗಿದೆ. |
04:11 | ಇದನ್ನು ತಯಾರಿಸಲು ನಮಗೆ:
2 ಟೇಬಲ್ ಚಮಚ ಹುರುಳಿಕಾಳಿನ ಪುಡಿ, 2 ಕಪ್ ತೊಳೆದ ದಂಟಿನ ಸೊಪ್ಪು (ಅಮರಾಂತ್ ಎಲೆಗಳು), |
04:19 | ¼ ಟೀಸ್ಪೂನ್ ಕರಿಬೇವಿನ ಎಲೆಗಳ ಪುಡಿ,
½ ಟೀಚಮಚ ತುಪ್ಪ ಇವುಗಳು ಬೇಕಾಗುತ್ತವೆ. |
04:24 | ವಿಧಾನ: ಮೊದಲು, ಹುರುಳಿಕಾಳನ್ನು 7 ರಿಂದ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. |
04:31 | ಆನಂತರ ಅದನ್ನು ಒಂದು ಜರಡಿಯಲ್ಲಿ ಹಾಕಿ ನೀರಿನಿಂದ ಚೆನ್ನಾಗಿ ತೊಳೆಯಿರಿ. |
04:37 | ಎಲ್ಲಾ ನೀರು ಬಸಿಯಿರಿ. ಈಗ ಶುಚಿಯಾದ ಒಂದು ಹತ್ತಿಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರುವವರೆಗೆ ಅದನ್ನು ಬದಿಗೆ ಇರಿಸಿ. |
04:47 | ಮೊಳಕೆಯೊಡೆದ ಈ ಹುರುಳಿಕಾಳನ್ನು ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ. |
04:52 | ಇದನ್ನು ಸಣ್ಣಉರಿಯಲ್ಲಿ 8-10 ನಿಮಿಷಗಳ ಕಾಲ ಹುರಿಯಿರಿ. ನಂತರ ತಣ್ಣಗಾಗಲು ಬಿಡಿ. |
04:58 | ಈಗ ಅದರ ಪುಡಿಯನ್ನು ತಯಾರಿಸಿ.
ಈ ಸಂಪೂರ್ಣ ಪ್ರಕ್ರಿಯೆಯನ್ನು ಮಾಲ್ಟಿಂಗ್ ಎನ್ನುತ್ತೇವೆ. |
05:05 | ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. |
05:10 | ಅದರಲ್ಲಿ ತೊಳೆದ ದಂಟಿನ ಸೊಪ್ಪನ್ನು ಸೇರಿಸಿ. |
05:13 | ಇದನ್ನು 4-5 ನಿಮಿಷ ಹುರಿಯಿರಿ. ಈಗ ತಣ್ಣಗಾಗಲು ಬಿಡಿ. |
05:17 | ಮಿಕ್ಸರ್ ಅಥವಾ ಕಲ್ಲಿನ ಗ್ರೈಂಡರ್ ಬಳಸಿ ಅದರ ಪ್ಯೂರಿಯನ್ನು ತಯಾರಿಸಿ. |
05:23 | ನಂತರ, ಹುರುಳಿಕಾಳಿನ ಪುಡಿಯಲ್ಲಿ 2 ಟೇಬಲ್ ಚಮಚ ನೀರು ಸೇರಿಸಿ. |
05:28 | ಗಂಟುಗಳು ಆಗದಂತೆ ಅದನ್ನು ಚೆನ್ನಾಗಿ ಬೆರೆಸಿ. |
05:32 | ಈ ತೆಳುವಾದ ಪೇಸ್ಟ್ ಅನ್ನು ಸಣ್ಣಉರಿಯಲ್ಲಿ 6-7 ನಿಮಿಷ ಬೇಯಿಸಿ. |
05:37 | ಈಗ, ಈ ಹುರುಳಿಕಾಳಿನ ಪೇಸ್ಟ್ ನಲ್ಲಿ ದಂಟಿನ ಸೊಪ್ಪಿನ ಪ್ಯೂರೀಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. |
05:43 | ಇದನ್ನು 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. |
05:48 | ಅದರಲ್ಲಿ ಕರಿಬೇವಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ. |
05:52 | ಇದನ್ನು ಒಲೆಯಿಂದ ಇಳಿಸಿ. ಈಗ ಹುರುಳಿಕಾಳು ಹಾಗೂ ದಂಟಿನ ಸೊಪ್ಪಿನ ಗಂಜಿ ಸಿದ್ಧವಾಗಿದೆ. |
05:59 | ಈ ಗಂಜಿಯು ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ಕ್ಯಾಲ್ಶಿಯಂ, |
06:06 | ರಂಜಕ, ಕಬ್ಬಿಣ ಹಾಗೂ ಪೊಟ್ಯಾಸಿಯಮ್ ಗಳನ್ನು ಹೇರಳವಾಗಿ ಹೊಂದಿದೆ. |
06:10 | ಗಮನಿಸಿ, ಈ ಗಂಜಿಗಳನ್ನು ತಯಾರಿಸಲು ನೀವು ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಬೀನ್ಸ್ ಮತ್ತು ಸೊಪ್ಪುಗಳನ್ನು ಬಳಸಬಹುದು. |
06:20 | ಯಾವಾಗಲೂ ಬೀನ್ಸ್ ಅನ್ನು ಜೋಳ, ರಾಗಿ, ಅರಕ (ಕೊಡೋ ಮಿಲ್ಲೆಟ್) ಇತ್ಯಾದಿ ಧಾನ್ಯಗಳೊಂದಿಗೆ ಬಳಸಲು ಪ್ರಯತ್ನಿಸಿ. |
06:31 | ಇದರಿಂದ ಮಗುವಿಗೆ ಸಂಪೂರ್ಣ ಪ್ರೋಟೀನ್ ಸಿಗುತ್ತದೆ. |
06:35 | ನೀವು ಈ ಧಾನ್ಯಗಳ ಮಾಲ್ಟ್ ಗಳನ್ನು (ಪುಡಿ) ಮಗುವಿನ ಆಹಾರದಲ್ಲಿ ಸೇರಿಸಬಹುದು ಅಥವಾ |
06:42 | ಬೇಯಿಸಿದ ಮೊಳಕೆಕಾಳುಗಳನ್ನು ನುಣ್ಣಗೆ ಪೇಸ್ಟ್ ಮಾಡಿ ಈ ಗಂಜಿಗಳಲ್ಲಿ ಸೇರಿಸಬಹುದು. |
06:48 | ಮೂರನೆಯ ಪಾಕವಿಧಾನವು ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ ಆಗಿದೆ. |
06:53 | ಇದಕ್ಕಾಗಿ ನಿಮಗೆ:
2 ಟೇಬಲ್-ಚಮಚ ಮಾಲ್ಟೆಡ್ ರಾಜಗಿರಿ (ಅಮರಾಂತ್) ಪುಡಿ, |
06:59 | 2 ಟೇಬಲ್-ಚಮಚ ಮೊಳಕೆಯೊಡೆದ ಅಲಸಂದೆ ಕಾಳುಗಳ ಪ್ಯೂರೆ ಮತ್ತು
¼ ಟೀಚಮಚ ನುಗ್ಗೆ ಎಲೆಗಳ ಪುಡಿ ಇವುಗಳು ಬೇಕು. |
07:06 | ವಿಧಾನ: ಮಾಲ್ಟೆಡ್ ರಾಜಗಿರಿ ಪುಡಿಯನ್ನು ತಯಾರಿಸಲು, ಇದೇ ಟ್ಯುಟೋರಿಯಲ್ ನ ಹಿಂದಿನ ಪಾಕವಿಧಾನದಲ್ಲಿ ವಿವರಿಸಿದ ಸೂಚನೆಗಳನ್ನು ಅನುಸರಿಸಿ. |
07:17 | ಮೊಳಕೆಯೊಡೆದ ಅಲಸಂದೆ ಕಾಳುಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ತೆಗೆದುಕೊಳ್ಳಿ.
ಪ್ರೆಷರ್ ಕುಕ್ಕರ್ ನಲ್ಲಿ ಇದನ್ನು 4 ರಿಂದ 5 ಸೀಟಿಗಳವರೆಗೆ ಬೇಯಿಸಿ. |
07:26 | ಈಗ ಬೇಯಿಸಿದ ಈ ಅಲಸಂದೆ ಕಾಳುಗಳ ಪ್ಯೂರೆಯನ್ನು ತಯಾರಿಸಿ. |
07:30 | ನಂತರ, ಒಂದು ಬಟ್ಟಲಿನಲ್ಲಿ ಎರಡು ಚಮಚ ಮಾಲ್ಟೆಡ್ ರಾಜಗಿರಿ ಪುಡಿಯನ್ನು ತೆಗೆದುಕೊಳ್ಳಿ.
ಅದರಲ್ಲಿ ಸಾಕಷ್ಟು ನೀರು ಸೇರಿಸಿ. |
07:38 | ಗಂಟುಗಳಾಗದಂತೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. |
07:42 | ಈ ತೆಳುವಾದ ಪೇಸ್ಟ್ ಅನ್ನು ಸಣ್ಣಉರಿಯಲ್ಲಿ 2-3 ನಿಮಿಷ ಬೇಯಿಸಿ.
ಅದರಲ್ಲಿ ಅಲಸಂದೆ ಕಾಳುಗಳ ಪ್ಯೂರೆಯನ್ನು ಸೇರಿಸಿ. |
07:52 | ಇದನ್ನು ಚೆನ್ನಾಗಿ ಬೆರೆಸಿ, 4-5 ನಿಮಿಷ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. |
07:58 | ಕೊನೆಗೆ, ಈ ಬೇಯಿಸಿದ ಗಂಜಿಯಲ್ಲಿ ¼ ಟೀಸ್ಪೂನ್ ನುಗ್ಗೆಎಲೆಗಳ ಪುಡಿಯನ್ನು ಸೇರಿಸಿ.
ದಂಟಿನ ಸೊಪ್ಪು ಹಾಗೂ ಅಲಸಂದೆ ಕಾಳಿನ ಗಂಜಿ ಸಿದ್ಧವಾಗಿದೆ. |
08:09 | ಈ ಗಂಜಿಯು:
ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, |
08:17 | ರಂಜಕ, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್ |
08:20 | ಹಾಗೂ ಕ್ಯಾಲ್ಶಿಯಂ ಗಳನ್ನು ಹೇರಳವಾಗಿ ಹೊಂದಿದೆ. |
08:24 | ಈ ಗಂಜಿಗಳನ್ನು ತಯಾರಿಸಲು, ನೀವು ರಾಗಿ, ಜೋಳ, ಮಡಿಕೆಕಾಳು, ಕಡಲೆ ಇತ್ಯಾದಿ |
08:32 | ಮೊಳಕೆಯೊಡೆದ ಕಾಳುಗಳನ್ನು ಒಟ್ಟಿಗೆ ಬಳಸಬಹುದು. |
08:37 | ನಾಲ್ಕನೆಯದು ಮೆಂತ್ಯದ ಸೊಪ್ಪು ಮತ್ತು ಬೀನ್ಸ್ ಗಂಜಿ ಆಗಿದೆ. |
08:41 | ಅಗತ್ಯವಿರುವ ಪದಾರ್ಥಗಳು:
2 ಕಪ್ ತೊಳೆದು ಆರಿಸಿದ ಮೆಂತ್ಯದ ಸೊಪ್ಪು, 1 ಟೀಸ್ಪೂನ್ ತುಪ್ಪ, |
08:49 | 2 ಟೇಬಲ್-ಚಮಚ ಹಸಿ ಕೊಬ್ಬರಿ ಪೇಸ್ಟ್, |
08:52 | 2 ಟೇಬಲ್-ಚಮಚ ಮೊಳಕೆಯೊಡೆದ ಬೀನ್ಸ್ ಪುಡಿ, |
08:56 | ಬೀನ್ಸ್ ಪುಡಿಯನ್ನು ತಯಾರಿಸಲು, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾದ ಸೂಚನೆಗಳನ್ನು ಅನುಸರಿಸಿ. |
09:04 | ವಿಧಾನ: ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿಮಾಡಿ. |
09:09 | ಮೆಂತ್ಯದ ಸೊಪ್ಪನ್ನು ಸೇರಿಸಿ 2-3 ನಿಮಿಷ ಬೇಯಿಸಿ. |
09:13 | ಅದನ್ನು ಶುಚಿಯಾದ ಒಂದು ತಟ್ಟೆಗೆ ವರ್ಗಾಯಿಸಿ, ತಣ್ಣಗಾಗಲು ಸ್ವಲ್ಪ ಸಮಯ ಬಿಡಿ. |
09:18 | ನಂತರ, ಗ್ರೈಂಡರ್ ಅಥವಾ ಮಿಕ್ಸರ್ ಬಳಸಿ ಅದರ ಪ್ಯೂರೆಯನ್ನು ತಯಾರಿಸಿ. |
09:23 | ಈ ಪ್ಯೂರೀಯನ್ನು ಮಂದ ಉರಿಯಲ್ಲಿ ಒಂದು ನಿಮಿಷ ಬೇಯಿಸಿ.
ಇದರಲ್ಲಿ 2 ಟೇಬಲ್-ಚಮಚ ಬೀನ್ಸ್ ಪುಡಿಯನ್ನು ಸೇರಿಸಿ. |
09:31 | ಗಂಟುಗಳಾಗದಂತೆ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. |
09:35 | ಅಗತ್ಯವಿದ್ದರೆ ಅದರಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ. |
09:40 | ಈಗ ಅದರಲ್ಲಿ 2 ಟೇಬಲ್-ಚಮಚ ತೆಂಗಿನಕಾಯಿ ಪೇಸ್ಟ್ ಅನ್ನು ಸೇರಿಸಿ. |
09:44 | ತೆಂಗಿನಕಾಯಿ ಪೇಸ್ಟ್ ತಯಾರಿಸಲು, ಕಾಯಿತುರಿಯನ್ನು ನುಣ್ಣಗೆ ರುಬ್ಬಿ. |
09:51 | ನಂತರ ಈ ಮಿಶ್ರಣವನ್ನು 7-8 ನಿಮಿಷಗಳ ಕಾಲ ನಿರಂತರವಾಗಿ ಕಲಕುತ್ತ ಸಣ್ಣ ಉರಿಯಲ್ಲಿ ಬೇಯಿಸಿ. |
09:58 | ಈಗ ಮೆಂತ್ಯದ ಸೊಪ್ಪು ಹಾಗೂ ಬೀನ್ಸ್ ಗಂಜಿಯು ಸಿದ್ಧವಾಗಿದೆ. |
10:03 | ಈ ಮೆಂತ್ಯದ ಸೊಪ್ಪು ಹಾಗೂ ಬೀನ್ಸ್ ಗಂಜಿಯು:
ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, |
10:10 | ಫೋಲೇಟ್, ಕಬ್ಬಿಣ, |
10:12 | ಕ್ಯಾಲ್ಶಿಯಂ, ರಂಜಕ, |
10:14 | ಸತುವು ಹಾಗೂ ಪೊಟ್ಯಾಸಿಯಮ್ ಗಳಲ್ಲಿ ಸಮೃದ್ಧವಾಗಿದೆ. |
10:16 | ಈ ಪಾಕವಿಧಾನವನ್ನು ತಯಾರಿಸುವಾಗ, ಮೊದಲೇ ವಿವರಿಸಿದಂತೆ ವಿವಿಧ ಧಾನ್ಯಗಳು ಮತ್ತು ಮಿಲ್ಲೆಟ್ ಗಳನ್ನು ಸೇರಿಸಲು ಮರೆಯಬೇಡಿ. |
10:27 | ಐದನೇ ಪಾಕವಿಧಾನ ಅರಕ (ಕೊಡೋ ಮಿಲ್ಲೆಟ್) ಹಾಗೂ ಕಡಲೆಕಾಳಿನ ಪ್ಯೂರೆ ಆಗಿದೆ. |
10:32 | ಬೇಕಾಗುವ ಪದಾರ್ಥಗಳು:
2 ಟೇಬಲ್-ಚಮಚ ಅರಕ (ಕೊಡೋ ಮಿಲ್ಲೆಟ್), |
10:35 | 2 ಟೇಬಲ್-ಚಮಚ ಮೊಳಕೆಯೊಡೆದ ಕಡಲೆಕಾಳು, |
10:38 | 3 ಟೇಬಲ್-ಚಮಚ ತೆಂಗಿನ ಹಾಲು ಮತ್ತು 1 ಟೀ ಚಮಚ ತುಪ್ಪ. |
10:43 | ವಿಧಾನ: ಒಂದು ಸ್ಟೀಲ್ ಪಾತ್ರೆಯಲ್ಲಿ 2 ಚಮಚ ಅರಕ ತೆಗೆದುಕೊಳ್ಳಿ. |
10:48 | ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅದರಲ್ಲಿ 3-4 ಟೇಬಲ್-ಚಮಚ ನೀರನ್ನು ಸೇರಿಸಿ. |
10:55 | ಪ್ರೆಷರ್ ಕುಕ್ಕರ್ ನಲ್ಲಿ 3-4 ಸೀಟಿ ಆಗುವವರೆಗೆ ಬೇಯಿಸಿ. |
10:58 | ಮೊಳಕೆಯೊಡೆದ ಕಡಲೆಕಾಳನ್ನು ಪ್ರೆಷರ್ ಕುಕ್ಕರ್ ನಲ್ಲಿ 4-5 ಸೀಟಿ ಆಗುವವರೆಗೆ ಬೇಯಿಸಿ. |
11:04 | ನಂತರ ಅದರ ಪ್ಯೂರೆಯನ್ನು ತಯಾರಿಸಿ. |
11:07 | ಸ್ಟೀಲ್ ಪಾತ್ರೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. |
11:11 | ಅದರಲ್ಲಿ ಬೇಯಿಸಿದ ಅರಕ, ಕಡಲೆಕಾಳಿನ ಪ್ಯೂರೆ ಮತ್ತು ತೆಂಗಿನ ಹಾಲು ಸೇರಿಸಿ.
ಇದನ್ನು ಚೆನ್ನಾಗಿ ಬೆರೆಸಿ. |
11:18 | 4-5 ನಿಮಿಷ ಬೇಯಿಸಿ ಇದನ್ನು ತಣ್ಣಗಾಗಲು ಬಿಡಿ.
ಈಗ, ಅರಕ ಹಾಗೂ ಕಡಲೆಕಾಳಿನ ಪ್ಯೂರೆ ಸಿದ್ಧವಾಗಿದೆ. |
11:27 | ಈ ಪ್ಯೂರೆ:
ಪ್ರೋಟೀನ್, ಕಬ್ಬಿಣ, |
11:30 | ರಂಜಕ, ಮೆಗ್ನೀಸಿಯಮ್, |
11:33 | ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಗಳಲ್ಲಿ ಸಮೃದ್ಧವಾಗಿದೆ. |
11:36 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |