Moodle-Learning-Management-System/C2/Plugins-in-Moodle/Kannada
From Script | Spoken-Tutorial
Revision as of 20:34, 5 November 2019 by Anjana310312 (Talk | contribs)
Time | Narration |
00:01 | Installing plugins in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು : Plugins ನ ಕುರಿತು ಮತ್ತು ಪ್ಲಗ್ ಇನ್ ಅನ್ನು ಮೂಡಲ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದು ಹೇಗೆ ಎನ್ನುವುದರ ಕುರಿತು ಕಲಿಯುವೆವು. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:23 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:31 | Moodle 3.3 |
00:33 | ಮತ್ತು Firefox ವೆಬ್-ಬ್ರೌಸರ್ ಮತ್ತು ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ. |
00:40 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:44 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ |
00:52 | ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು |
00:59 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:06 | plugins(ಪ್ಲಗ್ ಇನ್ಸ್) ಎಂದರೇನು?
Plugins ಗಳು ಇರುವ ಸಾಫ್ಟ್ವೇರ್ ಗೆ ವೈಶಿಷ್ಟ್ಯಗಳನ್ನು ಸೇರಿಸುವ ಆಡ್ ಆನ್ ಟೂಲ್ ಗಳಾಗಿವೆ. |
01:15 | ಮೂಡಲ್ ನಲ್ಲಿ ಟೀಚರ್ ಮತ್ತು ಸೈಟ್ ಅಡ್ಮಿನಿಸ್ಟ್ರೇಟರ್ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ಸ್ ಗಳಿವೆ. |
01:22 | ಇವುಗಳು plugins ಡೈರಕ್ಟರಿಯಲ್ಲಿ ಲಭ್ಯವಿದೆ. |
01:26 | ಬ್ರೌಸರ್ ಅನ್ನು ತೆರೆದು, https://moodle.org/plugins ಎಂದು ಟೈಪ್ ಮಾಡಿ. |
01:36 | ಈ ಪೇಜ್ ನಲ್ಲಿ Purpose ಮತ್ತು Plugin Type ಗಳನ್ನು ಆಧರಿಸಿ ಫಿಲ್ಟರ್ ಗಳಿವೆ. |
01:41 | ಇಲ್ಲಿ ಕಸ್ಟಮ್ ಸರ್ಚ್ ಗಾಗಿ ಒಂದು search ಬಾಕ್ಸ್ ಇದೆ. |
01:46 | ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅದರ ಕೆಳಗಿರುವ ಅಕ್ಷರಗಳು ಅವು ಏನೆಂದು ವಿವರಿಸುತ್ತವೆ. |
01:53 | ಈ ಟ್ಯುಟೋರಿಯಲ್ ನಲ್ಲಿ ನಾವು ಅಟೆಂಡೆನ್ಸ್ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು. |
01:59 | ಸರ್ಚ್ ಬಾಕ್ಸ್ ನಲ್ಲಿ attendance ಎಂದು ಟೈಪ್ ಮಾಡಿ , Search ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:05 | ಇಲ್ಲಿ ನಾವು ಅವುಗಳ ಟೈಟಲ್ ನಲ್ಲಾಗಲೀ ಅಥವಾ ವಿವರಣೆಯಲ್ಲಾಗಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗಿನ್ ಗಳನ್ನು ಕಾಣುವೆವು. |
02:13 | Attendance plugin ನ ಮೇಲೆ ಕ್ಲಿಕ್ ಮಾಡಿ.
ವಿವರಣೆಯಲ್ಲಿ “A plugin that allows an attendance log to be kept” ಎಂದು ಇರುವುದನ್ನು ಓದಬಹುದು. |
02:22 | ನೀವು ನಾನು ಹೇಳಿದ ಪ್ಲಗ್ ಇನ್ ಅನ್ನೇ ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು ಹೊಸ ಪೇಜ್ ನಲ್ಲಿರುವ ಟೈಟಲ್ ಅನ್ನು ನೋಡಿ. |
02:30 | ಅದರ ಟೈಟಲ್ Activities ಕೋಲನ್ Attendance ಎಂದಿರಬೇಕು. |
02:36 | ಈ ಪ್ಲಗ್ ಇನ್ ಟೀಚರ್ ಗೆ ಮೂಡಲ್ ನಲ್ಲಿ ಅಟೆಂಡೆನ್ಸ್ ಲಾಗ್ ಅನ್ನು ಇಡಲು ಅನುಮತಿಸುತ್ತದೆ. |
02:42 | ಹೊಸ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳಿ. |
02:50 | Versions ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅದು ಬೆಂಬಲಿಸುವ ಆವೃತ್ತಿ ಯನ್ನು ಪರೀಕ್ಷಿಸಬಹುದು. |
02:56 | ಈಗ ಅದು Moodle 3.3 ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ. |
03:03 | Description ಲಿಂಕ್ ಗೆ ಹಿಂದಿರುಗಿ. |
03:06 | ಪ್ಲಗ್ ಇನ್ ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ಅರ್ಥಮಾಡಿಕೊಳ್ಳಲು ಈ ವಿವರವನ್ನು ಓದಿ. |
03:12 | ಇದು ಪ್ಲಗ್ ಇನ್ ಗಳನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಉಲ್ಲೇಖಿಸುತ್ತದೆ. |
03:20 | ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಿರುವುದನ್ನು ಮತ್ತು ಇದು ಅನೇಕ ಫ್ಯಾನ್ಸ್ (ಅಭಿಮಾನಿ) ಗಳನ್ನು ಹೊಂದಿರುವುದನ್ನು ಇಲ್ಲಿ ನೋಡಬಹುದು. |
03:27 | ಇದು ಪ್ಲಗ್ ಇನ್ ಗಳು ಉಪಯುಕ್ತ ಮತ್ತು ಬಳಸಲು ಸುಲಭ ಎಂಬುದನ್ನು ಪ್ರಮಾಣೀಕರಿಸುವುದು. |
03:33 | ನೀವು ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೋಡಬಹುದು. |
03:40 | ನೀವು ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು ಒಪ್ಪಿದರೆ, Versions ಲಿಂಕ್ ಗೆ ಹಿಂದಿರುಗಿ. |
03:46 | Download ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:49 | ನಿಮ್ಮ ಲೋಕಲ್ ಸಿಸ್ಟಮ್ ನಲ್ಲಿ ಫೈಲ್ ಅನ್ನು ಸೇವ್ ಮಾಡಿ. ನಾನು ಇದನ್ನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಸೇವ್ ಮಾಡಿದ್ದೇನೆ. |
03:55 | ಹೊಸ ಟ್ಯಾಬ್ ಅನ್ನು ತೆರೆದು, Moodle ವೆಬ್ಸೈಟ್ ನಲ್ಲಿ site administrator ಆಗಿ ಲಾಗಿನ್ ಆಗಿ. |
04:02 | XAMPP service ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
04:06 | ಈಗ ನಾವು ಅಡ್ಮಿನ್ ಡ್ಯಾಶ್ ಬೋರ್ಡ್ ನಲ್ಲಿದ್ದೇವೆ. |
04:09 | ಎಡಭಾಗದಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ. |
04:13 | ನಂತರ Plugins ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು Install plugins ಲಿಂಕ್ ಅನ್ನು ಕ್ಲಿಕ್ ಮಾಡಿ. |
04:20 | ಪ್ಲಗ್ ಇನ್ ಗಳನ್ನು ಇನ್ಸ್ಟಾಲ್ ಮಾಡಲು ಎರಡು ವಿಧಾನಗಳಿವೆ: -Moodle plugins directory ಮೂಲಕ ಮತ್ತು ಇನ್ನೊಂದು zip ಅಪ್ಲೋಡ್ ಮೂಲಕ ಮಾಡಬಹುದು. |
04:29 | ನಾವು ಎರಡನೆಯ ವಿಧಾನವನ್ನು ಅನುಸರಿಸುವೆವು. |
04:33 | ಮೊದಲನೆ ವಿಧಾನಕ್ಕೆ moodle.org ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು.ಹಾಗಾಗಿ ನಾನು ಅದನ್ನು ಬಿಡುವೆನು. |
04:41 | Zip package ನ ಮುಂದೆ ಇರುವ Choose a file ಬಟನ್ ಅನ್ನು ಕ್ಲಿಕ್ ಮಾಡಿ. |
04:46 | ಅದನ್ನು ಆಯ್ಕೆ ಮಾಡಿರದೇ ಇದ್ದಲ್ಲಿ, ಎಡಭಾಗದಲ್ಲಿರುವ Upload a file ಲಿಂಕ್ ಅನ್ನು ಕ್ಲಿಕ್ ಮಾಡಿ. |
04:52 | Browse ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮತ್ತು ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗವನ್ನು ಬ್ರೌಸ್ ಮಾಡಿ. |
04:59 | ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆ ಮಾಡಿ. |
05:03 | ನಂತರ ಈ ವಿಂಡೋ ದ ಕೆಳಭಾಗದಲ್ಲಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ. |
05:08 | ಈಗ ಕೆಳಗಡೆ ಇರುವ Install plugin from the ZIP file ಬಟನ್ ಅನ್ನು ಕ್ಲಿಕ್ ಮಾಡಿ. |
05:14 | ಈ ಪೇಜ್ ನಲ್ಲಿ ನಿಮಗೆ ಎರರ್(ದೋಷ) ಎದುರಾಗಬಹುದು. |
05:18 | ಎರರ್ ಮೆಸೇಜ್ Validating mod_attendance ... Error ಎಂದು ಹೇಳುತ್ತದೆ. |
05:24 | Cancel ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:27 | ಇದು ಈ ಡೈರೆಕ್ಟರಿ ಗೆ write permission ಕೊಡಬೇಕೆಂದು ಸೂಚಿಸುತ್ತದೆ. |
05:33 | ಹಾಗಾಗಿ Control + Alt + T ಕೀಲಿಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ. |
05:39 | sudo space chmod space 777 space slash opt slash lampp slash htdocs slash moodle slash mod slash ಎಂದು ಟೈಪ್ ಮಾಡಿ. |
05:56 | ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿ. |
06:02 | ಈಗ ಬ್ರೌಸರ್ ಗೆ ಹಿಂದಿರುಗಿ ಮತ್ತು ಆ ಕ್ರಿಯೆಯನ್ನು ಪುನರಾವರ್ತಿಸಿ. |
06:09 | ಈ ಬಾರಿ ನಾವು ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂದು ಸಂದೇಶವನ್ನು ಕೊಡುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ. |
06:17 | ಗಮನಿಸಿ. ಈ ಕ್ರಿಯೆಯು ನೀವು ಎರರ್ ಅನ್ನು ಪಡೆದರೆ ಮಾತ್ರ ಮಾಡಬೇಕಾದ ಹೆಚ್ಚುವರಿ ಹಂತವಾಗಿದೆ. |
06:25 | ಈಗ, ಮೂಡಲ್ ನ ಈ ಆವೃತ್ತಿಯಲ್ಲಿ ಪ್ಲಗ್ ಇನ್ ಡೌನ್ಲೋಡ್ ಆಗಿದೆ ಮತ್ತು ವ್ಯಾಲಿಡೇಟ್ ಮಾಡಲಾಗಿದೆ. |
06:31 | ನಂತರ, ನಮಗೆ Plugins check ಎಂಬ ಹೆಸರಿನ ಪೇಜ್ ಸಿಗುವುದು. |
06:36 | ಇಲ್ಲಿ ಹಸಿರು ಬಣ್ಣದಲ್ಲಿರುವ , To be installed ಎಂದು ತೋರಿಸುವ ಸ್ಟೇಟಸ್ ಅನ್ನು ಗಮನಿಸಿ. |
06:43 | Upgrade Moodle database now ಬಟನ್ ಅನ್ನು ಕ್ಲಿಕ್ ಮಾಡಿ. |
06:47 | ಈ ಹಂತ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಮಾಡುವುದಾಗಲೀ , ಕ್ಲೋಸ್ ಮಾಡುವುದಾಗಲಿ ಬೇಡ. |
06:53 | ನಿಮಗೆ ಯಶಸ್ವಿಯಾದ ಸಂದೇಶ ಕಾಣಿಸಿದಾಗ, Continue ಬಟನ್ ಅನ್ನು ಕ್ಲಿಕ್ ಮಾಡಿ. |
06:58 | ಈಗ ನಾವು New settings ಪೇಜ್ ನಲ್ಲಿದ್ದೇವೆ. |
07:02 | ಈಗ ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಗಮನವಿಟ್ಟು ನೋಡಿ. ನಾನು ಏನನ್ನೂ ಬದಲಿಸಲು ಇಚ್ಛಿಸುವುದಿಲ್ಲ. |
07:10 | ಪರೀಕ್ಷಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ Save Changes ಬಟನ್ ಅನ್ನು ಕ್ಲಿಕ್ ಮಾಡಿ. |
07:16 | ಇಲ್ಲಿ ನೀವು ಕೆಲವು ಎಚ್ಚರಿಕೆ ಸಂದೇಶಗಳನ್ನು ನೋಡುವಿರಿ ಮತ್ತು ಅವನ್ನು ನೀವು ಇಲ್ಲಿ ನಿರ್ಲಕ್ಷಿಸಬಹುದು. |
07:21 | ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ. |
07:29 | ನಂತರ Plugins ಟ್ಯಾಬ್ ಅನ್ನು ಕ್ಲಿಕ್ ಮಾಡಿ, Plugins overview ಅನ್ನು ಕ್ಲಿಕ್ ಮಾಡಿ. |
07:36 | ಇದು ಪ್ಲಗ್ ಇನ್ ಗಳ ಪಟ್ಟಿಯನ್ನು ತೋರಿಸುವುದು. |
07:40 | ಇದು ಡಿಫಾಲ್ಟ್ ಆಗಿ ಇನ್ಸ್ಟಾಲ್ ಆಗಿರುವ ಮತ್ತು ನೀವು ಇನ್ಸ್ಟಾಲ್ ಮಾಡಿದ ಪ್ಲಗ್ ಇನ್ ಗಳನ್ನು ಹೊಂದಿರುತ್ತದೆ. |
07:46 | ನನ್ನ ಸೈಟ್ ನಲ್ಲಿ ಇದು ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತಿದೆ. |
07:51 | ಹೆಚ್ಚುವರಿಯಾಗಿ ಇನ್ಸ್ಟಾಲ್ ಆಗಿರುವ ಪ್ಲಗ್ ಇನ್ ಗಳನ್ನು ನೋದಲು, ಟೇಬಲ್ ನ ಮೇಲಿರುವ Additional plugins ಲಿಂಕ್ ಅನ್ನು ಕ್ಲಿಕ್ ಮಾಡಿ. |
07:59 | ಇಲ್ಲಿ ಈ ಪೇಜ್ ನಿಂದ Settings ಹಾಗು ಪ್ಲಗ್ ಇನ್ uninstall ಮಾಡಲು ಲಿಂಕ್ ಗಳಿವೆ. |
08:05 | ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ಅವರ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು. |
08:11 | ಎಡ ಪ್ಯಾನಲ್ ನಲ್ಲಿರುವ Site administration ಇನ್ನೊಮ್ಮೆ ಕ್ಲಿಕ್ ಮಾಡಿ. |
08:16 | ನಂತರ Courses ಮತ್ತು Manage Courses and categories ಗಳನ್ನು ಕ್ಲಿಕ್ ಮಾಡಿ. |
08:21 | ಎಡಗಡೆಯಿರುವ Course category ಯಲ್ಲಿ 1st year Maths ಅನ್ನು ಕ್ಲಿಕ್ ಮಾಡಿ. |
08:26 | ಬಲಗಡೆಯಿರುವ Calculus course ಅನ್ನು ಕ್ಲಿಕ್ ಮಾಡಿ. |
08:30 | Calculus course ನ ವಿವರದ ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಕ್ಯಾಲ್ಕ್ಯುಲಸ್ ಕೋರ್ಸ್ ಅನ್ನು ನೋಡಲು, View ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
08:40 | ಮೇಲಿನ ಬಲಗಡೆಯಿರುವ gear icon ಅನ್ನು ಕ್ಲಿಕ್ ಮಾಡಿ ನಂತರ Turn editing on ನ ಮೇಲೆ ಕ್ಲಿಕ್ ಮಾಡಿ. |
08:47 | ಟಾಪಿಕ್ಸ್ ಗು ಮೊದಲಿರುವ, ಕೆಳಗಿನ ಬಲಭಾಗದಲ್ಲಿರುವ Add an activity or resource ನ ಮೇಲೆ ಕ್ಲಿಕ್ ಮಾಡಿ. |
08:54 | ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, Attendance activity ಅನ್ನು ಕ್ಲಿಕ್ ಮಾಡಿ. |
09:00 | name ಮತ್ತು description ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ. |
09:04 | Grade ವಿಭಾಗವನ್ನು ವಿಸ್ತರಿಸಿ. |
09:07 | ಈ ಡ್ರಾಪ್-ಡೌನ್ ಅಟೆಂಡೆನ್ಸ್ ಗೆ ಬಳಸುವ ಗ್ರೇಡಿಂಗ್ ವಿಧಾನವನ್ನು ನಿರ್ಧರಿಸುವುದು. |
09:12 | ಅಟೆಂಡೆನ್ಸ್ ನ ಕೊಡುಗೆಯನ್ನು ಕೋರ್ಸ್ ಗ್ರೇಡ್ ಗೆ ಸೇರಿಸುವುದಾದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ.
ಡಿಫಾಲ್ಟ್ 100 ಆಗಿದೆ. |
09:21 | ನಾನು Grade ಅನ್ನು None ಎಂದು ಆಯ್ಕೆ ಮಾಡುವೆನು. |
09:24 | ಉಳಿದ ಆಯ್ಕೆಗಳು ಡಿಫಾಲ್ಟ್ ಆಗಿರಲಿ. |
09:27 | ಕೆಳಕ್ಕೆ ಸ್ಕ್ರೋಲ್ ಮಾಡಿ Save and display ಬಟನ್ ಅನ್ನು ಕ್ಲಿಕ್ ಮಾಡಿ. |
09:31 | ನಾವು ಈಗ ಹೊಸ ಪೇಜ್ ನಲ್ಲಿರುವೆವು. |
09:34 | ಇಲ್ಲಿ Status set ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
09:38 | ಅಟೆಂಡೆನ್ಸ್ ಗೆ
Present , Late , Excused , Absent ಎಂಬ ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ. |
09:47 | ನಿಮ್ಮ ಅವಶ್ಯಕತೆಗೆ ತಕ್ಕಂತೆ, ನೀವು ಇವುಗಳನ್ನು ಡಿಲೀಟ್ ಮಾಡಬಹುದು ಅಥವಾ ಹೆಚ್ಚಿನದನ್ನು ಸೇರಿಸಬಹುದು. |
09:53 | ನೀವು ಬೇರೆ ಯಾವುದಾದರು ಹೆಸರಿನಿಂದ ಕರೆಯುವುದಾದರೆ ಇದನ್ನು ಮಾರ್ಪಡಿಸಬಹುದು. |
09:59 | Excused ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು ಏಕೆಂದರೆ ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ. |
10:07 | ದೃಢೀಕರಣ ಸಂದೇಶ ಬಾಕ್ಸ್ ಕಾಣಿಸುವುದು.
Continue ಬಟನ್ ಅನ್ನು ಕ್ಲಿಕ್ ಮಾಡಿ. |
10:13 | ಈಗ Add session ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
10:16 | ನೀವು ಸೇರಿಸಬೇಕಾಗಿರುವ ಮೊದಲ ಸೆಶನ್(ಅವಧಿ) ನ ದಿನಾಂಕವನ್ನು ಆಯ್ಕೆ ಮಾಡಿ.
ನಾನು ಇದನ್ನು 4 ಜೂನ್ 2019 ಎಂದು ಸೆಟ್ ಮಾಡುವೆನು. |
10:24 | ಅವಧಿ ಪ್ರಾರಂಭವಾಗುವ ಮತ್ತು ಮುಗಿಯುವ ಸಮಯವನ್ನು ಆಯ್ಕೆ ಮಾಡಿ. |
10:27 | ಗಮನಿಸಿ: ಟೈಮ್ ಫೀಲ್ಡ್ 24-ಗಂಟೆಯ ಗಡಿಯಾರವನ್ನು ಹೊಂದಿದೆ.
ಹಾಗಾಗಿ 3:15pm ರಿಂದ 4:05pm ವರೆಗಿನ ತರಗತಿ 15:15 ರಿಂದ 16:05 ರವರೆಗೆ ಎಂದಾಗುವುದು. |
10:43 | ಈ ಅವಧಿಯ ಕುರಿತು ಸಣ್ಣ Description ಅನ್ನು ಟೈಪ್ ಮಾಡಿ. |
10:46 | ಡಿಸ್ಕ್ರಿಪ್ಷನ್ ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಸ್ಕ್ರಿಪ್ಷನ್ ಡಿಫಾಲ್ಟ್ ಆಗಿ “Regular class session” ಆಗಿರುವುದು. |
10:54 | Multiple sessions ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
10:59 | ನಿಮ್ಮ ತರಗತಿಯು ನಿರ್ದಿಷ್ಠ ಅವಧಿಗೆ ನಿಗದಿಯಾಗಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಅವಧಿ(ಸೆಷನ್ ) ಗಳನ್ನು ಕ್ರಿಯೇಟ್ ಮಾಡಬಹುದು. |
11:06 | Repeat the session above as follows ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
11:11 | ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನದಂದು ನಿಗದಿಯಾಗಿದ್ದರೆ, ವಾರದ ದಿನಗಳನ್ನು ಆಯ್ಕೆ ಮಾಡಿ.
ನಾನು ನನ್ನ ತರಗತಿಗೆ Monday ಯನ್ನು ಆಯ್ಕೆ ಮಾಡುವೆನು. |
11:20 | ಮುಂದಿನ ಆಪ್ಷನ್ Repeat every ಡ್ರಾಪ್-ಡೌನ್ ಆಗಿದೆ.
ತರಗತಿಯು ಪ್ರತಿವಾರ ನಿಗದಿಯಾಗಿದ್ದರೆ 1ಅನ್ನು ಆಯ್ಕೆ ಮಾಡಿ. |
11:28 | ತರಗತಿಯು ಮೊದಲ ಅವಧಿ ಆದ ಮೇಲೆ ಎರಡು ವಾರಕ್ಕೆ ನಿಗದಿಯಾಗಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆಯೆ ಮುಂದಿನದು ಆಗಿರುವುದು. |
11:35 | ನಾನು ಇದನ್ನು 1 ಎಂದೇ ಇಡುವೆನು. |
11:38 | ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15pm ನಿಂದ 50 ನಿಮಿಷಗಳ ಕಾಲ ಭೇಟಿಯಾಗುವುದು ಎಂದಾಗಿದೆ. |
11:45 | Repeat until ಇದು ಕೊನೆಯ ಅವಧಿಯ ದಿನಾಂಕವಾಗಿದೆ. |
11:49 | ನಾನು ಇದನ್ನು 30th March 2020. ಎಂದು ನಮೂದಿಸುವೆನು. |
11:54 | ನಂತರ, Student recording ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ. |
12:00 | ವಿದ್ಯಾರ್ಥಿಗಳು ಅವರ ಅಟೆಂಡೆನ್ಸ್ ಅನ್ನು ಅವರೆ ದಾಖಲಿಸಲು ಬಯಸುವುದಾದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ. |
12:07 | ನಾನು ಈ ವಿಭಾಗವನ್ನು ಬಿಟ್ಟುಬಿಡುವೆನು. |
12:09 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ. |
12:15 | 43 sessions were successfully generated. ಎಂಬ ದೃಢೀಕರಣ ಸಂದೇಶದ(ಕನ್ಫರ್ಮೇಶನ್ ಮೆಸೇಜ್) ಬಾಕ್ಸ್ ಕಾಣುವುದು. |
12:22 | ನೀವು ಬೇರೆ ದಿನಾಂಕಗಳನ್ನು ಆಯ್ಕೆ ಮಾಡಿದ್ದರೆ, ನಿಮಗೆ ಬೇರೆಯೇ ಅವಧಿಯ ಸಂಖ್ಯೆ ದೊರೆಯುವುದು. |
12:28 | ಪ್ರತಿ ಅವಧಿಯ (ಸೆಶನ್) ಮುಂದೆ ಇರುವ ಐಕಾನ್ ಗಳನ್ನು ನೋಡಿ. |
12:32 | ಅವು ಟೀಚರ್ ಗೆ ಅಟೆಂಡೆನ್ಸ್ ಅನ್ನು ಅನ್ನು ತೆಗೆದುಕೊಳ್ಳಲು, ಅವಧಿಯನ್ನು ಎಡಿಟ್ ಮಾಡಲು ಅಥವಾ ಡಿಲೀಟ್ ಮಾಡಲು ಬಿಡುವವು. |
12:39 | ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕೆ, Take attendance ಐಕಾನ್ ಅನ್ನು ಕ್ಲಿಕ್ ಮಾಡಿ. |
12:46 | ನೀವು ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಹಾಕಬಹುದು. |
12:53 | P, L ಮತ್ತು A ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ಆಯ್ಕೆ ಮಾಡಿದ ಸ್ಟ್ಯಾಟಸ್ ಗಳಾಗಿವೆ. |
12:59 | ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು'Present' ಎಂದು ಸೆಟ್ ಮಾಡಲು 'P' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಚೆಕ್ ಮಾಡಿ. |
13:10 | ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ Save attendance ಬಟನ್ ನ ಮೇಲೆ ಕ್ಲಿಕ್ ಮಾಡಿ. |
13:18 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ,. |
13:24 | ಈ ಟ್ಯುಟೋರಿಯಲ್ ನಲ್ಲಿ ನಾವು:
ಪ್ಲಗ್ ಇನ್ ಗಳ ಕುರಿತು ಮತ್ತು ಮೂಡಲ್ ನಲ್ಲಿ ಪ್ಲಗ್ ಇನ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ಕಲಿತಿದ್ದೇವೆ. |
13:32 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
13:35 | Projectes TAC Dept ನಿಂದ ನಿರ್ವಹಿಸಲ್ಪಡುತ್ತಿರುವ plugin Font family ಯನ್ನು ಹುಡುಕಿ. |
13:42 | ಆ ಪ್ಲಗ್ ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಇನ್ಸ್ಟಾಲ್ ಮಾಡಿ. |
13:46 | Plugins overview ವಿಭಾಗದಲ್ಲಿ ಪ್ಲಗ್ ಇನ್ ಇನ್ಸ್ಟಾಲ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ. |
13:52 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:27 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |