Moodle-Learning-Management-System/C2/User-Roles-in-Moodle/Kannada
From Script | Spoken-Tutorial
Revision as of 19:37, 2 November 2019 by Anjana310312 (Talk | contribs)
Time | Narration |
00:01 | User Roles in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು , ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು, |
00:13 | course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:28 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. |
00:42 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:54 | ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು. |
01:01 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:08 | ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ ಅಡ್ಮಿನ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಬಳಸಿ moodle ಸೈಟ್ ಅನ್ನು ತೆರೆಯಿರಿ. |
01:16 | ಈಗ ನಾವು admin dashboard ನಲ್ಲಿದ್ದೇವೆ. |
01:19 | ಈಗ ನಾವು Course and Category Management ಪೇಜ್ ಗೆ ಹೋಗೋಣ. |
01:24 | ನಿಮ್ಮ ಮೂಡಲ್ ಇಂಟರ್ಫೇಸ್ ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಅವುಗಳನ್ನು ರಚಿಸಿಕೊಂಡು ನಂತರ ಟ್ಯುಟೋರಿಯಲ್ ಅನ್ನು ರೆಸ್ಯೂಮ್ ಮಾಡಿ. |
01:34 | ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ. |
01:38 | Site Administration ನ ಮೇಲೆ ಕ್ಲಿಕ್ ಮಾಡಿ. |
01:41 | ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ |
01:44 | Accounts ವಿಭಾಗದಲ್ಲಿ, Browse list of users ಅನ್ನು ಕ್ಲಿಕ್ ಮಾಡಿ. |
01:50 | ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ. |
01:53 | ಈಗ user Priya Sinha ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಫೈಲ್ ಅನ್ನು ಎಡಿಟ್ ಮಾಡಿ. |
01:59 | User details ವಿಭಾಗದಲ್ಲಿ, Edit Profile ಲಿಂಕ್ ಅನ್ನು ಕ್ಲಿಕ್ ಮಾಡಿ. |
02:04 | ಕೆಳಕ್ಕೆ ಸ್ಕ್ರೋಲ್ ಮಾಡಿ , Optional ವಿಭಾಗವನ್ನು ಲೊಕೇಟ್ ಮಾಡಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ. |
02:11 | ಗಮನಿಸಿ, Institution, Department, Phone ಮತ್ತು Address ಫೀಲ್ಡ್ ಗಳು ತುಂಬಿವೆ. ಇವು ನಾವು
CSV file ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ. |
02:23 | ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ. ಅದನ್ನು ಮಾಡಲು, Site Administration -> Users -> Browse list of users ಅನ್ನು ಕ್ಲಿಕ್ ಮಾಡಿ. |
02:33 | ಈಗ user, System Admin2 ಅನ್ನು administrator role ಆಗಿ ನಿಯೋಜಿಸೋಣ. |
02:39 | ಎಡ ಮೆನುವಿನಲ್ಲಿ , Site Administration ಕ್ಲಿಕ್ ಮಾಡಿ ಮತ್ತು ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
02:46 | Permissions ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು Site Administrators ಅನ್ನು ಕ್ಲಿಕ್ ಮಾಡಿ. |
02:52 | ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.
ಮೊದಲನೆಯದು ಪ್ರಸ್ತುತ site administrator ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಉಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ. |
03:05 | ಈ ಎರಡು ಪಟ್ಟಿಗಳ ಮಧ್ಯದಲ್ಲಿ ವಿವಿಧ ಕ್ರಿಯೆಗಳನ್ನು ಮಾಡಲು ಅಗತ್ಯವಿರುವ ಬಟನ್ ಗಳಿವೆ. |
03:11 | Users ಬಾಕ್ಸ್ ನಿಂದ , System Admin2 user ಅನ್ನು ಕ್ಲಿಕ್ ಮಾಡೋಣ. |
03:17 | ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು Users ಬಾಕ್ಸ್ ನ ಕೆಳಗೆ ಇರುವ Search ಬಾಕ್ಸ್ ಅನ್ನು ಬಳಸಿ. ಮತ್ತು ನಂತರ Add ಬಟನ್ ಅನ್ನು ಕ್ಲಿಕ್ ಮಾಡಿ. |
03:26 | Confirm ಬಾಕ್ಸ್ ನಲ್ಲಿ, Continue ಬಟನ್ ಅನ್ನು ಕ್ಲಿಕ್ ಮಾಡಿ. |
03:30 | ಈಗ ಇಲ್ಲಿ ಎರಡು ಅಡ್ಮಿನ್ ಯೂಸರ್ ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು. |
03:38 | ಆದಾಗ್ಯೂ, Main administrator (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಆಗಿರುತ್ತಾರೆ. ಮೇನ್ ಅಡ್ಮಿನಿಸ್ಟ್ರೇಟರ್ ಅನ್ನು ಸಿಸ್ಟಮ್ ನಿಂದ ತೆಗೆಯಲು ಸಾಧ್ಯವಿಲ್ಲ. |
03:48 | ಈಗ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ರೆಬೆಕಾ ರೇಮಂಡ್ ಅವರನ್ನು ಟೀಚರ್ ಆಗಿ ನಿಯೋಜಿಸೋಣ. |
03:55 | ಇದನ್ನು ಮಾಡಲು, ಇಲ್ಲಿ ತೋರಿಸಿರುವಂತೆ, Course and category management ಪೇಜ್ ಗೆ ಹೋಗಿ. |
04:02 | 1st Year Maths ಉಪವಿಭಾಗದಡಿಯಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ. |
04:09 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. ಈ ಕೋರ್ಸ್ ನ ವಿವರಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
Enrolled Users ಅನ್ನು ಕ್ಲಿಕ್ ಮಾಡಿ. |
04:19 | ನಾವು ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು. |
04:25 | ನಾವು ಇದನ್ನು upload user CSV ಯ ಮೂಲಕ ಮಾಡಿದ್ದೇವೆ. |
04:29 | ಮೂಡಲ್ ನಲ್ಲಿ ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ಸೇರ್ಪಡೆಯಾಗಿರಲೇ ಬೇಕು. |
04:35 | ಅವರಿಗೆ ನಿಯೋಜಿಸುವ ಹೊಸ ರೋಲ್ ಕೋರ್ಸ್ ನಲ್ಲಿರುವ ಪ್ರಸ್ತುತ ರೋಲ್ ಅನ್ನು ಅವಲಂಭಿಸಿರುವುದು. |
04:41 | ಮೇಲೆ ಅಥವಾ ಕೆಳ ಬಲಭಾಗದಲ್ಲಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ. |
04:48 | ಒಂದು ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
04:51 | ಇದು Assign roles ಗಾಗಿ ಒಂದು ಡ್ರಾಪ್ ಡೌನ್ ಅನ್ನು , Enrolment options ಗಾಗಿ ಫೀಲ್ಡ್ ಅನ್ನು ಮತ್ತು Search ಬಟನ್ ಅನ್ನು ಹೊಂದಿದೆ. |
05:00 | ನಾವು ಇಲ್ಲಿ, ಈ ಕೋರ್ಸ್ ಗೆ ಪ್ರಸ್ತುತವಾಗಿ ನಿಯೋಜಿಸದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ಕಾಣಬಹುದು. |
05:06 | Assign roles ಡ್ರಾಪ್ ಡೌನ್ ನಲ್ಲಿ , Teacher ಅನ್ನು ಆಯ್ಕೆ ಮಾಡಿ. |
05:11 | ನಂತರ, Rebecca Raymond ನ ಮುಂದಿರುವ Enrol ಬಟನ್ ಅನ್ನು ಕ್ಲಿಕ್ ಮಾಡಿ. |
05:16 | ಕೊನೆಯಲ್ಲಿ, ಪೇಜ್ ನ ಕೆಳಭಾಗದಲ್ಲಿರುವ Finish Enrolling users ಬಟನ್ ಅನ್ನು ಕ್ಲಿಕ್ ಮಾಡಿ. |
05:24 | ಇದೇ ರೀತಿಯಲ್ಲಿಯೇ , ಸ್ಟುಡೆಂಟ್ ಗಳನ್ನು ಕೂಡ ಕೋರ್ಸ್ ಗೆ ನಿಯೋಜಿಸಬಹುದು. |
05:28 | Rebecca Raymond ಅವರನ್ನು Teacher role ನಿಂದ ಅನ್-ಅಸೈನ್ ಮಾಡಲು , Roles column ನಲ್ಲಿರುವ Trash ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:36 | Confirm Role Change ಪಾಪ್ ಅಪ್ ಬಾಕ್ಸ್ ನಲ್ಲಿ, Remove ಬಟನ್ ಅನ್ನು ಕ್ಲಿಕ್ ಮಾಡಿ. |
05:42 | ಇಲ್ಲಿರುವ Assign role ಐಕಾನ್ ಅನ್ನು ಈಗಾಗಲೇ ಸೇರ್ಪಡೆಯಾಗಿರುವ ಯೂಸರ್ ಗಳಿಗೆ ರೋಲ್ ಅನ್ನು ನಿಯೋಜಿಸಲು ಸಹ ಬಳಸಬಹುದು. |
05:50 | ಇದನ್ನು ಕ್ಲಿಕ್ ಮಾಡಿದರೆ ಎಲ್ಲಾ ರೋಲ್ ಗಳ ಹೆಸರುಗಳನ್ನೊಳಗೊಂಡ ಒಂದು ಚಿಕ್ಕ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
05:56 | Rebecca Raymond ಅವರಿಗೆ ಟೀಚರ್ ರೋಲ್ ಅನ್ನು ನಿಯೋಜಿಸಲು, Teacher ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ. |
06:04 | ಬಲ ಭಾಗದಲ್ಲಿರುವ trash ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಯೂಸರ್ ಗಳನ್ನು ಕೋರ್ಸ್ ನಿಂದ ಅನ್-ಎನ್ರೋಲ್ ಮಾಡಬಹುದು. |
06:11 | ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಬದಲಿಸಲು, ಬಲಭಾಗದಲ್ಲಿ gear ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ. |
06:20 | ಇದರಲ್ಲಿ ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಆಯ್ಕೆಗಳಿವೆ. |
06:28 | ಎನ್ರೋಲ್ಮೆಂಟ್ ಪೇಜ್ ಗೆ ಹಿಂದಿರುಗಲು, Cancel ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:33 | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
ಸಂಕ್ಷಿಪ್ತವಾಗಿ,. |
06:39 | ಈ ಟ್ಯುಟೋರಿಯಲ್ ನಲ್ಲಿ ನಾವು,
ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು, course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ. |
06:52 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
ರಬೆಕಾ ರೇಮೆಂಡ್ ಅವರನ್ನು Linear Algebra course ಗೆ teacher ಆಗಿ ಅಸೈನ್ ಮಾಡಿ. |
07:00 | ಪ್ರಿಯಾ ಸಿನ್ಹಾ ಅವರನ್ನು Linear Algebra course ಗೆ student ಆಗಿ ಅಸೈನ್ ಮಾಡಿ. |
07:06 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
07:22 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
07:26 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
07:38 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |