Health-and-Nutrition/C2/Pre-pregnancy-Nutrition/Kannada
From Script | Spoken-Tutorial
Revision as of 18:23, 27 August 2019 by Sandhya.np14 (Talk | contribs)
|
|
00:01 | pre-pregnancy nutrition ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ಸಂತಾನೋತ್ಪತ್ತಿಯ ವಯಸ್ಸು ಮತ್ತು ಗರ್ಭಧಾರಣೆಯ ಪೂರ್ವದ ಅವಧಿಯಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳ ಬಗ್ಗೆ ನಾವು ಕಲಿಯುತ್ತೇವೆ. |
00:14 | ಮೊದಲು ನಾವು 'ಪ್ರೋಟೀನ್' ನೊಂದಿಗೆ ಪ್ರಾರಂಭಿಸೋಣ. |
00:17 | ಸ್ನಾಯು ಅಂಗಾಂಶಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಪ್ರೋಟೀನ್ ಅಗತ್ಯವಿದೆ. |
00:22 | ಇದು ಜೀವಕೋಶಗಳ ದುರಸ್ತಿ, ಮೂಳೆಗಳ ಬೆಳವಣಿಗೆ ಮತ್ತು ಕೀಲುಗಳಿಗೆ ಕೂಡ ಸಹಾಯ ಮಾಡುತ್ತದೆ. |
00:27 | ರೋಗನಿರೋಧಕ ಶಕ್ತಿ ಮತ್ತು ಯಕೃತ್ ನ ಆರೋಗ್ಯವನ್ನು ಕಾಯ್ದುಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ಶಕ್ತಿಯನ್ನು ಸಹ ನೀಡುತ್ತದೆ. |
00:34 | 'ಪ್ರೋಟೀನ್' ರಾಸಾಯನಿಕಗಳನ್ನು ತಯಾರಿಸುತ್ತದೆ. ಇವು ಜೀರ್ಣಕ್ರಿಯೆ,
ದೇಹದಲ್ಲಿನ ವಿಷಪದಾರ್ಥಗಳನ್ನು ವಿಭಾಜಿಸುವುದು, |
00:41 | ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮತ್ತು ಸಂದೇಶ ಗಳನ್ನು ಮೆದುಳಿಗೆ ಕಳಿಸಲು ಹಾಗೂ ಅಲ್ಲಿಂದ ಪಡೆಯಲು ಸಹಾಯ ಮಾಡುತ್ತವೆ. |
00:47 | ಪ್ರೋಟೀನ್ ನ ಕೊರತೆಯು - ವಯಸ್ಸಿಗೆ ತಕ್ಕಂತೆ ಭ್ರೂಣದ ಬೆಳವಣಿಗೆ ಇಲ್ಲದಿರುವುದು, |
00:52 | ಮಗುವಿನಲ್ಲಿ ಕುಂಠಿತವಾದ- ಎತ್ತರ, ನೆನಪಿನ ಶಕ್ತಿ ಮತ್ತು ಮೋಟರ್ ಸ್ಕಿಲ್ಗಳು, (motor skills) ಹಾಗೂ ಹೆಚ್ಚಿದ ಸೋಂಕಿನ ಅಪಾಯದ ಸಾಧ್ಯತೆ ಇವುಗಳನ್ನು ಉಂಟುಮಾಡುತ್ತದೆ. |
01:00 | ವಯಸ್ಕರಲ್ಲಿ, ಇದು - ಚರ್ಮದ ಸುಕ್ಕುಗಟ್ಟುವಿಕೆ, ಕೂದಲು ಉದುರುವುದು, |
01:05 | ದಣಿವು ಮತ್ತು ದೌರ್ಬಲ್ಯ, |
01:08 | ಆಗಾಗ್ಗೆ ಅಂಟುರೋಗಗಳು ಮತ್ತು ಸ್ನಾಯು ನಷ್ಟ ಇವುಗಳಿಗೆ ಕಾರಣವಾಗುತ್ತದೆ. |
01:11 | ಕೆರಾಟಿನ್ ಎಂಬ ಮತ್ತೊಂದು ಪ್ರೋಟೀನ್, ಕೂದಲು, ಉಗುರುಗಳು ಮತ್ತು ಚರ್ಮದ ಪ್ರಮುಖ ಭಾಗವಾಗಿದೆ. |
01:18 | ಪ್ರೋಟೀನ್, 'ಅಮೈನೊ ಆಮ್ಲ' ಗಳು ಎಂಬ ವಿವಿಧ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ. |
01:24 | ಒಟ್ಟು 22 ಅಮೈನೋ ಆಮ್ಲಗಳು ಇರುತ್ತವೆ. ಅದರಲ್ಲಿ 9 ಅಮೈನೊ ಆಮ್ಲಗಳನ್ನು ಆಹಾರದಿಂದ ಪಡೆಯಬೇಕಾಗುತ್ತದೆ. |
01:33 | ಈಗ ನಾವು ಸಂಪೂರ್ಣ ಪ್ರೋಟೀನ್ (complete protein) ಮತ್ತು ಅಪೂರ್ಣ ಪ್ರೋಟೀನ್ ಗಳೆಂಬ (incomplete protein) ಎರಡು ವಿಧದ ಪ್ರೋಟೀನ್ ಗಳನ್ನು ನೋಡೋಣ. |
01:41 | ಈಮೊದಲೇ ಹೇಳಿದ ಎಲ್ಲಾ 9 ಅಮೈನೊ ಆಮ್ಲಗಳು, ಪ್ರಾಣಿಜನ್ಯ ಪ್ರೋಟೀನ್ ಗಳಲ್ಲಿ ಇರುತ್ತವೆ. |
01:46 | ಅದಕ್ಕಾಗಿಯೇ ಪ್ರಾಣಿಜನ್ಯ ಪ್ರೋಟೀನ್ ಗಳನ್ನು ಸಂಪೂರ್ಣ ಪ್ರೋಟೀನ್ ಗಳೆಂದು ಹೇಳಲಾಗುತ್ತದೆ. |
01:51 | ಆದರೆ ಸಸ್ಯಜನ್ಯ ಪ್ರೋಟೀನ್ ಗಳಲ್ಲಿ, ಈ 9 ಅವಶ್ಯಕ ಅಮೈನೊ ಆಮ್ಲಗಳಲ್ಲಿ ಕೆಲವು ಕಡಿಮೆ ಪ್ರಮಾಣದಲ್ಲಿ ಇರುತ್ತವೆ. |
02:00 | ಉದಾಹರಣೆಗೆ- ಧಾನ್ಯಗಳಲ್ಲಿ, ಲೈಸಿನ್ ಹಾಗೂ ದ್ವಿದಳ ಧಾನ್ಯಗಳಲ್ಲಿ ಮಿಥಿಯೋನಿನ್ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. |
02:07 | ಆದ್ದರಿಂದ ವಿವಿಧ ಸಸ್ಯಜನ್ಯ ಪ್ರೋಟೀನ್ ಗಳನ್ನು ಒಟ್ಟಿಗೆ ಸೇವಿಸುವುದು ಬಹಳ ಮುಖ್ಯವಾಗಿದೆ. |
02:13 | ಉದಾಹರಣೆಗೆ, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಒಟ್ಟಾಗಿ ಸೇವಿಸಬೇಕು. ಏಕೆಂದರೆ ಇವೆರಡೂ ಸಾಕಷ್ಟು ಪ್ರಮಾಣದಲ್ಲಿ ಅಮೈನೊ ಆಮ್ಲಗಳನ್ನು ಒದಗಿಸುತ್ತವೆ. |
02:23 | ಈಗ ನಾವು ಮತ್ತೊಂದು ಪ್ರಮುಖ ಪೋಷಕಾಂಶವಾದ ಕೊಬ್ಬಿನ ಬಗ್ಗೆ ಕಲಿಯುತ್ತೇವೆ. |
02:28 | ಉತ್ತಮ ಆರೋಗ್ಯಕ್ಕಾಗಿ, ಆಹಾರದಲ್ಲಿರುವ ಒಳ್ಳೆಯ ಕೊಬ್ಬುಗಳು ಮುಖ್ಯವಾಗಿವೆ. |
02:32 | Omega-3 fatty acids ನಂತಹ ಕೆಲವು ಕೊಬ್ಬುಗಳನ್ನು ದೇಹದಿಂದ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅವುಗಳನ್ನು ಆಹಾರದಿಂದ ಪಡೆಯಬೇಕು. |
02:40 | ಇವು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. |
02:42 | ದೇಹದಲ್ಲಿ ಉರಿಯೂತವನ್ನು (inflammation) ಕಡಿಮೆ ಮಾಡಲು ಮತ್ತು ಗರ್ಭ ಧರಿಸುವ ಸಾಧ್ಯತೆಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ. |
02:48 | ಅಲ್ಲದೆ, ಮಗುವಿನ ಅಕಾಲಿಕ ಜನನದ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ ಮತ್ತು ಮಗುವಿನ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತವೆ. |
02:56 | ಪ್ರೋಟೀನ್ ಮತ್ತು ಕೊಬ್ಬಿನ ಬಗ್ಗೆ ಕಲಿತ ನಂತರ, ಈಗ 'ವಿಟಮಿನ್- A' ಬಗ್ಗೆ ಕಲಿಯುತ್ತೇವೆ. |
03:01 | 'ವಿಟಮಿನ್- A' - ಕಣ್ಣುಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. |
03:07 | ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಮತ್ತು ಅದರ ಮೊದಲು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. |
03:14 | 'ವಿಟಮಿನ್- A' ದಂತೆಯೆ, ಇಡೀ 'ವಿಟಮಿನ್ ಬಿ-ಕಾಂಪ್ಲೆಕ್ಸ್', ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರ ಶಕ್ತಿ ಮತ್ತು ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. |
03:24 | ಎಲ್ಲಾ ‘B ವಿಟಮಿನ್’ ಗಳಲ್ಲಿ, ಮೊದಲು ನಾವು ವಿಟಮಿನ್ ಬಿ -6 ಎಂದರೆ ಪೈರಿಡಾಕ್ಸಿನ್ (pyridoxine) ಅನ್ನು ನೋಡೋಣ. |
03:31 | ನರಮಂಡಲದ ಕಾರ್ಯನಿರ್ವಹಣೆಗೆ 'ವಿಟಮಿನ್ ಬಿ- 6’ ಎಂದರೆ ‘ಪೈರಿಡಾಕ್ಸಿನ್’ ನ ಅಗತ್ಯವಿದೆ. ಇದು ಮೆದುಳಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. |
03:39 | ಅಲ್ಲದೆ, ಗರ್ಭಧಾರಣೆಗೆ ಸಂಬಂಧಿತ ವಾಕರಿಕೆಗೆ ಇದು ಪರಿಹಾರವನ್ನು ನೀಡುತ್ತದೆ. |
03:44 | 'ವಿಟಮಿನ್ ಬಿ 12' ಮತ್ತೊಂದು ಪೋಷಕಾಂಶವಾಗಿದೆ. ಇದು 'ಫೋಲೇಟ್' ಮತ್ತು 'ಕೋಲೀನ್' ಗಳೊಂದಿಗೆ, ರಕ್ತಹೀನತೆ (anemia) ಮತ್ತು Neural tube defects (ನ್ಯೂರಲ್ ಟ್ಯೂಬ್ ಡಿಫೆಕ್ಟ್) ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. |
03:54 | 'ನ್ಯೂರಲ್ ಟ್ಯೂಬ್ ಡಿಫೆಕ್ಟ್' ಗಳು ಜನನ ದೋಷಗಳಾಗಿವೆ. ಗರ್ಭಧಾರಣೆಯ ಮೊದಲ ತಿಂಗಳಲ್ಲಿ ರೂಪುಗೊಳ್ಳುವ ಮಗುವಿನ ಬೆನ್ನುಮೂಳೆಯ ಮತ್ತು ಕೇಂದ್ರ ನರಮಂಡಲದ ಮೇಲೆ ಇದು ಪರಿಣಾಮ ಬೀರುತ್ತದೆ. |
04:04 | ಗಮನಿಸಿ: 'ನ್ಯೂರಲ್ ಟ್ಯೂಬ್', ಮೆದುಳು ಮತ್ತು ಬೆನ್ನುಮೂಳೆಯಾಗಿ ಬೆಳೆಯುವ ಭ್ರೂಣದ ಒಂದು ಭಾಗವಾಗಿದೆ. |
04:11 | ಆದ್ದರಿಂದ ಗರ್ಭಧಾರಣೆಯ ಮೊದಲು, ದೇಹದಲ್ಲಿ ಸಾಕಷ್ಟು ಫೋಲೇಟ್, ವಿಟಮಿನ್-ಬಿ 12 ಮತ್ತು ಕೋಲೀನ್ ಗಳನ್ನು ಹೊಂದಿರುವುದು ಮುಖ್ಯವಾಗಿದೆ. |
04:20 | 'ವಿಟಮಿನ್ ಬಿ -12' ನ ಕೊರತೆಯು ರಕ್ತಹೀನತೆ, ಬಂಜೆತನ ಮತ್ತು ಗರ್ಭಪಾತಕ್ಕೆ ಸಹ ಕಾರಣವಾಗುತ್ತದೆ. |
04:27 | ಈಗ, ನಾವು 'ಫೋಲೇಟ್' ಎಂಬ ಮತ್ತೊಂದು ಪ್ರಮುಖ ಪೋಷಕಾಂಶದ ಬಗ್ಗೆ ಕಲಿಯುತ್ತೇವೆ. |
04:31 | ‘ವಿಟಮಿನ್ ಬಿ 9’ ಎಂದು ಸಹ ಪರಿಚಿತವಾಗಿರುವ ಫೋಲೇಟ್, ಶರೀರವು ಆರೋಗ್ಯಕರ ಹೊಸ ಜೀವಕೋಶಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. |
04:38 | ಈ ಜೀವಕೋಶಗಳು, ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೆ ಒಯ್ಯುತ್ತವೆ. |
04:43 | ಗರ್ಭಿಣಿಯರಲ್ಲಿ 'ಫೋಲೇಟ್' ನ ಕೊರತೆಯು ರಕ್ತಹೀನತೆ ಹಾಗೂ 'ನ್ಯೂರಲ್ ಟ್ಯೂಬ್ ಡಿಫೆಕ್ಟ್' ಎಂಬ ಮೆದುಳು ಮತ್ತು ಬೆನ್ನುಮೂಳೆಯ ದೋಷಗಳಿಗೆ ಕಾರಣವಾಗುತ್ತದೆ. |
04:52 | ಗಮನಿಸಿ: 'ನ್ಯೂರಲ್ ಟ್ಯೂಬ್ ಡಿಫೆಕ್ಟ್' ಅನ್ನು ಇದೇ ಟ್ಯುಟೋರಿಯಲ್ ನಲ್ಲಿ ಈಮೊದಲೇ ವಿವರಿಸಲಾಗಿದೆ. |
04:58 | ಈಗ ನಾವು ಕಬ್ಬಿಣದ ಮಹತ್ವವನ್ನು ನೋಡೋಣ. ರಕ್ತದಲ್ಲಿ ಹಿಮೋಗ್ಲೋಬಿನ್ ತಯಾರಿಕೆಗೆ ಮತ್ತು ಭ್ರೂಣದ ಬೆಳವಣಿಗೆಗೆ ಕಬ್ಬಿಣದ ಅಗತ್ಯವಿದೆ. |
05:07 | ಗರ್ಭಾವಸ್ಥೆಯಲ್ಲಿ ಕಡಿಮೆ ಮಟ್ಟದ ಹಿಮೋಗ್ಲೋಬಿನ್ - ಅಧಿಕ ರಕ್ತದೊತ್ತಡ, |
05:13 | ಅವಧಿಯ ಮುನ್ನ ಹೆರಿಗೆ, |
05:15 | ಕಡಿಮೆ ಜನನ ತೂಕದ ಮಗು ಮತ್ತು ಗರ್ಭಪಾತ ಇವುಗಳಿಗೆ ಕಾರಣವಾಗಬಹುದು. |
05:18 | ಇದಲ್ಲದೆ, ಹಿಮೋಗ್ಲೋಬಿನ್ ಆಮ್ಲಜನಕವನ್ನು ಇತರ ಅಂಗಾಂಶಗಳು ಮತ್ತು ಜೀವಕೋಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. |
05:25 | ಕಡಿಮೆ ಮಟ್ಟದ ಹಿಮೋಗ್ಲೋಬಿನ್ ಅಥವಾ ಕಬ್ಬಿಣವು ರಕ್ತಹೀನತೆಗೆ ಕಾರಣವಾಗುತ್ತದೆ. |
05:30 | ಇದಲ್ಲದೆ, ಮಹಿಳೆಯರಲ್ಲಿ - ಮಾಸಿಕ ಮುಟ್ಟು, |
05:36 | ಜಂತುಗಳ ಇರುವಿಕೆ, |
05:38 | ಕಡಿಮೆ ಕಬ್ಬಿಣದ ಅಂಶವಿರುವ ಆಹಾರ ಹಾಗೂ ಆಹಾರದಲ್ಲಿಯ 'ಫೈಟಿಕ್ ಆಮ್ಲ' ಮತ್ತು 'ಆಕ್ಸಾಲೇಟ್'ಗಳ ಕಾರಣ ಕಳಪೆ ಹೀರಿಕೊಳ್ಳುವಿಕೆ, ಈ ಕಾರಣಗಳಿಂದ ಕಬ್ಬಿಣವು ಕಡಿಮೆ ಇರಬಹುದು. |
05:45 | ಫೈಟಿಕ್ ಆಮ್ಲ ಹಾಗೂ ಆಕ್ಸಲೇಟ್‌ಗಳನ್ನು ಕಡಿಮೆಮಾಡಲು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು - |
05:52 | ನೆನೆಸುವಿಕೆ, ಮೊಳಕೆ ಬರಿಸುವುದು, ಹುರಿಯುವುದು ಮತ್ತು ಹುದುಗುವಿಕೆಯಂತಹ ಅಡುಗೆಯ ವಿಧಾನಗಳನ್ನು ಬಳಸಿ. |
06:00 | ಕಬ್ಬಿಣದ ಕೊರತೆ ಅರ್ಥಾತ್ ರಕ್ತಹೀನತೆಯ ಚಿಹ್ನೆಗಳು -
ದಣಿವು ಮತ್ತು ಶಕ್ತಿಹೀನತೆ, |
06:06 | ಉಸಿರಾಟದ ತೊಂದರೆ, ಹೃದಯದ ಬಡಿತದಲ್ಲಿ ಹೆಚ್ಚಳ |
06:10 | ಮತ್ತು ಕಾಂತಿಹೀನ ಚರ್ಮ ಆಗಿವೆ. |
06:11 | ನೆನಪಿಡಿ, ಕಬ್ಬಿಣದೊಂದಿಗೆ ಯಾವಾಗಲೂ ವಿಟಮಿನ್-ಸಿ ಸಮೃದ್ಧ ಆಹಾರವನ್ನು ಸೇವಿಸಿ. ಇದು
ಕಬ್ಬಿಣವನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. |
06:19 | ’ವಿಟಮಿನ್- ಸಿ’ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಮತ್ತು ಇದರಿಂದ ಸೋಂಕು ಕಡಿಮೆಯಾಗುತ್ತದೆ. |
06:25 | ಈಗ ನಾವು ಕ್ಯಾಲ್ಸಿಯಂ ಮತ್ತು ವಿಟಮಿನ್-D ಯ ಮಹತ್ವವನ್ನು ಕಲಿಯುತ್ತೇವೆ. |
06:30 | ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುವುದರಿಂದ ಇದನ್ನು ಸೇವಿಸಲು ಸೂಚಿಸಲಾಗುತ್ತದೆ. |
06:35 | ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗಾಗಿ ಭ್ರೂಣಕ್ಕೆ ಕ್ಯಾಲ್ಸಿಯಂ ನ ಅಗತ್ಯವಿದೆ. |
06:39 | ಕ್ಯಾಲ್ಸಿಯಂ ನ ಕೊರತೆಯು ದುರ್ಬಲ ಮೂಳೆಗಳಿಗೆ ಕಾರಣವಾಗಬಹುದು. |
06:43 | ಆದಾಗ್ಯೂ, ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ‘ವಿಟಮಿನ್- D’ ಯ ಅಗತ್ಯವಿದೆ ಎಂದು ನೆನಪಿಡಿ. |
06:50 | ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 3.00 ರ ನಡುವೆ, 15 ರಿಂದ 20 ನಿಮಿಷ ಸೂರ್ಯನ ಬೆಳಕಿಗೆ ಮೈ ಒಡ್ಡುವುದು ‘ವಿಟಮಿನ್-ಡಿ’ ಅನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. |
06:59 | ನಂತರ, ನಾವು ಕೋಲೀನ್ ಬಗ್ಗೆ ಕಲಿಯುತ್ತೇವೆ. |
07:02 | ಮಗುವಿನ ಮೆದುಳಿನ ಬೆಳವಣಿಗೆಗೆ ಕೋಲೀನ್ ಮುಖ್ಯವಾಗಿದೆ. ಇದು ನೆನಪಿನ ಶಕ್ತಿ ಮತ್ತು ಗಮನಿಸುವ ಅವಧಿಯನ್ನು ಹೆಚ್ಚಿಸುತ್ತದೆ. |
07:09 | ಕೋಲೀನ್ ನ ಕೊರತೆಯು- ವಯಸ್ಕರಲ್ಲಿ fatty liver, |
07:13 | ಗರ್ಭಪಾತಗಳು ಮತ್ತು ಭ್ರೂಣದಲ್ಲಿ 'ನ್ಯೂರಲ್ ಟ್ಯೂಬ್ ಡಿಫೆಕ್ಟ್' ಇವುಗಳಿಗೆ ಕಾರಣವಾಗುತ್ತದೆ. |
07:20 | ನಾವು ಈಗ ಸತುವಿನ ಮಹತ್ವವನ್ನು ತಿಳಿಯೋಣ. |
07:24 | ರೋಗನಿರೋಧಕ ಶಕ್ತಿ ಮತ್ತು ಜೀವಕೋಶಗಳ ಬೆಳವಣಿಗೆಗೆ ಸತುವು ಮುಖ್ಯವಾಗಿದೆ.
ಇದು ದೇಹದಲ್ಲಿ ಆನುವಂಶಿಕ ವಸ್ತು ಮತ್ತು ಪ್ರೋಟೀನ್ ಅನ್ನು ತಯಾರಿಸಲು ಸಹಾಯ ಮಾಡುತ್ತದೆ |
07:31 | ಇದು ಗಾಯಗಳನ್ನು ವಾಸಿಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಮಹಿಳೆಯರಲ್ಲಿ ಇದು ಅಂಡೋತ್ಪತ್ತಿ (ovulation) ಮತ್ತು ಫಲವತ್ತತೆಗೆ (fertility) ಸಹಕಾರಿಯಾಗಿದೆ. |
07:37 | ಮತ್ತು, ಭ್ರೂಣದ ಬೆಳವಣಿಗೆಗೆ ಇದು ಮುಖ್ಯವಾಗಿದೆ. |
07:40 | ಗಮನಿಸಿ - ಆಹಾರದಲ್ಲಿ ಸತುವಿನ ಕೊರತೆಯು ರುಚಿ ಮತ್ತು ವಾಸನೆಯನ್ನು ಗ್ರಹಿಸುವಲ್ಲಿ ಪರಿಣಾಮ ಬಿರುತ್ತದೆ. |
07:46 | ತಾಯಿಯಿಂದ ಭ್ರೂಣಕ್ಕೆ ಪೋಷಕಾಂಶಗಳನ್ನು ಸಾಗಿಸುವ ಹೊಕ್ಕುಳಬಳ್ಳಿಯ ಬೆಳವಣಿಗೆಯನ್ನು ಇದು ವಿಳಂಬಗೊಳಿಸುತ್ತದೆ. |
07:53 | ಸತುವಿನ ಕೊರತೆಯು ಭ್ರೂಣದ ಬೆಳವಣಿಗೆಯ ಮೇಲೆ ಸಹ ಪರಿಣಾಮ ಬೀರುತ್ತದೆ ಮತ್ತು ಕಡಿಮೆ ಜನನ ತೂಕದ ಮಗುವಿಗೆ ಕಾರಣವಾಗುತ್ತದೆ. |
08:00 | ಮತ್ತೊಂದು ಮಹತ್ವದ ಪೋಷಕಾಂಶವಾದ 'ಅಯೋಡಿನ್' ಅನ್ನು ಈಗ ನಾವು ನೋಡುತ್ತೇವೆ. |
08:05 | 'ಥೈರಾಯ್ಡ್ ಗ್ರಂಥಿ' ಯಿಂದ ತಯಾರಿಸಲ್ಪಡುವ ಥೈರಾಯ್ಡ್ ಹಾರ್ಮೋನ್ ನ ಸಹಜ ಮಟ್ಟವನ್ನು ಕಾಯ್ದುಕೊಳ್ಳಲು ದೇಹಕ್ಕೆ ಅಯೋಡಿನ್ ನ ಅಗತ್ಯವಿದೆ. |
08:13 | ತಾಯಿಯಲ್ಲಿ ಅಯೋಡಿನ್ ನ ಕೊರತೆಯು, ಗರ್ಭಪಾತ ಮತ್ತು ಗರ್ಭದಲ್ಲಿಯೇ ಸತ್ತು ಹೋದ ಮಗು, ಈ ಅಪಾಯಗಳಿಗೆ ಕಾರಣವಾಗುತ್ತದೆ. |
08:21 | ಇದು ಮಗುವಿನಲ್ಲಿ ಜನನ ವಿರೂಪಗಳು, (birth deformities) ಕಡಿಮೆ ಜನನ ತೂಕ, ಕುಂಠಿತ ಬೆಳವಣಿಗೆ ಮತ್ತು ಮಂದಬುದ್ಧಿಗೆ ಕಾರಣವಾಗಬಹುದು. |
08:30 | ಮೆಗ್ನೀಸಿಯಮ್, ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುವ ಮತ್ತೊಂದು ಪೋಷಕಾಂಶವಾಗಿದೆ. |
08:35 | ಮೆದುಳಿನಲ್ಲಿಯ ರಕ್ತನಾಳಗಳನ್ನು ಸಡಿಲಗೊಳಿಸಿ, ಸೆಳೆತ ಮತ್ತು ಮೈಗ್ರೇನ್ ತಲೆನೋವುಗಳನ್ನು ಇದು ತಡೆಯುತ್ತದೆ. |
08:41 | ಆರೋಗ್ಯಕರ ರಕ್ತದೊತ್ತಡ ಮತ್ತು ಹೃದಯದ ಬಡಿತವನ್ನು ಸಹ ಇದು ಕಾಪಾಡುತ್ತದೆ. |
08:45 | ಅಲ್ಲದೆ ಆನುವಂಶಿಕ ವಸ್ತುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. |
08:51 | ಉತ್ತಮ ಪೋಷಣೆಯ ಜೊತೆಗೆ, ಆರೋಗ್ಯಕರ ಗರ್ಭಾವಸ್ಥೆಗಾಗಿ ಆಲ್ಕೊಹಾಲ್ ಅನ್ನು ದೂರವಿರಿಸುವುದು ಮುಖ್ಯವಾಗಿದೆ. ಏಕೆಂದರೆ ಇದು ಗರ್ಭಪಾತ ಅಥವಾ ದುರ್ಬಲ ಭ್ರೂಣಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. |
09:00 | ತಂಬಾಕು, |
09:03 | ಸಿಗರೇಟ್, ಡ್ರಗ್ಸ್, |
09:06 | ತಾವೇ ನಿರ್ಧರಿಸಿ ಔಷಧಿ ತೆಗೆದುಕೊಳ್ಳುವುದು, ಸಕ್ಕರೆ, ಚಹಾ ಮತ್ತು ಕಾಫಿ, ಜಂಕ್ ಫುಡ್ ಮತ್ತು ಸಿಹಿ ಪಾನೀಯಗಳ ಅತಿಯಾದ ಬಳಕೆ ಇವುಗಳನ್ನು ತಪ್ಪಿಸಬೇಕು. |
09:15 | ಈ ವಸ್ತುಗಳು ಸಂತಾನೋತ್ಪತ್ತಿಯ ಆರೋಗ್ಯ ಮತ್ತು ಗರ್ಭಧಾರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. |
09:20 | ಗಮನಿಸಿ, ಗರ್ಭಧರಿಸುವ ಮೊದಲು ಶರೀರದ ತೂಕವನ್ನು ನಿರ್ವಹಿಸುವುದು ಸಹ ಮುಖ್ಯವಾಗಿದೆ. |
09:25 | ಕಡಿಮೆ ತೂಕದ ಮಹಿಳೆಯರು, ಸಣ್ಣ ಶಿಶುಗಳಿಗೆ ಅಥವಾ ಅವಧಿಪೂರ್ವ ಶಿಶುವಿಗೆ ಎಂದರೆ ಗರ್ಭಾವಸ್ಥೆಯ 7 ರಿಂದ 8 ತಿಂಗಳಿಗೆ ಜನ್ಮ ನೀಡುತ್ತಾರೆ. |
09:34 | ಅಂತಹ ಶಿಶುಗಳು ಅಕಾಲಿಕ ಮರಣದ ಅಪಾಯವನ್ನು ಹೊಂದಿರುತ್ತವೆ. |
09:38 | ಆದರೆ, ಹೆಚ್ಚಿನ ತೂಕವನ್ನು ಹೊಂದಿರುವ ಮಹಿಳೆಯರು, ಗರ್ಭಾವಸ್ಥೆಯ ಮಧುಮೇಹ ಮತ್ತು ಹೆಚ್ಚಿನ ರಕ್ತದೊತ್ತಡದ ಅಪಾಯವನ್ನು ಹೊಂದಿರುತ್ತಾರೆ. |
09:45 | ಅಲ್ಲದೆ, ಇದು ನವಜಾತ ಶಿಶುವಿನ ತೊಂದರೆಗಳಿಗೆ ಕಾರಣವಾಗಬಹುದು. |
09:49 | ಆದ್ದರಿಂದ ಮಹಿಳೆಯರು ಗರ್ಭಧರಿಸುವ ಮೊದಲು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು healthcare ಕೊಡುವವರನ್ನು ಸಂಪರ್ಕಿಸಬೇಕು. |
09:55 | ಇದರೊಂದಿಗೆ, ಆರೋಗ್ಯಕರ, ಸಮತೋಲಿತ ಸಸ್ಯಾಹಾರ ಮತ್ತು / ಅಥವಾ ಮಾಂಸಾಹಾರವನ್ನು
ಸೇವಿಸುವುದು ಬಹಳ ಮುಖ್ಯವಾಗಿದೆ. |
10:05 | ಎಲ್ಲಾ ಪ್ರಾಣಿಜನ್ಯ ಆಹಾರಗಳು - ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು , ವಿಟಮಿನ್ ಬಿ -12 , ವಿಟಮಿನ್ ಬಿ -9 , ಸತು , ಕಬ್ಬಿಣ, ಕ್ಯಾಲ್ಸಿಯಂ , ಕೋಲೀನ್ ಮತ್ತು ವಿಟಮಿನ್-ಡಿ ಗಳಲ್ಲಿ ಸಮೃದ್ಧವಾಗಿವೆ ಎಂಬುದನ್ನು ನೆನಪಿಡಿ. |
10:18 | ಪ್ರಾಣಿಜನ್ಯ ಆಹಾರದ ಜೊತೆಗೆ, ಸಸ್ಯಜನ್ಯ ಆಹಾರಗಳಾದ ಬೇಳೆಕಾಳುಗಳು, ರಾಗಿ, ಧಾನ್ಯಗಳು, ನಟ್ಸ್ ಮತ್ತು ಬೀಜಗಳು, |
10:30 | ರೋಗನಿರೋಧಕ ವ್ಯವಸ್ಥೆ, ಸ್ನಾಯುಗಳು, ಮೂಳೆಗಳು, |
10:33 | ಯಕೃತ್ತು, ಕೂದಲು, ಚರ್ಮ, ಕಣ್ಣುಗಳು ಮತ್ತು ಮೆದುಳು ಇವುಗಳನ್ನು ರೂಪಿಸಲು ಸಹಾಯ ಮಾಡುತ್ತವೆ. |
10:36 | ಇವುಗಳಲ್ಲದೆ, ಮಗುವಿನ ಮೂಳೆಗಳು ಮತ್ತು ಹಲ್ಲುಗಳನ್ನು ರೂಪಿಸುವಲ್ಲಿ ಡೈರಿ ಉತ್ಪನ್ನಗಳು ಕೂಡ ಸಹಕಾರಿಯಾಗಿವೆ. |
10:43 | ಪರ್ಯಾಯವಾಗಿ, ಸೊಪ್ಪು ತರಕಾರಿಗಳು ಮತ್ತು ಬೀಜಗಳಲ್ಲಿ ಸಹ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇವು ಮಗುವಿನ ಮೂಳೆಗಳು ಮತ್ತು ಹಲ್ಲುಗಳನ್ನು ರೂಪಿಸಲು ಸಹಾಯ ಮಾಡುತ್ತವೆ. |
10:52 | ಸೊಪ್ಪು ತರಕಾರಿಗಳಂತೆ, ಹಣ್ಣುಗಳು ಸಹ ‘ವಿಟಮಿನ್-ಸಿ’ ಯಲ್ಲಿ ಸಮೃದ್ಧವಾಗಿವೆ. ಇವು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು, ಕಬ್ಬಿಣವನ್ನು ಹೀರಿಕೊಳ್ಳಲು ಮತ್ತು ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತವೆ. |
11:04 | ಮಹಿಳೆಯ ಫಲವತ್ತತೆ ಮತ್ತು ಮಗುವಿನ ಬೆಳವಣಿಗೆಗಾಗಿ ಬೀನ್ಸ್, ನಟ್ಸ್ ಮತ್ತು ಬೀಜಗಳನ್ನು ಇತರ ಪ್ರಾಣಿಜನ್ಯ ಆಹಾರದೊಂದಿಗೆ ಸೇವಿಸಬೇಕು. |
11:14 | ಮೀನು, ಡೈರಿ ಉತ್ಪನ್ನಗಳು, ಮೊಟ್ಟೆಗಳಂತಹ ವಿವಿಧ ಪ್ರಾಣಿಜನ್ಯ ಆಹಾರಗಳು, ಸಹಜವಾದ ಥೈರಾಯ್ಡ್ ಹಾರ್ಮೋನ್ ಅನ್ನು ಕಾಯ್ದುಕೊಳ್ಳಲು, ಬೆಳವಣಿಗೆಯನ್ನು ಸುಧಾರಿಸಲು ಮತ್ತು ದೈಹಿಕ ದೋಷಗಳನ್ನು ತಡೆಯಲು ಸಹಾಯ ಮಾಡುತ್ತವೆ. |
11:27 | ನಟ್ಸ್ (ಕರಟಕಾಯಿಗಳು) ಮತ್ತು ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇವು ನರಮಂಡಲದ ಕಾರ್ಯ ನಿರ್ವಹಣೆ ಮತ್ತು ಕಾಲಿನ ಸೆಳೆತವನ್ನು ತಡೆಗಟ್ಟಲು ಅವಶ್ಯಕವಾಗಿವೆ. |
11:35 | ಇಲ್ಲಿಗೆ ನಾವು Pre-pregnancy Nutrition ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bomay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು. |